ಅಳ್ನಾವರದಲ್ಲಿ ಕುಂದು ಕೊರತೆ ಆಲಿಸಲು ಆಗಮಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಹಿರೇಕರೆಗೆ ಬೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿ ವಹಿಸಿಕೊಂಡ ವಾರದಲ್ಲಿಯೇ ಡಿಸಿ ಸ್ನೇಹಲ್ ಭೇಟಿ ಅಗತ್ಯ ಅನುಧಾನ ಪಡೆದು,ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಭರವಶೆ ಅಳ್ಳಾವರ(ಧಾರವಾಡ):ಅಳ್ನಾವರರಾಜ್ಯದಲ್ಲಿಯೆ ಅತೀ ಚಿಕ್ಕ ತಾಲ್ಲೂಕ ಕೇಂದ್ರ ಎಂದು ಗುರ್ತಿಸಲ್ಪಟ್ಟ ಅಳ್ನಾವರ ತಾಲ್ಲೂಕ ಕೇಂದ್ರವಾಗಿ ಎಳು ವರ್ಷ ಗತಿಸಿವೆ, ಇಲ್ಲಿನ ಸಾಕಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ತಿಳಿಸಿದ್ದು. ಎಲ್ಲವನ್ನು ಪಟ್ಟಿ ಮಾಡಿಟ್ಟುಕೊಂಡಿದ್ದು, ಹಂತ ಹಂತವಾಗಿ ಬಗೆಹರಿಸಲು ಪ್ರತ್ನಿಸುವುದಾಗಿ ಜಿಲ್ಲಾಧಿಕಾರಿ ಸ್ನೇಹಲ್ ತಿಳಿಸಿದರು. ಇಲ್ಲಿನ ಉಮಾಭವನ ಹಾಲನಲ್ಲಿ ಮಂಗಳವಾರ ಹಮ್ಮಿಕೊಂಡ ಸಾರ್ವಜನಿಕರ ಕುಂದು ಕೊರತೆ ಆಲಿಕೆ ಸಭೆಯಲ್ಲಿ ಶಾಂತ ಚಿತ್ತದಿಂದ ಜನರ ಸಮಸ್ಯೆ ಆಲಿಸಿ ಅವರು ಮಾತನಾಡಿ, ಈ ಭಾಗದ ಸಮಸ್ಯೆ ಪರಿಹಾರಕ್ಕೆ ಸುಮಾರು ರೂ. ೧೦೦ ಕೋಟ ಅನುಧಾನ ಬೇಕು. ವಿವಿಧ ಇಲಾಖೆಗಳಿಗೆ ಸಂಭದ ಪಟ್ಟಂತೆ ಕೆಲಸಗಳನ್ನು ವಿಂಗಡಿಸಿ ಸರ್ಕಾರದಿಂದ ಬರುವ ದಿನದಲ್ಲಿ ಅನುದಾನ ತಂದು ಈ ಭಾಗದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ೭ ವರ್ಷದಿಂದ ಎಂಬಿಬಿಎಸ್ ವೈಧ್ಯರು ಇಲ್ಲದೆ ಸಾಕಷ್ಟು ತೊಂದರೆ ಆಗಿದ್ದು ಗಮನಕ್ಕೆ ಬಂದಿದೆ. ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿ, ತಕ್ಷಣವೇ ವೈಧ್ಯ ನೇಮಕ್ಕೆ ಕ್ರಮ ವಹಿಸಲಾಗುವುದು, ಸ್ಥಳೀಯವಾಗಿ ವೈಧ್ಯರು ಸೇವೆ ಮಾಡಲು ಸಿದ್ದರಿದ್ದಲ್ಲಿ ತಿಳಿಸಿ ಅವರಿಗೆ ಪ್ರಥಮ ಆಧ್ಯತೆ ನೀಡಿ ಇಲ್ಲಿನ ಆಸ್ಪತ್ರೆ ಜವಾಬ್ದಾರಿ ವಹಿಸಲಾಗುವುದು ಹಾಗೂ ಅಗತ್ಯ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು. ಪ್ರತಿ ತಿಂಗಳಿಗೊಮ್ಮೆ ಸಾರ್ವಜನಿಕರ ಅಹವಾಲು ಆಲಿಕೆ ಸಭೆ ನಡೆಸಲಾಗುವುದು, ಸಭೆಯ ದಿನಾಂಕ,ಸ್ಥಳ ಮುಂಚಿತವಾಗಿ ತಿಳಿಸಲಾಗುವುದು, ರಸ್ತೆ, ಕೆರೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಆಸ್ಪತ್ರೆ ಸುಧಾರಣೆ, ಮೂಲಭೂತ್ ಸೌಲಭ್ಯ ಒದಗಿಸಲು ಒತ್ತು ನೀಡಲಾಗುವುದು ಎಂದರು. ಸಮಸ್ಯೆಗಳು: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಇಎಸ್ ವೈಧ್ಯರೆ ನೇಮಕ, ಅಗತ್ಯ ಸಿಬ್ಬಂದಿ ಹಾಗೂ ಸಕಾಲದಲ್ಲಿ ಅಂಬುಲೆನ್ಸ್ ಸೇವೆ, ಹಿರೆಕರೆ ಅಭಿವೃದ್ದಿ, ತಾಲ್ಲೂಕ ಮಟ್ಟದ ಕ್ರೀಡಾಂಗಣ ಅಭಿವೃದ್ದಿ, ಕ್ರೀಡಾಗಂಣಕ್ಕೆ ಸೇರುವ ರಸ್ತೆ ಅಬಿವೃದ್ಧಿ, ಬಸ್ ನಿಲ್ದಾಣದಲ್ಲಿನ ಶೌಚಾಲಯ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವುದು. ರಾಜ್ಯ ಹೆದ್ದಾರಿ ಅಡಿಯ ಮುಖ್ಯ ರಸ್ತೆಯನ್ನು ಅಳ್ನಾವರ ಕ್ರಾಸನಿಂದ ಹಳಿಯಾಳ ಗಡಿ ಭಾಗದವರೆಗೆ ಸುಮಾರು ೪ ಕೀ,ಮೀ. ಅಭಿವೃದ್ಧಿ ಪಡಿಸುವುದು. ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆ ತುಂಬುವುದು, ಆಶ್ರಯ ಬಡಾವಣೆಗೆ ಮೂಲಭೂತ್ ಸೌಲಭ್ಯ, ಪರಿಶಿಷ್ಟ ಜನಾಂಗದವರಿಗೆ ಸಮುದಾಯ ಭವನ ನಿರ್ಮಾಣ, ಹೆಸ್ಕಾಂ ಮಾಸಿಕ ಸಭೆ ಕರೆಯುವುದು. ಸಾರ್ವಜನಿಕ ಗ್ರಂಥಾಲಯ ನಿರ್ಮಾಣ, ಸರ್ಕಾರದ ದರದಲ್ಲಿ ರೈತರಿಗೆ ಗೊಬ್ಬರ, ಹೂಲಿಕೇರಿ ಕರೆಯನ್ನು ಪ್ರವಾಸಿ ತಾಣವನ್ನಾಗಿ ರೂಪಸಿವುವುದು, ಗಾಯರಣ ಜಾಗೆಯನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸುವುದು ಸೇರಿಂದತೆ ಸುಮಾರು ೪೧ ಅರ್ಜಿಗಳು ಸ್ವೀಕೃತವಾದವು. ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು, ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಇದ್ದರು. ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯಗಳ ಮಾಹಿತಿಯುಳ್ಳ ಬಿತ್ತಿ ಚಿತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಪ್ರಥಮ ಭಾರಿ ಪಟ್ಟಣಕ್ಕೆ ಆಗಮಿಸಿ ಡಿಸಿ ಅವರನ್ನು ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಸಂಘದಿAದ ಸತ್ಕರಿಸಲಾಯಿತು. ಸಾರ್ವಜನಿಕರ ಒತ್ತಾಸೆ ಮೇರೆಗೆ ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾಧಿಕಾರಿಗಳು ಹಿರೇಕೆರೆಗೆ ಬೇಟಿ ನೀಡಿ ಪರಿಶೀಲಿಸಿದರು.
ಅಳ್ನಾವರದಲ್ಲಿ ಕುಂದು ಕೊರತೆ ಆಲಿಸಲು ಆಗಮಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಹಿರೇಕರೆಗೆ ಬೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿ ವಹಿಸಿಕೊಂಡ ವಾರದಲ್ಲಿಯೇ ಡಿಸಿ ಸ್ನೇಹಲ್ ಭೇಟಿ ಅಗತ್ಯ ಅನುಧಾನ ಪಡೆದು,ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಭರವಶೆ ಅಳ್ಳಾವರ(ಧಾರವಾಡ):ಅಳ್ನಾವರರಾಜ್ಯದಲ್ಲಿಯೆ ಅತೀ ಚಿಕ್ಕ ತಾಲ್ಲೂಕ ಕೇಂದ್ರ ಎಂದು ಗುರ್ತಿಸಲ್ಪಟ್ಟ ಅಳ್ನಾವರ ತಾಲ್ಲೂಕ ಕೇಂದ್ರವಾಗಿ ಎಳು ವರ್ಷ ಗತಿಸಿವೆ, ಇಲ್ಲಿನ ಸಾಕಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ತಿಳಿಸಿದ್ದು. ಎಲ್ಲವನ್ನು ಪಟ್ಟಿ ಮಾಡಿಟ್ಟುಕೊಂಡಿದ್ದು, ಹಂತ ಹಂತವಾಗಿ ಬಗೆಹರಿಸಲು ಪ್ರತ್ನಿಸುವುದಾಗಿ ಜಿಲ್ಲಾಧಿಕಾರಿ ಸ್ನೇಹಲ್ ತಿಳಿಸಿದರು. ಇಲ್ಲಿನ ಉಮಾಭವನ ಹಾಲನಲ್ಲಿ ಮಂಗಳವಾರ ಹಮ್ಮಿಕೊಂಡ ಸಾರ್ವಜನಿಕರ ಕುಂದು ಕೊರತೆ ಆಲಿಕೆ ಸಭೆಯಲ್ಲಿ ಶಾಂತ ಚಿತ್ತದಿಂದ ಜನರ ಸಮಸ್ಯೆ ಆಲಿಸಿ ಅವರು ಮಾತನಾಡಿ, ಈ ಭಾಗದ ಸಮಸ್ಯೆ ಪರಿಹಾರಕ್ಕೆ ಸುಮಾರು ರೂ. ೧೦೦ ಕೋಟ ಅನುಧಾನ ಬೇಕು. ವಿವಿಧ ಇಲಾಖೆಗಳಿಗೆ ಸಂಭದ ಪಟ್ಟಂತೆ ಕೆಲಸಗಳನ್ನು ವಿಂಗಡಿಸಿ ಸರ್ಕಾರದಿಂದ ಬರುವ ದಿನದಲ್ಲಿ ಅನುದಾನ ತಂದು ಈ ಭಾಗದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ೭ ವರ್ಷದಿಂದ ಎಂಬಿಬಿಎಸ್ ವೈಧ್ಯರು ಇಲ್ಲದೆ ಸಾಕಷ್ಟು ತೊಂದರೆ ಆಗಿದ್ದು ಗಮನಕ್ಕೆ ಬಂದಿದೆ. ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿ, ತಕ್ಷಣವೇ ವೈಧ್ಯ ನೇಮಕ್ಕೆ ಕ್ರಮ ವಹಿಸಲಾಗುವುದು, ಸ್ಥಳೀಯವಾಗಿ ವೈಧ್ಯರು ಸೇವೆ ಮಾಡಲು ಸಿದ್ದರಿದ್ದಲ್ಲಿ ತಿಳಿಸಿ ಅವರಿಗೆ ಪ್ರಥಮ ಆಧ್ಯತೆ ನೀಡಿ ಇಲ್ಲಿನ ಆಸ್ಪತ್ರೆ ಜವಾಬ್ದಾರಿ ವಹಿಸಲಾಗುವುದು ಹಾಗೂ ಅಗತ್ಯ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು. ಪ್ರತಿ ತಿಂಗಳಿಗೊಮ್ಮೆ ಸಾರ್ವಜನಿಕರ ಅಹವಾಲು ಆಲಿಕೆ ಸಭೆ ನಡೆಸಲಾಗುವುದು, ಸಭೆಯ ದಿನಾಂಕ,ಸ್ಥಳ ಮುಂಚಿತವಾಗಿ ತಿಳಿಸಲಾಗುವುದು, ರಸ್ತೆ, ಕೆರೆ ಅಭಿವೃದ್ಧಿ,
ಚರಂಡಿ ನಿರ್ಮಾಣ, ಆಸ್ಪತ್ರೆ ಸುಧಾರಣೆ, ಮೂಲಭೂತ್ ಸೌಲಭ್ಯ ಒದಗಿಸಲು ಒತ್ತು ನೀಡಲಾಗುವುದು ಎಂದರು. ಸಮಸ್ಯೆಗಳು: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಇಎಸ್ ವೈಧ್ಯರೆ ನೇಮಕ, ಅಗತ್ಯ ಸಿಬ್ಬಂದಿ ಹಾಗೂ ಸಕಾಲದಲ್ಲಿ ಅಂಬುಲೆನ್ಸ್ ಸೇವೆ, ಹಿರೆಕರೆ ಅಭಿವೃದ್ದಿ, ತಾಲ್ಲೂಕ ಮಟ್ಟದ ಕ್ರೀಡಾಂಗಣ ಅಭಿವೃದ್ದಿ, ಕ್ರೀಡಾಗಂಣಕ್ಕೆ ಸೇರುವ ರಸ್ತೆ ಅಬಿವೃದ್ಧಿ, ಬಸ್ ನಿಲ್ದಾಣದಲ್ಲಿನ ಶೌಚಾಲಯ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವುದು. ರಾಜ್ಯ ಹೆದ್ದಾರಿ ಅಡಿಯ ಮುಖ್ಯ ರಸ್ತೆಯನ್ನು ಅಳ್ನಾವರ ಕ್ರಾಸನಿಂದ ಹಳಿಯಾಳ ಗಡಿ ಭಾಗದವರೆಗೆ ಸುಮಾರು ೪ ಕೀ,ಮೀ. ಅಭಿವೃದ್ಧಿ ಪಡಿಸುವುದು. ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆ ತುಂಬುವುದು, ಆಶ್ರಯ ಬಡಾವಣೆಗೆ ಮೂಲಭೂತ್ ಸೌಲಭ್ಯ, ಪರಿಶಿಷ್ಟ ಜನಾಂಗದವರಿಗೆ ಸಮುದಾಯ ಭವನ ನಿರ್ಮಾಣ, ಹೆಸ್ಕಾಂ ಮಾಸಿಕ ಸಭೆ ಕರೆಯುವುದು. ಸಾರ್ವಜನಿಕ ಗ್ರಂಥಾಲಯ ನಿರ್ಮಾಣ, ಸರ್ಕಾರದ ದರದಲ್ಲಿ ರೈತರಿಗೆ ಗೊಬ್ಬರ, ಹೂಲಿಕೇರಿ ಕರೆಯನ್ನು ಪ್ರವಾಸಿ ತಾಣವನ್ನಾಗಿ ರೂಪಸಿವುವುದು, ಗಾಯರಣ ಜಾಗೆಯನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸುವುದು ಸೇರಿಂದತೆ ಸುಮಾರು ೪೧ ಅರ್ಜಿಗಳು ಸ್ವೀಕೃತವಾದವು. ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು, ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಇದ್ದರು. ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯಗಳ ಮಾಹಿತಿಯುಳ್ಳ ಬಿತ್ತಿ ಚಿತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಪ್ರಥಮ ಭಾರಿ ಪಟ್ಟಣಕ್ಕೆ ಆಗಮಿಸಿ ಡಿಸಿ ಅವರನ್ನು ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಸಂಘದಿAದ ಸತ್ಕರಿಸಲಾಯಿತು. ಸಾರ್ವಜನಿಕರ ಒತ್ತಾಸೆ ಮೇರೆಗೆ ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾಧಿಕಾರಿಗಳು ಹಿರೇಕೆರೆಗೆ ಬೇಟಿ ನೀಡಿ ಪರಿಶೀಲಿಸಿದರು.
- Tandav by Small Child ?1
- ಹುಬ್ಬಳ್ಳಿ ರಣಹದ್ದು ಜಾಗೃತಿ ಸಿಟಿ ನೆಷ್ಟ ನ್ಯೂಸ್ 24/7 ಕನ್ನಡವಾಗಿದೆ ಸುದ್ದಿ ವಾಹಿನಿ. ಕನ್ನಡ ಟೆಲಿವಿಷನ್ ನ್ಯೂಸ್‌ನಲ್ಲಿ ಹಿಂದೆಂದೂ ಕಾಣದ ಉತ್ತಮ ಗುಣಮಟ್ಟದ ಸುದ್ದಿ ವಿಷಯವನ್ನು ತಲುಪಿಸುವುದು. 'ಲೈವ್' ಕನ್ನಡ ಹಾಗೂ ಹಿಂದಿ ಸುದ್ದಿಯನ್ನು ಕರ್ನಾಟಕದ ಮನೆ ಬಾಗಿಲಿಗೆ ತಂದ ತಂಡದಿಂದ ಪ್ರಚಾರ. ಈ ಧೈರ್ಯಶಾಲಿ, ವಿಶ್ವಾಸಾರ್ಹ ಮತ್ತು ದೃಢನಿರ್ಧಾರದ ತಂಡವು ನಿಮಗೆ 'ಯಾವುದೇ ವೆಚ್ಚದಲ್ಲಿ' ವಿಶ್ವಾಸಾರ್ಹ ಸುದ್ದಿಯನ್ನು ತರುತ್ತದೆ ಪಡೆಯುವಲ್ಲಿ ಮೊದಲಿಗರಾಗಿರಿ: - ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಬ್ರೇಕಿಂಗ್ - ವ್ಯಾಪಕವಾದ ಹೈಪರ್ ಸ್ಥಳೀಯ ಸುದ್ದಿ - ಕರ್ನಾಟಕದ ರಾಜಕೀಯದ ಆಳವಾದ ಕವರೇಜ್ - ವಿವರವಾದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ - ಇತ್ತೀಚಿನ ಕ್ರೀಡಾ ಪಂದ್ಯಗಳು, ಅಂಕಗಳು ಮತ್ತು ಇನ್ನಷ್ಟು - ವಿಶಾಲವಾದ ಸಿನಿಮಾ ವ್ಯಾಪ್ತಿ ಮತ್ತು ದೊಡ್ಡದು ಸ್ಟಾರ್ ಕಥೆಗಳು - ಪ್ರಪಂಚದಾದ್ಯಂತ ಆಸಕ್ತಿದಾಯಕ ಕಥೆಗಳು *PLEASE SUBSCRIBE CITY NEXT NEWS 24 7*1
- Post by Nitishgoud Tadas Patil press r1
- ಶಿಗ್ಗಾವಿ, ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿನ ಚರಮೂರ್ತೆಶ್ವರ ಮಠದಲ್ಲಿ ಶಿವರಾತ್ರಿ ಅಂಗವಾಗಿ ಭವ್ಯ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ನಂತರ ಮಠದ ಆವರಣದಲ್ಲಿ ಸಾವಿರಾರೂ ಭಕ್ತರು ಪ್ರಸಾದ ಸವಿದರು. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.2
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಸುರಪಗಟ್ಟಿ ಗ್ರಾಮದ ಶ್ರೀ ಹನುಮಂತಪ್ಪ ಮೆತ್ತಿಗಟ್ಟಿ ಇವರಿಗೆ ಸೇರಿದ ಮೆಕ್ಕೆ ಜೋಳದ ಮೇವುಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಪ್ರಮಾಣದ ಮೇವು ಸುಟ್ಟು ಕರಲಾಗಿದೆ, ಗ್ರಾಮದ ನಾಗರಿಕರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಬೆಂಕಿ ಆರಿಸಿದ್ದರು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಹಾನಿಯಾದ ಬಗ್ಗೆ ತಹಶೀಲ್ದಾರ್ ಗೆ ಮಾಹಿತಿ ನೀಡಲಾಯಿತು,2
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಇಂದು ಶಿವರಾತ್ರಿ ಅಮಾವಾಸ್ಯೆ ನಿಮಿತ್ತ ಸವದತ್ತಿ ತಾಲೂಕಿನ ಎಕ್ಕೇರಿ ಗ್ರಾಮದ ಶ್ರೀ ಕರಿಯಮ್ಮ ದೇವಿಯ ದರ್ಶನಕ್ಕೆ ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸಿ ತಮ್ಮ ಹರಿಕೆಗಳನ್ನು ಕಟ್ಟಿಕೊಂಡು ತಾಯಿಯಲ್ಲಿ ತಮ್ಮ ಕೋರಿಕೆಗಳನ್ನು ಈಡೇರಿಸಿವಂತೆ ಬೇಡಿಕೊಂಡರು.ಪ್ರತಿ ಅಮವಾಸ್ಯಯಂತೆ ಈ ಅಮಾವಾಸ್ಯೆಯು ಬಹಳಷ್ಟು ಭಕ್ತರಿಂದ ತುಂಬಿ ತುಳುಕಿತು.1
- This is new rumors spreading by Pakistani media, Shame1