ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ : ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪಡಿತರ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಆಗಸ್ಟ್ 2026 ರ ಮಾಹೆಯ ಪಡಿತರ ವಿತರಣೆಯು ಕೇಂದ್ರ ಸರ್ಕಾರದ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ತಿಂಗಳ ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಪಡಿತರದಾರರ ಹೆಬ್ಬೆಟ್ಟನ್ನು ಎರಡು ಬಾರಿ ಪಡೆದು ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಇದು ಸರ್ಕಾರದ ಆದೇಶವಾಗಿರುತ್ತದೆ. ಆದ ಕಾರಣ ಕಳೆದ ಒಂದು ವಾರದಿಂದ ಸರ್ವರ್ ಸಮಸ್ಯೆ ಆಗಿರುತ್ತದೆ. ಪ್ರತಿ ಕಾರ್ಡಿಗೂ 15 ರಿಂದ 20 ನಿಮಿಷಗಳು ಬೇಕಾಗಿರುತ್ತದೆ. ಈ ತಿಂಗಳು ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಶೇ. 70 ರಷ್ಟು ವಿತರಣೆಯಾಗಿರುವುದಿಲ್ಲ. ಇನ್ನೂ ಉಳಿದಿರುವುದು ಕೇವಲ 5 ದಿನಗಳು ಮಾತ್ರ ಇನ್ನೂ ಸರ್ವರ್ ಕೊಡದೇ ಇದ್ದರೆ ಪಡಿತರ ವಿತರಣೆ ಮಾಡುವುದು ಯಾವಾಗ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರು ಕೂಲಿ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ನಿಂತರೆ ಇದಕ್ಕೆ ಯಾರು ಜವಾಬ್ದಾರರರು. ಪಡಿತರದಾರರು ಮನಬಂದಂತೆ ಸರ್ವರ್ ಯಾವಾಗ ಬರುತ್ತೆ ನಮಗೆ ಪಡಿತರ ಯಾವಾಗ ಕೊಡುತ್ತೀರ ಕೊಡದೆ ಇದ್ದರೆ ನಾವು ಏನು ಊಟ ಮಾಡುವುದು ಎಂದು ಮನಬಂದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳುತ್ತಿದ್ದಾರೆ ದಯಮಾಡಿ ಈ ಸಮಸ್ಯೆಯನ್ನು ಪರಿಹರಿಸಿ ಗ್ರಾಹಕರಿಗೆ ಪಡಿತರ ವಿತರಣೆ ಅವಕಾಶ ಮಾಡಿಕೊಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಜಿಲ್ಲಾಧ್ಯಕ್ಷ ಗಿರೀಶ್ ಉಡಿಗಾಲ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಖಜಾಂಚಿ ಚೆಂಗುಮಣಿ, ಆರ್.ಎಂ.ಸಿದ್ದರಾಜು, ಕಿಟ್ಟಿ, ಹೆಗ್ಗೋಠಾರ ಮಹದೇವಸ್ವಾಮಿ, ವಿನೋದ್ ಹೊನ್ನಳ್ಳಿ, ನಂದೀಶ್ ಹೊಸಹಳ್ಳಿ ಇತರರು ಹಾಜರಿದ್ದರು.
ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ : ಸರ್ವರ್ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಪಡಿತರ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಆಗಸ್ಟ್ 2026 ರ ಮಾಹೆಯ ಪಡಿತರ ವಿತರಣೆಯು ಕೇಂದ್ರ ಸರ್ಕಾರದ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ತಿಂಗಳ ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಪಡಿತರದಾರರ
ಹೆಬ್ಬೆಟ್ಟನ್ನು ಎರಡು ಬಾರಿ ಪಡೆದು ಪಡಿತರ ವಿತರಣೆ ಮಾಡಬೇಕಾಗಿರುತ್ತದೆ. ಇದು ಸರ್ಕಾರದ ಆದೇಶವಾಗಿರುತ್ತದೆ. ಆದ ಕಾರಣ ಕಳೆದ ಒಂದು ವಾರದಿಂದ ಸರ್ವರ್ ಸಮಸ್ಯೆ ಆಗಿರುತ್ತದೆ. ಪ್ರತಿ ಕಾರ್ಡಿಗೂ 15 ರಿಂದ 20 ನಿಮಿಷಗಳು ಬೇಕಾಗಿರುತ್ತದೆ. ಈ ತಿಂಗಳು ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಶೇ. 70 ರಷ್ಟು ವಿತರಣೆಯಾಗಿರುವುದಿಲ್ಲ. ಇನ್ನೂ ಉಳಿದಿರುವುದು ಕೇವಲ 5 ದಿನಗಳು ಮಾತ್ರ ಇನ್ನೂ ಸರ್ವರ್ ಕೊಡದೇ ಇದ್ದರೆ ಪಡಿತರ ವಿತರಣೆ ಮಾಡುವುದು ಯಾವಾಗ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರು ಕೂಲಿ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ನಿಂತರೆ ಇದಕ್ಕೆ ಯಾರು ಜವಾಬ್ದಾರರರು. ಪಡಿತರದಾರರು ಮನಬಂದಂತೆ ಸರ್ವರ್ ಯಾವಾಗ ಬರುತ್ತೆ
ನಮಗೆ ಪಡಿತರ ಯಾವಾಗ ಕೊಡುತ್ತೀರ ಕೊಡದೆ ಇದ್ದರೆ ನಾವು ಏನು ಊಟ ಮಾಡುವುದು ಎಂದು ಮನಬಂದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳುತ್ತಿದ್ದಾರೆ ದಯಮಾಡಿ ಈ ಸಮಸ್ಯೆಯನ್ನು ಪರಿಹರಿಸಿ ಗ್ರಾಹಕರಿಗೆ ಪಡಿತರ ವಿತರಣೆ ಅವಕಾಶ ಮಾಡಿಕೊಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಡಾ. ವಸುಂದರ ಹೆಗ್ಗಡೆ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಜಿಲ್ಲಾಧ್ಯಕ್ಷ ಗಿರೀಶ್ ಉಡಿಗಾಲ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಡಿತರ ವಿತರಕರ ಸಂಘದ ಜಿಲ್ಲಾ ಖಜಾಂಚಿ ಚೆಂಗುಮಣಿ, ಆರ್.ಎಂ.ಸಿದ್ದರಾಜು, ಕಿಟ್ಟಿ, ಹೆಗ್ಗೋಠಾರ ಮಹದೇವಸ್ವಾಮಿ, ವಿನೋದ್ ಹೊನ್ನಳ್ಳಿ, ನಂದೀಶ್ ಹೊಸಹಳ್ಳಿ ಇತರರು ಹಾಜರಿದ್ದರು.
- All About,How our community in the name of #Qaum is being used by politicians for their own selfish interests *ಭಾರತ ನಲ್ಲಿ ವೈರಲ್*1
- ತಾಲ್ಲೂಕಿನ ಗುಳ್ಳಗಟ್ಟ ಗ್ರಾಮದ ಕಾಂಗ್ರೆಸ್ ಮುಖಂಡ ಶಿವರುದ್ರ ಅವರ ಕೊಲೆ ಪ್ರಕರಣದ ಆರೋಪಿ ಬಂಧಿಸಿದ ಗ್ರಾಮಾಂತರ ಠಾಣೆ ಪೊಲೀಸರು ಮಳವಳ್ಳಿ : ಕಳೆದ ಒಂದು ತಿಂಗಳ ಹಿಂದೆ ಮಳವಳ್ಳಿ ತಾಲ್ಲೂಕಿನ ಗುಳ್ಳಗಟ್ಟ ಗ್ರಾಮದಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡ ಶಿವರುದ್ರ ಅವರ ಕೊಲೆ ಪ್ರಕರಣಕ್ಕೆ ಸಂಬಂದಿಸಿ ದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಗುಳ್ಳಗಟ್ಟ ಗ್ರಾಮದ ವಾಸಿ ಲೇ ರಾಜಣ್ಣ ಎಂಬುವರ ಮಗನಾದ 42 ವರ್ಷದ ಮಹೇಶ ಎಂಬಾತನೇ ಬಂಧಿತ ಆರೋಪಿಯಾಗಿದ್ದು ಕಳೆದ ಜುಲೈ 24 ರಂದು ಈ ಘಟನೆ ನಡೆದಿತ್ತು . ಅಂದು ಸಂಜೆ 6.30 ರ ಸಮಯದಲ್ಲಿ ತಮ್ಮ ಜಮೀ ನಿನ ಬಳಿ ವಾಕಿಂಗ್ ಮುಗಿಸಿ ಮನೆಕಡೆ ಸ್ಕೂಟರ್ ನಲ್ಲಿ ಹೊರಟಿದ್ದ 57 ವರ್ಷದ ಶಿವರುದ್ರ ಅವರನ್ನು ಅಡ್ಡಗಟ್ಟಿ ದ ಮಹೇಶ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಸ್ಕೂಟರ್ ಸಮೇತ ಶವವನ್ನು ಹಳ್ಳಕ್ಕೆ ತಳ್ಳಿ ಪರಾರಿಯಾಗಿದ್ದಾನೆ ಎಂದು ಮೃತನ ಮಗ ಡಾ ವಿನಯ್ ಪೊಲೀಸರಿಗೆ ನೀಡಿ ರುವ ದೂರಿನಲ್ಲಿ ಆರೋಪಿಸಿ ದ್ದರು ಟಿ ಸಿ ಯಿಂದ ವಿದ್ಯುತ್ ಸಂಪರ್ಕ ಪಡೆಯುವ ವಿಚಾರ ವಾಗಿ ಉಂಟಾಗಿದ್ದ ವೈಷಮ್ಯವೇ ಈ ಕೊಲೆಗೆ ಕಾರಣವೆಂದು ದೂರಿನಲ್ಲಿ ತಿಳಿಸಲಾಗಿತ್ತು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಆರೋಪಿ ಬಂಧನ ಕ್ಕಾಗಿ ಜಿಲ್ಲಾ ಎಸ್ಪಿ ಡಾ. ಶೋಭಾ ರಾಣಿ ಅವರು ವಿಶೇಷ ತಂಡ ರಚಿಸಿದ್ದರು. ಅಂದಿನಿಂದಲೂ ವಿವಿಧ ಸ್ಥಳಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕಾಗಿ ಡಿ ವೈ ಎಸ್ಪಿ ಯಶವಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂ ತರ ಠಾಣಾ ಪೊಲೀಸರು ಶೋಧ ಕಾರ್ಯ ಕೈಗೊಂಡಿ ದ್ದರು. ಮಂಡ್ಯ ತಾಲ್ಲೂಕು ಚಂದಗಾಲು ಬಳಿಯ ವಡ್ಡರ ಹಳ್ಳಿ ಗ್ರಾಮದ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಸಾಯಂಕಾಲ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಬಸವರಾಜು, ಎಎಸ್ ಐ ಸಿದ್ದರಾಜು, ಸಿಬ್ಬಂದಿಗಳಾದ ನಾಗೇಂದ್ರ, ಸುರೇಶ, ದೇವರಾಜು ಅವರನ್ನು ಒಳಗೊಂಡ ತಂಡ ಆರೋಪಿ ಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೋಮವಾರ ಸಾಯಂಕಾಲ 5.30 ರ ಸಮಯದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.1
- ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್,ರೈತಮುಖಂಡರಿಂದ ಕಡಿಮೆ ಆರ್ ಎಸ್ ಮುತ್ತಿಗೆ,ಬಂಧನ ಬಿಡುಗಡೆ ಮಂಡ್ಯ- ಶ್ರೀರಂಗಪಟ್ಟಣದ ಕೆ. ರ್ ಎಸ್ ಆಣೆಕಟ್ಟೆಯಿಂದ ನೀರು ಹರಿಸುತ್ತದೆ ಇರುವುದನ್ನ ಖಂಡಿಸಿ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಕೆಆರ್ ಎಸ್ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ತಮಿಳು ನಾಡು ಏಜೆಂಟ್ ನಂತೆ ವರ್ತಿಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ ಕೂಗಿ ಕೂಡಲೇ ತಮಿಳುನಾಡಿಗೆ ನೀರು ನಿಲ್ಲಿಸುವಂತೆ ಸರ್ಕಾರಕ್ಕೆ ಆಗ್ರಹಮಾಡಿದ್ರು, ರಾಜ್ಯಸರ್ಕಾರದ ವಿರುದ್ದ ದಿಕ್ಕಾರ ಕೂಗಿದ್ರು. ರಾಜ್ಯಹಾಗೂ ಕೇಂದ್ರ ಸರ್ಕಾದ ವಿರುದ್ದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ರು, ಪ್ರತಿಭನಾ ಕಾರರನ್ನು ಪೊಲೀಸ್ ಬಂದಿಸಿದರು, ಕನ್ನಡ ಹೋರಾಟಗಾರರು ವಾಟಾಳ್ ನಾಗರು ಮತ್ತು ರೈತ ಹೋರಾಟಗಾರ ರಾಜ್ಯಾಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೆಗೌಡ ಮತ್ತಿತರರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು..1
- Keywords (ಕೀವರ್ಡ್‌ಗಳು) Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka Hashtags (ಹ್ಯಾಷ್‌ಟ್ಯಾಗ್‌ಗಳು) #SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates Keywords (ಕೀವರ್ಡ್‌ಗಳು) Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka Hashtags (ಹ್ಯಾಷ್‌ಟ್ಯಾಗ್‌ಗಳು) #SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates1
- ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹೆಲ್ತ್ ಕೇರ್ ಸೆಂಟರ್‌ಗೆ 40 ಸಾವಿರ ರೂ. ದಂಡ ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರಪ್ಪನಪಾಳ್ಯ ಪ್ರದೇಶದಲ್ಲಿ ನಿಯಮಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ. ಇಂದು ಬೆಳಿಗ್ಗೆ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯದ 9ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯಗಳಾದ ಸೂಜಿಗಳು, ಸಿರಿಂಜ್, ಪ್ಲಾಸ್ಟರ್ ಗಳು, ಮಾತ್ರೆ ಡಬ್ಬಗಳು ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದಿರುವುದನ್ನ ಗಮನಿಸಿದ ಪೌರಕಾರ್ಮಿಕರು ಮಾರ್ಷಲ್ ಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಾರ್ಷಲ್ ಗಳು ತ್ಯಾಜ್ಯಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ತ್ಯಾಜ್ಯಗಳೊಡನೆ ಹೆಲ್ತ್ ಕೇರ್ ಸೆಂಟರ್ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದಿದ್ದ ಮೇರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿರುವವರ ಮಾಹಿತಿ ಪತ್ತೆಯಾಗಿರುತ್ತದೆ. ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದು ಪಾಲಿಕೆಯ ಮಾರ್ಷಲ್‌ಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು, ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿದಿರುವ ಹೆಲ್ತ್ ಕೇರ್ ಸೆಂಟರ್‌ಗೆ ಸ್ಥಳದಲ್ಲೇ 40,000 ದಂಡ ವಿಧಿಸಿ, ಡಿಜಿಟಲ್ ಪಾವತಿ ಮೂಲಕ ವಸೂಲಿ ಮಾಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಭಾಗವಹಿಸಿದ್ದರು.1
- ‘ಟಾಕ್ಸಿಕ್’ ರಿಲೀಸ್, ಥಿಯೇಟರ್‌ಗಳಲ್ಲಿ ಯಶ್ ಹವಾ! ರಾಯನ ಎಂಟ್ರಿಗೆ ಅಭಿಮಾನಿಗಳಿಂದ ಭರ್ಜರಿ ಸೆಲೆಬ್ರೇಷನ್! ‘ಟಾಕ್ಸಿಕ್’ ರಿಲೀಸ್, ಥಿಯೇಟರ್‌ಗಳಲ್ಲಿ ಯಶ್ ಹವಾ! ರಾಯನ ಎಂಟ್ರಿಗೆ ಅಭಿಮಾನಿಗಳಿಂದ ಭರ್ಜರಿ ಸೆಲೆಬ್ರೇಷನ್!1
- All About,Mismanagement/Misappropriation of Funds/Violations of elections all in the #DistrictWaqfAdvisoryCommittee #Mysuru *ಭಾರತ ನಲ್ಲಿ ವೈರಲ್*1
- *ನಕಲಿ ಗ್ರಾಮ ಲೆಕ್ಕಿಗರ ಪೋಷಣೆ, ಕಂದಾಯ ಇಲಾಖೆ ವಿರುದ್ಧ ತಮಟೆ ಚಳುವಳಿ ಮಂಡ್ಯ.ಏಳು ಜನ ನಕಲಿ ಗ್ರಾಮ ಲೆಕ್ಕಿಗರು ಡ್ಯೂಪ್ಲಿಕೇಟ್ ಮಾರ್ಕ್ಸ್ ಕಾರ್ಡ್ ಮತ್ತು ಅಂಗವಿಕಲತೆ ಸರ್ಟಿಫಿಕೇಟ್ ನೀಡಿ 2011 ರಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ ಪಡೆದು ಕಂದಾಯ ಇಲಾಖೆಯಲ್ಲಿ 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ತನಿಖೆ ನಡೆದಿದ್ದರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೆ ವಿಳಂಬ ಮಾಡಿರುವುದು ಮತ್ತು ನಕಲಿ ಗ್ರಾಮ ಲೆಕ್ಕಿಗರನ್ನು ಹುದ್ದೆಯಿಂದ ವಜಾಗೊಳಿಸಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ ಎನ್ ನರಸಿಂಹಮೂರ್ತಿ ನೇತೃತ್ವದಲ್ಲಿ ಇಂದು ತಾಲೂಕು ಆಡಳಿತ ಸೌಧ ಆವರಣದಲ್ಲಿ ತಮಟೆ ಚಳುವಳಿಯನ್ನು ನಡೆಸಲಾಯಿತು ಪಟ್ಟಣದ ವೈಭವ ಹೋಟೆಲ್ ವೃತ್ತದಿಂದ ತಾಲೂಕು ಕಚೇರಿ ಆವರಣದವರೆಗೆ ತಮಟೆ ಚಳುವಳಿಯ ಮೂಲಕ ಕಂದಾಯ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸಲಾಯಿತು ಸಂಘಟನೆಯ ಸಂಚಾಲಕ ಮಾತನಾಡಿ ಲೋಕೇಶ್ ಮೌರ್ಯ ಮಾತನಾಡಿ ನಿಜವಾದ ಅಂಗ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ನಕಲಿ ಸರ್ಟಿಫಿಕೇಟ್ ಪಡೆದಿರುವ ಗ್ರಾಮ ಲೆಕ್ಕಿಗರು ವಂಚಿಸಿದ್ದಾರೆ ಈ ಸಂಬಂಧ ಇಲಾಖೆಯಿಂದ ಪೂರ್ಣ ಪ್ರಮಾಣದ ತನಿಖೆ ನಡೆದರೂ ಕೂಡ ಇವರ ವಿರುದ್ಧ ಕ್ರಮವಹಿಸಿಲ್ಲ ಈ ತಕ್ಷಣದಿಂದಲೇ ಇವರನ್ನು ವಜಾ ಗೊಳಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ ಎಂ ನರಸಿಂಹಮೂರ್ತಿ ಮಾತನಾಡಿ ನಕಲಿ ಅಂಗವಿಕಲತೆ ಸರ್ಟಿಫಿಕೇಟ್ ಪಡೆದಿರುವ ಅಪಾದಿತ ಗ್ರಾಮ ಲೆಕ್ಕಿಗರನ್ನು ತಕ್ಷಣದಿಂದಲೇ ವಜಾ ಗೊಳಿಸಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿ ಎಸ್ಐಟಿ ತನಿಖೆಗೆ ಒಳಪಡಿಸಬೇಕು ಹಾಗೂ ನಕಲಿ ಗ್ರಾಮಲೆಕ್ಕಿಗರ ಕುಟುಂಬಸ್ಥರ ಆಸ್ತಿಯ ವಿವರವನ್ನು ಸಂಗ್ರಹಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣದಿಂದಲೇ ಇವರು ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ನಿರಂತರವಾಗಿ ಹೋರಾಟ ನಡೆಸಲಾಗುವುದೆಂದು ತಿಳಿಸಿದರು ಪ್ರತಿಭಟನೆಯಲ್ಲಿ ಕರ್ನಾಟಕ ಸಂವಿಧಾನ ಸೇನೆಯ ವಕೀಲರಾದ ಪ್ರಭಾಕರ್ ಮತ್ತು ಪದಾಧಿಕಾರಿಗಳಾದ ಕುಮಾರ್ ಪ್ರದೀಪ್ ಸೋಮಶೇಖರ್ ಚೆನ್ನಕೇಶವ ನರಸಿಂಹರಾಜು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು1
- ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತಂತೆ ಪಕ್ಷದ ಶಾಸಕರೊಂದಿಗೆ ಚರ್ಚಿಸಿದ ಸಿಎಂ ಬೆಂಗಳೂರು:ಗೃಹ ಕೃಷ್ಣದಲ್ಲಿ ಮಂಗಳವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಕುರಿತಂತೆ ಪಕ್ಷದ ಶಾಸಕರೊಂದಿಗೆ ಚರ್ಚಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವರಗಳಾದ ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ ಖರ್ಗೆ, ಮಧು ಬಂಗಾರಪ್ಪ, ಬಿ.ಬಸವಂತಪ್ಪ, ಸತೀಶ್ ಜಾರಿಕಿಹೊಳಿ, ಹೆಚ್.ಸಿ ಬಾಲಕೃಷ್ಣ, ಶಿವಲಿಂಗೇಗೌಡ, , ಎಸ್.ಎಸ್ ಮಲ್ಲಿಕಾರ್ಜುನ, ಟಿ.ರಘುಮೂರ್ತಿ, ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ರವರು ಸೇರಿದಂತೆ ಶಾಸಕರುಗಳು ಉಪಸ್ಥಿತರಿದ್ದರು.1