Shuru
Apke Nagar Ki App…
ಬಾಗಲಕೋಟೆ ಜಿಲ್ಲೆಯ ಹುನಗುಂದದ ಬಸವ ಮಂಟಪದಲ್ಲಿ ಮಾಜಿ ಸಚಿವರಾದ ಲಿಂಗೈಕ್ಯ ಎಸ್.ಆರ್. ಕಾಶಪ್ಪನವರ ಅವರ 24ನೇ ಪುಣ್ಯಸ್ಮರಣೆ ನಿಮಿತ್ತ ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ಸಾಧಕರಿಗೆ ಗೌರವ ಸತ್ಕಾರ ಸಮಾರಂಭ ಜರುಗಿತು. ಈ ಗೌರವ ಸತ್ಕಾರ ಸಮಾರಂಭವನ್ನು ಪೂಜ್ಯರುಗಳು ಉದ್ಘಾಟಿಸಿದರು.
ಶರಣಗೌಡ ಕಂದಕೂರ
ಬಾಗಲಕೋಟೆ ಜಿಲ್ಲೆಯ ಹುನಗುಂದದ ಬಸವ ಮಂಟಪದಲ್ಲಿ ಮಾಜಿ ಸಚಿವರಾದ ಲಿಂಗೈಕ್ಯ ಎಸ್.ಆರ್. ಕಾಶಪ್ಪನವರ ಅವರ 24ನೇ ಪುಣ್ಯಸ್ಮರಣೆ ನಿಮಿತ್ತ ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ಸಾಧಕರಿಗೆ ಗೌರವ ಸತ್ಕಾರ ಸಮಾರಂಭ ಜರುಗಿತು. ಈ ಗೌರವ ಸತ್ಕಾರ ಸಮಾರಂಭವನ್ನು ಪೂಜ್ಯರುಗಳು ಉದ್ಘಾಟಿಸಿದರು.
More news from ಕರ್ನಾಟಕ and nearby areas
- ಗುಳೇದಗುಡ್ಡದ ಭಂಡಾರಿ ಮತ್ತು ರಾಠಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಶುಕ್ರವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆರೂರದ ಸಾಹಿತಿ ಬಸವರಾಜ ಪ್ಯಾಟಿಶೆಟ್ಟರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ನಿರಂತರ ಅಧ್ಯಯನಶೀಲರಾಗಬೇಕು ಮತ್ತು ರಾಷ್ಟ್ರ ಅಭಿಮಾನವನ್ನು ಬೆಳೆಸಿಕೊಂಡು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಬದುಕು ಮುಳ್ಳಿನ ಹಾಸಿಗೆಯಿದ್ದಂತೆ ಎಂದು ಬಣ್ಣಿಸಿದ ಅವರು, ವಿದ್ಯಾರ್ಥಿಗಳು ದೈಹಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜಶೇಖರ ಶೀಲವಂತ ಅವರು ವಿದ್ಯಾರ್ಥಿಗಳ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಮತ್ತು ಪಠ್ಯಕ್ಕೆ ನೀಡುವಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಿ ಸದೃಢ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ವಿಭಾಗದ ಚೇರಮನ್ ಸಿದ್ಲಿಂಗಪ್ಪ ಬರಗುಂಡಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ರಾಜು ತಾಪಡಿಯಾ, ಸುನಿಲ್ ಕರಣಿ, ಲಕ್ಷ್ಮಿನಾರಾಯಣ ಕಾಬ್ರಾ, ಅಮಾತೆಪ್ಪ ಕೊಪ್ಪಳ, ರವೀಂದ್ರ ಅಂಗಡಿ, ಶಾಮಸುಂದರ ಮಾಲಪಾಣಿ, ಪುರುಷೋತ್ತಮ ಝಂವರ, ಎಸ್.ಎಸ್.ನಾಯನೇಗಲಿ, ಪ್ರಾಚಾರ್ಯ ಡಾ.ಎನ್.ವೈ.ಬಡನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.1
- ಮಹಾರಾಷ್ಟ್ರದಲ್ಲಿ ಉಂಟಾಗಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ 1.30 ಲಕ್ಷ ಕ್ಯೂಸೆಕ್ಸ್ ಒಳಹರಿವು ಹರಿದುಬಂದಿದೆ. ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಒಟ್ಟು 10 ಸೇತುವೆಗಳು ಜಲಾವೃತಗೊಂಡಿವೆ.1
- ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ರಾಜ್ಯದ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಜನಸಾಮಾನ್ಯರ ನೆರವಿಗೆ ಬರಲು ಶಂಬುಲಿಂಗ್ ಹಿರೇಮಠ್ ಮುಂದಾಗಿದ್ದಾರೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದ್ದು, ರೈತರು ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ಬರಗಾಲದ ಭವಣೆಯನ್ನು ತಪ್ಪಿಸಲು ಮತ್ತು ರೈತರ ಸಂಕಷ್ಟವನ್ನು ಪಾರು ಮಾಡಲು ತಾವೇ ಸ್ವತಃ ತಪಸ್ಸು ಮಾಡಲು ಸಿದ್ಧವಿರುವುದಾಗಿ ಅವರು ಘೋಷಿಸಿದ್ದಾರೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಉತ್ತಮ ಮಳೆಯಾಗಲೆಂದು ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ನಡೆಸಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ, ಬೆಳೆಗಳು ಸಮೃದ್ಧಿಯಾಗಿ ಬೆಳೆದು ಜನಜೀವನ ಸುಗಮವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಹಿರೇಮಠ್ ಹೇಳಿದ್ದಾರೆ. ಪ್ರಕೃತಿಯ ಅನುಗ್ರಹಕ್ಕಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿರುವ ಅವರು, ಕೇವಲ ಪ್ರಾರ್ಥನೆಯಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ, ಮರ ನೆಡುವಿಕೆ ಹಾಗೂ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.1
- ಬಾಗಲಕೋಟೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯು ಶುಕ್ರವಾರ ಕರಾಳ ದಿನಾಚರಣೆ ಆಚರಿಸಿ ಒಂದು ದಿನದ ಮುಷ್ಕರ ನಡೆಸಿದೆ. ಅಕ್ಷರ ದಾಸೋಹ (ಬಿಸಿಯೂಟ) ಯೋಜನೆ ಆರಂಭವಾಗಿ 25 ವರ್ಷಗಳು ಪೂರ್ಣಗೊಂಡಿದ್ದರೂ, ನೌಕರರ ಬದುಕಿನಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಸಂಘ ಆರೋಪಿಸಿದೆ. ನವನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ನೌಕರರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾಕಾರರು 2008ರಿಂದ ಕೇಂದ್ರ ಸರ್ಕಾರ ಬಿಸಿಯೂಟ ನೌಕರರಿಗೆ ಸಮರ್ಪಕ ವೇತನ ಹೆಚ್ಚಳ ಮಾಡದೆ ಶೋಷಣೆ ನಡೆಸುತ್ತಿದೆ ಎಂದು ದೂರಿದರು. ಜೊತೆಗೆ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಯೋಜನೆಯನ್ನು ಹಸ್ತಾಂತರಿಸುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರವು ತನ್ನ ಚುನಾವಣಾ ಭರವಸೆಯಂತೆ ಕಾರ್ಯಕರ್ತೆಯರ ಮಾಸಿಕ ವೇತನವನ್ನು ₹7,000ಕ್ಕೆ ಹೆಚ್ಚಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದರಲ್ಲಿ 6 ಗಂಟೆಗಳ ಕೆಲಸದ ಅವಧಿಯ ಕುರಿತು ಅಧಿಕೃತ ಆದೇಶ, ಎಲ್ಲರಿಗೂ ಆರೋಗ್ಯ ವಿಮೆ, ಮುಖ್ಯ ಅಡುಗೆ ನೌಕರರಿಂದ ಪಿ.ಡಿ.ಒ.ಗೆ ವರ್ಗಾಯಿಸಿರುವ ಜಂಟಿ ಖಾತೆ ಜವಾಬ್ದಾರಿಯನ್ನು ಹಿಂದಿನಂತೆ ಮರುಸ್ಥಾಪಿಸುವುದು, ಖಾಸಗಿ ಸಂಸ್ಥೆಗಳಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವವರಿಗೆ ಉದ್ಯೋಗ ಭದ್ರತೆ ಮತ್ತು ಅಕ್ಷರ ದಾಸೋಹ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸುವುದು ಸೇರಿವೆ. ಇದರೊಂದಿಗೆ ನಿವೃತ್ತ ನೌಕರರಿಗೆ ಮಾಸಿಕ ₹10,000 ಪಿಂಚಣಿ, ಬಾಕಿ ಹಣ ಬಿಡುಗಡೆ ಹಾಗೂ ಸುಸಜ್ಜಿತ ಮತ್ತು ಸ್ವಚ್ಛ ಅಡುಗೆ ಕೇಂದ್ರಗಳನ್ನು ನಿರ್ಮಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.1
- ಬಾಗಲಕೋಟೆ ಮುಳುಗಡೆ ನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಹೆಚ್. ಶಿವರಾಮೇಗೌಡರ ಬಣವು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಮುಳುಗಡೆ ಸಂತ್ರಸ್ತರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಮೀಸಲಿಟ್ಟ ಕೈಗಾರಿಕಾ ನಿವೇಶನಗಳಲ್ಲಿ ಯಾವುದೇ ಉತ್ಪಾದನಾ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಸಂಘಟನೆ ದೂರಿದೆ. ಈ ನಿವೇಶನಗಳ ಬಳಕೆಯಾಗದಿರುವ ಕುರಿತು ತೃತೀಯ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕೆಂದು ಕರವೇ ಆಗ್ರಹಿಸಿದೆ. ನಿಯಮ ಉಲ್ಲಂಘಿಸಿದವರಿಂದ ನಿವೇಶನಗಳನ್ನು ವಾಪಸ್ ಪಡೆದು, ಅವುಗಳಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳು ಮತ್ತು ಹೊಸ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. 'ಮುಳುಗಿದ್ದು ಬಾಗಲಕೋಟೆ... ಬೆಳೆದಿದ್ದು ವಿಜಯಪುರ' ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಂಘಟನೆಯು, ಈ ಸಂಬಂಧ ಸರ್ಕಾರಕ್ಕೆ ಮನವಿಯನ್ನು ಕೂಡ ಸಲ್ಲಿಸಿದೆ.1
- ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಎಪಿಎಮ್‌ಸಿ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಕುಕನೂರು ತಾಲೂಕು ಘಟಕ, ಯುವ ಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ, ಆದೇಶ ಪತ್ರ ಹಾಗೂ ಸದಸ್ಯತ್ವ ಕಾರ್ಡ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಅವರು, ಬಣಜಿಗ ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಏಕತೆಯಿಂದ ಮುನ್ನಡೆದಾಗ ಮಾತ್ರ ನಮ್ಮ ಸಮಾಜ ಬಲವರ್ಧನೆಗೊಂಡು ಉನ್ನತ ಸ್ಥಿತಿಗೆ ಏರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಂಘಟನೆಯಲ್ಲಿ ಯಾರೂ ಮೇಲು-ಕೀಳು ಎಂಬ ಭಿನ್ನಾಭಿಪ್ರಾಯ ಹೊಂದಬಾರದು ಹಾಗೂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವವರು ಅಹಂಕಾರದಿಂದ ನಡೆದುಕೊಳ್ಳದೆ ಸಮಾಜದ ಸೇವಕರಾಗಿ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಬಂಗಾರ ಶೆಟ್ರು ಮಾತನಾಡಿ, ಒಳಜಗಳ ಮರೆತು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಬಣಜಿಗ ಸಮಾಜವು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಬಸವತತ್ವ ಮತ್ತು ಲಿಂಗಾಯತ ಧರ್ಮದ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಈ ಸಮಾಜದ ಧ್ಯೇಯಗಳನ್ನು ಉಳಿಸಿ ಬೆಳೆಸಲು ಸಮಾಜದ ಯುವಕರು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು. ಇದೇ ವೇಳೆ ರಾಜ್ಯ ಕಾರ್ಯಕಾರಣಿ ಸದಸ್ಯ ಅಂದಾನಪ್ಪ ಅಂಗಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವನಾಥ್ ಮಳಗಿ ಹಾಗೂ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಂಗಣ್ಣ ತೆಂಗಿನಕಾಯಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಬಸವರಾಜ ಜೋಳದ, ವಿಜಯಕುಮಾರ ಕರಡಿ, ಪ್ರಭು ಹೊಸಅಂಗಡಿ, ಶರಣಪ್ಪ ಗದಗಿನ, ಈಶಪ್ಪ ಅಂಗಡಿ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಶರಣಪ್ಪ ಅಂಗಡಿ, ಜಿಲ್ಲಾ ಮಾಧ್ಯಮ ಪ್ರತಿನಿಧಿ ಮಂಜುನಾಥ ಅಂಗಡಿ, ಮಹಿಳಾ ನಿಯೋಜಿತ ಅಧ್ಯಕ್ಷೆ ಅಕ್ಕಮ್ಮ ಅಂಗಡಿ ಸೇರಿದಂತೆ ಬಣಜಿಗ ಸಮಾಜದ ಹಿರಿಯರು, ಮಹಿಳೆಯರು ಮತ್ತು ಯುವಕರು ಪಾಲ್ಗೊಂಡಿದ್ದರು. ಸಿ.ಎಸ್. ಅಂಗಡಿ ಕಾರ್ಯಕ್ರಮ ನಿರೂಪಿಸಿದರು.2
- ಬಾಗಲಕೋಟೆ ಜಿಲ್ಲೆಯ ಬೀಳಗಿ ವಲಯದ ಅರಣ್ಯ ಅಧಿಕಾರಿಗಳ ನಡೆಗೆ ಕುರಿಗಾಯಿಗಳು ಹಾಗೂ ರೈತ ಸಂಘದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಅಧಿಕಾರಿಗಳ ಈ ವರ್ತನೆಯ ವಿರುದ್ಧ ರೈತ ಮುಖಂಡ ಸಿಪ್ಪದ ಅವರು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ.1
- ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಯುವಕನೊಬ್ಬ ತನಗೆ ಮದುವೆ ಮಾಡಿಸಬೇಕೆಂದು ಆಗ್ರಹಿಸಿ ಬಿಎಸ್ಎನ್ಎಲ್ ಟವರ್ ಏರಿ ಕುಳಿತಿರುವ ಘಟನೆ ನಡೆದಿದೆ. ಈ ಘಟನೆಯಿಂದ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ, ಟವರ್ ಏರಿದ ಆ ಯುವಕ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಹೆಚ್ಚಿನ ವಿವರಗಳು ಲಭ್ಯವಿಲ್ಲ.1