logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

2 hrs ago
user_ಲೋಕಲ್ ಸ್ಟಾರ್ ನ್ಯೂಸ್
ಲೋಕಲ್ ಸ್ಟಾರ್ ನ್ಯೂಸ್
ಶೋರಾಪುರ, ಯಾದಗಿರಿ, ಕರ್ನಾಟಕ•
2 hrs ago

ಯಾದಗಿರಿ-ರಾಯಚೂರು ಹೆದ್ದಾರಿಯ ಅವೈಜ್ಞಾನಿಕ ಟೋಲ್‌ ತೆರವಿಗೆ ಉಮೇಶ್ ಕೆ. ಮುನ್ನಾಳ್ ಖಡಕ್ ಆಗ್ರಹ ಯಾದಗಿರಿ-ರಾಯಚೂರು ಹೆದ್ದಾರಿಯ ಆರ್. ಹೊಸಳ್ಳಿ-ನಾಗಲಾಪುರ ಮಧ್ಯದಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಸಮರ್ಪಕ ವಿದ್ಯುತ್ ದೀಪಗಳು ಹಾಗೂ ಸುರಕ್ಷತಾ ಸೂಚನೆಗಳ ಕೊರತೆಯಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುನ್ನಾಳ್‌ ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿ ರೈತರು ಹಾಗೂ ವಾಹನ ಸವಾರರೊಂದಿಗೆ ಚರ್ಚಿಸಿದ ಅವರು, ಟೋಲ್ ಅನ್ನು ತಕ್ಷಣ ತೆರವುಗೊಳಿಸಿ ಮುಂದಿನ ಅವಘಡಗಳನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ ಹಲವು ಜೀವಗಳು ಬಲಿಯಾಗಿವೆ ಎಂದು ಹೇಳಿದ ಅವರು, ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಇದೇ ಸ್ಥಳದಲ್ಲಿ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

More news from ಕರ್ನಾಟಕ and nearby areas
  • ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    1
    ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಯುವ ಸಂಪತ್ತು ಸಭೆಗೆ ಚಾಲನೆ
ಮಸ್ಕಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಪತ್ತು ಸಭೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಸ್ಕಿ ಶಾಸಕ **ಆರ್. ಬಸನಗೌಡ ತುರುವಿಹಾಳ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    user_ಹನುಮೇಶ ನಾಯಕ್
    ಹನುಮೇಶ ನಾಯಕ್
    ಮಾಸ್ಕಿ, ರಾಯಚೂರು, ಕರ್ನಾಟಕ•
    9 hrs ago
  • ಗುರುಮಠಕಲ್ ಮತಕ್ಷೇತ್ರ ಸೈದಾಪುರ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳ ಪರಿಶೀಲನೆ ನಡೆಸಿದರು. ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಉಮೇಶ್ ಮುದ್ನಾಳ ವಾರದ ಗಡುವು; ನಿರ್ಲಕ್ಷ್ಯ ವಹಿಸಿದರೆ ರಸ್ತೆ ಬಂದ್ ಹೋರಾಟದ ಎಚ್ಚರಿಕೆ ಗುರುಮಠಕಲ್ ಸೈದಾಪುರ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ದನ-ಕರು, ಕುರಿ, ಆಡು ಹಾಗೂ ಕೋಳಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ಸಂತೆ ಆವರಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸುವುದರ ಜತೆಗೆ ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಅವ್ಯವಸ್ಥೆಯ ಆಗರವಾದ ಸಂತೆ ಆವರಣ ಸಂತೆ ಆವರಣದಲ್ಲಿ ಜಾಲಿಕಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಳ್ಳುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಡೆ ಅಸ್ವಚ್ಛತೆ ಕಂಡುಬರುತ್ತಿದ್ದು, ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳಿಗೂ ಅವಕಾಶವಾಗುತ್ತಿದೆ. ಕೆಲ ಭಾಗಗಳು ಭಿಕ್ಷುಕರು ಹಾಗೂ ಪುಂಡ-ಪೋಕರಿಗಳ ತಂಗುದಾಣದಂತಾಗಿವೆ. ಇದರಿಂದ ಸಂತೆಗಾಗಿ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ ಎಂದು ಮುದ್ನಾಳ ಹೇಳಿದರು. ಪ್ರತಿ ಗುರುವಾರ ಸಾವಿರಾರು ರೈತರು ಹಾಗೂ ವ್ಯಾಪಾರಿಗಳು ಆಗಮಿಸುವ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು. ಜಾನುವಾರುಗಳ ಆರೋಗ್ಯಕ್ಕೂ ಆದ್ಯತೆ ನೀಡಿ ಜಾನುವಾರು ಸಂತೆ ಆರಂಭಿಸಿದ ಬಳಿಕ ಪ್ರತಿ ವಾರ ಸಂತೆ ಆವರಣದಲ್ಲೇ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳಿಗಾಗಿ ಮರಗಳನ್ನು ಬೆಳೆಸುವುದರ ಜತೆಗೆ ಅಗತ್ಯವಿರುವ ಕಡೆ ಶೆಡ್ ನಿರ್ಮಿಸಬೇಕು. ಎಪಿಎಂಸಿ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಕ್ರಮ ಕೈಗೊಳ್ಳಬೇಕು ಎಂದರು. ಶೆಡ್‌ಗಳ ಅಕ್ರಮ ಬಳಕೆಗೆ ಕಡಿವಾಣ ಎಪಿಎಂಸಿ ಆವರಣದಲ್ಲಿರುವ ಶೆಡ್‌ಗಳನ್ನು ಕೆಲವು ಖಾಸಗಿ ಅಂಗಡಿ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಬಳಕೆಗೆ ಶೆಡ್‌ಗಳನ್ನು ಮುಕ್ತಗೊಳಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಒಂದು ವಾರದ ಗಡುವು ಜಿಲ್ಲಾಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಜಾನುವಾರು ಸಂತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪ ಎಪಿಎಂಸಿ ಕಚೇರಿ ಮುಂಭಾಗದ ಯಾದಗಿರಿ–ರಾಯಚೂರು ಕರಿಬೆಟ್ಟ ಸರ್ಕಲ್ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದರು. ಜಿಲ್ಲೆಯ ಪ್ರಮುಖ ಜಾನುವಾರು ಸಂತೆಗಳಾದ ಶುಕ್ರವಾರ ಶಹಾಪುರ, ಮಂಗಳವಾರ ಯಾದಗಿರಿ, ಸೋಮವಾರ ಗುರುಮಠಕಲ್ ಹಾಗೂ ಗುರುವಾರ ಸೈದಾಪುರದಲ್ಲೂ ವ್ಯವಸ್ಥಿತವಾಗಿ ಜಾನುವಾರು ಸಂತೆ ನಡೆಸುವ ಮೂಲಕ ರೈತರು ಹಾಗೂ ಜಾನುವಾರು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
    4
    ಗುರುಮಠಕಲ್ ಮತಕ್ಷೇತ್ರ ಸೈದಾಪುರ ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳ ಪರಿಶೀಲನೆ ನಡೆಸಿದರು.
ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸಿ
ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಉಮೇಶ್ ಮುದ್ನಾಳ ವಾರದ ಗಡುವು; ನಿರ್ಲಕ್ಷ್ಯ ವಹಿಸಿದರೆ ರಸ್ತೆ ಬಂದ್ ಹೋರಾಟದ ಎಚ್ಚರಿಕೆ
ಗುರುಮಠಕಲ್ ಸೈದಾಪುರ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ದನ-ಕರು, ಕುರಿ, ಆಡು ಹಾಗೂ ಕೋಳಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದ್ದಾರೆ.
ಸಂತೆ ಆವರಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸೈದಾಪುರದಲ್ಲಿ ಜಾನುವಾರು ಸಂತೆ ಆರಂಭಿಸುವುದರ ಜತೆಗೆ ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಅವ್ಯವಸ್ಥೆಯ ಆಗರವಾದ ಸಂತೆ ಆವರಣ
ಸಂತೆ ಆವರಣದಲ್ಲಿ ಜಾಲಿಕಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಳ್ಳುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಡೆ ಅಸ್ವಚ್ಛತೆ ಕಂಡುಬರುತ್ತಿದ್ದು, ಕುಡುಕರ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳಿಗೂ ಅವಕಾಶವಾಗುತ್ತಿದೆ. ಕೆಲ ಭಾಗಗಳು ಭಿಕ್ಷುಕರು ಹಾಗೂ ಪುಂಡ-ಪೋಕರಿಗಳ ತಂಗುದಾಣದಂತಾಗಿವೆ. ಇದರಿಂದ ಸಂತೆಗಾಗಿ ಆಗಮಿಸುವ ರೈತರು ಹಾಗೂ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ ಎಂದು ಮುದ್ನಾಳ ಹೇಳಿದರು.
ಪ್ರತಿ ಗುರುವಾರ ಸಾವಿರಾರು ರೈತರು ಹಾಗೂ ವ್ಯಾಪಾರಿಗಳು ಆಗಮಿಸುವ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ನೆರಳು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂರಿದರು.
ಜಾನುವಾರುಗಳ ಆರೋಗ್ಯಕ್ಕೂ ಆದ್ಯತೆ ನೀಡಿ
ಜಾನುವಾರು ಸಂತೆ ಆರಂಭಿಸಿದ ಬಳಿಕ ಪ್ರತಿ ವಾರ ಸಂತೆ ಆವರಣದಲ್ಲೇ ಪಶುವೈದ್ಯರನ್ನು ಕಡ್ಡಾಯವಾಗಿ ನಿಯೋಜಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ಕಟ್ಟಲು ಸಾಲುಸಾಲಾಗಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿಸಿಲಿನ ತೀವ್ರತೆಯನ್ನು ಗಮನಿಸಿ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳಿಗಾಗಿ ಮರಗಳನ್ನು ಬೆಳೆಸುವುದರ ಜತೆಗೆ ಅಗತ್ಯವಿರುವ ಕಡೆ ಶೆಡ್ ನಿರ್ಮಿಸಬೇಕು. ಎಪಿಎಂಸಿ ಆವರಣದಲ್ಲಿ ಉದ್ಯಾನ ನಿರ್ಮಿಸಿ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಕ್ರಮ ಕೈಗೊಳ್ಳಬೇಕು ಎಂದರು.
ಶೆಡ್‌ಗಳ ಅಕ್ರಮ ಬಳಕೆಗೆ ಕಡಿವಾಣ
ಎಪಿಎಂಸಿ ಆವರಣದಲ್ಲಿರುವ ಶೆಡ್‌ಗಳನ್ನು ಕೆಲವು ಖಾಸಗಿ ಅಂಗಡಿ ಮಾಲೀಕರು ಅಕ್ರಮವಾಗಿ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಬಳಕೆಗೆ ಶೆಡ್‌ಗಳನ್ನು ಮುಕ್ತಗೊಳಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು.
ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಕೂಡಲೇ ಸಂತೆ ಆವರಣಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ರೈತರು ಹಾಗೂ ಜಾನುವಾರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಒಂದು ವಾರದ ಗಡುವು
ಜಿಲ್ಲಾಡಳಿತ ಹಾಗೂ ಎಪಿಎಂಸಿ ಅಧಿಕಾರಿಗಳು ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಜಾನುವಾರು ಸಂತೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪ ಎಪಿಎಂಸಿ ಕಚೇರಿ ಮುಂಭಾಗದ ಯಾದಗಿರಿ–ರಾಯಚೂರು ಕರಿಬೆಟ್ಟ ಸರ್ಕಲ್ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ ಎಚ್ಚರಿಕೆ ನೀಡಿದರು.
ಜಿಲ್ಲೆಯ ಪ್ರಮುಖ ಜಾನುವಾರು ಸಂತೆಗಳಾದ ಶುಕ್ರವಾರ ಶಹಾಪುರ, ಮಂಗಳವಾರ ಯಾದಗಿರಿ, ಸೋಮವಾರ ಗುರುಮಠಕಲ್ ಹಾಗೂ ಗುರುವಾರ ಸೈದಾಪುರದಲ್ಲೂ ವ್ಯವಸ್ಥಿತವಾಗಿ ಜಾನುವಾರು ಸಂತೆ ನಡೆಸುವ ಮೂಲಕ ರೈತರು ಹಾಗೂ ಜಾನುವಾರು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
    user_N S Patange
    N S Patange
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    4 hrs ago
  • ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಪರಮೇಶ್ವರ ಬೆನಕಿನಪಳ್ಳಿ ಸಂಗೀತ ಗಾಯಕ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಕಾಳಗಿ(ಇಂಗನಕಲ್) ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀ ಪೂಜ್ಯ ಗುರುಗಳಾದ ವೀರಭದ್ರಯ್ಯ ಸ್ವಾಮೀಜಿ ಗಾಯಕರು ಸಂಗೀತ ಗಾಯಕ ಪರಮೇಶ್ವರ ಬೆನಕಿನಪಳ್ಳಿ ಪ್ರಸಿದ್ಧ ಡೋಲು ವಾದಕರು ಸಿದ್ದಣ್ಣ ಮಗಿ ಮಲ್ಲಿಕಾರ್ಜುನ ಮಾನಕಾರ ಗಾಯಕ ಶಿವಲಿಂಗಣ್ಣ ಪಾಟೀಲ್ ಶಾಂತಪ್ಪಗೌಡ ಬಿರಾದಾರ ಕಂಠೆಪ್ಪಾ ಬಸವಂತರಾವ ಮಾನಕಾರ ಬಸವರಾಜ ಮಾವನೂರ ಶರಣಪ್ಪಾ ಚಂದ್ರಶೇಖರ ರವೀಂದ್ರ ಹಾಲಕಾಯಿ ಮಲ್ಲಣ್ಣ ಸಂತೋಷ ಬಿರಂಜಗಿ ಹಣಮಂತ ಶರಣು ಮಂಗಲಗಿ ನಾಗಣ್ಣ ಜಗದೇವಪ್ಪ ಬಡಿಗೇರ ಅನೇಕ ಭಕ್ತರು ಸಹಕಾರ ಕೊಟ್ಟು ಸುಗಮವಾಗಿ ಸಂಗೀತ ಜೊತೆಗೆ ಭಜನೆ ನಡೆಸಿಕೊಟ್ಟರು
    1
    ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಪರಮೇಶ್ವರ ಬೆನಕಿನಪಳ್ಳಿ ಸಂಗೀತ ಗಾಯಕ  ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು 
ಕಾಳಗಿ(ಇಂಗನಕಲ್) ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀ ಪೂಜ್ಯ ಗುರುಗಳಾದ ವೀರಭದ್ರಯ್ಯ ಸ್ವಾಮೀಜಿ ಗಾಯಕರು ಸಂಗೀತ ಗಾಯಕ ಪರಮೇಶ್ವರ ಬೆನಕಿನಪಳ್ಳಿ ಪ್ರಸಿದ್ಧ ಡೋಲು ವಾದಕರು ಸಿದ್ದಣ್ಣ ಮಗಿ ಮಲ್ಲಿಕಾರ್ಜುನ ಮಾನಕಾರ ಗಾಯಕ ಶಿವಲಿಂಗಣ್ಣ ಪಾಟೀಲ್ ಶಾಂತಪ್ಪಗೌಡ ಬಿರಾದಾರ ಕಂಠೆಪ್ಪಾ ಬಸವಂತರಾವ ಮಾನಕಾರ ಬಸವರಾಜ ಮಾವನೂರ ಶರಣಪ್ಪಾ ಚಂದ್ರಶೇಖರ ರವೀಂದ್ರ ಹಾಲಕಾಯಿ ಮಲ್ಲಣ್ಣ ಸಂತೋಷ ಬಿರಂಜಗಿ ಹಣಮಂತ ಶರಣು ಮಂಗಲಗಿ ನಾಗಣ್ಣ ಜಗದೇವಪ್ಪ ಬಡಿಗೇರ ಅನೇಕ ಭಕ್ತರು ಸಹಕಾರ ಕೊಟ್ಟು ಸುಗಮವಾಗಿ ಸಂಗೀತ ಜೊತೆಗೆ ಭಜನೆ ನಡೆಸಿಕೊಟ್ಟರು
    user_User1523
    User1523
    Chittapur, Kalaburagi•
    11 hrs ago
  • ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. #ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. DK Shivakumar Star Kannada News 24×7 Star Kannada News 24×7 Yash
    1
    ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. 
#ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. DK Shivakumar Star Kannada News 24×7 Star Kannada News 24×7 Yash
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    5 hrs ago
  • ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.! ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.!
    1
    ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.!
ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    7 hrs ago
  • ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು. “ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ ಶುಭ ಹಾರೈಸಿದರು. ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.
    1
    ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ 
ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು  ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು.
“ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ  ಶುಭ ಹಾರೈಸಿದರು.
ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.
    user_TV21NEWS Kannada
    TV21NEWS Kannada
    Local News Reporter ಚಿತ್ತಾಪುರ, ಕಲಬುರಗಿ, ಕರ್ನಾಟಕ•
    2 hrs ago
  • ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ ಮಸ್ಕಿ: ಪಟ್ಟಣದ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು, ಗೌರಿ ಗಣೇಶ ಹಬ್ಬವು ಜನರಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಮುಖ ಹಬ್ಬವಾಗಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು. ಬಸವೇಶ್ವರನಗರದ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
    1
    ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ
ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬ: ಶಾಸಕ ಆರ್. ಬಸನಗೌಡ ತುರುವಿಹಾಳರಿಂದ ಗಣೇಶ ದರ್ಶನ
ಮಸ್ಕಿ: ಪಟ್ಟಣದ ಬಸವೇಶ್ವರನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು, ಗೌರಿ ಗಣೇಶ ಹಬ್ಬವು ಜನರಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಮುಖ ಹಬ್ಬವಾಗಿದೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಬಸವೇಶ್ವರನಗರದ ಗಣೇಶೋತ್ಸವ ಸಮಿತಿ ವತಿಯಿಂದ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
    user_ಹನುಮೇಶ ನಾಯಕ್
    ಹನುಮೇಶ ನಾಯಕ್
    ಮಾಸ್ಕಿ, ರಾಯಚೂರು, ಕರ್ನಾಟಕ•
    9 hrs ago
  • ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....! ವೀಕ್ಷಿಸಿ.. ವಿಶೇಷ.. ವರದಿ.... ವರದಿ: ರವಿಕುಮಾರ್ ಬಡಿಗೇರ. ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....! ವೀಕ್ಷಿಸಿ.. ವಿಶೇಷ.. ವರದಿ.... ವರದಿ: ರವಿಕುಮಾರ್ ಬಡಿಗೇರ.
    1
    ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....!

ವೀಕ್ಷಿಸಿ.. ವಿಶೇಷ.. ವರದಿ....

ವರದಿ: ರವಿಕುಮಾರ್ ಬಡಿಗೇರ.
ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....!
ವೀಕ್ಷಿಸಿ.. ವಿಶೇಷ.. ವರದಿ....
ವರದಿ: ರವಿಕುಮಾರ್ ಬಡಿಗೇರ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    5 hrs ago
  • ಲೋಕಕಲ್ಯಾಣಕ್ಕಾಗಿ 41 ದಿನಗಳ ಮೌನ ಅನುಷ್ಠಾನ ಶ್ರೀ ಈರಯ್ಯ ಸ್ವಾಮಿಗಳ ಧಾರ್ಮಿಕ ಸಂಕಲ್ಪ.! ಲೋಕಕಲ್ಯಾಣಕ್ಕಾಗಿ 41 ದಿನಗಳ ಮೌನ ಅನುಷ್ಠಾನ ಶ್ರೀ ಈರಯ್ಯ ಸ್ವಾಮಿಗಳ ಧಾರ್ಮಿಕ ಸಂಕಲ್ಪ.!
    1
    ಲೋಕಕಲ್ಯಾಣಕ್ಕಾಗಿ 41 ದಿನಗಳ ಮೌನ ಅನುಷ್ಠಾನ ಶ್ರೀ ಈರಯ್ಯ ಸ್ವಾಮಿಗಳ ಧಾರ್ಮಿಕ ಸಂಕಲ್ಪ.!
ಲೋಕಕಲ್ಯಾಣಕ್ಕಾಗಿ 41 ದಿನಗಳ ಮೌನ ಅನುಷ್ಠಾನ ಶ್ರೀ ಈರಯ್ಯ ಸ್ವಾಮಿಗಳ ಧಾರ್ಮಿಕ ಸಂಕಲ್ಪ.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.