logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲಿಂಗಸೂರು ಪಟ್ಟಣದ 7ನೇ ವಾರ್ಡಿನಲ್ಲಿ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಲಿಂಗಸುಗೂರು ಪಟ್ಟಣದ ಪಟ್ಟಣದ 7ನೇ ಎಕ್ಸ್ಪರ್ಟ್ ಸ್ಕೂಲ್ ಹತ್ತಿರ ಪ್ರತಿ ವರ್ಷದಂತೆ ಈ ವರ್ಷವೂ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಬೆಳಗಿನ ಜಾವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಣೇಶ ಯುವಕ ಮಂಡಳಿಯ ಸದಸ್ಯರು, ವಾರ್ಡಿನ ಗುರು ಹಿರಿಯರು ಮಹಿಳೆಯರು ಮಕ್ಕಳು ಗಣೇಶನ ಭಕ್ತರು ಭಾಗವಹಿಸಿದ್ದರು.

23 hrs ago
user_ಸಿದ್ದನಗೌಡ ಪಾಟೀಲ್
ಸಿದ್ದನಗೌಡ ಪಾಟೀಲ್
Lingsugur, Raichur•
23 hrs ago
d643f214-b7fb-4f7e-a3fc-50e8d8ea5a9f
916a529d-cfce-4201-90fa-5e35b19f0d26
8fc6de83-1d8a-4eca-a5c4-daf155c1f6f8

ಲಿಂಗಸೂರು ಪಟ್ಟಣದ 7ನೇ ವಾರ್ಡಿನಲ್ಲಿ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಲಿಂಗಸುಗೂರು ಪಟ್ಟಣದ ಪಟ್ಟಣದ 7ನೇ ಎಕ್ಸ್ಪರ್ಟ್ ಸ್ಕೂಲ್ ಹತ್ತಿರ ಪ್ರತಿ ವರ್ಷದಂತೆ ಈ ವರ್ಷವೂ ವಾರ್ಡ್ ನಂಬರ್ 7 ರ ಕಾ ಮಹಾರಾಜ್ ಗಣೇಶ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಬೆಳಗಿನ ಜಾವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಣೇಶ ಯುವಕ ಮಂಡಳಿಯ ಸದಸ್ಯರು, ವಾರ್ಡಿನ ಗುರು ಹಿರಿಯರು ಮಹಿಳೆಯರು ಮಕ್ಕಳು ಗಣೇಶನ ಭಕ್ತರು ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ ರೈತರ ಹೋರಾಟ ಬರಗಾಲ ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ
    1
    ರೈತರ ಹೋರಾಟ ಬರಗಾಲ  ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ
ರೈತರ ಹೋರಾಟ ಬರಗಾಲ  ಹೋರಾಟ ನಮ್ಮ ಯಾದಗಿರಿ ಜಿಲ್ಲಾ ಬರಗಾಲ ಘೋಷಣೆ ಮಾಡು ಅಂತ ಹೋರಾಟ ನಡೆದಿದೆ ಮುಖಂಡ ಅಮಿನ್ ರೆಡ್ಡಿ ಅಳಿಗೆ
    user_ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಯಾದಗಿರಿ, ಯಾದಗಿರಿ, ಕರ್ನಾಟಕ•
    7 hrs ago
  • ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಜಿಲ್ಲಾಡಳಿತ ಭವನದ ಎದುರು ಸರಕಾರಿ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆ ಸರ್ವರ್ ಸಮಸ್ಯೆಯಿಂದ ದಿನಕ್ಕೆ ಕೇವಲ 5–10 ಪಡಿತರ ಚೀಟಿಗಳ ಇ-ಕೆವೈಸಿ ಇ-ಕೆವೈಸಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ಪಡಿತರ ಚೀಟಿದಾರರು ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು–ಚೀಟಿದಾರರ ನಡುವೆ ವಾಗ್ವಾದ ವಿತರಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳ ಒತ್ತಡ: ಆರೋಪ ಇ-ಕೆವೈಸಿ ಪ್ರಕ್ರಿಯೆಯಿಂದ ವಿತರಕರಿಗೆ ಮಾನಸಿಕ ಒತ್ತಡ ಹೆಚ್ಚಳ ವಿತರಕರ ಆರೋಗ್ಯದ ಮೇಲೂ ದುಷ್ಪರಿಣಾಮ: ಸಂಘದ ಆರೋಪ ಐಹೊಳೆ ಗ್ರಾಮದ ವಿತರಕಿ ಗುರುದೇವಿ ಪ್ಯಾಟಿಶೆಟ್ಟರ ಅವರಿಗೆ ಅನಾರೋಗ್ಯ: ಸಂಘದ ಉಲ್ಲೇಖ ಇ-ಕೆವೈಸಿ ಸರ್ವರ್ ಸಮಸ್ಯೆ ಕೂಡಲೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ
    1
    ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ
ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ
ಜಿಲ್ಲಾಡಳಿತ ಭವನದ ಎದುರು ಸರಕಾರಿ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆ
ಸರ್ವರ್ ಸಮಸ್ಯೆಯಿಂದ ದಿನಕ್ಕೆ ಕೇವಲ 5–10 ಪಡಿತರ ಚೀಟಿಗಳ ಇ-ಕೆವೈಸಿ
ಇ-ಕೆವೈಸಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ಪಡಿತರ ಚೀಟಿದಾರರು
ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು–ಚೀಟಿದಾರರ ನಡುವೆ ವಾಗ್ವಾದ
ವಿತರಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳ ಒತ್ತಡ: ಆರೋಪ
ಇ-ಕೆವೈಸಿ ಪ್ರಕ್ರಿಯೆಯಿಂದ ವಿತರಕರಿಗೆ ಮಾನಸಿಕ ಒತ್ತಡ ಹೆಚ್ಚಳ
ವಿತರಕರ ಆರೋಗ್ಯದ ಮೇಲೂ ದುಷ್ಪರಿಣಾಮ: ಸಂಘದ ಆರೋಪ
ಐಹೊಳೆ ಗ್ರಾಮದ ವಿತರಕಿ ಗುರುದೇವಿ ಪ್ಯಾಟಿಶೆಟ್ಟರ ಅವರಿಗೆ ಅನಾರೋಗ್ಯ: ಸಂಘದ ಉಲ್ಲೇಖ
ಇ-ಕೆವೈಸಿ ಸರ್ವರ್ ಸಮಸ್ಯೆ ಕೂಡಲೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    8 hrs ago
  • ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು. ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡ‌ರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು. ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು. ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು. 3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು. ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್ (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್‌ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು. *ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
    1
    ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್
ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು.
ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡ‌ರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು.
ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು.
ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು.
3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು.
ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್  (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ  ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್‌ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.
*ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
    user_STAR OF KOPPAL
    STAR OF KOPPAL
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    9 hrs ago
  • ಮಾತೆ ಮಾಣಿಕೇಶ್ವರಿ ನಗರದಲ್ಲಿ ಗಣೇಶನ ಭವ್ಯ ಮೆರವಣಿಗೆ ಯಾದಗಿರಿ: ನಗರದ ಮಾತೆ ಮಾಣಿಕೇಶ್ವರಿ ನಗರದಲ್ಲಿ ಮಹಿಳಾ ಬಳಗದ ವತಿಯಿಂದ ಗಣೇಶ ಚತುರ್ದಶಿ ಅಂಗವಾಗಿ ಗಣೇಶನ ಆಗಮನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಶ್ರೀ ಮ.ನಿ.ಪ್ರ. ಕಲ್ಯಾಣ ಸ್ವಾಮಿಗಳು ಹಾಗೂ ಪರಮಪೂಜ್ಯ ಷಟಾಕ್ಷರಿ ಚಲಿಸಿದ ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಕುಂಭಮೇಳದೊಂದಿಗೆ ಸಾಗಿದ ಗಣೇಶನ ಭವ್ಯ ಮೆರವಣಿಗೆಯು ಮಾತೆ ಮಾಣಿಕೇಶ್ವರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಭಕ್ತರು ಭಕ್ತಿ-ಶ್ರದ್ಧೆಯಿಂದ ಗಣೇಶನನ್ನು ಪೂಜಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    1
    ಮಾತೆ ಮಾಣಿಕೇಶ್ವರಿ ನಗರದಲ್ಲಿ ಗಣೇಶನ ಭವ್ಯ ಮೆರವಣಿಗೆ
ಯಾದಗಿರಿ: ನಗರದ ಮಾತೆ ಮಾಣಿಕೇಶ್ವರಿ ನಗರದಲ್ಲಿ ಮಹಿಳಾ ಬಳಗದ ವತಿಯಿಂದ ಗಣೇಶ ಚತುರ್ದಶಿ ಅಂಗವಾಗಿ ಗಣೇಶನ ಆಗಮನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಶ್ರೀ ಮ.ನಿ.ಪ್ರ. ಕಲ್ಯಾಣ ಸ್ವಾಮಿಗಳು ಹಾಗೂ ಪರಮಪೂಜ್ಯ ಷಟಾಕ್ಷರಿ ಚಲಿಸಿದ ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು.
ಕುಂಭಮೇಳದೊಂದಿಗೆ ಸಾಗಿದ ಗಣೇಶನ ಭವ್ಯ ಮೆರವಣಿಗೆಯು ಮಾತೆ ಮಾಣಿಕೇಶ್ವರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಭಕ್ತರು ಭಕ್ತಿ-ಶ್ರದ್ಧೆಯಿಂದ ಗಣೇಶನನ್ನು ಪೂಜಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    user_Ramesh Vishwakarma
    Ramesh Vishwakarma
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    22 hrs ago
  • ಲಚ್ಚಪ್ಪ ಜಮಾದಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ನಾಳೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಕೋಲಿ ಸಮಾಜದ ಮುಖಂಡರ ಮನವಿ. ಕಲಬುರಗಿ: ಲಚ್ಚಪ್ಪ ಜಮಾದಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ನಾಳೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಕೋಲಿ ಸಮಾಜದ ಮುಖಂಡರ ಮನವಿ.
    1
    ಲಚ್ಚಪ್ಪ ಜಮಾದಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ನಾಳೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಕೋಲಿ ಸಮಾಜದ ಮುಖಂಡರ ಮನವಿ.
ಕಲಬುರಗಿ: ಲಚ್ಚಪ್ಪ ಜಮಾದಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ನಾಳೆ ಪ್ರತಿಭಟನೆಯಲ್ಲಿ ಭಾಗಿಯಾಗಲು ಕೋಲಿ ಸಮಾಜದ ಮುಖಂಡರ ಮನವಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    15 min ago
  • ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ
    1
    ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ
ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    2 hrs ago
  • ಸೆಪ್ಟೆಂಬರ 18 ರಂದು ದಕ್ಷಿಣ ಕನ್ನಡ ದಲ್ಲಿ ಸಚಿವ ಸಂಪುಟ ಸಭೆ : ಸಿಎಂ ಡಿ.ಕೆ. ಶಿವಕುಮಾರ ಇದೇ ತಿಂಗಳು 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುತ್ತಿದ್ದು, ಆ ಭಾಗದ ಶಾಸಕರು, ಮಂತ್ರಿಗಳು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಭಾಗದ ಜನ ಉದ್ಯೋಗಕ್ಕಾಗಿ ಹೊರಗೆ ಹೋಗುತ್ತಿರುವುದನ್ನು ತಪ್ಪಿಸಿ, ಅಲ್ಲಿನ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಅವರ ಬದುಕಿನಲ್ಲಿ ಬದಲಾವಣೆ ತರಲು ಅನೇಕ ಹೊಸ ಚಿಂತನೆಗಳನ್ನು ಘೋಷಣೆ ಮಾಡಲಾಗುವುದು" ಎಂದು ಹೇಳಿದರು.
    1
    ಸೆಪ್ಟೆಂಬರ 18 ರಂದು ದಕ್ಷಿಣ ಕನ್ನಡ ದಲ್ಲಿ ಸಚಿವ ಸಂಪುಟ ಸಭೆ : ಸಿಎಂ ಡಿ.ಕೆ. ಶಿವಕುಮಾರ 
ಇದೇ ತಿಂಗಳು 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುತ್ತಿದ್ದು, ಆ ಭಾಗದ ಶಾಸಕರು, ಮಂತ್ರಿಗಳು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಭಾಗದ ಜನ ಉದ್ಯೋಗಕ್ಕಾಗಿ ಹೊರಗೆ ಹೋಗುತ್ತಿರುವುದನ್ನು ತಪ್ಪಿಸಿ, ಅಲ್ಲಿನ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಅವರ ಬದುಕಿನಲ್ಲಿ ಬದಲಾವಣೆ ತರಲು ಅನೇಕ ಹೊಸ ಚಿಂತನೆಗಳನ್ನು ಘೋಷಣೆ ಮಾಡಲಾಗುವುದು" ಎಂದು ಹೇಳಿದರು.
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    22 hrs ago
  • ಅಧಿಕಾರಿಗಳು ಲೂಟಿಗಾರರ ಗ್ಯಾಂಗಿನಿಂದ ದೂರವಿರಿ: ತಾಲೂಕಿನ ಶಾಸಕರ ಹಾಗೂ ಅವರ ಪುತ್ರರ ಆಡಳಿತಕ್ಕೆ ತಾಲೂಕಿನ ಜನರು ಬೇಸತ್ತು ಹೋಗಿದ್ದಾರೆ: ನಿತಿನ್ ಗುತ್ತೇದಾರ್.
    1
    ಅಧಿಕಾರಿಗಳು ಲೂಟಿಗಾರರ ಗ್ಯಾಂಗಿನಿಂದ ದೂರವಿರಿ: ತಾಲೂಕಿನ ಶಾಸಕರ ಹಾಗೂ ಅವರ ಪುತ್ರರ ಆಡಳಿತಕ್ಕೆ ತಾಲೂಕಿನ ಜನರು ಬೇಸತ್ತು ಹೋಗಿದ್ದಾರೆ: ನಿತಿನ್ ಗುತ್ತೇದಾರ್.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    20 min ago
  • ಅನ್ಯಾಯ........................................ ...... .. . 🚨🌾 ಆತ್ಮೀಯರೇ, ಅಫಜಲಪುರ ತಾಲೂಕಿಗೆ ಸಂಪೂರ್ಣ ಅನ್ಯಾಯವಾಗುತ್ತಿದೆ! 🌾🚨 “ಮನೆಗೆ ಮಾರಿ, ಪರರಿಗೆ ಉಪಕಾರಿ” ಎನ್ನುವಂತಾಗಿದೆ ನಮ್ಮ ತಾಲೂಕಿನ ಸ್ಥಿತಿ. ಅಫಜಲಪುರ ತಾಲೂಕಿನ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ₹318 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕೆರೆ ತುಂಬುವ ಯೋಜನೆಯಿಂದ ನಮ್ಮ ತಾಲೂಕಿನ ರೈತರಿಗೆ ನಿಜವಾದ ಪ್ರಯೋಜನ ಸಿಗುತ್ತಿದೆಯೇ? ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ರೈತನ ಮುಂದಿದೆ. ಕೇವಲ ಆಳಂದ ತಾಲೂಕಿಗೆ ನೀರು ಹರಿಸುತ್ತಿದ್ದು, ಅಫಜಲಪುರ ತಾಲೂಕಿನ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸುವ ವ್ಯವಸ್ಥೆ ಮಾಡದೆ, ಕಾಟಾಚಾರಕ್ಕಾಗಿ ಕೆಲವೇ ಕೆರೆಗಳಿಗೆ ಸಂಪರ್ಕ ಕಲ್ಪಿಸಿರುವುದು ತಾಲೂಕಿನ ರೈತರಿಗೆ ಅನ್ಯಾಯವಾಗಿದೆ ಎಂಬ ಆತಂಕ ಎದುರಾಗಿದೆ. ಕಳೆದ ನಾಲ್ಕು ದಿನಗಳಿಂದ ಇದೇ ರೀತಿ ನೀರು ಆಳಂದ ಕಡೆಗೆ ಹರಿದರೆ, ಕಾಲುವೆಗಳಿಗೆ ನೀರು ಬರುವ ಮುನ್ನವೇ ಬ್ಯಾರೇಜ್‌ನಲ್ಲಿ ಒಳಹರಿವು ಕಡಿಮೆಯಾಗುತ್ತಿದ್ದು, ಪ್ರತಿದಿನ ನೀರಿನ ಮಟ್ಟ ಇಳಿಯುತ್ತಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ⚠️ ಇದೇ ಪರಿಸ್ಥಿತಿ ಮುಂದುವರಿದರೆ: 💧 ಅಫಜಲಪುರ ಪಟ್ಟಣದ ಕುಡಿಯುವ ನೀರಿನ ಭವಿಷ್ಯ ಸಂಕಷ್ಟಕ್ಕೆ ಸಿಲುಕಬಹುದು. 🌾 ಭೀಮಾ ಏತ ನೀರಾವರಿ ಕಾಲುವೆಗಳಿಗೆ ಸಮರ್ಪಕ ನೀರು ಸಿಗದೆ ರೈತರ ಬೆಳೆಗಳು ಹಾಳಾಗಬಹುದು. 🚜 ಕಬ್ಬು ಬೆಳೆದಿರುವ ರೈತರ ಬದುಕು ಸಂಕಷ್ಟಕ್ಕೆ ಸಿಲುಕಬಹುದು 🌾 ತಾಲೂಕಿನ ಕೆರೆಗಳಿಗೆ ನೀರು ಬೇಕು. 💧 ರೈತರ ಕಾಲುವೆಗಳಿಗೆ ನೀರು ಬೇಕು. 🚰 ಅಫಜಲಪುರದ ಕುಡಿಯುವ ನೀರಿನ ಭದ್ರತೆ ಬೇಕು. ಆತ್ಮೀಯರೇ, ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು? 👉 ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. 👉 ತಾಲೂಕಿನ ಹಿತಕ್ಕಾಗಿ ಎಲ್ಲರೂ ಒಂದಾಗಿ ಧ್ವನಿ ಎತ್ತೋಣ. ✊🌾 ರೈತರ ಒಗ್ಗಟ್ಟೇ ನಮ್ಮ ಶಕ್ತಿ — ನೀರಿಗಾಗಿ ಹೋರಾಟ ಅನಿವಾರ್ಯ! ಸಂತೋಷ್ ಜಿ. ಮಲಗೊಂಡ ಅಧ್ಯಕ್ಷರು, ಅಫಜಲಪುರ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
    1
    ಅನ್ಯಾಯ........................................
......



..
.
🚨🌾 ಆತ್ಮೀಯರೇ, ಅಫಜಲಪುರ ತಾಲೂಕಿಗೆ ಸಂಪೂರ್ಣ ಅನ್ಯಾಯವಾಗುತ್ತಿದೆ! 🌾🚨
“ಮನೆಗೆ ಮಾರಿ, ಪರರಿಗೆ ಉಪಕಾರಿ” ಎನ್ನುವಂತಾಗಿದೆ ನಮ್ಮ ತಾಲೂಕಿನ ಸ್ಥಿತಿ.
ಅಫಜಲಪುರ ತಾಲೂಕಿನ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ₹318 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕೆರೆ ತುಂಬುವ ಯೋಜನೆಯಿಂದ ನಮ್ಮ ತಾಲೂಕಿನ ರೈತರಿಗೆ ನಿಜವಾದ ಪ್ರಯೋಜನ ಸಿಗುತ್ತಿದೆಯೇ? ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ರೈತನ ಮುಂದಿದೆ.
ಕೇವಲ ಆಳಂದ ತಾಲೂಕಿಗೆ ನೀರು ಹರಿಸುತ್ತಿದ್ದು, ಅಫಜಲಪುರ ತಾಲೂಕಿನ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸುವ ವ್ಯವಸ್ಥೆ ಮಾಡದೆ, ಕಾಟಾಚಾರಕ್ಕಾಗಿ ಕೆಲವೇ ಕೆರೆಗಳಿಗೆ ಸಂಪರ್ಕ ಕಲ್ಪಿಸಿರುವುದು ತಾಲೂಕಿನ ರೈತರಿಗೆ ಅನ್ಯಾಯವಾಗಿದೆ ಎಂಬ ಆತಂಕ ಎದುರಾಗಿದೆ.
ಕಳೆದ ನಾಲ್ಕು ದಿನಗಳಿಂದ ಇದೇ ರೀತಿ ನೀರು ಆಳಂದ ಕಡೆಗೆ ಹರಿದರೆ, ಕಾಲುವೆಗಳಿಗೆ ನೀರು ಬರುವ ಮುನ್ನವೇ ಬ್ಯಾರೇಜ್‌ನಲ್ಲಿ ಒಳಹರಿವು ಕಡಿಮೆಯಾಗುತ್ತಿದ್ದು, ಪ್ರತಿದಿನ ನೀರಿನ ಮಟ್ಟ ಇಳಿಯುತ್ತಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
⚠️ ಇದೇ ಪರಿಸ್ಥಿತಿ ಮುಂದುವರಿದರೆ:
💧 ಅಫಜಲಪುರ ಪಟ್ಟಣದ ಕುಡಿಯುವ ನೀರಿನ ಭವಿಷ್ಯ ಸಂಕಷ್ಟಕ್ಕೆ ಸಿಲುಕಬಹುದು.
🌾 ಭೀಮಾ ಏತ ನೀರಾವರಿ ಕಾಲುವೆಗಳಿಗೆ ಸಮರ್ಪಕ ನೀರು ಸಿಗದೆ ರೈತರ ಬೆಳೆಗಳು ಹಾಳಾಗಬಹುದು.
🚜 ಕಬ್ಬು ಬೆಳೆದಿರುವ ರೈತರ ಬದುಕು ಸಂಕಷ್ಟಕ್ಕೆ ಸಿಲುಕಬಹುದು
🌾 ತಾಲೂಕಿನ ಕೆರೆಗಳಿಗೆ ನೀರು ಬೇಕು.
💧 ರೈತರ ಕಾಲುವೆಗಳಿಗೆ ನೀರು ಬೇಕು.
🚰 ಅಫಜಲಪುರದ ಕುಡಿಯುವ ನೀರಿನ ಭದ್ರತೆ ಬೇಕು.
ಆತ್ಮೀಯರೇ, ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?
👉 ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
👉 ತಾಲೂಕಿನ ಹಿತಕ್ಕಾಗಿ ಎಲ್ಲರೂ ಒಂದಾಗಿ ಧ್ವನಿ ಎತ್ತೋಣ.
✊🌾 ರೈತರ ಒಗ್ಗಟ್ಟೇ ನಮ್ಮ ಶಕ್ತಿ — ನೀರಿಗಾಗಿ ಹೋರಾಟ ಅನಿವಾರ್ಯ!
ಸಂತೋಷ್ ಜಿ. ಮಲಗೊಂಡ
ಅಧ್ಯಕ್ಷರು, ಅಫಜಲಪುರ ತಾಲೂಕು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
    user_Santosh malagond
    Santosh malagond
    Farmer ಅಫ್ಜಲಪುರ, ಕಲಬುರಗಿ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.