ಕೆರೆಗೆ ಕಿಡಿಗೇಡಿಗಳು ಕ್ರಿಮಿನಾಶಕ ಹಾಕಿದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸಾವನ್ನಪ್ಪಿರುವ ಘಟನೆ ಹುಣಸೂರು: ತಾಲೂಕಿನ ಕಡೆಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಕೆರೆಗೆ ಕಿಡಿಗೇಡಿಗಳು ಕ್ರಿಮಿನಾಶಕ ಹಾಕಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತ ರೈತ ಶಿವಣ್ಣ ಅವರು ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದ್ದಾರೆ. ಬೀರತಮ್ಮನಹಳ್ಳಿಯ ಶಿವಣ್ಣ ಅವರು ತಮ್ಮ ಪುತ್ರನ ಹೆಸರಿನಲ್ಲಿ ಗ್ರಾಮ ಪಂಚಾಯಿತಿಯಿಂದ ಕೆರೆಯಲ್ಲಿ ಮೀನು ಹಿಡಿಯುವ ಗುತ್ತಿಗೆ ಪಡೆದಿದ್ದರು. ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಕೆರೆಗೆ ಮೀನು ಮರಿಗಳನ್ನು ಬಿಟ್ಟು ಸಾಕಣೆ ಮಾಡಿದ್ದರು. ಇತ್ತೀಚೆಗೆ ಕೆರೆಯಲ್ಲಿ ನೀರು ಕಡಿಮೆಯಾದಾಗ ಮೀನು ಹಿಡಿಯಲು ಹೋದಾಗ ಈ ಅನಾಹುತ ಬೆಳಕಿಗೆ ಬಂದಿದೆ. 3 ದಿನಗಳ ಹಿಂದೆ ಕಿಡಿಗೇಡಿಗಳು ಕೆರೆಗೆ ಕಳೆನಾಶಕ ಅಥವಾ ಕ್ರಿಮಿನಾಶಕ ಬೆರೆಸಿದ್ದರಿಂದ ಮೀನುಗಳು ಸಾಮೂಹಿಕವಾಗಿ ಮೃತಪಟ್ಟಿವೆ. ಮೀನು ಸಾಕಣೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದರೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ಎಂದು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಗುತ್ತಿಗೆ ಹಣ ಪಡೆದಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ದೂರು ಬಂದಿದೆ. ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಕೆರೆಯ ಸುತ್ತಮುತ್ತಲ ಜಮೀನುಗಳಲ್ಲಿ ಬೆಳೆಗಳಿಗೆ ಸಿಂಪಡಿಸಿದ್ದ ಕ್ರಿಮಿನಾಶಕವು ಕೆರೆ ನೀರಿಗೆ ಸೇರಿ ಮೀನುಗಳು ಅಸ್ವಸ್ಥಗೊಂಡು ಮೃತಪಟ್ಟಿವೆಯೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

- All About,Greatfull and Thankful for Our #CEO #KarnatakaStateBoardOfAuqaf #Bengaluru for his Performance of Duty Regards *ಭಾರತ ನಲ್ಲಿ ವೈರಲ್*1
- ಮೈಸೂರು: ಸಂಗೀತವೇ ಉಸಿರಾಗಿದ್ದ ಗಾನಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರಿಗೆ ಮೈಸೂರಿನ ಕಲಾಭಿಮಾನಿಗಳು ಕಣ್ಣೀರಿನ ನುಡಿನಮನ ಸಲ್ಲಿಸಿದರು. ಮೈಸೂರಿನ ರಾಮಕೃಷ್ಣ ನಗರದ ಗಂಧರ್ವ ಸಂಗೀತ ಅಕಾಡೆಮಿಯಲ್ಲಿ "ಶ್ರದ್ಧಾಂಜಲಿ ಮತ್ತು ಗೀತಾ ಗಾಯನ" ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ಸಭಿಕರೆಲ್ಲರೂ ಕೆಲ ಕ್ಷಣ ಮೌನಾಚರಣೆ ಮಾಡಿ ತಮ್ಮ ಪ್ರೀತಿಯ ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು. ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಆರ್.ಮಹೇಂದ್ರ ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ ಜಾತಿ ಬೇಕಾಗಿಲ್ಲ. ಜಾನಕಿ ಅಮ್ಮನವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ, ಮಾನಸಿಕವಾಗಿ ಅವರು ಇಂದಿಗೂ ನಮ್ಮೊಟ್ಟಿಗೆ ಇದ್ದಾರೆ. ಸಂಗೀತಗಾರರಿಗೆ ಸರಸ್ವತಿಯೇ ಆದ ಅವರು, ಕೊನೆಯ ಕ್ಷಣಗಳಲ್ಲಿ ಮೈಸೂರನ್ನೇ ಆಯ್ಕೆ ಮಾಡಿಕೊಂಡು ಇಲ್ಲೇ ನೆಲೆಸಿದ್ದರು. ಇದು ನಮ್ಮ ಪುಣ್ಯ ಎಂದು ಹೇಳಿದರು. ಜಾನಕಿ ಅಮ್ಮನವರ ವ್ಯಕ್ತಿತ್ವವನ್ನು ನೆನೆದ ಆರ್.ಮಹೇಂದ್ರ ಅವರು, ಅವರು ಹಾಡುವ ಶೈಲಿ, ವಾಯ್ಸ್ ಮಾಡ್ಯುಲೇಷನ್ ಇಂದಿಗೂ ಗಾಯಕರಿಗೆ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಅವರು ತಮ್ಮ ಕಂಠ ನೀಡಿದ್ದಾರೆ. 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರದ್ದು ಎಂದು ಸ್ಮರಿಸಿದರು. ನಾನು ಕೂಡ ಅವರೊಂದಿಗೆ ಎರಡು ವೇದಿಕೆಯಲ್ಲಿ ಹಾಡುವ ಅವಕಾಶ ಪಡೆದಿದ್ದೆ. ಅದು ಮರೆಯಲಾಗದ ಕ್ಷಣ. ಮೊದಲ ಬಾರಿ ಅವರನ್ನು ಭೇಟಿಯಾದಾಗ ತಮ್ಮ ಮಕ್ಕಳಂತೆ ನೋಡಿಕೊಂಡು, ಕೈ ತುತ್ತು ತಿನಿಸಿದರು. ಅಷ್ಟೊಂದು ಆತ್ಮೀಯತೆ. ನಾನು ಸಂಗೀತ ಕಲಿಯುತ್ತಿದ್ದಾಗ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಚಿನ್ನದ ಪದಕವನ್ನು ಅವರ ಕೈಯಿಂದಲೇ ಪಡೆದಿದ್ದೆ. ಅಂತಹ ಸರಳ, ಸಾರ್ಥಕ ಜೀವನ ನಡೆಸಿದ ಮಹಾನ್ ಕಲಾವಿದೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟರು. ನುಡಿನಮನದ ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯ ಗಾಯಕರು ಜಾನಕಿ ಅಮ್ಮನವರು ಹಾಡಿರುವ ಸುಪ್ರಸಿದ್ಧ ಗೀತೆಗಳನ್ನು ಹಾಡಿ ಗೀತಾ ಗಾಯನದ ಮೂಲಕ ನಮನ ಸಲ್ಲಿಸಿದರು. ಅವರ ಕಂಠದ ಪ್ರತಿಧ್ವನಿ ಸಭಾಂಗಣದಲ್ಲಿ ಮೊಳಗಿದಾಗ ಹಲವರ ಕಣ್ಣುಗಳು ತೇವಗೊಂಡವು. ಸ್ವರ ಮೌನವಾದರೂ, ಆ ಸ್ವರದ ಶಕ್ತಿ ಇಂದಿಗೂ ಕೋಟಿ ಹೃದಯಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಶ್ರದ್ಧಾಂಜಲಿ ಮತ್ತೊಮ್ಮೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ನಿವೃತ್ತ ಎಇಇ ಸುರೇಶ್, ಗಾಯಕರಾದ ಲಕ್ಷ್ಮಣ್, ಮೀನಾಕುಮಾರಿ, ಬಸವರಾಜು, ಚೇತನ್, ಡಾ.ಜಗದೀಶ್, ಸಂಜಯ್, ದಿನೇಶ್, ಡಾ. ರತ್ನ ಹಾಲಪ್ಪಗೌಡ, ರಾಜೇಶ್ವರಿ, ಮಹೇಶ್, ಮಂಜುನಾಥ್ ಎಂ, ಪವಿತ್ರ, ಎಂ. ನಟರಾಜ್, ಸೇರಿದಂತೆ ಅನೇಕ ಸಂಗೀತ ಪ್ರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.3
- ಮೂರನೇ ಆಷಾಢ ಶುಕ್ರವಾರ ಅಂಗವಾಗಿ 2000 ಜನರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ ಮೈಸೂರು, ಜು.31: ಮೈಸೂರಿನಲ್ಲಿ ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಗ್ಯಾರೇಜ್ ಹಾಗೂ ಟ್ಯಾಂಕರ್ ಮಾಲೀಕರ ಸಂಘದ ವತಿಯಿಂದ ಸುಮಾರು 2000 ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ನಗರದ ಪ್ರಮುಖ ವೃತ್ತದ ಸಮೀಪ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಗ್ಯಾರೇಜ್‌ಗಳ ಮಾಲೀಕರು, ಟ್ಯಾಂಕರ್ ಮಾಲೀಕರು, ಚಾಲಕರು, ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಆಷಾಢ ಶುಕ್ರವಾರವನ್ನು ವಿಶೇಷವಾಗಿ ದೇವಿ ಆರಾಧನೆಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಪೂಜೆ, ಅಲಂಕಾರ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಬಳಿಕ ಅನ್ನಸಂತರ್ಪಣೆ ಆರಂಭಿಸಲಾಯಿತು. ಬಡವರು, ಕೂಲಿ ಕಾರ್ಮಿಕರು, ಪ್ರಯಾಣಿಕರು ಹಾಗೂ ಅಗತ್ಯವಿರುವ ಜನರಿಗೆ ಊಟ ವಿತರಿಸಲಾಯಿತು. ಕಾರ್ಯಕ್ರಮದ ಆಯೋಜಕರು ಮಾತನಾಡಿ, ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಪ್ರತಿವರ್ಷವೂ ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಗ್ಯಾರೇಜ್ ಮತ್ತು ಟ್ಯಾಂಕರ್ ವೃತ್ತಿಯಲ್ಲಿ ತೊಡಗಿರುವ ಎಲ್ಲರೂ ಒಗ್ಗಟ್ಟಿನಿಂದ ಈ ಸೇವಾ ಕಾರ್ಯದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಅನ್ನಸಂತರ್ಪಣೆಯಲ್ಲಿ ಅನ್ನ, ಸಾಂಬಾರ್, ಪಲ್ಯ, ಪಾಯಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗಿತ್ತು. ಸೇವೆ ಸಲ್ಲಿಸಿದ ಸ್ವಯಂಸೇವಕರು ಶಿಸ್ತಿನಿಂದ ಊಟ ವಿತರಣೆ ಮಾಡಿ ಭಕ್ತರ ಮೆಚ್ಚುಗೆ ಪಡೆದರು. ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮವನ್ನು ಪ್ರಶಂಸಿಸಿ, ಧಾರ್ಮಿಕ ಆಚರಣೆಯ ಜೊತೆಗೆ ಮಾನವೀಯ ಸೇವೆಯೂ ಸಮಾಜದಲ್ಲಿ ಬೆಳೆಬೇಕು ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಇಂತಹ ಸೇವಾ ಚಟುವಟಿಕೆಗಳು ಸಾಮರಸ್ಯ ಮತ್ತು ಸಹಕಾರದ ಸಂಕೇತವಾಗಿವೆ ಎಂದು ಅವರು ಹೇಳಿದರು.2
- ಭೇತ್ರಿ ಸಮೀಪ ತುಂಬಿ ಹರಿಯುತ್ತಿರುವ ಕಾವೇರಿ ನದಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆ ಮೂರ್ನಾಡು ಬಳಿ ಭೇತ್ರಿಯಲ್ಲಿ ಕಾವೇರಿ ನದಿ ನೀರಿನ ಹರಿವು ಹೆಚ್ಚುತ್ತಲೇ ಇದೆ. ನದಿ ಪಾತ್ರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.1
- ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು1
- ತಮಿಳುನಾಡಿ ಗೆ ನೀರು ಬಿಡದಂತೆ ಸರ್ಕಾರ ತೀರ್ಮಾನ ಗೊಳ್ಳುವಂತೆ ಕಾರ್ಯಕರ್ತರಿಂದ ರಸ್ತೆ ತಡೆ ಪ್ರತಿಭಟನೆ ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ನಿರ್ವಾಹಣ ಮಂಡಳಿ ಆದೇಶದಂತೆ ಕಾವೇರಿನೀರು ಬಿಡಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ರಸ್ತೆತಡೆ ಹಾಗೂ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವಿಪುರಬಸವರಾಜು ನೇತೃತ್ವದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ಒಂದು ದಿನಕ್ಕೆ 3500 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಾಹಣಾ ಮಂಡಳಿ ಆದೇಶ ಮಾಡಿದ್ದು, ರಾಜ್ಯ ಸರ್ಕಾರ ಆ ಆದೇಶವನ್ನು ತಿರಸ್ಕಾರ ಮಾಡಬೇಕು. ನಾಳೆ ವಿಧಾನಸಭೆ ಯಲ್ಲಿ ಸರ್ವಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರ ಕರೆದಿದ್ದು, ಎಲ್ಲಾ ಶಾಸಕರು ತಮಿಳುನಾಡಿಗೆ ನೀರು ಬಿಡದಂತೆ ತೀರ್ಮಾನ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇನ್ನೂ ಇದೇ ವೇಳೆ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಕುಡಿಯಲು ನೀರಿಲ್ಲ , ತಮಿಳುನಾಡಿಗೆ ನೀರು ಬಿಡಬೇಕಂತೆ ಇದು ಸಾಧ್ಯವಿಲ್ಲ , ನೀರು ಬಿಟ್ಟರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ, ಸೋ.ಶಿ ಪ್ರಕಾಶ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.1
- ಚಾಮರಾಜನಗರದಲ್ಲಿ ಇಂದು ಕಾವೇರಿ ನೀರು ಬಿಡುವ CWRC ಆದೇಶವನ್ನು ಖಂಡಿಸಿ ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು4
- All About,Day Dreamers who are dreaming to become famous overnight by spreading selfish propaganda *ಭಾರತ ನಲ್ಲಿ ವೈರಲ್*1