logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದು: ಮೂರು ವರ್ಷಗಳ ಯಶಸ್ವಿ ಪಯಣ: ಸಚಿವ ಮಧು ಬಂಗಾರಪ್ಪ ಸಂವಿಧಾನದ ಮೌಲ್ಯಗಳೇ ಸದೃಢ ಪ್ರಜಾಪ್ರಭುತ್ವದ ಉಸಿರು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದು ಮೂರು ವರ್ಷಗಳ ಯಶಸ್ವಿ ಪಯಣ ಪೂರೈಸಿದೆ. ಪ್ರಜಾಪ್ರಭುತ್ವವೆಂದರೆ ಕೇವಲ ಮತದಾನ ಮಾಡುವ ಅಥವಾ ಸರ್ಕಾರ ರಚಿಸುವ ವ್ಯವಸ್ಥೆಯಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಸ್ವತಂತ್ರವಾಗಿ ಆಲೋಚಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹಾಗೂ ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಬದುಕುವ ಅವಕಾಶವನ್ನು ಖಾತರಿಪಡಿಸುವ ಜೀವನ ವಿಧಾನವಾಗಿದೆ. ನಮ್ಮ ಸಂವಿಧಾನವೇ ಈ ಪ್ರಜಾಪ್ರಭುತ್ವದ ಮೂಲ ಆಧಾರ ಎಂದಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳು ಜನರ ಬದುಕಿನಲ್ಲಿ ಬೇರೂರಬೇಕಾದರೆ ಅವುಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯಿಸುವುದು ಅತ್ಯಂತ ಅಗತ್ಯ. ಈ ಆಶಯದೊಂದಿಗೆ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರತಿದಿನ ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವನಾಗಿ ನಾನು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದುವ ಕಾರ್ಯಕ್ರಮವನ್ನು ರೂಪಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ಅನುಷ್ಠಾನಗೊಳಿಸಿರುವುದು ನನಗೆ ಹೆಮ್ಮೆಯ ಸಂಗತಿ. 2023ರ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಈ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಇಂದು ಈ ಕಾರ್ಯಕ್ರಮ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ ಎಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾದ ಇಂದು ನಿಮ್ಮೆಲ್ಲರಿಗೂ ತಿಳಿಸಲು ಹೆಮ್ಮೆ ಎನಿಸುತ್ತದೆ. ಪ್ರತಿದಿನ ಶಾಲಾ-ಕಾಲೇಜುಗಳ ಅಂಗಳದಲ್ಲಿ ಸಂವಿಧಾನದ ಪೀಠಿಕೆ ಮೊಳಗುವುದರ ಮೂಲಕ ನಮ್ಮ ಮಕ್ಕಳ ಮನಸ್ಸಿನಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಗಟ್ಟಿಯಾಗುತ್ತಿವೆ. ಇದು ಕೇವಲ ಪೀಠಿಕೆಯನ್ನು ಓದುವ ಕಾರ್ಯಕ್ರಮವಲ್ಲ; ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಯ ಬದುಕಿನ ಭಾಗವಾಗಿಸುವ ಪ್ರಯತ್ನವಾಗಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ತರಗತಿಗಳಲ್ಲಿ ಮಕ್ಕಳಲ್ಲಿ ಮೂಡುವ ಪ್ರಶ್ನೆಗಳು, ವೈಚಾರಿಕ ಚಿಂತನೆ, ಚರ್ಚೆಗಳು ಹಾಗೂ ಸಾಮಾಜಿಕ ಜಾಗೃತಿಯೇ ನಾಳಿನ ಪ್ರಬುದ್ಧ ಸಮಾಜದ ಬುನಾದಿ. ಶಿಕ್ಷಣವು ಕೇವಲ ಅಂಕಗಳು ಮತ್ತು ಉದ್ಯೋಗಕ್ಕಾಗಿ ಮಾತ್ರವಲ್ಲ; ಉತ್ತಮ ನಾಗರಿಕರನ್ನು ರೂಪಿಸುವ ಶಕ್ತಿಯೂ ಆಗಬೇಕು. ನಮ್ಮ ಶಾಲಾ ಅಂಗಳಗಳಿಂದಲೇ ಸಂವಿಧಾನ ಬದ್ಧ ಮೌಲ್ಯಗಳನ್ನು ಬಿತ್ತುವ ಮೂಲಕ ಸ್ವತಂತ್ರವಾಗಿ ಚಿಂತಿಸುವ, ಸಮಾನತೆಯನ್ನು ಗೌರವಿಸುವ, ವೈವಿಧ್ಯತೆಯಲ್ಲಿ ಏಕತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಪೀಳಿಗೆಯನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ನಮ್ಮ ಸಂವಿಧಾನದ ಆಶಯಗಳನ್ನು ಗೌರವಿಸುವ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಎಲ್ಲರಿಗೂ ಸಮಾನ ಅವಕಾಶವಿರುವ ಸಮಾಜ ನಿರ್ಮಾಣಕ್ಕೆ ಮತ್ತಷ್ಟು ಬದ್ಧರಾಗೋಣ. ಸಂವಿಧಾನ ನಮ್ಮ ಹೆಮ್ಮೆ. ಪ್ರಜಾಪ್ರಭುತ್ವ ನಮ್ಮ ಶಕ್ತಿ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ನಮ್ಮ ದಾರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಡಿನ ಸಮಸ್ತ ಜನತೆಗೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಹಾರ್ದಿಕ ಶುಭಾಶಯಗಳು.

5 hrs ago
user_SANDEEP U. L
SANDEEP U. L
Courier service ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
5 hrs ago
2fc817d8-4bfd-4088-a371-0cbc329b8db8

ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದು: ಮೂರು ವರ್ಷಗಳ ಯಶಸ್ವಿ ಪಯಣ: ಸಚಿವ ಮಧು ಬಂಗಾರಪ್ಪ ಸಂವಿಧಾನದ ಮೌಲ್ಯಗಳೇ ಸದೃಢ ಪ್ರಜಾಪ್ರಭುತ್ವದ ಉಸಿರು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದು ಮೂರು ವರ್ಷಗಳ ಯಶಸ್ವಿ ಪಯಣ ಪೂರೈಸಿದೆ. ಪ್ರಜಾಪ್ರಭುತ್ವವೆಂದರೆ ಕೇವಲ ಮತದಾನ ಮಾಡುವ ಅಥವಾ ಸರ್ಕಾರ ರಚಿಸುವ ವ್ಯವಸ್ಥೆಯಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಸ್ವತಂತ್ರವಾಗಿ ಆಲೋಚಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹಾಗೂ ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಬದುಕುವ ಅವಕಾಶವನ್ನು ಖಾತರಿಪಡಿಸುವ ಜೀವನ ವಿಧಾನವಾಗಿದೆ. ನಮ್ಮ ಸಂವಿಧಾನವೇ ಈ ಪ್ರಜಾಪ್ರಭುತ್ವದ ಮೂಲ ಆಧಾರ ಎಂದಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳು ಜನರ ಬದುಕಿನಲ್ಲಿ ಬೇರೂರಬೇಕಾದರೆ ಅವುಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯಿಸುವುದು ಅತ್ಯಂತ ಅಗತ್ಯ. ಈ ಆಶಯದೊಂದಿಗೆ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರತಿದಿನ ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವನಾಗಿ ನಾನು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದುವ ಕಾರ್ಯಕ್ರಮವನ್ನು ರೂಪಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ಅನುಷ್ಠಾನಗೊಳಿಸಿರುವುದು ನನಗೆ ಹೆಮ್ಮೆಯ ಸಂಗತಿ. 2023ರ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಈ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಇಂದು ಈ ಕಾರ್ಯಕ್ರಮ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ ಎಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾದ ಇಂದು ನಿಮ್ಮೆಲ್ಲರಿಗೂ ತಿಳಿಸಲು ಹೆಮ್ಮೆ ಎನಿಸುತ್ತದೆ. ಪ್ರತಿದಿನ ಶಾಲಾ-ಕಾಲೇಜುಗಳ ಅಂಗಳದಲ್ಲಿ ಸಂವಿಧಾನದ ಪೀಠಿಕೆ ಮೊಳಗುವುದರ ಮೂಲಕ ನಮ್ಮ ಮಕ್ಕಳ ಮನಸ್ಸಿನಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಗಟ್ಟಿಯಾಗುತ್ತಿವೆ. ಇದು ಕೇವಲ ಪೀಠಿಕೆಯನ್ನು ಓದುವ ಕಾರ್ಯಕ್ರಮವಲ್ಲ; ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಯ ಬದುಕಿನ ಭಾಗವಾಗಿಸುವ ಪ್ರಯತ್ನವಾಗಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ತರಗತಿಗಳಲ್ಲಿ ಮಕ್ಕಳಲ್ಲಿ ಮೂಡುವ ಪ್ರಶ್ನೆಗಳು, ವೈಚಾರಿಕ ಚಿಂತನೆ, ಚರ್ಚೆಗಳು ಹಾಗೂ ಸಾಮಾಜಿಕ ಜಾಗೃತಿಯೇ ನಾಳಿನ ಪ್ರಬುದ್ಧ ಸಮಾಜದ ಬುನಾದಿ. ಶಿಕ್ಷಣವು ಕೇವಲ ಅಂಕಗಳು ಮತ್ತು ಉದ್ಯೋಗಕ್ಕಾಗಿ ಮಾತ್ರವಲ್ಲ; ಉತ್ತಮ ನಾಗರಿಕರನ್ನು ರೂಪಿಸುವ ಶಕ್ತಿಯೂ ಆಗಬೇಕು. ನಮ್ಮ ಶಾಲಾ ಅಂಗಳಗಳಿಂದಲೇ ಸಂವಿಧಾನ ಬದ್ಧ ಮೌಲ್ಯಗಳನ್ನು ಬಿತ್ತುವ ಮೂಲಕ ಸ್ವತಂತ್ರವಾಗಿ ಚಿಂತಿಸುವ, ಸಮಾನತೆಯನ್ನು ಗೌರವಿಸುವ, ವೈವಿಧ್ಯತೆಯಲ್ಲಿ ಏಕತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಪೀಳಿಗೆಯನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ನಮ್ಮ ಸಂವಿಧಾನದ ಆಶಯಗಳನ್ನು ಗೌರವಿಸುವ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಎಲ್ಲರಿಗೂ ಸಮಾನ ಅವಕಾಶವಿರುವ ಸಮಾಜ ನಿರ್ಮಾಣಕ್ಕೆ ಮತ್ತಷ್ಟು ಬದ್ಧರಾಗೋಣ. ಸಂವಿಧಾನ ನಮ್ಮ ಹೆಮ್ಮೆ. ಪ್ರಜಾಪ್ರಭುತ್ವ ನಮ್ಮ ಶಕ್ತಿ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ನಮ್ಮ ದಾರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಡಿನ ಸಮಸ್ತ ಜನತೆಗೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಹಾರ್ದಿಕ ಶುಭಾಶಯಗಳು.

More news from ಕರ್ನಾಟಕ and nearby areas
  • ಶಿವಮೊಗ್ಗ-ಭದ್ರಾ ನದಿಯ ನೀರು ಎಡ, ಬಲ ಹಾಗೂ ಗೋಂದಿ ನಾಲೆ ಹರಿಸಲು ಬದ್ದ ಶಿವಮೊಗ್ಗ: ಭದ್ರಾ ಎಡನಾಲೆ ಮತ್ತು ಬಲನಾಲೆ ಮತ್ತು ಗೋಂದಿ ನಾಲೆ ನೀರನ್ನು ಆದಷ್ಟು ಬೇಗನೆ ಡ್ಯಾಮ್ ನಿಂದ ನೀರನ್ನು ಬಿಡಲಾಗುವುದು ಈ ವಿಚಾರವಾಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು ರೈತರು ಆತಂಕ ಪಡುವುದು ಬೇಡ ಎಂದು ಭದ್ರಾವತಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದ್ದಾರೆ. ಅವರಿಂದು ತಮ್ಮ ಗೃಹಕಚೇರಿಯಲ್ಲಿ ನೆರೆದಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು. ಕುಡಿಯುವ ಹಾಗೂ ದನಕರುಗಳಿಗೆ ನೀರು ಅವಶ್ಯಕತೆ ಇದೆ ಎಂಬ ವಿಚಾರ ನನಗೂ ತಿಳಿದಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡವೆಂದು ತಿಳಿಯಪಡಿಸುತ್ತೇನೆ. ಈ ವಿಚಾರವಾಗಿ ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆಂದರು.
    1
    ಶಿವಮೊಗ್ಗ-ಭದ್ರಾ ನದಿಯ ನೀರು ಎಡ, ಬಲ ಹಾಗೂ ಗೋಂದಿ ನಾಲೆ ಹರಿಸಲು ಬದ್ದ 
ಶಿವಮೊಗ್ಗ: ಭದ್ರಾ ಎಡನಾಲೆ ಮತ್ತು ಬಲನಾಲೆ ಮತ್ತು ಗೋಂದಿ ನಾಲೆ ನೀರನ್ನು ಆದಷ್ಟು ಬೇಗನೆ ಡ್ಯಾಮ್ ನಿಂದ ನೀರನ್ನು ಬಿಡಲಾಗುವುದು ಈ ವಿಚಾರವಾಗಿ  ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿದ್ದು ರೈತರು ಆತಂಕ ಪಡುವುದು ಬೇಡ  
ಎಂದು ಭದ್ರಾವತಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದ್ದಾರೆ.
ಅವರಿಂದು ತಮ್ಮ ಗೃಹಕಚೇರಿಯಲ್ಲಿ ನೆರೆದಿದ್ದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದರು.
ಕುಡಿಯುವ ಹಾಗೂ ದನಕರುಗಳಿಗೆ ನೀರು ಅವಶ್ಯಕತೆ ಇದೆ ಎಂಬ ವಿಚಾರ ನನಗೂ ತಿಳಿದಿದೆ. ಆದ್ದರಿಂದ ರೈತರು ಯಾವುದೇ ಆತಂಕಕ್ಕೆ  ಒಳಗಾಗುವುದು ಬೇಡವೆಂದು ತಿಳಿಯಪಡಿಸುತ್ತೇನೆ. ಈ ವಿಚಾರವಾಗಿ ಆದಷ್ಟು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆಂದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    2 hrs ago
  • ಶಿವಮೊಗ್ಗದಲ್ಲಿ ಐತಿಹಾಸಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಭಕ್ತರ ಸಂಭ್ರಮದ ನಡುವೆ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ
    1
    ಶಿವಮೊಗ್ಗದಲ್ಲಿ ಐತಿಹಾಸಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ
ಭಕ್ತರ ಸಂಭ್ರಮದ ನಡುವೆ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    22 hrs ago
  • ಮುಖ್ಯಮಂತ್ರಿಗಳ ಬಂಗಾರದ ಪದಕ ಪುರಸ್ಕೃತ ವೀರ ಸೈನಿಕ ಶಬ್ಬೀರ್ ನಿಧನ ತರೀಕೆರೆ, ಸೆ.14: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೈನಿಕ, ಚಾಲಕ ಹಾಗೂ ಮೆಕಾನಿಕ್ ಆಗಿ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿಯೂ ಭಾಗವಹಿಸಿದ್ದ ವೀರ ಸೈನಿಕ ಶಬ್ಬೀರ್ ಅವರು ನಿಧನರಾದರು. ಶಬ್ಬೀರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಿಲಿಟರಿ ಶ್ರೀನಿವಾಸ್ ಅವರು, ದೇಶ ಸೇವೆ ಸಲ್ಲಿಸಿದ ವೀರ ಯೋಧನ ಅಗಲಿಕೆಯಿಂದ ಅಪಾರ ನೋವುಂಟಾಗಿದೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಹಾಗೂ ಅಲ್ಲಾಹ ಕರುಣಿಸಲಿ ಎಂದು ಹೇಳಿದರು. ಅವರು ಪಟ್ಟಣದಲ್ಲಿರುವ ಶಬ್ಬೀರ್ ಅವರ ಸ್ವಗೃಹಕ್ಕೆ ತೆರಳಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಶಬ್ಬೀರ್ ಅವರು ಭಾರತೀಯ ಸೇನೆಯಲ್ಲಿ ನಾಯಕ್ ಹುದ್ದೆಯವರೆಗೆ ಸೇವೆ ಸಲ್ಲಿಸಿದ್ದರು. 2026–27ನೇ ಸಾಲಿನ ಮುಖ್ಯಮಂತ್ರಿಗಳ ಬಂಗಾರದ ಪದಕ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದರು ಎಂದು ತಿಳಿಸಿದರು. ದೇಶ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಶಬ್ಬೀರ್ ಅವರು, ಖಾಜಿ ಬೀದಿಯಲ್ಲಿರುವ ತಮ್ಮ ಸ್ವಂತ ಮನೆಯನ್ನು ಸರ್ಕಾರದ ‘ನಮ್ಮ ಕ್ಲಿನಿಕ್’ ಆಸ್ಪತ್ರೆ ತೆರೆಯಲು ನೀಡಿದ್ದರು. ನಂತರ ತರೀಕೆರೆ ಅಗ್ನಿಶಾಮಕ ದಳದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಅವರ ನಿಧನದಿಂದ ದೇಶ ಸೇವೆ ಸಲ್ಲಿಸಿದ ವೀರ ಸೈನಿಕನೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ವಿಷಾದಿಸಿದರು. ಶಬ್ಬೀರ್ ಅವರು ಪತ್ನಿ ಜೈದಾ ಬಾನು, ಪುತ್ರ ಫಿದಾ ಮೊಹಮ್ಮದ್ ಹಾಗೂ ಪುತ್ರಿ ನೌಶಾಧಿಕಾ ಅವರನ್ನು ಅಗಲಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಕೆ.ವಿ., ಠಾಣಾಧಿಕಾರಿ ತಿಪ್ಪೇಸ್ವಾಮಿ ಆರ್., ಸಹಾಯಕ ಠಾಣಾಧಿಕಾರಿ ಡಿ.ಜಿ. ನಾಗೇಂದ್ರ ಹಾಗೂ ಅಗ್ನಿಶಾಮಕ ಸಿಬ್ಬಂದಿ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿ, ಸಂತಾಪ ಸೂಚಿಸಿದರು. ಮಾಜಿ ಸೈನಿಕರಾದ ಎಸ್.ಎಚ್. ಕುಮಾರ್, ದೇವೇಂದ್ರ, ಗೋವಿಂದಪ್ಪ, ಸೋಮಶೇಖರ್ ಸೇರಿದಂತೆ ಲಿಂಗದಹಳ್ಳಿ ಹಾಗೂ ಕಡೂರು ಭಾಗದ ಮಾಜಿ ಸೈನಿಕರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ವರದಿ: ಪ್ರದೀಪ್ ಹೆಚ್ ಈ. ತರೀಕೆರೆ
    4
    ಮುಖ್ಯಮಂತ್ರಿಗಳ ಬಂಗಾರದ ಪದಕ ಪುರಸ್ಕೃತ ವೀರ ಸೈನಿಕ ಶಬ್ಬೀರ್ ನಿಧನ

ತರೀಕೆರೆ, ಸೆ.14:

 ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೈನಿಕ, ಚಾಲಕ ಹಾಗೂ ಮೆಕಾನಿಕ್ ಆಗಿ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿಯೂ ಭಾಗವಹಿಸಿದ್ದ ವೀರ ಸೈನಿಕ ಶಬ್ಬೀರ್ ಅವರು ನಿಧನರಾದರು.

ಶಬ್ಬೀರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಿಲಿಟರಿ ಶ್ರೀನಿವಾಸ್ ಅವರು, ದೇಶ ಸೇವೆ ಸಲ್ಲಿಸಿದ ವೀರ ಯೋಧನ ಅಗಲಿಕೆಯಿಂದ ಅಪಾರ ನೋವುಂಟಾಗಿದೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಹಾಗೂ ಅಲ್ಲಾಹ ಕರುಣಿಸಲಿ ಎಂದು ಹೇಳಿದರು. ಅವರು ಪಟ್ಟಣದಲ್ಲಿರುವ ಶಬ್ಬೀರ್ ಅವರ ಸ್ವಗೃಹಕ್ಕೆ ತೆರಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಶಬ್ಬೀರ್ ಅವರು ಭಾರತೀಯ ಸೇನೆಯಲ್ಲಿ ನಾಯಕ್ ಹುದ್ದೆಯವರೆಗೆ ಸೇವೆ ಸಲ್ಲಿಸಿದ್ದರು. 2026–27ನೇ ಸಾಲಿನ ಮುಖ್ಯಮಂತ್ರಿಗಳ ಬಂಗಾರದ ಪದಕ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದರು ಎಂದು ತಿಳಿಸಿದರು.

ದೇಶ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಶಬ್ಬೀರ್ ಅವರು, ಖಾಜಿ ಬೀದಿಯಲ್ಲಿರುವ ತಮ್ಮ ಸ್ವಂತ ಮನೆಯನ್ನು ಸರ್ಕಾರದ ‘ನಮ್ಮ ಕ್ಲಿನಿಕ್’ ಆಸ್ಪತ್ರೆ ತೆರೆಯಲು ನೀಡಿದ್ದರು. ನಂತರ ತರೀಕೆರೆ ಅಗ್ನಿಶಾಮಕ ದಳದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಅವರ ನಿಧನದಿಂದ ದೇಶ ಸೇವೆ ಸಲ್ಲಿಸಿದ ವೀರ ಸೈನಿಕನೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ವಿಷಾದಿಸಿದರು.

ಶಬ್ಬೀರ್ ಅವರು ಪತ್ನಿ ಜೈದಾ ಬಾನು, ಪುತ್ರ ಫಿದಾ ಮೊಹಮ್ಮದ್ ಹಾಗೂ ಪುತ್ರಿ ನೌಶಾಧಿಕಾ ಅವರನ್ನು ಅಗಲಿದ್ದಾರೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಕೆ.ವಿ., ಠಾಣಾಧಿಕಾರಿ ತಿಪ್ಪೇಸ್ವಾಮಿ ಆರ್., ಸಹಾಯಕ ಠಾಣಾಧಿಕಾರಿ ಡಿ.ಜಿ. ನಾಗೇಂದ್ರ ಹಾಗೂ ಅಗ್ನಿಶಾಮಕ ಸಿಬ್ಬಂದಿ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿ, ಸಂತಾಪ ಸೂಚಿಸಿದರು.

ಮಾಜಿ ಸೈನಿಕರಾದ ಎಸ್.ಎಚ್. ಕುಮಾರ್, ದೇವೇಂದ್ರ, ಗೋವಿಂದಪ್ಪ, ಸೋಮಶೇಖರ್ ಸೇರಿದಂತೆ ಲಿಂಗದಹಳ್ಳಿ ಹಾಗೂ ಕಡೂರು ಭಾಗದ ಮಾಜಿ ಸೈನಿಕರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ವರದಿ: ಪ್ರದೀಪ್ ಹೆಚ್ ಈ. ತರೀಕೆರೆ
    user_ಪ್ರದೀಪ್ ಹೆಚ್ ಈ. ತರೀಕೆರೆ
    ಪ್ರದೀಪ್ ಹೆಚ್ ಈ. ತರೀಕೆರೆ
    ತರೀಕೆರೆ, ಚಿಕ್ಕಮಗಳೂರು, ಕರ್ನಾಟಕ•
    22 hrs ago
  • ಗೌರಸಮುದ್ರ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಟಿ .ರಘುಮೂರ್ತಿ ಚಳ್ಳಕೆರೆ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜನರನ್ನು ಒಂದೆಡೆ ಬೆಸೆಯುವ ಜಾತ್ರೆ ಎಂಬ ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಇಂದು ಸಡಗರ ಸಂಭ್ರಮದಿಂದ ಜರುಗಿತು. ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ಇಲ್ಲಿ ದೇವಿಯ ದೊಡ್ಡ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ.ದೇವಿಯ ಮೂಲ ಆಂಧ್ರಪ್ರದೇಶದ ನಿಡಗಲ್ಲು ಆಗಿರುವ ಕಾರಣ ರಾಜ್ಯ ಮತ್ತು ಆಂಧ್ರದ ಸಾವಿರಾರು ಭಕ್ತರು ಜಂಟಿಯಾಗಿ ಜಾತ್ರೆಯಲ್ಲಿ ಭಾಗಿಯಾಗಿ ತಾಯಿ ಮಾರಮ್ಮಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಕನ್ನಡ, ತೆಲುಗು ಭಾಷೆಗಳ ಜುಗಲ್‌ ಬಂದಿಯನ್ನು ಜಾತ್ರೆಯಲ್ಲಿ ನಾವು ಕಾಣಬಹುದಾಗಿದಿ 15 ದಿನ ಮುಂಚಿತವಾಗಿ ದೇವಿಯ ಒಪ್ಪಿಗೆ ಪಡೆದು ಜಾತ್ರೆಗೆ ಚಾಲನೆ ನೀಡಲಾಗುತ್ತಿ. ಅನುಮತಿ ಕೋರುವ ದಿನ ಊರಿನಲ್ಲಿ ಸಾರು ಚೆಲ್ಲಲಾಗುತ್ತು ಇದಾದ ನಂತರ ಜಾತ್ರೆ ತನಕ ಗ್ರಾಮಸ್ಥರು ಸ್ನಾನ, ಅಡುಗೆ, ಉಡುಗೆ ತೊಡಿಗೆ ವಿಚಾರದಲ್ಲಿ ಹಲವು ಕಟ್ಟುಪಾಡುಗಳನ್ನು ಕಡ್ಡಾಯಪಾಲಿಸಿಕೊಂಡು ಬಂದಿದ್ದರು.. ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ದೊಡ್ಡ ಜಾತ್ರೆಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತುಂಬಲಿನ ಪ್ರದೇಶಕ್ಕೆ ವಾದ್ಯಗಳೊಂದಿಗೆ ದೇವಿಯಆಭರಣ, ವಸ್ತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ವಾದ್ಯಗಳೊಂದಿಗೆ ತುಂಬಲಿಗೆ ದೇವಿಯನ್ನು ಕರೆತರಲಾಯಿತು . ಮಾರಮ್ಮ ದೇವಿ ತುಮುಲಗಿ ಬರುವ ದೃಶ್ಯವನ್ನು ನೋಡುವುದು ಜಾತ್ರೆಯ ಪ್ರಮುಖ ಘಟ್ಟ. ದೇವಿ ತುಮುಲು ತುಂಬಿಲಿನ ಲ್ಲಿ ಜಾತ್ರೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಂತೆ ಭಕ್ತರು ಬೆಳೆದಂತಹ ಈರುಳ್ಳಿ ಕೋಳಿ ಕುರಿಮರಿ ಸೂರಮೆಣಸು ತಾಯಿಯ ಮೇಲೆ ತೂರುವುದು ಮೂಲಕ ತಮ್ಮ ಹರಕೆಯನ್ನಿ ತೀರಿಸಿದರು. ಮಾರಿದೇವತೆಯ ತವರ ಮನೆ ಎಂದು ಕರೆಯಲಾಗುವ ನೀಡಗಲ್ಲಿನಿಂದ ತಂದ ಮೀಸಲು ಹಸಿ ಹಾಲು, ಬೆಳ್ಳಿ ಕಣ್ಣು ಹಾಗೂ ಕೋರೆ ಮಿಸ್ಸೆಯನ್ನು ದೇವಿಗೆ ಭಕ್ತಿಯಿಂದ ಅರ್ಪಿಸಲಾಯಿತು . ನಂತರ ತುಂಬಲಿನ ಮುಂದೆ ಇರುವ ಬೊಮ್ಮಲಿಂಗ ದೇವರ ದೀಪದ ಕಂಬದ ಮೇಲೆ ಏರಿ ದೀಪ ಹಚ್ಚಿದ ಕಷ್ಟ ಕಾರ್ಪಣ್ಯಗಳು ದೂರವಾಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಹಾಗೂ ಜಾನುವಾರುಗಳಿಗೆ ಯಾವುದೇ ರೋಗರುಚಿನ ಬಾರ್ದಿರಲಿ ಎಂದು ಪ್ರಾರ್ಥಿಸಿದರು ಲಕ್ಷಾಂತರ ಭಕ್ತರು ದೇವಿಯ ದರ್ಶನವನ್ನು ಪಡೆದರು. ದೇವಿಯ ದರ್ಶನಕ್ಕೆ ಬಂದಂತಹ ಲಕ್ಷಾಂತರ ಭಕ್ತರ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ತಾಲೂಕು ಆಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರು ದೇವಯ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.. ಜಾತ್ರೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ ರಘುಮೂರ್ತಿ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ಜಿಲ್ಲಾಧಿಕಾರಿ ರಮ್ಯ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡವರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು. ತಕ್ಷಣವೇ ತುಮಲು ಪ್ರದೇಶ ಬಿಟ್ಟು ಖಾಲಿ ಖಾಲಿ ಮಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾದರು..
    2
    ಗೌರಸಮುದ್ರ ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಟಿ .ರಘುಮೂರ್ತಿ
ಚಳ್ಳಕೆರೆ  ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜನರನ್ನು ಒಂದೆಡೆ ಬೆಸೆಯುವ ಜಾತ್ರೆ ಎಂಬ ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ  ಜಾತ್ರೆ ಇಂದು ಸಡಗರ ಸಂಭ್ರಮದಿಂದ ಜರುಗಿತು.
ಪ್ರತಿವರ್ಷ ಶ್ರಾವಣಮಾಸ ಆರಂಭದ ಪ್ರಥಮ ಮಂಗಳವಾರ ಇಲ್ಲಿ ದೇವಿಯ ದೊಡ್ಡ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ.ದೇವಿಯ ಮೂಲ ಆಂಧ್ರಪ್ರದೇಶದ ನಿಡಗಲ್ಲು ಆಗಿರುವ ಕಾರಣ ರಾಜ್ಯ ಮತ್ತು ಆಂಧ್ರದ ಸಾವಿರಾರು ಭಕ್ತರು ಜಂಟಿಯಾಗಿ ಜಾತ್ರೆಯಲ್ಲಿ ಭಾಗಿಯಾಗಿ ತಾಯಿ ಮಾರಮ್ಮಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಕನ್ನಡ, ತೆಲುಗು ಭಾಷೆಗಳ ಜುಗಲ್‌ ಬಂದಿಯನ್ನು ಜಾತ್ರೆಯಲ್ಲಿ ನಾವು ಕಾಣಬಹುದಾಗಿದಿ
15 ದಿನ ಮುಂಚಿತವಾಗಿ ದೇವಿಯ ಒಪ್ಪಿಗೆ ಪಡೆದು ಜಾತ್ರೆಗೆ ಚಾಲನೆ ನೀಡಲಾಗುತ್ತಿ. ಅನುಮತಿ ಕೋರುವ ದಿನ ಊರಿನಲ್ಲಿ ಸಾರು ಚೆಲ್ಲಲಾಗುತ್ತು ಇದಾದ ನಂತರ ಜಾತ್ರೆ ತನಕ ಗ್ರಾಮಸ್ಥರು ಸ್ನಾನ, ಅಡುಗೆ, ಉಡುಗೆ ತೊಡಿಗೆ ವಿಚಾರದಲ್ಲಿ ಹಲವು ಕಟ್ಟುಪಾಡುಗಳನ್ನು ಕಡ್ಡಾಯಪಾಲಿಸಿಕೊಂಡು ಬಂದಿದ್ದರು..
ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ದೊಡ್ಡ ಜಾತ್ರೆಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ  ತುಂಬಲಿನ ಪ್ರದೇಶಕ್ಕೆ ವಾದ್ಯಗಳೊಂದಿಗೆ  ದೇವಿಯಆಭರಣ, ವಸ್ತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ವಾದ್ಯಗಳೊಂದಿಗೆ  ತುಂಬಲಿಗೆ ದೇವಿಯನ್ನು ಕರೆತರಲಾಯಿತು . ಮಾರಮ್ಮ ದೇವಿ ತುಮುಲಗಿ ಬರುವ ದೃಶ್ಯವನ್ನು ನೋಡುವುದು ಜಾತ್ರೆಯ ಪ್ರಮುಖ ಘಟ್ಟ. ದೇವಿ ತುಮುಲು ತುಂಬಿಲಿನ ಲ್ಲಿ ಜಾತ್ರೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಂತೆ ಭಕ್ತರು ಬೆಳೆದಂತಹ ಈರುಳ್ಳಿ ಕೋಳಿ ಕುರಿಮರಿ ಸೂರಮೆಣಸು  ತಾಯಿಯ ಮೇಲೆ ತೂರುವುದು ಮೂಲಕ ತಮ್ಮ ಹರಕೆಯನ್ನಿ ತೀರಿಸಿದರು.
ಮಾರಿದೇವತೆಯ ತವರ ಮನೆ ಎಂದು ಕರೆಯಲಾಗುವ ನೀಡಗಲ್ಲಿನಿಂದ ತಂದ  ಮೀಸಲು ಹಸಿ ಹಾಲು, ಬೆಳ್ಳಿ ಕಣ್ಣು ಹಾಗೂ ಕೋರೆ ಮಿಸ್ಸೆಯನ್ನು ದೇವಿಗೆ ಭಕ್ತಿಯಿಂದ ಅರ್ಪಿಸಲಾಯಿತು
.
ನಂತರ ತುಂಬಲಿನ ಮುಂದೆ ಇರುವ ಬೊಮ್ಮಲಿಂಗ ದೇವರ ದೀಪದ ಕಂಬದ ಮೇಲೆ ಏರಿ ದೀಪ ಹಚ್ಚಿದ ಕಷ್ಟ ಕಾರ್ಪಣ್ಯಗಳು ದೂರವಾಗಲಿ, ಮಳೆ ಬೆಳೆ ಚೆನ್ನಾಗಿ ಬರಲಿ ಹಾಗೂ ಜಾನುವಾರುಗಳಿಗೆ ಯಾವುದೇ ರೋಗರುಚಿನ ಬಾರ್ದಿರಲಿ ಎಂದು ಪ್ರಾರ್ಥಿಸಿದರು ಲಕ್ಷಾಂತರ ಭಕ್ತರು ದೇವಿಯ ದರ್ಶನವನ್ನು ಪಡೆದರು.
ದೇವಿಯ ದರ್ಶನಕ್ಕೆ ಬಂದಂತಹ ಲಕ್ಷಾಂತರ ಭಕ್ತರ ಯಾವುದೇ ತೊಂದರೆ ಆಗದಂತೆ ಪೊಲೀಸ್ ಇಲಾಖೆ ತಾಲೂಕು ಆಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರು ದೇವಯ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.. ಜಾತ್ರೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ ರಘುಮೂರ್ತಿ ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ಜಿಲ್ಲಾಧಿಕಾರಿ ರಮ್ಯ ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡವರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು.
ತಕ್ಷಣವೇ ತುಮಲು ಪ್ರದೇಶ ಬಿಟ್ಟು ಖಾಲಿ ಖಾಲಿ ಮಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾದರು..
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    14 min ago
  • ಗೋನೂರಿನಲ್ಲಿ ಗಂಗಾಪೂಜೆ: ಭದ್ರೆಯನ್ನು ಸ್ವಾಗತಿಸಿದ ಹೋರಾಟಗಾರರು" 🚩 #ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಭದ್ರಾಮೇಲ್ದಂಡೆ #ಸಮಗ್ರನೀರಾವರಿ #ಬರಡುನೆಲಹಸಿರು #ಕೋದಂಡರಾಮಯ್ಯ #ಎಂಜಯಣ್ಣ #ಮುರುಘರಾಜೇಂದ್ರಒಡೆಯರ್ #ಚಿತ್ರದುರ್ಗಜಿಲ್ಲೆ #ಮೊಳಕಾಲ್ಮೂರು #ಚಳ್ಳಕೆರೆ #ಈಚಘಟ್ಟ #ಬೇಡರರೆಡ್ಡಿಹಳ್ಳಿ #ಕಬೀರಾನಂದಮಠ #ಗೋನೂರುಭದ್ರಾ #ನೀರಾವರಿ #ರೈತಹೋರಾಟ #ಕೆರೆಕಟ್ಟೆ #ಅಣೆಕಟ್ಟು #ನೀರುಸ್ವಾಗತ #ಎರಡನೇಹಂತದಹೋರಾಟ #ಅರ್ಧಗೆಲುವು #ದಶಕಗಳಕನಸು #ರೋಮಾಂಚನದಕ್ಷ #ಪಿಕೋದಂಡರಾಮಯ್ಯ #ಬೇಡರರೆಡ್ಡಿಹಳ್ಳಿಬಸವರೆಡ್ಡಿ #ಕೆಎಸ್ನವೀನ್ #ಚಳ್ಳಕೆರೆಬಸವರಾಜ್ #ನರೇನಹಳ್ಳಿಅರುಣಕುಮಾರ್ #ಜೋಗಿಮಟ್ಟಿಮಹೇಶ್ಬಾಬು #ಗೌನಹಳ್ಳಿಗೋವಿಂದಪ್ಪ #ಶಿವಾಲಿಂಗಾನಂದಸ್ವಾಮೀಜಿ #ಹೋರಾಟಗಾರರಿಗೆನಮನ #ನೀರಿಗಾಗಿಬದುಕು #ಬರಡುನೆಲಕ್ಕೆಜೀವ #ಹಸಿರುಕ್ರಾಂತಿ #ನ್ಯಾಯಕ್ಕಾಗಿಹೋರಾಟ #ಸಂಕಲ್ಪ #BhadraWater #Chitradurga #IrrigationStruggle #Karnataka #BhadraUpperBank #WaterForAll #FarmersFight #GangaPooja #Gonuru #Molakalmuru #SaveFarmers #WaterRevolution #ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಬರಡುನೆಲಹಸಿರು #ಕೋದಂಡರಾಮಯ್ಯ #ಎರಡನೇಹಂತದಹೋರಾಟ #BhadraWater #Chitradurga #Karnataka #IrrigationStruggle
    1
    ಗೋನೂರಿನಲ್ಲಿ ಗಂಗಾಪೂಜೆ: ಭದ್ರೆಯನ್ನು ಸ್ವಾಗತಿಸಿದ ಹೋರಾಟಗಾರರು" 🚩
#ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಭದ್ರಾಮೇಲ್ದಂಡೆ #ಸಮಗ್ರನೀರಾವರಿ #ಬರಡುನೆಲಹಸಿರು #ಕೋದಂಡರಾಮಯ್ಯ #ಎಂಜಯಣ್ಣ #ಮುರುಘರಾಜೇಂದ್ರಒಡೆಯರ್
#ಚಿತ್ರದುರ್ಗಜಿಲ್ಲೆ #ಮೊಳಕಾಲ್ಮೂರು #ಚಳ್ಳಕೆರೆ #ಈಚಘಟ್ಟ #ಬೇಡರರೆಡ್ಡಿಹಳ್ಳಿ #ಕಬೀರಾನಂದಮಠ #ಗೋನೂರುಭದ್ರಾ
#ನೀರಾವರಿ #ರೈತಹೋರಾಟ #ಕೆರೆಕಟ್ಟೆ #ಅಣೆಕಟ್ಟು #ನೀರುಸ್ವಾಗತ #ಎರಡನೇಹಂತದಹೋರಾಟ #ಅರ್ಧಗೆಲುವು #ದಶಕಗಳಕನಸು #ರೋಮಾಂಚನದಕ್ಷ
#ಪಿಕೋದಂಡರಾಮಯ್ಯ #ಬೇಡರರೆಡ್ಡಿಹಳ್ಳಿಬಸವರೆಡ್ಡಿ #ಕೆಎಸ್ನವೀನ್ #ಚಳ್ಳಕೆರೆಬಸವರಾಜ್ #ನರೇನಹಳ್ಳಿಅರುಣಕುಮಾರ್ #ಜೋಗಿಮಟ್ಟಿಮಹೇಶ್ಬಾಬು #ಗೌನಹಳ್ಳಿಗೋವಿಂದಪ್ಪ #ಶಿವಾಲಿಂಗಾನಂದಸ್ವಾಮೀಜಿ
#ಹೋರಾಟಗಾರರಿಗೆನಮನ #ನೀರಿಗಾಗಿಬದುಕು #ಬರಡುನೆಲಕ್ಕೆಜೀವ #ಹಸಿರುಕ್ರಾಂತಿ #ನ್ಯಾಯಕ್ಕಾಗಿಹೋರಾಟ #ಸಂಕಲ್ಪ
#BhadraWater #Chitradurga #IrrigationStruggle #Karnataka #BhadraUpperBank #WaterForAll #FarmersFight #GangaPooja #Gonuru #Molakalmuru #SaveFarmers #WaterRevolution
#ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಬರಡುನೆಲಹಸಿರು #ಕೋದಂಡರಾಮಯ್ಯ #ಎರಡನೇಹಂತದಹೋರಾಟ #BhadraWater #Chitradurga #Karnataka #IrrigationStruggle
    user_Ctownnews16
    Ctownnews16
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಟ್ರಸ್ಟ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮ... ಹಿರಿಯೂರಿನ ಶ್ರೀ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ ) ವತಿಯಿಂದ ಸಾದ್ವಿ ನೃತ್ಯ ಶಾಲೆಯವರು ಭರತ ನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.. ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು.. ಕಾರ್ಯಕ್ರಮವನ್ನು ರೂಪ ಶಿಕ್ಷಕಿಯವರು ನಡೆಸಿಕೊಟ್ಟರು
    2
    ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಟ್ರಸ್ಟ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮ...
ಹಿರಿಯೂರಿನ ಶ್ರೀ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ ) ವತಿಯಿಂದ ಸಾದ್ವಿ ನೃತ್ಯ ಶಾಲೆಯವರು ಭರತ ನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.. ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು..
ಕಾರ್ಯಕ್ರಮವನ್ನು ರೂಪ ಶಿಕ್ಷಕಿಯವರು ನಡೆಸಿಕೊಟ್ಟರು
    user_ಅಪ್ಪಾಜಿ ಬಂಡೆ
    ಅಪ್ಪಾಜಿ ಬಂಡೆ
    Yoga instructor ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    23 hrs ago
  • ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ. ಶಿಗ್ಗಾಂವಿ. ರೈತಪರ ಒಕ್ಕೂಟ ಹಾಗೂ ಕನ್ನಡ ಪರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯನ್ನು ದಿನಾಂಕ್ 16. 9. 2026. ಬುಧವಾರ ರಂದು, ಪೋಸ್ಟ್ ಆಫೀಸ್ ನಿಂದ ಕಿತ್ತೂರು ರಾಣಿ ಚೆನ್ನಮ್ಮರ ಸರ್ಕಲ್ ವರೆಗೂ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಮ್ಮ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಸಲಿಂಗಪ್ಪ ನರಗುಂದ ಮನವಿ ಮಾಡಿದರು.
    2
    ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ.
ಶಿಗ್ಗಾಂವಿ. ರೈತಪರ ಒಕ್ಕೂಟ ಹಾಗೂ ಕನ್ನಡ ಪರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯನ್ನು ದಿನಾಂಕ್ 16. 9. 2026. ಬುಧವಾರ ರಂದು, ಪೋಸ್ಟ್ ಆಫೀಸ್ ನಿಂದ ಕಿತ್ತೂರು ರಾಣಿ ಚೆನ್ನಮ್ಮರ ಸರ್ಕಲ್ ವರೆಗೂ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಮ್ಮ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಸಲಿಂಗಪ್ಪ ನರಗುಂದ ಮನವಿ ಮಾಡಿದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    3 hrs ago
  • ಶಿವಮೊಗ್ಗ-ವಂದೇ ಮಾತರಂ ಗೀತೆ ಎರಡೇ ಚರಣ: ಕಾರ್ಯಕ್ರಮ ದಿಂದ ಹೊರನಡೆದ ಶಾಸಕ ಶಿವಮೊಗ್ಗ: ವಂದೇ ಮಾತರಂ ಗೀತೆಯಲ್ಲಿ ಕೇವಲ ಎರಡು ಚರಣವನ್ನು ಹಾಡಿದ್ದಕ್ಕೆ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯ ಕ್ರಮದಿಂದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೊರ ನಡೆದಿರುವ ಘಟನೆ ನಡೆದಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳ ವಾರ ಅಂತಾರಾಷ್ಟ್ರೀಯ ಪ್ರಜಾ‌ಪ್ರಭುತ್ವ ದಿನದ ಕಾರ್ಯಕ್ರಮವನ್ನು‌ ಜಿಲ್ಲಾಡಳಿತ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಬಸಪ್ಪ ಕಾರ್ಯಕ್ರಮ ದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಿದ್ದಕ್ಕೆ ವೇದಿಕೆಯಲ್ಲಿಯೇ ಅಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಅವರು ಇದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣ ಹಾಡಿ ಅಪಮಾನ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ‌ ಕಾರ್ಯಕ್ರಮದಲ್ಲಿ ಎರಡು ಚರಣ ಹಾಡಬೇಕೆಂದು ಎಲ್ಲಿ ಇದೆ, ಆದೇಶ ತೋರಿಸಿ ಎಂದು ಆಗ್ರಹಿಸಿದರು. ಜಿಲ್ಲಾ‌ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ‌ ಮಲ್ಲೇಶಪ್ಪ ರಾಜ್ಯ ಸರ್ಕಾರದ ಆದೇಶವನ್ನು ತೋರಿಸಿದರು. ಇದಕ್ಕೆ ಗರಂ ಆದ ಶಾಸಕರು ಹಾಗಾದ್ರೆ ಕೇಂದ್ರ ಸರ್ಕಾರದ ಆದೇಶವನ್ನು‌ ಮೊಟಕುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ವೇದಿಕೆಯಲ್ಲಿ ನಾನು ಇರಲ್ಲ ಎಂದು ಭವನದಿಂದ ಹೊರ ನಡೆದರು. ನಂತರ ತಮ್ಮ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೇರಿ ಒಂದು ಕಾನೂನು ಮಾಡುತ್ತದೆ. ಆದರೆ ರಾಜ್ಯ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಇರುವ ಕಾರ್ಯಕ್ರಮ ದಲ್ಲಿ ಮಾತ್ರ ಪೂರ್ಣ ಗೀತೆ ಹಾಡಬೇಕು, ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಕೇವಲ ಎರಡು ಚರಣ ಹಾಡಬೇಕೆಂದು ಆದೇಶ ಮಾಡಿದೆ.‌ ಇದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯ ವನ್ನು ತೆಗೆದುಕೊಂಡು ವಂದೇ ಮಾತರಂ ಗೀತೆಗೆ 150 ವರ್ಷವಾದ ಕಾರಣ ಗೀತೆಯನ್ನು ಗಾಯನ ಮಾಡಬೇಕೆಂದು ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಗಿದೆ‌. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ‌. ಆದರೆ ಇದನ್ನು ರಾಜ್ಯ ಸರ್ಕಾರ ತನ್ನ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವಂದೇ ಮಾತರಂನ ಎರಡು ಚರಣ ಮಾತ್ರ ಹಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಂದು ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣವನ್ನು ಹಾಡಲಾಯಿತು. ಇದನ್ನು ಪ್ರಶ್ನಿಸಿದರೆ, ರಾಜ್ಯ ಸರ್ಕಾರ‌ದ ಆದೇಶ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ‌. ಇದರಿಂದ ನಾನು ಕಾರ್ಯಕ್ರಮದಿಂದ ಹೊರಗೆ ಬಂದಿದ್ದೇನೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು ಇರುವ ಕಾರ್ಯಕ್ರಮ ಹೊರತುಪಡಿಸಿ ಉಳಿದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಿನ ಎರಡು ಚರಣ ಮಾತ್ರ ಹಾಡಬೇಕೆಂದು ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಮಾಡಿದೆ. ಹಾಗಾದ್ರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪಿಎಂ ಅವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು‌. ಕಾನೂನು ಅನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಿರಾ, ನೀವು ಈ ದೇಶದ ಪ್ರಜೆಗಳು ಅಲ್ವಾ ಎಂದು ಅವರು ಪ್ರಶ್ನಿಸಿದರು‌. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ಕಾನೂನು ಇದೆಯೇ ಎಂದರು. ಜನಗಣಮನ ಗೀತೆಯಲ್ಲಿ ಎಲ್ಲ ರಾಜ್ಯಗಳ ಹೆಸರು ಇದೆಯೇ ಎಂದು ಪ್ರಶ್ನಿಸಿದರು‌‌‌. ಇದು ಅಕ್ಷಮ್ಯ ಅಪರಾಧವಾಗಿದೆ‌. ನ್ಯಾಯಾಧೀಶರ ಮುಂದೆ ಇಟ್ಟುಕೊಂಡು ನ್ಯಾಯಾಂಗಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ‌ ಮಾಡಲಾ ಗುತ್ತಿದೆ. ಸಂವಿಧಾನಕ್ಕೆ ಅಪಪ್ರಚಾರ ಮಾಡಲು ಶಾಸಕ ಚನ್ನಿ ಬಿಡಲ್ಲ ಎಂದು ಹೇಳಿದರು. ಸರ್ಕಾರಿ ಕಾರ್ಯಕ್ರಮದಲ್ಲೂ ಗೀತೆಯನ್ನು ಪೂರ್ಣ ಹಾಡಬೇಕಿತ್ತು. ನೀವು ನಿರ್ಣಯ ಮಾಡಿದಂತೆ ನಡೆಯಲ್ಲ.‌ ಕಾಂಗ್ರೆಸ್ ಪಕ್ಷ ವನ್ನು ಅಲ್ಪಸಂಖ್ಯಾಂತರಿಗೆ ಅಡ ಇಡಲಾಗಿದೆ ಎಂದು ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಹೋಗಬೇಕಿದೆ.‌ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. 136 ಜನ ಇದ್ದೇವೆಂದು ಕಾಂಗ್ರೆಸ್ ಏನು ಮಾಡಿದ್ರು ನಡೆಯುತ್ತದೆ ಎಂದು ತಿಳಿದು‌ಕೊಂಡರೆ ತಪ್ಪು‌.‌ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ‌.‌ ಬಂಕಿಮಚಂದ್ರ ಚಟರ್ಜಿ ಆರಾಧ್ಯ ದೈವ ಎಂದರು‌. ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಬೇಕಿತ್ತು‌. ಆದರೆ ಈಗ ಬೇಡವೇ‌ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ಬಿಕ್ಕಟ್ಟಿನ ಸಂದರ್ಭ ಬಂದಿದೆ. ಇದನ್ನು ರಾಜ್ಯ ಸರ್ಕಾರ ಹುಟ್ಟುಹಾಕಿದೆ. ನಮ್ಮಲ್ಲಿ ಭಾರತೀಯ ನೀತಿ ಸಂಹಿತೆ ಇದೆಯೇ ಹೊರತು ಕರ್ನಾಟಕ ನೀತಿ ಸಂಹಿತೆ ಅಂತ ಇಲ್ಲ‌‌. ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಇದನ್ನು ಪ್ರಶ್ನೆ ಮಾಡಲಾಗುವುದು ಎಂದರು.
    1
    ಶಿವಮೊಗ್ಗ-ವಂದೇ ಮಾತರಂ ಗೀತೆ ಎರಡೇ ಚರಣ: ಕಾರ್ಯಕ್ರಮ ದಿಂದ ಹೊರನಡೆದ ಶಾಸಕ 
ಶಿವಮೊಗ್ಗ: ವಂದೇ ಮಾತರಂ ಗೀತೆಯಲ್ಲಿ ಕೇವಲ ಎರಡು ಚರಣವನ್ನು ಹಾಡಿದ್ದಕ್ಕೆ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯ ಕ್ರಮದಿಂದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೊರ ನಡೆದಿರುವ ಘಟನೆ ನಡೆದಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳ ವಾರ ಅಂತಾರಾಷ್ಟ್ರೀಯ ಪ್ರಜಾ‌ಪ್ರಭುತ್ವ ದಿನದ ಕಾರ್ಯಕ್ರಮವನ್ನು‌ ಜಿಲ್ಲಾಡಳಿತ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಬಸಪ್ಪ ಕಾರ್ಯಕ್ರಮ ದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಿದ್ದಕ್ಕೆ ವೇದಿಕೆಯಲ್ಲಿಯೇ ಅಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಅವರು ಇದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣ ಹಾಡಿ ಅಪಮಾನ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ‌
ಕಾರ್ಯಕ್ರಮದಲ್ಲಿ ಎರಡು ಚರಣ ಹಾಡಬೇಕೆಂದು ಎಲ್ಲಿ ಇದೆ, ಆದೇಶ ತೋರಿಸಿ ಎಂದು ಆಗ್ರಹಿಸಿದರು. ಜಿಲ್ಲಾ‌ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ‌ ಮಲ್ಲೇಶಪ್ಪ ರಾಜ್ಯ ಸರ್ಕಾರದ ಆದೇಶವನ್ನು ತೋರಿಸಿದರು. ಇದಕ್ಕೆ ಗರಂ ಆದ ಶಾಸಕರು ಹಾಗಾದ್ರೆ ಕೇಂದ್ರ ಸರ್ಕಾರದ ಆದೇಶವನ್ನು‌ ಮೊಟಕುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ವೇದಿಕೆಯಲ್ಲಿ ನಾನು ಇರಲ್ಲ ಎಂದು ಭವನದಿಂದ ಹೊರ ನಡೆದರು.
ನಂತರ ತಮ್ಮ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೇರಿ ಒಂದು ಕಾನೂನು ಮಾಡುತ್ತದೆ. ಆದರೆ ರಾಜ್ಯ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಇರುವ ಕಾರ್ಯಕ್ರಮ ದಲ್ಲಿ ಮಾತ್ರ ಪೂರ್ಣ ಗೀತೆ ಹಾಡಬೇಕು, ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಕೇವಲ ಎರಡು ಚರಣ ಹಾಡಬೇಕೆಂದು ಆದೇಶ ಮಾಡಿದೆ.‌ ಇದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯ ವನ್ನು ತೆಗೆದುಕೊಂಡು ವಂದೇ ಮಾತರಂ ಗೀತೆಗೆ 150 ವರ್ಷವಾದ ಕಾರಣ ಗೀತೆಯನ್ನು ಗಾಯನ ಮಾಡಬೇಕೆಂದು ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಗಿದೆ‌. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ‌. ಆದರೆ ಇದನ್ನು ರಾಜ್ಯ ಸರ್ಕಾರ ತನ್ನ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವಂದೇ ಮಾತರಂನ ಎರಡು ಚರಣ ಮಾತ್ರ ಹಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಂದು ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣವನ್ನು ಹಾಡಲಾಯಿತು. ಇದನ್ನು ಪ್ರಶ್ನಿಸಿದರೆ, ರಾಜ್ಯ ಸರ್ಕಾರ‌ದ ಆದೇಶ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ‌. ಇದರಿಂದ ನಾನು ಕಾರ್ಯಕ್ರಮದಿಂದ ಹೊರಗೆ ಬಂದಿದ್ದೇನೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು.
ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು ಇರುವ ಕಾರ್ಯಕ್ರಮ ಹೊರತುಪಡಿಸಿ ಉಳಿದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಿನ ಎರಡು ಚರಣ ಮಾತ್ರ ಹಾಡಬೇಕೆಂದು ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಮಾಡಿದೆ. ಹಾಗಾದ್ರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪಿಎಂ ಅವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು‌. ಕಾನೂನು ಅನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಿರಾ, ನೀವು ಈ ದೇಶದ ಪ್ರಜೆಗಳು ಅಲ್ವಾ ಎಂದು ಅವರು ಪ್ರಶ್ನಿಸಿದರು‌. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ಕಾನೂನು ಇದೆಯೇ ಎಂದರು.
ಜನಗಣಮನ ಗೀತೆಯಲ್ಲಿ ಎಲ್ಲ ರಾಜ್ಯಗಳ ಹೆಸರು ಇದೆಯೇ ಎಂದು ಪ್ರಶ್ನಿಸಿದರು‌‌‌. ಇದು ಅಕ್ಷಮ್ಯ ಅಪರಾಧವಾಗಿದೆ‌. ನ್ಯಾಯಾಧೀಶರ ಮುಂದೆ ಇಟ್ಟುಕೊಂಡು ನ್ಯಾಯಾಂಗಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ‌ ಮಾಡಲಾ ಗುತ್ತಿದೆ. ಸಂವಿಧಾನಕ್ಕೆ ಅಪಪ್ರಚಾರ ಮಾಡಲು ಶಾಸಕ ಚನ್ನಿ ಬಿಡಲ್ಲ ಎಂದು ಹೇಳಿದರು.
ಸರ್ಕಾರಿ ಕಾರ್ಯಕ್ರಮದಲ್ಲೂ ಗೀತೆಯನ್ನು ಪೂರ್ಣ ಹಾಡಬೇಕಿತ್ತು. ನೀವು ನಿರ್ಣಯ ಮಾಡಿದಂತೆ ನಡೆಯಲ್ಲ.‌ ಕಾಂಗ್ರೆಸ್ ಪಕ್ಷ ವನ್ನು ಅಲ್ಪಸಂಖ್ಯಾಂತರಿಗೆ ಅಡ ಇಡಲಾಗಿದೆ ಎಂದು ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ.
ಇದನ್ನು ಗಂಭೀರವಾಗಿ ತೆಗೆದುಕೊಂಡು ಹೋಗಬೇಕಿದೆ.‌ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. 136 ಜನ ಇದ್ದೇವೆಂದು ಕಾಂಗ್ರೆಸ್ ಏನು ಮಾಡಿದ್ರು ನಡೆಯುತ್ತದೆ ಎಂದು ತಿಳಿದು‌ಕೊಂಡರೆ ತಪ್ಪು‌.‌ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ‌.‌ ಬಂಕಿಮಚಂದ್ರ ಚಟರ್ಜಿ ಆರಾಧ್ಯ ದೈವ ಎಂದರು‌.
ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಬೇಕಿತ್ತು‌. ಆದರೆ ಈಗ ಬೇಡವೇ‌ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ಬಿಕ್ಕಟ್ಟಿನ ಸಂದರ್ಭ ಬಂದಿದೆ. ಇದನ್ನು ರಾಜ್ಯ ಸರ್ಕಾರ ಹುಟ್ಟುಹಾಕಿದೆ. ನಮ್ಮಲ್ಲಿ ಭಾರತೀಯ ನೀತಿ ಸಂಹಿತೆ ಇದೆಯೇ ಹೊರತು ಕರ್ನಾಟಕ ನೀತಿ ಸಂಹಿತೆ ಅಂತ ಇಲ್ಲ‌‌. ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಇದನ್ನು ಪ್ರಶ್ನೆ ಮಾಡಲಾಗುವುದು ಎಂದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.