*ಇಂದು ದಿನಾಂಕ :- 31-03-2026 ರಂದು ಜಿಲ್ಲಾ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೀದರ್ ರವರಿಗೆ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ದೀಲಿಪಕುಮಾರ್ ವರ್ಮಾ ರವರ ನೇತೃತ್ವದಲ್ಲಿ ಮನವಿ ಪತ್ರ ನೀಡಲಾಯಿತು. ವಿಷಯ ಏನಂದರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹುಲಸೂರು (SC-353) ತಾಲೂಕಿನ ಈ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ :-(W. P)318/2022(S-RES) ಪ್ರಕರಣದ ಅಂತಿಮ ಆದೇಶ. ಇದರಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾದ ಬಕ್ಕಪ್ಪ ರವರನ್ನು ಮುರಾರ್ಜಿ ದೇಸಾಯಿ ವಸತಿ ಶಾಲೆ ಭಾಲ್ಕಿ (ಹಿಂ. ವ -502) ಖಾಲಿ ಇರುವ ಸ್ಥಳಕ್ಕೆ ನಿಯಕ್ತಿಗೊಳಿಸಿ ಆದೇಶವಾಗಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು, ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಂಘ ರವರ ಆದೇಶ ಸಂಖ್ಯೆ :- KRIES/ADMN/PLMT/22/2024 ದಿ :-23-12-2024 ಕಾರ್ಯನಿರ್ವಾಹಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುತ್ತಾರೆ. ಆದರೂ ಕೂಡ ಹುಲಸೂರು ಮುರಾರ್ಜಿ ದೇಸಾಯಿ ಪ್ರಾಂಶುಪಾಲರಾದ ದಿಗಂಬರ್ ಕಿವುಡೆರವರು ಉಚ್ಚ ನ್ಯಾಯಲಯದ ಆದೇಶವನ್ನು ಗಾಳಿಗೆ ತೂರಿದಲ್ಲದೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಕಾರ್ಯನಿರ್ವಾಹಕ ನಿರ್ದೇಶಕರು ವರ್ಗಾವಣೆ ಮಾಡಿ ಹೊರಡಿಸಿದ ಆದೇಶವನ್ನು ಗಾಳಿಗೆ ದೂರಿ ಮನಬಂದಂಗೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಉಚ್ಚ ನ್ಯಾಯಾಲಯದ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹೊರಡಿಸಿದಂತಹ ಆದೇಶಕ್ಕೆ ಬೆಲೆಕೊಡದ ಪ್ರಾಂಶುಪಾಲರ ಬಗೆ ಕೊಲಂಕುಶವಾಗಿ ತನಿಖೆ ಮಾಡಿ ಕೂಡಲೆ ಅಮಾನತುಗೊಳಿಸಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಕರ್ನಾಟಕ ರಾಜ್ಯ ಹಾಗೂ ಬೀದರ್ ಜಿಲ್ಲಾ ಘಟಕದ ವತಿಯಿಂದ ಬೀದರ್ ಜಿಲ್ಲಾ ಉಪನಿರ್ದೇಶಕರ ಕಛೇರಿಯ ಮುಂದೆ ಒಂದು ದಿನದ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗುವುದರ ಮುಖಾಂತರ ಪ್ರತಿಭಟಿಸಲಾಗುವುದೆಂದು ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದೇವೆ.ಈ ಸಂದರ್ಭದಲ್ಲಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದೀಲಿಪಕುಮಾರ್ ವರ್ಮಾ, ರಾಜ್ಯ ಸಂಘಟನಾ ಸಂಚಾಲಕರಾದ ರಾಜಶೇಖರ್ ಶೇರಿಕರ್, ಬೀದರ್ ದಕ್ಷಿಣ ತಾಲೂಕ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಗರ್, ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಪೀಟರ್ ಲಯನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು... ಜೈ ಭೀಮ್, ನಮೋ ಬುದ್ಧಯ್,ಜೈ ಸಂವಿಧಾನ 🙏🙏🙏💪💪💪*

- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- ಡೆಲಿವರಿ ಬಾಯ್ಸ್ ಮೇಲೆ ವಲಸಿಗ ಸೆಕ್ಯೂರಿಟಿ ಇಂದ ಹಲ್ಲೆ1
- ದೇವನಹಳ್ಳಿ ಆಂಜನೇಯ ಸ್ವಾಮಿ ದೇಗುಲಕ್ಕಾಗಿ ಎರಡು ಗುಂಪುಗಳ ನಡುವೆ ಫೈಟ್. ಅಭಯಾ ವಿರಾಂಜನೇಯಸ್ವಾಮಿ ದೇಗುಲ ವಿಚಾರದಲ್ಲಿ ವಿವಾದ. ಎರಡು ಗುಂಪುಗಳ ನಡುವೆ ದೇಗುಲದ ಅಸ್ತಿತ್ವಕ್ಕಾಗಿ ಗುಂಪು ಘರ್ಷಣೆ. ಎರಡು ಕಡೆ ಗುಂಪು ಘರ್ಷಣೆ ಹಿನ್ನಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ. ದೇವನಹಳ್ಳಿ ತಾಲೂಕಿನ ವಿಜಯಪುರದ ಟೋಲ್ ಗೇಟ್ ಬಳಿ ಇರುವ ಅಭಯಾಂಜನೇಯ ದೇಗುಲ. ಅರ್ಚಕ ಲೋಕನಾಥಚಾರಿ ದೇವಾಲಯದ ನಿರ್ಮಾತೃ ಪ್ರಕಾಶ್ ಕಡೆಯವರ ನಡುವೆ ವಿವಾದ. ವಿಜಯಪುರ ಪಟ್ಟಣ ಪೊಲೀಸರಿಂದ ಪರಿಸ್ಥಿತಿ ತಿಳಿಗೊಳಿಸಲು ಲಘು ಲಾಠಿ ಪ್ರಹಾರ. ಲಾಠಿ ಬೀಸಿ ಗುಂಪುಗಳನ್ನ ಚದುರಿಸಿದ ವಿಜಯಪುರ ಇನ್ಸ್ ಪೆಕ್ಟರ್ ಪ್ರಶಾಂತ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ2
- ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಗಾಲು ಬೇಡ; ಬಡವರಿಗಾಗಿ ನಡೆಯುವ ಕೆಲಸಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ. ಮಾಗಡಿ: ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಹಿತದೃಷ್ಟಿಯಿಂದ ನಿರ್ಮಾಣವಾಗುತ್ತಿರುವ 40 ಕೋಟಿರೂ ವೆಚ್ಚದ ಸರ್ಕಾರಿ ಆಸ್ಪತ್ರೆಯ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ಯಾರೇ ಬೆದರಿಕೆ ಹಾಕಿದರೂ ಅಥವಾ ಗಡುವು ನೀಡಿದರೂ ಕಾನೂನುಬದ್ಧವಾಗಿ ನಡೆಯಬೇಕಾದ ಕೆಲಸಗಳು ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದರು. ಪಟ್ಟಣದಲ್ಲಿ ಬುಧವಾರ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಆಸ್ಪತ್ರೆ ಕಾಮಗಾರಿಯ ಕುರಿತು ಕೇಳಿಬಂದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದ ಜನರ ಆರೋಗ್ಯ ದೃಷ್ಠಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಹಣ ತಂದು ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿಸಲಾಗಿದೆ ಈ ಮಧ್ಯೆ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಪಡಸುವ ಕೆಲಸ ಯಾರು ಮಾಡಬಾರದು ಎಂದರು. ವಿರೋಧ ವ್ಯಕ್ತಪಡಿಸಿದವರಿಗೆ ಟಾಂಗ್: ಎರಡು ವರ್ಷದ ಒಳಗೆ ಆಸ್ಪತ್ರೆ ಪೂರ್ಣಗೊಳಿಸದಿದ್ದರೆ ಆಸ್ಪತ್ರೆ ಬಿಟ್ಟುಕೊಡುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ಕೆಲಸಗಳು ನಿಯಮಾನುಸಾರ ನಡೆಯಲಿವೆ. ಅμÉ್ಟೂಂದು ಅವಸರವಿದ್ದರೆ ಅವರೇ ಕಾಂಟ್ರಾಕ್ಟ್ ಪಡೆದು, ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಲಿ, ಅದಕ್ಕೆ ಬೇಕಾದ ಹಣವನ್ನು ಸರ್ಕಾರ ನೀಡುತ್ತದೆ ಎಂದು ವಿರೋಧಿಗಳಿಗೆ ಸವಾಲು ಹಾಕಿದರು. ಬಡವರಿಗಾಗಿ ಆಸ್ಪತ್ರೆ: ಈ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಬಡವರಿಗಾಗಿ. ನಾನಾಗಲಿ ಅಥವಾ ನನ್ನ ಕುಟುಂಬದವರಾಗಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವುದಿಲ್ಲ. ಆದರೆ ಬಡವರಿಗೆ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇತ್ತೀಚೆಗೆ ಆರೋಪ ಮಾಡಿರುವವರು ಅನಾರೋಗ್ಯಕ್ಕೀಡಾಗಿದ್ದ ವೇಳೆ ಅವರು ಸುಗುಣ ಆಸ್ಪತ್ರೆಗೆ ದಾಖಲಾಗಿದ್ದರು. ಬಡವರು ಅಂತಹ ದುಬಾರಿ ಆಸ್ಪತ್ರೆಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಶಾಸಕರು, ಬಡವರ ಆರೋಗ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಸಹಕಾರ ನೀಡಬೇಕು. ಈ ವಿಚಾರದಲ್ಲಿ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕರು ಟೀಕಾಕಾರರಿಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಗಿನಗೆರೆ ಕುಮಾರು, ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಮಾಜಿ ಸದಸ್ಯರಾದ ಅಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ಎಂ.ಆರ್.ಮಂಜುನಾಥ್, ಪ್ರಶಾಂತ್, ಆನಂದ್, ವಿನೋದ್ ಇತರರು ಇದ್ದರು.1
- Post by Ayub Pasha1
- KOLAR KI.AWAAZ KOUSAR NEWS1
- Post by Chand Pasha2
- ಬೆಂಗಳೂರು ಹೊರವಲಯದ ಆನೇಕಲ್–ಚಂದಾಪುರ ರಸ್ತೆಯ ಮರಸೂರು ಗೇಟ್ ಬಳಿ ಮಂಗಳವಾರ ಟಿಪ್ಪರ್‌ಗೆ ಬೆಂಕಿ ತಗುಲಿ ಆತಂಕಕಾರಿ ಘಟನೆ ನಡೆದಿದೆ. ಬಿಸಿಯ ತಾಪದಿಂದ ಇಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಸಣ್ಣ ಪ್ರಮಾಣದ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ವಾಹನವನ್ನು ಆವರಿಸಿ ಹೊತ್ತಿ ಉರಿದಿದೆ. ಬೆಂಕಿ ಕಾಣುತ್ತಿದ್ದಂತೆಯೇ ಚಾಲಕ ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಟಿಪ್ಪರ್‌ನ ಟೈರ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಡೀಸೆಲ್ ಟ್ಯಾಂಕ್‌ಗೆ ಬೆಂಕಿ ತಗುಲಿದ್ದರಿಂದ ದೊಡ್ಡ ಅನಾಹುತದ ಭೀತಿ ಎದುರಾಯಿತು. ಅದೃಷ್ಟವಶಾತ್ ವಾಹನದಲ್ಲಿ ಯಾವುದೇ ಸರಕು ಇರದ ಕಾರಣ ಹೆಚ್ಚಿನ ಹಾನಿ ತಪ್ಪಿದೆ.1