logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹೋಂಗಾರ್ಡ್ ಮೇಲೆ ಹಲ್ಲೆ...ಬೈಕ್ ಗೆ ಬೆಂಕಿ ಜಾತ್ರೆ ವೇಳೆ ನಡೆಯುತ್ತಿದ್ದ ಜಗಳ ಬಿಡಿಸಿದ ತಪ್ಪಿಗೆ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವಕರ ಗುಂಪು ಬೈಕ್ ಗೆ ಬೆಂಕಿ ಹಚ್ಚಿ ಸಜೀವ ದಹನಕ್ಕೆ ಯತ್ನಿಸಿದ ಶಾಕಿಂಗ್ ಪ್ರಕರಣ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡ್ಯೂಟಿ ಮಾಡುವ ಹೋಂಗಾರ್ಡ್ ರಂಗಸ್ವಾಮಿ ನಾಯಕ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ.ರಂಗಸ್ವಾಮಿ ನಾಯಕರಿಗೆ ಸೇರಿದ ಬೈಕ್ ಗೆ ಬೆಂಕಿ ಹಚ್ಚಿ ಗೂಂಡಾಯಿಸಂ ಪ್ರದರ್ಶಿಸಿದ್ದಾರೆ.ಪುಂಡರಿಂದ ದಾಳಿಗೆ ಸಿಲುಕಿದ ರಂಗಸ್ವಾಮಿನಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಠಾಣೆಯಿಂದ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸಿದ ಹೋಂಗಾರ್ಡ್ ರಂಗಸ್ವಾಮಿ ನಾಯಕನ ಮೇಲೆ ಹಲ್ಲೆ ನಡೆಸಿ ಬೈಕ್ ಸುಟ್ಟುಹಾಕಿದ್ದರೂ ಪೊಲೀಸರು ಪ್ರಕರಣ ದಾಖಲಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಬುಧುವಾರ ಏಚಗುಂಡ್ಲ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿತ್ತು.ಭದ್ರತೆಗಾಗಿ ಹೋಂಗಾರ್ಡ್ ರಂಗಸ್ವಾಮಿಯವರನ್ನ ನಿಯೋಜಿಸಲಾಗಿತ್ತು.ಈ ವೇಳೆ ಕೆಲವು ಯುವಕರು ಕುಡಿದು ಗಲಾಟೆ ಮಾಡಿಕೊಂಡಿದ್ದರು.ಈ ವೇಳೆ ರಂಗಸ್ವಾಮಿ ಗಲಾಟೆ ಬಿಡಿಸಿದ್ರು.ಮರುದಿನ ಮಹದೇವಸ್ವಾಮಿ ಹಾಗೂ ರಮೇಶ್ ರವರು ಐದಾರು ಜನರ ಗುಂಪು ಕಟ್ಟಿಕೊಂಡು ರಂಗಸ್ವಾಮಿ ಮೇಲೆ ಅಟ್ಯಾಕ್ ಮಾಡಿದ್ದಾರೆ.ತೀವ್ರಹಲ್ಲೆ ನಡೆಸಿ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ.ತನಗೂ ಬೆಂಕಿ ಹಚ್ಚುವುದು ಗ್ಯಾರೆಂಟಿ ಎಂದು ಅರಿತ ರಂಗಸ್ವಾಮಿ ಅಲ್ಲಿಂದ ತಪ್ಪಿಸಿಕೊಂಡು ಗ್ರಾಮಾಂತರ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ.ಹಲ್ಲೆಗೆ ಒಳಗಾದ ರಂಗಸ್ವಾಮಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ನಡೆದು ನಾಲ್ಕು ದಿನಗಳ ಕಳೆದರೂ ಯಾವುದೇ ಪ್ರಕರಣ ದಾಖಲಾಗದಿರುವುದು ಅಚ್ಚರಿಗೆ ಕಾರಣವಾಗಿದೆ.ಹೋಂಗಾರ್ಡ್ ಗೇ ಭದ್ರತೆ ಇಲ್ಲದಿದ್ದಲ್ಲಿ ಸಾರ್ವಜನಿಕರಿಗೆ ಭದ್ರತೆ ಬಗ್ಗೆ ಅನುಮಾನ ಮೂಡುತ್ತಿದೆ. ಕೆಲವೇ ದಿನಗಳ ಹಿಂದೆ ನಂಜನಗೂಡಿನಲ್ಲಿ ಬೈಕ್ ಸಮೇತ ಯುವಕನನ್ನ ಸುಟ್ಟು ಕೊಂದ ಘಟನೆ ಇನ್ನೂ ಮಾಸದಿರುವ ಸಮಯದಲ್ಲಿ ಈ ಪ್ರಕರಣ ಬೆಚ್ಚಿಬೀಳಿಸಿದೆ.ಇನ್ನಾದ್ರೂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಗೂಂಡಾ ವರ್ತನೆ ತೋರಿದ ಯುವಕರ ವಿರುದ್ದ ಪ್ರಕರಣ ದಾಖಲಿಸುವರೇ...?

1 day ago
user_Ashwini
Ashwini
ಮೈಸೂರು, ಮೈಸೂರು, ಕರ್ನಾಟಕ•

More news from Mysuru and nearby areas
  • *ಈ ಅರಿವು ಯುವಕರಲ್ಲಿ ಬಂದರೇ ನಮ್ಮ ಪರಿಸರ ಉಳಿದೀತು* ಈ ದಿನ ದಿನಾಂಕ 17.2. .2026 ರಂದು ಟಿ. ನರಸೀಪುರದ ಫಿನೇಚರ್ ಕಾರ್ಖಾನೆಯ ಒಳಗೆ ಆವರಣದಲ್ಲಿ )ಇರುವ ಮರಗಳು.... ಗಿಡಗಳು... ಪಕ್ಷಿಗಳು... ಮತ್ತು ಜೀವ ಪರಿಸರ ವ್ಯವಸ್ಥೆ ಇದೆ....ಆದರೆ ಈ ಜಾಗದಲ್ಲಿ ಕ್ರೀಡಾಂಗಣ ಮಾಡಿದರೆ ಆಗುವ ದುಷ್ಪರಿಣಾಮಗಳು ಇತ್ಯಾದಿ ತಿಳಿಸಿ ಕೆಎಸ್ಐಸಿ ಆಡಳಿತ ಮಂಡಳಿ ಜಾಗವನ್ನು ಉಳಿಸಿಕೊಳ್ಳಲು ಹಾಗೂ ಕ್ರೀಡಾಂಗಣವನ್ನು ಬೇರೆ ಕಡೆ ಮಾಡಲು ಹೇಳಿ  ಅಧಿಕಾರಿಗಳಿಗೆ ಪರಿಸರಕ್ಕಾಗಿ ನಾವು ಟೀಮ್ ನಿಂದ ಮನವಿ ಪತ್ರ ಕೊಡಲಾಯಿತು... ✊🌳🌳🌳🌳 #Sadhana #sadhanam #homeopathy #Krishnanagar #sadhanayogi #bhms #sadhanayogeshagowda #drsadhanahomeopathyconsultanttumkur #Radha'sHomeopathy , #HomeocareInternational #BestHomeopathyClinic #inTumkur #nearestHomeopathicDoctors  #Dr.SadhanaMHomeopathyDoctor #Muniswamygowda #Riya #YOGI #ಚೇತನ #chetha #ChethanaMuniswamygowda
    3
    *ಈ ಅರಿವು ಯುವಕರಲ್ಲಿ ಬಂದರೇ ನಮ್ಮ ಪರಿಸರ ಉಳಿದೀತು*
ಈ ದಿನ ದಿನಾಂಕ 17.2. .2026 ರಂದು ಟಿ. ನರಸೀಪುರದ ಫಿನೇಚರ್ ಕಾರ್ಖಾನೆಯ ಒಳಗೆ ಆವರಣದಲ್ಲಿ )ಇರುವ ಮರಗಳು.... ಗಿಡಗಳು... ಪಕ್ಷಿಗಳು... ಮತ್ತು ಜೀವ ಪರಿಸರ ವ್ಯವಸ್ಥೆ ಇದೆ....ಆದರೆ ಈ ಜಾಗದಲ್ಲಿ ಕ್ರೀಡಾಂಗಣ ಮಾಡಿದರೆ ಆಗುವ ದುಷ್ಪರಿಣಾಮಗಳು ಇತ್ಯಾದಿ ತಿಳಿಸಿ ಕೆಎಸ್ಐಸಿ ಆಡಳಿತ ಮಂಡಳಿ ಜಾಗವನ್ನು ಉಳಿಸಿಕೊಳ್ಳಲು ಹಾಗೂ ಕ್ರೀಡಾಂಗಣವನ್ನು ಬೇರೆ ಕಡೆ ಮಾಡಲು ಹೇಳಿ  ಅಧಿಕಾರಿಗಳಿಗೆ ಪರಿಸರಕ್ಕಾಗಿ ನಾವು ಟೀಮ್ ನಿಂದ ಮನವಿ ಪತ್ರ ಕೊಡಲಾಯಿತು... ✊🌳🌳🌳🌳
#Sadhana #sadhanam #homeopathy
#Krishnanagar #sadhanayogi #bhms
#sadhanayogeshagowda #drsadhanahomeopathyconsultanttumkur
#Radha'sHomeopathy , #HomeocareInternational #BestHomeopathyClinic #inTumkur
#nearestHomeopathicDoctors 
#Dr.SadhanaMHomeopathyDoctor
#Muniswamygowda #Riya #YOGI #ಚೇತನ
#chetha #ChethanaMuniswamygowda
    user_Chethana Muniswamygowda
    Chethana Muniswamygowda
    Press advisory Nanjangud, Mysuru•
    6 hrs ago
  • ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿದ್ದು ಪೌರಕಾರ್ಮಿಕರ ಜೊತೆಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಪೌರಕಾರ್ಮಿಕ ಸಿಬ್ಬಂದಿಗಳ ಜೊತೆಗೆ ಪೊರಕೆ ಇಡಿದು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ . ನಂತರ ಮಾಧ್ಯಮದವರೊಂದಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ. ಈ ರಘು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ್ ಕನಸಲು ಮನಸು ಮಾಡಲು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ರವರು 2014ರಲ್ಲಿ ಸ್ವಚ್ಛ ಭಾರತ್ ಮಿಷನ್ ಆರಂಭಿಸಿದ್ದಾರೆ. ಇವರ ಕನಸು ಭಾರತವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಗುರಿಯನ್ನು ಹೊಂದಿದ್ದಾರೆ. ಅದೇ ರೀತಿ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನವೂ ಪ್ಲಾಸ್ಟಿಕ್ ಮುಕ್ತ ಹಸಿರು ವಲಯ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದ್ದು. ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಮೆಕ್ಕೆಜೋಳ ಹಾಗೂ ಸಬ್ಬಕ್ಕಿಯಿಂದ ಕವರ್ ಗಳನ್ನು ತಯಾರು ಮಾಡಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಕಂಪನಿಯ ಮುಖಾಂತರ ಪರಿಸರ ಸ್ನೇಹಿ ಕವರ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಳಿಗೆ ಪಡೆದಿರುವ ವ್ಯಾಪಾರಸ್ಥರು ಭಕ್ತಾದಿಗಳು ಪರಿಸರ ಸ್ನೇಹಿ ಕವರ್ ಗಳನ್ನು ಬಳಕೆ ಮಾಡುವ ಮೂಲಕ ಮಹದೇಶ್ವರ ಬೆಟ್ಟದ ಪರಿಸರ ಸಂರಕ್ಷಣೆ ಮಾಡುವಲ್ಲಿ ಸಹಕಾರ ನೀಡಬೇಕು ಎಂದರು.
    3
    ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿದ್ದು ಪೌರಕಾರ್ಮಿಕರ ಜೊತೆಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಪೌರಕಾರ್ಮಿಕ ಸಿಬ್ಬಂದಿಗಳ ಜೊತೆಗೆ ಪೊರಕೆ ಇಡಿದು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ .
ನಂತರ ಮಾಧ್ಯಮದವರೊಂದಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ. ಈ ರಘು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತ್  ಕನಸಲು ಮನಸು ಮಾಡಲು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ರವರು 2014ರಲ್ಲಿ ಸ್ವಚ್ಛ ಭಾರತ್ ಮಿಷನ್ ಆರಂಭಿಸಿದ್ದಾರೆ. ಇವರ ಕನಸು ಭಾರತವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಗುರಿಯನ್ನು ಹೊಂದಿದ್ದಾರೆ.
ಅದೇ ರೀತಿ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನವೂ ಪ್ಲಾಸ್ಟಿಕ್ ಮುಕ್ತ ಹಸಿರು ವಲಯ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದ್ದು. ಮಾಸ್ಟರ್ ಪ್ಲಾನ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು,  ಪರ್ಯಾಯವಾಗಿ ಮೆಕ್ಕೆಜೋಳ ಹಾಗೂ ಸಬ್ಬಕ್ಕಿಯಿಂದ ಕವರ್ ಗಳನ್ನು ತಯಾರು ಮಾಡಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಕಂಪನಿಯ ಮುಖಾಂತರ ಪರಿಸರ ಸ್ನೇಹಿ ಕವರ್  ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಳಿಗೆ ಪಡೆದಿರುವ ವ್ಯಾಪಾರಸ್ಥರು  ಭಕ್ತಾದಿಗಳು ಪರಿಸರ ಸ್ನೇಹಿ ಕವರ್ ಗಳನ್ನು  ಬಳಕೆ ಮಾಡುವ ಮೂಲಕ ಮಹದೇಶ್ವರ ಬೆಟ್ಟದ ಪರಿಸರ ಸಂರಕ್ಷಣೆ ಮಾಡುವಲ್ಲಿ ಸಹಕಾರ ನೀಡಬೇಕು ಎಂದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    8 hrs ago
  • ಹನೂರು: ತಾಲ್ಲೂಕಿನ ಬಂಡಳ್ಳಿ ಗ್ರಾಮದಲ್ಲಿ 17 ವರ್ಷದ ಯುವಕನೋರ್ವ ನೇಣಿಗೆ ಶರಣಾದ ದುರ್ಘಟನೆ ಸಂಭವಿಸಿದೆ. ಮೃತ ಯುವಕನನ್ನು ಶಿವರುದ್ರಸ್ವಾಮಿ ಅವರ ಪುತ್ರ ತೇಜಶ್ವರ್ ಎಂದು ಗುರುತಿಸಲಾಗಿದೆ. ಈತ ಬಂಡಳ್ಳಿ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ. ಸೋಮವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮನನೊಂದು ತೇಜಶ್ವರ್ ದಿಡೀರ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾಮಗೆರೆ ಹೊಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
    1
    ಹನೂರು: ತಾಲ್ಲೂಕಿನ ಬಂಡಳ್ಳಿ ಗ್ರಾಮದಲ್ಲಿ 17 ವರ್ಷದ ಯುವಕನೋರ್ವ ನೇಣಿಗೆ ಶರಣಾದ ದುರ್ಘಟನೆ ಸಂಭವಿಸಿದೆ.
ಮೃತ ಯುವಕನನ್ನು ಶಿವರುದ್ರಸ್ವಾಮಿ ಅವರ ಪುತ್ರ ತೇಜಶ್ವರ್ ಎಂದು ಗುರುತಿಸಲಾಗಿದೆ. ಈತ ಬಂಡಳ್ಳಿ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ.
ಸೋಮವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮನನೊಂದು ತೇಜಶ್ವರ್ ದಿಡೀರ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾಮಗೆರೆ ಹೊಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    10 hrs ago
  • ಅರಕಲಗೂಡು ತಾಲೂಕು ಕೊಡಕಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ, ಶ್ರೀ ಮಾರಮ್ಮ ಮತ್ತು ಶ್ರೀ ಗ್ರಾಮ ದೇವತೆ, ದೇವರುಗಳ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನಗಳ ಉದ್ಘಾಟನಾ ಸಮಾರಂಭ ಫೆಬ್ರವರಿ 19ರಿಂದ 27ರ ತನಕ ಜರುಗಲಿದೆ ಎಂದು ಗ್ರಾಮದ ಮುಖಂಡ ಕೊಡಕಹಳ್ಳಿ ಅಶೋಕ್ ತಿಳಿಸಿದರು. ನೂತನವಾಗಿ ನಿರ್ಮಾಣಗೊಂಡಿರುವ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಗಳು, ಉತ್ಸವ ಅದ್ದೂರಿಯಾಗಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ. ಮಂಜು ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು, ಮುಖಂಡರು ಭಾಗವಹಿಸುವರು. ಈ ದೇವರ ಕಾರ್ಯದಲ್ಲಿ ಕೊಡಕಹಳ್ಳಿ ಸೇರಿದಂತೆ ಸುತ್ತಾಮುತ್ತಲ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. #templeopening #Kodakahalli #villegevibes❤️ #Arkalgud #temple #News5Kannada
    1
    ಅರಕಲಗೂಡು ತಾಲೂಕು ಕೊಡಕಹಳ್ಳಿ ಗ್ರಾಮದ  ಶ್ರೀ ಲಕ್ಷ್ಮೀ ದೇವಿ, ಶ್ರೀ ಮಾರಮ್ಮ ಮತ್ತು ಶ್ರೀ ಗ್ರಾಮ ದೇವತೆ, ದೇವರುಗಳ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನಗಳ ಉದ್ಘಾಟನಾ ಸಮಾರಂಭ ಫೆಬ್ರವರಿ 19ರಿಂದ 27ರ ತನಕ ಜರುಗಲಿದೆ ಎಂದು ಗ್ರಾಮದ ಮುಖಂಡ ಕೊಡಕಹಳ್ಳಿ ಅಶೋಕ್ ತಿಳಿಸಿದರು.
ನೂತನವಾಗಿ ನಿರ್ಮಾಣಗೊಂಡಿರುವ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಗಳು, ಉತ್ಸವ ಅದ್ದೂರಿಯಾಗಿ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎ. ಮಂಜು ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು, ಮುಖಂಡರು ಭಾಗವಹಿಸುವರು.
ಈ ದೇವರ ಕಾರ್ಯದಲ್ಲಿ ಕೊಡಕಹಳ್ಳಿ ಸೇರಿದಂತೆ ಸುತ್ತಾಮುತ್ತಲ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
#templeopening #Kodakahalli #villegevibes❤️ #Arkalgud #temple #News5Kannada
    user_Ravi Dummi
    Ravi Dummi
    Local News Reporter ಅರಕಲಗೂಡು, ಹಾಸನ, ಕರ್ನಾಟಕ•
    8 hrs ago
  • VIDEO: ಅತಿವೇಗದ ಬೈಕ್ ಡಿಕ್ಕಿಗೆ ವಿದ್ಯುತ್ ಕಂಬವೇ ತುಂಡು ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಸವಾರ ಮತ್ತು ಹಿಂಬದಿಯ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ತುಂಡಾಗಿ ನೆಲಕ್ಕೆ ಬಿದ್ದಿದೆ. ಪವಾಡ ಸದೃಶ್ಯ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ವಿದ್ಯಾರ್ಥಿಗಳಾದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ.....
    2
    VIDEO: ಅತಿವೇಗದ ಬೈಕ್ ಡಿಕ್ಕಿಗೆ ವಿದ್ಯುತ್ ಕಂಬವೇ ತುಂಡು
ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಸವಾರ ಮತ್ತು ಹಿಂಬದಿಯ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ತುಂಡಾಗಿ ನೆಲಕ್ಕೆ ಬಿದ್ದಿದೆ. ಪವಾಡ ಸದೃಶ್ಯ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ವಿದ್ಯಾರ್ಥಿಗಳಾದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
✍️ವರದಿ: ಸುರೇಂದ್ರ ಶಿವಮೊಗ್ಗ.....
    user_Surendra Shimoga
    Surendra Shimoga
    Shuru News Publisher ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    7 hrs ago
  • ಬೆಂಗಳೂರು: ರಾಜಾಜಿನಗರದ ಎಚ್‌ಡಿಎಫ್‌ಸಿ (HDFC) ಹೋಮ್ ಲೋನ್ ಕಚೇರಿ ಮುಂಭಾಗ ನಿನ್ನೆ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯೋಗೇಶ್ವರಿ (26) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12:45ರ ಸುಮಾರಿಗೆ ಯೋಗೇಶ್ವರಿ ಊಟಕ್ಕೆ ತೆರಳುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:30ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
    1
    ಬೆಂಗಳೂರು: ರಾಜಾಜಿನಗರದ ಎಚ್‌ಡಿಎಫ್‌ಸಿ (HDFC) ಹೋಮ್ ಲೋನ್ ಕಚೇರಿ ಮುಂಭಾಗ ನಿನ್ನೆ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯೋಗೇಶ್ವರಿ (26) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12:45ರ ಸುಮಾರಿಗೆ ಯೋಗೇಶ್ವರಿ ಊಟಕ್ಕೆ ತೆರಳುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:30ಕ್ಕೆ ಕೊನೆಯುಸಿರೆಳೆದಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
    user_Anil
    Anil
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    15 hrs ago
  • *ಈ ಅರಿವು ಯುವಕರಲ್ಲಿ ಬಂದರೇ ನಮ್ಮ ಪರಿಸರ ಉಳಿದೀತು* ಈ ದಿನ ದಿನಾಂಕ 17.2. .2026 ರಂದು ಟಿ. ನರಸೀಪುರದ ಫಿನೇಚರ್ ಕಾರ್ಖಾನೆಯ ಒಳಗೆ ಆವರಣದಲ್ಲಿ )ಇರುವ ಮರಗಳು.... ಗಿಡಗಳು... ಪಕ್ಷಿಗಳು... ಮತ್ತು ಜೀವ ಪರಿಸರ ವ್ಯವಸ್ಥೆ ಇದೆ....ಆದರೆ ಈ ಜಾಗದಲ್ಲಿ ಕ್ರೀಡಾಂಗಣ ಮಾಡಿದರೆ ಆಗುವ ದುಷ್ಪರಿಣಾಮಗಳು ಇತ್ಯಾದಿ ತಿಳಿಸಿ ಕೆಎಸ್ಐಸಿ ಆಡಳಿತ ಮಂಡಳಿ ಜಾಗವನ್ನು ಉಳಿಸಿಕೊಳ್ಳಲು ಹಾಗೂ ಕ್ರೀಡಾಂಗಣವನ್ನು ಬೇರೆ ಕಡೆ ಮಾಡಲು ಹೇಳಿ  ಅಧಿಕಾರಿಗಳಿಗೆ ಪರಿಸರಕ್ಕಾಗಿ ನಾವು ಟೀಮ್ ನಿಂದ ಮನವಿ ಪತ್ರ ಕೊಡಲಾಯಿತು... ✊🌳🌳🌳🌳 #Sadhana #sadhanam #homeopathy #Krishnanagar #sadhanayogi #bhms #sadhanayogeshagowda #drsadhanahomeopathyconsultanttumkur #Radha'sHomeopathy , #HomeocareInternational #BestHomeopathyClinic #inTumkur #nearestHomeopathicDoctors  #Dr.SadhanaMHomeopathyDoctor #Muniswamygowda #Riya #YOGI #ಚೇತನ #chetha #ChethanaMuniswamygowda
    2
    *ಈ ಅರಿವು ಯುವಕರಲ್ಲಿ ಬಂದರೇ ನಮ್ಮ ಪರಿಸರ ಉಳಿದೀತು*
ಈ ದಿನ ದಿನಾಂಕ 17.2. .2026 ರಂದು ಟಿ. ನರಸೀಪುರದ ಫಿನೇಚರ್ ಕಾರ್ಖಾನೆಯ ಒಳಗೆ ಆವರಣದಲ್ಲಿ )ಇರುವ ಮರಗಳು.... ಗಿಡಗಳು... ಪಕ್ಷಿಗಳು... ಮತ್ತು ಜೀವ ಪರಿಸರ ವ್ಯವಸ್ಥೆ ಇದೆ....ಆದರೆ ಈ ಜಾಗದಲ್ಲಿ ಕ್ರೀಡಾಂಗಣ ಮಾಡಿದರೆ ಆಗುವ ದುಷ್ಪರಿಣಾಮಗಳು ಇತ್ಯಾದಿ ತಿಳಿಸಿ ಕೆಎಸ್ಐಸಿ ಆಡಳಿತ ಮಂಡಳಿ ಜಾಗವನ್ನು ಉಳಿಸಿಕೊಳ್ಳಲು ಹಾಗೂ ಕ್ರೀಡಾಂಗಣವನ್ನು ಬೇರೆ ಕಡೆ ಮಾಡಲು ಹೇಳಿ  ಅಧಿಕಾರಿಗಳಿಗೆ ಪರಿಸರಕ್ಕಾಗಿ ನಾವು ಟೀಮ್ ನಿಂದ ಮನವಿ ಪತ್ರ ಕೊಡಲಾಯಿತು... ✊🌳🌳🌳🌳
#Sadhana #sadhanam #homeopathy
#Krishnanagar #sadhanayogi #bhms
#sadhanayogeshagowda #drsadhanahomeopathyconsultanttumkur
#Radha'sHomeopathy , #HomeocareInternational #BestHomeopathyClinic #inTumkur
#nearestHomeopathicDoctors 
#Dr.SadhanaMHomeopathyDoctor
#Muniswamygowda #Riya #YOGI #ಚೇತನ
#chetha #ChethanaMuniswamygowda
    user_Chethana Muniswamygowda
    Chethana Muniswamygowda
    Press advisory Nanjangud, Mysuru•
    6 hrs ago
  • ಅರಕಲಗೂಡು: ಪಟ್ಟಣದ ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರಸ್ವಾಮಿ ಮಹಾ ರಥೋತ್ಸವವು ಸೋಮವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾವಿಧಿಗಳನ್ನು ನಡೆಸಲಾಯಿತು. ಅರೇಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ತಹಶೀಲ್ದಾರ್ ಕೆ.ಸಿ. ಸೌಮ್ಯ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ನಾದಸ್ವರ, ತಮಟೆ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿತು. ತಮಟೆ ವಾದ್ಯದ ಲಯಕ್ಕೆ ಯುವಕರು, ಚಿಣ್ಣರು, ಮಹಿಳೆಯರು ಹೆಜ್ಜೆಹಾಕಿದರು. ತೇರನ್ನು ಎಳೆಯುತ್ತಿದ್ದ ಭಕ್ತರಿಗೆ ಬಿಸಿಲಿನ ದಗೆ ನೀಗಿಸಲು ಮನೆ, ಮನೆಗಳಲ್ಲಿ ಮಜ್ಜಿಗೆ, ಪಾನಕ, ಮುಂತಾದ ತಂಪು ಪಾನಿಯಗಳನ್ನು ವಿತರಿಸಲಾಯಿತು. ರಥ ಸ್ವಸ್ಥಾನ ಸೇರಿದ ಬಳಿಕ ಪ್ರಸಾದ ವಿನಿಯೋಗ ನಡೆಸಲಾಯಿತು. ಪಪಂ ಮುಖ್ಯಧಿಕಾರಿ ಸಿ.ಡಿ. ನಾಗೇಂದ್ರಕುಮಾರ್, ಕಂದಾಯ ನಿರೀಕ್ಷಕ ಕೆ.ಸಿ. ಲೋಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಮುಖಂಡರಾದ ಮುತ್ತಿಗೆ ರಾಜೇಗೌಡ, ವಿ. ಎ. ನಂಜುಂಡಸ್ವಾಮಿ, ನರಸೇಗೌಡ, ವೆಂಕಟೇಶ್, ರಮೇಶ್ ವಾಟಾಳ್, ನಿತ್ಯಜ್ಯೋತಿ ನಾಗರಾಜ್, ಎ.ಎಸ್. ಹಿರಣ್ಣಯ್ಯ, ಎ.ಎನ್. ಗಣೇಶಮೂರ್ತಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನರಸಿಂಹ ಮೂರ್ತಿ, ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು. ರಾತ್ರಿ ಶಾಂತೋತ್ಸವ ನಡೆಯಿತು.
    1
    ಅರಕಲಗೂಡು: ಪಟ್ಟಣದ ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರಸ್ವಾಮಿ ಮಹಾ ರಥೋತ್ಸವವು ಸೋಮವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. 
ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ  ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾವಿಧಿಗಳನ್ನು ನಡೆಸಲಾಯಿತು. ಅರೇಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ತಹಶೀಲ್ದಾರ್ ಕೆ.ಸಿ. ಸೌಮ್ಯ  ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ರಥ ಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ನಾದಸ್ವರ, ತಮಟೆ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿತು. ತಮಟೆ ವಾದ್ಯದ ಲಯಕ್ಕೆ ಯುವಕರು, ಚಿಣ್ಣರು, ಮಹಿಳೆಯರು ಹೆಜ್ಜೆಹಾಕಿದರು.  ತೇರನ್ನು ಎಳೆಯುತ್ತಿದ್ದ ಭಕ್ತರಿಗೆ ಬಿಸಿಲಿನ ದಗೆ ನೀಗಿಸಲು ಮನೆ, ಮನೆಗಳಲ್ಲಿ ಮಜ್ಜಿಗೆ, ಪಾನಕ, ಮುಂತಾದ ತಂಪು ಪಾನಿಯಗಳನ್ನು ವಿತರಿಸಲಾಯಿತು. ರಥ ಸ್ವಸ್ಥಾನ ಸೇರಿದ ಬಳಿಕ ಪ್ರಸಾದ ವಿನಿಯೋಗ ನಡೆಸಲಾಯಿತು. ಪಪಂ ಮುಖ್ಯಧಿಕಾರಿ ಸಿ.ಡಿ. ನಾಗೇಂದ್ರಕುಮಾರ್, ಕಂದಾಯ ನಿರೀಕ್ಷಕ ಕೆ.ಸಿ. ಲೋಕೇಶ್,  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಮುಖಂಡರಾದ ಮುತ್ತಿಗೆ ರಾಜೇಗೌಡ, ವಿ. ಎ. ನಂಜುಂಡಸ್ವಾಮಿ, ನರಸೇಗೌಡ, ವೆಂಕಟೇಶ್, ರಮೇಶ್ ವಾಟಾಳ್, ನಿತ್ಯಜ್ಯೋತಿ ನಾಗರಾಜ್, ಎ.ಎಸ್. ಹಿರಣ್ಣಯ್ಯ, ಎ.ಎನ್. ಗಣೇಶಮೂರ್ತಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನರಸಿಂಹ ಮೂರ್ತಿ,  ಕಾರ್ಯದರ್ಶಿ ರಮೇಶ್  ಉಪಸ್ಥಿತರಿದ್ದರು.  ರಾತ್ರಿ ಶಾಂತೋತ್ಸವ ನಡೆಯಿತು.
    user_Ravi Dummi
    Ravi Dummi
    Local News Reporter ಅರಕಲಗೂಡು, ಹಾಸನ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.