Text :-ಆಟೋ ಪ್ರಚಾರಕ್ಕೆ ದರಪಟ್ಟಿ ಆಹ್ವಾನ – ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ ಕುರಿತು ಜಾಗೃತಿ ಅಭಿಯಾನ ಮೈಸೂರು:- ಬಾಲಕಾರ್ಮಿಕರ ನಿರ್ಮೂಲನೆ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ವಿಶೇಷ ಆಟೋ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಈ ಜಾಗೃತಿ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬಾಲ ಮತ್ತು ಕಿಶೋರ ಕಾರ್ಮಿಕರು ಹೆಚ್ಚಾಗಿ ಕಂಡುಬರುವ ಸಾಧ್ಯತೆಯಿರುವ ಪ್ರದೇಶಗಳನ್ನು ಗುರುತಿಸಿ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ನಗರಗಳ ಪ್ರಮುಖ ವೃತ್ತಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಬಾಲ/ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ–1986 ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳನ್ನು ಕೆಲಸಕ್ಕೆ ಬಳಸುವುದರಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳು, ಕಾನೂನು ಕ್ರಮಗಳು ಹಾಗೂ ಮಕ್ಕಳ ಶಿಕ್ಷಣದ ಮಹತ್ವ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯಾದ್ಯಂತ ಒಟ್ಟು 18 ಆಟೋ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಅನುಭವ ಹೊಂದಿರುವ ಅರ್ಹ ಸಂಸ್ಥೆಗಳು, ಸಂಘಟನೆಗಳು ಹಾಗೂ ಸೇವಾ ಸಂಸ್ಥೆಗಳಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೆ ತಗುಲುವ ವೆಚ್ಚ, ಪ್ರಚಾರ ಸಾಮಗ್ರಿಗಳು, ಧ್ವನಿವ್ಯವಸ್ಥೆ, ಜಾಗೃತಿ ಸಂದೇಶ ಪ್ರಸಾರ ಹಾಗೂ ಪ್ರಚಾರ ಅವಧಿ ಸೇರಿದಂತೆ ಸಂಪೂರ್ಣ ವಿವರಗಳನ್ನು ಒಳಗೊಂಡ ದರಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಆಸಕ್ತ ಮತ್ತು ಅರ್ಹ ಸಂಸ್ಥೆಗಳು ತಮ್ಮ ದರಪಟ್ಟಿಯನ್ನು ಮೇ 15ರ ಸಂಜೆ 5.00 ಗಂಟೆಯೊಳಗೆ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ, ಕಾರ್ಮಿಕ ಭವನ, ಕೆ.ಎನ್.ಎಸ್. ಲೇಔಟ್, ಹರಿಶ್ಚಂದ್ರ ಘಾಟ್ ಎದುರು, ಮೈಸೂರು ಇಲ್ಲಿಗೆ ನೇರವಾಗಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಜಾಗೃತಿ ಅಭಿಯಾನದ ಮೂಲಕ ಬಾಲಕಾರ್ಮಿಕತೆಯನ್ನು ತಡೆಯುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಸಮಾಜದ ಎಲ್ಲ ವರ್ಗಗಳೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಕೈಜೋಡಿಸಬೇಕು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿಗಳು ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮದಿಂದ ಮಕ್ಕಳ ಶಿಕ್ಷಣ, ಭದ್ರತೆ ಮತ್ತು ಉತ್ತಮ ಭವಿಷ್ಯಕ್ಕೆ ದಾರಿ ಕಲ್ಪಿಸುವ ಆಶಯ ವ್ಯಕ್ತವಾಗಿದೆ.

- PART-2 KARNATAKA RASHTRA SAMITHI PAKSHA LEADERS STAND FOR JUSTICE RELATED NEGLIGENCE OF STAFF & DOCTORS INSUFFICIENCY CAUSE DEATHS OF CHILDREN'S AT CHALUVEMBA HOSPITAL MYSORE1
- *ಭಾರತ ನಲ್ಲಿ ವೈರಲ್*1
- chamundeshwari enterprise Waterfilter service and sales dealer no 74068525372
- ಮೈಸೂರಿನಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಗೃಹೋಪಯೋಗಿ ಪೀಠೋಪಕರಣಗಳು ಕಡಿಮೆ ಬೆಲೆಯ ಫೋಮ್ ಹಾಸಿಗೆ COIR ಹಾಸಿಗೆ ಮತ್ತು ಸೋಫಾ ಕುಶನ್ ಮತ್ತು ಬೋಲಿಸ್ಟರ್ ಮತ್ತು ದಿಂಬುಗಳು1
- ಹನೂರು : ತಾಲೂಕಿನ ತಾಳಿಬಿಟ್ಟ ಸ್ವಲ್ಪ ಕೆಎಸ್‌ಟಿಸಿ ಬಸ್ ಪಾರ್ಟಿಯಾಗಿ 30ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸಮಯಕ್ಕೆ ಸರಿಯಾಗಿ ಬಾರದ ಆಂಬುಲೆನ್ಸ್ ಗಳು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರಳಾಡುತ್ತಿರುವ ಗಾಯಾಳುಗಳು.. ಹನೂರು ತಾಲೂಕಿನಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದ ರೋಗಿಗಳ ಪರದಾಟ ಕಳೆದ ಒಂದು ವಾರದಲ್ಲಿ ನಾಲ್ಕನೇ ಅಪಘಾತ. ಹನೂರು ತಾಲೂಕಿನಲ್ಲಿ ನಾಮಕಾವಸ್ಥೆಗೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಬಾರದ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ. ಮಾದಪ್ಪ ನಿನ್ನ ಭಕ್ತರನ್ನು ನೀನೆ ಕಾಪಾಡಪ್ಪ.4
- ಮಳವಳ್ಳಿ ಪಟ್ಟಣದ ಉದ್ಯಮಿಗಳಾದ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ರವರು ನೂತನವಾಗಿ ನಿರ್ಮಿಸಿರುವ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಶ್ರೀಗಳ ಆಗಮನ ಅಪಾರ ಭಕ್ತರಿಂದ ಭಕ್ತಿ ಸಮರ್ಪಣೆ ಮಳವಳ್ಳಿ ಪಟ್ಟಣದ ಎನ್ಎಸ್ ಬಡಾವಣೆಯಲ್ಲಿ ಶ್ರೀಮತಿ ಗೀತಾ ಮತ್ತು ಎಸ್ ಬಿ ಶಿವಸ್ವಾಮಿ ರವರ ಸಹೋದರ ಉದ್ಯಮಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ದಂಪತಿಗಳು ನೂತನವಾಗಿ ನಿರ್ಮಿಸಿರುವ ಜಯಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಕ್ಷೇತ್ರದ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸಿ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಆಗಮಿಸಿ ಕುಟುಂಬಕ್ಕೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ಕುಟುಂಬಸ್ಥರಿಂದ ಅರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪರಮಪೂಜ್ಯರಿಗೆ ದಿವ್ಯ ಪಾದಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು ಈ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನ ಹರ ಗುರು ಚರಮೂರ್ತಿಗಳು ತಾಲೂಕಿನ ಉದ್ಯಮಿಗಳು ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಆಗಮಿಸಿ ನೂತನ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ದಂಪತಿಗಳಿಗೆ ಆಶೀರ್ವದಿಸಿ ಶುಭ ಕೋರಿದರು1
- ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾರ್ಗದ ತಾಳುಬೆಟ್ಟದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶುಕ್ರವಾರ ನಡೆದಿದೆ. ಮಾದಪ್ಪನ ಬೆಟ್ಟದಿಂದ ವಾಪಾಸ್ ಆಗುತ್ತಿದ್ದ ಬಸ್, ತಾಳುಬೆಟ್ಟ ಸಮೀಪದ ಆಲದ ಮರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಮಾದಪ್ಪನ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದರು. ತಿರುವು ಪ್ರದೇಶದಲ್ಲಿ ಸಂಭವಿಸಿದ ಈ ಅವಘಡದಿಂದ ಚಾಲಕ ನಿರ್ವಾಹಕ ಸೇರಿ ಸುಮಾರು 30ಂಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು: ಮಹಿಳೆ ನಿರ್ವಾಹಕರಾದ. ಪದ್ಮಾವತಿಗೆ ತಲೆಗೆ ಪೆಟ್ಟಾಗಿದೆ ಪ್ರಯಾಣಿಕರಾದ ಹೆಚ್ ಡಿಕೋಟೆ ಶಿವನಂಜ ಶ್ಯೆಲಜಾ ಕಿರಗಸೂರು ಮೇಘನಾ ರಾಜಶೇಖರ್ ಮೈಸೂರು ಮೂಲದ ದ್ರಾಕ್ಷಾಯಿಣಿ ಬಸವರಾಜು ಮಧುವನಳ್ಳಿ ಗ್ರಾಮದ ದ್ರಾಕ್ಷಾಯಿಣಿ ಸಿದ್ದಯ್ಯನಪುರದ ಸುಂದ್ರಮ್ಮ ಸೇರಿದಂತೆ ಹಲವರಿಗೆ ಹೆಚ್ಚಾಗಿ ಪೆಟ್ಟಾಗಿದ್ದರೆ 30ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಪೆಟ್ಟಾಗಿದೆ ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದ್ದರೂ, ಆರಂಭದಲ್ಲಿ ಆಂಬುಲೆನ್ಸ್ ಸೌಲಭ್ಯ ಲಭ್ಯವಾಗದೆ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.ನಂತರ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಪ್ರಯಾಣಿಕರು ಬಸ್ ಚಾಲಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಹನೂರು ಆಸ್ಪತ್ರೆಗೆ ತಹೀಸಿಲ್ದಾರ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಪರಿಶೀಲಿಸಿದರು ಈ ಸಂಬಂಧ ಮಲೆಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ2
- *ಭಾರತ ನಲ್ಲಿ ವೈರಲ್*1