Shuru
Apke Nagar Ki App…
ಸ್ವಾವಲಂಬಿ ಬದುಕಿಗೆ ಸರ್ಕಾರದ ಯೋಜನೆಗಳು ನೆರವು: ಶಾಸಕ ಬಿ.ಎನ್.ರವಿಕುಮಾರ್ ಶಿಡ್ಲಘಟ್ಟ: ವಿಶೇಷ ಚೇತನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿರ್ವಹಿಸುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು. ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2024–25ನೇ ಸಾಲಿನ ಯೋಜನೆಯಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ನಾಲ್ವರು ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
NAYANNEWS
ಸ್ವಾವಲಂಬಿ ಬದುಕಿಗೆ ಸರ್ಕಾರದ ಯೋಜನೆಗಳು ನೆರವು: ಶಾಸಕ ಬಿ.ಎನ್.ರವಿಕುಮಾರ್ ಶಿಡ್ಲಘಟ್ಟ: ವಿಶೇಷ ಚೇತನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿರ್ವಹಿಸುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು. ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2024–25ನೇ ಸಾಲಿನ ಯೋಜನೆಯಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ನಾಲ್ವರು ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
More news from ಕರ್ನಾಟಕ and nearby areas
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಸಮಾಜ ಸೇವಕ ಸಿಎಂ ಬೈರೇಗೌಡ ರು ಮುತ್ತೈದೆಯರಿಗೆ ಹರಿಶಿನ, ಕುಂಕುಮ, ಸೀರೆ ವಿತರಣೆ1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ.1
- ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು2
- *ದೇವರ ನಿಶ್ಚಯದಂತೆ ನಾವುಗಳು ಕೆಲಸ ಮಾಡಿ ದೇವಾಲಯ ನಿರ್ಮಾಣ ಮಾಡಿದ್ದೇವೆ:ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣಗೌಡ* ಹಲವಾರು ಸಮುದಾಯದ ಜನರು ವಾಸಿಸುವ ಕಮ್ಯೂನಿಟಿಗಳಲ್ಲಿ ದೇವಾಲಯ ನಿರ್ಮಾಣ ಕಷ್ಟ ಸಾಧ್ಯ ಆದರೂ ಪ್ರೆಸ್ಟೀಜ್ ಗ್ಲೆನ್ ವುಡ್ ಕಮ್ಯೂನಟಿಯ ಜನರ ಆಶಯ ಹಾಗೂ ಸಂಕಲ್ಪ ದಂತೆ ಶ್ರೀ ವರಸಿದ್ಧಿ ವಿನಾಯಕ ದೇವಾಲಯವ ನಿರ್ಮಾಣದ ಬಗ್ಗೆ ಎರಡು ವರ್ಷದ ಹಿಂದಿನಿಂದಲೂ ಮಾಡುತ್ತಿದ್ದರೂ ದೇವಾಲಯವ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದ 45 ದಿನಗಳಲ್ಲಿ ಅದರಲ್ಲೂ ಕೇವಲ 30 ದಿನಗಳು ಕೆಲಸ ಮಾಡಿ ಪೂರ್ಣಗೊಳಿಸಿರುವುದು ಗಿನ್ನಿಸ್ ದಾಖಲೆ ಎಂದು ಕೆಲವು ಸ್ನೇಹಿತರು ಹೇಳುತ್ತಿದ್ದರು ಎಂದು ಸಮಾಜ ಸೇವಕರು ಮತ್ತು ಎಲ್ ಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ವಿಜೇತರಾದ ಕರುಣಾಮಯಿ ಲಕ್ಷ್ಮಣಗೌಡರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಬಿದರಹಳ್ಳಿ ಹೋಬಳಿ ಭೂದಿಗೆರೆ ರಸ್ತೆಯ ಮಂಡೂರುಗ್ರಾಮದ ಪ್ರೆಸ್ಟೀಜ್ ಗ್ಲೆನ್ ವುಡ್ ನ ಶ್ರೀ ವರಸಿದ್ಧ ವಿನಾಯಕ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಮಾಡಬೇಕಾದರೂ ನಾವು ನಿಮಿತ್ತ ಮಾತ್ರ ಎಲ್ಲಾ ದೇವರ ಕೃಪೆಯಿಂದ ನಡೆಯುತ್ತದೆ.ದೇವಾಲಯದ ಕೆಲಸ ಹಾಗೂ ಪ್ರತಿಷ್ಠಾಪನೆ ವಿನಾಯಕನ ಕೃಪೆಯಿಂದ ಸಾಂಗವಾಗಿ ನೆರವೇರಿದೆ ಎಂದು ಹೇಳಿದರು. ದೇವತಾ ಕಾರ್ಯದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿರವರು ಭಾಗವಹಿಸಿ ಹಿತವಚನಗಳನ್ನು ತಿಳಿಸಿದರು. ಅವರೊಂದಿಗೆ ಮುಖಂಡರುಗಳಾದ ಕಾಟ್ಮನೂರು ಪಾಪಣ್ಣ,ಕ್ರಾಸ್ ಮಂಜು,,ಜ್ಯೋತಿ ಪುರ ವೇಣು ರವರುಗಳು ಆಗಮಿಸಿ ಶುಭಕೋರಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು. ದೇವಾಲಯ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಶ್ರೀ ವರಸಿದ್ಧಿ ವಿನಾಯಕ ಎಲ್ಲರ ಕಷ್ಟಗಳ ನಿವಾರಣೆ ಮಾಡಲಿ ಹಾಗೂ ಕಲವರ ಮನಸ್ಸುಗಳಲ್ಲಿರುವ ಕಲ್ಮಶಗಳನ್ನು ತೊಳೆದು ಹಾಕಲಿ ಎಂದು ಆಶಿಸಿದರು ಹಾಗೂ ದೇವಾಲಯದ ಶುಚಿತ್ವ ಕಾಪಾಡಿಕೊಂಡು ಮುನ್ನಡಿಸಿಕೊಂಡು ಹೋಗ ಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷರಾದ ಪಿಳ್ಳಪ್ಪ,ಸ್ಥಳೀಯ ನಿವಾಸಿಗಳಾದ ಜನಾರ್ದನ್, ಪರಿಷಿತ್,ನಿಕುನ್,ಚೌಧರಿ,ರಣವೀರ್, ರಂಚಿತ್,ಕೃಷ್ಣಾ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರುಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.3
- ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ! ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್! ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ! ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್!1
- ಪಕ್ಷದಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳು: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಗರ ನಿವಾಸದ ಬಳಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿಗಳಿವೆಯಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ಬುಧವಾರ ಈ ರೀತಿ ಪ್ರತಿಕ್ರಿಯಿಸಿದರು.1
- ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. ದೇವನಹಳ್ಳಿ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. 7 ಗಂಟೆಯ ವಿಮಾನದಲ್ಲಿ ಪ್ರಯಾಣ. AI2654 ವಿಮಾನದ ಮೂಲಕ ಪ್ರಯಾಣ. ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೀರಿನ ಸಮಸ್ತ ಕುರಿತು ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆಗೆ ದೆಹಲಿ ಪ್ರಯಾಣ. ಸಿಎಂ ಬೀಳ್ಕೊಡಲು ಏರ್ಪೋರ್ಟ್ ಗೆ ಆಗಮಿಸಿದ ಸಚಿವ ಈಶ್ವರ್ ಖಂಡ್ರೆ. ಬೀದರ್ ಶಾಸಕ ರಹೀಂಖಾನ್ ಸಿಎಂ ತೆರಳಿದ ನಂತರ ಬೆಂಗಳೂರಿನತ್ತ ಹೊರಡಲಿರುವ ಈಶ್ವರ್ ಖಂಡ್ರೆ ರಹಿಂಖಾನ್ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ1