ಅಗ್ನಿಶಾಮಕ ಸೇವಾ ಸಪ್ತಾಹ:ಮಾಕ್ ಡ್ರಿಲ್ (Mock drill), ಜಾಗೃತಿ ಕಾರ್ಯಕ್ರಮ ಯಶಸ್ವಿ ಕುಷ್ಟಗಿ: ತಾಲ್ಲೂಕಿನ ಗುಮಗೇರಾ ಗ್ರಾಮದ ಹತ್ತಿರದ ಐಎನ್‌ಆರ್ ಎನರ್ಜಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸೌರಶಕ್ತಿ ಘಟಕದಲ್ಲಿ ‘ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹ–2026’ ಅಂಗವಾಗಿ ಅಗ್ನಿ ಅವಘಡಗಳ ನಿಯಂತ್ರಣ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿಶೇಷ ತರಬೇತಿ ಮತ್ತು ‘ಮಾಕ್ ಡ್ರಿಲ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಅವರು ಸಿಬ್ಬಂದಿಗೆ ಅಗ್ನಿ ಅವಘಡಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಬೆಂಕಿ ಅವಘಡಗಳನ್ನು A, B, C ಮತ್ತು D ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ ಎಂದು ತಿಳಿಸಿದ ಅವರು, ಕಟ್ಟಿಗೆ ಹಾಗೂ ಹುಲ್ಲಿನಿಂದ ಉಂಟಾಗುವ ಬೆಂಕಿ (A), ಪೆಟ್ರೋಲ್-ಡೀಸೆಲ್‌ನಿಂದ ಹರಡುವ ಬೆಂಕಿ (B), ಅನಿಲದಿಂದ ಉಂಟಾಗುವ ಬೆಂಕಿ (C) ಹಾಗೂ ವಿದ್ಯುತ್ ಉಪಕರಣಗಳಿಂದ ಸಂಭವಿಸುವ ಬೆಂಕಿ (D)ಗಳಿಗೆ ಪ್ರತ್ಯೇಕವಾಗಿ ಸೂಕ್ತ ನಂದಿಸುವ ವಿಧಾನಗಳನ್ನು ಅನುಸರಿಸಬೇಕು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯ ಮಾರ್ಗಸೂಚಿಗಳನ್ನೂ ವಿವರಿಸಲಾಯಿತು. ಬೆಂಕಿ ಕಾಣಿಸಿಕೊಂಡ ತಕ್ಷಣ 101, 112 ಅಥವಾ 108 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಲಾಯಿತು. ಕುಷ್ಟಗಿ ಅಗ್ನಿಶಾಮಕ ಠಾಣೆಯ 08536 268101 ಸಂಖ್ಯೆಯನ್ನೂ ಸಂಪರ್ಕಿಸಲು ಸೂಚಿಸಿದರು. ವಿದ್ಯುತ್ ಅವಘಡದ ಸಂದರ್ಭದಲ್ಲಿ ನೀರು ಬಳಸಬಾರದು, ಮೊದಲು ಮೇನ್ ಸ್ವಿಚ್ ಆಫ್ ಮಾಡಬೇಕು. ಎಲ್‌ಪಿಜಿ ಅನಿಲ ಸೋರಿಕೆಯಾದರೆ ಕಿಟಕಿ-ಬಾಗಿಲುಗಳನ್ನು ತೆರೆಯಬೇಕು, ಯಾವುದೇ ವಿದ್ಯುತ್ ಸ್ವಿಚ್‌ಗಳನ್ನು ಬಳಸಬಾರದು ಹಾಗೂ ಪ್ರತಿದಿನ ರಾತ್ರಿ ಗ್ಯಾಸ್ ರೆಗ್ಯುಲೇಟರ್‌ನ್ನು ಕಡ್ಡಾಯವಾಗಿ ಆಫ್ ಮಾಡಬೇಕು ಎಂದು ಸಲಹೆ ನೀಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಹುಲ್ಲಿನ ಬಣವೆಗಳನ್ನು ಮನೆಯಿಂದ ಕನಿಷ್ಠ 50 ಅಡಿ ದೂರದಲ್ಲಿ ಇರಿಸುವಂತೆ ಸೂಚಿಸಿದರು. ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರವೀಣ ಕುಮಾರ, ಬಸವರಾಜ ಹೊರಕೇರಿ ಹಾಗೂ ಮಲ್ಲಿಕಾರ್ಜುನ್ ಅವರು ಸೋಲಾರ್ ಪ್ಲಾಂಟ್ ಆವರಣದಲ್ಲಿ ಬೆಂಕಿ ನಂದಿಸುವ ವಿವಿಧ ವಿಧಾನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ಗಾಯಾಳುಗಳನ್ನು ಸ್ಟ್ರೆಚರ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸುವ ಕ್ರಮಗಳು ವಿಶೇಷ ಗಮನ ಸೆಳೆದವು. ಪ್ರಮುಖ ಅಗ್ನಿಶಾಮಕ ಅಧಿಕಾರಿ ನಾಗಪ್ಪ ಗಂಗನಾಳ ಮಾತನಾಡಿ, “ಅಗ್ನಿ ಅವಘಡ ಮಾತ್ರವಲ್ಲದೆ ಯಾವುದೇ ತುರ್ತು ಪರಿಸ್ಥಿತಿಯಲ್ಲೂ ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆಗೆ ನಮ್ಮ ಇಲಾಖೆ ಸದಾ ಸಿದ್ಧವಾಗಿದೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮೇಲ್ವಿಚಾರಕ ಸಾಗರ ಯಾದವ, ಸಿಬ್ಬಂದಿ ಮೇಲ್ವಿಚಾರಕ ಆನಂದ ಆರ್.ಕೆ., ಸುರಕ್ಷತಾ ಅಧಿಕಾರಿ ಆನಂದ ಹೊಸಮನಿ, ಇಂಜಿನಿಯರ್ ಮಹಿಬೂಬ ಕಾರಜೋಳ, ಹಿರಿಯ ತಾಂತ್ರಿಕ ಪರಸಪ್ಪ ಅಳ್ಳಳ್ಳಿ, ಸೆಕ್ಯೂರಿಟಿ ಸೂಪರ್ವೈಸರ್ ಬಸನಗೌಡ ಪಾಟೀಲ್ ಹಾಗೂ ಭದ್ರತಾ ಸಿಬ್ಬಂದಿ ಭಾಗವಹಿಸಿ ತರಬೇತಿ ಪಡೆದರು. ಸಹಾಯಕ ಠಾಣಾಧಿಕಾರಿ ಅಸ್ಲಾಂ ಪುಣೆಕರ್ ಹಾಗೂ ಚಾಲಕ ಬಸವರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಗ್ನಿಶಾಮಕ ಸೇವಾ ಸಪ್ತಾಹ:ಮಾಕ್ ಡ್ರಿಲ್ (Mock drill), ಜಾಗೃತಿ ಕಾರ್ಯಕ್ರಮ ಯಶಸ್ವಿ ಕುಷ್ಟಗಿ: ತಾಲ್ಲೂಕಿನ ಗುಮಗೇರಾ ಗ್ರಾಮದ ಹತ್ತಿರದ ಐಎನ್‌ಆರ್ ಎನರ್ಜಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸೌರಶಕ್ತಿ ಘಟಕದಲ್ಲಿ ‘ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹ–2026’ ಅಂಗವಾಗಿ ಅಗ್ನಿ ಅವಘಡಗಳ ನಿಯಂತ್ರಣ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿಶೇಷ ತರಬೇತಿ ಮತ್ತು ‘ಮಾಕ್ ಡ್ರಿಲ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಅವರು ಸಿಬ್ಬಂದಿಗೆ ಅಗ್ನಿ ಅವಘಡಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಬೆಂಕಿ ಅವಘಡಗಳನ್ನು A, B, C ಮತ್ತು D ಎಂಬ ನಾಲ್ಕು
ವಿಭಾಗಗಳಾಗಿ ವಿಂಗಡಿಸಲಾಗುತ್ತದೆ ಎಂದು ತಿಳಿಸಿದ ಅವರು, ಕಟ್ಟಿಗೆ ಹಾಗೂ ಹುಲ್ಲಿನಿಂದ ಉಂಟಾಗುವ ಬೆಂಕಿ (A), ಪೆಟ್ರೋಲ್-ಡೀಸೆಲ್‌ನಿಂದ ಹರಡುವ ಬೆಂಕಿ (B), ಅನಿಲದಿಂದ ಉಂಟಾಗುವ ಬೆಂಕಿ (C) ಹಾಗೂ ವಿದ್ಯುತ್ ಉಪಕರಣಗಳಿಂದ ಸಂಭವಿಸುವ ಬೆಂಕಿ (D)ಗಳಿಗೆ ಪ್ರತ್ಯೇಕವಾಗಿ ಸೂಕ್ತ ನಂದಿಸುವ ವಿಧಾನಗಳನ್ನು ಅನುಸರಿಸಬೇಕು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯ ಮಾರ್ಗಸೂಚಿಗಳನ್ನೂ ವಿವರಿಸಲಾಯಿತು. ಬೆಂಕಿ ಕಾಣಿಸಿಕೊಂಡ ತಕ್ಷಣ 101, 112 ಅಥವಾ 108 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಲಾಯಿತು. ಕುಷ್ಟಗಿ ಅಗ್ನಿಶಾಮಕ ಠಾಣೆಯ 08536 268101 ಸಂಖ್ಯೆಯನ್ನೂ ಸಂಪರ್ಕಿಸಲು ಸೂಚಿಸಿದರು. ವಿದ್ಯುತ್ ಅವಘಡದ ಸಂದರ್ಭದಲ್ಲಿ ನೀರು ಬಳಸಬಾರದು, ಮೊದಲು ಮೇನ್
ಸ್ವಿಚ್ ಆಫ್ ಮಾಡಬೇಕು. ಎಲ್‌ಪಿಜಿ ಅನಿಲ ಸೋರಿಕೆಯಾದರೆ ಕಿಟಕಿ-ಬಾಗಿಲುಗಳನ್ನು ತೆರೆಯಬೇಕು, ಯಾವುದೇ ವಿದ್ಯುತ್ ಸ್ವಿಚ್‌ಗಳನ್ನು ಬಳಸಬಾರದು ಹಾಗೂ ಪ್ರತಿದಿನ ರಾತ್ರಿ ಗ್ಯಾಸ್ ರೆಗ್ಯುಲೇಟರ್‌ನ್ನು ಕಡ್ಡಾಯವಾಗಿ ಆಫ್ ಮಾಡಬೇಕು ಎಂದು ಸಲಹೆ ನೀಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಹುಲ್ಲಿನ ಬಣವೆಗಳನ್ನು ಮನೆಯಿಂದ ಕನಿಷ್ಠ 50 ಅಡಿ ದೂರದಲ್ಲಿ ಇರಿಸುವಂತೆ ಸೂಚಿಸಿದರು. ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರವೀಣ ಕುಮಾರ, ಬಸವರಾಜ ಹೊರಕೇರಿ ಹಾಗೂ ಮಲ್ಲಿಕಾರ್ಜುನ್ ಅವರು ಸೋಲಾರ್ ಪ್ಲಾಂಟ್ ಆವರಣದಲ್ಲಿ ಬೆಂಕಿ ನಂದಿಸುವ ವಿವಿಧ ವಿಧಾನಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ಗಾಯಾಳುಗಳನ್ನು ಸ್ಟ್ರೆಚರ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸುವ ಕ್ರಮಗಳು ವಿಶೇಷ ಗಮನ ಸೆಳೆದವು. ಪ್ರಮುಖ ಅಗ್ನಿಶಾಮಕ ಅಧಿಕಾರಿ
ನಾಗಪ್ಪ ಗಂಗನಾಳ ಮಾತನಾಡಿ, “ಅಗ್ನಿ ಅವಘಡ ಮಾತ್ರವಲ್ಲದೆ ಯಾವುದೇ ತುರ್ತು ಪರಿಸ್ಥಿತಿಯಲ್ಲೂ ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆಗೆ ನಮ್ಮ ಇಲಾಖೆ ಸದಾ ಸಿದ್ಧವಾಗಿದೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮೇಲ್ವಿಚಾರಕ ಸಾಗರ ಯಾದವ, ಸಿಬ್ಬಂದಿ ಮೇಲ್ವಿಚಾರಕ ಆನಂದ ಆರ್.ಕೆ., ಸುರಕ್ಷತಾ ಅಧಿಕಾರಿ ಆನಂದ ಹೊಸಮನಿ, ಇಂಜಿನಿಯರ್ ಮಹಿಬೂಬ ಕಾರಜೋಳ, ಹಿರಿಯ ತಾಂತ್ರಿಕ ಪರಸಪ್ಪ ಅಳ್ಳಳ್ಳಿ, ಸೆಕ್ಯೂರಿಟಿ ಸೂಪರ್ವೈಸರ್ ಬಸನಗೌಡ ಪಾಟೀಲ್ ಹಾಗೂ ಭದ್ರತಾ ಸಿಬ್ಬಂದಿ ಭಾಗವಹಿಸಿ ತರಬೇತಿ ಪಡೆದರು. ಸಹಾಯಕ ಠಾಣಾಧಿಕಾರಿ ಅಸ್ಲಾಂ ಪುಣೆಕರ್ ಹಾಗೂ ಚಾಲಕ ಬಸವರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- ಕೋಟೆ ನಾಡಿನ ಇಳಕಲ್ ತಾಲೂಕಿನಲ್ಲಿ ರಣಬಿಸಿಲಿಗೆ ಜನರು ತತ್ತರಿಸಿದ್ದರು, ಬಿಸಿಲಿಗೆ ಬೆಂಡಾಗಿದ್ದ ಜನ ಮಳೆರಾಯನ ಕೃಪೆಯಿಂದ ಬಿಸಿಲಿನ ತಾಪದಿಂದ ಸ್ವಲ್ಪ ನಿರಾಳ ರಾಗಿದ್ದಾರೆ.1
- ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುವಂತ ಎಲ್ಲಾ ಗ್ರಾಮಗಳಿಗೂ ಮತ್ತು ಪಟ್ಟಣಗಳಿಗೂ ಬೇಸಿಗೆ ಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಅಭಾವ ಆಗದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಜಾನುವಾರು ಗಳಿಗೆ ಕುಡಿಯುವ ನೀರು ಮೇವುನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರೋಣ ಮತಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಹೇಳಿದರು, ಅವರು ರೋಣ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ರವಿವಾರ ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬೇಸಿಗೆ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ರೋಣ ಮತಕ್ಷೇತ್ರಕ್ಕೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು ಅದರಲ್ಲೂ ಡಿಬಿ ಓಟಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳು ಕೂಡಿಕೊಂಡು ಬೇಸಿಗೆ ಮುಗಿಯುವವರೆಗೆ ನೀರಿನ ಅಭಾವ ಆಗದಂತೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಕೆ ನೀಡಿದರು,ಬಾಸಲಾಪುರ, ಮುಗಳಿ, ಗುಳಗುಳಿ ಪಂಚಾಯತಿ ಅಮರಗಟ್ಟಿ,ರುದ್ರಾಪುರ,ರಾಂಪುರ, ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು,ಬಾಸಲಾಪುರಲ್ಲಿ ಡಿಬಿಒಟಿ ನೀರು ಪೂರೈಕೆ ಸರಿಯಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು, ಚಿಕ್ಕಮನ್ನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಡಿಬಿಒಟಿ ನೀರು ಪೂರೈಕೆ ಸರಿ ಇಲ್ಲ ಎಂದು ಪಿಡಿಒ ಕಲ್ಪನಾ ಕಡಗದ ತಿಳಿಸಿದರು,ಅಧಿಕಾರಿಗಳು ಎಲ್ಲರೂ ಕೂಡಿಕೊಂಡು ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಸರಿಪಡಿಸಿ ಎಂದು ಶಾಸಕರು ತಿಳಿಸಿದರು ,ವಿದ್ಯುತ್ ವ್ಯತ್ಯಯಗಳಿಂದ ಸಹ ನೀರಿನ ಸರಬರಾಜು ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಶ್ಮಿ ನಡುವಿನಮನಿ ಹೇಳಿದರು,ಸವಡಿ ಪಂಚಾಯತಿ ವ್ಯಾಪ್ತಿಯಲ್ಲಿ ಆರು ದಿನಕ್ಕೊಂದು ಸರಿ ನೀರನ್ನು ಬಿಡಲಾಗುತ್ತದೆ, ಐದು ಲಕ್ಷ ಲೀಟರ ಬದಲು ಕೇವಲ ಎರಡು ಲಕ್ಷ ಲೀಟರ್ ನೀರು ಬರುತ್ತಿದೆ ಎಂದು ಪಿಡಿಒ ಮೆಣಸಗಿ ತಿಳಿಸಿದರು,ಹಿರೇಹಾಳ ಪಂಚಾಯತಿ ವ್ಯಾಪ್ತಿಯ ಯರೇಕುರುಬಾನಾಳ ನೀರಿನ ಸಮಸ್ಯೆ ಇದೆ,ನೈನಾಪುರ ,ಬಸರಕೋಡ ನವಗ್ರಾಮ,ಚಿಕ್ಕಳಗುಂಡಿ ಹಿರೇಅಳಗುಂಡಿ,ಹಾಲಕೆರೆ,ಮಾಟರಂಗಿ, ಗೊಗೇರಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದರು, ಯಾವ ಯಾವ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ ಅಧಿಕಾರಿಗಳು ಕೂಡಲೇ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ ನೀರಿನ ಅಭಾವ ಉಂಟಾಗದಂತೆ ಕ್ರಮ ವಹಿಸಬೇಕು, ನೀರನ್ನು ಪರೀಕ್ಷೆ ಮಾಡದೇ ಸರಬರಾಜು ಮಾಡಬಾರದು ಶುದ್ಧ ನೀರನ್ನು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಪಂಚಾಯತಿ ಆಡಳಿತ ಅಧಿಕಾರಿಗಳು ಸಹ ಹೆಚ್ಚಿನ ಜವಾಬ್ದಾರರಾಗಿದ್ದಿರಿ ನೀರಿನ ಸಮಸ್ಯೆ ಬಾರದ ಹಾಗೆ ನೀವು ಜಾಗೃತ ವಹಿಸಬೇಕು,ಜಾನುವಾರುಗಳಿಗೆ ಮೇವು ನೀರು ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು, ಸಭೆಯಲ್ಲಿ ರೋಣ ತಾಲೂಕು ಗಜೇಂದ್ರಗಡ ತಾಲೂಕು ಮುಂಡರಗಿ ತಾಲೂಕು ತಹಸೀಲ್ದಾರರು ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿಗಳು ಪುರಸಭೆ ಮುಖ್ಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು1
- ಕರ್ನಾಟಕದಲ್ಲಿ 19ರಿಂದ 30 ವರೆಗೆ 55 ಡಿಗ್ರಿ ತಾಪಮಾನ ಹೆಚ್ಚಾಗುವ ಸಾದ್ದತ್ಯೆ ಇದೆ. ಆದ ಕಾರಣ ನಿಮ್ಮ ಚಿಕ್ಕ ಮಕ್ಕಳನ್ನು ಹೊರಗೆ ಎಲೂ ದಯವಿಟುಕಳಿಸಿಬೇಡಿ. ಮತ್ತು 60 ವಯಸು ಇದ್ದವರು ಹೊರೆಗೆ ಹೋಗಬೇಡಿ ಅವಮಾನ ವರದಿ ಹೇಳಿದೆ.1
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- HULLESH2
- ಮುಧೋಳ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮುಧೋಳ ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸಂಜೆ ಹಠಾತ್ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆ ಜನತೆಗೆ ತಂಪೆರೆಯುವ ಜೊತೆಗೆ ರೈತರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಧ್ಯಾಹ್ನದವರೆಗೆ ಸುಡುವ ಬಿಸಿಲಿನಿಂದ ಕೂಡಿದ್ದ ವಾತಾವರಣವು ಸಂಜೆ ಹೊತ್ತಿಗೆ ಏಕಾಏಕಿ ಬದಲಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿಯಿತು. ಮಳೆಯ ಜೊತೆಗೆ ಗೋಲಿ ಗಾತ್ರದ ಆಲಿಕಲ್ಲುಗಳು ಬಿಳಿಯ ಹಾಸಿನಂತೆ ರಸ್ತೆ ಹಾಗೂ ತೋಟಗಳಲ್ಲಿ ಬಿದ್ದಿರುವುದು ಕಂಡುಬಂತು. ಆಲಿಕಲ್ಲು ಮಳೆಯ ಹೊಡೆತಕ್ಕೆ ಈ ಭಾಗದ ಪ್ರಮುಖ ಬೆಳೆಗಳಾದ ಕಬ್ಬು, ದ್ರಾಕ್ಷಿ ಮತ್ತು ಬಾಳೆ ತೋಟಗಳಿಗೆ ಹಾನಿಯಾದ ವರದಿಯಾಗಿದೆ. ವಿಶೇಷವಾಗಿ ಕಟಾವಿಗೆ ಬಂದಿರುವ ಬೆಳೆಗಳು ನೆಲಕಚ್ಚುವ ಭೀತಿ ಎದುರಾಗಿದ್ದು, ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನುಗ್ಗಿ1
- ಬಸವ ಜಯಂತಿ ನಿಮಿತ್ತ ಈ ದಿನ ವಿಜಯಪುರ ನಗರದಲ್ಲಿನ ಬಸವಣ್ಣನವರ ಪುತ್ಥಳಿಗೆ ವಿವಿಧ ಗಣ್ಯರು ಭಕ್ತಿಯಿಂದ ಮಾಲಾರ್ಪಣೆ ಮಾಡಿದರು. ಆ ಮೇರು ಪುರುಷನ ಆದರ್ಶಗಳು ಹಾಗೂ ವಚನ ಸಂದೇಶಗಳನ್ನು ಸ್ಮರಿಸುತ್ತಾ ನಮಸ್ಕರಿಸಿದರು. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು. ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬಸವ ಜ್ಯೋತಿಯನ್ನು ಹಿಡಿದು, ವಿಜಯಪುರ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಕೈಗೊಂಡಿದ್ದ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರನ್ನು, ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಹಾಗೂ ನೂರಾರು ಬಸವಭಕ್ತರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಉತ್ಸಾಹಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಿದರು. ಭಕ್ತಿಪೂರ್ವಕ ಪಾದಯಾತ್ರೆಯು ನಮ್ಮ ನಾಡಿನಲ್ಲಿ ಬಸವ ತತ್ವದ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂಬ ಆಶಯ ವ್ಯಕ್ತವಾಯಿತು.1
- Post by ABU NEWS CHANNEL1