logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಳೆ ಮೀಸಲಾತಿಯಂತೆಯೇ 56 ಸಾವಿರ ಉದ್ಯೋಗಳ ನೇಮಕಾತಿ ಮಾಡಿ ಬಾಗೇಪಲ್ಲಿ:- ಒಳಮೀಸಲಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ತನಕ ಒಳಮೀಸಲಾತಿ ಕೈ ಬಿಟ್ಟು ಹಳೆ ಮೀಸಲಾತಿ ಜಾರಿಗೆ ತಂದು ರಾಜ್ಯ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ 56 ಸಾವಿರ ಉದ್ಯೋಗಗಳನ್ನು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆ ಆಗದಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಬಾಗೇಪಲ್ಲಿ ತಾಲ್ಲೂಕು ಲಂಬಾಣಿ (ಗೋರ್ ಬಂಜಾರ್)ಅಭಿವೃದ್ಧಿ ಸಂಘ ರಾಜ್ಯ ಸರ್ಕಾರಕ್ಕೆ ಲಂಬಾಣಿ ಜಿಲ್ಲಾದ್ಯಕ್ಷ ಶ್ರೀರಾಮ ನಾಯಕ್ ಒತ್ತಾಯಿಸಿದರು. ಅವರು ಬಾಗೇಪಲ್ಲಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ಸರ್ಕಾರಿ ನೇಮಕಾತಿಯಲ್ಲಿ ಉದ್ಯೋಗಗಳನ್ನು ನೇಮಕ ಮಾಡಿದಾಗ ಬಲಗೈ ಸಂಬಂಧಿತ ಜಾತಿಗಳಿಗೆ ಯಾವುದೇ ಉದ್ಯೋಗ ದೊರಕುವುದಿಲ್ಲ. ಉನ್ನತ ಶಿಕ್ಷಣ ಪ್ರವೇಶಾತಿ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಬಡ್ತಿಯಲ್ಲಿಯೂ ಅವಕಾಶ ಸಿಗುವುದಿಲ್ಲ. ಹಾಗಾಗೀ ಸರ್ಕಾರ ಇಂತಹ ಅವೈಜ್ಞಾನಿಕ ಪರಿಶಿಷ್ಟ ಜಾತಿಗಳ ಕಾಯ್ದೆಯನ್ನು ತಿರಸ್ಕರಿಸಬೇಕು' ಎಂದು ಆಗ್ರಹಿಸಿದರು. ಈಗ ಜಾರಿ ಮಾಡಿರುವ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯದ 101 ಜಾತಿಗಳಿಗೆ ಭಾರಿ ಅನ್ಯಾಯವಾಗಿದ್ದು, ನೇಮಕಾತಿ ಬಿಂದು ಪದ್ದತಿಯಲ್ಲಿ ಭಾರಿ ನ್ಯಾಯವಾಗಿದೆ. ಎ, ಬಿ, ಸಿ ಪ್ರವರ್ಗಗಳಿಗೆ ನಿಗಧಿ ಪಡಿಸುವ ಉದ್ಯೋಗದಲ್ಲಿ ಅನ್ಯಾಯವಾಗುತ್ತದೆ. ವಿವಿಧ ಇಲಾಖೆಯ ಹಾಗೂ ವಿಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಹುದ್ದೆಗಳು ನೇಮಕಾತಿ ನಡೆದಾಗ ಪರಿಶಿಷ್ಟ ಜಾತಿಯಲ್ಲಿಯೇ ಪ್ರವರ್ಗ ಎ ಗೆ ಹೆಚ್ಚು ಹುದ್ದೆಗಳು ಹೋಗುವ ಜೊತೆಗೆ ಇತರೇ ಬಿ ಮತ್ತು ಸಿ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದರಿಂದ ಸಾಮಾಜಿಕ ನ್ಯಾಯದ ಬದಲಾಗಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಸಮಾನ ಅವಕಾಶಗಳು ದೊರೆಯುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಶಂಕರ್ ನಾಯಕ್ ಮಾತನಾಡಿ ಶಿಕ್ಷಣ, ಹಾಸ್ಟೆಲ್ ಹಾಗೂ ಉದ್ಯೋಗ ನೇಮಕಾತಿ ರೋಸ್ಟರ್ ಹಂಚಿಕೆ ಮಾಡಿ ಈ ಹಿಂದೆ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶಗಳನ್ನು ಹಿಂಪಡೆಯಬೇಕು, ರಾಜ್ಯ ಸರ್ಕಾರ ಹೊಸದಾಗಿ ನೀಡುತ್ತಿರುವ ಜಾತಿ ಪ್ರಮಾಣಪತ್ರವನ್ನು ತುರ್ತಾಗಿ ನಿಲ್ಲಿಸಿ ಹಳೆ ಜಾತಿ ಪ್ರಮಾಣಪತ್ರವನ್ನು ಮುಂದುವರಿಸಬೇಕು. ಒಳ ಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಆಗಿರುವ ನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಲಂಬಾಣಿ (ಗೋರ್ ಬಂಜಾರ್) ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ್ ನಾಯಕ್(ಬಾಂಬೆ), ಉಪಾಧ್ಯಕ್ಷ ಶಿವಶಂಕರ್, ಖಜಾಂಚಿ ಸುರೇಶ್ ನಾಯಕ್,ಮಂಜುನಾಥ್ ನಾಯಕ್,ಬಾಲು ನಾಯಕ್,ನಾಗೇ ನಾಯಕ್,ಶ್ರೀನಿವಾಸ್ ನಾಯಕ್,ರಮೇಶ್ ನಾಯಕ್, ಆರ್.ನಾರಾಯಣ್ ನಾಯಕ್, ರಾಮಾಂಜಿ ನಾಯಕ್, ನರಸಿಂಹ ನಾಯಕ್, ಬಾಬು ನಾಯಕ್ ಹಾಗೂ ಲಂಬಾಣಿ ಸಮುದಾಯದವರು ಹಾಜರಿದ್ದರು.

on 10 March
user_Gopala Reddy R N
Gopala Reddy R N
Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•

More news from Karnataka and nearby areas
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    22 hrs ago
  • ಹೊಳಲ್ಕೆರೆ ಪಟ್ಟಣದ ಇಂಡೇನ್ ಏಜೆನ್ಸಿಯ ಗ್ರಾಹಕರು ಒಂದು ತಿಂಗಳ ಹಿಂದೆ ಗ್ಯಾಸ್ ಬುಕ್ ಮಾಡಿದರು ಸಹ ಏಜೆನ್ಸಿ ಅವರು ಗ್ರಾಮಗಳಿಗೆ ತೆರಳಿ ಸಿಲಿಂಡರ್ ಗಳನ್ನು ನೀಡುತ್ತಿಲ್ಲ, ದಿನನಿತ್ಯ ಹೊಳಲ್ಕೆರೆ ತಾಲೂಕಿನ ಗಡಿಭಾಗದ ಸಾಸಲುಹಳ್ಳ, ರಾಮೇನಹಳ್ಳಿ, ತುಪ್ಪದಹಳ್ಳಿ, ರಾಮಘಟ್ಟ,ಕೆಂಚಾಪುರ,ಬಿ,ಜಿ ಹಳ್ಳಿ,ತಾಳ್ಯ, ಅಂದನೂರು, ರಾಮಗಿರಿ, ಟಿ ,ನೂಲೆನೂರು, ಲಿಂಗದಹಳ್ಳಿ, ಹೊಳಲ್ಕೆರೆ ಪಟ್ಟಣ ಹೊರಕೆದೇವಪುರ,ಎಲ್ಲಾ ಗ್ರಾಮಗಳಿಂದ ಗ್ರಾಹಕರು ಅಡುಗೆಗೆ ಸಿಲಿಂಡರ್ ಇಲ್ಲದೇ ಅಖಿಲ್ ಇಂಡಿಯನ್ ಏಜೆನ್ಸಿ ಆಫೀಸ್ ಮುಂದೆ ಬರುತ್ತಿದ್ದಾರೆ.
    1
    ಹೊಳಲ್ಕೆರೆ ಪಟ್ಟಣದ ಇಂಡೇನ್ ಏಜೆನ್ಸಿಯ ಗ್ರಾಹಕರು ಒಂದು ತಿಂಗಳ ಹಿಂದೆ ಗ್ಯಾಸ್ ಬುಕ್ ಮಾಡಿದರು ಸಹ ಏಜೆನ್ಸಿ ಅವರು ಗ್ರಾಮಗಳಿಗೆ ತೆರಳಿ ಸಿಲಿಂಡರ್ ಗಳನ್ನು ನೀಡುತ್ತಿಲ್ಲ, ದಿನನಿತ್ಯ ಹೊಳಲ್ಕೆರೆ ತಾಲೂಕಿನ ಗಡಿಭಾಗದ ಸಾಸಲುಹಳ್ಳ, ರಾಮೇನಹಳ್ಳಿ, ತುಪ್ಪದಹಳ್ಳಿ, ರಾಮಘಟ್ಟ,ಕೆಂಚಾಪುರ,ಬಿ,ಜಿ ಹಳ್ಳಿ,ತಾಳ್ಯ, ಅಂದನೂರು, ರಾಮಗಿರಿ, ಟಿ ,ನೂಲೆನೂರು, ಲಿಂಗದಹಳ್ಳಿ, ಹೊಳಲ್ಕೆರೆ ಪಟ್ಟಣ ಹೊರಕೆದೇವಪುರ,ಎಲ್ಲಾ ಗ್ರಾಮಗಳಿಂದ ಗ್ರಾಹಕರು ಅಡುಗೆಗೆ ಸಿಲಿಂಡರ್ ಇಲ್ಲದೇ ಅಖಿಲ್ ಇಂಡಿಯನ್ ಏಜೆನ್ಸಿ ಆಫೀಸ್ ಮುಂದೆ ಬರುತ್ತಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
    1
    ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ.
ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
    user_ASN News24Kannada
    ASN News24Kannada
    Newsagent Ballari, Karnataka•
    14 hrs ago
  • ಭೀಕರ ಬಸ್ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದ ಬಸ್, ಐವರು ಸ್ಥಳದಲ್ಲೇ ಸಾವು! #JB_News_Kannada
    1
    ಭೀಕರ ಬಸ್ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದ ಬಸ್, ಐವರು ಸ್ಥಳದಲ್ಲೇ ಸಾವು!
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    16 hrs ago
  • Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    1
    Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Arsikere, Hassan•
    20 hrs ago
  • ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರೋಪ ಹೊರಿಸಿದ್ದ ಮಹಿಳೆಯು ಸೋಮವಾರ ವಿಡಿಯೋ ಬಿಡುಗಡೆ ಮಾಡಿ ತನ್ನ ಹಿಂದಿನ ಹೇಳಿಕೆಯನ್ನು ಬದಲಾಯಿಸಿರುವುದಾಗಿ ತಿಳಿಸಿದ್ದಾರೆ. ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ, ಸ್ವಾಮೀಜಿ ಜೊತೆ ಗುರು–ಭಕ್ತಿಯ ಸಂಬಂಧ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತನ್ನ ಹೆಸರಿನಲ್ಲಿ ಯಾರೋ ಸುಳ್ಳು ದೂರು ದಾಖಲಿಸಿದ್ದಾರೆ, ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಹೊಸ ಹೇಳಿಕೆ ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿದ್ದು, ಪೊಲೀಸರು ವಿಡಿಯೋ ಹಾಗೂ ದೂರು ಸಂಬಂಧಿತ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.
    1
    ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆರೋಪ ಹೊರಿಸಿದ್ದ ಮಹಿಳೆಯು ಸೋಮವಾರ ವಿಡಿಯೋ ಬಿಡುಗಡೆ ಮಾಡಿ ತನ್ನ ಹಿಂದಿನ ಹೇಳಿಕೆಯನ್ನು ಬದಲಾಯಿಸಿರುವುದಾಗಿ ತಿಳಿಸಿದ್ದಾರೆ. ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ, ಸ್ವಾಮೀಜಿ ಜೊತೆ ಗುರು–ಭಕ್ತಿಯ ಸಂಬಂಧ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತನ್ನ ಹೆಸರಿನಲ್ಲಿ ಯಾರೋ ಸುಳ್ಳು ದೂರು ದಾಖಲಿಸಿದ್ದಾರೆ, ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಹೊಸ ಹೇಳಿಕೆ ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿದ್ದು, ಪೊಲೀಸರು ವಿಡಿಯೋ ಹಾಗೂ ದೂರು ಸಂಬಂಧಿತ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    21 hrs ago
  • ಚಳ್ಳಕೆರೆ ನಗರದಲ್ಲಿ ಕಬ್ಬಿಣದ ಅದಿರು ಸಾಗಣೆ ಲಾಲಗಳಿಂದ ಉಂಟಾಗುತ್ತಿರುವ ಧೂಳು ಮತ್ತು ರಸ್ತೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇನ್ನೂ ಕರ್ನಾಟಕ ರಕ್ಷಣಾ ವೇಧಿಕೆ ಚಳ್ಳಕೆರೆ ಘಟಕದ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಿಂದ ಹೆಗ್ಡೆರೆ ಪಾಗದಲ್ಲಿರುವ ಕಬ್ಬಿಣದ ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಸಾಗಿಸುವ ನೂರಾರು ಟಿಪ್ಪರ್ ಲಾರಿಗಳು ಪ್ರತಿದಿನ ಸಂಚಣಸುತ್ತಿವೆ. ಆದರೆ ಈ ಲಾದಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅದಿರನ್ನು ಸಾಗಿಸುತ್ತಿರುವುದರಿಂದ ನಗರದ ಬೆಂಗಳೂರು ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಂಪು ಧೂಳು ಎಳುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
    1
    ಚಳ್ಳಕೆರೆ ನಗರದಲ್ಲಿ ಕಬ್ಬಿಣದ ಅದಿರು ಸಾಗಣೆ ಲಾಲಗಳಿಂದ ಉಂಟಾಗುತ್ತಿರುವ ಧೂಳು ಮತ್ತು ರಸ್ತೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇನ್ನೂ ಕರ್ನಾಟಕ ರಕ್ಷಣಾ ವೇಧಿಕೆ ಚಳ್ಳಕೆರೆ ಘಟಕದ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಿಂದ ಹೆಗ್ಡೆರೆ ಪಾಗದಲ್ಲಿರುವ ಕಬ್ಬಿಣದ ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಸಾಗಿಸುವ ನೂರಾರು ಟಿಪ್ಪರ್ ಲಾರಿಗಳು ಪ್ರತಿದಿನ ಸಂಚಣಸುತ್ತಿವೆ. ಆದರೆ ಈ ಲಾದಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅದಿರನ್ನು ಸಾಗಿಸುತ್ತಿರುವುದರಿಂದ ನಗರದ ಬೆಂಗಳೂರು ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಂಪು ಧೂಳು ಎಳುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    8 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.