Shuru
Apke Nagar Ki App…
ಮುದ್ದೇಬಿಹಾಳ: ಬಿಜಾಪುರದ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಉಮೇಶ್ ವಂದಾಲ ಚಲನಚಿತ್ರಗಳಲ್ಲಿ ಕೇವಲ ಹಳೆ ಮೈಸೂರು ಮತ್ತು ಬೆಂಗಳೂರಿನ ಕಲಾವಿದರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ, ಆದರೆ ಉತ್ತರ ಕರ್ನಾಟಕ ಮತ್ತು ವಿಜಯಪುರ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ವಿಜಯಪುರದಲ್ಲಿ ಮಂಗಳವಾರದಂದು ಮಾಧ್ಯಮಗೋಷ್ಠಿಯಲ್ಲಿ ಹಿಂದೂ ಮುಖಂಡ ಉಮೇಶ್ ವಂದಲ ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದು, ಅವರಿಗೂ ಚಿತ್ರರಂಗದಲ್ಲಿ ಅವಕಾಶ ಕಲ್ಪಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಅವರು ಒತ್ತಾಯಿಸಿದರು.
ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ಮುದ್ದೇಬಿಹಾಳ: ಬಿಜಾಪುರದ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಉಮೇಶ್ ವಂದಾಲ ಚಲನಚಿತ್ರಗಳಲ್ಲಿ ಕೇವಲ ಹಳೆ ಮೈಸೂರು ಮತ್ತು ಬೆಂಗಳೂರಿನ ಕಲಾವಿದರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ, ಆದರೆ ಉತ್ತರ ಕರ್ನಾಟಕ ಮತ್ತು ವಿಜಯಪುರ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ವಿಜಯಪುರದಲ್ಲಿ ಮಂಗಳವಾರದಂದು ಮಾಧ್ಯಮಗೋಷ್ಠಿಯಲ್ಲಿ ಹಿಂದೂ ಮುಖಂಡ ಉಮೇಶ್ ವಂದಲ ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದು, ಅವರಿಗೂ ಚಿತ್ರರಂಗದಲ್ಲಿ ಅವಕಾಶ ಕಲ್ಪಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಅವರು ಒತ್ತಾಯಿಸಿದರು.
More news from ಕರ್ನಾಟಕ and nearby areas
- ನಾಗಠಾಣ: ರಸ್ತೆಗಳಿಗೆ ಹಿಂದೂಗಳ ಹೆಸರು ಇಟ್ಟಿದ್ದೇನೆ ; ಶಾಸಕ ಯತ್ನಾಳ ವಿಜಯಪುರ ನಗರದ ಪ್ರಮುಖ ರಸ್ತೆಗಳಿಗೆ ಹಿಂದೂ ಮುಖಂಡರು ಹಾಗೂ ದೇಶಭಕ್ತರ ಹೆಸರುಗಳನ್ನು ಇಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ತಿಳಿಸಿದರು. ಈ ಹಿಂದೆ ಕೆಲವು ಅನ್ಯ ಧರ್ಮದ ಮುಖಂಡರ ಹೆಸರುಗಳನ್ನು ರಸ್ತೆಗಳಿಗೆ ಇಡಲಾಗಿತ್ತು, ಅವುಗಳನ್ನು ತೆಗೆದುಹಾಕಿ ದೇಶಭಕ್ತರ ಹೆಸರುಗಳನ್ನು ಇಡಲಾಗಿದೆ ಎಂದು ಅವರು ಹೇಳಿದರು.1
- ಶ್ರೀ ಸದಾಶಿವ ಮುತ್ಯಾ ಹಾಗೂ ಚಂದ್ರಮ್ಮ ತಾಯಿಯವರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.1
- ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೊಲೀಸರ ಬಗ್ಗೆ ಸಮಾಜ ಕಾರ್ಯಕರ್ತೆ ಸಹನಾ ಅಂಗಡಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಬಳ ಕಡಿಮೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಯಾವುದೇ ಘಟನೆ ನಡೆದರೂ ಜನಪ್ರತಿನಿಧಿಗಳು ಪೊಲೀಸರನ್ನೇ ಗುರಿಯಾಗಿಸುತ್ತಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.ಸಹನಾ ಅಂಗಡಿ ಅವರ ಮಾತಿನಂತೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಹಬ್ಬ-ಹರಿದಿನ, ಕುಟುಂಬ ಸಮಾರಂಭಗಳನ್ನೂ ಬದಿಗಿರಿಸಿ ಸಮಾಜದ ಭದ್ರತೆಗೆ ಶ್ರಮಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಗೌರವ ಮತ್ತು ಸಂಬಳ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳಿವೆ ಎಂಬ ಹೋಲಿಕೆ ಮಾಡುತ್ತಾ, ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.“ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಮೊದಲಿಗೆ ಪೊಲೀಸರನ್ನೇ ದೂರುತ್ತಾರೆ. ಆದರೆ ಜನಪ್ರತಿನಿಧಿಗಳ ಹಿಂದೆ ಮುಂದೆ, ಅವರ ಕುಟುಂಬದ ಭದ್ರತೆಗೆ ಪೊಲೀಸರು ಬೇಕು. ಹಾಗಾದರೆ ಪೊಲೀಸರ ಕುಟುಂಬದ ಭದ್ರತೆ ಯಾರು ನೋಡಿಕೊಳ್ಳಬೇಕು? ಅವರ ಸಂಕಷ್ಟಗಳಿಗೆ ಸ್ಪಂದಿಸುವವರು ಯಾರು?”ಸಹನಾ ಅಂಗಡಿ ಅವರು ಪೊಲೀಸರ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಜೀವನದ ಮೇಲಿನ ಪರಿಣಾಮಗಳ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಅವರ ಪ್ರಕಾರ, ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲದೆ, ಪೊಲೀಸರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ಪೊಲೀಸರ ಸೇವೆ ಮತ್ತು ಅವರ ಕಲ್ಯಾಣದ ಬಗ್ಗೆ ಉದ್ಭವಿಸಿರುವ ಈ ಪ್ರಶ್ನೆಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ1
- ಬಾಗಲಕೋಟೆ:ನಗರದ ವಿದ್ಯಾಗಿರಿ ಸಾಯಿ ಮಂದಿರದಲ್ಲಿರುವ ಶ್ರೀ ವರದಾನೇಶ್ವರಿ ಸಾಂಸ್ಕೃತಿಕ ವೇದಿಕೆಯ ಮೇಲೆ ಇಂದು ಸಂಜೆ ಜರುಗಿದ ಜಂಗಮದೆಡೆಗೆ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು. ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ #ಶಿವಸಂಚಾರ ತಂಡದಿಂದ ಪ್ರದರ್ಶಿಸಲಾದ ಈ ನಾಟಕವು ಸಮಾಜಮುಖಿ ಸಂದೇಶವನ್ನು ಒಳಗೊಂಡು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿತು. ಕಲಾವಿದರ ಅಭಿನಯ, ವೇದಿಕೆ ವಿನ್ಯಾಸ ಹಾಗೂ ಸಂಗೀತ ಸಂಯೋಜನೆ ವಿಶೇಷವಾಗಿ ಮನಸೆಳೆಯುವಂತಿತ್ತು. ನಾಟಕ ವೀಕ್ಷಿಸಲು ನಗರದ ಕಲಾಪ್ರೇಮಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸಂಘಟಕರು ಹಾಗೂ ತಂಡದ ಸದಸ್ಯರಿಗೆ ಪ್ರೇಕ್ಷಕರು ಅಭಿನಂದನೆ ಸಲ್ಲಿಸಿದರು.1
- Post by Ajay Shet3
- ಮುಧೋಳ : ಸಮೀಪದ ಸೈದಾಪುರ ಕ್ರಾಸ್ ಬಳಿ ಎಥೆನಾಲ್ ತುಂಬಿದ್ದ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮುಂಜಾಗ್ರತಾ ಕ್ರಮ ಕೈಗೊಂಡು ಎಥೆನಾಲ್ ಸೋರಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 16ಚಕ್ರದ ಬೃಹತ್ ಗಾತ್ರದ ಲಾರಿ ಸಮೀಪದ ಸಕ್ಕರೆ ಕಾರ್ಖಾನೆಯಿಂದ ಎಥೆನಾಲ್ ತುಂಬಿಕೊಂಡು ತಮಿಳುನಾಡು ಕಡೆಗೆ ಹೊರಟಿತ್ತು ಎಂಬ ಮಾಹಿತಿ ಇದೆ. ಸ್ಥಳಕ್ಕೆ ಮುಧೋಳ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ. ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.4
- Post by Omprakash rajkumar khot4
- ಹಿಪ್ಪರಗಿ: ಜಿಲ್ಲಾ ಆಸ್ಪತ್ರೆಯಲ್ಲಿ ಮಾದರಿಯ ಮಿಲ್ಕ್ ಬ್ಯಾಂಕ್ ನಿರ್ಮಾಣ ವಿಜಯಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಇದು ನವಜಾತ ಶಿಶುಗಳಿಗೆ ಹಾಲುಣಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಕೈಗಾರಿಕೆ ಅನುದಾನದಡಿ ನಿರ್ಮಿಸಲಾದ ಈ ಬ್ಯಾಂಕ್‌ಗೆ ಮಂಗಳವಾರ ಜಿಲ್ಲಾ ಶಾಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೋಳಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.1