ಚರಂಡಿ ನೀರು ಮನೆ ಬಾಗಿಲಿಗೆ ದುರ್ವಾಸನೆಯಿಂದ ಜನರ ಪರದಾಟ! ಗ್ರಾಮ ಪಂಚಾಯಿತಿ ಅಧಿಕಾರಿಗಳ ಬೇ ಜವಾಬ್ದಾರಿ? ಚಿಕ್ಕಬಳ್ಳಾಪುರ : ಮನೆ ಬಾಗಿಲಿಗೆ ಬಂದು ನಿಲ್ಲುವ ಕೊಳಚೆ ನೀರು,...ರಸ್ತೆಯಲ್ಲಿ ಹರಿಯುವ ಶೌಚ ನೀರು, ಮನೆಯಿಂದ ಹೊರ ಬಂದರೆ ದುರ್ವಾಸನೆ,, ಕುಡಿಯುವ ನೀರಿಗೂ ಪರದಾಟ... ಇದು ತಾಲೂಕಿನ ಹೊಸಹುಡ್ಯ ಗ್ರಾಮದ ಎಡಿ ಕಾಲೋನಿಯ ದಯನೀಯ ಸ್ಥಿತಿ. ಜಿಲ್ಲಾಡಳಿತ ಭವನಕ್ಕೆ ಕೇವಲ ನಾಲ್ಕು ಕಿಲೋಮೀಟರ್ ದೂರದ ಹೊಸಹುಡ್ಯದ ಏಡಿ ಕಾಲೋನಿಗೆ ಹೋದರೆ ದುರ್ನಾತ ಮೂಗಿಗೆ ರಾಚುತ್ತದೆ. ಹೆಚ್ಚಾಗಿ ಕೂಲಿ ನಾಲಿ ಮಾಡುವ ಬಡ ಕುಟುಂಬಗಳೇ ವಾಸಿಸುವ ಈ ಕಾಲೋನಿಯಲ್ಲಿ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಕೊಳಚೆ ನೀರು ಮನೆ ಬಾಗಿಲಿನಲ್ಲಿ ನಿಲ್ಲುತ್ತಿದೆ. ನಿತ್ಯ ಮೂಗು ಮುಚ್ಚಿಕೊಂಡೇ ಜನ ಸಂಚರಿಸುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ಇನ್ನಷ್ಟು ನಿಕೃಷ್ಟದ ಜೀವನವನ್ನು ಇಲ್ಲಿನ ನಿವಾಸಿಗಳು ಜೀವಿಸುವಂತಾಗಲಿದೆ. ನೀರು ಹರಿಯಬೇಕಾದ ಚರಂಡಿಗೆ ಕಾಲೋನಿ ಕಡೆಯ ಚರಂಡಿ ನೀರು ಬಾರದಂತೆ ಕಸ, ತ್ಯಾಜ್ಯ ತುಂಬಿಸಿದ್ದಾರೆ ಹೀಗಾಗಿ ನೀರು ಚರಂಡಿಯಲ್ಲಿ ಅದು ಮುಂದೆ ಸಾಗದೆ ನಮ್ಮ ಮನೆಯ ಅಂಗಳದತ್ತ ರಾಚುತವೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ. ಇನ್ನು ಜೋರು ಮಳೆ ಬಂದರೆ ಇದೇ ನೀರು ಮನೆಗಳಿಗೂ ನುಗ್ಗುತ್ತದೆ. ಚರಂಡಿ ನೀರು ಮಾತ್ರವಲ್ಲದೇ ಶೌಚಾಲಯದ ನೀರು ಕೂಡ ಮನೆ ಸೇರುತ್ತದೆ. ಒಳಚರಂಡಿ ಸಮರ್ಪಕವಾಗಿ ಇಲ್ಲದ ಕಾರಣ ಶೌಚಗುಂಡಿ ನೀರು ರಸ್ತೆಯ ಮೇಲೂ ಹರಿಯುತ್ತದೆ. ಇದರ ಮೇಲೆಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಚಿಕ್ಕಗಂಗಪ್ಪ ನರಸಿಂಹಯ್ಯ ನಿವಾಸಿಗಳು. ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಾರ್ಯದರ್ಶಿಗಳಿಗೆ ಮೌಖಿಕವಾಗಿ ತಿಳಿಸಲಾಗಿತ್ತು ಅಲ್ಲದೆ ಅವರಿಗೆ ದೂರೂ ಸಹ ನೀಡಲಾಗಿತ್ತು 10 ಬಾರಿ ಹೇಳಿದರೆ ಒಮ್ಮೆ ಬರುತ್ತೇವೆ ಎಂಬ ಸಬೂಬು ಬಿಟ್ಟರೆ ಇಲ್ಲಿ ಏನು ಕೆಲಸ ಆಗಿಲ್ಲ ಬದಲಿಗೆ ಈವರೆಗೆ ಯಾವುದೇ ಕ್ರಮಗೊಂಡಿಲ್ಲ ಎಂದು ಕಾಲೋನಿ ನಿವಾಸಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಕಾಲೋನಿಯಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ವಾಸವಿದ್ದು, ಸರ್ಕಾರ ಸರಿಯಾಗಿ ಮೂಲ ಸೌಕರ್ಯ ನೀಡುವಲ್ಲಿ ವಿಫಲವಾಗಿದೆ. ಕಲುಷಿತ ವಾತಾವರಣದಲ್ಲಿ ಅನಾರೋಗ್ಯದ ಭಯದಲ್ಲಿ ಬದುಕುತ್ತಿದ್ದೇವೆ’ ಸೊಳ್ಳೆಗಳ ಕಾಟ ಕೂಡ ವಿಪರೀತವಾಗಿದೆ. ಚರಂಡಿ ಮತ್ತು ಒಳಚರಂಡಿ ನೀರು ಸಮರ್ಪಕವಾಗಿ ಹರಿದು ಹೋದರೆ ಎಲ್ಲಾ ಸಮಸ್ಯೆ ತಪ್ಪಲಿದೆ ಗ್ರಾಮ ಪಂಚಾಯಿತಿ ಇದ್ಯಾವ ಕೆಲಸವೂ ಮಾಡುತ್ತಿಲ್ಲ ಇನ್ನು ಕಸ ನಿರ್ವಹಣೆ ಕೂಡ ಸರಿಯಾಗಿ ಆಗುತ್ತಿಲ್ಲದಿರುವುದು ಉಂಟು ಬೀದಿ ನಾಯಿಗಳ ಕಾಟ ಕೂಡ ಹೆಚ್ಚಾಗಿದ್ದು, ಮನೆಯಿಂದ ಮಕ್ಕಳು ಹೊರಬರಲು ಹೆದರುತ್ತಿದ್ದಾರೆ ಗ್ರಾ.ಪಂ. ಶಾಶ್ವತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕ ಪಂಚಾಯಿತಿ ಜಿಲ್ಲಾ ಪಂಚಾಯಿತಿಯ ಮೇಲಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು ಎಂಬುದು ನಿವಾಸಿಗಳ ಒತ್ತಾಯ. ಮನೆ ಅಂಗಳದಲ್ಲಿ ಕೊಳಚೆ ನೀರು ನಿಲ್ಲುವುದು, ವಿಶೇಷವಾಗಿ ಮಳೆಗಾಲದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದಿದ್ದಾಗ, ಗಂಭೀರ ಆರೋಗ್ಯ ಮತ್ತು ನೈರ್ಮಲ್ಯದ ಸಮಸ್ಯೆಯಾಗಿದೆ. ಇದು ಸೊಳ್ಳೆಗಳ ಉತ್ಪಾದನೆ ಹಾಗೂ ದುರ್ವಾಸನೆಗೆ ಮತ್ತು ಸೋಂಕು ರೋಗಗಳ ಹರಡುವಿಕೆಗೆ ಕಾರಣವಾಗುತಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನ ತೋಡಿಕೊಂಡರು. ನೀರು ನಿಂತ ಜಾಗದಲ್ಲಿ ಬ್ಲೀಚಿಂಗ್ ಪೌಡರ್ ಅಥವಾ ಸುಣ್ಣವನ್ನು ಸಿಂಪಡಿಸಿ ದುರ್ವಾಸನೆಯಿಂದ ಮುಕ್ತಿಗೊಳಿಸಬೇಕಿದೆ. ಎಂದು ಚಿಕ್ಕಗಂಗಯ್ಯ, ವೆಂಕಟೇಶಪ್ಪ, ನರಸಿಂಹಮೂರ್ತಿ, ಮರಿಯಪ್ಪ ಚನ್ನಕೃಷ್ಣಪ್ಪ, ಚನ್ನರಾಯಪ್ಪ, ರಾಜಪ್ಪ ದೊಡ್ಡೇಗೌಡ ಕೃಷ್ಣಮ್ಮ ಸೇರಿದಂತೆ ಇತರರು ದೂರಿದ್ದಾರೆ ಅಲ್ಲದೆ ಈ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೆ ಆದರೆ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಧರಣಿ ಮಾಡುವ ಎಚ್ಚರಿಕೆ ನೀಡಿದರು.

- Post by Venu Gopal1
- Post by KRUTHI NEWS KANNADA1
- ಶುದ್ದ ಕುಡಿಯುವ ನೀರಿನ ಘಟಕಗಳ ಹಾಗೂ ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ಬಾಗೇಪಲ್ಲಿ:- ಇಂದು ಬಾಗೆಪಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಎಸ್. ಎನ್. ಸುಬ್ಬಾರೆಡ್ಡಿ ಶಾಸಕರು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ ರವರ ಅಧ್ಯಕ್ಷತೆಯಲ್ಲಿ ಡಾ|| ನವೀನ್ ಭಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ. ಪಂ ರವರ ಉಪಸ್ಥಿತಿಯಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ, ಶುದ್ದ ಕುಡಿಯುವ ನೀರಿನ ಘಟಕಗಳ ಬಗ್ಗೆ ಮತ್ತು ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯದರ್ಶಿ ಜಿ. ಪಂ,ಜಿಲ್ಲಾ ಕುಡಿಯುವ ನೀರು & ನೖರ್ಮಲ್ಯ ಇಲಾಖೆಯ ಇಂಜಿನಿಯರ್ ಬಾಗೆಪಲ್ಲಿ ಗುಡಿಬಂಡೆ,ಹಾಗೂ ಚೇಳೂರು ತಾಲ್ಲೂಕಿನ ತಹಶಿಲ್ದಾರು,ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರು ,ಮೂರು ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿಗಳು ಹಾಜರಿದ್ದರು1
- ಇವರು 22 ವರ್ಷದ ಗುಲ್ಜಾರ್ ಶೇಖ್. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ನಿವಾಸಿಯಾಗಿರುವ ಇವರು ‘ಇಂಡಿಯನ್ ಹ್ಯಾಕರ್’ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾನೆ. ಹೆಚ್ಚು ವ್ಯೂಸ್ ಪಡೆಯುವ ಉದ್ದೇಶದಿಂದ ರೈಲು ಹಳಿಗಳ ಮೇಲೆ ಸೈಕಲ್, ಕಲ್ಲು ಹಾಗೂ ಸಿಲಿಂಡರ್ ಇಟ್ಟು ಅಪಾಯಕಾರಿ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ. ಈ ಕೃತ್ಯದಿಂದ ರೈಲು ಸಂಚಾರಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದ್ದ ಹಿನ್ನೆಲೆ ಆರ್‌ಪಿಎಫ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವ್ಯೂಸ್‌ಗಾಗಿ ಜೀವಗಳನ್ನು ಅಪಾಯಕ್ಕೆ ತಳ್ಳುವಂತಹ ಕೃತ್ಯಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.1
- Madrase Hajira niswan bismilla negar near nisar negar kolar1
- Post by Ayub Pasha1
- Post by Rownak Ali khan1
- *ಚಿಂತಾಮಣಿ:-ಏಪ್ರಿಲ್ 1 ರಿಂದ ತೆರಿಗೆ ಪಾವತಿಸುವ ನಾಗರಿಕರಿಗೆ ಶೇಕಡಾ.5 ರಷ್ಟು ರಿಯಾಯಿತಿಯನ್ನು ಘೋಷಿಸಿ ಸರ್ಕಾರ ಆದೇಶ* ಚಿಂತಾಮಣಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದೆ. ಆರಂಭದ ಮಾಹೆಯಲ್ಲಿ ಆಸ್ತಿ ತೆರಿಗೆ ಪಾವತಿಸುವ ನಾಗರಿಕರಿಗೆ ಶೇ.5 ರಷ್ಟು ರಿಯಾಯಿತಿಯನ್ನು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ನಗರಸಭೆ ಆಯುಕ್ತ ಜಿ.ಎನ್.ಚಲಪತಿ ತಿಳಿಸಿದರು. ನಾಗರಿಕರು ಸುಲಭವಾಗಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ನಗರಸಭೆಯಲ್ಲಿ ಹಾಗೂ ವಿವಿಧ ಭಾಗಗಳಲ್ಲಿ ತೆರಿಗೆ ವಸೂಲಿ ಕೇಂದ್ರಗಳನ್ನು ತೆರೆಯಲಾಗುವುದು. ನಗರಸಭೆ ಕಚೇರಿಯಲ್ಲೇ ಬ್ಯಾಂಕ್ ಕೌಂಟರ್ ತೆರೆಯಲಾಗಿದೆ. ನಾಗರಿಕರು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲದೆ ಶೀಘ್ರವಾಗಿ ಚಲನ್ ಪಡೆದು ತೆರಿಗೆ ಪಾವತಿಸಬಹುದು ಎಂದರು. ವಾಣಿಜ್ಯ ಮಳಿಗೆಗಳ ತೆರಿಗೆ ಮೌಲ್ಯಮಾಪನವನ್ನು ನಗರಸಭೆಯ ಅಧಿಕಾರಿಗಳು ಕ್ರಾಸ್ ವೆರಿಫಿಕೇಶನ್ ಮಾಡಲಾಗುವುದು. ತೆರಿಗೆಯಲ್ಲಿ ನಿಗಧಿಪಡಿಸುವಲ್ಲಿ ವಂಚನೆ, ಮೋಸ ಕಂಡುಬಂದಲ್ಲಿ ಕಾನೂನಿನಂತೆ ಕ್ರಮಕೈಗೊಂಡು ದುಪ್ಪಟ್ಟು ದಂಡ ವಿಧಿಸಲಾಗುವುದು. ವಿಶೇಷವಾಗಿ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಕಾನೂನಿನಂತೆ ಮೌಲ್ಯತಮಾಪನ ಮಾಡಿ ಪಾವತಿಸಬವೇಕು ಎಂದು ಮನವಿ ಮಾಡಿದರು. ಕುಡಿಯುವ ನೀರು ಮತ್ತು ಬೀದಿ ದೀಪಗಳ ವ್ಯವಸ್ಥೆ ಬೇಸಿಗೆಯ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ 20 ಹೊಸ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಶೀಘ್ರದಲ್ಲೇ ಪಂಪ್ ಮತ್ತು ಮೋಟಾರು ಗಳನ್ನು ಅಳವಡಿಸಲಾಗುವುದು. ಸಮರ್ಪಕವಾಗಿ ನೀರನ್ನು ಒದಗಿಸಲು ಸಾಧ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು,ಪೋಲು ಮಾಡಬಾರದು ಎಂದು ಮನವಿ ಮಾಡಿದರು. ನಗರದ ದೊಡ್ಡಪೇಟೆ ರಸ್ತೆಯನ್ನು ಅಗಲೀಕರಣಗೊಳಿಸಲು ಮಾರ್ಕ್ ಮಾಡಲಾಗಿದೆ. ರಸ್ತೆಯ ಮದ್ಯದಿಂದ ಎರಡು ಕಡೆ 6 ಮೀಟರ್ ಇರುತ್ತದೆ. 2–3 ದಿನಗಳಲ್ಲಿ ರಸ್ತೆಯ ನಿವಾಸಿಗಳ ಸಭೆಯನ್ನು ಕರೆಯಲಾಗುವುದು. ರೈಲ್ವೆ ನಿಲ್ದಾಣ ಮತ್ತು 3–4 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಆ ಭಾಗದ ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಆಢಳಿತಾಧಿಕಾರಿಗಳ ಆದೇಶದಂತೆ ವಿವಿಧ ಅನುದಾನದಿಂದ ಒಂದು ಸಾವಿರ ದೀಪಗಳನ್ನು ಖರೀದಿಸಿ, ನಗರದಾದ್ಯಂತ ಹೊಸ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.ನಗರದ ಸರ್ವತೋಮುಖ ಅಭಿವೃದ್ಧಿಗೆ ನಾಗರಿಕರು ಸಹಕರಿಸಬೇಕೆಂದು ಪೌರಾಯುಕ್ತರಾದ ಜಿ.ಎನ್.ಚಲಪತಿ ರವರು ಮನವಿ ಮಾಡಿದರು. ವರದಿ:-ಸೀನ. ಟಿ ಚಿಂತಾಮಣಿ4