Shuru
Apke Nagar Ki App…
ನಾಡದೇವಿಯ ದರುಶನ ಪಡೆದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ...ಕುಟುಂಬ ಸಮೇತ ಆಗಮನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಇಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿಯ ದರುಶನ ಪಡೆದರು.ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಕುಟುಂಬ ಸಮೇತ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು...
Ashwini
ನಾಡದೇವಿಯ ದರುಶನ ಪಡೆದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ...ಕುಟುಂಬ ಸಮೇತ ಆಗಮನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಇಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿಯ ದರುಶನ ಪಡೆದರು.ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಕುಟುಂಬ ಸಮೇತ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು...
More news from ಕರ್ನಾಟಕ and nearby areas
- All About,Greatfull and Thankful for Our #CEO #KarnatakaStateBoardOfAuqaf #Bengaluru for his Performance of Duty Regards *ಭಾರತ ನಲ್ಲಿ ವೈರಲ್*1
- ಮೈಸೂರು: ಸಂಗೀತವೇ ಉಸಿರಾಗಿದ್ದ ಗಾನಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರಿಗೆ ಮೈಸೂರಿನ ಕಲಾಭಿಮಾನಿಗಳು ಕಣ್ಣೀರಿನ ನುಡಿನಮನ ಸಲ್ಲಿಸಿದರು. ಮೈಸೂರಿನ ರಾಮಕೃಷ್ಣ ನಗರದ ಗಂಧರ್ವ ಸಂಗೀತ ಅಕಾಡೆಮಿಯಲ್ಲಿ "ಶ್ರದ್ಧಾಂಜಲಿ ಮತ್ತು ಗೀತಾ ಗಾಯನ" ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ಸಭಿಕರೆಲ್ಲರೂ ಕೆಲ ಕ್ಷಣ ಮೌನಾಚರಣೆ ಮಾಡಿ ತಮ್ಮ ಪ್ರೀತಿಯ ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು. ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಆರ್.ಮಹೇಂದ್ರ ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ ಜಾತಿ ಬೇಕಾಗಿಲ್ಲ. ಜಾನಕಿ ಅಮ್ಮನವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ, ಮಾನಸಿಕವಾಗಿ ಅವರು ಇಂದಿಗೂ ನಮ್ಮೊಟ್ಟಿಗೆ ಇದ್ದಾರೆ. ಸಂಗೀತಗಾರರಿಗೆ ಸರಸ್ವತಿಯೇ ಆದ ಅವರು, ಕೊನೆಯ ಕ್ಷಣಗಳಲ್ಲಿ ಮೈಸೂರನ್ನೇ ಆಯ್ಕೆ ಮಾಡಿಕೊಂಡು ಇಲ್ಲೇ ನೆಲೆಸಿದ್ದರು. ಇದು ನಮ್ಮ ಪುಣ್ಯ ಎಂದು ಹೇಳಿದರು. ಜಾನಕಿ ಅಮ್ಮನವರ ವ್ಯಕ್ತಿತ್ವವನ್ನು ನೆನೆದ ಆರ್.ಮಹೇಂದ್ರ ಅವರು, ಅವರು ಹಾಡುವ ಶೈಲಿ, ವಾಯ್ಸ್ ಮಾಡ್ಯುಲೇಷನ್ ಇಂದಿಗೂ ಗಾಯಕರಿಗೆ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಅವರು ತಮ್ಮ ಕಂಠ ನೀಡಿದ್ದಾರೆ. 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರದ್ದು ಎಂದು ಸ್ಮರಿಸಿದರು. ನಾನು ಕೂಡ ಅವರೊಂದಿಗೆ ಎರಡು ವೇದಿಕೆಯಲ್ಲಿ ಹಾಡುವ ಅವಕಾಶ ಪಡೆದಿದ್ದೆ. ಅದು ಮರೆಯಲಾಗದ ಕ್ಷಣ. ಮೊದಲ ಬಾರಿ ಅವರನ್ನು ಭೇಟಿಯಾದಾಗ ತಮ್ಮ ಮಕ್ಕಳಂತೆ ನೋಡಿಕೊಂಡು, ಕೈ ತುತ್ತು ತಿನಿಸಿದರು. ಅಷ್ಟೊಂದು ಆತ್ಮೀಯತೆ. ನಾನು ಸಂಗೀತ ಕಲಿಯುತ್ತಿದ್ದಾಗ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಚಿನ್ನದ ಪದಕವನ್ನು ಅವರ ಕೈಯಿಂದಲೇ ಪಡೆದಿದ್ದೆ. ಅಂತಹ ಸರಳ, ಸಾರ್ಥಕ ಜೀವನ ನಡೆಸಿದ ಮಹಾನ್ ಕಲಾವಿದೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟರು. ನುಡಿನಮನದ ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯ ಗಾಯಕರು ಜಾನಕಿ ಅಮ್ಮನವರು ಹಾಡಿರುವ ಸುಪ್ರಸಿದ್ಧ ಗೀತೆಗಳನ್ನು ಹಾಡಿ ಗೀತಾ ಗಾಯನದ ಮೂಲಕ ನಮನ ಸಲ್ಲಿಸಿದರು. ಅವರ ಕಂಠದ ಪ್ರತಿಧ್ವನಿ ಸಭಾಂಗಣದಲ್ಲಿ ಮೊಳಗಿದಾಗ ಹಲವರ ಕಣ್ಣುಗಳು ತೇವಗೊಂಡವು. ಸ್ವರ ಮೌನವಾದರೂ, ಆ ಸ್ವರದ ಶಕ್ತಿ ಇಂದಿಗೂ ಕೋಟಿ ಹೃದಯಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಶ್ರದ್ಧಾಂಜಲಿ ಮತ್ತೊಮ್ಮೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ನಿವೃತ್ತ ಎಇಇ ಸುರೇಶ್, ಗಾಯಕರಾದ ಲಕ್ಷ್ಮಣ್, ಮೀನಾಕುಮಾರಿ, ಬಸವರಾಜು, ಚೇತನ್, ಡಾ.ಜಗದೀಶ್, ಸಂಜಯ್, ದಿನೇಶ್, ಡಾ. ರತ್ನ ಹಾಲಪ್ಪಗೌಡ, ರಾಜೇಶ್ವರಿ, ಮಹೇಶ್, ಮಂಜುನಾಥ್ ಎಂ, ಪವಿತ್ರ, ಎಂ. ನಟರಾಜ್, ಸೇರಿದಂತೆ ಅನೇಕ ಸಂಗೀತ ಪ್ರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.3
- ನಮ್ಮ ಸಿಎಂ ತಮಿಳುನಾಡಿನ ವಾಟರ್ ಮೆನ್ ಕೆಲಸ ಮಾಡಬಾರದು...ಸಿಟಿ ರವಿ ವಾಗ್ಧಾಳಿ... ನಮ್ಮ ರಾಜ್ಯದ ಮುಖ್ಯಮಂತ್ರಿಗಳು ತಮಿಳುನಾಡಿನ ವಾಟರ್ ಮ್ಯಾನ್ ಕೆಲಸ ಮಾಡಬಾರದು ಎಂದು ಸಿಟಿ ರವಿ ವಾಗ್ಧಾಳಿ ನಡೆಸಿದರು. ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡದೇವಿಯ ದರುಶನ ಪಡೆದ ನಂತರ ಮಾತನಾಡಿದ ಸಿಟಿ ರವಿ ರವರು ಡಿಕೆ ಶಿವಕುಮಾರ್ ವಿಪಕ್ಷದಲ್ಲಿ ಇದ್ದಾಗ ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ರು. ಈಗ ಜಲಾಶಯದ ನೀರನ್ನು ಬೆಳೆಗೆ ಬಳೆಸಬೇಡಿ ಎಂದು ಹೇಳಿಕೆ ಕೊಡುತ್ತಾರೆ. ಮಂಡ್ಯ, ಮೈಸೂರು, ಬೆಂಗಳೂರು ಜನರಿಗೆ ಕೆಅರ್ ಎಸ್ ನಲ್ಲಿ ಕುಡಿಯುವುದಕ್ಕೆ ನೀರು ಎಷ್ಟಿದೆ ಎನ್ನುವದನ್ನು ಡಿಕೆಶಿ ಅವರು ಮೊದಲು ಬಾಯಿ ಬಿಡಬೇಕು. ರಾಜ್ಯದ ಜನರ ರಕ್ಷಣೆಗೆ ನೀವು ನಿಂತುಕೊಳ್ಳಿ.ನಿಮ್ಮ ಬೆಂಬಲಕ್ಕೆ ನಾವು ನಿಲ್ಲತ್ತೇವೆ. ಬಂಗಾರಪ್ಪರ ರೀತಿ ನಿರ್ಧಾರ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ತಮಿಳುನಾಡಿನ ಸಿಎಂ ವಿಜಯ್ ಕರ್ನಾಟಕಕ್ಕೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತುಕತೆ ಮಾಡಿದರೆ ಒಳ್ಳೆಯದು.ನಮ್ಮ ಜಲಾಶಯದ ವಸ್ತುಸ್ಥಿತಿಯ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಿ. ಕಾಂಗ್ರೆಸ್ ಹಾಗೂ ಟಿವಿಕೆ ಎರಡು ಮಿತ್ರ ಪಕ್ಷಗಳೇ ಅಲ್ಲವೇ . ನಿಮ್ಮ ಮಿತ್ರರಿಗೆ ಮನವರಿಕೆ ಮಾಡಿಕೊಡುವುದಕ್ಕೆ ಅಗುವುದಿಲ್ಲ ಎಂದರೇ ಹೇಗೆ ಎಂದು ಟೀಕಿಸಿದರು...1
- ಮೂರನೇ ಆಷಾಢ ಶುಕ್ರವಾರ ಅಂಗವಾಗಿ 2000 ಜನರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ ಮೈಸೂರು, ಜು.31: ಮೈಸೂರಿನಲ್ಲಿ ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಗ್ಯಾರೇಜ್ ಹಾಗೂ ಟ್ಯಾಂಕರ್ ಮಾಲೀಕರ ಸಂಘದ ವತಿಯಿಂದ ಸುಮಾರು 2000 ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ನಗರದ ಪ್ರಮುಖ ವೃತ್ತದ ಸಮೀಪ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಗ್ಯಾರೇಜ್‌ಗಳ ಮಾಲೀಕರು, ಟ್ಯಾಂಕರ್ ಮಾಲೀಕರು, ಚಾಲಕರು, ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು. ಆಷಾಢ ಶುಕ್ರವಾರವನ್ನು ವಿಶೇಷವಾಗಿ ದೇವಿ ಆರಾಧನೆಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಪೂಜೆ, ಅಲಂಕಾರ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಬಳಿಕ ಅನ್ನಸಂತರ್ಪಣೆ ಆರಂಭಿಸಲಾಯಿತು. ಬಡವರು, ಕೂಲಿ ಕಾರ್ಮಿಕರು, ಪ್ರಯಾಣಿಕರು ಹಾಗೂ ಅಗತ್ಯವಿರುವ ಜನರಿಗೆ ಊಟ ವಿತರಿಸಲಾಯಿತು. ಕಾರ್ಯಕ್ರಮದ ಆಯೋಜಕರು ಮಾತನಾಡಿ, ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಪ್ರತಿವರ್ಷವೂ ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಗ್ಯಾರೇಜ್ ಮತ್ತು ಟ್ಯಾಂಕರ್ ವೃತ್ತಿಯಲ್ಲಿ ತೊಡಗಿರುವ ಎಲ್ಲರೂ ಒಗ್ಗಟ್ಟಿನಿಂದ ಈ ಸೇವಾ ಕಾರ್ಯದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ಅನ್ನಸಂತರ್ಪಣೆಯಲ್ಲಿ ಅನ್ನ, ಸಾಂಬಾರ್, ಪಲ್ಯ, ಪಾಯಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗಿತ್ತು. ಸೇವೆ ಸಲ್ಲಿಸಿದ ಸ್ವಯಂಸೇವಕರು ಶಿಸ್ತಿನಿಂದ ಊಟ ವಿತರಣೆ ಮಾಡಿ ಭಕ್ತರ ಮೆಚ್ಚುಗೆ ಪಡೆದರು. ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ಕಾರ್ಯಕ್ರಮವನ್ನು ಪ್ರಶಂಸಿಸಿ, ಧಾರ್ಮಿಕ ಆಚರಣೆಯ ಜೊತೆಗೆ ಮಾನವೀಯ ಸೇವೆಯೂ ಸಮಾಜದಲ್ಲಿ ಬೆಳೆಬೇಕು ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಇಂತಹ ಸೇವಾ ಚಟುವಟಿಕೆಗಳು ಸಾಮರಸ್ಯ ಮತ್ತು ಸಹಕಾರದ ಸಂಕೇತವಾಗಿವೆ ಎಂದು ಅವರು ಹೇಳಿದರು.2
- ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು1
- Post by ರಾಮಲಿಂಗೇಗೌಡ ಎನ್1
- ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ 4 ದಿನಕ್ಕೆ: ಜಿಲ್ಲಾಧಿಕಾರಿ ಭೇಟಿ, ನೀರು ಬಿಡುವ ಭರವಸೆ. ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ 4 ದಿನಕ್ಕೆ: ಜಿಲ್ಲಾಧಿಕಾರಿ ಭೇಟಿ, ನೀರು ಬಿಡುವ ಭರವಸೆ. ಅಹೋರಾತ್ರಿ ಧರಣಿಗೆ ಬಿಜೆಪಿ ಬೆಂಬಲ, ಕೆರೆಗಳಿಗೆ ನೀರು ತುಂಬಿಸುವ ತನಕ ಅಹೋರಾತ್ರಿ ಧರಣಿ ಕೈ ಬಿಡಲ್ಲ ರೈತರು. ಚಾಮರಾಜನಗರ : ಮೂರನೆಯ ಹಂತದ ಕೆರಗಳಿಗೆ ಕಳೆದ ಮೂರು ವರ್ಷಗಳಿಂದಲ್ಲೂ ನೀರು ತುಂಬಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಮೂರನೆಯ ಹಂತದ ಅಚ್ಚಕಟ್ಟು ಗ್ರಾಮದ ರೈತರು ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಪಂಪ್‌ಹೌಸ್ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀ ರೂಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮೂರನೇ ಹಂತದ ಕೆರೆಗಳಿಗೆ ನೀರು ಭರವಸೆ ನೀಡಿದರು. ವಾರದೊಳಗೆ ನೀರಾವರಿ ನಿಗಮದ ಮುಖ್ಯ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಸಭೆ ಕರೆಯಲಾಗುವುದು. ನೀವೆಲ್ಲರೂ ಸಭೆ ಬನ್ನಿ ಸಮಸ್ಯೆಗಳ ಬಗ್ಗೆ ಚರ್ಚಿ ಪರಿಹರಿಸೋಣ ಎಂದರು. ಬಿಜೆಪಿ ಬೆಂಬಲ: ಅಹೋರಾತ್ರಿಧರಣಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಜಿಲ್ಲಾ ಕಾರ್ಯದರ್ಶಿ ನಟರಾಜು ಇತರರು ಭಾಗವಹಿಸಿ ಬೆಂಬಲ ಸೂಚಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಮನೋಜ್ ಪಟೇಲ್ ಮಾತನಾಡಿ, ಹುತ್ತೂರು ಪಂಪ್ ಹೌಸ್ ನಿಂದ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಆ ಭಾಗದ ರೈತರು ಹುತ್ತೂರು ಪಂಪ್ ಹೌಸ್ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬಿಜೆಪಿ ಬೆಂಬಲ ಸೂಚಿಸಿಸಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಮೂರನೇ ಹಂತ ಕೆರೆಗಳಿಗೆ ನೀರು ಹರಿಸದೆ ನಾಲ್ಕನೆಯ ಹಂತದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ. ಇದು ಎಷ್ಟರ ಮಟ್ಟಿಗೆ ಹರಿ ಎಂದು ಪ್ರಶ್ನಿಸಿದರು. ಇದು ಸ್ಥಳೀಯ ಶಾಸಕರಿಗೆ ಇಚ್ಛೆ ಇಲ್ಲವೋ ಅಥವಾ ಗುಂಡ್ಲುಪೇಟೆ ಶಾಸಕರ ಪ್ರಭಾವ ಹೆಚ್ಚಾಗುತ್ತಿದಿಯೋ ಗೊತ್ತಿಲ್ಲ. ಕಾನೂನು ಪ್ರಕಾರ 1ನೇ ಹಂತ, 2ನೇ ಹಂತ, 3ನೇ ಹಂತ ಪ್ರಕಾರವೇ ಕರೆಗಳಿಗೆ ನೀರು ತುಂಬಿಸಲಿ ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಮಾತನಾಡಿ, ಹುತ್ತೂರು ಪಂಪ್‌ಹೌಸ್‌ನಿಂದ ಕೇವಲ ಮೂರನೇ ಹಂತದಲ್ಲಿ ಒಂದೇ ಒಂದು ಬಾರಿ ನೀರು ತುಂಬಿಸುವ ಕೆಲಸ ಮಾಡಿದರೆ ಅದನ್ನು ಬಿಟ್ಟರೆ ನೀರು ತುಂಬಿಸಿಲ್ಲ. ಒಂದುನೇ ಹಂತ, ಎರಡನೇ ಹಂತ, ಮೂರನೆಯ ಹಂತ ಬಿಟ್ಟು ಸ್ವಾರ್ಥ, ರಾಜಕಾರಣದಿಂದ 4ನೇ ಹಂತಕ್ಕೆ ನೀರು ಬಿಟ್ಟಿರುವುದು ರೈತ ಅಹೋರಾತ್ರಿ ಹೋರಾಟಕ್ಕೆ ಕಾರಣವಾಗಿದೆ. ಬರಗಾಲ ಕಾರಣದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಸಂದರ್ಭದಲ್ಲಿ 900, 100 ಅಡಿಗೆ ಅಂತರ್ಜಲ ಕುಸಿದಿದೆ. ಇದೇ ರೀತಿ ಆದರೆ ಜನ, ಜಾನುವಾರುಗಳು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ನೀರು ಬಿಡುವ ಭರವಸೆ ನೀಡಿದ್ದಾರೆ. ಅವರಿಗೆ ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ ಎಂದರು. ಕ್ಷೇತ್ರದ ಶಾಸಕರು ಮಂತ್ರಿಗಿರಿಗಾಗಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಭಾಗದಲ್ಲಿ ರೈತರು ನೀರು ಇಲ್ಲದೆ... ತುಂಬಾ ತೊಂದರೆಯಲ್ಲಿದ್ದಾರೆ, ರೈತರ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾವು... ದಯಾಮಾಡಿ ನಿಮಗೆ ವೋಟ್ ಹಾಕಿದ ತಪ್ಪಿಗಾಗಿ ಕೆರೆಗಳಿಗೆ ನೀರು ತುಂಬಿಸಿ ರೈತರ ಹಿತಕಾಪಾಡುವಂತೆ ಮನವಿ ಮಾಡಿದರು. ರೈತ ಮೋಹನ್ ರಾಜ್ ಮಾತನಾಡಿ, ಆಲಂಬೂರು ಏತ ಕುಡಿಯುವ ನೀರು ಯೋಜನೆಯಲ್ಲಿ ಮೂರನೆ ಹಂತದ ಕೊನೆಯ ಕೆರೆ ಅಮಚವಾಡಿ ಕೆರೆ. ಅಮಚವಾಡಿ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದ್ದು, 8-10 ಸಾವಿರ ಜಾನುವಾರುಗಳಿವೆ. ಮೂರನೇಯ ಹಂತ ಅಚ್ಚಕಟ್ಟು ಪ್ರದೇಶದಲ್ಲಿ ಹುಮಾರು 40 ಸಾವಿರ ಜನಸಂಖ್ಯೆ ಇದ್ದು ಸುಮಾರು 25 ಸಾವಿರ ಜಾನುವಾರು ಇದೆ. ಪ್ರತಿವರ್ಷವೂ ಅಧಿಕಾರಿಗಳು ಜನಪ್ರತಿನಿಧಿಗಳ ಒತ ಡಕ್ಕೆ ಮಣಿದು ಯಾವುದನ್ನು ಪರಿಪೂರ್ಣ ಮಾಡಿದೆ 1ನೇ ಹಂತ ಅಥವಾ 3ನೇ ಹಂತಕ್ಕೆ ವಾಪನ್ ನೀರು ಬಿಡುವ ಕೆಲಸ ಮಾಡುತಿದ್ದಾರೆ. ಇದು ದಯಮಾಡಿ ಯಾವ ಕಾರಣಕ್ಕೂ ಆಗಬಾರದು. ಜಿಲ್ಲಾಡಳಿತ ಆಲಂಬೂರಿಯಿಂದ ಯಾವುದೇ ಅಡತಡೆ ಇಲ್ಲದೆ ಹುತ್ತೂರು ಪಂಪ್‌ಹೌನ್‌ಗೆ ನೀರು ಶೇಖರಣೆ ಮಾಡಿ ಅಮಚವಾಡಿ ಕೆರೆ ತುಂಬಿಸಬೇಕು. ಎಣ್ಣೆಹೊಳೆ ಕೆರೆಭರ್ತಿ ಮಾಡಿ ಕೋಡಿ ಹರಿಸಬೇಕು. ಕೆರೆಗಳಿಗೆ ನೀರು ತುಂಬಿಸುವಲ್ಲಿ ವಿಫಲರಾಗಿರುವ ಅಧಿಕಾರಗಳನ್ನು ವರ್ಗಾವಣೆ ಮಾಡಿ ಸಮರ್ಥ, ಜಬಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ನೀರು ಬಿಡುವ ತನಕ ಅಹೋರಾತ್ರಿ ಮುಂದುವರಿಯುತ್ತದೆ : ನಮ್ಮ ಕೆರೆಗಳಿಗೆ ನೀರು ತುಂಬಿಸುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ. .3
- All About,Day Dreamers who are dreaming to become famous overnight by spreading selfish propaganda *ಭಾರತ ನಲ್ಲಿ ವೈರಲ್*1