logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಾಮರಾಜನಗರ: ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ನಿಗಾ: ಸುಳ್ಳು ಸುದ್ದಿ ಹರಡಿದರೆ ಕ್ರಮ. ಚಾಮರಾಜನಗರ: ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಮುರಿದೊಡ್ಡಿ ಮತ್ತು ಕರಡಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರಿಗೆ ಜಿಲ್ಲಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ 14 ಮತ್ತು 15ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಕೆಲವರು ಘಟನೆ ಕುರಿತು ಪ್ರಚೋದನಕಾರಿ ಹೇಳಿಕೆಗಳು, ಸುಳ್ಳು ಸುದ್ದಿಗಳು ಹಾಗೂ ಆಡಿಯೋ ಸಂದೇಶಗಳನ್ನು ಹರಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇದರಿಂದ ಜನರಲ್ಲಿ ಗೊಂದಲ, ದ್ವೇಷ ಹಾಗೂ ಅಶಾಂತಿ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮೂಲಕ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಸುಳ್ಳು ಸುದ್ದಿ, ಪ್ರಚೋದನಕಾರಿ ಆಡಿಯೋ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು. ಎಂ., ಐಪಿಎಸ್ ಎಚ್ಚರಿಕೆ ನೀಡಿದ್ದಾರೆ.

1 hr ago
user_Tara Nagendra
Tara Nagendra
Local News Reporter ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
1 hr ago
39455eb8-8836-4808-87ac-a499bdc7f0c0

ಚಾಮರಾಜನಗರ: ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ನಿಗಾ: ಸುಳ್ಳು ಸುದ್ದಿ ಹರಡಿದರೆ ಕ್ರಮ. ಚಾಮರಾಜನಗರ: ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಮುರಿದೊಡ್ಡಿ ಮತ್ತು ಕರಡಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರಿಗೆ ಜಿಲ್ಲಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ 14 ಮತ್ತು 15ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಕೆಲವರು ಘಟನೆ ಕುರಿತು ಪ್ರಚೋದನಕಾರಿ ಹೇಳಿಕೆಗಳು, ಸುಳ್ಳು ಸುದ್ದಿಗಳು ಹಾಗೂ ಆಡಿಯೋ ಸಂದೇಶಗಳನ್ನು ಹರಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇದರಿಂದ ಜನರಲ್ಲಿ ಗೊಂದಲ, ದ್ವೇಷ ಹಾಗೂ ಅಶಾಂತಿ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮೂಲಕ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಸುಳ್ಳು ಸುದ್ದಿ, ಪ್ರಚೋದನಕಾರಿ ಆಡಿಯೋ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು. ಎಂ., ಐಪಿಎಸ್ ಎಚ್ಚರಿಕೆ ನೀಡಿದ್ದಾರೆ.

More news from ಕರ್ನಾಟಕ and nearby areas
  • ಗುಂಡ್ಲುಪೇಟೆಯಲ್ಲಿ ಸಂಭ್ರಮದ ಈದ್ ಮಿಲಾದ್: ಸೌಹಾರ್ದತೆಯ ಸಂದೇಶ. ಗುಂಡ್ಲುಪೇಟೆ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರವಚನಗಳು ನಡೆದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕಾರ ಮಾಡಲಾಗಿದ್ದು, ಮುಸ್ಲಿಂ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಅನ್ನದಾನ ಹಾಗೂ ಸಿಹಿ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು.
    1
    ಗುಂಡ್ಲುಪೇಟೆಯಲ್ಲಿ ಸಂಭ್ರಮದ ಈದ್ ಮಿಲಾದ್: ಸೌಹಾರ್ದತೆಯ ಸಂದೇಶ.
ಗುಂಡ್ಲುಪೇಟೆ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು.
ಈದ್ ಮಿಲಾದ್ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರವಚನಗಳು ನಡೆದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕಾರ ಮಾಡಲಾಗಿದ್ದು, ಮುಸ್ಲಿಂ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆ ಅನ್ನದಾನ ಹಾಗೂ ಸಿಹಿ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು
ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು.
    user_Tara Nagendra
    Tara Nagendra
    Local News Reporter ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    20 min ago
  • ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ತಾಲೂಕಿನ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಅಬ್ಕಾರಿ ಇಲಾಖೆಯ ಉಪ ಆಯುಕ್ತ ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಬೇಡ ಬೇಡ ಅನಧಿಕೃತ ಬಾರ್ ಅಂಗಡಿ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ ಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಕುಮಾರ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಒಂದು ಮದ್ಯಂಗಡಿವಿದ್ದು, ಅಬ್ಕಾರಿ ಇಲಾಖೆ ಮತ್ತೊಂದು ಮದ್ಯಂಗಡಿ ತೆರೆಯಲು ಹೊರಟಿದ್ದಾರೆ. ಈಗಾಗಲೇ ಸುತ್ತ ಮುತ್ತಲಿನ ಗ್ರಾಮಸ್ಥರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ ಬಾರ್ ಅಂಗಡಿ ಸಾಕಾಗಿದೆ. ಮತ್ತೊಂದು ಮದ್ಯಂಗಡಿ ಏಕೆ ಬೇಕಿದೆ ? ಇದು ಒಂದು ದುರಂತವೇ ಸರಿ. ಅಧಿಕಾರಿಗಳು ಶಕ್ತಿ ಇದ್ದರೆ ಇನ್ನೊಂದು ಮದ್ಯಂಗಡಿ ತೆರೆಯಲಿ. ಜನರಿಗೆ ಆಸ್ಪತ್ರೆ, ಶಿಕ್ಷಣ ವ್ಯವಸ್ಥೆ, ಮೆಡಿಕಲ್ ವ್ಯವಸ್ಥೆ ಮಾಡಲಿ ಅದನ್ನು ಬಿಟ್ಟು ಒಂದೇ ಗ್ರಾಮದಲ್ಲಿ ಎರಡು ಬಾರ್‌ಗಳನ್ನು ತೆರೆಯಲು ಮುಂದಾಗಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಮತ್ತೊಂದು ಮತ್ತೊಂದು ಬಾರ್ ಅಂಗಡಿ ತೆರೆದರೆ ಜನರ ಗತಿಯೇನು ಆಗಬೇಕು. ನೂತನವಾಗಿ ಆರಂಭಿಸಲು ಹೊರಟಿರುವ ಬಾರ್ ಅಂಗಡಿ ದಾಖಲೆಗಳು ವ್ಯಾತ್ಯಾಸವಾಗಿರುತ್ತವೆ. ಅದನ್ನು ಪರಿಶೀಲಿಸಿ ನೂತನ ಬಾರ್ ಅಂಗಡಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಮಸಮುದ್ರ ಬಾಬು, ಉಮೇಶ, ಪ್ರಧಾನ ಕಾರ್ಯದರ್ಶಿ ಅರ್ಜುನ, ಕಾರ್ಮಿಕ ಅಧ್ಯಕ್ಷ ಹರೀಶ್‌ ನಾಯಕ, ಟೌನ್ ಅಧ್ಯಕ್ಷ ಅಫ್ನನ್, ಮಹೇಂದ್ರ, ರಿಜ್ವಾನ್, ಚಾಂದು, ಸಿದ್ದರಾಜು, ಅಬ್ದುಲ್‌ಮನಸಿಫ್, ಮೋಸಿನ್, ಸುಹೇಲ್‌ ಪಾಷ, ಕೇಶವಮೂರ್ತಿ, ಮೂಡಹೊಸಳ್ಳಿ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.
    4
    ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ
ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ
ವರದಿ: ಹೊಮ್ಮನಂಜುಂಡನಾಯಕ
ಚಾಮರಾಜನಗರ: ತಾಲೂಕಿನ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು
ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್
ಕುಮಾರ್‌ಶೆಟ್ಟಿ ಬಣದ ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಅಬ್ಕಾರಿ ಇಲಾಖೆಯ ಉಪ ಆಯುಕ್ತ ಚಂದ್ರ ಅವರಿಗೆ ಮನವಿ ಸಲ್ಲಿಸಿದರು.
ಬೇಡ ಬೇಡ ಅನಧಿಕೃತ ಬಾರ್ ಅಂಗಡಿ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ ಪಡಿಸಿದರು.        
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಕುಮಾರ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಒಂದು ಮದ್ಯಂಗಡಿವಿದ್ದು, ಅಬ್ಕಾರಿ
ಇಲಾಖೆ ಮತ್ತೊಂದು ಮದ್ಯಂಗಡಿ ತೆರೆಯಲು ಹೊರಟಿದ್ದಾರೆ. ಈಗಾಗಲೇ ಸುತ್ತ ಮುತ್ತಲಿನ ಗ್ರಾಮಸ್ಥರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ ಬಾರ್ ಅಂಗಡಿ ಸಾಕಾಗಿದೆ. ಮತ್ತೊಂದು ಮದ್ಯಂಗಡಿ ಏಕೆ ಬೇಕಿದೆ ? ಇದು ಒಂದು ದುರಂತವೇ ಸರಿ. ಅಧಿಕಾರಿಗಳು ಶಕ್ತಿ ಇದ್ದರೆ ಇನ್ನೊಂದು ಮದ್ಯಂಗಡಿ ತೆರೆಯಲಿ. ಜನರಿಗೆ ಆಸ್ಪತ್ರೆ, ಶಿಕ್ಷಣ ವ್ಯವಸ್ಥೆ, ಮೆಡಿಕಲ್ ವ್ಯವಸ್ಥೆ ಮಾಡಲಿ ಅದನ್ನು ಬಿಟ್ಟು ಒಂದೇ ಗ್ರಾಮದಲ್ಲಿ ಎರಡು ಬಾರ್‌ಗಳನ್ನು ತೆರೆಯಲು ಮುಂದಾಗಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಮತ್ತೊಂದು ಮತ್ತೊಂದು ಬಾರ್ ಅಂಗಡಿ ತೆರೆದರೆ ಜನರ ಗತಿಯೇನು ಆಗಬೇಕು. ನೂತನವಾಗಿ ಆರಂಭಿಸಲು ಹೊರಟಿರುವ ಬಾರ್ ಅಂಗಡಿ ದಾಖಲೆಗಳು ವ್ಯಾತ್ಯಾಸವಾಗಿರುತ್ತವೆ. ಅದನ್ನು ಪರಿಶೀಲಿಸಿ ನೂತನ ಬಾರ್ ಅಂಗಡಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಮಸಮುದ್ರ ಬಾಬು, ಉಮೇಶ, ಪ್ರಧಾನ ಕಾರ್ಯದರ್ಶಿ ಅರ್ಜುನ, ಕಾರ್ಮಿಕ ಅಧ್ಯಕ್ಷ ಹರೀಶ್‌ ನಾಯಕ, ಟೌನ್ ಅಧ್ಯಕ್ಷ ಅಫ್ನನ್,
ಮಹೇಂದ್ರ, ರಿಜ್ವಾನ್, ಚಾಂದು, ಸಿದ್ದರಾಜು, ಅಬ್ದುಲ್‌ಮನಸಿಫ್, ಮೋಸಿನ್, ಸುಹೇಲ್‌ ಪಾಷ, ಕೇಶವಮೂರ್ತಿ, ಮೂಡಹೊಸಳ್ಳಿ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    3 hrs ago
  • ಮೈಕ್ರೋ ಗ್ರೀನ್‌ ಬೆಳೆದು ತಿಂಗಳಿಗೆ ₹50 ಸಾವಿರ ಸಂಪಾದನೆ; ವಿನಯ್‌ರ ವಿನೂತನ ಕೃಷಿ ಮಾದರಿ ಮೈಸೂರು: ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಯುವಕರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಸಾಲಿನಲ್ಲಿ ನಂಜನಗೂಡು ನಗರದ ಎಂಬಿಎ ಪದವೀಧರ ವಿನಯ್ ಅವರು ಮೈಸೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೈಕ್ರೋ ಗ್ರೀನ್‌ ಕೃಷಿಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶಭರಿತ ಬೆಳೆಗಳನ್ನು ಉತ್ಪಾದಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ. ವಿನಯ್ ಅವರು ಸುಮಾರು ₹8 ಲಕ್ಷ ವೆಚ್ಚದಲ್ಲಿ ಮೈಕ್ರೋ ಗ್ರೀನ್‌ ಬೆಳೆಯಲು ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಎಂಟು ಬಗೆಯ ಧಾನ್ಯಗಳಾದ , ಜೋಳ, ರಾಗಿ, ಸಜ್ಜೆ, ಮೆಂತ್ಯೆ, ಸಾಸಿವೆ, ಮೂಲಂಗಿ ಹಾಗೂ ಬಿಟ್ರೋಟ್ ಮುಂತಾದ ಬೀಜಗಳಿಂದ ಮೈಕ್ರೋ ಗ್ರೀನ್‌ಗಳನ್ನು ಬೆಳೆಸುತ್ತಿದ್ದಾರೆ. ಬೀಜ ಬಿತ್ತಿದ ನಂತರ ಕೇವಲ 10ರಿಂದ 15 ದಿನಗಳಲ್ಲಿ ಪೈರು ಸಿದ್ಧವಾಗುವುದು ಈ ಕೃಷಿಯ ವಿಶೇಷತೆ. ಸಾಮಾನ್ಯ ಕೃಷಿಗೆ ಹೋಲಿಸಿದರೆ ಕಡಿಮೆ ಜಾಗ, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ಉತ್ಪಾದನೆ ಪಡೆಯಬಹುದಾಗಿರುವುದರಿಂದ ಮೈಕ್ರೋ ಗ್ರೀನ್‌ ಕೃಷಿ ಯುವಕರನ್ನು ಆಕರ್ಷಿಸುತ್ತಿದೆ. ವಿನಯ್ ಅವರು ಬೆಳೆದ ಮೈಕ್ರೋ ಗ್ರೀನ್‌ಗಳನ್ನು ಮೈಸೂರು ಹಾಗೂ ನಂಜನಗೂಡು ಭಾಗದ ಜಿಮ್‌ಗಳು, ಮನೆಗಳು ಹಾಗೂ ಆರೋಗ್ಯ ಕಾಳಜಿ ಹೊಂದಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮೈಕ್ರೋ ಗ್ರೀನ್‌ಗಳಲ್ಲಿ ಎಲೆಗಳು ಸಂಪೂರ್ಣವಾಗಿ ಬೆಳೆಯುವ ಮುನ್ನವೇ ಕೊಯ್ಲು ಮಾಡುವುದರಿಂದ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಆಹಾರದ ನಾರಿನಾಂಶ ದೊರೆಯುತ್ತವೆ. ನಿಯಮಿತ ಆಹಾರದ ಭಾಗವಾಗಿ ಬಳಸುವುದರಿಂದ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು. ಸಲಾಡ್‌, ಸ್ಯಾಂಡ್‌ವಿಚ್‌, ಸೂಪ್‌ ಹಾಗೂ ವಿವಿಧ ಆಹಾರ ಪದಾರ್ಥಗಳೊಂದಿಗೆ ಇವುಗಳನ್ನು ಸೇವಿಸಬಹುದು. ಕೃಷಿ ಎಂದರೆ ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಲ್ಲ ಎಂಬುದನ್ನು ವಿನಯ್ ಅವರ ಪ್ರಯತ್ನ ತೋರಿಸಿಕೊಟ್ಟಿದೆ. ಎಂಬಿಎ ಪದವಿ ಪಡೆದ ಬಳಿಕ ಉದ್ಯೋಗದ ಬದಲು ಕೃಷಿಯಲ್ಲೇ ಹೊಸ ಅವಕಾಶ ಕಂಡುಕೊಂಡಿರುವ ಅವರು, ಕಡಿಮೆ ಅವಧಿಯ ಬೆಳೆಗಳ ಮೂಲಕ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಮೈಕ್ರೋ ಗ್ರೀನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. +91 96111 89599 ಖರೀದಿ ಮಾಡಲು ಬಯಸುವವರು ಸಂಪರ್ಕ ಮಾಡಬಹುದು
    1
    ಮೈಕ್ರೋ ಗ್ರೀನ್‌ ಬೆಳೆದು ತಿಂಗಳಿಗೆ ₹50 ಸಾವಿರ ಸಂಪಾದನೆ; ವಿನಯ್‌ರ ವಿನೂತನ ಕೃಷಿ ಮಾದರಿ
ಮೈಸೂರು: ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಯುವಕರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಸಾಲಿನಲ್ಲಿ ನಂಜನಗೂಡು ನಗರದ ಎಂಬಿಎ ಪದವೀಧರ ವಿನಯ್ ಅವರು ಮೈಸೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೈಕ್ರೋ ಗ್ರೀನ್‌ ಕೃಷಿಯನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಪೌಷ್ಟಿಕಾಂಶಭರಿತ ಬೆಳೆಗಳನ್ನು ಉತ್ಪಾದಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ.
ವಿನಯ್ ಅವರು ಸುಮಾರು ₹8 ಲಕ್ಷ ವೆಚ್ಚದಲ್ಲಿ ಮೈಕ್ರೋ ಗ್ರೀನ್‌ ಬೆಳೆಯಲು ಶೆಡ್ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಎಂಟು ಬಗೆಯ ಧಾನ್ಯಗಳಾದ , ಜೋಳ, ರಾಗಿ, ಸಜ್ಜೆ, ಮೆಂತ್ಯೆ, ಸಾಸಿವೆ, ಮೂಲಂಗಿ ಹಾಗೂ ಬಿಟ್ರೋಟ್ ಮುಂತಾದ ಬೀಜಗಳಿಂದ ಮೈಕ್ರೋ ಗ್ರೀನ್‌ಗಳನ್ನು ಬೆಳೆಸುತ್ತಿದ್ದಾರೆ. ಬೀಜ ಬಿತ್ತಿದ ನಂತರ ಕೇವಲ 10ರಿಂದ 15 ದಿನಗಳಲ್ಲಿ ಪೈರು ಸಿದ್ಧವಾಗುವುದು ಈ ಕೃಷಿಯ ವಿಶೇಷತೆ.
ಸಾಮಾನ್ಯ ಕೃಷಿಗೆ ಹೋಲಿಸಿದರೆ ಕಡಿಮೆ ಜಾಗ, ಕಡಿಮೆ ನೀರು ಹಾಗೂ ಕಡಿಮೆ ಅವಧಿಯಲ್ಲಿ ಉತ್ಪಾದನೆ ಪಡೆಯಬಹುದಾಗಿರುವುದರಿಂದ ಮೈಕ್ರೋ ಗ್ರೀನ್‌ ಕೃಷಿ ಯುವಕರನ್ನು ಆಕರ್ಷಿಸುತ್ತಿದೆ. ವಿನಯ್ ಅವರು ಬೆಳೆದ ಮೈಕ್ರೋ ಗ್ರೀನ್‌ಗಳನ್ನು ಮೈಸೂರು ಹಾಗೂ ನಂಜನಗೂಡು ಭಾಗದ ಜಿಮ್‌ಗಳು, ಮನೆಗಳು ಹಾಗೂ ಆರೋಗ್ಯ ಕಾಳಜಿ ಹೊಂದಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ಮೈಕ್ರೋ ಗ್ರೀನ್‌ಗಳಲ್ಲಿ ಎಲೆಗಳು ಸಂಪೂರ್ಣವಾಗಿ ಬೆಳೆಯುವ ಮುನ್ನವೇ ಕೊಯ್ಲು ಮಾಡುವುದರಿಂದ ವಿವಿಧ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಆಹಾರದ ನಾರಿನಾಂಶ ದೊರೆಯುತ್ತವೆ. ನಿಯಮಿತ ಆಹಾರದ ಭಾಗವಾಗಿ ಬಳಸುವುದರಿಂದ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು. ಸಲಾಡ್‌, ಸ್ಯಾಂಡ್‌ವಿಚ್‌, ಸೂಪ್‌ ಹಾಗೂ ವಿವಿಧ ಆಹಾರ ಪದಾರ್ಥಗಳೊಂದಿಗೆ ಇವುಗಳನ್ನು ಸೇವಿಸಬಹುದು.
ಕೃಷಿ ಎಂದರೆ ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಲ್ಲ ಎಂಬುದನ್ನು ವಿನಯ್ ಅವರ ಪ್ರಯತ್ನ ತೋರಿಸಿಕೊಟ್ಟಿದೆ. ಎಂಬಿಎ ಪದವಿ ಪಡೆದ ಬಳಿಕ ಉದ್ಯೋಗದ ಬದಲು ಕೃಷಿಯಲ್ಲೇ ಹೊಸ ಅವಕಾಶ ಕಂಡುಕೊಂಡಿರುವ ಅವರು, ಕಡಿಮೆ ಅವಧಿಯ ಬೆಳೆಗಳ ಮೂಲಕ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಮೈಕ್ರೋ ಗ್ರೀನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ.
+91 96111 89599 ಖರೀದಿ ಮಾಡಲು ಬಯಸುವವರು ಸಂಪರ್ಕ ಮಾಡಬಹುದು
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Nanjangud, Mysuru•
    23 hrs ago
  • All About,Who shud be held responsible/Accountable for all Kinds of Irregularities in #KSBA #Bengaluru *ಭಾರತ ನಲ್ಲಿ ವೈರಲ್*
    1
    All About,Who shud be held responsible/Accountable for all Kinds of Irregularities in #KSBA #Bengaluru 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    2 hrs ago
  • ಈ ಬಾರಿ ಕಂಬಳ ನಡೆಯುವುದು ಖಚಿತ : ಖುದ್ದು ಸಿಎಂ ಸೂಚನೆ ನೀಡಿದ್ದಾರೆ ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಬಳ ನಡೆಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಅದೇ ಸ್ಥಳದಲ್ಲಿ ಕಂಬಳ ಆಯೋಜಿಸಲಾಗುವುದು ಎಂದರು. ಕಂಬಳ ನಡೆಸುವಂತೆ ಮುಖ್ಯಮಂತ್ರಿ ಅವರೂ ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ನಡೆಯುವುದು ಖಚಿತ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
    1
    ಈ ಬಾರಿ ಕಂಬಳ ನಡೆಯುವುದು ಖಚಿತ : ಖುದ್ದು ಸಿಎಂ ಸೂಚನೆ ನೀಡಿದ್ದಾರೆ
ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಬಳ ನಡೆಸಲು ಈಗಾಗಲೇ ಜಾಗ ಗುರುತಿಸಲಾಗಿದೆ. ಅದೇ ಸ್ಥಳದಲ್ಲಿ ಕಂಬಳ ಆಯೋಜಿಸಲಾಗುವುದು ಎಂದರು.
ಕಂಬಳ ನಡೆಸುವಂತೆ ಮುಖ್ಯಮಂತ್ರಿ ಅವರೂ ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ನಡೆಯುವುದು ಖಚಿತ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    22 hrs ago
  • ಕೌದಳ್ಳಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ: ಭಾವೈಕ್ಯತೆ ಮೆರೆದ ಸೌಹಾರ್ದ ಮೆರವಣಿಗೆ ಹನೂರು:ತಾಲೂಕಿನ ಕೌದಳ್ಳಿ ಗ್ರಾಮದ ಮುಸ್ಲಿಂ ಬಾಂಧವರ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ 'ಈದ್ ಮಿಲಾದ್' ಹಬ್ಬವನ್ನು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಗ್ರಾಮದ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಕುರಾನ್ ಪಠಣ ಮತ್ತು ಪ್ರವಾದಿಯವರ ಜೀವನ ಸಂದೇಶಗಳ ಕುರಿತು ಧರ್ಮೋಪದೇಶ ಕಾರ್ಯಕ್ರಮಗಳು ಜರುಗಿದವು. ಸೌಹಾರ್ದ ಮೆರವಣಿಗೆ ಬಳಿಕ ಬಣ್ಣ ಬಣ್ಣದ ದೀಪಗಳು, ತೋರಣಗಳು ಮತ್ತು ಧ್ವಜಗಳಿಂದ ಅಲಂಕೃತಗೊಂಡಿದ್ದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರುವ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಯುವಕರು ಮತ್ತು ಮಕ್ಕಳು ಪ್ರವಾದಿಯವರ ಶಾಂತಿ, ಪ್ರೀತಿ, ಸಹೋದರತೆಯ ಸಂದೇಶಗಳನ್ನು ಸಾರುವ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಭಾವೈಕ್ಯತೆಯ ಸಂಕೇತ ಗ್ರಾಮದ ವಿವಿಧ ಧರ್ಮಗಳ ಮುಖಂಡರು, ಹಿಂದೂ-ಕ್ರೈಸ್ತ ಬಾಂಧವರು ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಮೆರೆದರು. ಈದ್ ಮಿಲಾದ್ ಕೇವಲ ಮುಸ್ಲಿಂ ಸಮುದಾಯದ ಹಬ್ಬವಲ್ಲ, ಎಲ್ಲಾ ಧರ್ಮಗಳ ಸೌಹಾರ್ದತೆಯ ಪ್ರತೀಕವಾಗಿದೆ ಎಂಬುದನ್ನು ಈ ಆಚರಣೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರು, ಮಸೀದಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಅಂತ್ಯಗೊಂಡಿತು.
    2
    ಕೌದಳ್ಳಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ: ಭಾವೈಕ್ಯತೆ ಮೆರೆದ ಸೌಹಾರ್ದ ಮೆರವಣಿಗೆ
ಹನೂರು:ತಾಲೂಕಿನ ಕೌದಳ್ಳಿ ಗ್ರಾಮದ ಮುಸ್ಲಿಂ ಬಾಂಧವರ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ 'ಈದ್ ಮಿಲಾದ್' ಹಬ್ಬವನ್ನು ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮುಂಜಾನೆಯಿಂದಲೇ ಗ್ರಾಮದ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಕುರಾನ್ ಪಠಣ ಮತ್ತು ಪ್ರವಾದಿಯವರ ಜೀವನ ಸಂದೇಶಗಳ ಕುರಿತು ಧರ್ಮೋಪದೇಶ ಕಾರ್ಯಕ್ರಮಗಳು ಜರುಗಿದವು.
ಸೌಹಾರ್ದ ಮೆರವಣಿಗೆ
ಬಳಿಕ ಬಣ್ಣ ಬಣ್ಣದ ದೀಪಗಳು, ತೋರಣಗಳು ಮತ್ತು ಧ್ವಜಗಳಿಂದ ಅಲಂಕೃತಗೊಂಡಿದ್ದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರುವ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಯುವಕರು ಮತ್ತು ಮಕ್ಕಳು ಪ್ರವಾದಿಯವರ ಶಾಂತಿ, ಪ್ರೀತಿ, ಸಹೋದರತೆಯ ಸಂದೇಶಗಳನ್ನು ಸಾರುವ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು.
ಭಾವೈಕ್ಯತೆಯ ಸಂಕೇತ
ಗ್ರಾಮದ ವಿವಿಧ ಧರ್ಮಗಳ ಮುಖಂಡರು, ಹಿಂದೂ-ಕ್ರೈಸ್ತ ಬಾಂಧವರು ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಮೆರೆದರು. ಈದ್ ಮಿಲಾದ್ ಕೇವಲ ಮುಸ್ಲಿಂ ಸಮುದಾಯದ ಹಬ್ಬವಲ್ಲ, ಎಲ್ಲಾ ಧರ್ಮಗಳ ಸೌಹಾರ್ದತೆಯ ಪ್ರತೀಕವಾಗಿದೆ ಎಂಬುದನ್ನು ಈ ಆಚರಣೆ ಸಾಬೀತುಪಡಿಸಿತು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರು, ಮಸೀದಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಗಣ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಅಂತ್ಯಗೊಂಡಿತು.
    user_Vijay kumar
    Vijay kumar
    ಕೊಳ್ಳೇಗಾಲ, ಚಾಮರಾಜನಗರ, ಕರ್ನಾಟಕ•
    22 hrs ago
  • ಹಲಗೂರಿನಲ್ಲಿ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ :ತಾಲ್ಲೂಕಿನ ಹಲಗೂರು ಗ್ರಾಮದ ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು. ಗುರುವಾರ ಬೆಳಿಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿ ,ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ ಪಂಚಾಮೃತ ಅಭಿಷೇಕ ನಡೆಸಿ, ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು. ಗ್ರಾಮ ದೇವತೆಯಾದ ಪಟ್ಟಲದಮ್ಮ, ಶ್ರೀ ಸಿದ್ದೇಶ್ವರ ಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ ಹೂ -ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರವನ್ನು ನಡೆಸಿಕೊಂಡು ಬರುತ್ತಿದ್ದು ,ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಬಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ. ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
    1
    ಹಲಗೂರಿನಲ್ಲಿ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ
ಮಳವಳ್ಳಿ :ತಾಲ್ಲೂಕಿನ ಹಲಗೂರು ಗ್ರಾಮದ  ಗಾಣಿಗರ ಬೀದಿಯಲ್ಲಿರುವ ಶ್ರೀ ಪಟ್ಟದರಾಣಿ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಭಕ್ತಿ ಭಾವ ಪೂರಕವಾಗಿ ಆಚರಿಸಲಾಯಿತು.
ಗುರುವಾರ ಬೆಳಿಗ್ಗೆ ಪಟ್ಟದ ರಾಣಿ ಅಮ್ಮನವರ ಮೂರ್ತಿಯನ್ನು ಶುಚಿಗೊಳಿಸಿ ,ನಂತರ ದುರ್ಗಾ ಹೋಮ ಮಹಾಗಣಪತಿ ಹೋಮ ನವಗ್ರಹ ಶಾಂತಿ ಹೋಮ ಪಂಚಾಮೃತ ಅಭಿಷೇಕ ನಡೆಸಿ, ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷವಾಗಿ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು.
ಗ್ರಾಮ ದೇವತೆಯಾದ ಪಟ್ಟಲದಮ್ಮ, ಶ್ರೀ ಸಿದ್ದೇಶ್ವರ ಸ್ವಾಮಿ ಸತ್ತಿಗೆ ಹಾಗೂ ಪಟ್ಟದ ರಾಣಿ ದೇವರಿಗೆ ನಡುಕೇರಿ ವೀರಭದ್ರ ದೇವಸ್ಥಾನದ ಆವರಣದಲ್ಲಿ 
ಹೂ -ಹೊಂಬಾಳೆ ಮಾಡಿಕೊಂಡು ವಿಶೇಷವಾಗಿ ಅಲಂಕರಿಸಿ ಪೂಜಾ ಕುಣಿತದೊಡನೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ದೇವರ ಮೂರ್ತಿಗಳನ್ನು ತರಲಾಯಿತು.ನಂತರ ಮಹಾಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.
ದೇವಸ್ಥಾನದ ಆವರಣದಲ್ಲಿ ರವಿ ಮಾತನಾಡಿ, ನಾವು ಪ್ರತಿವರ್ಷ ಅಮ್ಮನವರಿಗೆ ಪೂಜೆ ಪುನಸ್ಕಾರವನ್ನು ನಡೆಸಿಕೊಂಡು ಬರುತ್ತಿದ್ದು ,ಇಂದು ನಾಲ್ಕನೇ ವರ್ಷದ ಪ್ರಯುಕ್ತ ವಿಶೇಷವಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿ ಬಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದೇವೆ.
ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟದ ರಾಣಿ ಅಮ್ಮನವರ ಸೇವಾ ಟ್ರಸ್ಟಿನ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    12 min ago
  • ಮದ್ದೂರು ಕಾಲೋನಿಯಲ್ಲಿ ಹುಲಿ ಸೆರೆ: ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು. ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಕಾಲೋನಿ ಗ್ರಾಮದ ರೈತರ ಜಮೀನಿನಲ್ಲಿ ಮಂಗಳವಾರ ಹುಲಿಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯ ರೈತರ ಕಣ್ಣಿಗೆ ಹುಲಿ ಪ್ರತ್ಯಕ್ಷವಾಗುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಕುರಿತು ಗ್ರಾಮಸ್ಥರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಡ್ರೋನ್ ಮೂಲಕ ಹುಲಿಯ ಚಲನವಲನವನ್ನು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದರು. ಸುಮಾರು ರಾತ್ರಿ 10 ಗಂಟೆಯ ವೇಳೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಇದರಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದರು. ಹುಲಿಯನ್ನು ಕೂಡಲೇ ಸೆರೆಹಿಡಿದು ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಡಾ. ವಸೀಮ್ ಮಿರ್ಜಾ ಹಾಗೂ ಡ್ರೋನ್ ಪೈಲಟ್‌ಗಳಾದ ಕೌಶಿಕ್ ಮತ್ತು ಕಾರ್ತಿಕ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
    1
    ಮದ್ದೂರು ಕಾಲೋನಿಯಲ್ಲಿ ಹುಲಿ ಸೆರೆ:
ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ
ನಿಟ್ಟುಸಿರು ಬಿಟ್ಟ ಗ್ರಾಮಸ್ಥರು.
ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಕಾಲೋನಿ ಗ್ರಾಮದ ರೈತರ ಜಮೀನಿನಲ್ಲಿ ಮಂಗಳವಾರ ಹುಲಿಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯ ರೈತರ ಕಣ್ಣಿಗೆ ಹುಲಿ ಪ್ರತ್ಯಕ್ಷವಾಗುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಕುರಿತು ಗ್ರಾಮಸ್ಥರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಡ್ರೋನ್ ಮೂಲಕ ಹುಲಿಯ ಚಲನವಲನವನ್ನು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದರು.
ಸುಮಾರು ರಾತ್ರಿ 10 ಗಂಟೆಯ ವೇಳೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಇದರಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು.
ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದರು. ಹುಲಿಯನ್ನು ಕೂಡಲೇ ಸೆರೆಹಿಡಿದು ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಡಾ. ವಸೀಮ್ ಮಿರ್ಜಾ ಹಾಗೂ ಡ್ರೋನ್ ಪೈಲಟ್‌ಗಳಾದ ಕೌಶಿಕ್ ಮತ್ತು ಕಾರ್ತಿಕ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
    user_Tara Nagendra
    Tara Nagendra
    Local News Reporter ಗುಂಡ್ಲುಪೇಟೆ, ಚಾಮರಾಜನಗರ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.