ವಕೀಲರ ಮೇಲೆ ಪೊಲೀಸ್ ನಡೆಸಿದ ಹಲ್ಲೆ ಖಂಡಿಸಿ ಪಾಂಡವಪುರದ ವಕೀಲರಿಂದ ಪ್ರತಿಭಟನೆ ಚಿಕ್ಕಮಗಳೂರಿನಲ್ಲಿ ಹೆಲ್ಮೇಟ್ ಹಾಕದ ವಕೀಲರಾದ ಪ್ರೀತಮ್ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ವಕೀಲರಿಂದ ಪ್ರತಿಭಟನೆ ಮಾಡಲಾಯಿತು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ, ತಾಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು. ವಕೀಲರಾದ ಪ್ರೀತಮ್ ಹೆಲ್ಮೇಟ್ ಹಾಕಿಲ್ಲ ಎಂಬ ಕಾರಣ ಇಟ್ಟುಕೊಂಡು, ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಬೈದು, ಇಡೀ ವಕೀಲರ ವೃತ್ತಿ ಅಪಮಾನ ಮಾಡಿರುವುದು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ಪೊಲೀಸರಿಗೆ ವೃತ್ತಿಯಿಂದ ಅಮಾನತ್ತು ಮಾಡಬೇಕು ಹಾಗೂ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಆಗ್ರಹಿಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ನಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ವಕೀಲರು, ಠಾಣೆಯಲ್ಲದ್ದ ಸಬ್ ಇನ್ಸ್ ಪೆಕ್ಟರ್ ಉಮೇಶ್ ಅವರಿಗೆ ದೂರು ಸಲ್ಲಿಸಿ, ಪ್ರತಿಭಟನೆಯಲ್ಲಿ ಪಾಂಡವಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ಕೆ.ಎನ್.ನಾಗರಾಜು, ವಕೀಲ ಕಣಿವೆ ಯೋಗೇಶ್, ಭಾಸ್ಕರ್ ಶ್ರೀಧರ್ ಕಿರಣ್ ಹಾಗೂ ಪಾಂಡವಪುರ ಎಲ್ಲಾ ವಕೀಲರು ಭಾಗವಹಿಸಿದ್ದರು
ವಕೀಲರ ಮೇಲೆ ಪೊಲೀಸ್ ನಡೆಸಿದ ಹಲ್ಲೆ ಖಂಡಿಸಿ ಪಾಂಡವಪುರದ ವಕೀಲರಿಂದ ಪ್ರತಿಭಟನೆ ಚಿಕ್ಕಮಗಳೂರಿನಲ್ಲಿ ಹೆಲ್ಮೇಟ್ ಹಾಕದ ವಕೀಲರಾದ ಪ್ರೀತಮ್ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ವಕೀಲರಿಂದ ಪ್ರತಿಭಟನೆ ಮಾಡಲಾಯಿತು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ, ತಾಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು. ವಕೀಲರಾದ ಪ್ರೀತಮ್ ಹೆಲ್ಮೇಟ್ ಹಾಕಿಲ್ಲ ಎಂಬ ಕಾರಣ ಇಟ್ಟುಕೊಂಡು, ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಬೈದು, ಇಡೀ ವಕೀಲರ ವೃತ್ತಿ ಅಪಮಾನ ಮಾಡಿರುವುದು ತೀವ್ರವಾಗಿ ಖಂಡಿಸುತ್ತೇವೆ.
ಇಂತಹ ಪೊಲೀಸರಿಗೆ ವೃತ್ತಿಯಿಂದ ಅಮಾನತ್ತು ಮಾಡಬೇಕು ಹಾಗೂ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಆಗ್ರಹಿಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ನಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ವಕೀಲರು, ಠಾಣೆಯಲ್ಲದ್ದ ಸಬ್ ಇನ್ಸ್ ಪೆಕ್ಟರ್ ಉಮೇಶ್ ಅವರಿಗೆ ದೂರು ಸಲ್ಲಿಸಿ, ಪ್ರತಿಭಟನೆಯಲ್ಲಿ ಪಾಂಡವಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ಕೆ.ಎನ್.ನಾಗರಾಜು, ವಕೀಲ ಕಣಿವೆ ಯೋಗೇಶ್, ಭಾಸ್ಕರ್ ಶ್ರೀಧರ್ ಕಿರಣ್ ಹಾಗೂ ಪಾಂಡವಪುರ ಎಲ್ಲಾ ವಕೀಲರು ಭಾಗವಹಿಸಿದ್ದರು