logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಪರೂಪದ ಮುಖವೀಣೆ ಕಲಾವಿದ ಅಂಜಿನಪ್ಪ ಅವರೊಂದಿಗೆ ‘ಸಾಧಕರೊಂದಿಗೆ ಸಂವಾದ’ ಹಾಗೂ ಸನ್ಮಾನ ಕಾರ್ಯಕ್ರಮ ಚಿಕ್ಕಬಳ್ಳಾಪುರ : ಅಳಿವಿನಂಚಿನಲ್ಲಿರುವ ಅಪರೂಪದ ಜನಪದ ವಾದ್ಯ ಮುಖವೀಣೆ ಕಲೆಯನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡು, ಕಳೆದ ಹಲವು ದಶಕಗಳಿಂದ ಅದರ ನಾದವನ್ನು ಜೀವಂತವಾಗಿರಿಸಿರುವ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಮುಖವೀಣೆ ಶ್ರೀ ಅಂಜಿನಪ್ಪ ಅವರೊಂದಿಗೆ ‘ಸಾಧಕರೊಂದಿಗೆ ಸಂವಾದ’ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 29ರಂದು ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೆಮ್ಮೆಯ ಜಾನಪದ ಕಲಾವಿದ ಮುಖವೀಣೆ ಅಂಜಿನಪ್ಪ ಅವರ ಕಲಾ ಬದುಕು, ಸಾಧನೆ, ಜನಪದ ವಾದ್ಯಗಳ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಜನಪದ ಕಲೆಯನ್ನು ಪರಿಚಯಿಸುವ ಕುರಿತು ಸಂವಾದ ನಡೆಯಲಿದೆ. ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗವಿಕುಂಟ ಗ್ರಾಮದವರಾದ ಅಂಜಿನಪ್ಪ ಅವರು ತಮ್ಮ ತಾತ, ತಂದೆ ಹಾಗೂ ದೊಡ್ಡಪ್ಪರಿಂದ ಬಳುವಳಿಯಾಗಿ ಬಂದ ಮುಖವೀಣೆ ಕಲೆಯನ್ನು ಬಾಲ್ಯದಲ್ಲಿಯೇ ಕಲಿತಿದ್ದಾರೆ. ಮುಖವೀಣೆ ಸೇರಿದಂತೆ ಪಂಚವಾದ್ಯಗಳನ್ನು ಏಕಕಾಲದಲ್ಲಿ ನುಡಿಸುವ ಅಪರೂಪದ ಹಾಗೂ ವಿಶಿಷ್ಟ ಪ್ರತಿಭೆ ಅವರದ್ದಾಗಿದೆ. ಶೃತಿದಾಲಿ, ಕೊಂಬು, ಕೊಳಲು ಸೇರಿದಂತೆ ವಿವಿಧ ಜನಪದ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸುವ ಅವರು, ಮೂಗಿನ ಮೂಲಕ ವಾದ್ಯ ನುಡಿಸುವ ವಿಶಿಷ್ಟ ಕಲೆಯಿಂದಲೂ ಗಮನ ಸೆಳೆದಿದ್ದಾರೆ. 86ರ ಇಳಿವಯಸ್ಸಿನಲ್ಲಿಯೂ ಮುಖವೀಣೆಯ ನಾದವನ್ನು ಜೀವಂತವಾಗಿರಿಸಿರುವ ಅಂಜಿನಪ್ಪ ಅವರು, ತಮ್ಮ ಕಲಾ ಜ್ಞಾನ ತಮ್ಮೊಂದಿಗೇ ಕೊನೆಗೊಳ್ಳಬಾರದು ಎಂಬ ಆಶಯದಿಂದ ಯುವ ಪೀಳಿಗೆಗೆ ಈ ಕಲೆಯನ್ನು ಉಚಿತವಾಗಿ ಕಲಿಸಲು ಸಿದ್ಧರಾಗಿದ್ದಾರೆ. ಅಳಿವಿನಂಚಿನಲ್ಲಿರುವ ಮುಖವೀಣೆ ಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಅವರ ಪ್ರಯತ್ನ ಜನಪದ ಕ್ಷೇತ್ರದಲ್ಲಿ ಮಹತ್ವದ್ದಾಗಿದೆ. ಅವರ ಅಪೂರ್ವ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಲವಾರು ಪ್ರಶಸ್ತಿ ಹಾಗೂ ಗೌರವಗಳನ್ನು ನೀಡಿ ಸನ್ಮಾನಿಸಿವೆ. ‘ಜಾನಪದ ಶ್ರೀ’, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕೋತ್ಸವ ಪ್ರಶಸ್ತಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಾಜ್ಯೋತ್ಸವ ಪ್ರಶಸ್ತಿ, ಪಿ.ಆರ್.ಟಿ. ಜಾನಪದ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಹಾಗೂ ನಾಡೋಜ ಹೆಚ್.ಎಲ್. ನಾಗೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ. ಮುಖವೀಣೆ ಅಂಜಿನಪ್ಪ ಅವರ ಕಲಾ ಬದುಕು ಮತ್ತು ಅನುಭವಗಳನ್ನು ನೇರವಾಗಿ ಆಲಿಸುವ ಹಾಗೂ ಅವರ ಅಪರೂಪದ ವಾದ್ಯ ಕಲೆಯ ಸೊಗಡನ್ನು ಆಸ್ವಾದಿಸುವ ಅವಕಾಶವನ್ನು ಕಾರ್ಯಕ್ರಮ ಒದಗಿಸಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್ ಚಲವಾದಿ ಹಾಗೂ ಸಹಾಯಕ ನಿರ್ದೇಶಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಕಲಾವಿದರು, ಕಲಾ ಹಾಗೂ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪದ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಅವರು ಮನವಿ ಮಾಡಿದ್ದಾರೆ.

1 hr ago
user_Govindappa K
Govindappa K
Local News Reporter ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
1 hr ago
793f4b3c-c070-4326-8035-605afac9c1bb

ಅಪರೂಪದ ಮುಖವೀಣೆ ಕಲಾವಿದ ಅಂಜಿನಪ್ಪ ಅವರೊಂದಿಗೆ ‘ಸಾಧಕರೊಂದಿಗೆ ಸಂವಾದ’ ಹಾಗೂ ಸನ್ಮಾನ ಕಾರ್ಯಕ್ರಮ ಚಿಕ್ಕಬಳ್ಳಾಪುರ : ಅಳಿವಿನಂಚಿನಲ್ಲಿರುವ ಅಪರೂಪದ ಜನಪದ ವಾದ್ಯ ಮುಖವೀಣೆ ಕಲೆಯನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡು, ಕಳೆದ ಹಲವು ದಶಕಗಳಿಂದ ಅದರ ನಾದವನ್ನು ಜೀವಂತವಾಗಿರಿಸಿರುವ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಮುಖವೀಣೆ ಶ್ರೀ ಅಂಜಿನಪ್ಪ ಅವರೊಂದಿಗೆ ‘ಸಾಧಕರೊಂದಿಗೆ ಸಂವಾದ’ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 29ರಂದು ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೆಮ್ಮೆಯ ಜಾನಪದ ಕಲಾವಿದ ಮುಖವೀಣೆ ಅಂಜಿನಪ್ಪ ಅವರ ಕಲಾ ಬದುಕು, ಸಾಧನೆ, ಜನಪದ ವಾದ್ಯಗಳ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಜನಪದ ಕಲೆಯನ್ನು ಪರಿಚಯಿಸುವ ಕುರಿತು ಸಂವಾದ ನಡೆಯಲಿದೆ. ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗವಿಕುಂಟ ಗ್ರಾಮದವರಾದ ಅಂಜಿನಪ್ಪ ಅವರು ತಮ್ಮ ತಾತ, ತಂದೆ ಹಾಗೂ ದೊಡ್ಡಪ್ಪರಿಂದ ಬಳುವಳಿಯಾಗಿ ಬಂದ ಮುಖವೀಣೆ ಕಲೆಯನ್ನು ಬಾಲ್ಯದಲ್ಲಿಯೇ ಕಲಿತಿದ್ದಾರೆ. ಮುಖವೀಣೆ ಸೇರಿದಂತೆ ಪಂಚವಾದ್ಯಗಳನ್ನು ಏಕಕಾಲದಲ್ಲಿ ನುಡಿಸುವ ಅಪರೂಪದ ಹಾಗೂ ವಿಶಿಷ್ಟ ಪ್ರತಿಭೆ ಅವರದ್ದಾಗಿದೆ. ಶೃತಿದಾಲಿ, ಕೊಂಬು, ಕೊಳಲು ಸೇರಿದಂತೆ ವಿವಿಧ ಜನಪದ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸುವ ಅವರು, ಮೂಗಿನ ಮೂಲಕ ವಾದ್ಯ ನುಡಿಸುವ ವಿಶಿಷ್ಟ ಕಲೆಯಿಂದಲೂ ಗಮನ ಸೆಳೆದಿದ್ದಾರೆ. 86ರ ಇಳಿವಯಸ್ಸಿನಲ್ಲಿಯೂ ಮುಖವೀಣೆಯ ನಾದವನ್ನು ಜೀವಂತವಾಗಿರಿಸಿರುವ ಅಂಜಿನಪ್ಪ ಅವರು, ತಮ್ಮ

9758125f-b005-4cb7-9402-8e5e83d11685

ಕಲಾ ಜ್ಞಾನ ತಮ್ಮೊಂದಿಗೇ ಕೊನೆಗೊಳ್ಳಬಾರದು ಎಂಬ ಆಶಯದಿಂದ ಯುವ ಪೀಳಿಗೆಗೆ ಈ ಕಲೆಯನ್ನು ಉಚಿತವಾಗಿ ಕಲಿಸಲು ಸಿದ್ಧರಾಗಿದ್ದಾರೆ. ಅಳಿವಿನಂಚಿನಲ್ಲಿರುವ ಮುಖವೀಣೆ ಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಅವರ ಪ್ರಯತ್ನ ಜನಪದ ಕ್ಷೇತ್ರದಲ್ಲಿ ಮಹತ್ವದ್ದಾಗಿದೆ. ಅವರ ಅಪೂರ್ವ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಲವಾರು ಪ್ರಶಸ್ತಿ ಹಾಗೂ ಗೌರವಗಳನ್ನು ನೀಡಿ ಸನ್ಮಾನಿಸಿವೆ. ‘ಜಾನಪದ ಶ್ರೀ’, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕೋತ್ಸವ ಪ್ರಶಸ್ತಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಾಜ್ಯೋತ್ಸವ ಪ್ರಶಸ್ತಿ, ಪಿ.ಆರ್.ಟಿ. ಜಾನಪದ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಹಾಗೂ ನಾಡೋಜ ಹೆಚ್.ಎಲ್. ನಾಗೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ. ಮುಖವೀಣೆ ಅಂಜಿನಪ್ಪ ಅವರ ಕಲಾ ಬದುಕು ಮತ್ತು ಅನುಭವಗಳನ್ನು ನೇರವಾಗಿ ಆಲಿಸುವ ಹಾಗೂ ಅವರ ಅಪರೂಪದ ವಾದ್ಯ ಕಲೆಯ ಸೊಗಡನ್ನು ಆಸ್ವಾದಿಸುವ ಅವಕಾಶವನ್ನು ಕಾರ್ಯಕ್ರಮ ಒದಗಿಸಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್ ಚಲವಾದಿ ಹಾಗೂ ಸಹಾಯಕ ನಿರ್ದೇಶಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಕಲಾವಿದರು, ಕಲಾ ಹಾಗೂ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪದ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಅವರು ಮನವಿ ಮಾಡಿದ್ದಾರೆ.

More news from ಕರ್ನಾಟಕ and nearby areas
  • ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!
    1
    ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!
    user_NAYANNEWS
    NAYANNEWS
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    7 hrs ago
  • ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಸಮಾಜ ಸೇವಕ ಸಿಎಂ ಬೈರೇಗೌಡ ರು ಮುತ್ತೈದೆಯರಿಗೆ ಹರಿಶಿನ, ಕುಂಕುಮ, ಸೀರೆ ವಿತರಣೆ
    1
    ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಸಮಾಜ ಸೇವಕ ಸಿಎಂ ಬೈರೇಗೌಡ ರು ಮುತ್ತೈದೆಯರಿಗೆ ಹರಿಶಿನ, ಕುಂಕುಮ, ಸೀರೆ ವಿತರಣೆ
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    12 hrs ago
  • ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು
    2
    ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ
ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು
ನೆಲಮಂಗಲ
ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ
ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ
ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ
ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು
ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ
ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ
ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    7 hrs ago
  • ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ.
    1
    ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ 
ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ.
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    6 hrs ago
  • ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ! ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್! ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ! ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್!
    1
    ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ!
ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್!


ವಿಡಿಯೋ ಕಾಲ್ ಮೂಲಕ ಪುನೀತ್ ಕೆರೆಹಳ್ಳಿಗೆ ವಿನೋದ್ ರಾಜ್ ಬೆಂಬಲ!
ಹೋರಾಟಕ್ಕೆ ಸಾಥ್ ನೀಡಿದ ನಟ ವಿನೋದ್ ರಾಜ್!
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    51 min ago
  • ಪಕ್ಷದಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳು: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಗರ ನಿವಾಸದ ಬಳಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿಗಳಿವೆಯಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ಬುಧವಾರ ಈ ರೀತಿ ಪ್ರತಿಕ್ರಿಯಿಸಿದರು.
    1
    ಪಕ್ಷದಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳು: ಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಗರ ನಿವಾಸದ ಬಳಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿಗಳಿವೆಯಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ಬುಧವಾರ ಈ ರೀತಿ ಪ್ರತಿಕ್ರಿಯಿಸಿದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    12 hrs ago
  • ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರ: ಪಕ್ಷದ ಪ್ರತಿಯೊಬ್ಬರೂ ಶಿಸ್ತಿನ ಸಿಪಾಯಿಗಳು ಎಂದ ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಮ್ಮ ಪಕ್ಷದಲ್ಲಿ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಶಿಸ್ತಿನ ಸಿಪಾಯಿಗಳಾಗಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ತೀವ್ರ ಹೋರಾಟ ನಡೆಸುತ್ತಿವೆ. ಈ ಬೆಳವಣಿಗೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಪಕ್ಷದಲ್ಲಿ ಎಲ್ಲರೂ ಶಿಸ್ಬದ್ಧವಾಗಿ ಹಾಗೂ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರು, ಸಚಿವರು ಹಾಗೂ ಪ್ರತಿ ಹಂತದ ಕಾರ್ಯಕರ್ತರು ಸಂಪೂರ್ಣ ಶಿಸ್ಲಿನಿಂದ (ಡಿಸಿಪ್ಲಿನ್) ಇದ್ದಾರೆ ಎಂದು ಪುನರುಚ್ಚರಿಸಿದ ಡಿ.ಕೆ. ಶಿವಕುಮಾರ್, ಪಕ್ಷದ ಹಿತಾಸಕ್ತಿ ಮತ್ತು ನಿರ್ದೇಶನದಂತೆ ಎಲ್ಲರೂ ನಡೆದುಕೊಳ್ಳಲಿದ್ದಾರೆ ಎಂಬ ಸಂದೇಶವನ್ನು ನೀಡಿದರು.
    1
    ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರ: ಪಕ್ಷದ ಪ್ರತಿಯೊಬ್ಬರೂ ಶಿಸ್ತಿನ ಸಿಪಾಯಿಗಳು ಎಂದ ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಮ್ಮ ಪಕ್ಷದಲ್ಲಿ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಶಿಸ್ತಿನ ಸಿಪಾಯಿಗಳಾಗಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.  
ರಾಜ್ಯದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ತೀವ್ರ ಹೋರಾಟ ನಡೆಸುತ್ತಿವೆ. ಈ ಬೆಳವಣಿಗೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಪಕ್ಷದಲ್ಲಿ ಎಲ್ಲರೂ ಶಿಸ್ಬದ್ಧವಾಗಿ ಹಾಗೂ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.  
ಕಾಂಗ್ರೆಸ್ ಪಕ್ಷದಲ್ಲಿ ಶಾಸಕರು, ಸಚಿವರು ಹಾಗೂ ಪ್ರತಿ ಹಂತದ ಕಾರ್ಯಕರ್ತರು ಸಂಪೂರ್ಣ ಶಿಸ್ಲಿನಿಂದ (ಡಿಸಿಪ್ಲಿನ್) ಇದ್ದಾರೆ ಎಂದು ಪುನರುಚ್ಚರಿಸಿದ ಡಿ.ಕೆ. ಶಿವಕುಮಾರ್, ಪಕ್ಷದ ಹಿತಾಸಕ್ತಿ ಮತ್ತು ನಿರ್ದೇಶನದಂತೆ ಎಲ್ಲರೂ ನಡೆದುಕೊಳ್ಳಲಿದ್ದಾರೆ ಎಂಬ ಸಂದೇಶವನ್ನು ನೀಡಿದರು.
    user_Mohan
    Mohan
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    22 hrs ago
  • ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. ದೇವನಹಳ್ಳಿ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ. 7 ಗಂಟೆಯ ವಿಮಾನದಲ್ಲಿ ಪ್ರಯಾಣ. AI2654 ವಿಮಾನದ ಮೂಲಕ ಪ್ರಯಾಣ. ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೀರಿನ ಸಮಸ್ತ ಕುರಿತು ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆಗೆ ದೆಹಲಿ ಪ್ರಯಾಣ. ಸಿಎಂ ಬೀಳ್ಕೊಡಲು ಏರ್ಪೋರ್ಟ್ ಗೆ ಆಗಮಿಸಿದ ಸಚಿವ ಈಶ್ವರ್ ಖಂಡ್ರೆ. ಬೀದರ್ ಶಾಸಕ ರಹೀಂಖಾನ್ ಸಿಎಂ ತೆರಳಿದ ನಂತರ ಬೆಂಗಳೂರಿನತ್ತ ಹೊರಡಲಿರುವ ಈಶ್ವರ್ ಖಂಡ್ರೆ ರಹಿಂಖಾನ್ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
    1
    ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ.
ದೇವನಹಳ್ಳಿ 
ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ.
7 ಗಂಟೆಯ ವಿಮಾನದಲ್ಲಿ ಪ್ರಯಾಣ.
AI2654 ವಿಮಾನದ ಮೂಲಕ ಪ್ರಯಾಣ.
ಕಾಂಗ್ರೆಸ್ ಕಚೇರಿ ಉದ್ಘಾಟನೆ, ನೀರಿನ ಸಮಸ್ತ ಕುರಿತು ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆಗೆ ದೆಹಲಿ ಪ್ರಯಾಣ.
ಸಿಎಂ ಬೀಳ್ಕೊಡಲು ಏರ್ಪೋರ್ಟ್ ಗೆ ಆಗಮಿಸಿದ ಸಚಿವ ಈಶ್ವರ್ ಖಂಡ್ರೆ. ಬೀದರ್ ಶಾಸಕ ರಹೀಂಖಾನ್ 
ಸಿಎಂ ತೆರಳಿದ ನಂತರ ಬೆಂಗಳೂರಿನತ್ತ ಹೊರಡಲಿರುವ ಈಶ್ವರ್ ಖಂಡ್ರೆ ರಹಿಂಖಾನ್ 
ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣ.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.