ಕೋಲಾರ ಜನರ ಧ್ವನಿಯಾಗಬೇಕಿದ್ದ ಸದನ ಮೊಟಕು: ಕಾಂಗ್ರೆಸ್ - ಬಿಜೆಪಿ ವಿರುದ್ಧ ವಿ ರಮೇಶ್ ಕಿಡಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕಿದ್ದ ವಿಧಾನಮಂಡಲ ಅಧಿವೇಶನವನ್ನು ಪೂರ್ಣವಾಗಿ ನಡೆಸದೆ ಮೊಟಕುಗೊಳಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಹಾಗೂ ಸರ್ಕಾರದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಪ್ರಶ್ನಿಸಿ ಜನರ ಪರವಾಗಿ ಧ್ವನಿ ಎತ್ತಬೇಕಿದ್ದ ಬಿಜೆಪಿ ಕೂಡ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಕಿಡಿಕಾರಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದ ನೂರಾರು ತಾಲೂಕುಗಳು ವಿಶೇಷವಾಗಿ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಗಾಲದಿಂದ ಬಳಲುತ್ತಿವೆ. ರೈತರಿಗೆ ಬರ ಪರಿಹಾರ ವಿತರಣೆ, ಬಿಡದಿ ಟೌನ್‌ಶಿಪ್ ವಿವಾದ, ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣಾ ಅಣೆಕಟ್ಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು ಚರ್ಚೆಯಾಗಬೇಕಿತ್ತು. ಆದರೆ ಈ ಯಾವ ವಿಚಾರಗಳಿಗೂ ಸಮಗ್ರ ಉತ್ತರ ಸಿಕ್ಕಿಲ್ಲ. ಬೆಂಗಳೂರಿನ ಜಿಬಿಎ ಪಾರ್ಕಿಂಗ್ ನೀತಿ, ಕಸದ ಮಾಫಿಯಾ, ಕಸ ವಿಲೇವಾರಿ, ಸಂಚಾರ ದಟ್ಟಣೆ ಹಾಗೂ ನಗರದ ಮೂಲಸೌಕರ್ಯ ಸಮಸ್ಯೆಗಳು ಕೂಡ ಸದನದಲ್ಲಿ ಗಂಭೀರವಾಗಿ ಚರ್ಚೆಯಾಗಬೇಕಿತ್ತು. ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳು ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಆತಂಕಗಳ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕಿತ್ತು. “ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆಗಳನ್ನು ಎದುರಿಸುವ ಧೈರ್ಯವಿಲ್ಲ; ಬಿಜೆಪಿಗೆ ಪ್ರಶ್ನೆಗಳನ್ನು ಕೇಳುವ ಪ್ರಾಮಾಣಿಕತೆ ಇಲ್ಲ. ಆಡಳಿತ ಪಕ್ಷ ಸದನವನ್ನು ಮೊಟಕುಗೊಳಿಸಿ ತಪ್ಪಿಸಿಕೊಳ್ಳುವ ಕೆಲಸ ಮಾಡಿದರೆ, ಪ್ರತಿಪಕ್ಷವು ನಾಗೇಂದ್ರ ವಿಚಾರವೊಂದನ್ನು ಮುಂದಿಟ್ಟುಕೊಂಡು ಉಳಿದ ಜನಪರ ಸಮಸ್ಯೆಗಳನ್ನು ಕಡೆಗಣಿಸಿದೆ. ಇದು ಕಾಂಗ್ರೆಸ್–ಬಿಜೆಪಿ ಎರಡೂ ಪಕ್ಷಗಳ ಹೊಂದಾಣಿಕೆ ರಾಜಕಾರಣದ ಅನುಮಾನವನ್ನು ಹುಟ್ಟುಹಾಕಿದೆ” “ಜನರ ತೆರಿಗೆ ಹಣದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನವನ್ನು ಕಾಂಗ್ರೆಸ್ ತನ್ನ ಅನುಕೂಲಕ್ಕೆ ತಕ್ಕಂತೆ ನಡೆಸಬಾರದು. ಅದೇ ರೀತಿ ಬಿಜೆಪಿ ಕೂಡ ಪ್ರತಿಪಕ್ಷದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು; ಬಿಜೆಪಿ ಉತ್ತರ ಪಡೆಯುವವರೆಗೆ ಹೋರಾಡಬೇಕು. ಎರಡೂ ಪಕ್ಷಗಳು ವಿಫಲವಾದರೆ ಜನರ ಪರವಾಗಿ ಆಮ್ ಆದ್ಮಿ ಪಕ್ಷ ಸದನದ ಹೊರಗೆ ಮತ್ತು ಜನರ ನಡುವೆ ಹೋರಾಟ ನಡೆಸಲಿದೆ” ಎಂದು ವಿ ರಮೇಶ್ ಎಚ್ಚರಿಸಿದ್ದಾರೆ.

- *ದೇವರ ನಿಶ್ಚಯದಂತೆ ನಾವುಗಳು ಕೆಲಸ ಮಾಡಿ ದೇವಾಲಯ ನಿರ್ಮಾಣ ಮಾಡಿದ್ದೇವೆ:ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣಗೌಡ* ಹಲವಾರು ಸಮುದಾಯದ ಜನರು ವಾಸಿಸುವ ಕಮ್ಯೂನಿಟಿಗಳಲ್ಲಿ ದೇವಾಲಯ ನಿರ್ಮಾಣ ಕಷ್ಟ ಸಾಧ್ಯ ಆದರೂ ಪ್ರೆಸ್ಟೀಜ್ ಗ್ಲೆನ್ ವುಡ್ ಕಮ್ಯೂನಟಿಯ ಜನರ ಆಶಯ ಹಾಗೂ ಸಂಕಲ್ಪ ದಂತೆ ಶ್ರೀ ವರಸಿದ್ಧಿ ವಿನಾಯಕ ದೇವಾಲಯವ ನಿರ್ಮಾಣದ ಬಗ್ಗೆ ಎರಡು ವರ್ಷದ ಹಿಂದಿನಿಂದಲೂ ಮಾಡುತ್ತಿದ್ದರೂ ದೇವಾಲಯವ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದ 45 ದಿನಗಳಲ್ಲಿ ಅದರಲ್ಲೂ ಕೇವಲ 30 ದಿನಗಳು ಕೆಲಸ ಮಾಡಿ ಪೂರ್ಣಗೊಳಿಸಿರುವುದು ಗಿನ್ನಿಸ್ ದಾಖಲೆ ಎಂದು ಕೆಲವು ಸ್ನೇಹಿತರು ಹೇಳುತ್ತಿದ್ದರು ಎಂದು ಸಮಾಜ ಸೇವಕರು ಮತ್ತು ಎಲ್ ಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ವಿಜೇತರಾದ ಕರುಣಾಮಯಿ ಲಕ್ಷ್ಮಣಗೌಡರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಬಿದರಹಳ್ಳಿ ಹೋಬಳಿ ಭೂದಿಗೆರೆ ರಸ್ತೆಯ ಮಂಡೂರುಗ್ರಾಮದ ಪ್ರೆಸ್ಟೀಜ್ ಗ್ಲೆನ್ ವುಡ್ ನ ಶ್ರೀ ವರಸಿದ್ಧ ವಿನಾಯಕ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಮಾಡಬೇಕಾದರೂ ನಾವು ನಿಮಿತ್ತ ಮಾತ್ರ ಎಲ್ಲಾ ದೇವರ ಕೃಪೆಯಿಂದ ನಡೆಯುತ್ತದೆ.ದೇವಾಲಯದ ಕೆಲಸ ಹಾಗೂ ಪ್ರತಿಷ್ಠಾಪನೆ ವಿನಾಯಕನ ಕೃಪೆಯಿಂದ ಸಾಂಗವಾಗಿ ನೆರವೇರಿದೆ ಎಂದು ಹೇಳಿದರು. ದೇವತಾ ಕಾರ್ಯದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿರವರು ಭಾಗವಹಿಸಿ ಹಿತವಚನಗಳನ್ನು ತಿಳಿಸಿದರು. ಅವರೊಂದಿಗೆ ಮುಖಂಡರುಗಳಾದ ಕಾಟ್ಮನೂರು ಪಾಪಣ್ಣ,ಕ್ರಾಸ್ ಮಂಜು,,ಜ್ಯೋತಿ ಪುರ ವೇಣು ರವರುಗಳು ಆಗಮಿಸಿ ಶುಭಕೋರಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು. ದೇವಾಲಯ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಶ್ರೀ ವರಸಿದ್ಧಿ ವಿನಾಯಕ ಎಲ್ಲರ ಕಷ್ಟಗಳ ನಿವಾರಣೆ ಮಾಡಲಿ ಹಾಗೂ ಕಲವರ ಮನಸ್ಸುಗಳಲ್ಲಿರುವ ಕಲ್ಮಶಗಳನ್ನು ತೊಳೆದು ಹಾಕಲಿ ಎಂದು ಆಶಿಸಿದರು ಹಾಗೂ ದೇವಾಲಯದ ಶುಚಿತ್ವ ಕಾಪಾಡಿಕೊಂಡು ಮುನ್ನಡಿಸಿಕೊಂಡು ಹೋಗ ಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷರಾದ ಪಿಳ್ಳಪ್ಪ,ಸ್ಥಳೀಯ ನಿವಾಸಿಗಳಾದ ಜನಾರ್ದನ್, ಪರಿಷಿತ್,ನಿಕುನ್,ಚೌಧರಿ,ರಣವೀರ್, ರಂಚಿತ್,ಕೃಷ್ಣಾ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರುಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.3
- ಮುಳಬಾಗಿಲು : ಸೆ 13ರಿಂದ 18ರವರೆಗೆ ಕುರುಡುಮಲೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಹಿನ್ನಲೆ ಪೂರ್ವಭಾವಿ ಸಭೆ.!2
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ.1
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು2
- ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಸಮಾಜ ಸೇವಕ ಸಿಎಂ ಬೈರೇಗೌಡ ರು ಮುತ್ತೈದೆಯರಿಗೆ ಹರಿಶಿನ, ಕುಂಕುಮ, ಸೀರೆ ವಿತರಣೆ1
- ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ! ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್! ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ! ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್!1
- ನಂಜನಗೂಡು : ಮಾದಕ ಜಾಲಕ್ಕೆ ಕಡಿವಾಣ ಹಾಕಿ.! ಪೊಲೀಸ್ ಇಲಾಖೆ ವಿರುದ್ಧ ಮಾಜಿ ಶಾಸಕ ಹರ್ಷವರ್ಧನ್ ವಾಗ್ದಾಳಿ.!?2