ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು SDPI ಮನವಿ – ಸೂಲಿಬೆಲೆ ಭಾಷಣಕ್ಕೆ ನಿರ್ಬಂಧ ಬೇಡಿಕೆ ಶಿವಮೊಗ್ಗ: ಜಿಲ್ಲೆಯಲ್ಲಿನ ಶಾಂತಿ ಹಾಗೂ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಜಿಲ್ಲಾ ಸಮಿತಿ ವತಿಯಿಂದ ಇಂದು (ಏಪ್ರಿಲ್ 17) ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ನಾಳೆ (ಏಪ್ರಿಲ್ 18) ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ “ನಾನೇ ಭಾರತ್” ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು SDPI ಆಗ್ರಹಿಸಿದೆ. ಸೂಲಿಬೆಲೆ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಕೋಮು ಪ್ರಚೋದನಕಾರಿ ಭಾಷಣಗಳ ಆರೋಪಗಳಿದ್ದು, ಕೆಲವು ಕಡೆಗಳಲ್ಲಿ ನಿರ್ಬಂಧಕ್ಕೂ ಒಳಗಾಗಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಅವರ ಭಾಷಣಕ್ಕೆ ತಡೆ ಹೇರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಈ ವೇಳೆ SDPI ಜಿಲ್ಲಾ ಅಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್ ಹಾಗೂ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು SDPI ಮನವಿ – ಸೂಲಿಬೆಲೆ ಭಾಷಣಕ್ಕೆ ನಿರ್ಬಂಧ ಬೇಡಿಕೆ ಶಿವಮೊಗ್ಗ: ಜಿಲ್ಲೆಯಲ್ಲಿನ ಶಾಂತಿ ಹಾಗೂ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಜಿಲ್ಲಾ ಸಮಿತಿ ವತಿಯಿಂದ ಇಂದು (ಏಪ್ರಿಲ್ 17) ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ನಾಳೆ (ಏಪ್ರಿಲ್
18) ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ “ನಾನೇ ಭಾರತ್” ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು SDPI ಆಗ್ರಹಿಸಿದೆ. ಸೂಲಿಬೆಲೆ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಕೋಮು ಪ್ರಚೋದನಕಾರಿ ಭಾಷಣಗಳ ಆರೋಪಗಳಿದ್ದು, ಕೆಲವು ಕಡೆಗಳಲ್ಲಿ ನಿರ್ಬಂಧಕ್ಕೂ ಒಳಗಾಗಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು
ಮುನ್ನೆಚ್ಚರಿಕಾ ಕ್ರಮವಾಗಿ ಅವರ ಭಾಷಣಕ್ಕೆ ತಡೆ ಹೇರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಈ ವೇಳೆ SDPI ಜಿಲ್ಲಾ ಅಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್ ಹಾಗೂ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- Post by ಶ್ರೀಧರ್ ಚಿತ್ರಹಳ್ಳಿ1
- Post by Karibasava Balal1
- ಹಸೆ ಮಣೆ ಹೇರಲು ವಾರ ಬಾಕಿ ಇರುವಾಗಲೇ ಸಿದ್ದಾಪುರ ಗ್ರಾಮದಲ್ಲಿ ಬಿರುಗಾಳಿಗೆ ಯುವತಿಯ ಕನಸು ಚೂರಾಗಿದೆ. ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬೀಸಿದ ಬಿರುಗಾಳಿಯಿಂದ ದುರ್ಘಟನೆ ಸಂಭವಿಸಿದೆ.1
- ಅತಿ ತುರ್ತಾಗಿ ವಿವಿಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಒತ್ತಾಯ.. ಕಸವನಹಳ್ಳಿ ರಮೇಶ್ ಅಧ್ಯಕ್ಷರು ವಿ ವಿ ಸಾಗರ ನೀರಾವರಿ ಹೋರಾಟ ಸಮಿತಿ.. ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಅತ್ಯಂತ ವಿನಮ್ರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಹಿರಿಯೂರ್ ತಾಲೂಕಿನಲ್ಲಿ ಮಳೆ ಇಲ್ಲದೆ ಅತಿಯಾದ ಬಿಸಿಲಿನಿಂದ ಬೆಳೆದು ನಿಂತಿರುವ ಅಡಿಕೆ ತೆಂಗು ಬಾಳೆ ತರಕಾರಿ ಹಣ್ಣು ಹೂವು ಇತ್ಯಾದಿ ಬೆಳೆಗಳು ಒಣಗುತ್ತಿವೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ ಕಟ್ಟೆಗಳು ಹಳ್ಳಗಳು ಒಣಗಿದ್ದಾವೆ.. ವಿವಿ ಸಾಗರ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಸಹ ಅಚ್ಚುಕಟ್ಟು ಪ್ರದೇಶಕ್ಕೆ ಬಳಕೆ ಮಾಡಿಕೊಳ್ಳಲಾರದ ಅಸಹಾಯಕ ಪರಿಸ್ಥಿತಿಯಲ್ಲಿ ನಾವಿದ್ದೇವೆ. .. ನಮ್ಮ ಗೌರವಾನ್ವಿತ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಿ ಬರಲಿ. ಅವರಿಲ್ಲದೆ ಇರುವುದರಿಂದ ತಮ್ಮಲ್ಲಿ ನಾವು ಮನವಿ ಮಾಡುತ್ತಿದ್ದೇವೆ. ತಾವುಗಳು ಪರಿಶೀಲಿಸಿ ತುರ್ತಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮತ್ತೊಮ್ಮೆ ಕಳಕಳಿಯ ಮನವಿ ಮಾಡುತ್ತೇವೆ. ನಾವು ರೈತರು ನಮ್ಮ ಹೊಲ ಗದ್ದೆ ಕೆಲಸಗಳು ಮತ್ತು ಜಾನುವಾರು ಸಾಕಾಣಿಕೆ ಇತ್ಯಾದಿಗಳ ಒತ್ತಡದಲ್ಲಿ ತಮ್ಮನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ತಾವು ಇಡೀ ಜಿಲ್ಲೆಯ ಕಷ್ಟ ಸುಖಗಳನ್ನು ನೋಡಬೇಕಾಗುತ್ತದೆ ಅದೇ ರೀತಿ ಈ ಮುಖಾಂತರ ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡುವುದೇನೆಂದರೆ, ತಾವುಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ , ನೀರು ಹರಿಸಬೇಕೆಂದು ಕೇಳಿಕೊಳ್ಳುತ್ತೇವೆ. ಪ್ರತಿಯೊಂದಕ್ಕೂ ಚಳುವಳಿ ಹೋರಾಟ , ಉಪವಾಸ ಸತ್ಯಾಗ್ರಹ ಅನಿವಾರ್ಯವಲ್ಲ ಅದು ತಾವು ಮನಸ್ಸು ಮಾಡಿದರೆ. ದಯವಿಟ್ಟು ರೈತರನ್ನು ಬೀದಿಗೆ ಬರಲು ಬಿಡಬೇಡಿ... ಎಂದು ಈ ಮೂಲಕ ಕೋರಿಕೊಳ್ಳುತ್ತೇವೆ.. ನನ್ನೊಂದಿಗೆ ವಿವಿಸಾಗರ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಮಂಜುನಾಥ್ ಮಾಳಿಗೆ ,ಪ್ರೊ.ಮೈಸೂರ್ ಶಿವಣ್ಣ , ಪಿಟ್ಲಾಲಿ ಶ್ರೀನಿವಾಸ್ ಜೊತೆಗೋಡಿದ್ದರು.1
- ತಾಲೂಕಿನ ಕ್ಯಾಸನೂರ್ ಗ್ರಾಮದಲ್ಲಿ ಘಟನೆ. ಸುಭಾನ್ ಗೌಡ ಪಾಟೀಲ ಎಂಬುವವರಿಗೆ ಸೇರಿದ್ದ ಮೂರು ಎಕರೆ ಜಮೀನಿನಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಹಾಳು ಮಾಡಿವೆ. ಒಟ್ಟು ಮೂರು ಕರಡಿಗಳು ಪ್ರತ್ಯಕ್ಷ ರೈತರಲ್ಲಿ ಆತಂಕ.1
- Post by Suresh Belagere1
- ಖಾಸಗಿ ಎಕ್ಸ್‌ಪ್ರೆಸ್ ಬಸ್ ಮತ್ತು ಆಟೊ ರಿಕ್ಷಾ ನಡುವೆ ಮುಖಾಮುಖಿ ಅಪಘಾತ ನಡೆದು ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಟೊದಲ್ಲಿದ್ದ ಇಬ್ಬರಿಗೆ ಗಾಯಗಳಾಗಿರುವ ಘಟನೆ ವಾಮಂಜೂರು ಸಮೀಪದ ಕೆತ್ತಿಕಲ್ ಎಂಬಲ್ಲಿ ಶುಕ್ರವಾರ ಸಂಜೆ ವರದಿಯಾಗಿದೆ. ಮಂಗಳೂರಿನಿಂದ ಮೂಡುಬಿದಿರೆಗೆ ತೆರಳುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಕೆತ್ತಿಕಲ್ ಬಳಿ ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗಂಭೀರ ಗಾಯಗೊಂಡಿದ್ದು, ಇಬ್ಬರು ಪ್ರಯಾಣಿಕರಿಗೂ ಗಾಯಗಳಾಗಿವೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.1
- ದೊಡ್ಡೇರಿ ಗ್ರಾಮದಲ್ಲಿ ಬಿರುಗಾಳಿಗೆ ಮನೆಯ ಮೇಲ್ಚಾವಣಿ ಕುಸಿದು ಹಾನಿ ಉಂಟಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಗುರುವಾರ ಸಂಜೆ ಬಾರಿ ಬಿರುಗಾಳಿ ಸಹಿತ ಮಳೆ ಸುರಿದ್ದು ಈ ವೇಳೆ ಗ್ರಾಮದ ರೆಹಮತ್ ಉಲ್ಲ ಎಂಬುವವರ ಮನೆಯ ಮೇಲ್ಚಾವಣಿಯ ಶೀಟ್ ಗಳು ಬಾರಿ ಬಿರುಗಾಳಿಗೆ ಹಾರಿ ಹೋಗಿ ಹಾನಿ ಉಂಟಾಗಿದೆ.1