Shuru
Apke Nagar Ki App…
ಒಳ ಮೀಸಲಾತಿ ಹೋರಾಟ ವೇಳೆ ಅಂಬೇಡ್ಕರ್ ವೃತ್ತದಲ್ಲಿ ಯುವಕ ಆತ್ಮಹತ್ಯೆ ಯತ್ನ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು ರಾಯಚೂರಿನಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ವೇಳೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ 1 ಗಂಟೆಗೆ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಜಹರಾಬಾದ್ ನಿವಾಸಿ ಭರತ್ ಎಂಬ ಯುವಕ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಕ್ಕೆ ಮುಂದಾದನು. ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅಲ್ಲಿದ್ದ ಹೋರಾಟಗಾರರು ತಕ್ಷಣವೇ ಅವನನ್ನು ಹಿಡಿದು ತಡೆದರು. ನಂತರ ಗಾಯಗೊಂಡ ಯುವಕನನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
K2 kannada News

More news from ಕರ್ನಾಟಕ and nearby areas
- ಇಂದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಭಾರತ್ ರತ್ನ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ರವರ 135 ನೇ ಜಯಂತಿ ಆಚರಣೆ ಮಾಡಲಾಯಿತು1
- ಅಧಿಕಾರಿಗಳಿಗೆ ಖಡಕ್ ಸಂದೇಶ:ಅಧಿಕಾರಿಗಳು ಸಬೂಬು ನೀಡುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು. ಮಾಜಿ ಶಾಸಕ1
- ಪೊಲೀಸರ ದೌರ್ಜನ್ಯದಿಂದ ಯುವಕನ ಕಾಲು ಮುರಿತ - ಎಫ್.ಐ.ಆರ್ ಮತ್ತು ಎಂ.ಎಲ್.ಸಿ ದಾಖಲಿಸಲು ಹಿಂದೇಟು. ಹುಣಸಗಿ ತಾಲೂಕಿನ ಜುಮಾಲಪುರ, ಗ್ರಾಮದಲ್ಲಿ ಪೋಲಿಸ್ ರಿಂದ ಅಮಾನವೀಯ ಘಟನೆ. ಕೊಡೇಕಲ್ ಪೊಲೀಸ್ ಠಾಣೆಯ ಪೊಲೀಸರ ದಬ್ಬಾಳಿಕೆಯಿಂದ ಯುವಕನೊಬ್ಬನ ಕಾಲು ಮುರಿದಿರುವ ಆರೋಪ ಗಾಯಾಳು ಬಸವರಾಜ ರಾಜನಕೋಳೂರು ಎಂಬುವವರನ್ನು ಜುಮಾಲಪುರದಲ್ಲಿ ಕುರಿ ಕಾಯಲು ಹೋಗಿದ್ದ ಬಸವರಾಜ ಕವಲ್ದಾರ ಅಲ್ಲೇ ಆಡುತಿದ್ದ (ಪಂಜೆ ಆಡುವ ಸ್ಥಳದಲ್ಲಿ) ಕೊಡೇಕಲ್ ಠಾಣೆಯ ಪೊಲೀಸರಾದ ವಿನಾಯಕ ಮತ್ತು ಮುತ್ತು ಎಂಬುವವರು ವಿನಾಕಾರಣ ಓಡಿಸಿಕೊಂಡು ಹೋಗಿ, ಅಮಾನವೀಯವಾಗಿ ನೆಲಕ್ಕೆ ಕೆಡವಿದ್ದಾರೆ. ಈ ದಾಳಿಯಿಂದ ಬಸವರಾಜ ಅವರ ಕಾಲು ಒದ್ದು ಮುರಿದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಈ ಅನ್ಯಾಯದ ಬಗ್ಗೆ ದೂರು ನೀಡಲು ಹೋದರೆ, ಕೊಡೇಕಲ್ ಠಾಣೆಯ ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳಲು ಯಾವುದೇ ರೀತಿಯಲ್ಲಿ ಎಫ್.ಐ.ಆರ್ (FIR) ದಾಖಲಿಸಲು ನಿರಾಕರಿಸುತ್ತಿದ್ದಾರೆ.ಎಂದು ಗ್ರಾಮದ ಮುಖಂಡರು ಗಳು ಪೋಲಿಸ್ ಇಲಾಖೆ ಮೇಲೆ ಆರೋಪ2
- ಬಳ್ಳಾರಿ ನಗರದ ವಾರ್ಡ್ ನಂಬರ್ 10 ರಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು1
- ಇಳಕಲ್ ನಗರದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ವೃತ್ತದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.1
- ಇಳಕಲ್ :ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ ನೇ ವರ್ಷದ ಜಯಂತ್ಯೋತ್ಸವ ಹಾಗೂ ಬಸವ ಜಯಂತಿ ನಿಮಿತ್ಯ ಸತತ ೧೦ ನೇ ವರ್ಷಗಳಿಂದ ಸೇವೆಗೈಯುತ್ತಿರುವ ರಿಯಾಜ್ ಮಕಾಂದಾರ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣ ಎದುರಿಗೆ ತಂಪಾದ ಕುಡಿಯುವ ನೀರಿನ ಅರವಟ್ಟಿಗೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮಂಗಳವಾರ ಉದ್ಘಾಟಿಸಿದರು. ಬೇಸಿಗೆ ಸಮಯದಲ್ಲಿ ಸಾರ್ವಜನಿಕರ ನೀರಿನ ದಾಹವನ್ನು ನೀಗಿಸಲು ರಿಯಾಜ್ ಮಕಾಂನದಾರ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಒಳ್ಳೆಯ ಕಾರ್ಯಎಂದು ಹೇಳಿದರು. ಈ ಸಮಯದಲ್ಲಿ ಮಕಾಂನದಾರ ಕುಟುಂಬಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಹಾಗೂ ಸಾರ್ವಜನಿಕರು ಇದ್ದರು.1
- ಮುದ್ದೇಬಿಹಾಳ.. 135 ನೆಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ವಿಜ್ಜರಣೆಮೆಯಿಂದ ಆಚರಿಸಲಾಯಿತ್ತು. ಮುದ್ದೇಬಿಹಾಳದ ಗಣ್ಯ ವ್ಯಕ್ತಿಗಳು ಅಂಬೇಡ್ಕರವರ ಜಯಂತೋತ್ಸವಕ್ಕೆ ಮುಖ್ಯ ಅತಿಥಿ ಸಿ ಎಸ್ ನಾಡಗೌಡ ಮತ್ತು ಎಲ್ಲಾ D S S ಸಂಗದವರು ಹಾಜರ ಇದ್ದರು. ಇಂದಿರಾ ನಗರದ ಮಾಜಿ ಮೆಂಬರ್ ಆದ ಶಿವು ಶಿವಪುರ ಮತ್ತು ಸಿದ್ದು ತಳಹಳ್ಳಿ ಹಾಗೂ ಪೀಲಕಮ್ಮ ನಗರದ ಅಶೋಕ್ ಪಾದಗಟ್ಟಿ ನಾಗೇಶ್ ಭಜಂತ್ರಿ ಈರಣ್ಣ ತಾರನಾಳ ಹನುಮಂತ ಹೊಸಮನಿ ಹರಳಯ್ಯ ಸಮಾಜದ ಅಧ್ಯಕ್ಷರಾದ ಭಗವಂತ ಕಬಾಡೆ ಎಲ್ಲಾ ವ್ಯಕ್ತಿಗಳು ಹಾಜರಿದ್ದರು1
- ಅಧಿಕಾರಿಗಳಿಗೆ ಖಡಕ್ ಸಂದೇಶ:ಅಧಿಕಾರಿಗಳು ಸಬೂಬು ನೀಡುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು. ಮಾಜಿ ಶಾಸಕ1