Shuru
Apke Nagar Ki App…
ಹೊಸನಗರ ತಾಲೂಕಿನ್ಯಾದಂತ ಅತ್ಯಂತ ಸಡಗರ ಸಂಭ್ರಮದಲ್ಲಿ ಈದ್ ಮಿಲಾದ್ ಆಚರಣೆ ಹೊಸನಗರ: ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಈ ಪ್ರಯುಕ್ತ ಬೆಳಿಗ್ಗೆ ಮಸೀದಿಯಿಂದ ಅಬಾಲವೃದ್ಧರಾದಿಯಾಗಿ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮಳೆಯನ್ನೂ ಲೆಕ್ಕಿಸದೆ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇದೇ ವೇಳೆ ಜುಮ್ಮಾ ಮಸೀದಿ ಆವರಣದಲ್ಲಿ ಅರೇಬಿಕ್ ಶಾಲಾ ಮಕ್ಕಳಿಗಾಗಿ ನಾಲ್ಕು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಈದ್ ಮಿಲಾದ್ ಆಚರಣೆಯಲ್ಲಿ ಸಾರ್ವಜನಿಕರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ತನುಜ್ ಸೋರೆಕೊಪ್ಪ ತೇಜ
ಹೊಸನಗರ ತಾಲೂಕಿನ್ಯಾದಂತ ಅತ್ಯಂತ ಸಡಗರ ಸಂಭ್ರಮದಲ್ಲಿ ಈದ್ ಮಿಲಾದ್ ಆಚರಣೆ ಹೊಸನಗರ: ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಈ ಪ್ರಯುಕ್ತ ಬೆಳಿಗ್ಗೆ ಮಸೀದಿಯಿಂದ ಅಬಾಲವೃದ್ಧರಾದಿಯಾಗಿ ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮಳೆಯನ್ನೂ ಲೆಕ್ಕಿಸದೆ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇದೇ ವೇಳೆ ಜುಮ್ಮಾ ಮಸೀದಿ ಆವರಣದಲ್ಲಿ ಅರೇಬಿಕ್ ಶಾಲಾ ಮಕ್ಕಳಿಗಾಗಿ ನಾಲ್ಕು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಈದ್ ಮಿಲಾದ್ ಆಚರಣೆಯಲ್ಲಿ ಸಾರ್ವಜನಿಕರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.
More news from ಕರ್ನಾಟಕ and nearby areas
- ಶಿಕಾರಿಪುರ. 'ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)' ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್ ಶಿರಾಳಕೊಪ್ಪ. ಶಿಕಾರಿಪುರ. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ದಿನಾಂಕ 26-08-2026ರಿಂದ 06-09-20265 ತನಕ ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಯಲಿದೆ. ಶಿಕಾರಿಪುರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಹುಸೇನ್ ಅಧ್ಯಕ್ಷ ಶಿರಾಳಕೊಪ್ಪ ಮಾತನಾಡಿ, ಪ್ರವಾದಿಮುಹಮ್ಮದ್(ಸ)ರವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ಮೇಲೆ ಸ್ಥಾಪಿತವಾಗಿದೆ. ಅವರು ಜನದ ಮನಸ್ಸನ್ನು ಸಂಸ್ಕರಿಸಿ, ಅವರ ನೈತಿಕತೆ ಮತ್ತು ಚಾರಿತ್ಯವನ್ನು ಶುದ್ದೀಕರಿಸುವ ಮೂಲಕ ವ್ಯಕ್ತಿಗಳನ್ನು ಸಮಾಜವನ್ನು ಪರಿವರ್ತಿಸಿದರು. ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು ಹಾಗೂ ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ, ಆಡಳಿತ ಹೀಗೆ ಎಲ್ಲ ಕ್ಷೇತ್ರಗಳನ್ನು ಬೆಳಗಿಸಿದ ಕ್ರಾಂತಿಯಾಗಿತ್ತು. ಸುಭಿಕ್ಷೆ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಪ್ರವಾದಿಮುಹಮ್ಮದ್(ಸ)ರವರು ಈ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಅಭಿಯಾನದ ಪ್ರಯುಕ್ತ, ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಶ್ರೀ ಯೋಗೇಶ್ ಮಾಸ್ಟರ್ ಅವರು ಬರೆದ 'ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್(ಸ)' ಹಾಗೂ ವಾರ್ತಾ ಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ಬರೆದ 'ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)' ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, 'ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)' ಎಂಬ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮ. ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ. ಪ್ರವಚನ, ಸೀರತ್ ಎಕ್ಸಿಬಿಶನ್, ಸಮಾಜಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ರ್ಕ್ಯಾಲಿಗಳು ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿರುವುದು ಎಂದರು. ಜಕೀ ಅಹ್ಮದ್ ಆಫ್ರಿದಿ ಕಾರ್ಯದರ್ಶಿ ಶಿರಾಳಕೊಪ್ಪ ಮಾತನಾಡಿ, ರೋಗಿಗಳ ಭೇಟಿ ಮತ್ತು ಹಣ್ಣು ವಿತರಣೆ ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ವಿತರಣೆ ಬಡ ಮತ್ತು ಅಗತ್ಯವಿರುವ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನ ಮನೆ ನಿರ್ಮಾಣಕ್ಕೆ ಸಹಾಯ - ಇತ್ತೀಚೆಗೆ ಮೇಲ್ಚಾವಣಿಯ ಸ್ಲಾಬ್ ಹಾಕಿಸಿದ ಸೇವಾ ಕಾರ್ಯಹಾಗೂ ಮುಸ್ಲಿಮರು ಮತ್ತು ಮುಸ್ಲಿಮೇತರರಿಗಾಗಿ ರಕ್ತದಾನ ಶಿಬಿರ ಮತ್ತು ರೇಷನ್ ಕಿಟ್ ವಿತರಣೆ, ಪರಿಸರ ಮತ್ತು ಸ್ವಚ್ಛತಾ ಕಾರ್ಯ ಶಾಲೆ ಆಸ್ಪತ್ರೆ ಗ್ರಂಥಾಲಯ ಮುಂತಾದ ಸ್ಥಳಗಳಲ್ಲಿ ಸೀರತ್ ಪುಸ್ತಕಗಳ ವಿತರಣೆ, ಉಲಾಮ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಭೇಟಿ,ಮೊಹ್ಸಿನೇ ಇನ್ಸಾನಿಯತ್ ಪುಸ್ತಕವನ್ನು ಕಾರ್ಯಕರ್ತರು ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸುವುದು, ಕನ್ನಡ ಮತ್ತು ಉರ್ದು ಭಾಷೆಗಳಲ್ಲಿ ಸ್ಪರ್ಧೆಗಳು ಸಂದೇಶಗಳನ್ನು ಸೇವಾ ಕಾರ್ಯಗಳ ಮೂಲಕ ಸಮಾಜದ ಎಲ್ಲಾ ವರ್ಗಗಳಿಗೂ ತಲುಪಿಸುವುದು ಎಂದರು. ಇದೇ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಸಿಬ್ ಗತ್ ಉಲ್ಲಾ ಕಾರ್ಯಕರ್ತರು,ಅಬ್ದುಲ್ ಗಪೂರ್ ಸ್ಥಾನೀಯ ಅಧ್ಯಕ್ಷರು,ಶಿಕಾರಿಪುರ, ಜಾಕಿರ್ ಹುಸೇನ್ ಸ್ಥಾನೀಯ ಅಧ್ಯಕ್ಷರು, ಚಿಕ್ಕ ಜಂಬೂರು ಅಬ್ದುಲ್ ಕಬೀರ್ ಕಾರ್ಯಕರ್ತರು, ಅಬ್ದುಲ್ ರೆಹಮಾನ್ ಸ್ಥಾಯಿ ಕಾರ್ಯದರ್ಶಿ ಎಸ್.ಐ.ಒ. ಸಂಘಟನೆ ಶಿರಾಳಕೊಪ್ಪ ಉಪಸ್ಥಿತರಿದ್ದರು.1
- ಈದ್ ಮಿಲಾದ್‌ಗೆ ಶಿವಮೊಗ್ಗ ಸಜ್ಜು: ಹಸಿರು ಬಾವುಟಗಳಿಂದ ಕಂಗೊಳಿಸಿದ ನಗರ ಪ್ರವಾದಿ ಮೊಹಮ್ಮದ್ ಜನ್ಮದಿನಾಚರಣೆಗೆ ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ1
- ಹಾನಗಲ್...ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ ಆರೋಪ. ಚಿಕಿತ್ಸೆ ವಿಳಂಬದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರ ಆರೋಪ ಆಸ್ಪತ್ರೆ ಎದುರು ಪ್ರತಿಭಟನೆ ಮಂಗಳವಾರ ಪಟ್ಟಣದ ತಾಲೂಕು ಆಸ್ಪತ್ರೆಯ ಎದುರು ಮಗುವಿನ ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು. ಸ್ಥಳಕ್ಕೆ ಮೆಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ1
- ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧತೆಯ ಮನಸ್ಥಿತಿಯ ಪ್ರದರ್ಶನ ಮಂಗಳೂರು: ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧತೆಯ ಮನಸ್ಥಿತಿಯ ಪ್ರದರ್ಶನವಾಗಿದ್ದು, ಪುತ್ತೂರಿನಲ್ಲಿ ಆರಂಭವಾಗಿರುವ ವಾಣಿಜ್ಯ ಭಯೋತ್ಪಾದನೆ'ಯ ಮೊದಲ ಘಟನೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಆರೋಪಿಸಿದರು. ದರ್ಬೆ ಘಟನೆಯಲ್ಲಿ ಗಾಯಗೊಂಡು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜನಾ ಪೈ ಅವರನ್ನು ಆ.26ರಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ, ಅವರ ಪತಿ ಸದಾಶಿವ ಪೈ ಅವರೊಂದಿಗೆ ಮಾತುಕತೆ ನಡೆಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಹಿಂದೂಗಳು ಪುತ್ತೂರಿನ ವ್ಯಾಪಾರ ಕ್ಷೇತ್ರದಿಂದ ಹಿಂದೆ ಸರಿಯಬೇಕು ಎಂಬ ಮನೋಭಾವದ ಹಿನ್ನೆಲೆಯಲ್ಲಿ ನಡೆದಿರುವ ವಾಣಿಜ್ಯ ಭಯೋತ್ಪಾದನೆಯ ಮೊದಲ ಘಟನೆ ಇದಾಗಿದೆ ಎಂದು ಆರೋಪಿಸಿದ ಅವರು, ಜೆರಾಕ್ಸ್ ಅಂಗಡಿಯಲ್ಲಿ ಸಣ್ಣ ಚೀಟಿ ಸುಟ್ಟುಹೋದ ವಿಚಾರಕ್ಕೆ ಕ್ಷಣಾರ್ಧದಲ್ಲಿ ನೂರಾರು ಮಂದಿ ಆಗಮಿಸಿ ದಾಳಿ ನಡೆಸಿರುವುದರ ಹಿಂದಿನ ದುರುದ್ದೇಶ ಮೊದಲು ಬಹಿರಂಗವಾಗಬೇಕು ಎಂದರು. ಎಲ್ಲ ಅಂಗಡಿಗಳಲ್ಲಿಯೂ ಕೆಲವೊಮ್ಮೆ ತಪ್ಪುಗಳು ಸಂಭವಿಸುತ್ತವೆ. ಅದಕ್ಕೆ ಪ್ರತಿಯಾಗಿ ಗುಂಡಾಗಿರಿ ಅಥವಾ ಹಲ್ಲೆ ನಡೆಸುವುದೇ ಉತ್ತರವಾದರೆ ಮುಂದಿನ ದಿನಗಳಲ್ಲಿ ರಸ್ತೆ-ರಸ್ತೆಗಳಲ್ಲಿ ಕಾದಾಟಗಳು ನಡೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸಾಮಾಜಿಕ ಶಾಂತಿ ಕಾಪಾಡಲು ಸಾಮಾಜಿಕ ಪ್ರಜ್ಞೆ ಇರುವವರು ಈ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು ಎಂದು ಹೇಳಿದರು. ಹಿಂದೂ ಸಮಾಜಕ್ಕೆ ಪ್ರಾಮಾಣಿಕವಾಗಿ ನ್ಯಾಯ ಮತ್ತು ರಕ್ಷಣೆ ದೊರೆಯದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯವನ್ನು ಹುಡುಕುವ ಹಾಗೂ ಅದನ್ನು ಪಡೆಯುವ ಹಕ್ಕು ಮತ್ತು ಶಕ್ತಿ ಹಿಂದೂ ಸಮಾಜಕ್ಕಿದೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನ್ಯಾಯಕ್ಕಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.31ರಂದು ಪುತ್ತೂರು ಚಲೋ' ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಹತ್ತಿಕ್ಕುವ ರೀತಿಯಲ್ಲಿ ರಾಜಕೀಯ ಮುಂದುವರಿದರೆ ಹಿಂದೂ ಸಮಾಜದ ತಾಳ್ಮೆ ಯಾವ ಹಂತದಲ್ಲಾದರೂ ತಪ್ಪಬಹುದು ಎಂದು ಎಚ್ಚರಿಸಿದರು. ಹಲ್ಲೆಗೊಳಗಾದ ಮಹಿಳೆಯ ಮೇಲೆ ಕೊಲೆಯತ್ನದಂತಹ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಮೂಳೆ ಮುರಿದು ಆಸ್ಪತ್ರೆ ಸೇರಿರುವವರ ಪ್ರಕರಣಗಳಿವೆ. ಆದರೆ ಕೃತ್ಯ ಎಸಗಿದವರ ವಿರುದ್ಧ ಪ್ರಕರಣ ದಾಖಲಿಸುವುದು ಅಥವಾ ಬಂಧಿಸುವುದು ಕಂಡುಬರುತ್ತಿಲ್ಲ. ಅಧಿಕಾರಿಗಳು ಯಾರನ್ನು ತೃಪ್ತಿಪಡಿಸಲು ಮುಂದಾಗಿದ್ದಾರೆ ಎಂದು ಜಗದೀಶ್ ಕಾರಂತ್ ಪ್ರಶ್ನಿಸಿದರು. ಸಿಂಗಂ ವೇಷ ಹಾಕಿಕೊಂಡು ಒಂದು ಸಮಾಜದ ಭಾವನೆಗಳನ್ನು ಹತ್ತಿಕ್ಕುವುದು, ಬಲಪ್ರಯೋಗದ ಮೂಲಕ ಸಮಾಜವನ್ನು ತುಳಿಯುವ ಪ್ರಯತ್ನ ನಡೆಸುವುದನ್ನು ಹಿಂದೂ ಸಮಾಜ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲರ ಮೇಲೂ ಒಂದೇ ರೀತಿಯ ಕಾನೂನು ಕ್ರಮ ಜರುಗಿಸಬೇಕಿತ್ತು. ಆದರೆ ಬೇರೆ ಬೇರೆ ಸಬೂಬುಗಳನ್ನು ನೀಡಿ ಪತ್ರಿಕಾಗೋಷ್ಠಿಗಳಲ್ಲಿ ಸಮರ್ಥನೆ ನೀಡುವ ಪ್ರಯತ್ನ ಮಾಡಬಾರದು ಎಂದರು. ರಾಜಕೀಯ ಬಕೆಟ್‌ಗಿರಿಯನ್ನು ಜಾಗೃತ ಸಮಾಜ ಸಹಿಸುವುದಿಲ್ಲ. ಮೊದಲು ಭಯೋತ್ಪಾದನಾ ಮನೋಭಾವವನ್ನು ನಿಲ್ಲಿಸಬೇಕು. ನಿಮ್ಮ ದಕ್ಷತೆಗೆ ಹಾಗೂ `ಸಿಂಗಂ'ಗಿರಿಗೆ ಇದೊಂದು ಸವಾಲಾಗಿದೆ ಎಂದು ಜಗದೀಶ್ ಕಾರಂತ್ ಹೇಳಿದರು. ಹಿಂದು ಜಾಗರಣ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ರವಿರಾಜ್ ಶೆಟ್ಟಿ ಕಡಬ, ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು, ಸುಪ್ರಿತ್, ಪ್ರಶಾಂತ್ ಕೆಂಪುಗುಡ್ಡೆ, ಅಜಿತ್ ರೈ ಹೊಸಮನೆ ಸಹಿತ ಹಲವಾರು ಮಂದಿ ಜೊತೆಗಿದ್ದರು.1
- ಕುಂಜತ್‌ಬೈಲ್‌ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಂಗಳೂರು: ಸುರತ್ಕಲ್ ಹೋಬಳಿಯ ಕುಂಜತ್ತಬೈಲ್‌ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ನಿಯೋಗವು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಆ.21ರಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ನಿಯೋಗವು ಸಚಿವರನ್ನು ಭೇಟಿ ಮಾಡಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಂಜೀವ ಕೋಟ್ಯಾನ್, ಗೌರವಾಧ್ಯಕ್ಷ ರಘುನಾಥ ಅತ್ತಾವರ, ಉಪಾಧ್ಯಕ್ಷ ಅಣ್ಣು ಕುಂಜತ್ತ್ ಬೈಲ್, ಚೈತನ್ಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಸೂಟರ್ ಪೇಟೆ, ಜಿಲ್ಲಾ ವಕ್ತಾರ ರಾಮ್ ಕುಮಾರ್ ಹಾಗೂ ಸದಸ್ಯ ಅಕ್ಷಯ್ ಗೇರುಕಟ್ಟೆ ಉಪಸ್ಥಿತರಿದ್ದರು.1
- ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತ: ಯುವಕ ಸಾವು ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲ್ಲೇಗ ಸಮೀಪದ ಮುರ ನಿವಾಸಿ ಹರ್ಷದ್ ಎಂಬವರು ದುರಂತವಾಗಿ ನಿಧನರಾಗಿದ್ದಾರೆ. ಮೃತ ಯುವಕ ಹರ್ಷದ್ ಅವರು ಕಲ್ಲೇಗ ಜುಮಾ ಮಸೀದಿ ಜಮಾಅತ್‌ಗೆ ಒಳಪಟ್ಟ ಮುರ ನಿವಾಸಿ, ಮರ್ಹೂಮ್ ರಝಾಕ್ ಸಾಹೇಬ್ ಅವರ ಪುತ್ರ ಹಾಗೂ ಇರ್ಷಾದ್ ಅವರ ಸಹೋದರ. ಇವರು ನೆಹರು ನಗರದ ‘ರೆಕ್ಸಾ ಶಾಪ್’ನಲ್ಲಿ ಉದ್ಯೋಗಿಯಾಗಿದ್ದರು. ಇಂದು ಪರ್ಲೋಟು ಸಮೀಪ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಹರ್ಷದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಯುವಕನ ಅಕಾಲಿಕ ನಿಧನಕ್ಕೆ ಸ್ಥಳೀಯರು ಹಾಗೂ ಕಲ್ಲೇಗ ಜಮಾಅತ್ ಬಂಧುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.1
- ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ ಲೋಕಾಯುಕ್ತರಿಗೆ ದೂರು ಮಾನ್ಯ ಲೋಕಾಯುಕ್ತರು ಶ್ರೀ ಬಿ ಎಸ್ ಪಾಟೀಲ್ ಸರ್ ಅವರಿಗೆ ಹಾವೇರಿ ಜಿಲ್ಲೆಯಲ್ಲಿ ಎನ್ ಆರ್ ಎಲ್ ಎಂ ಥೀಮ್ ನಲ್ಲಿ ಆಗಿರುವ ಹಗರಣ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನಡೆದಿರುವ ಹಗರಣ, ಹಾಗೂ ಅಕ್ಷರ ದಾಸೋಹ ಯೋಜನೆಯಹಳ್ಳಿ ನಡೆದಿರುವ ಹಗರಣ ಹಾಗೂ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕಾಗಿನೆಲೆ ರೋಡ ಹಗರಣ, ಕನವಳ್ಳಿಯಲ್ಲಿ ಮೊಲನ ಆಜಾದ್ ಮಾದರಿ ಶಾಲೆಯ ದುರಸ್ತಿ ಕಾಮಗಾರಿಯಲ್ಲಿ 21 ಲಕ್ಷ ಹಗರಣ, ಜಮ್ ಪೋರ್ಟಲ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಡಿರುವ ಹಗರಣ, ಮತ್ತು ಎಂ ಜಿ ಎನ್ ಆರ್ ಜಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಇಂಜಿನಿಯರ್ಗಳನ್ನು ರುಚಿಯಿಂದಾಲ್ ಮೇಡಂ ಅವರು ವರ್ಗಾವಣೆ ಮಾಡಿರುವ ಆದೇಶವನ್ನು ತಡೆ ಹಿಡಿದಿರುವ ವಿರೋಧಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ದೂರನ್ನು ನೀಡಲಾಯಿತು. ಹಾವೇರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಖಂಡಿಸಿ ಮತ್ತು ವಿವಿಧ ಹಳ್ಳಿಗಳಲ್ಲಿ ಇರುವ ಗೋಮಾಳ ಜಾಗವನ್ನು ಖಾಸಗಿ ವ್ಯಕ್ತಿಗಳು ತಮ್ಮ ಹೆಸರಿಗೆ ಮಾಡಿಕೊಳ್ಳುವುದನ್ನು ಖಂಡಿಸಿ ಮತ್ತು ವೈದ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರ ವೈದ್ಯಕೀಯ ನಿರ್ಲಕ್ಷತೆ ವಿರುದ್ಧ, ಹಿರೇಕೆರೂರು ತಾಲೂಕ್ ಎಳವಾಳ ಗ್ರಾಮದ ಗೋಮಾಳ ಆಸ್ತಿಯನ್ನು ಒಬ್ಬರು ತಮ್ಮ ವೈಯಕ್ತಿಕ ಹೆಸರಿನಲ್ಲಿ ಮಾಡಿಕೊಂಡಿರುವ ವಿರುದ್ಧ ಮತ್ತು ಬ್ಯಾಡಗಿ ತಾಲೂಕ್ ಸುಭಾಷ್ ತುಪ್ಪದ್ ಇವರ ಮಗಳಾದ ವಂದನಾ ಅವರ ಚಿರಾಯು ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷತೆಯಿಂದ ಆಗಿರುವ ಸಾವನ್ನು ಖಂಡಿಸಿ ಮತ್ತು ರಟ್ಟಿಹಳ್ಳಿ ತಾಲೂಕ ಚಾಂದ್ ಪೀರ್ 6 ವರ್ಷದ ಮಗು ಜಿಲ್ಲಾ ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷತೆಯಿಂದ ಕೋಮಾದಲ್ಲಿ ಹೋಗಿರುವುದನ್ನು ಖಂಡಿಸಿ ಮಾನ್ಯ ಲೋಕಾಯುಕ್ತರಿಗೆ ಮನವಿ ಸಲ್ಲಿಸಿ ತನಿಖೆಯನ್ನು ನಡೆಸಲು ಆಗ್ರಹಿಸಲಾಯಿತು1
- ಶಿಕಾರಿಪುರ .ನಗರದ ಮನೆ ಮನಗಳಲ್ಲಿ ನಡೆಯುವ 16ನೇ ವರ್ಷದ ಶ್ರಾವಣದಲ್ಲಿ ಶ್ರಾವಣನುಭಾವ ಕಾರ್ಯಕ್ರಮ ಶ್ರೀ ಮ. ನಿ. ಪ್ರ. ಚನ್ನಬಸವ ಸ್ವಾಮಿಗಳು. ಶಿಕಾರಿಪುರ ನಗರದ ಮನೆ ಮನಗಳಲ್ಲಿ ನಡೆಯುವ 16ನೇ ವರ್ಷದ ಶ್ರಾವಣದಲ್ಲಿ ಶ್ರಾವಣ ಭಾವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನಡೆಯಲಿದ್ದು. ಸಾನಿಧ್ಯ. ಶ್ರೀ ಮ. ನಿ. ಪ್ರ. ಗುರುಬಸವ ಮಹಾಸ್ವಾಮಿಗಳು ವಿರಕ್ತಮಠ ಪಾಂಡೋಮಟ್ಟಿ . ನೇತೃತ್ವ.. ಶ್ರೀ ಮ.ನಿ.ಪ್ರ ಚನ್ನಬಸವ ಸ್ವಾಮಿಗಳು ವಿರಕ್ತಮಠ ಶಿಕಾರಿಪುರ. ಸಮ್ಮುಖ. ಶ್ರೀ ಮ. ನಿ .ಪ್ರ. ಮಹಾಂತ ಮಹಾಸ್ವಾಮಿಗಳು ತಿಪ್ಪಾಯಿ ಕೊಪ್ಪ . ಮಾತೆ ಶರಣಾಂಭಿಕೆಯವರು, ಬಸವಾಶ್ರಮ ಶಿಕಾರಿಪುರ, ಉದ್ಘಾಟನೆ. ಶ್ರೀಯುತ ಬಿ ವೈ ರಾಘವೇಂದ್ರ ಲೋಕಸಭಾ ಸದಸ್ಯರು ಶಿವಮೊಗ್ಗ . ಅಧ್ಯಕ್ಷತೆ . ಶ್ರೀಮತಿ ಕಮಲಾಬಾಯಿ ಕೃಷ್ಣ ಸಿಂಗ್ ಶಿಕಾರಿಪುರ , ಪ್ರಾಸ್ತಾವಿಕ ನುಡಿ, ಶ್ರೀ ಸುಭಾಷ್ ಚಂದ್ರ ಸ್ಥಾನಿಕ್ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರು ಶಿವಮೊಗ್ಗ , ಮುಖ್ಯ ಅತಿಥಿಗಳು. ಶ್ರೀ ಡಿ.ಜಿ. ಶಾಂತನಗೌಡ್ರು ಮಾನ್ಯ ಶಾಸಕರು ಹೊನ್ನಾಳಿ ಶ್ರೀ ನಗರದ ಮಹದೇವಪ್ಪನವರು ಅಧ್ಯಕ್ಷರು ಕರ್ನಾಟಕ ಪ್ರದೇಶ ಕೃಷಿ ಸಮಾಜ ಬೆಂಗಳೂರು, ಶ್ರೀ ಕೆ.ಎಸ್ ಗುರುಮೂರ್ತಿ ಅವರು ಮಾಜಿ ಅಧ್ಯಕ್ಷರು ಎ0. ಎ. ಡಿ. ಬಿ . ಶಿವಮೊಗ್ಗ , ಶ್ರೀ ಬಿ.ಡಿ. ಭೂಕಾಂತ್ , ಸಹಕಾರ ರತ್ನ ಪುರಸ್ಕೃತರು, ನಿರ್ದೇಶಕರು ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ನಿ.,ಬೆಂಗಳೂರು, ಹಾಗೂ ಹಲವಾರು ಗಣ್ಯರು ಭಕ್ತಾದಿಗಳು ಉಪಸ್ಥಿತರಿರುವರು.1