Shuru
Apke Nagar Ki App…
ಶಾಲೆಯ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆ*ತ್ಮಹ*ತ್ಯೆ... ಭರಮಸಾಗರ ಡಿವಿಎಸ್ ಶಾಲೆಯ ಮಹಡಿಯಿಂದ ವಿದ್ಯಾರ್ಥಿಯೊಬ್ಬ ಜಿಗಿದು ಆ**ತ್ಮ*ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. SSLC ಓದುತ್ತಿದ್ದ ವಿಧ್ಯಾರ್ಥಿ ಕೊಟ್ರೇಶ್ ಸ್ಥಳದಲ್ಲೆ ಮೃತಪಟ್ಟಿದ್ದು ಆ**ತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
Vinay P palekar
ಶಾಲೆಯ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆ*ತ್ಮಹ*ತ್ಯೆ... ಭರಮಸಾಗರ ಡಿವಿಎಸ್ ಶಾಲೆಯ ಮಹಡಿಯಿಂದ ವಿದ್ಯಾರ್ಥಿಯೊಬ್ಬ ಜಿಗಿದು ಆ**ತ್ಮ*ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. SSLC ಓದುತ್ತಿದ್ದ ವಿಧ್ಯಾರ್ಥಿ ಕೊಟ್ರೇಶ್ ಸ್ಥಳದಲ್ಲೆ ಮೃತಪಟ್ಟಿದ್ದು ಆ**ತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
More news from ಕರ್ನಾಟಕ and nearby areas
- ಚತ್ರದುರ್ಗ :ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನ ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನಕ್ಕೆ ನಾವು ಮನವಿ ಮಾಡಿದ್ದೇವು. ನಮ್ಮ ಮನವಿಗೆ ಸಿಎಂ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದ್ದಾರೆ. ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಶಾಸಕರ ಪ್ರವಾಸದ ಬಗ್ಗೆ ಮಾಧ್ಯಮದ ಪ್ರತಿನಿಧಿಗಳು ಕೇಳಿದಾಗ. ಕೈ ಶಾಸಕ ಖಾಸಗಿತಾಗಿ ವಿದೇಶ ಪ್ರವಾಸ ಹೋಗುತ್ತಿದ್ದಾರೆ ಶಾಸಕರ ಪ್ರವಾಸದ ಬಗ್ಗೆ ಅನುಮಾನ ಪಡುವ ಅಗತ್ಯ ಇಲ್ಲ ಎಂದಿದ್ದಾರೆ..1
- ನಾವೆಲ್ಲ ಫಿಯ್ ಅಂಡ್ ಫೈಯರ್ ಯಾವುದೇ ಮುಜುಗರ ಇಲ್ಲ ಎಂದು ಶಾಸಕ ಟಿ ರಘೂಮೂರ್ತಿ ಮಾಧ್ಯಮದವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ಶಾಸಕ ಟಿ ರಘೂಮೂರ್ತಿ ಅವರು ಶಾಸಕರ ವಿದೇಶ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿದ್ದು ಈ ಹಿಂದೆ ನಾನು ಖಾಸಗಿ ಕಾರ್ಯಕ್ರಮದ ನಿಮಿತ್ತ ಪ್ರವಾಸಕ್ಕೆ ಹೋಗುವ ಬಗ್ಗೆ ಮಾತನಾಡಿದ್ದು ಅದಿವೇಶನದ ವೇಳೆ ಮಾತನಾಡಿದ್ದು ಪತ್ರಿಕೆ ಹಾಗೂ ಟಿವಿ ಗಳಲ್ಲಿ ತೋರಿಸುವುದು ನೋಡಿದರೆ ನಮ್ಮಮ್ನ ಅಪರಾಧಿಯನ್ನಾಗಿ ತೋರಿಸುತ್ತಿದ್ದಾರೆ.1
- Post by ಚಂದು ಕನ್ನಡಿಗ ಚಳ್ಳಕೆರೆ1
- ಮೆಜೆಸ್ಟಿಕ್‌ನಿಂದ ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರೇ ಗಮನಿಸಿ. ನಿಮ್ಮ ಪ್ರಯಾಣದ ಹಾದಿಯಲ್ಲಿ ಬಾಯಾರಿಕೆ ಅಥವಾ ಹಸಿವು ನೀಗಿಸಿಕೊಳ್ಳಲು ನೀವು ಕೊಳ್ಳುವ ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! ವ್ಯಾಪಾರಿಗಳು ಕೊಳೆತ ಸ್ಥಿತಿಯಲ್ಲಿರುವ ಸೌತೆಕಾಯಿ ಹಾಗೂ ಅನಾನಸ್ ಹಣ್ಣುಗಳನ್ನು ಆಯ್ದುಕೊಳ್ಳುತ್ತಾರೆ. ಇವುಗಳ ಕೆಟ್ಟ ಭಾಗಗಳನ್ನು ಕತ್ತರಿಸಿ ಹಾಕಿ, ಉಳಿದ ಭಾಗಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಆಕರ್ಷಕವಾಗಿ ಕಾಣುವಂತೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ಹಣ್ಣುಗಳನ್ನು ಮಾರಾಟ ಮಾಡುವವರು ಕನಿಷ್ಠ ನೈರ್ಮಲ್ಯದ ಜ್ಞಾನವನ್ನೂ ಹೊಂದಿರುವುದಿಲ್ಲ. ಶೌಚಾಲಯದ ಬಳಕೆಯ ನಂತರ ಸರಿಯಾಗಿ ಕೈ ತೊಳೆಯದೆ, ಅದೇ ಅಶುದ್ಧ ಕೈಗಳಿಂದ ಹಣ್ಣುಗಳನ್ನು ಕತ್ತರಿಸಿ ಪ್ಯಾಕ್ ಮಾಡಲಾಗುತ್ತಿದೆ. ಇದು ನೇರವಾಗಿ ಮಾರಕ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಹರಡಲು ಕಾರಣವಾಗುತ್ತಿದೆ.ಪ್ಲಾಸ್ಟಿಕ್ ಕವರ್‌ಗಳಲ್ಲಿ ದೀರ್ಘಕಾಲ ಇಟ್ಟಿರುವ ಇಂತಹ ಅಶುದ್ಧ ಹಣ್ಣುಗಳನ್ನು ಸೇವಿಸುವುದರಿಂದ ಕಾಲರಾ, ಟೈಫಾಯ್ಡ್, ವಾಂತಿ-ಭೇದಿ ಹಾಗೂ ಫುಡ್ ಪಾಯಿಸನಿಂಗ್ (Food Poisoning) ಆಗುವ ಸಾಧ್ಯತೆ ದಟ್ಟವಾಗಿದೆ.ದೂರದ ಪ್ರಯಾಣದ ಸಮಯದಲ್ಲಿ ಇದು ಪ್ರಯಾಣಿಕರನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಬಹುದು. ಕೇವಲ 2 ರೂಪಾಯಿ ಬೆಲೆಗೂ ಯೋಗ್ಯವಲ್ಲದ ಇಂತಹ ಕಳಪೆ ಗುಣಮಟ್ಟದ ಹಣ್ಣಿನ ಪ್ಯಾಕೆಟ್‌ಗಳನ್ನು ಕಿಟಕಿಯ ಬಳಿ 20 ರಿಂದ 30 ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರನ್ನು ಆರ್ಥಿಕವಾಗಿ ಲೂಟಿ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿ ಅಥವಾ ಸಿಗ್ನಲ್‌ಗಳಲ್ಲಿ ಕತ್ತರಿಸಿ ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ ಹಣ್ಣುಗಳನ್ನು ಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.ಸಾಧ್ಯವಾದಷ್ಟು ಮನೆಯಿಂದಲೇ ಪೂರ್ತಿಯಾದ ಹಣ್ಣುಗಳನ್ನು ಅಥವಾ ಶುದ್ಧವಾದ ಕುಡಿಯುವ ನೀರನ್ನು ಕೊಂಡೊಯ್ಯುವುದು ಉತ್ತಮ. ನಿಮ್ಮ ಸಹ-ಪ್ರಯಾಣಿಕರು ಇಂತಹ ಹಣ್ಣುಗಳನ್ನು ಕೊಳ್ಳುತ್ತಿದ್ದರೆ, ಅವರಿಗೆ ಆಗಬಹುದಾದ ಆರೋಗ್ಯದ ಅಪಾಯದ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿ. ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುವುದು ತಪ್ಪಲ್ಲ, ಆದರೆ ಅಶುದ್ಧ ಆಹಾರವನ್ನು ಮಾರಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಖಂಡನೀಯ. ಸಾರ್ವಜನಿಕರಾದ ನಾವು ಎಚ್ಚೆತ್ತುಕೊಂಡಾಗ ಮಾತ್ರ ಇಂತಹ ವಂಚನೆಗಳಿಗೆ ಅಂತಿಮ ತೆರೆ ಎಳೆಯಲು ಸಾಧ್ಯ. ನ್ಯೂಸ್ : ಅರ್ಜುನ್ ಬ್ಯಾಡರಹಳ್ಳಿ 🙏1
- ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಗೊಳಿಸಿದರು ಼಼಼಼಼಼ಕೊಂಡ್ಲಹಳ್ಳಿ ಗ್ರಾಮದಲ್ಲಿ ಸಿಎಂ ವಿಶೇಷ ಅನುದಾನದಲ್ಲಿ 14ವರೆ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿ ,2024 25 ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ ಬಂಧಿತ ಅನುದಾನ ದಡಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರ ಹಾಗೂ ನೂತನ ಪಶು ಚಿಕಿತ್ಸಾಲಯ ಹಾಗೂ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ನಿರ್ಮಾಣಗೊಂಡ 5 ಲಕ್ಷದ ನೂತನ ರಥ ಮಂಟಪ ವನ್ನು ಲೋಕಾರ್ಪಣೆಗೊಳಿಸಿದರು಼಼಼಼ ಇದೆ ವೇಳೆ ಬಿಇಒ ಈ ನಿರ್ಮಲಾದೇವಿ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಎಸ್.ಕೆ .ಗುರುಲಿಂಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂಎಲ್ ಪವಿತ್ರ ಪ್ರದೀಪ್, ಪಿಡಿಓ ಎನ್ ಪಾಲಯ್ಯ, ಕಾರ್ಯದರ್ಶಿ ಕೃಷ್ಣಪ್ಪ ,ಮುಖಂಡರಾದ ಟಿ ತಿಪ್ಪೇಸ್ವಾಮಿ, ಟಿ ಸಿದ್ದಲಿಂಗಪ್ಪ, ಬಿಎಂ.ತಿಪ್ಪೇಸ್ವಾಮಿ, ಸುಧರ್ಮ, ಪಿ ಆರ್ ಈಡಿ ಎಇಇ ಲಿಂಗರಾಜ್ ,ಕ್ರೆಡಿಲ್ ಎಇಇ ನಟರಾಜ್ ಸಂಗೋಪನ ತಾಲೂಕು ಸಹಾಯಕ ನಿರ್ದೇಶಕ ಹೆಚ್ .ರಂಗಪ್ಪ ,,ಸಿಡಿಪಿಓ ನವೀನ್ ಕುಮಾರ್ ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಪಿಎಸ್ಐ ಬಾಹುಬಲಿ, ಬಿಎನ್ ಬೀರಲಿಂಗಪ್ಪ, ಮುಖ್ಯ ಶಿಕ್ಷಕ ಸಿ ಚಂದ್ರಶೇಖರ್ ಎಸ್ ಡಿ ಎಮ್ ಸಿ ಅಧ್ಯಕ್ಷರು ಅಧ್ಯಕ್ಷರು, ಪದಾಧಿಕಾರಿಗಳು ,ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.4
- ಈ ಸರ್ಕಾರಿ ಭೂಮಿ ಇದು ಜಾಗ ಮನೆಯನ್ನು ಕಟ್ಟಿಕೊಂಡರೆ ಇದು ವಿಜಯನಗರ ಜಿಲ್ಲೆ ಇಟಗಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಗ್ರಾಮ ಪಂಚಾಯತಿ ಇಟಗಿ ಕೋಟೆ ಸರ್ಕಾರಿ ಭೂಮಿಯಲ್ಲಿ ಗ್ರಾಮ ಸರ್ಕಾರಿ ಜಾಗವನ್ನು ಸರ್ಕಾರಿ ಜಾಗವನ್ನು ಕಟ್ಟಿಕೊಂಡಿದ್ದಾರೆ ಇದು ಅಂಗನವಾಡಿ ಶಾಲೆ ಮತ್ತು ಆಸ್ಪತ್ರೆ ಆಗಬೇಕೈತಿ ಇದು ಪಂಚಾಯತಿ ಅಧ್ಯಕ್ಷರ ಎಲ್ಲಾ ಸೇರಿಕೊಂಡು ಅಕ್ರಮವಾಗಿ ಬರೆದು ಕೊಟ್ಟಿದ್ದಾರೆ ಗ್ರಾಮ್ ಪಂಚಾಯ್ತಿ ನಂಬರ್ಸಿಗೆ ಬರೆದುಕೊಟ್ಟಿದ್ದಾರೆ1
- ಪೊಲೀಸರ ಜೊತೆ ಉದ್ಧಟತನ; ದರ್ಶನ್ ಅಭಿಮಾನಿಗೆ ಕಪಾಳಮೋಕ್ಷ, ಬೆಂಗಳೂರು: ನಟ ದರ್ಶನ್ ನಿವಾಸದ ಬಳಿ ಕರ್ತವ್ಯ ನಿರತ ಪೊಲೀಸರ ಸೂಚನೆಗಳನ್ನು ಮೀರಿ, ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಅಭಿಮಾನಿಯೊಬ್ಬನಿಗೆ ಪೊಲೀಸರು ಸ್ಥಳದಲ್ಲೇ ಬಿಸಿ ಮುಟ್ಟಿಸಿದ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಯ ಮುಂದೆ ನೆರೆದಿದ್ದ ಅಭಿಮಾನಿಗಳ ಗುಂಪಿನಲ್ಲಿ ಈ ವ್ಯಕ್ತಿ ಸೇರಿದ್ದ ಎನ್ನಲಾಗಿದೆ. 'ಇಂದೇ ದರ್ಶನ್ ಅವರನ್ನು ಭೇಟಿ ಮಾಡಬೇಕು' ಎಂದು ಹಠ ಹಿಡಿದು ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆತನಿಗೆ ಸಮಾಧಾನಪಡಿಸಲು ಮತ್ತು ಅಲ್ಲಿಂದ ತೆರಳಲು ಸೂಚಿಸಿದರು.ಆದರೆ, ಮದ್ಯದ ಅಮಲಿನಲ್ಲಿದ್ದ ಎನ್ನಲಾದ ಆತ ಪೊಲೀಸರ ಮಾತಿಗೆ ಬೆಲೆ ಕೊಡದೆ ಉದ್ಧಟತನ ಪ್ರದರ್ಶಿಸಿದ್ದಾನೆ. ಪರಿಸ್ಥಿತಿ ಮಿತಿಮೀರುತ್ತಿದ್ದಂತೆ, ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಅಶಿಸ್ತಿನ ವರ್ತನೆಗೆ ಕಡಿವಾಣ ಹಾಕಲು ಪೊಲೀಸರು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.1
- ಚಿತ್ರದುರ್ಗ: ತಾಲೂಕಿನ ಜಾನು ಕೊಂಡ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಇದೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಕುಂದ ಅವರಿಗೆ ಅವ್ಯಾಚಾ ಶಬ್ದಗಳಿಂದ ನಿಂದಿಸಿರುವಂತಹ ವಿಡಿಯೋ ಈಗ ಎಲ್ಲ ಕಡೆ ಸಕ್ಕತ್ ವೈರಲಾಗುತ್ತಿದೆ.. ಚಿತ್ರದುರ್ಗ ತಾಲೂಕಿನ ಜಾನ ಕೊಂಡ ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದ್ದು ಗ್ರಾಮ ಪಂಚಾಯಿತಿಗೆ ಆಗಮಿಸಿದ ಗ್ರಾಮ ಪಂಚಾಯತಿ ಸದಸ್ಯ ಪಿಡಿಓ ಮುಕುಂದ ಅವರಿಗೆ ಕೆಟ್ಟ ಶಬ್ದಗಳಿಂದ ನಿಂದಿಸುತ್ತಿರು ವಿಡಿಯೋ ಈಗ ಎಲ್ಲಾ ಕಡೆ ವೈರಲಾಗುತ್ತಿದೆ.. ಈ ವಿಡಿಯೋದಲ್ಲಿ ಸದಸ್ಯ ಪಿಡಿಒ ಗೆ ನೀನು ಕಳ್ಳ ,ನೀನು ಸುಳ್ಳ ,ನಿನಗೆ ನಿಯತ್ತಿಲ್ಲ ನಿನಗೆ ಏನು ಮಾಡಬೇಕು ಅಂತ ನನಗೆ ಗೊತ್ತು ಎಂದು ಏರು ಧ್ವನಿಯಲ್ಲಿ ಮಾತನಾಡಿ. ಪಿಡಿಒ ಮುಕುಂದ ಅವರಿಗೆ ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..1