Shuru
Apke Nagar Ki App…
ಅಪಾರ ಜನಸ್ತೋಮದೊಂದಿಗೆ ಜನನಾಯಕ ಡಿ ಸುಧಾಕರ್ ಅವರ ಪಾರ್ಥಿವ ಶರೀರ ಮೆರವಣಿಗೆ.. ಚಿತ್ರದುರ್ಗ ಭಾನುವಾರ ಅನಾರೋಗ್ಯದಿಂದ ಮೃತಪಟ್ಟ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ಪಾರ್ಥಿವ ಶರೀರ ವನ್ನು ನಗರದ ಸಚಿವ ಡಿ ಸುಧಾಕರ್ ಅವರ ನಿವಾಸದಿಂದ ಚಿತ್ರದುರ್ಗ ರಸ್ತೆಯ ಸುಧಾಕರ್ ಕ್ರೀಡಾಂಗಣದವರೆಗೆ ನಗರದ ಮುಖ್ಯ ರಸ್ತೆಯಲ್ಲಿ ಜನಸ್ತೋಮದೊಂದಿಗೆ ಮೆರವಣಿಗೆ ನಡೆಸಲಾಯಿತು .
Suresh Belagere
ಅಪಾರ ಜನಸ್ತೋಮದೊಂದಿಗೆ ಜನನಾಯಕ ಡಿ ಸುಧಾಕರ್ ಅವರ ಪಾರ್ಥಿವ ಶರೀರ ಮೆರವಣಿಗೆ.. ಚಿತ್ರದುರ್ಗ ಭಾನುವಾರ ಅನಾರೋಗ್ಯದಿಂದ ಮೃತಪಟ್ಟ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ಪಾರ್ಥಿವ ಶರೀರ ವನ್ನು ನಗರದ ಸಚಿವ ಡಿ ಸುಧಾಕರ್ ಅವರ ನಿವಾಸದಿಂದ ಚಿತ್ರದುರ್ಗ ರಸ್ತೆಯ ಸುಧಾಕರ್ ಕ್ರೀಡಾಂಗಣದವರೆಗೆ ನಗರದ ಮುಖ್ಯ ರಸ್ತೆಯಲ್ಲಿ ಜನಸ್ತೋಮದೊಂದಿಗೆ ಮೆರವಣಿಗೆ ನಡೆಸಲಾಯಿತು .
- 💐😭😭💐Challakere, Chitradurga💐1 hr ago
More news from ಕರ್ನಾಟಕ and nearby areas
- ವಿಧವಶರಾದ ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆ ನಡೆಯುವ ಸ್ಥಳ ಯಾವುದು ಗೊತ್ತೆ? ಸಚಿವ ಡಿ. ಸುಧಾಕರ್ ಅವರ ಅಂತ್ಯ ಸಂಸ್ಕಾರ ಸ್ಥಳ ಬದಲು - ಪಾವಗಡ ರಸ್ತೆಯ ಮುಕ್ತಿಧಾಮದಲ್ಲಿ ಅಂತಿಮ ವಿಧಿವಿಧಾನ..!! ಚಿತ್ರದುರ್ಗ: ಮೊದಲಿಗೆ ಸುಧಾಕರ್ ಅವರ ಸೆಟಲ್ ಕೋರ್ಟ್‌ನಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಬಳಿಕ ಸ್ಥಳ ಬದಲಾವಣೆ ಮಾಡಲಾಗಿದ್ದು, ಪಾವಗಡ ರಸ್ತೆಯ ಮುಕ್ತಿಧಾಮದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲು ತೀರ್ಮಾನಿಸಲಾಗಿದೆ. ಮುಕ್ತಿಧಾಮದಲ್ಲಿ ಈಗಾಗಲೇ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಜೈನ ಸಂಪ್ರದಾಯದಂತೆ ವಿಧಿವಿಧಾನಗಳು ನಡೆಯಲಿವೆ. ಸುಧಾಕರ್ ಅವರ ಪುತ್ರ ಸುಹಾಸ್ ಅಗ್ನಿ ಸ್ಪರ್ಶ ನೆರವೇರಿಸಲಿದ್ದು, ಸಾವಿರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಡಿ ಸುಧಾಕರ್ ಪಂಚಭೂತಗಳಲ್ಲಿ ಲೀನರಾಗಲಿದ್ದಾರೆ.1
- ಮಾಮಾ ನಾದಿನಿ ಫೋಟೋ ವಿಚಾರಕ್ಕೆ ಕುಟುಂಬದ ಮೇಲೆಯೇ ಆಸಿಡ್ ಎರಚಿದ ಪತಿ! ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಡೆದ ಭೀಕರ ಆಸಿಡ್ ದಾಳಿ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಮೊಬೈಲ್‌ನಲ್ಲಿದ್ದ ನಾದಿನಿಯ ಫೋಟೋ ವಿಚಾರವಾಗಿ ಪತ್ನಿ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಪತಿ, ತನ್ನ ಪತ್ನಿ ಸೇರಿದಂತೆ ಮನೆಯ ನಾಲ್ವರು ಸದಸ್ಯರ ಮೇಲೆ ಆಸಿಡ್ ಎರಚಿದ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಒಂದು ಹಸುಗೂಸು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಕಲಹವೇ ಭೀಕರ ತಿರುವು ಪಡೆದಿರುವ ಈ ಘಟನೆ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮಹಿಳಾ ಸಂಘಟನೆಗಳು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿವೆ. ಪ್ರಮುಖ ಸುದ್ದಿಗಳಿಗಾಗಿ ನಮ್ಮ ASN NEWS24 ಕನ್ನಡ ಚಾನೆಲ್ Subscribe ಮಾಡಿ. #Hubballi #AcidAttack #BreakingNews #KarnatakaNews #HubballiNews #CrimeNews #ASNNEWS24Kannada #KannadaNews #TrendingNews #ViralNews #Tarihal #KIMS #PoliceCase1
- ಚಿತ್ರದುರ್ಗದಲ್ಲಿ ಬೆಳೆ ವಿಮೆ ಹಣ ನೀಡದ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದರು. ಶೇಂಗಾ ಮತ್ತು ಈರುಳ್ಳಿ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ದೊಡ್ಡ ಹೊಡೆತವಾಗಿದೆ.1
- ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ *ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮೇ 10 ರಂದು ತಾಯಿ ದಿನ ಪ್ರಯುಕ್ತ , ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದಲ್ಲಿನ ಹಿರಿಯ ಸಾಹಿತಿಗಳು , ಹಿರಿಯ ಪತ್ರಕರ್ತರು , ನಿವೃತ್ತ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ರವರು. ತಾಯಿಯನ್ನು ಸ್ಮರಿಸಿದರು ಹಾಗೂ ಅವರೊಂದಿಗಿನ ವಾತ್ಸಲ್ಯಯುತ ಅಮೂಲ್ಯ ಕ್ಷಣಗಳನ್ನು ನೆನೆದರು. ತಾಯಿಯವರ ಆದರ್ಶ ಗುಣಗಳನ್ನು ಕೊಂಡಾಡುತ್ತ , ಅವರಿಗೆ ಶ್ರದ್ಧಾಪೂರ್ವಕ ಭಾವುಕತೆಯಿಂದ ನುಡಿನಮನ ಸಲ್ಲಿಸಿ ವಂದಿಸಿದರು. ಅವರು ಮಾತನಾಡಿ , ತಾಯಿಗೆ ತಾಯಿನೇ ಸಾಟಿ ಅವರ ಹೊರತು ಯಾರೂ ಇಲ್ಲ ಬೇರೆನು ಸಮನಲ್ಲ ಎಂದರು. ಪ್ರತ್ಯಕ್ಷ ಆರಾಧ್ಯ ದೇವ ವೆಂದರೆ , ಹೆತ್ತ ತಾಯಿ ತಂದೆಯರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಪ್ರೀತಿಸಬೇಕು , ಅವರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳಂತೆ ಪೋಷಿಸಬೇಕು. ಅವರ ಮನದಾಳದ ಆಸೆ ಆಕಾಂಕ್ಷೆ ಒತ್ತಾಸೆಗಳನ್ನು , ಪ್ರೀತಿ ಪೂರ್ವಕವಾಗಿ ಈಡೇರಿಸಬೇಕಿದೆ ಎಂದರು. ತಂದೆ ತಾಯಿಯರನ್ನು ಪ್ರೀತಿಸದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ತಂದೆ ತಾಯಿಯರನ್ನು ಸಂತೋಷ ನೆಮ್ಮದಿಯಿಂದ ನೋಡಿಕೊಳ್ಳದವರು , ಕೋಟಿ ತೀರ್ಥಗಳನ್ನು ದೇಗುಲಗಳನ್ನು ಸಂದರ್ಶಿಸಿದರೇನು ಫಲ.. ದಾನ ಧರ್ಮಾದಿ ಯಜ್ಞ ಯಾಗಾದಿಗಳನ್ನು ಮಾಡಿಸರೇನು ಫಲ ಎಂದು ಪ್ರೆಶ್ನಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹಾಗೂ ಅವರ ಸಹೋದರರಾದ ಎನ್ ಟಿ ತಮ್ಮಣ್ಣ ನವರು. ತಮ್ಮ ತಾಯಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ , ಹಾಗೂ ತಾಯಿಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು , ಮನೆಯಲ್ಲಿರುವ ತಮ್ಮ ಮಾತೆಯ ಭಾವಚಿತ್ರಕ್ಕೆ ಭಕ್ತಿಯಿಂದ ನಮಿಸಿ ಅವರಿಗೆ ನುಡಿನಮನ ಸಲ್ಲಿಸಿದರು. ಅಂತೆಯೇ ಪತ್ರಕರ್ತರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರಾದ , ವಿ.ಜಿ.ವೃಷಭೇಂದ್ರರವರು ತಮ್ಮ ತಾಯಿಯ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ , ಅವರಿಗೆ ಉಡುಗೊರೆಯನ್ನಿತ್ತು ಸಿಹಿ ತಿಸಿದರು. ಈ ಸಂದರ್ಭದಲ್ಲಿ ಸಹೋದರಿ ಅಕ್ಕಮಹಾದೇವಿ , ಹಾಗೂ ಸಹೋದರಿಯ ಪುತ್ರ ಇದ್ದರು. ಮತ್ತು ಅವರೂ ಕೂಡ ಸಿಹಿ ಹಂಚಿ ತಾಯಿ ದಿನಾಚರಣೆ ಆಚರಿಸಿದರು. ಅದೇ ರೀತಿ ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಲ್ಲಿ. ಗಣ್ಯರು ವಿವಿದ ಮುಖಂಡರು. ಹೋರಾಟಗಾರರು , ಅನೇಕ ಸಾರ್ವಜನಿಕರು ತಾಯಿಗೆ ಸಿಹಿ ಹಂಚಿ ಉಡುಗೊರೆ ನೀಡಿದ್ದಾರೆ ಹಲವರು ತಾಯಿ ಪಾದಪೂಜೆ ಮಾಡಿ ತಾಯಿಗೆ ನಮಿಸಿದ್ದಾರೆ. ಬಹುತೇಕರು ದೇವರಲ್ಲಿ ವಿಶೇಷ ಅರ್ಚನೆ ಪೂಜೆಗಳನ್ನು ಮಾಡಿಸುವ ಮೂಲಕ ಪ್ರಾರ್ಥಿಸಿ ಶುಭ ಕೋರಿದ್ದಾರೆ. ಬಹು ಸಂಭ್ರಮದಿಂದ ಸಡಗರದಿಂದ , ತಾಯಿ ದಿನಾಚರಣೆ ಆಚರಿಸಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.1
- ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಸಾಕ್ಷಿಯಾದರು.1
- ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್ ಎಲಿವಾಳ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿದರು. ಈ ಭೇಟಿ ರೈತರ ಸಮಸ್ಯೆಗಳನ್ನು ಆಲಿಸಲು ಹಾಗೂ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಮಹತ್ವದ್ದಾಗಿದೆ.1
- ನಗರದ ಸೋಮುಗುದ್ದು ರಸ್ತೆಯ ಕ್ರೀಡಾಂಗಣದಲ್ಲಿ ಸಿ.ಎಂ. ಸಿದ್ದರಾಮಯ್ಯ ಬರುವ ಹೆಲಿಕಾಪ್ಟರ್ ಇಳಿಸಲು ಸಕಲ ಸಿದ್ಧತೆ.. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು.. ಚಳ್ಳಕೆರೆ ನಗರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದ್ದು. ಈಗಾಗಲೇ ಸುಧಾಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು. ಶಾಸಕರು ಸಚಿವರು ಅಭಿಮಾನಿಗಳು ಡಿ ಸುಧಾಕರ್ ಅವರ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ.. ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದು ಹೆಲಿಕ್ಯಾಪ್ಟರ್ ತಿಳಿಸಲು ವ್ಯವಸ್ಥೆಯನ್ನು ಮಾಡಲಾಗಿದೆ..1