ತಮ್ಮ ಕಚೇರಿ, ಮನೆಯಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಕೋಮು ಸೌಹಾರ್ದತೆ ಸಂದೇಶ ಸಾರಿದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಬೆಳಗಾವಿ: ನಾನು ಜಿಲ್ಲಾಧಿಕಾರಿ ಆಗಿ ಕಳೆದ ಮೂರು ವರ್ಷಗಳಿಂದ ಡಿಸಿ ಕಚೇರಿ ಮತ್ತು ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಸೌಹಾರ್ದತೆ ಸಂದೇಶ ಸಾರುತ್ತಾ ಬಂದಿದ್ದೇನೆ. ಯಾವುದೇ ರೀತಿ ಬೇಧ-ಭಾವ ಇಲ್ಲದಂತೆ ಪ್ರತಿ ಹಬ್ಬ, ಜಾತ್ರೆ ಹಾಗೂ ಮೆರವಣಿಗೆಯಲ್ಲಿ ನಾವೆಲ್ಲಾ ಒಂದಾಗಿ ಪಾಲ್ಗೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಬೆಳಗಾವಿ ಮುಂಚೂಣಿಯಲ್ಲಿ ಇರಬೇಕು ಎಂಬುದು ನಮ್ಮ ಆಶಯ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಇಲ್ಲನ ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ಪ್ರತಿ ವರ್ಷದಂತೆ ಗಣೇಶನನ್ನು ತಮ್ಮ ಕಚೇರಿಗೆ ತೆಗೆದುಕೊಂಡು ಹೋದರು. ಈ ಮೂಲಕ ಮತ್ತೊಮ್ಮೆ ಕೋಮು ಸೌಹಾರ್ದತೆ ಮೆರೆದರು. ಇದಕ್ಕೂ ಮೊದಲು ಮಾತನಾಡಿದ ಅವರು, ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಪ್ರತಿವರ್ಷ ಅತೀ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ವರ್ಷವೂ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಹಿಂದಿನ ಎರಡು ವರ್ಷಗಳಿಂದ ಜಿಲ್ಲಾಧಿಕಾರಿ ಆಗಿ ನಾನು ಡಿಸಿ ಕಚೇರಿ ಮತ್ತು ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದೆವು. ಈಗ ಮೂರನೇ ವರ್ಷವೂ ಇಲ್ಲಿನ ಗಣಪತಿ ದೇವಸ್ಥಾನಕ್ಕೆ ಬಂದು, ದೇವರ ಆಶೀರ್ವಾದ ಪಡೆದಿದ್ದೇನೆ. ಆ ಬಳಿಕ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಕಚೇರಿ ಮತ್ತು ಮನೆಗೆ ಬಾಲ ಗಣಪನನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು. ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಸದಾಕಾಲ ಶಾಂತಿ, ಸೌಹಾರ್ದತೆ, ಭ್ರಾತೃತ್ವ ಭಾವನೆ ನೆಲೆಸಿರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಎಲ್ಲರ ಮನೆಯಲ್ಲಿ ಸುಖ, ಶಾಂತಿ ತುಂಬಿರಲಿ. ದೇವರ ಆಶೀರ್ವಾದ ಎಲ್ಲರ ಮೇಲೆ ಸದಾಕಾಲ ಇರಲಿ ಎಂದು ಜಿಲ್ಲಾಧಿಕಾರಿ ಶುಭಾಶಯ ಕೋರಿದರು. ಗಣೇಶ ದೇವಸ್ಥಾನದಿಂದ ಡಿಸಿ ಕಚೇರಿವರೆಗೂ ಜಿಲ್ಲಾಧಿಕಾರಿಗಳು ಸ್ವತಃ ತಾವೇ ಗಣೇಶನನ್ನು ತಮ್ಮ ಕೈಯಲ್ಲಿ ಹೊತ್ತು ತಂದಿದ್ದು ವಿಶೇಷವಾಗಿತ್ತು. ಕಚೇರಿ ಮಹಿಳಾ ಸಿಬ್ಬಂದಿ ಗಣೇಶನಿಗೆ ಆರತಿ ಬೆಳಗಿ ಬರಮಾಡಿಕೊಂಡರು. ಬಳಿಕ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ವೇಳೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿ ಮತ್ತಿತರರು ಇದ್ದರು. ಬಳಿಕ ತಮ್ಮ ಮನೆಯಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ, ಮೊಹಮ್ಮದ್ ರೋಷನ್ ಅವರು ಪೂಜೆ ಸಲ್ಲಿಸಿದರು. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಣೇಶನ ಹಬ್ಬ ಕಳೆಗಟ್ಟಿದೆ. ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ವಿಘ್ನವಿನಾಶಕ ಗಣಪನನ್ನು ಭಕ್ತರು ಭಕ್ತಿಭಾವ, ಸಂಭ್ರಮ ಹಾಗೂ ಸಡಗರದಿಂದ ಅದ್ಧೂರಿಯಾಗಿ ಬರಮಾಡಿಕೊಂಡರು. ಬೆಳಗಾವಿಯ ಶನಿವಾರ ಕೂಟ, ಖಡೇಬಜಾರ್, ಅನಗೋಳ, ವಡಗಾವಿ, ಶಾಹಪುರ, ಮಹಾಂತೇಶ ನಗರ, ಯಡಿಯೂರಪ್ಪ ಮಾರ್ಗ ಸೇರಿ ನಗರದ ವಿವಿಧೆಡೆ ಮೂರ್ತಿಕಾರರ ಬಳಿ ತಮ್ಮ ಮನೆಗೆ ಗಣಪನನ್ನು ಒಯ್ಯಲು ಸಾಂಪ್ರದಾಯಿಕ ವೇಷ ತೊಟ್ಟು ಕುಟುಂಬ ಸಮೇತ ಆಗಮಿಸಿದ್ದರು. ಮಹಿಳೆಯರು ಸೀರೆ ತೊಟ್ಟಿದ್ದರೆ, ಪುರುಷರು ಕುರ್ತಾ-ದೋತರ, ಟೋಪಿ ಧರಿಸಿ ಬಂದಿದ್ದರು. ಚಿಕ್ಕ ಮಕ್ಕಳು ಹೊಸ ಬಟ್ಟೆಗಳಲ್ಲಿ ಮಿಂಚಿದರು.

- ಅಥಣಿ ಪಟ್ಟಣದಲ್ಲಿ ಗಣೇಶ ಉತ್ಸವದಲ್ಲಿ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕಿದ ಸಚಿವ ಲಕ್ಷ್ಮಣ ಸವದಿ. ಅಥಣಿ : ಕರ್ನಾಟಕ ಸರ್ಕಾರದ ಸಹಕಾರ ಸಚಿವ ಗಣೇಶ ಆಗಮನದ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಸಂಭ್ರಮ ಮೂಡಿಸಿದರು. ಈ ವೇಳೆ ಅಭಿಮಾನಿಗಳು ಸೌದಿ ಅವರೊಂದಿಗೆ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದರು.1
- ಬನಹಟ್ಟಿ ಸತ್ಯಾಗ್ರಹ ಸ್ಥಳಕ್ಕೆ ಪೊಲೀಸರ ಭೇಟಿ - ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನ ಪ್ರಜಾಸೌಧ ಕುರಿತು ಬನಹಟ್ಟಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯಕೀಯ ಶಿಪಾರಸ್ಸು ಮೇರೆಗೆ ಅವರನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು1
- ಮುಧೋಳ ನಗರದಲ್ಲಿ ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಅಸಂಖ್ಯ ಭಕ್ತಗಣ ಮುಧೋಳ : ಗಣೇಶೋತ್ಸವ ಹಿನ್ನೆಲೆ ನಗರದಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಸಂಖ್ಯ ಭಕ್ತಗಣದ ಮಧ್ಯೆ ಅದ್ದೂರಿಯಾಗಿ ಜರುಗಿತು. ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಜೈ ಭಾರತ ಸರ್ಕಲ್, ಜನತಾ ಪ್ಲಾಟ್ ಸೇರಿದಂತೆ ಹಲವಾರು ಭಾಗದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಂಢರಪುರದ ದಿಂಡೆ ರೂಪಕ, ಮಹಾರಾಷ್ಟ್ರದ ಡೋಲ್ ತಾಷ್, ಡಿಜೆ, ಡಾಲ್ಬಿ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆ ಹಾಕಿದರು. ಮಹಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೈ ಭಾರತ ವೃತ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಜನರು ನೆರದಿದ್ದರು. ಭಕ್ತಿಭಾವದಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.4
- ಗರಸು ತುಂಬಿದ ಟ್ರ್ಯಾಕ್ಟರ್‌ಗಳ ರೋಚಕ ಸ್ಪರ್ಧೆ, ಹಳ್ಳದ ಗೆಣ್ಣೂರಿನಲ್ಲಿ ಹಳ್ಳದ ಗೆಣ್ಣೂರಿನಲ್ಲಿ ಶ್ರೀ ಗಜಾನನ ಯುವಕ ಮಂಡಳಿಯಿಂದ ಆಯೋಜನೆ ಹಳ್ಳದ ಗೆಣ್ಣೂರು: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ವಾಟರ್ ಟ್ಯಾಂಕ್ ಸಮೀಪ ಶ್ರೀ ಗಜಾನನ ಯುವಕ ಮಂಡಳಿಯ ವತಿಯಿಂದ ನಾಲ್ಕು ಟೈಲರ್‌ಗಳ ಗರಸು ತುಂಬಿದ ಟ್ರ್ಯಾಕ್ಟರ್‌ಗಳ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಟ್ರ್ಯಾಕ್ಟರ್‌ಗಳ ಸಾಮರ್ಥ್ಯ ಹಾಗೂ ಚಾಲಕರ ಕೌಶಲ್ಯ ಗಮನ ಸೆಳೆಯಿತು. ರೋಚಕ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ಟ್ರ್ಯಾಕ್ಟರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಶಿವು ವಿ. ಬೆಳ್ಳುಬ್ಬಿ ಪ್ರಥಮ ಬಹುಮಾನ, ರೇವಣಸಿದ್ಧ ಪಡಸಲಗಿ ದ್ವಿತೀಯ ಬಹುಮಾನ ಹಾಗೂ ಅಬ್ದುಲ್ ನದಾಫ್ ತೃತೀಯ ಬಹುಮಾನ ಪಡೆದುಕೊಂಡರು ಎಂದು ಶ್ರೀ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧೆಯು ಯುವಕರಲ್ಲಿ ಉತ್ಸಾಹ ಮೂಡಿಸುವುದರೊಂದಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.1
- ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ ಶಾಸಕ ಯತ್ನಾಳ ಸಿಎಂ ಆಗುವುದು ಹಗಲುಗನಸು: ಸಚಿವ ವಿಜಯಾನಂದ ಕಾಶಪ್ಪನವರ1
- *ಹಿಂದೂ ಮಹಾಗಣಪತಿ , ತಾಳಿಕೋಟೆ 🕉* *ಮೊದಲ ಭವ್ಯ ದರ್ಶನ ಸಂಜೆ 7 ಘಂಟೆಗೆ* 🌺 ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾದ ಶ್ರೀ ಮಹಾಗಣಪತಿಯ ದಿವ್ಯ ದರ್ಶನ ಪಡೆಯಲು ತಾಳಿಕೋಟೆಯ ಸಮಸ್ತ ಭಕ್ತಾದಿಗಳಿಗೆ ಆತ್ಮೀಯ ಆಹ್ವಾನ. *🙏 ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ, ತಮ್ಮ ಬಂಧು-ಬಳಗ ಹಾಗೂ ಸ್ನೇಹಿತರನ್ನೂ ಕರೆತಂದು ಶ್ರೀ ಮಹಾಗಣಪತಿಯ ದಿವ್ಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಿ.* ತಾಳಿಕೋಟಿ: ಪಟ್ಟಣದಲ್ಲಿ ಭಕ್ತಿಭಾವದಿಂದ ಪ್ರತಿಷ್ಠಾಪಿಸಲಾದ ಶ್ರೀ ಹಿಂದೂ ಮಹಾಗಣಪತಿಯ ಮೊದಲ ಭವ್ಯ ದರ್ಶನ ಸಂಜೆ 7 ಗಂಟೆಗೆ ನೆರವೇರಿತು. ಶ್ರೀ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ತಾಳಿಕೋಟೆಯ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗಣಪತಿ ಬಪ್ಪನ ದಿವ್ಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಮಹಾಗಣಪತಿಯ ದರ್ಶನಕ್ಕೆ ಭಕ್ತರಲ್ಲಿ ಅಪಾರ ಉತ್ಸಾಹ ಕಂಡುಬಂದಿತು. ಭಕ್ತರು ಶ್ರದ್ಧಾ–ಭಕ್ತಿಯಿಂದ ಪೂಜೆ ಸಲ್ಲಿಸಿ, ಶ್ರೀ ಹಿಂದೂ ಮಹಾಗಣಪತಿಯ ಆಶೀರ್ವಾದ ಪಡೆದು ತಮ್ಮ ಕುಟುಂಬಕ್ಕೆ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ತಾಳಿಕೋಟೆ ಪಟ್ಟಣದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಿ ಗಣಪತಿ ಬಪ್ಪನ ದರ್ಶನ ಪಡೆದರು. ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ…! ವರದಿ: ಸಂಗನಗೌಡ ಗಬಸಾವಳಗಿ SCN TV NEWS – ತಾಳಿಕೋಟಿ1
- ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್ ಎದುರು ಪ್ರತಿಭಟನೆ1
- ಅದ್ದೂರಿಯಾಗಿ ಜರುಗಿದ ಹಲ್ಯಾಳ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಆರಾಧ್ಯ ದೈವ ಶ್ರೀ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು. ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಪ್ರವಚನ ಕಾರ್ಯಕ್ರಮ: ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಘತರಗಿ ಭಾಗ್ಯವತಿ ದೇವಿಯ ಜೀವನ ಚರಿತ್ರೆ ಕುರಿತು ಪ್ರವಚನ ಜರುಗಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಿದರು. ಕುಂಭಮೇಳ: ಜಾತ್ರೆಯ ಪೂರ್ವಭಾವಿಯಾಗಿ ಕೃಷ್ಣಾ ನದಿಯಿಂದ ಹಲ್ಯಾಳ ಗ್ರಾಮದವರೆಗೆ ಮುತ್ತೈದೆಯರಿಂದ ವಿಜೃಂಭಣೆಯ ಕುಂಭಮೇಳ ನಡೆಯಿತು. ಮಹಿಳೆಯರು ಕುಂಭ ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆ ಮತ್ತು ಮಹಾಭಿಷೇಕ: ಜಾತ್ರೆಯ ದಿನ ಮುಂಜಾನೆ ಶ್ರೀ ಶಿವರಾಯ ಮುತ್ಯಾ ದೇವಸ್ಥಾನದ ಪೂಜಾರಿ ಸೋಮಣ್ಣ ಪೂಜಾರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ: ಶ್ರೀ ಶಿವರಾಯ ಮುತ್ಯಾ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದ ತಂಡಗಳು ಜಾತ್ರೆಗೆ ವಿಶೇಷ ಮೆರುಗು ನೀಡಿದವು. ಭಕ್ತರು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ವಿಶೇಷ ಆಚರಣೆಗಳು ಮತ್ತು ಪ್ರಸಾದ ವಿನಿಯೋಗ ಗ್ರಾಮದ ಹೃದಯಭಾಗದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪೂಜಾರಿಗಳಿಂದ ಅಲಗ ಹಾಯುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ವೇಳೆ ದೇವರಲ್ಲಿ ಹರಕೆ ಹೊತ್ತ ಭಕ್ತರು ಶಿವರಾಯ ಮುತ್ಯಾ ಮೂರ್ತಿಗೆ ಭಂಡಾರ ಅರ್ಪಿಸಿ ತಮ್ಮ ಹರಕೆ ತೀರಿಸಿದರು. ನಂತರ ಆಗಮಿಸಿದ್ದ ಸಮಸ್ತ ಭಕ್ತರು ವಿಶೇಷ ಪ್ರಸಾದ ಸ್ವೀಕರಿಸಿ ಶ್ರೀ ಶಿವರಾಯ ಮುತ್ಯಾ ಆಶೀರ್ವಾದಕ್ಕೆ ಪಾತ್ರರಾದರು. ಗಣ್ಯರ ಉಪಸ್ಥಿತಿ ಈ ಜಾತ್ರಾ ಮಹೋತ್ಸವದಲ್ಲಿ ಗುಂಡು ಹಿರೇಕುರುಬರ, ಮುತ್ತಣ್ಣ ಸನದಿ, ಮುದುಕಣ್ಣ ಶೇಗುಣಸಿ, ಕಾಕಾಸಾಹೇಬ್ ಪಾಟೀಲ, ಚಂದ್ರಕಾಂತ ಕಾಗವಾಡ, ಸಿದ್ದಪ್ಪ ಲೋಕರ, ಕಾಂತೇಶ ಬಾಗಿ, ರಾಯಪ್ಪ ಬಾಗಿ, ಅಣ್ಣಪ್ಪ ಬಾಗಿ, ಗುಳ್ಳಪ್ಪ ನಾಯಿಕ, ಸಿದ್ದು ಮಗದುಮ, ಆಕಾಶ ಬಾಗಿ, ಪರಶುರಾಮ ಡಂಗಿ ಹಾಗೂ ಸಚಿನ್ ಮೆಂಡಿಗೇರಿ ಸೇರಿದಂತೆ ಗ್ರಾಮದ ಗಣ್ಯರು, ಹಲ್ಯಾಳ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.4