ಹನಿ ನೀರನ್ನೂ ಬಿಡಬೇಡಿ, ರಾಜ್ಯದ ಹಕ್ಕು ಕಾಪಾಡಿ: ಜನಹಿತಕ್ಕಿಂತ ಸಚಿವ ಸಂಪುಟವೇ ಮುಖ್ಯವಾಗಿದೆ; ಕಾವೇರಿ ವಿವಾದಕ್ಕೆ ದೊಂಬರಾಟವಲ್ಲ, ಶಾಶ್ವತ ಪರಿಹಾರ ಬೇಕು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡ್ಯ / ಶ್ರೀರಂಗಪಟ್ಟಣ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ವತಿಯಿಂದ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ನಾಯಕರು, ರೈತರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ರೈತರ ಹಾಗೂ ಜನರ ಹಿತರಕ್ಷಣೆಗಿಂತ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಮನೆ ಕಾಯುತ್ತಾ ಸಚಿವ ಸಂಪುಟ ವಿಸ್ತರಣೆ ಮಾಡುವುದೇ ಮುಖ್ಯವಾಗಿದೆ ಎಂದು ಕಟುವಾಗಿ ಟೀಕಿಸಿದರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಶಿವಕುಮಾರ್ ಅವರಿಗೆ ನಿಜಕ್ಕೂ ನಾಡಿನ ಜನರ ಬಗ್ಗೆ ಕಾಳಜಿ ಇದ್ದರೆ, 'ಕೆ.ಆರ್.ಎಸ್ ನಿಂದ ತಮಿಳುನಾಡಿಗೆ ಹನಿ ನೀರನ್ನೂ ಬಿಡುವುದಿಲ್ಲ, ಅಗತ್ಯಬಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಸ್ಪಷ್ಟವಾಗಿ ಹೇಳಬೇಕಿತ್ತು. ಆದರೆ ಅವರು ಆ ರೀತಿ ಮಾಡದೆ ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರವು ಸರಿಯಾದ ಸಮಯಕ್ಕೆ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯೂಎಂಎ) ರಾಜ್ಯದಲ್ಲಿರುವ ನೀರಿನ ಅಭಾವದ ಬಗ್ಗೆ ಸೂಕ್ತವಾಗಿ ಮನವರಿಕೆ ಮಾಡಿಕೊಟ್ಟಿದ್ದರೆ ಇಂದು ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ, ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದರೂ ಮುಖ್ಯಮಂತ್ರಿಗಳು ತಮಿಳುನಾಡಿನ ಮುಖ್ಯಮಂತ್ರಿ ಅವರನ್ನು ಇಲ್ಲಿಗೆ ಕರೆತಂದು ಕೆ.ಆರ್.ಎಸ್ ಜಲಾಶಯದ ನೈಜ ಸ್ಥಿತಿಯನ್ನು ತೋರಿಸಲಿ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಿ. ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಕ್ಷಣವೇ 'ಮೇಕೆದಾಟು ಯೋಜನೆ'ಯನ್ನು ಕೈಗೆತ್ತಿಕೊಳ್ಳಬೇಕು. ಭಾಜಪ ಎಂದಿಗೂ ರೈತರ ಪರವಾಗಿ ನಿಲ್ಲಲಿದೆ, ಎಂದು ಅವರು ಭರವಸೆ ನೀಡಿದರು. ಡಿಕೆಶಿ ತಮಿಳುನಾಡಿನ ನೀರುಗಂಟಿ: ಆರ್. ಅಶೋಕ್ ವಾಗ್ದಾಳಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಜೊತೆ ಶಾಮೀಲಾಗಿ, ಆ ರಾಜ್ಯದ 'ನೀರುಗಂಟಿ'ಯಂತೆ ಕೆಲಸ ಮಾಡುತ್ತಿದ್ದಾರೆ, ಎಂದು ಗಂಭೀರ ಆರೋಪ ಮಾಡಿದರು. ದೆಹಲಿಯಲ್ಲೇ ಬೀಡುಬಿಟ್ಟಿದ್ದ ಶಿವಕುಮಾರ್ ಅವರು ಕಾನೂನು ತಜ್ಞರೊಂದಿಗೆ ಚರ್ಚಿಸಿ, ನ್ಯಾಯಾಧಿಕರಣದ ಮುಂದೆ ರಾಜ್ಯದ ಪರವಾಗಿ ಪ್ರಬಲ ವಾದ ಮಂಡಿಸಬೇಕಿತ್ತು. ಅದನ್ನು ಬಿಟ್ಟು ರಾಜಕೀಯ ಲಾಬಿಯಲ್ಲೇ ಕಾಲ ಕಳೆದಿದ್ದಾರೆ. ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಸರ್ಕಾರ ಹೇಳಿದೆ, ಆದರೆ ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ; ನಷ್ಟ ಪರಿಹಾರವನ್ನೂ ನೀಡಿಲ್ಲ. ಬರಗಾಲ ಘೋಷಣೆ ಮಾಡದೆ, ಕೇಂದ್ರಕ್ಕೂ ಸೂಕ್ತ ವರದಿ ಸಲ್ಲಿಸದೆ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಉತ್ತರ ಕರ್ನಾಟಕದ ಜನ ಉದ್ಯೋಗ ಅರಸಿ ಗುಳೇ ಹೋಗುತ್ತಿದ್ದಾರೆ, ಆದರೆ ಸರ್ಕಾರದ ಗಮನವೆಲ್ಲ ಸಂಪುಟ ರಚನೆಯ ಮೇಲಷ್ಟೇ ಇದೆ,ಎಂದು ಅಶೋಕ್ ಕಿಡಿಕಾರಿದರು. ಸಿಡಬ್ಲ್ಯೂಸಿಗೆ ಸತ್ಯಾಸತ್ಯತೆ ತಿಳಿಸುವಲ್ಲಿ ಸರ್ಕಾರ ವಿಫಲ: ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿಗೆ (ಸಿಡಬ್ಲ್ಯೂಆರ್‌ಸಿ) ಹಾಗೂ ಪ್ರಾಧಿಕಾರಕ್ಕೆ ರಾಜ್ಯದಲ್ಲಿ ಉಂಟಾಗಿರುವ ನೀರಿನ ಅಭಾವದ ಬಗ್ಗೆ ಸರ್ಕಾರ ಸರಿಯಾಗಿ ಮಾಹಿತಿ ನೀಡಿಲ್ಲ. ಭಾಜಪದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಸರ್ಕಾರ ತಕ್ಷಣವೇ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಸರ್ಕಾರ ದಿಟ್ಟ ನಿರ್ಧಾರ ತಳೆದರೆ, ಭಾಜಪ ಸಂಪೂರ್ಣ ಬೆಂಬಲ ನೀಡಲಿದೆ, ಎಂದರು. ಕದ್ದುಮುಚ್ಚಿ ನೀರು ಬಿಡುವುದು ನಿಲ್ಲಲಿ": ಸಿ.ಟಿ. ರವಿ ಎಚ್ಚರಿಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಪರಿಸ್ಥಿತಿ ಕೈಮೀರಿ ಹೋದ ಮೇಲೆ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಕಾನೂನು ತಂಡದೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ತಿಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈಗ ರಾತ್ರೋರಾತ್ರಿ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ, ಎಂದು ಆರೋಪಿಸಿದರು. ಶಿವಕುಮಾರ್ ಅವರೇ, ನಿಮ್ಮನ್ನು 'ಬಂಡೆ' ಎನ್ನುತ್ತಾರೆ. ಈಗ ರಾಜ್ಯದ ಹಿತರಕ್ಷಣೆಗಾಗಿ ಬಂಡೆಯಂತೆ ಗಟ್ಟಿಯಾಗಿ ನಿಂತು ನೀರು ಬಿಡುವುದನ್ನು ತಡೆಯಿರಿ. 'ನಮ್ಮ ನೀರು ನಮ್ಮ ಹಕ್ಕು' ಎಂದು ಪಾದಯಾತ್ರೆ ನಡೆಸಿದ ನೀವು, ಈಗ ಜನರ ಹಕ್ಕನ್ನು ರಕ್ಷಿಸಬೇಕು. ನಾಡಿಗೆ ದ್ರೋಹ ಬಗೆದರೆ ರಾಜ್ಯದ ಜನ ಕ್ಷಮಿಸುವುದಿಲ್ಲ,ಎಂದು ಅವರು ಎಚ್ಚರಿಸಿದರು. ಈ ಬೃಹತ್ ಪ್ರತಿಭಟನೆಯಲ್ಲಿ ಭಾಜಪದ ಹಲವು ಹಿರಿಯ ನಾಯಕರು, ಜನಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯ ರೈತರು ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹನಿ ನೀರನ್ನೂ ಬಿಡಬೇಡಿ, ರಾಜ್ಯದ ಹಕ್ಕು ಕಾಪಾಡಿ: ಜನಹಿತಕ್ಕಿಂತ ಸಚಿವ ಸಂಪುಟವೇ ಮುಖ್ಯವಾಗಿದೆ; ಕಾವೇರಿ ವಿವಾದಕ್ಕೆ ದೊಂಬರಾಟವಲ್ಲ, ಶಾಶ್ವತ ಪರಿಹಾರ ಬೇಕು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡ್ಯ / ಶ್ರೀರಂಗಪಟ್ಟಣ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ವತಿಯಿಂದ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ನಾಯಕರು, ರೈತರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ರೈತರ ಹಾಗೂ ಜನರ ಹಿತರಕ್ಷಣೆಗಿಂತ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಮನೆ ಕಾಯುತ್ತಾ ಸಚಿವ ಸಂಪುಟ ವಿಸ್ತರಣೆ ಮಾಡುವುದೇ ಮುಖ್ಯವಾಗಿದೆ ಎಂದು ಕಟುವಾಗಿ ಟೀಕಿಸಿದರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಶಿವಕುಮಾರ್ ಅವರಿಗೆ ನಿಜಕ್ಕೂ ನಾಡಿನ
ಜನರ ಬಗ್ಗೆ ಕಾಳಜಿ ಇದ್ದರೆ, 'ಕೆ.ಆರ್.ಎಸ್ ನಿಂದ ತಮಿಳುನಾಡಿಗೆ ಹನಿ ನೀರನ್ನೂ ಬಿಡುವುದಿಲ್ಲ, ಅಗತ್ಯಬಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಸ್ಪಷ್ಟವಾಗಿ ಹೇಳಬೇಕಿತ್ತು. ಆದರೆ ಅವರು ಆ ರೀತಿ ಮಾಡದೆ ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರವು ಸರಿಯಾದ ಸಮಯಕ್ಕೆ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯೂಎಂಎ) ರಾಜ್ಯದಲ್ಲಿರುವ ನೀರಿನ ಅಭಾವದ ಬಗ್ಗೆ ಸೂಕ್ತವಾಗಿ ಮನವರಿಕೆ ಮಾಡಿಕೊಟ್ಟಿದ್ದರೆ ಇಂದು ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ, ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದರೂ ಮುಖ್ಯಮಂತ್ರಿಗಳು ತಮಿಳುನಾಡಿನ ಮುಖ್ಯಮಂತ್ರಿ ಅವರನ್ನು ಇಲ್ಲಿಗೆ ಕರೆತಂದು ಕೆ.ಆರ್.ಎಸ್ ಜಲಾಶಯದ ನೈಜ ಸ್ಥಿತಿಯನ್ನು ತೋರಿಸಲಿ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಿ. ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಕ್ಷಣವೇ 'ಮೇಕೆದಾಟು ಯೋಜನೆ'ಯನ್ನು ಕೈಗೆತ್ತಿಕೊಳ್ಳಬೇಕು. ಭಾಜಪ ಎಂದಿಗೂ ರೈತರ ಪರವಾಗಿ ನಿಲ್ಲಲಿದೆ, ಎಂದು ಅವರು ಭರವಸೆ ನೀಡಿದರು. ಡಿಕೆಶಿ ತಮಿಳುನಾಡಿನ ನೀರುಗಂಟಿ: ಆರ್. ಅಶೋಕ್ ವಾಗ್ದಾಳಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಜೊತೆ
ಶಾಮೀಲಾಗಿ, ಆ ರಾಜ್ಯದ 'ನೀರುಗಂಟಿ'ಯಂತೆ ಕೆಲಸ ಮಾಡುತ್ತಿದ್ದಾರೆ, ಎಂದು ಗಂಭೀರ ಆರೋಪ ಮಾಡಿದರು. ದೆಹಲಿಯಲ್ಲೇ ಬೀಡುಬಿಟ್ಟಿದ್ದ ಶಿವಕುಮಾರ್ ಅವರು ಕಾನೂನು ತಜ್ಞರೊಂದಿಗೆ ಚರ್ಚಿಸಿ, ನ್ಯಾಯಾಧಿಕರಣದ ಮುಂದೆ ರಾಜ್ಯದ ಪರವಾಗಿ ಪ್ರಬಲ ವಾದ ಮಂಡಿಸಬೇಕಿತ್ತು. ಅದನ್ನು ಬಿಟ್ಟು ರಾಜಕೀಯ ಲಾಬಿಯಲ್ಲೇ ಕಾಲ ಕಳೆದಿದ್ದಾರೆ. ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಸರ್ಕಾರ ಹೇಳಿದೆ, ಆದರೆ ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ; ನಷ್ಟ ಪರಿಹಾರವನ್ನೂ ನೀಡಿಲ್ಲ. ಬರಗಾಲ ಘೋಷಣೆ ಮಾಡದೆ, ಕೇಂದ್ರಕ್ಕೂ ಸೂಕ್ತ ವರದಿ ಸಲ್ಲಿಸದೆ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಉತ್ತರ ಕರ್ನಾಟಕದ ಜನ ಉದ್ಯೋಗ ಅರಸಿ ಗುಳೇ ಹೋಗುತ್ತಿದ್ದಾರೆ, ಆದರೆ ಸರ್ಕಾರದ ಗಮನವೆಲ್ಲ ಸಂಪುಟ ರಚನೆಯ ಮೇಲಷ್ಟೇ ಇದೆ,ಎಂದು ಅಶೋಕ್ ಕಿಡಿಕಾರಿದರು. ಸಿಡಬ್ಲ್ಯೂಸಿಗೆ ಸತ್ಯಾಸತ್ಯತೆ ತಿಳಿಸುವಲ್ಲಿ ಸರ್ಕಾರ ವಿಫಲ: ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿಗೆ (ಸಿಡಬ್ಲ್ಯೂಆರ್‌ಸಿ) ಹಾಗೂ ಪ್ರಾಧಿಕಾರಕ್ಕೆ ರಾಜ್ಯದಲ್ಲಿ ಉಂಟಾಗಿರುವ ನೀರಿನ ಅಭಾವದ ಬಗ್ಗೆ ಸರ್ಕಾರ ಸರಿಯಾಗಿ ಮಾಹಿತಿ ನೀಡಿಲ್ಲ. ಭಾಜಪದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಸರ್ಕಾರ ತಕ್ಷಣವೇ ರೈತರ ಹಿತ
ಕಾಯುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಸರ್ಕಾರ ದಿಟ್ಟ ನಿರ್ಧಾರ ತಳೆದರೆ, ಭಾಜಪ ಸಂಪೂರ್ಣ ಬೆಂಬಲ ನೀಡಲಿದೆ, ಎಂದರು. ಕದ್ದುಮುಚ್ಚಿ ನೀರು ಬಿಡುವುದು ನಿಲ್ಲಲಿ": ಸಿ.ಟಿ. ರವಿ ಎಚ್ಚರಿಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಪರಿಸ್ಥಿತಿ ಕೈಮೀರಿ ಹೋದ ಮೇಲೆ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಕಾನೂನು ತಂಡದೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ತಿಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈಗ ರಾತ್ರೋರಾತ್ರಿ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ, ಎಂದು ಆರೋಪಿಸಿದರು. ಶಿವಕುಮಾರ್ ಅವರೇ, ನಿಮ್ಮನ್ನು 'ಬಂಡೆ' ಎನ್ನುತ್ತಾರೆ. ಈಗ ರಾಜ್ಯದ ಹಿತರಕ್ಷಣೆಗಾಗಿ ಬಂಡೆಯಂತೆ ಗಟ್ಟಿಯಾಗಿ ನಿಂತು ನೀರು ಬಿಡುವುದನ್ನು ತಡೆಯಿರಿ. 'ನಮ್ಮ ನೀರು ನಮ್ಮ ಹಕ್ಕು' ಎಂದು ಪಾದಯಾತ್ರೆ ನಡೆಸಿದ ನೀವು, ಈಗ ಜನರ ಹಕ್ಕನ್ನು ರಕ್ಷಿಸಬೇಕು. ನಾಡಿಗೆ ದ್ರೋಹ ಬಗೆದರೆ ರಾಜ್ಯದ ಜನ ಕ್ಷಮಿಸುವುದಿಲ್ಲ,ಎಂದು ಅವರು ಎಚ್ಚರಿಸಿದರು. ಈ ಬೃಹತ್ ಪ್ರತಿಭಟನೆಯಲ್ಲಿ ಭಾಜಪದ ಹಲವು ಹಿರಿಯ ನಾಯಕರು, ಜನಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯ ರೈತರು ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
- Post by Onlinetv24x71
- We are authorised distributor for Karnataka for Yodha agricultural equipments ಯೋಧ ರೋಟವೇಟರ್, ಯೋಧ ಮೆಕ್ಕೆ ಜೋಳ ಥ್ರೆಶರ್, ಯೋಧ ಮಲ್ಟಿ ಕ್ರಾಪ್ ಥ್ರೆಷರ್, ಯೋಧ ಮಲ್ಚರ್, ಯೋಧ ರಿವರ್ಸಿಬಲ್ ಪ್ಲೋವ್ ಮತ್ತು ಯೋಧಾ ರೋಟರಿ ಡಿಸ್ಕ್ ಹ್ಯಾರೋ ನಾವು ಕರ್ನಾಟಕ ರಾಜ್ಯದ ಕೃಷಿ ಉಪಕರಣಗಳ ವಿತರಕರು ಶ್ರೀ ಶಿವಬಸವ ಆಗ್ರೋ ಕೇರ್ ಹಾವೇರಿ ಸಂಪರ್ಕಿಸಿ: 7483066169 ಲೊಕೇಶನ್: ಇಂಡಸ್ಟ್ರಿಯಲ್ಲಿ ಏರಿಯಾ, near, TMAE ಕಾಲೇಜ್, ಹುಬ್ಬಳ್ಳಿ ರೋಡ್, ಹಾವೇರಿ. 581110 Yodha Rotavator, yodha maize thresher, yodha multi crop thresher, yodha mulcher, yodha reversible plough and Yodha rotary disc Harrow We are authorised distributor for karnataka Shri shivabasava agro care Haveri Contact us: 7483066169 Location: Industrial area, near, TMAE college, Hubli road, Haveri 5811101
- ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಹಿರಿಯೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿಗಳು ಹಿರಿಯೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.1
- ವಿದ್ಯಾರ್ಥಿ ನಿಲಯಗಳ ಮುಂದೆ ಇರುವ ಪೆಟ್ಟಿಗೆ ಅಂಗಡಿಗಳಲ್ಲಿ ಎಗ್ಗ್ ರೈಸ್ ಜೊತೆಗೆ ಸಿಗುತ್ತೆ ಗುಟ್ಕಾ, ಸಿಗರೇಟ್ ಹಾಗೂ ವಿವಿಧ ತಂಬಾಕು ಉತ್ಪನ್ನ ಗಳು, ಇದು ವಿದ್ಯಾರ್ಥಿಗಳಿಗೆ ಬೇಕಾ?. ಇಲ್ಲಿ ಮಾರಾಟ ಮಾಡುವುದು ಸರಿನಾ. ಶಾಲೆ–ವಸತಿ ನಿಲಯಗಳ ಸುತ್ತ ತಂಬಾಕು ದಂಧೆ: ಅಧಿಕಾರಿಗಳ ಕಣ್ಣೆದುರೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ! ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ, ಆದರ್ಶ ಶಾಲೆ, ಮೊರಾರ್ಜಿ ವಸತಿ ಶಾಲೆ, ಸರ್ಕಾರಿ ಐಟಿಐ ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ಸುತ್ತಮುತ್ತ ಅಕ್ರಮ ಪೆಟ್ಟಿಗೆ ಅಂಗಡಿಗಳ ಹಾವಳಿ ಮಿತಿ ಮೀರಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಂಗಡಿಗಳಲ್ಲಿ ಎಗ್ಗ್ ರೈಸ್ ಜೊತೆಗೆ ಗುಟ್ಕಾ, ಸಿಗರೇಟ್ ಹಾಗೂ ವಿವಿಧ ತಂಬಾಕು ಉತ್ಪನ್ನಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ತಂಬಾಕು ವ್ಯಸನದತ್ತ ಆಕರ್ಷಿತರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುವಂತೆ, ಆದರ್ಶ ಶಾಲೆಯ ವಿದ್ಯಾರ್ಥಿಯೊಬ್ಬನ ತಂದೆ ಪೊಲೀಸ್ ಇಲಾಖೆಗೆ ದೂರು ನೀಡಿದ ಬಳಿಕ ತಮ್ಮ ಮಗನನ್ನು ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ಸೇರಿಸಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಈ ಹಿಂದೆ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ್ದರೂ, ಕೆಲವೇ ದಿನಗಳಲ್ಲಿ ಮತ್ತೆ ತಂಬಾಕು ಉತ್ಪನ್ನಗಳ ಮಾರಾಟ ಆರಂಭವಾಗಿದೆ ಎನ್ನಲಾಗಿದೆ. ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಹಾಗೂ ಸಾರ್ವಜನಿಕ ಸ್ಥಳಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದರೂ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪಗಳಿವೆ. ಇದನ್ನು ಕಂಡೂ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಅಕ್ರಮ ಅಂಗಡಿಗಳನ್ನು ಶಾಶ್ವತವಾಗಿ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.1
- ಸೂಮವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಶಿವಲಿಂಗೇಗೌಡ ಹೇಳಿಕೆ1
- ರೈತ ಆತ್ಮಹತ್ಯೆ, ಉಪತಹಶೀಲ್ದಾರ ಕಛೇರಿ ಎದುರು ಪರಿಹಾರಕ್ಕಾಗಿ ರೈತರ ಪ್ರತಿಭಟನೆ. ರೈತನ ಕುಟುಂಬಕ್ಕೆ ಪರಿಹಾರಕ್ಕಾಗಿ ರೈತರ ಪ್ರತಿಭಟನೆ ಶಿಗ್ಗಾವಿ : ತಾಲೂಕಿನ ಹೋತನಹಳ್ಳಿ ಗ್ರಾಮದ ರೈತ ಮಲ್ಲೇಶಪ್ಪ ತಳವಾರ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿ 10 ತಿಂಗಳು ಕಳೆದರು ಸರ್ಕಾರದಿಂದ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ. ತಕ್ಷಣ ಮೇಲಾಧಿಕಾರಿಗಳು ಪರಿಶೀಲಿಸಿ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಂಕಾಪುರ ಉಪತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕುಟುಂಬಕ್ಕೆ ಆಸರೆಯಾದ ರೈತ ಸಾಲಕ್ಕೆ ಸಿಲುಕಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ, ಮಕ್ಕಳು ಬದುಕು ಸಾಗಿಸುವುದು ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಈ ವರೆಗೆ ಯಾವುದೇ ವರದಿ ಕಳುಹಿಸಿಲ್ಲ. ಅಧಿಕಾರಿಗಳ ನಿರ್ಲಕ್ಷತೆಯಿಂದ ಬಡ ಕುಟುಂಬಕ್ಕೆ ಪರಿಹಾರ ಮಂಜುರಾತಿ ವಿಳಂಬವಾಗಿದೆ. ಹೀಗಾಗಿ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಉಪತಹಶೀಲ್ದಾರ್ ಕಚೇರಿ ಬೀಗ ಹಾಕಿದ ಹಿನ್ನೆಲೆಯಲ್ಲಿ ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ ಹಾಗೂ ಸಿಬ್ಬಂದಿ ಹೂರಗೆ ಉಳಿಯಬೇಕಾಯಿತು. ಸುತ್ತಲಿನ ಗ್ರಾಮಗಳ ಸಾರ್ವಜನಿಕರು ತಮ್ಮ ದಾಖಲಾತಿ ಪಡೆಯಲು ಬಂದು ಮರಳಿ ಹೋಗಬೇಕಾಯಿತು. ಕೆಲವರು ಕಾದು ಬೇಸರಗೊಂಡರು. ಎಸ್.ಐ.ಆರ್ ಮಾಡುವ ನೌಕರರು ಸಹ ಕಾಯ್ದು ಕುಳಿತು ಮರಳಿ ಹೋದರು. ಹೀಗಾಗಿ ಕೆಲಸ ಕಾರ್ಯಗಳಿಗೆ ಅಡೆತಡೆಯಾಯಿತು. ಆದರೂ ರೈತರು ಮೇಲಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಕೃಷಿ ಅಧಿಕಾರಿ ಶಿವಕುಮಾರ ಶಿಡೇನೂರ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಸ್ಪಂದಿಸಿ ತಕ್ಷಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇನೆ. ರೈತನ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಲಾಗುತ್ತದೆ ಎಂದಾಗಿ ಪ್ರತಿಭಟನೆ ಹಿಂದರು. ರೈತ ಮುಖಂಡರಾದ ಶಶಿಧರ ಹೊಣ್ಣನ್ನವರ , ಶಿವಾನಂದ ತೊಂಡೂರ, ಉಮೇಶ ಗುಳೇದ, ಚಂದ್ರಣ್ಣ ಬೆಳವತ್ತಿ, ಶಂಕ್ರಣ್ಣ ಗಂಗಣ್ಣವರ, ಬಾಪುಗೌಡ ಪಾಟೀಲ, ದೇವಣ್ಣ ಹಳವಳ್ಳಿ, ಶಂಭಣ್ಣ ಕುರಗೋಡಿ, ಬಸವರಾಜ ನಾರಾಯಣಪುರ, ಚಂದ್ರಣ್ಣ ತಳವಾರ, ಮೃತ ರೈತನ ಪತ್ನಿ ಕವಿತಾ ಅವರ ಕುಟುಂಬದ ಸದಸ್ಯರು, ವಿವಿಧ ಗ್ರಾಮಗಳ ರೈತರು ಇದ್ದರು.1
- ಕೂಡ್ಲಿಗಿ : " ಸಂಘಟನಾ ಸೃಜನ ಅಭಿಯಾನ " ಪಕ್ಷದ ಗಣ್ಯಾತಿ ಗಣ್ಯರು ಭಾಗಿ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : " ಸಂಘಟನಾ ಸೃಜನ ಅಭಿಯಾನ " ಪಕ್ಷದ ಗಣ್ಯಾತಿ ಗಣ್ಯರು ಭಾಗಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಜುಲೈ 30 ರಂದು. ಕಾಂಗ್ರೆಸ್ ಪಕ್ಷದ ವಿವಿದ ವಿಭಾಗಗಳ ನಾಯಕರ ಆಯ್ಕೆ , ಹಾಗೂ ಪಕ್ಷ ಸಂಘಟನೆಗಾಗಿ ಆಯೋಜಿಸಲಾಗಿದ್ದ. ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಜರುಗಿದ , ಸಂಘಟನೆ ಸೃಜನ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಟಿಟಿಸಿಸಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಸಲಯಾ ಸಮಿತಿಯ ಹಿರಿಯರು. ವೀಕ್ಷಕರಾದ ಪಕ್ಷದ ರಾಷ್ಟ್ರೀಯ ನಾಯಕರಾದ ಹರಕರ್ ವೇಣುಗೋಪಾಲ್ ರಾವ್ ರವರು , ಪಟ್ಟಣಕ್ಕೆ ಆಗಮಿಸಿ ಸಭೆಯಲ್ಲಿ ಭಾಗವಹಿಸಿದ್ದರು. ವೇಣುಗೋಪಾಲರವರನ್ನು , ಹಾಗೂ ಅವರೊಟ್ಟಿಗೆ ಆಗಮಿಸಿದ್ದ ಪಕ್ಷದ ಹಿರಿಯರನ್ನು ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹೂ ಗುಚ್ಚ ನೀಡಿ ಆತ್ಮೀಯತೆಯಿಂದ ಬರಮಾಡಿಕೊಂಡರು. ಸಭೆಯಲ್ಲಿ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್ , ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷರು ಹಾಗು ಮಾಜಿ ಶಾಸಕರಾದ ಶಿರಾಜ್ ಶೇಖ್ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವಾಗಿ ಚರ್ಚಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ , ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಕೃತಯುಗ, ತ್ರೇತಾಯುಗ,ದ್ವಾಪರಯುಗದಿಂದ ಗುರುಶಿಷ್ಯರ ಪರಂಪರೆ ಕಾಯುತ್ತೇವೆ. ಚಳ್ಳಕೆರೆ:ಪರಿಶುದ್ಧ ಮನಸ್ಸಿನಿಂದ ಗುರು ಸ್ಮರಣೆ ಮಾಡುವವರು ಬದುಕಿನ ಯಶಸ್ವಿ ಕಂಡುಕೊಳ್ಳುತ್ತಾರೆ ಎಂದು ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು. ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ಮಾರ್ಗದಲ್ಲಿ ಇರುವ ಎಸ್ಆರ್ ಎಸ್ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಗುರುಪೂರ್ಣಿಮೆ ಅಂಗವಾಗಿ ನೂರಾರು ವಿದ್ಯಾರ್ಥಿಗಳಿಂದ ಹೆತ್ತವರಿಗೆ ಹಮ್ಮಿಕೊಂಡಿದ್ದ ಪಾದಪೂಜೆ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದರು. ತಂದೆ,ತಾಯಿ ಮತ್ತು ವಿದ್ಯೆ ಕಲಿಸುವ ಗುರುವಿನಲ್ಲಿ ದೈವ ಸ್ವರೂಪ ಕಂಡುಕೊಳ್ಳುವ ಸ್ಮರಣೆ ನಮ್ಮದಾಗಬೇಕು. ಕೃತಯುಗ, ತ್ರೇತಾಯುಗ,ದ್ವಾಪರಯುಗದಿಂದ ಗುರುಶಿಷ್ಯರ ಪರಂಪರೆ ಕಾಯುತ್ತೇವೆ.ಗುರು ಗೋವಿಂದಭಟ್ಟರ ಶಿಷ್ಯ ಸಮನ್ವಯತೆಯ ಕವಿ ಸಂತ ಶಶಿನಾಳ ಶರೀಫರು ಎನ್ನುವ ಸಂಬಂಧದಲ್ಲಿ ಜಾತಿ,ಧರ್ಮ ಮೀರಿದ ಗುರುಶಿಷ್ಯರ ಸಂಬಂಧ ಸಮಾಜಕ್ಕೆ ಶ್ರೇಷ್ಠವಾಗಿದೆ. ಮಲೆನಾಡಿನ ಕವಿ ಕುವೆಂಪು ತಮ್ಮ ರಾಮಾಯಣ ದರ್ಶನಂ ಕೃತಿಯನ್ನು ವಿದ್ಯಾ ಗುರುಗಳಾದ ತಳುಕಿನ ಟಿ.ಎಸ್. ವೆಂಕಣ್ಣಯ್ಯ ಅವರಿಗೆ ಅರ್ಪಿಸಿ ದಾಖಲೆಯಾಗಿ ಉಳಿಸಿದ್ದಾರೆ. ಆದರೆ,ಹಿರಿಯರಿಗೆ ಗೌರವ ತೋರದೆ ಗುರು ಎನ್ನುವ ಭಕ್ತಿ ಭಾವನೆ ಇಲ್ಲದ ಪ್ರಸ್ತುತ ಕಲಿಯುಗದಲ್ಲಿ ಸಮಾಜದ ತಲ್ಲಣಗಳನ್ನು ಕಾಣುತ್ತೇವೆ. ಮಕ್ಕಳು ಹೆಚ್ಚು ಅಂಕಪಡೆದು ಉದ್ಯೋಗಸ್ಥರಾಗಬೇಕು ಎನ್ನುವ ಆಸೆಯ ಜತೆಗೆ,ಒಳ್ಳೆಯ ಸಂಸ್ಕಾರ ಮತ್ತು ಸದ್ಗುಣಗಳು ಕಲಿಸುವ ಜವಾಬ್ದಾರಿ ಪಾಲಕರು ಮನೆಯಲ್ಲಿ ಒಂದು ಭಾಗವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಮಾತನಾಡಿ, ಬುದ್ದ ತನ್ನ ಲೋಕದ ಜ್ಞಾನವನ್ನು ಐದು ಜನ ಶಿಷ್ಯರಿಗೆ ಹಂಚಿಕೊಂಡ ದಿನವನ್ನು ಗುರುಪೂರ್ಣಿಮೆ ದಿನವಾಗಿ ಆಚರಿಸುತ್ತೇವೆ. ವಿದ್ಯೆ ಜತೆಗೆ ಸಂಸ್ಕಾರ, ವಿನಯತೆ ಇದ್ದಾಗ ಮಾತ್ರ ಬದುಕಿನ ಸಾರ್ಥಕತೆ ಆಗುತ್ತದೆ. ಹೆತ್ತವರ ಪರಿಶ್ರಮ ಮಕ್ಕಳಿಗೆ ಅರ್ಥವಾಗಬೇಕು. ಹೆತ್ತವರ ಪಾದ ಪೂಜೆಯಿಂದ ಕುಟುಂಬ ಸಂಬಂಧ ತಿಳಿಯಬೇಕು. ಹಿರಿಯರು ಮತ್ತು ಗುರುಗಳ ಆರೈಕೆ ಪಡೆಯು ಭಾವನೆ ರೂಢಿಸಿಕೊಳ್ಳಬೇಕು. ಶಾಲಾ ಹಂತದಲ್ಲಿ ಪಾದ ಪೂಜೆ ಕಾರ್ಯಕ್ಕೆ ಪಾಲಕರಿಂದ ಒಳ್ಳೆಯ ಸ್ಪಂದನೆ ಇದೆ ಎಂದು ಸ್ಮರಿಸಿದರು. ಪ್ರಾಚಾರ್ಯ ಬಿ.ಎಸ್. ವಿಜಯ್ ಸೇರಿ ನೂರಾರು ಪಾಲಕರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.1
- ಮಾದ್ಯಮದವರಿಗೆ ಕೊಲೆ ಬೆದರಿಕೆ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ. ಮಾದ್ಯಮದವರಿಗೆ ಕೊಲೆ ಬೆದರಿಕೆ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ..1