*ಗುರುಭಕ್ತಿ ಜೊತೆಗೆ ಭಾರತಮಾತೆಯ ಸೇವೆಗೂ ಸಿದ್ಧರಾಗಿರಿ: ಯೋಗ ಬಂಧುಗಳಿಗೆ ಸರಸ್ವತಿ ಅಕ್ಕ ಸಂದೇಶ* *ಗುರುಭಕ್ತಿ ಜೊತೆಗೆ ಭಾರತಮಾತೆಯ ಸೇವೆಗೂ ಸಿದ್ಧರಾಗಿರಿ: ಯೋಗ ಬಂಧುಗಳಿಗೆ ಸರಸ್ವತಿ ಅಕ್ಕ ಸಂದೇಶ* ಕುಕುನೂರು:- ಪಟ್ಟಣದ ಎಪಿಎಂಸಿ ಎಲ್ಲಿರುವ ಯೋಗ ಮಂದಿರದಲ್ಲಿ ಗುರುವಾರದಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ತುಂಗಭದ್ರಾ ವಲಯ ಕುಕನೂರು ಶಾಖೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮ ಅಗ್ನಿಹೋತ್ರ ಕಾರ್ಯಕ್ರಮ ಹಾಗೂ ಸಹಭೋಜನ ಕಾರ್ಯಕ್ರಮವನ್ನು ಮತ್ತು ಭಕ್ತಿ ಭಾವ ಗೀತೆಗಳು ನೃತ್ಯ ಮೂಲಕ ಯೋಗ ಬಂಧುಗಳು ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮವು ವೇದಮಂತ್ರಗಳ ಪಠಣದೊಂದಿಗೆ ಆರಂಭಗೊಂಡು, ಅಗ್ನಿಹೋತ್ರದ ಮೂಲಕ ವಿಶ್ವಶಾಂತಿ, ಉತ್ತಮ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಯೋಗಗುರುಗಳಿಗೆ ಗೌರವ ಸಲ್ಲಿಸಿ, ಗುರುಗಳ ಮಾರ್ಗದರ್ಶನದ ಮಹತ್ವವನ್ನು ಕುರಿತು ಮಾತನಾಡಲಾಯಿತು. ಈ ಸಂದರ್ಭದಲ್ಲಿ ಯೋಗಬಂಧುಗಳು ಭಕ್ತಿಗೀತೆಗಳನ್ನು ಹಾಡಿ, ಭಕ್ತಿಭಾವದಿಂದ ನೃತ್ಯ ಪ್ರದರ್ಶನ ನೀಡುವ ಮೂಲಕ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು. ವಿವಿಧ ವಯೋಮಾನದ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಸರಸ್ವತಿ ಅಕ್ಕ ಪಶ್ಚಿಮ ವಲಯ ಸಂಸ್ಥಾನ ಪ್ರಮುಖರು ಬೆಂಗಳೂರು ಮಾತನಾಡಿ ಗುರುವಿನ ಆಶೀರ್ವಾದದಿಂದ ಜೀವನ ಸಾರ್ಥಕವಾಗುತ್ತದೆ. ಭಾರತಮಾತೆಯ ಸೇವೆಯಿಂದ ಜನ್ಮ ಧನ್ಯವಾಗುತ್ತದೆ. ಯೋಗ, ಸಂಸ್ಕಾರ, ಸೇವೆ ಮತ್ತು ರಾಷ್ಟ್ರಭಕ್ತಿಯೊಂದಿಗೆ ಬದುಕುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಯೋಗವು ಕೇವಲ ವ್ಯಾಯಾಮವಲ್ಲ; ಅದು ಉತ್ತಮ ಆರೋಗ್ಯ, ಉತ್ತಮ ಚಿಂತನೆ, ಉತ್ತಮ ವ್ಯಕ್ತಿತ್ವ ಹಾಗೂ ರಾಷ್ಟ್ರ ನಿರ್ಮಾಣದ ಮಾರ್ಗವಾಗಿದೆ. ಪ್ರತಿಯೊಬ್ಬರೂ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು, ಗುರುಗಳ ಆದರ್ಶಗಳನ್ನು ಅನುಸರಿಸಿ, ಭಾರತಮಾತೆಯ ಸೇವೆಗೆ ಸದಾ ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ತುಂಗಭದ್ರ ವಲಯ ಕುಕನೂರು ಶಾಖೆಯ ಯೋಗ ಸಂಚಾಲಕರಾದ ಚಿದಾನಂದ ಪತ್ತಾರ ಅಣ್ಣನವರು ವಹಿಸಿ ಮಾತನಾಡಿ ಗುರುಪೂರ್ಣಿಮೆ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ಶಿಸ್ತು ಮತ್ತು ಮೌಲ್ಯಗಳ ಪ್ರತೀಕವಾಗಿದೆ. ಯೋಗದ ಮೂಲಕ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಬೆಳೆಸಿಕೊಳ್ಳಲು ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು. ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಬೋಜರಾಜು ಸೊಪ್ಪಿಮಠ ಮಾತನಾಡಿ ಗುರು ಪೌರ್ಣಿಮೆ ಭಾರತೀಯ ಸಂಸ್ಕೃತಿಯ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಹಬ್ಬಗಳಲ್ಲಿ ಒಂದಾಗಿದೆ. ಆಷಾಢ ಮಾಸದ ಪೌರ್ಣಿಮೆಯಂದು ಈ ದಿನವನ್ನು ಆಚರಿಸಲಾಗುತ್ತದೆ. ಜ್ಞಾನ, ಸಂಸ್ಕಾರ, ಸತ್ಯ, ಧರ್ಮ ಮತ್ತು ಜೀವನದ ಮೌಲ್ಯಗಳನ್ನು ಬೋಧಿಸುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರು ಪೌರ್ಣಿಮೆ. ಮಹರ್ಷಿ ವೇದವ್ಯಾಸರು ವೇದಗಳನ್ನು ವಿಭಾಗಿಸಿ, ಮಹಾಭಾರತ ಹಾಗೂ ಪುರಾಣಗಳನ್ನು ರಚಿಸಿ ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಕಾರಣ ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ ಎಂದು ಮಾತನಾಡಿದರು. ಪಟ್ಟಣ ಪಂಚಾಯತ ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ ಪ್ರತಿಯೊಬ್ಬ ನಾಗರಿಕರು ಯೋಗದ ಮೂಲಕ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆ ಸಾಧಿಸಬೇಕು ಮತ್ತು ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕು. ಹಾಗೂ ಈಗಿನ ಯುವ ಪೀಳಿಗೆಗೆ ಗುರುಗಳ ಮಾರ್ಗದರ್ಶನದ ಮಹತ್ವವನ್ನು ತಿಳಿಸುವ ಕಾರ್ಯಗಳು ನಡೆಯಬೇಕು. ಸಮಾಜದಲ್ಲಿ ಶಿಸ್ತು, ಸೇವೆ ಹಾಗೂ ಸಂಸ್ಕಾರ ಮಾರ್ಗದರ್ಶನ ನೀಡಿದಾಗ ಗುರು ಹಿರಿಯರಲ್ಲಿ ಹಾಗೂ ಸಂಸ್ಕಾರವಂತರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲ ಯೋಗಬಂಧುಗಳು ಹಾಗೂ ಭಕ್ತರು ಸಹಭೋಜನದಲ್ಲಿ ಪಾಲ್ಗೊಂಡು ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಸೇವಾ ಮನೋಭಾವವನ್ನು ಬಲಪಡಿಸಿದರು. ಶಾಂತರಾಜ ಅಣ್ಣನವರು ಸೇವಾ ಪ್ರಮುಖರು ಬೆಂಗಳೂರು, , ಪಟ್ಟಣ ಪಂಚಾಯತ ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ವಹಿಸಿದ್ದರು. ಈ ಸಂದರ್ಭದಲ್ಲಿ ಶಾಂತರಾಜ ಅಣ್ಣನವರು ಸೇವಾ ಪ್ರಮುಖರು ಬೆಂಗಳೂರು, ಯೋಗ ಬಂಧುಗಳಾದ ಪ್ರಭು ಒಕ್ಕಳದ, ಸಿದ್ಧಾರೂಢ ಬಣ್ಣದ ಬಾವಿ, ಯಲ್ಲಪ್ಪ ಹಳ್ಳದ, ಮಹಾದೇವಿ ಕಂಬಳಿ ಅಕ್ಕನವರು ಶಾರದ ಅಕ್ಕನವರು, ಉಮಾ ಗುಡ್ಲಾನೂರ್ ಅಕ್ಕನವರು ಹಾಗೂ ಇತರ ಯೋಗ ಬಂಧುಗಳು ಇದ್ದರು. *ವರದಿ ಚನ್ನಯ್ಯ ಹಿರೇಮಠ ಕುಕನೂರು*
*ಗುರುಭಕ್ತಿ ಜೊತೆಗೆ ಭಾರತಮಾತೆಯ ಸೇವೆಗೂ ಸಿದ್ಧರಾಗಿರಿ: ಯೋಗ ಬಂಧುಗಳಿಗೆ ಸರಸ್ವತಿ ಅಕ್ಕ ಸಂದೇಶ* *ಗುರುಭಕ್ತಿ ಜೊತೆಗೆ ಭಾರತಮಾತೆಯ ಸೇವೆಗೂ ಸಿದ್ಧರಾಗಿರಿ: ಯೋಗ ಬಂಧುಗಳಿಗೆ ಸರಸ್ವತಿ ಅಕ್ಕ ಸಂದೇಶ* ಕುಕುನೂರು:- ಪಟ್ಟಣದ ಎಪಿಎಂಸಿ ಎಲ್ಲಿರುವ ಯೋಗ ಮಂದಿರದಲ್ಲಿ ಗುರುವಾರದಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ತುಂಗಭದ್ರಾ ವಲಯ ಕುಕನೂರು ಶಾಖೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮ ಅಗ್ನಿಹೋತ್ರ ಕಾರ್ಯಕ್ರಮ ಹಾಗೂ ಸಹಭೋಜನ ಕಾರ್ಯಕ್ರಮವನ್ನು ಮತ್ತು ಭಕ್ತಿ ಭಾವ ಗೀತೆಗಳು ನೃತ್ಯ ಮೂಲಕ ಯೋಗ ಬಂಧುಗಳು ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮವು ವೇದಮಂತ್ರಗಳ ಪಠಣದೊಂದಿಗೆ ಆರಂಭಗೊಂಡು, ಅಗ್ನಿಹೋತ್ರದ ಮೂಲಕ ವಿಶ್ವಶಾಂತಿ, ಉತ್ತಮ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಯೋಗಗುರುಗಳಿಗೆ ಗೌರವ ಸಲ್ಲಿಸಿ, ಗುರುಗಳ ಮಾರ್ಗದರ್ಶನದ ಮಹತ್ವವನ್ನು ಕುರಿತು ಮಾತನಾಡಲಾಯಿತು. ಈ ಸಂದರ್ಭದಲ್ಲಿ ಯೋಗಬಂಧುಗಳು ಭಕ್ತಿಗೀತೆಗಳನ್ನು ಹಾಡಿ, ಭಕ್ತಿಭಾವದಿಂದ ನೃತ್ಯ ಪ್ರದರ್ಶನ ನೀಡುವ ಮೂಲಕ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು. ವಿವಿಧ ವಯೋಮಾನದ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಸರಸ್ವತಿ ಅಕ್ಕ ಪಶ್ಚಿಮ ವಲಯ ಸಂಸ್ಥಾನ ಪ್ರಮುಖರು ಬೆಂಗಳೂರು ಮಾತನಾಡಿ ಗುರುವಿನ ಆಶೀರ್ವಾದದಿಂದ ಜೀವನ ಸಾರ್ಥಕವಾಗುತ್ತದೆ. ಭಾರತಮಾತೆಯ ಸೇವೆಯಿಂದ ಜನ್ಮ ಧನ್ಯವಾಗುತ್ತದೆ. ಯೋಗ, ಸಂಸ್ಕಾರ, ಸೇವೆ ಮತ್ತು ರಾಷ್ಟ್ರಭಕ್ತಿಯೊಂದಿಗೆ ಬದುಕುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಯೋಗವು ಕೇವಲ ವ್ಯಾಯಾಮವಲ್ಲ; ಅದು ಉತ್ತಮ ಆರೋಗ್ಯ, ಉತ್ತಮ ಚಿಂತನೆ, ಉತ್ತಮ ವ್ಯಕ್ತಿತ್ವ ಹಾಗೂ ರಾಷ್ಟ್ರ ನಿರ್ಮಾಣದ ಮಾರ್ಗವಾಗಿದೆ. ಪ್ರತಿಯೊಬ್ಬರೂ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು, ಗುರುಗಳ ಆದರ್ಶಗಳನ್ನು ಅನುಸರಿಸಿ, ಭಾರತಮಾತೆಯ ಸೇವೆಗೆ ಸದಾ ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ತುಂಗಭದ್ರ ವಲಯ ಕುಕನೂರು ಶಾಖೆಯ ಯೋಗ ಸಂಚಾಲಕರಾದ ಚಿದಾನಂದ ಪತ್ತಾರ ಅಣ್ಣನವರು ವಹಿಸಿ ಮಾತನಾಡಿ ಗುರುಪೂರ್ಣಿಮೆ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ,
ಶಿಸ್ತು ಮತ್ತು ಮೌಲ್ಯಗಳ ಪ್ರತೀಕವಾಗಿದೆ. ಯೋಗದ ಮೂಲಕ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಬೆಳೆಸಿಕೊಳ್ಳಲು ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು. ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಬೋಜರಾಜು ಸೊಪ್ಪಿಮಠ ಮಾತನಾಡಿ ಗುರು ಪೌರ್ಣಿಮೆ ಭಾರತೀಯ ಸಂಸ್ಕೃತಿಯ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಹಬ್ಬಗಳಲ್ಲಿ ಒಂದಾಗಿದೆ. ಆಷಾಢ ಮಾಸದ ಪೌರ್ಣಿಮೆಯಂದು ಈ ದಿನವನ್ನು ಆಚರಿಸಲಾಗುತ್ತದೆ. ಜ್ಞಾನ, ಸಂಸ್ಕಾರ, ಸತ್ಯ, ಧರ್ಮ ಮತ್ತು ಜೀವನದ ಮೌಲ್ಯಗಳನ್ನು ಬೋಧಿಸುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರು ಪೌರ್ಣಿಮೆ. ಮಹರ್ಷಿ ವೇದವ್ಯಾಸರು ವೇದಗಳನ್ನು ವಿಭಾಗಿಸಿ, ಮಹಾಭಾರತ ಹಾಗೂ ಪುರಾಣಗಳನ್ನು ರಚಿಸಿ ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಕಾರಣ ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ ಎಂದು ಮಾತನಾಡಿದರು. ಪಟ್ಟಣ ಪಂಚಾಯತ ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ ಪ್ರತಿಯೊಬ್ಬ ನಾಗರಿಕರು ಯೋಗದ ಮೂಲಕ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆ ಸಾಧಿಸಬೇಕು ಮತ್ತು ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕು. ಹಾಗೂ ಈಗಿನ ಯುವ ಪೀಳಿಗೆಗೆ ಗುರುಗಳ ಮಾರ್ಗದರ್ಶನದ ಮಹತ್ವವನ್ನು ತಿಳಿಸುವ ಕಾರ್ಯಗಳು ನಡೆಯಬೇಕು. ಸಮಾಜದಲ್ಲಿ ಶಿಸ್ತು, ಸೇವೆ ಹಾಗೂ ಸಂಸ್ಕಾರ ಮಾರ್ಗದರ್ಶನ ನೀಡಿದಾಗ ಗುರು ಹಿರಿಯರಲ್ಲಿ ಹಾಗೂ ಸಂಸ್ಕಾರವಂತರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲ ಯೋಗಬಂಧುಗಳು ಹಾಗೂ ಭಕ್ತರು ಸಹಭೋಜನದಲ್ಲಿ ಪಾಲ್ಗೊಂಡು ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಸೇವಾ ಮನೋಭಾವವನ್ನು ಬಲಪಡಿಸಿದರು. ಶಾಂತರಾಜ ಅಣ್ಣನವರು ಸೇವಾ ಪ್ರಮುಖರು ಬೆಂಗಳೂರು, , ಪಟ್ಟಣ ಪಂಚಾಯತ ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ವಹಿಸಿದ್ದರು. ಈ ಸಂದರ್ಭದಲ್ಲಿ ಶಾಂತರಾಜ ಅಣ್ಣನವರು ಸೇವಾ ಪ್ರಮುಖರು ಬೆಂಗಳೂರು, ಯೋಗ ಬಂಧುಗಳಾದ ಪ್ರಭು ಒಕ್ಕಳದ, ಸಿದ್ಧಾರೂಢ ಬಣ್ಣದ ಬಾವಿ, ಯಲ್ಲಪ್ಪ ಹಳ್ಳದ, ಮಹಾದೇವಿ ಕಂಬಳಿ ಅಕ್ಕನವರು ಶಾರದ ಅಕ್ಕನವರು, ಉಮಾ ಗುಡ್ಲಾನೂರ್ ಅಕ್ಕನವರು ಹಾಗೂ ಇತರ ಯೋಗ ಬಂಧುಗಳು ಇದ್ದರು. *ವರದಿ ಚನ್ನಯ್ಯ ಹಿರೇಮಠ ಕುಕನೂರು*
- ತುಮಕೂರು-ಶ್ರೀ ನೀಲಕಂಠೇರಶ್ವ ಸ್ವಾಮಿ ಪತ್ತಿನ ಸಹಕಾರ ಸಂಘದ 25ನೇ ರಜತ ಮಹೋತ್ಸವ #onlinetv24x7 #ಸೌಹಾರ್ದಸಂಘಗಳು #tumkur1
- ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ_ವಿಜಯನಗರ ಜಿಲ್ಲೆ ಕೂಡ್ಲಿಗಿ *ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಜುಲೈ 31ರಂದು , ಉಪ ಆರೋಗ್ಯಕೇಂದ್ರದಲ್ಲಿ ಡಿ ದರ್ಜೆ ನೌಕರರಾದ RNK ನಿಜಲಿಂಗಪ್ಪರವರಿಗೆ. ವಯೋ ನಿವೃತ್ತಿ ಹೊಂದಿದ RNK ನಿಜಲಿಂಗಪ್ಪರವರನ್ನು , ಆರೋಗ್ಯ ಸಿಬ್ಬಂದಿ ಹಾಗೂ ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು , ಅವರನ್ನು ಸನ್ಮಾನಿಸಿ ಗೌರವ ಪೂರ್ವಕವಾಗಿ ಬಿಳ್ಕೊಟ್ಟರು. ಮೂಲತಃ ಕೊಟ್ಟೂರು ರಾಂಪುರ ಗ್ರಾಮದವರಾದ , ನಿಜಲಿಂಗಪ್ಪರವರು. ಕಳೆದ ಮೂರು ದಶಕಗಳ ಹಿಂದೆಯೇ , ಬಳ್ಳಾರಿಯ ರೇಷ್ಮೆ ಇಲಾಖೆಯಲ್ಲಿ. ಮಾಸಿಕ ಭತ್ಯೆ ಹೊರಗುತ್ತಿಗೆ ಆಧಾರದಂತೆ , ಹತ್ತು ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಕರ್ಥವ್ಯೆ ನಿರ್ವಹಿಸಿದ್ದರು. ತದನಂತರ ಆರೊಗ್ಯ ಇಲಾಖೆಯಲ್ಲಿ ಕೆಲ ವರ್ಷಗಳ ಕಾಲ , ಹೊರಗುತ್ತಿಗೆ ಡಿ ದರ್ಜೆ ನೌಕರಾಗಿ ಕರ್ಥವ್ಯ ನಿರ್ವಹಿಸಿದರು. ನಂತರ ವಷ್ಠೆ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ , ಖಾಯಂ ನೌಕರರಾಗಿ ಗುರುತಿಸಿಕೊಂಡು ಮೂರುವರೆ ದಶಕಗಳ ಕಾಲ ಡಿ ದರ್ಜೆ ನೌಕರರಾರಿ ಕರ್ಥವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದಾರೆ. ನಿಜಲಿಂಪ್ಪರವರು ಚಿಕ್ಕಜೋಗಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ , 1998 ರಿಂದ ಸೇವೆ ಆರಂಭಿಸಿ ಜುಲೈ 31 2026 ರವರೆಗೆ. ಅಂದರೆ ಸತತ 34 ವರ್ಷಗಳ ಕಾಲ , ಚಿಕ್ಕಜೋಗಿಹಳ್ಳಿ ಉಪ ಆರೋಗ್ಯಕೇಂದ್ರದಲ್ಲಿ ಸೇವೆ ಸಲ್ಪಿಸಿದ್ದಾರೆ. 31 7 2026ರಂದು , ಅವರು ವಯೋ ನಿವೃತ್ತಿ ಹೊಂದಿರುತ್ತಾರೆ. ಅವರ ಸಾರ್ಥಕ ಸೇವೆ ಹಾಗೂ ಸನ್ನಡತೆ ಮೆಚ್ಚಿದ , ಆರೋಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು. ಮತ್ತು ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ , ವಿವಿದ ಸಂಘಟನೆಗಳ ಪದಾಧಿಕಾರಿಗಳು. ನಿಜಲಿಂಗಪ್ಪರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ , ಅಭಿಮಾನದಿಂದ ಹಾರೈಸಿ ಸರಳ ಬೀಳ್ಕೊಡುಗೆ ಸಮಾರಂಭದ ಮೂಲಕ ಬೀಳ್ಕೊಟ್ಟಿದ್ದಾರೆ. ಡಾ ॥ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಮಹಮದ್ ಸಾಧಿಕ್ ರವರು ಮಾತನಾಡಿ , ನಿಜಲಿಂಗಪ್ಪರವರು ಸಜ್ಜನ ಪ್ರಾಮಾಣಿಕ ನೌಕರರಾಗಿದ್ದರು. ಅವರು ಕಿಂಚಿತ್ತು ಯಾವುದೇ ದೋಷರೋಪಗಳಿಲ್ಲದೆ , ನಿಷ್ಕಳಂಕದಿಂದ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದು. ನಿಜಲಿಂಗಪ್ಪರವರ ಸಾರ್ಥಕ ಸೇವೆಗಾಗಿ , ಅವರನ್ನು ಅವರ ಮಡದಿಯೊಡಗೂಡಿ ತಾವು ಗೌರವಿಸಿ ಸನ್ಮಾನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅವರಿಗೆ ಮುಂದಿನ ಆರೋಗ್ಯ ಆಯಸ್ಸು ಸುಖಮಯವಾಗಿರಲೆಂದು , ತಾವು ದೇವರಲ್ಲಿ ಕೋರುವುದಾಗಿ ಅವರು ತಿಳಿಸಿದ್ದಾರೆ. ವಿಷ್ಣು ಸೇನಾ ಸಮಿತಿ ಮುಖಂಡರಾದ ಜನನಾಯಕ ಕುರಿಹಟ್ಟಿ ಓಬಣ್ಣ , ಮಲಿಯಪ್ಪ , ರಾಜು ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು. ಮತ್ತು ಆರೊಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದು. ನಿಜಲಿಂಗಪ್ಪರವರಿಗೆ ನಿವೃತ್ತಿ ಜೀವನ , ಸುಖಮಯವಾಗಿರಲೆಂದು ಶುಭ ಹಾರೈಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*3
- ರೈತರ ಹಕ್ಕಿಗಾಗಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಬ್ಯಾಲಿಗೆ ಅಭೂತಪೂರ್ವ ಜನಬೆಂಬಲ ಸಾವಿರಾರು ರೈತರು, ವಿವಿಧ ರೈತಪರ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಭಾಗವಹಿಸಿ ರೈತರ ನ್ಯಾಯಸಮ್ಮತ ನೀರಿನ ಹಕ್ಕಿಗಾಗಿ ಧ್ವನಿಯಾಗಿದ್ದಾರೆ.1
- ಗುರು ಕನಕ ವಿದ್ಯಾ ಕೇಂದ್ರದಲ್ಲಿ ಗುರು ಪೂರ್ಣಿಮೆ: ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಕೂಡ್ಲಿಗಿ: ತಾಲೂಕಿನ ತಾಯಕನಹಳ್ಳಿ ಶ್ರೀ ಗುರು ಕನಕ ವಿದ್ಯಾ ಕೇಂದ್ರದಲ್ಲಿ ಬುಧವಾರ ಗುರು ಪೂರ್ಣಿಮೆ ಪ್ರಯುಕ್ತ ಅಕ್ಷರಭ್ಯಾಸೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್.ಕೆ ಜಿ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಭ್ಯಾಸ ಆರಂಭೋತ್ಸವವನ್ನು ಪಾಲಕ ಪೋಷಕರು ಅದ್ದೂರಿಯಾಗಿ ಭಾಗವಹಿಸಿ ತಮ್ಮ ಮಕ್ಕಳಿಗೆ ಗುರುಗಳ ಸಮ್ಮುಖದಲ್ಲಿ ವೇದೋಕ್ತವಾಗಿ ಅಕ್ಷರ ಅಭ್ಯಾಸವನ್ನು ಮಾಡಿಸಿ ಧನ್ಯತಾಭಾವವನ್ನು ತಳಿದರು. 40 ಕ್ಕೂ ಹೆಚ್ಚು ಮಕ್ಕಳು ಪೋಷಕರ ಜೊತೆಗೂಡಿ ಅಕ್ಷರಾಭ್ಯಾಸ ಮಾಡಿದರು. ಪೋಷಕರು ಕೂಡ ಗುರುಕುಲ ಪದ್ಧತಿಯ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮದಿಂದ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಗಳು ಬಿ.ಟಿ. ಮಂಜಣ್ಣ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಮಕ್ಕಳಿಗೆ ಮನೆಯ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ನೀಡಿ. ಅಮೃತ ಹಸ್ತದಿಂದ ಗುರುಗಳ ಮಾರ್ಗದರ್ಶನದಿಂದ ಗುರುಪೂರ್ಣಿಮೆಯ ದಿನ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸಂಪ್ರದಾಯವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂಬ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಸಂಸ್ಥೆ ವತಿಯಿಂದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಋಷಿಮುನಿಗಳ ಕಾಲದಲ್ಲಿ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿ ಸಮಾಜದ ಸತ್ಪಜೆಗಳನ್ನಾಗಿ ರೂಪಿಸುತ್ತಿದ್ದರು. ಅದೇ ಮಾದರಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸುವ ಜೊತೆಗೆ ಗುಣಮಟ್ಟದ ಸಂಸ್ಕಾರ ಪೋಷಕರು ಮಹತ್ತರ ಜವಾಬ್ದಾರಿಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಜಾಸ್ತಿಯಾಗಿದ್ದು, ಇದನ್ನು ತಡೆಯಬೇಕು. ಮೊಬೈಲ್ ಸದ್ಬಳಕೆ ಎಷ್ಟು ಉಪಯುಕ್ತವೋ ಅಷ್ಟೇ ದುರ್ಬಳಕೆ ಅವಕಾಶಗಳು ಇದರಲ್ಲಿ ಸಾಕಷ್ಟು ಅಡಗಿದೆ. ಹೀಗಿರುವಾಗ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಪೋಷಕರು ಮೊಬೈಲ್ ಕೊಡಿಸುವುದು ತರವಲ್ಲ. ಮೊಬೈಲನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದು ಸರಿಯಿಲ್ಲ, ಅದರ ಅತಿಯಾದ ಬಳಕೆಯಿಂದ ತಮ್ಮ ವಿದ್ಯಾರ್ಥಿ ಜೀವನ ಹಾಳಾಗುತ್ತದೆ ಎಂಬ ಪರಿಜ್ಞಾನ ಮಕ್ಕಳಲ್ಲಿ ಬೆಳೆಯುವ ವಯಸ್ಸಿನವರೆಗೂ ಅವರಿಗೆ ಮೊಬೈಲ್ ಕೊಡಿಸುವುದು ಸೂಕ್ತವಲ್ಲ. ಇದರಿಂದ ಅವರ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದರು. ಈ ವೇಳೆ ಸುನಿತಾ ಗುರುರಾಜ್ ಮುಖ್ಯ ಶಿಕ್ಷಕಿ ಪ್ರಾಸ್ತಾವಿಕವಾಗಿ ಮಾತನಾಡಿ ಗು-ಎಂದರೆ ಅಂಧಕಾರ ರ-ಎಂದರೆ ಕಳೆಯುವ ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಗುರು ತಂದೆ ತಾಯಿ ಹೊರತುಪಡಿಸಿ ಗುರು ವ್ಯಕ್ತಿಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಅವರಿಗೆ ಗೌರವ ಸಮರ್ಪಣೆ ಮಾಡುವ ದಿನ ಇದಾಗಿದೆ. ಗುರುಪೂರ್ಣಿಮೆ ಮಾಹಿತಿ ತಿಳಿಸಿ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಎಂದು ತಿಳಿಸಿದರು. ಈ ವೇಳೆ ಚಿಕ್ಕೋವನಹಳ್ಳಿ ಶ್ರೀ ವೀರೇಶ ಸ್ವಾಮಿ ಪುರೋಹಿತರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಹಂಪಮ್ಮ ಪೂಜಾರ್, ಮಂಜುಳಾ, ಸುಮಿತ್ರ, ರುದ್ರಮ್ಮ, ನೇತ್ರಾವತಿ, ಮಮತಾ, ಜಿಪಿ ಬಸವರಾಜ್, ಬೋಧಕೇತರ ಸಿಬ್ಬಂದಿ ವರ್ಗದವರಾದ ಮಲ್ಲಿಕಾರ್ಜುನ ಶಾಂತಕುಮಾರ್ ವನಜಾಕ್ಷಮ್ಮ ಹಾಗೂ ಶಾಲಾ ಮಕ್ಕಳು, ಪೋಷಕರು ಭಾಗವಹಿಸಿದ್ದರು.1
- We are authorised distributor for Karnataka for Yodha agricultural equipments ಯೋಧ ರೋಟವೇಟರ್, ಯೋಧ ಮೆಕ್ಕೆ ಜೋಳ ಥ್ರೆಶರ್, ಯೋಧ ಮಲ್ಟಿ ಕ್ರಾಪ್ ಥ್ರೆಷರ್, ಯೋಧ ಮಲ್ಚರ್, ಯೋಧ ರಿವರ್ಸಿಬಲ್ ಪ್ಲೋವ್ ಮತ್ತು ಯೋಧಾ ರೋಟರಿ ಡಿಸ್ಕ್ ಹ್ಯಾರೋ ನಾವು ಕರ್ನಾಟಕ ರಾಜ್ಯದ ಕೃಷಿ ಉಪಕರಣಗಳ ವಿತರಕರು ಶ್ರೀ ಶಿವಬಸವ ಆಗ್ರೋ ಕೇರ್ ಹಾವೇರಿ ಸಂಪರ್ಕಿಸಿ: 7483066169 ಲೊಕೇಶನ್: ಇಂಡಸ್ಟ್ರಿಯಲ್ಲಿ ಏರಿಯಾ, near, TMAE ಕಾಲೇಜ್, ಹುಬ್ಬಳ್ಳಿ ರೋಡ್, ಹಾವೇರಿ. 581110 Yodha Rotavator, yodha maize thresher, yodha multi crop thresher, yodha mulcher, yodha reversible plough and Yodha rotary disc Harrow We are authorised distributor for karnataka Shri shivabasava agro care Haveri Contact us: 7483066169 Location: Industrial area, near, TMAE college, Hubli road, Haveri 5811101
- Post by Onlinetv24x71
- Post by YSRmedia vijayanagaraupsates1