Shuru
Apke Nagar Ki App…
ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ಸಚಿವರಿಗೆ ಶುಭ ಕೋರಿದ ಶಾಸಕ ದರ್ಶನ್‌ಧ್ರುವನಾರಾಯಣ್ ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ಸಚಿವರಿಗೆ ಶುಭ ಕೋರಿದ ಶಾಸಕ ದರ್ಶನ್‌ಧ್ರುವನಾರಾಯಣ್ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ಬೆಂಗಳೂರಿನ ವಿಧಾನಸೌಧದ 2 ಮಹಡಿಯ ಕೊಠಡಿ ಸಂಖ್ಯೆ 244-245 ರಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ ಸಚಿವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಾವೇರಪ್ಪ ಇತರರು ಹಾಜರಿದ್ದರು.
Nanjunda Nayak
ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ಸಚಿವರಿಗೆ ಶುಭ ಕೋರಿದ ಶಾಸಕ ದರ್ಶನ್‌ಧ್ರುವನಾರಾಯಣ್ ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ಸಚಿವರಿಗೆ ಶುಭ ಕೋರಿದ ಶಾಸಕ ದರ್ಶನ್‌ಧ್ರುವನಾರಾಯಣ್ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ಬೆಂಗಳೂರಿನ ವಿಧಾನಸೌಧದ 2 ಮಹಡಿಯ ಕೊಠಡಿ ಸಂಖ್ಯೆ 244-245 ರಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ ಸಚಿವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಾವೇರಪ್ಪ ಇತರರು ಹಾಜರಿದ್ದರು.
More news from ಕರ್ನಾಟಕ and nearby areas
- ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ತಾಲೂಕಿನ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಅಬ್ಕಾರಿ ಇಲಾಖೆಯ ಉಪ ಆಯುಕ್ತ ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಬೇಡ ಬೇಡ ಅನಧಿಕೃತ ಬಾರ್ ಅಂಗಡಿ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ ಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಒಂದು ಮದ್ಯಂಗಡಿವಿದ್ದು, ಅಬ್ಕಾರಿ ಇಲಾಖೆ ಮತ್ತೊಂದು ಮದ್ಯಂಗಡಿ ತೆರೆಯಲು ಹೊರಟಿದ್ದಾರೆ. ಈಗಾಗಲೇ ಸುತ್ತ ಮುತ್ತಲಿನ ಗ್ರಾಮಸ್ಥರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ ಬಾರ್ ಅಂಗಡಿ ಸಾಕಾಗಿದೆ. ಮತ್ತೊಂದು ಮದ್ಯಂಗಡಿ ಏಕೆ ಬೇಕಿದೆ ? ಇದು ಒಂದು ದುರಂತವೇ ಸರಿ. ಅಧಿಕಾರಿಗಳು ಶಕ್ತಿ ಇದ್ದರೆ ಇನ್ನೊಂದು ಮದ್ಯಂಗಡಿ ತೆರೆಯಲಿ. ಜನರಿಗೆ ಆಸ್ಪತ್ರೆ, ಶಿಕ್ಷಣ ವ್ಯವಸ್ಥೆ, ಮೆಡಿಕಲ್ ವ್ಯವಸ್ಥೆ ಮಾಡಲಿ ಅದನ್ನು ಬಿಟ್ಟು ಒಂದೇ ಗ್ರಾಮದಲ್ಲಿ ಎರಡು ಬಾರ್‌ಗಳನ್ನು ತೆರೆಯಲು ಮುಂದಾಗಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಮತ್ತೊಂದು ಮತ್ತೊಂದು ಬಾರ್ ಅಂಗಡಿ ತೆರೆದರೆ ಜನರ ಗತಿಯೇನು ಆಗಬೇಕು. ನೂತನವಾಗಿ ಆರಂಭಿಸಲು ಹೊರಟಿರುವ ಬಾರ್ ಅಂಗಡಿ ದಾಖಲೆಗಳು ವ್ಯಾತ್ಯಾಸವಾಗಿರುತ್ತವೆ. ಅದನ್ನು ಪರಿಶೀಲಿಸಿ ನೂತನ ಬಾರ್ ಅಂಗಡಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಮಸಮುದ್ರ ಬಾಬು, ಉಮೇಶ, ಪ್ರಧಾನ ಕಾರ್ಯದರ್ಶಿ ಅರ್ಜುನ, ಕಾರ್ಮಿಕ ಅಧ್ಯಕ್ಷ ಹರೀಶ್ ನಾಯಕ, ಟೌನ್ ಅಧ್ಯಕ್ಷ ಅಫ್ನನ್, ಮಹೇಂದ್ರ, ರಿಜ್ವಾನ್, ಚಾಂದು, ಸಿದ್ದರಾಜು, ಅಬ್ದುಲ್‌ಮನಸಿಫ್, ಮೋಸಿನ್, ಸುಹೇಲ್ ಪಾಷ, ಕೇಶವಮೂರ್ತಿ, ಮೂಡಹೊಸಳ್ಳಿ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.4
- ಗುಂಡ್ಲುಪೇಟೆಯಲ್ಲಿ ಇನ್ಫ್ಲುಯೆನ್ಸಾ (H1N1) ಕುರಿತು ಜಾಗೃತಿ: ಆತಂಕಪಡದಂತೆ ಆರೋಗ್ಯ ಇಲಾಖೆ ಮನವಿ. ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಇನ್ಫ್ಲುಯೆನ್ಸಾ (H1N1) ಪ್ರಕರಣಗಳ ಕುರಿತು ಸಾರ್ವಜನಿಕರು ಆತಂಕಪಡದೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಈ ಕುರಿತು ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಂದರೇಶ್, ಎಎಂಒ ಡಾ.ಮಂಜುನಾಥ್ ಹಾಗೂ ಗುಂಡ್ಲುಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಅವರೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ತಲೆನೋವು, ಮೈ-ಕೈ ನೋವು ಹಾಗೂ ದೌರ್ಬಲ್ಯ ಮುಂತಾದ ಲಕ್ಷಣಗಳು ಕಾಣಿಸಿಕೊಂಡರೆ ಆತಂಕಪಡದೆ ಸಮೀಪದ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ತಿಳಿಸಲಾಗಿದೆ. ಆರೋಗ್ಯ ಇಲಾಖೆ ಅಂಕಿಅಂಶದ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿ 2026ರ ಆಗಸ್ಟ್ 22ರವರೆಗೆ 20 ಇನ್ಫ್ಲುಯೆನ್ಸಾ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 32 ಹಾಗೂ 2024ರಲ್ಲಿ 33 ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿ 2026ರ ಆಗಸ್ಟ್ 22ರವರೆಗೆ ಒಟ್ಟು 4,212 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ಅನಗತ್ಯ ಭಯಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಬೇಕು. ಸೀನುವಾಗ ಮತ್ತು ಕೆಮ್ಮುವಾಗ ಮೂಗು-ಬಾಯಿ ಮುಚ್ಚಿಕೊಳ್ಳುವುದು, ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು ಹಾಗೂ ರೋಗಲಕ್ಷಣಗಳಿದ್ದಲ್ಲಿ ಇತರರಿಂದ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. “ಆರೋಗ್ಯಕರ ಗುಂಡ್ಲುಪೇಟೆಗಾಗಿ ಸಾರ್ವಜನಿಕರ ಸಹಕಾರ ಅಗತ್ಯ” ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.1
- ಕೌದಳ್ಳಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ: ಭಾವೈಕ್ಯತೆ ಮೆರೆದ ಸೌಹಾರ್ದ ಮೆರವಣಿಗೆ ಹನೂರು:ತಾಲೂಕಿನ ಕೌದಳ್ಳಿ ಗ್ರಾಮದ ಮುಸ್ಲಿಂ ಬಾಂಧವರ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ 'ಈದ್ ಮಿಲಾದ್' ಹಬ್ಬವನ್ನು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಗ್ರಾಮದ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಕುರಾನ್ ಪಠಣ ಮತ್ತು ಪ್ರವಾದಿಯವರ ಜೀವನ ಸಂದೇಶಗಳ ಕುರಿತು ಧರ್ಮೋಪದೇಶ ಕಾರ್ಯಕ್ರಮಗಳು ಜರುಗಿದವು. ಸೌಹಾರ್ದ ಮೆರವಣಿಗೆ ಬಳಿಕ ಬಣ್ಣ ಬಣ್ಣದ ದೀಪಗಳು, ತೋರಣಗಳು ಮತ್ತು ಧ್ವಜಗಳಿಂದ ಅಲಂಕೃತಗೊಂಡಿದ್ದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರುವ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಯುವಕರು ಮತ್ತು ಮಕ್ಕಳು ಪ್ರವಾದಿಯವರ ಶಾಂತಿ, ಪ್ರೀತಿ, ಸಹೋದರತೆಯ ಸಂದೇಶಗಳನ್ನು ಸಾರುವ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಭಾವೈಕ್ಯತೆಯ ಸಂಕೇತ ಗ್ರಾಮದ ವಿವಿಧ ಧರ್ಮಗಳ ಮುಖಂಡರು, ಹಿಂದೂ-ಕ್ರೈಸ್ತ ಬಾಂಧವರು ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಮೆರೆದರು. ಈದ್ ಮಿಲಾದ್ ಕೇವಲ ಮುಸ್ಲಿಂ ಸಮುದಾಯದ ಹಬ್ಬವಲ್ಲ, ಎಲ್ಲಾ ಧರ್ಮಗಳ ಸೌಹಾರ್ದತೆಯ ಪ್ರತೀಕವಾಗಿದೆ ಎಂಬುದನ್ನು ಈ ಆಚರಣೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರು, ಮಸೀದಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಅಂತ್ಯಗೊಂಡಿತು.2
- ಮೈಕ್ರೋ ಗ್ರೀನ್ ಬೆಳೆದು ತಿಂಗಳಿಗೆ ₹50 ಸಾವಿರ ಸಂಪಾದನೆ; ವಿನಯ್‌ರ ವಿನೂತನ ಕೃಷಿ ಮಾದರಿ ಮೈಸೂರು: ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಯುವಕರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಸಾಲಿನಲ್ಲಿ ನಂಜನಗೂಡು ನಗರದ ಎಂಬಿಎ ಪದವೀಧರ ವಿನಯ್ ಅವರು ಮೈಸೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೈಕ್ರೋ ಗ್ರೀನ್ ಕೃಷಿಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶಭರಿತ ಬೆಳೆಗಳನ್ನು ಉತ್ಪಾದಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ. ವಿನಯ್ ಅವರು ಸುಮಾರು ₹8 ಲಕ್ಷ ವೆಚ್ಚದಲ್ಲಿ ಮೈಕ್ರೋ ಗ್ರೀನ್ ಬೆಳೆಯಲು ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಎಂಟು ಬಗೆಯ ಧಾನ್ಯಗಳಾದ , ಜೋಳ, ರಾಗಿ, ಸಜ್ಜೆ, ಮೆಂತ್ಯೆ, ಸಾಸಿವೆ, ಮೂಲಂಗಿ ಹಾಗೂ ಬಿಟ್ರೋಟ್ ಮುಂತಾದ ಬೀಜಗಳಿಂದ ಮೈಕ್ರೋ ಗ್ರೀನ್‌ಗಳನ್ನು ಬೆಳೆಸುತ್ತಿದ್ದಾರೆ. ಬೀಜ ಬಿತ್ತಿದ ನಂತರ ಕೇವಲ 10ರಿಂದ 15 ದಿನಗಳಲ್ಲಿ ಪೈರು ಸಿದ್ಧವಾಗುವುದು ಈ ಕೃಷಿಯ ವಿಶೇಷತೆ. ಸಾಮಾನ್ಯ ಕೃಷಿಗೆ ಹೋಲಿಸಿದರೆ ಕಡಿಮೆ ಜಾಗ, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ಉತ್ಪಾದನೆ ಪಡೆಯಬಹುದಾಗಿರುವುದರಿಂದ ಮೈಕ್ರೋ ಗ್ರೀನ್ ಕೃಷಿ ಯುವಕರನ್ನು ಆಕರ್ಷಿಸುತ್ತಿದೆ. ವಿನಯ್ ಅವರು ಬೆಳೆದ ಮೈಕ್ರೋ ಗ್ರೀನ್‌ಗಳನ್ನು ಮೈಸೂರು ಹಾಗೂ ನಂಜನಗೂಡು ಭಾಗದ ಜಿಮ್‌ಗಳು, ಮನೆಗಳು ಹಾಗೂ ಆರೋಗ್ಯ ಕಾಳಜಿ ಹೊಂದಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮೈಕ್ರೋ ಗ್ರೀನ್‌ಗಳಲ್ಲಿ ಎಲೆಗಳು ಸಂಪೂರ್ಣವಾಗಿ ಬೆಳೆಯುವ ಮುನ್ನವೇ ಕೊಯ್ಲು ಮಾಡುವುದರಿಂದ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಆಹಾರದ ನಾರಿನಾಂಶ ದೊರೆಯುತ್ತವೆ. ನಿಯಮಿತ ಆಹಾರದ ಭಾಗವಾಗಿ ಬಳಸುವುದರಿಂದ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು. ಸಲಾಡ್, ಸ್ಯಾಂಡ್‌ವಿಚ್, ಸೂಪ್ ಹಾಗೂ ವಿವಿಧ ಆಹಾರ ಪದಾರ್ಥಗಳೊಂದಿಗೆ ಇವುಗಳನ್ನು ಸೇವಿಸಬಹುದು. ಕೃಷಿ ಎಂದರೆ ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಲ್ಲ ಎಂಬುದನ್ನು ವಿನಯ್ ಅವರ ಪ್ರಯತ್ನ ತೋರಿಸಿಕೊಟ್ಟಿದೆ. ಎಂಬಿಎ ಪದವಿ ಪಡೆದ ಬಳಿಕ ಉದ್ಯೋಗದ ಬದಲು ಕೃಷಿಯಲ್ಲೇ ಹೊಸ ಅವಕಾಶ ಕಂಡುಕೊಂಡಿರುವ ಅವರು, ಕಡಿಮೆ ಅವಧಿಯ ಬೆಳೆಗಳ ಮೂಲಕ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಮೈಕ್ರೋ ಗ್ರೀನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. +91 96111 89599 ಖರೀದಿ ಮಾಡಲು ಬಯಸುವವರು ಸಂಪರ್ಕ ಮಾಡಬಹುದು1
- ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಎಸ್ ದೊಡ್ಡಿ ಬಳಿ ಮನೆಯ ಬಳಿ ಚಿರತೆ ದಾಳಿ: ಹಸುವಿನ ಕರು ನಾಪತ್ತೆ ಹನೂರು: ತಾಲೂಕಿನ ರಾಮಾಪುರ ಹೋಬಳಿಯ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಯ ಸಮೀಪವೇ ಚಿರತೆ ಕಾಣಿಸಿಕೊಂಡು ಹಸುವಿನ ಕರುವನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಮನೆಯ ಬಳಿ ಕಟ್ಟಿಹಾಕಲಾಗಿದ್ದ ಹಸುವಿನ ಕರುವನ್ನು ಚಿರತೆ ಎತ್ತಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಕರುವಿನ ಬಾಲ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.2
- All About,Who shud be held responsible/Accountable for all Kinds of Irregularities in #KSBA #Bengaluru *ಭಾರತ ನಲ್ಲಿ ವೈರಲ್*1
- ಹಲಗೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ. ಮಳವಳ್ಳಿ:- ತಮಿಳುನಾಡಿಗೆ ಮತ್ತೆ ಒಂಬತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವುದನ್ನು ವಿರೋಧಿಸಿ ತಮಿಳುನಾಡಿಗೆ ತಕ್ಷಣವೇ ನೀರುಬಿಡುತ್ತಿರುವುದನ್ನು ನಿಲ್ಲಿಸಿ, ರೈತರಿಗೆ ಬೆಳೆ ಬೆಳೆಯಲು ನೀರು ಬಿಡುವಂತೆ ಆಗ್ರಹಿಸಿ ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಹಲಗೂರು ವೃತ್ತದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಿರೀಶ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ಜುಲೈ 29ರಿಂದ ಆಗಸ್ಟ್ 24ರವರೆಗೆ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆಆದೇಶ ನೀಡಿದ ಹಿನ್ನೆಲೆ ನೀರು ಬಿಟ್ಟಿದ್ದರೂ ಸಹ, ನೆನ್ನೆಯಿಂದ ಮತ್ತೆ ಪ್ರತಿದಿನ9,000 ಕ್ಯೂಸೆಕ್ಸ್ ನೀರು ಬಿಡುವಂತೆ ಹೊಸ ಆದೇಶ ನೀಡಿದೆ. ಇದು ನಮ್ಮ ರಾಜ್ಯದ ಜನರಿಗೆ, ಜಿಲ್ಲೆಯ ಜನತೆಗೆ, ನಮ್ಮ ನಾಡಿನ ರೈತರಿಗೆ, ಮರಣ ಶಾಸನ ವಿದ್ದಂತೆ. ಏಕೆಂದರೆ ಈಗಾಗಲೇ ಮುಂಗಾರು ಮಳೆ ಬಂದಿಲ್ಲ, ನಮ್ಮ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಆದರೂ ನಮ್ಮ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಈ ರಾಜ್ಯದ ರೈತರಿಗೆ ಬರ ಪರಿಹಾರ ನೀಡಿಲ್ಲ. ಆದುದರಿಂದ ನಾವು ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಿ, ಈ ರಾಜ್ಯದ ಜನರಿಗೆ ರೈತರ ವ್ಯವಸಾಯಕ್ಕಾಗಿ ನೀರು ಬಿಡಬೇಕಾಗಿದೆ. ತಪ್ಪಿದಲ್ಲಿ ರಾಜ್ಯಾದ್ಯಂತ ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದ 30 ಸಂಸದರು ಕಾವೇರಿ ನೀರಿನ ವಿಚಾರದಲ್ಲಿ, ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ, ರೈತರಿಗೆ ಬೆಳೆ ಬೆಳೆಯಲು ಸಹಕಾರಿಯಾಗಿ ಎಂದರು. ಸ್ಥಳದಲ್ಲಿದ್ದ ನಾಡಕಚೇರಿ ಉಪ ತಹಸೀಲ್ದಾರ್ ಕೆ. ನಟರಾಜ್ ರವರಿಗೆ ಮನವಿಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಅವರು ಮಾತನಾಡಿ, ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ,ಕೇಂದ್ರಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದೇ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸಂತೋಷ್, ಚಂದ್ರು, ಬಸಂತ್ ಕುಮಾರ್, ಪೂರ್ಣಚಂದ್ರ ,ಮುನಿ ಮಹಾದೇವಸ್ವಾಮಿ, ವಾಸೀಮ್ಅಕ್ರಂ , ಅಬ್ದುಲ್ ರಹಮಾನ್, ರಿಯಾಜ್, ಸೇರಿದಂತೆ ಇತರರು ಇದ್ದರು1
- ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ ಆ.28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಎಸ್ ಸಿ/ಎಸ್ ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ: ಸಿ.ಕೆ.ರಾಮಸ್ವಾಮಿ ವರದಿ: ಹೊಮ್ಮನಂಜುಂಡನಾಯಕ. ಜಿಲ್ಲೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಚಾಮರಾಜನಗರ: ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಕೇಂದ್ರ ನಮಿತಿ ಬೆಂಗಳೂರು ನೇತೃತ್ವದಲ್ಲಿ ಆ. 28 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.8, ಶೃಂಗಾರ್ ಪ್ಯಾಲೇನ್‌ನಲ್ಲಿ ಬೆಳಿಗ್ಗೆ 10:30 ಗಂಟೆಗೆ ಆರಂಭವಾಗುವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಕೊಳ್ಳೇಗಾಲ ಜೇತವನ ವಿಹಾರದ ಭೌದ್ಧ ಬಿಕ್ಕು ಮನೋರಕ್ಷಿತ ಬಂತೇಜಿ ವಹಿಸುವವರು, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸುವವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಸಚಿವರಾದ ಕೆ.ಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್‌ಖರ್ಗೆ, ಶಿವರಾಜ್ ತಂಗಡಗಿ : ಪಿ.ಎಂ.ನರೇಂದ್ರಸ್ವಾಮಿ.ಬಿ. ನಾಗೇಂದ್ರ ರುದ್ರಪ್ಪ ಲಮಾಣಿ, ಕೆ.ಎಸ್.ಬಸವಂತಪ್ಪ, ಟಿ.ರಘುಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸುವವರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 5 ಬಸ್‌ಗಳಲ್ಲಿ ಹೊರಡಲು ವ್ಯವಸ್ಥೆ. ಮಾಡಲಾಗಿದೆ. ಚಾಮರಾಜೇಶ್ವರ ದೇವಸ್ಥಾನ ಮುಂಭಾಗ, ಹೌಸಿಂಗ್ ಬೋರ್ಡ್ ಹತ್ತಿರ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ನೌಕರರು ಭಾಗವಹಿಸಿ ಯಶಸ್ವಿಕೊಳಿಸಿಕೊಡುವಂತೆ ಮನವಿ ಮಾಡಿದರು. ಮಾಜಿ ಅಧ್ಯಕ್ಷ ಮಂಜುನಾಥಪ್ರನನ್ನ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ನಾನು ಕೂಡ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಜಾಗೃತ ನೌಕರರ 6ನೇ ರಾಜ್ಯ ಮಟ್ಟದ ಐಕ್ಯತಾ ಸಮಾವೇಶ ಮಾಡಿ ನೌಕರರು, ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ. ಈ ಸಮಾವೇಶಕ್ಕೆ ರಾಜ್ಯಾದ್ಯಂತ ಸುಮಾರು 50 ಸಾವಿರ ಜನರು ಸೇರುತ್ತಾರೆ ನಮ್ಮ ಜಿಲ್ಲೆಯಿಂದ 500 ಮಂದಿ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ ನಮ್ಮ ಮುಖ್ಯ ಬೇಡಿಕೆಗಳಾದ ಎಸ್ ಸಿ, ಎಸ್‌ಟಿಗಳಿಗೆ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲು ಆಗಬೇಕು. ಕಾನೂನು ವಿದ್ಯಾರ್ಥಿಗಳು, ಇಂಜಿನಿಯರ್‌ರಿಂಗ್ ವಿದ್ಯಾರ್ಥಿಗಳು, ಮೆಡಿಕಲ್ ವಿದ್ಯಾರ್ಥಿಗಳಿಗೆ ಒಳ ಮೀಸಲಾತಿಯಿಂದ ತುಂಬಾ ಇಕ್ಕಟ್ಟಾಗಿದ್ದು, ಸರಿಯಾಗಿ ಜಾತಿ ಪ್ರಮಾಣ ಕೊಡುತ್ತಿಲ್ಲ. ಅದಕ್ಕಾಗೆ 1 ಸಾವಿರದಿಂದ 2 ಸಾವಿರ ರೂ .ವೆಚ್ಚವಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು. ಬಗರ್‌ಹುಕುಂ ಸಾಗುವಳಿಯಲ್ಲಿ ವಿಳಂಬವಾಗುತ್ತಿದೆ. ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳಿಗೆ ಮಂಡಿಸಲಾಗುತ್ತದೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಮಹಾಸಭಾದ ಜಿಲ್ಲಾಧ್ಯಕ್ಷ ಉಮೇಶ್‌ಕುದರ್ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಕಳೆದ 20 ವರ್ಷಗಳಿಂದಲ್ಲೂ ನಿರಂತರವಾಗಿ ಸಮುದಾಯಕ್ಕೆ ಆಗುವ ಎಲ್ಲ ಅನ್ಯಾಯಗಳನ್ನು ತಮ್ಮ ಧ್ವನಿಯ ಮುಖಾಂತರ, ಸಮಾವೇಶಗಳ ಮುಖಾಂತರ ಎಲ್ಲರಿಗೂ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಮ್ಮ ಸಂಘಟನೆಗಳ ವತಿಯಿಂದ ಎಲ್ಲ ರೀತಿ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ಹಿರಿಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯಾಧ್ಯಕ್ಷ ಶಿವಕುಮಾರಯ್ಯ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ವಾಸು, ಎಸ್ ಸಿ, ಎಸ್ ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ನಂಜುಂಡಸ್ವಾಮಿ ಹಾಜರಿದ್ದರು.4