Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಯತ್ತಂಬಾಡಿ ಪ್ರಾಥಮಿಕ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆ ಮಾಡುವ ಗುರಿ ನಮ್ಮದು , ಉದ್ಯಮಿ ಹೇಮಂತ್. ಹಲಗೂರು:- ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವುಗಳು ಮುಂದಾಗಿದ್ದೇವೆ .ಯತ್ತಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿಲ್ಲೆ ಯಲ್ಲೇ ಅಲ್ಲ ರಾಜ್ಯದಲ್ಲೇ ನಾನು ಮತ್ತು ನಮ್ಮ ಸ್ನೇಹಿತರು ಸೇರಿ ಮಾದರಿ ಶಾಲೆಯನ್ನಾಗಿ ಮಾಡುವ ಗುರಿಯನ್ನಾಗಿ ಇಟ್ಟುಕೊಂಡಿದ್ದೇವೆ .ಎಂದು ಬೆಂಗಳೂರಿನ ಉದ್ಯಮಿ ಹೇಮಂತ್ ತಿಳಿಸಿದರು. ಸಮೀಪದ ಯತ್ತಂಬಾಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಎಂಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಈಗ ಸರ್ಕಾರಿ ಶಾಲೆ ಎಂದರೆ ಅದು ಸರ್ಕಾರಕ್ಕೆ ಸೇರಿದ ಶಾಲೆ, ಸರ್ಕಾರ ಎಂದರೆ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ ,ಜೆಡಿಎಸ್ ಸರ್ಕಾರ ಎಂಬ ಭಾವನೆ ಇದೆ. ಇದನ್ನೆಲ್ಲಾ ಹೊರತುಪಡಿಸಿ ಈ ಶಾಲೆ ನಮ್ಮ ಶಾಲೆ ,ನಮ್ಮೆಲ್ಲರ ಶಾಲೆ ಎಂಬ ಗೌರವ ನಮ್ಮಲ್ಲಿ ಬೆಳೆಯಬೇಕು. ಜಯರಾಮು ರವರ ಮೂಲಕ ನಾವು ಈ ಊರಿಗೆ ಕಾಲಿಟ್ಟಿದ್ದೇವೆ ಈ ಊರಿಗೂ ನಮಗೂ ಒಂದು ಋಣಾನುಬಂಧ ಬೆಳೆದಿದೆ .ಈ ಶಾಲೆಯಲ್ಲಿ ನಮಗೊಂದು ಸ್ಥಾನ ಸಿಕ್ಕಿದೆ ಅದು ಉಳಿಯಬೇಕಿದ್ದರೆ ಈ ಶಾಲೆ ಅತ್ಯುನ್ನತ ಮಟ್ಟಕ್ಕೆ ತಲುಪಬೇಕಾದರೆ ಏನೇನುಅಗತ್ಯವಿದೆ ಅದನ್ನೆಲ್ಲ ನಾವು ಪೂರೈಸಲು ಸಿದ್ಧರಿದ್ದೇವೆ. ನಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಟ್ಟುಈ ಶಾಲೆಯನ್ನು ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆಯಾಗಿಮಾಡಲು ನನ್ನ ಸ್ನೇಹಿತರ ಸಹಕಾರ ಇದೆ ಎಂಬ ಭಾವನೆಯಿಂದ ಮಾತು ಕೊಡುತ್ತೇನೆ. ಪೋಷಕರೆ ನಿಮ್ಮ ಸಹಕಾರ ನಿಮ್ಮ ಮಕ್ಕಳಿಗೆ ಇರಲಿ, ಗುರುಗಳಿಗೂ ಇರಲಿ ಈ ಮಕ್ಕಳನ್ನು ಉನ್ನತ ಮಟ್ಟದಲ್ಲಿ ನೋಡಲು ಬಯಸುತ್ತೇವೆ. ಇತರ ಶಾಲೆಗಳಿಗೂ ಇದು ಒಂದು ಮಾದರಿ ಶಾಲೆ ಆಗಬೇಕು ಹಾಗೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮತ್ತೋರ್ವ ಉದ್ದಮಿ, ಜಯ ರಾಮು ಮಾತನಾಡುತ್ತಾ, ಹಳ್ಳಿಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ ,ಅಂತಹ ಸಂದರ್ಭದಲ್ಲಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬಸಂಕ್ರಾಂತಿ ಹಬ್ಬದ ವಾತಾವರಣವನ್ನು ಸೃಷ್ಟಿಸಿ ನಮ್ಮ ಕಣ್ಮನ ತುಂಬಿಸಿದ ಇಲ್ಲಿಯ ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಹಳ್ಳಿಯ ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಿ ಪಟ್ಟಣಗಳಲ್ಲಿ ಉದ್ಯೋಗ ನಿಮಿತ್ತ ಒತ್ತಡದ ಜೀವನ ನಡೆಸುತ್ತಿರುವ ನನ್ನ ಕುಟುಂಬದವರು ಮತ್ತು ಸಹೋದ್ಯೋಗಿಗಳನ್ನು ಕರೆತಂದು ಇಲ್ಲಿ ಸಮಯ ಕಳೆದದ್ದಕ್ಕೆ ಅವರಿಗೂ ಧನ್ಯವಾದಗಳು. ದೂರದ ಬೆಟ್ಟ ನುಣ್ಣಗೆ ಎಂದು ಪೋಷಕರು ತಮ್ಮ ಮಕ್ಕಳನ್ನು ಹಳ್ಳಿ ಶಾಲೆ ಬಿಟ್ಟು ಪಟ್ಟಣದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಹಳ್ಳಿ ಶಾಲೆಗಳು ಮುಚ್ಚಲ್ಪಡುತ್ತಿವೆ ಆದುದರಿಂದ ನಾವು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸೋಣ ಎಂದರು. ಶಾಲೆಯ ಮೈದಾನದಲ್ಲಿ ನಿರ್ಮಿಸಲ್ಪಟ್ಟ ಧಾನ್ಯಗಳ ಒಕ್ಕಣೆಯ ಕಣ, ಹೂವಿನಿಂದ ಅಲಂಕರಿಸಿದಧಾನ್ಯಗಳ ರಾಶಿ, ರಟ್ಟಿನಲ್ಲಿ ನಿರ್ಮಿಸಲಾದ ಹಳ್ಳಿಮನೆ, ನೀರು ಸೇದುವ ಬಾವಿ, ಎತ್ತಿನ ಬಂಡಿ ,ಒಣ ಹುಲ್ಲಿನ ಮೆದೆ, ಮೊರಗಳಲ್ಲಿ ತುಂಬಿಟ್ಟ ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಹೆಂಗಸು ಮತ್ತುಗಂಡಸಿನ ಚಿತ್ರವನ್ನು ಬಿಡಿಸಿರುವ ಮಡಿಕೆಗಳು, ಪಕ್ಷಿಗಳಿಂದ ಧಾನ್ಯವನ್ನು ಸಂರಕ್ಷಿಸಲು ಹೊಲಗಳಲ್ಲಿರಿಸುವ ಬೆದರು ಬೊಂಬೆಗಳು,ಎಳ್ಳು ಬೆಲ್ಲ ಕೊಬ್ಬರಿ ಮಿಶ್ರಣ, ಪೂಜಾ ಸಾಮಗ್ರಿಗಳು ಒಟ್ಟಾರೆ ಶಾಲೆಯ ಆವರಣ ಹಳ್ಳಿಯ ಸೊಬಗನ್ನು ಪ್ರತಿಬಿಂಬಿಸುತ್ತಿತ್ತು. ಇದೇ ಸಂದರ್ಭದಲ್ಲಿ ಯತ್ತಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ, ಪುಟ್ಟಸ್ವಾಮಾಚಾರಿ, ಸಿ ಆರ್. ಪಿ .ಶಿಕ್ಷಕ ರೇವಣ್ಣ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಜಯರಾಮು ಶಿವಕುಮಾರ್, ವೀರಣ್ಣ, ಹೇಮಂತ್ ಮತ್ತು ಇತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಶಿಕ್ಷಕ ವಿಶ್ವನಾಥ ಸೇರದಂತೆ ಶಿಕ್ಷಕ ವೃಂದ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಮೇಶ್, ಉಪಾಧ್ಯಕ್ಷರಾದ ಸೋಮಶೇಖರ್, ಶಿವಲಿಂಗೇಗೌಡ, ಕೆಂಚೇಗೌಡ, ಕೆಂಪೇಗೌಡ, ಕೆಂಪರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು. ಯತ್ತಂಬಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು.1
- ಹನೂರು ತಾಲ್ಲೂಕು: ಮಹದೇಶ್ವರ ಬೆಟ್ಟ ಮಾರ್ಗದಲ್ಲಿ ಚಿರತೆ ಮತ್ತು ಎರಡು ಮರಿಗಳು ಪ್ರತ್ಯಕ್ಷ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ರಂಗಸ್ವಾಮಿ ಒಡ್ಡಿಯಲ್ಲಿ ಚಿರತೆ ಮತ್ತು ಅದರ ಎರಡು ಮರಿಗಳು ಕಾಣಿಸಿಕೊಂಡ ಘಟನೆ ನಡೆದಿದೆ. ಮಹದೇಶ್ವರ ಬೆಟ್ಟ–ತಾಳಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡಿಯ ತಡೆಗೋಡೆಯ ಮೇಲೆ ಶನಿವಾರ ರಾತ್ರಿ ವೇಳೆ ಚಿರತೆ ತನ್ನ ಎರಡು ಮರಿಗಳೊಂದಿಗೆ ಕುಳಿತಿರುವ ದೃಶ್ಯವನ್ನು, ಅದೇ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲ್‌ನಲ್ಲಿದ್ದ ಭಕ್ತರು ಗಮನಿಸಿದ್ದಾರೆ. ಕ ಮಾಡಿದೆ.1
- ಶ್ರೀ ಬೈಯಮ್ಮ ತಾಯಿ ಹಾಗೂ ಆಂಜೆನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಾಲಿ ಬಾಲ್ ಹಾಡುವ ಮೂಲಕ ಪಂದ್ಯಾವಳಿಗೆ ಶಾಸಕ ಎಂ.ಆರ್ ಮಂಜುನಾಥ್ ರವರು ಚಾಲನೆ ನೀಡಿದರು. ತಾಲೂಕಿನ ರಾಮಪುರದ ಶ್ರೀ ಬೈಯಮ್ಮ ತಾಯಿ ಹಾಗೂ ಆಂಜೆನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಇಂದಿರಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ರಾಮಪುರದಲ್ಲಿ ಆಯೋಜಿಸಿದ್ದ ವಾಲಿ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು.. ಇದೆ ಸಮಯದಲ್ಲಿ ಮುನೇಶ್, ಕೃಷ್ಣಮೂರ್ತಿ,ಎಸ್ ಕುಮಾರ್, ವಿಶ್ವ , ಶಿವ, ಎಂ.ಆರ್ ಬಾಬು, ಮಾಜಿ ಸೈನಿಕರಾದ ಮಾದೇಶ್, ರಾಜೇಂದ್ರ, ಮುತ್ತುರಾಜಮ್ಮ, ಮೂರ್ತಿ,ಪಾಳ್ಯ ಸೀನಾ,ಚಿನ್ನವೆಂಕಟ್, ವಿಜಯ್ ಕುಮಾರ್, ನಟರಾಜು ಗೌಡ, ಗೋವಿಂದ ಸೇರಿದಂತೆ ಇನ್ನಿತರ ಮುಖಂಡರುಗಳು ಇದ್ದರು..4
- ಶಿಡ್ಲಘಟ್ಟ ತಾಲೂಕಿನ ಕಾಚಹಳ್ಳಿ ಅಂಕತಟ್ಟಿ ಗ್ರಾಮಗಳಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ ಬೂದು ನೀರು ನಿರ್ವಹಣಾ ಘಟಕಕ್ಕೆ ಲೋಕಾರ್ಪಣೆ2
- ಪೋಷಕರು ತಮ್ಮ ಮಕ್ಕಳು ಭವಿಷ್ಯತ್ತನಲ್ಲಿ ಏನಾಗಬೇಕು ಎಂಬ ನಿರ್ಣಯ ಮಕ್ಕಳಿಗೆ ಬಿಡಿ:- ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಬಾಗೇಪಲ್ಲಿ:- ಆಸ್ತಿ–ಅಂತಸ್ತು ಮನುಷ್ಯರನ್ನು ಉತ್ತಮರನ್ನಾಗಿಸಲು ಸಾಧ್ಯವಿಲ್ಲ. ಗುಣಮಟ್ಟದ ಶಿಕ್ಷಣದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಬ್ಲೂಮ್ಸ್ ಇಂಟರ್ನ್ಯಾಷನಲ್ ಶಾಲೆಯ ಅದ್ಯಕ್ಷ ಹಾಗೂ ಸಂಸ್ಥಾಪಕ ವಿ.ಗೋವಿಂದರಾಜಲು ಹಾಗೂ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ ಅವರು ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡಿ ಸಾವಿರಾರು ಮಂದಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಯಶಸ್ಸು ಕಂಡಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಹೇಳಿದರು. ಪಟ್ಟಣದ ಹೊರವಲಯದ ಶನಿವಾರ ಏರ್ಪಡಿಸಿದ್ದ ಕಾರಕೂರು ಬ್ಲೂಮ್ಸ್ ಇಂಟರ್ನ್ಯಾಷನಲ್ ಶಾಲಾ ವಾರ್ಷಿಕೋತ್ಸವ ಹಾಗೂ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾರು ಶಿಕ್ಷಣವನ್ನು ಯಶಸ್ವಿಯಾಗಿ ಪಡೆದು ಉನ್ನತ ಶಿಕ್ಷಣ ಪಡೆಯುತ್ತಾರೋ ಅವರಿಗೆ ಉತ್ತಮ ಭವಿಷ್ಯವಿದೆ. ಶಿಕ್ಷಣ ಸಂಸ್ಥೆ ನಿರ್ವಹಣೆ ಕಠಿಣವಾಗಿರುವ ಸಂದರ್ಭದಲ್ಲಿ ಉತ್ತಮ ಶಿಕ್ಷಕರ ತಂಡದೊಂದಿಗೆ ಸಂಸ್ಕಾರಯುತ ಮೌಲ್ಯದೊಂದಿಗೆ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದರು. ಮಕ್ಕಳು ತಮ್ಮ ಜೀವನದ ಭವಿಷ್ಯತ್ ನಲ್ಲಿ ಯಾವು ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೋ, ಏನನ್ನು ಮಾಡಲು ಇಷ್ಟಪಡುತ್ತಾರೋ ಪೋಷಕರು ಮಕ್ಕಳ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಪೋಷಕರಿಗೆ ತಮ್ಮ ಮಕ್ಕಳು ಒಬ್ಬ ಒಳ್ಳೆಯ ಡಾಕ್ಟರ್ ಆಗಬೇಕು, ಇಂಜನಿಯರ್ ಆಗಬೇಕು, ವಿಜ್ಞಾನಿ ಆಗಬೇಕು, ಅನ್ನುವ ಆಸೆ ಇರುತ್ತದೆ ಆದರೆ ಮಕ್ಕಳೇ ಭವಿಷ್ಯತ್ತನಲ್ಲಿ ಏನಾಗಬೇಕು ಎಂಬ ನಿರ್ಣಯ ಮಕ್ಕಳಿಗೆ ಬಿಡಬೇಕು ಎಂದು ಹೇಳಿದರು.3
- ಕಾಂಗ್ರೆಸ್ ಪಕ್ಷದ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್. ಭಾಸ್ಕರ್ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ1
- ಮಾಚಿದೇವರ ಜಯಂತಿ ದಿನವೇ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲು ಶಾಸಕರ ದಿನಾಂಕವನ್ನು ನಿಗದಿಪಡಿಸಿ ಮುಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಲಾಗುವುದು ಎಂದು ಮುಖಂಡ ವಿಜಯ್ ಕುಮಾರ್ ತಿಳಿಸಿದರು .... ಹನೂರು ಪಟ್ಟಣದ ಆರ್ ಎಂ ಸಿ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕದ ಕಮಿಟಿ ಸಭೆ ಹಾಗೂ ಮಾಚಿದೇವರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು . ಜಿಲ್ಲಾ ಕಮಿಟಿ ರಚನೆ ಮಾಡಲು ತಾಲೂಕಿನ ಸಮುದಾಯದ ಜನ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಪದಾಧಿಕಾರಿಗಳ ಬಗ್ಗೆ ಆಯ್ಕೆ ಮಾಡಲು ಸಹಮತವಿದೆ ಜೊತೆಗೆ ಪಟ್ಟಣದಲ್ಲಿ ಫೆಬ್ರವರಿ 1,ರಂದು ಮಾಚಿದೇವರ ಜಯಂತಿ ದಿನವೇ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಶಾಸಕರ ದಿನಾಂಕವನ್ನು ನಿಗದಿಪಡಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು . ಸಮುದಾಯದ ದಶಕಗಳ ಬೇಡಿಕೆ : ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಈ ಹಿಂದೆ ಜನಪ್ರತಿನಿಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೂ ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದ ಸಮುದಾಯ ಭವನಕ್ಕೆ ಶಾಸಕ ಎಂಆರ್ ಮಂಜುನಾಥ್ ಅವರು ಅನುದಾನ ನೀಡಿದ್ದಾರೆ ಅವರ ಉಪಸ್ಥಿತಿಯಲ್ಲಿಯೇ ಭವನ ನಿರ್ಮಾಣ ಮಾಡಲು ದಿನಾಂಕ ನಿಗದಿಪಡಿಸಿ ಹಲವು ವರ್ಷಗಳ ಬೇಡಿಕೆ ಈಡೇರಿಸಲು ತಳ ಸಮುದಾಯಗಳ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುವ ಶಾಸಕರು ಪಟ್ಟಣದಲ್ಲಿ ಉತ್ತಮವಾದ ಸಮುದಾಯ ಭವನ ನಿರ್ಮಾಣ ಮಾಡಲು ಸಮುದಾಯ ಜನತೆಗೆ ಭರವಸೆ ನೀಡಿದ್ದಾರೆ ಹೀಗಾಗಿ ಸರ್ಕಾರದಿಂದ ಸಿಗುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಮುದಾಯ ಭವನ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಪ್ರತಿಯೊಬ್ಬರು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಕೃಷ್ಣಮೂರ್ತಿ ರುದ್ರಣ್ಣ ಮಾದೇವ್ ಕುಮಾರ್ ನಂದೀಶ್ ಶಾಂತರಾಜು ಹಾಗೂ ಜಿಲ್ಲೆಯ ತಾಲೂಕಿನ ವಿವಿಧ ಭಾಗದ ಮುಖಂಡರು ಉಪಸ್ಥಿತರಿದ್ದರು1