logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸ್ವಕುಳಸಾಳಿ ಸಂಘದ ವತಿಯಿಂದ ನಗರದಲ್ಲಿ ಶ್ರೀ ಜಿಹ್ಹೇಶ್ವರಸ್ವಾಮಿ ಜಯಂತೋತ್ಸವ ಸಂಭ್ರಮ ಸಡಗರದಿಂದ ಆಚರಣೆ ಕನಕಪುರ:ತಾಲೂಕಿನ ಸ್ವಕುಳಸಾಳಿ ಸಂಘದ ವತಿಯಿಂದ ನಗರದ ಮೇಗಳಬೀದಿ ಜಿಹ್ಹೇಶ್ವರ ಪ್ರಾರ್ಥನ ಮಂದಿರದಲ್ಲಿ ಶ್ರೀ ಜಿಹ್ಹೇಶ್ವರಸ್ವಾಮಿ ಜಯಂತೋತ್ಸವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರಾರ್ಥನಾ ಮಂದಿರದಲ್ಲಿ ಜಮಾವಣೆಗೊಂಡ ಸ್ವಕುಳಸಾಳಿ ಸಮಾಜದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಇದಕ್ಕೆ ನೂರಾರು ಮಂದಿ ಸಾಕ್ಷಿಯಾದರು. ನಂತರ ಭರತನಾಟ್ಯ, ಸಂಗೀತ, ಭಜನೆ ಕಾರ್ಯಕ್ರಮಗಳು ನಡೆದವು. ನಗರದ 10 ವರ್ಷದ ಕುಮಾರಿ ವೈಷ್ಣವಿ ನಡೆಸಿಕೊಟ್ಟ ಭರತನಾಟ್ಯ ನೃತ್ಯ ಸಭಿಕರ ಮನಸೂರೆಗೊಂಡಿತು. ವಿದೂಷಿ ಮಮತ ಕಾತ್ಯಾಯಿನಿ ರವರಿಂದ ಸಂಗೀತ ಕಾರ್ಯಕ್ರಮ ಹಾಗೂ ಪೋಂದೆ ಶಂಕರ ತಂಡದಿಂದ ವೇದಘೋಷ ನಡೆಸಲಾಯಿತು. ಇದು ಸಭಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಅತಿ ಹೆಚ್ಚು ಅಂಕ ಪಡೆದ ಕುಮಾರಿ ಭುವನ ರವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಾಮೂಹಿಕ ಪ್ರಾರ್ಥನೆ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸ್ವಕುಳಸಾಳಿ ಸಂಘದ ತಾಲೂಕು ಅಧ್ಯಕ್ಷ ಮನೋಹರ, ಕಾರ್ಯದರ್ಶಿ ಝರಂಗ ಪರಮೇಶ್, ಉಪಾಧ್ಯಕ್ಷ ಢಗೆ ಕೃಷ್ಣಮೂರ್ತಿ, ಬೆಂಗಳೂರು ನಗರ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ, ಬಿ.ಎಸ್.ಎನ್.ಎಲ್ ನಿವೃತ್ತ ಇಂಜಿನಿಯರ್ ಕೃಷ್ಣಮೂರ್ತಿ, ಕಿದ್ವಾಯಿ ಆಸ್ಪತ್ರೆಯ ಸತ್ಯನಾರಾಯಣ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ರವೀಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

1 hr ago
user_ಶಿವು.ಎಸ್ ದೊಡ್ಡಆಲಹಳ್ಳಿ
ಶಿವು.ಎಸ್ ದೊಡ್ಡಆಲಹಳ್ಳಿ
Local News Reporter ಕನಕಪುರ, ರಾಮನಗರ, ಕರ್ನಾಟಕ•
1 hr ago
09023821-93e6-4727-9329-e923cb3949ce

ಸ್ವಕುಳಸಾಳಿ ಸಂಘದ ವತಿಯಿಂದ ನಗರದಲ್ಲಿ ಶ್ರೀ ಜಿಹ್ಹೇಶ್ವರಸ್ವಾಮಿ ಜಯಂತೋತ್ಸವ ಸಂಭ್ರಮ ಸಡಗರದಿಂದ ಆಚರಣೆ ಕನಕಪುರ:ತಾಲೂಕಿನ ಸ್ವಕುಳಸಾಳಿ ಸಂಘದ ವತಿಯಿಂದ ನಗರದ ಮೇಗಳಬೀದಿ ಜಿಹ್ಹೇಶ್ವರ ಪ್ರಾರ್ಥನ ಮಂದಿರದಲ್ಲಿ ಶ್ರೀ ಜಿಹ್ಹೇಶ್ವರಸ್ವಾಮಿ ಜಯಂತೋತ್ಸವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರಾರ್ಥನಾ ಮಂದಿರದಲ್ಲಿ ಜಮಾವಣೆಗೊಂಡ ಸ್ವಕುಳಸಾಳಿ ಸಮಾಜದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಇದಕ್ಕೆ ನೂರಾರು ಮಂದಿ ಸಾಕ್ಷಿಯಾದರು. ನಂತರ

dfb95f7e-10ac-4cab-8a62-1f6635e2d889

ಭರತನಾಟ್ಯ, ಸಂಗೀತ, ಭಜನೆ ಕಾರ್ಯಕ್ರಮಗಳು ನಡೆದವು. ನಗರದ 10 ವರ್ಷದ ಕುಮಾರಿ ವೈಷ್ಣವಿ ನಡೆಸಿಕೊಟ್ಟ ಭರತನಾಟ್ಯ ನೃತ್ಯ ಸಭಿಕರ ಮನಸೂರೆಗೊಂಡಿತು. ವಿದೂಷಿ ಮಮತ ಕಾತ್ಯಾಯಿನಿ ರವರಿಂದ ಸಂಗೀತ ಕಾರ್ಯಕ್ರಮ ಹಾಗೂ ಪೋಂದೆ ಶಂಕರ ತಂಡದಿಂದ ವೇದಘೋಷ ನಡೆಸಲಾಯಿತು. ಇದು ಸಭಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಅತಿ ಹೆಚ್ಚು ಅಂಕ ಪಡೆದ ಕುಮಾರಿ ಭುವನ ರವರಿಗೆ

93bff710-d719-4e0e-b3ba-ff381e6310d8

ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಾಮೂಹಿಕ ಪ್ರಾರ್ಥನೆ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸ್ವಕುಳಸಾಳಿ ಸಂಘದ ತಾಲೂಕು ಅಧ್ಯಕ್ಷ ಮನೋಹರ, ಕಾರ್ಯದರ್ಶಿ ಝರಂಗ ಪರಮೇಶ್, ಉಪಾಧ್ಯಕ್ಷ ಢಗೆ ಕೃಷ್ಣಮೂರ್ತಿ, ಬೆಂಗಳೂರು ನಗರ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ, ಬಿ.ಎಸ್.ಎನ್.ಎಲ್ ನಿವೃತ್ತ ಇಂಜಿನಿಯರ್ ಕೃಷ್ಣಮೂರ್ತಿ, ಕಿದ್ವಾಯಿ ಆಸ್ಪತ್ರೆಯ ಸತ್ಯನಾರಾಯಣ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ರವೀಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆಯಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ; ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಕನಕಪುರ:ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆ (ಟಿ.ಎ.ಪಿ.ಸಿ.ಎಂ.ಎಸ್) ನಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಹೇಳಿದರು. ಬುಧವಾರ ನಗರದ ರೈಸ್‍ಮಿಲ್ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅನಧಿಕೃತವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಸರ್ಕಾರ ನಿಯಮಗಳ ಪ್ರಕಾರವೇ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಸಂಘಟನೆಯ ವ್ಯಕ್ತಿಗಳು ದುರುದ್ದೇಶ ಪೂರ್ವಕವಾಗಿ ಪಡಿತರ ಪದಾರ್ಥಗಳ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ನಗರದ ಸಹಕಾರಿ ಸಂಘದ ಗೋಡೌನ್‍ನಿಂದ ಪಡಿತರ ಅಕ್ಕಿ ಹಾಗೂ ರಾಗಿ ಕಳ್ಳ ಸಾಗಣೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಿಕರಣ ನೀಡಿದ ಅವರು, ಪಡಿತರ ಆಹಾರ ಸಾಗಿಸಲು ಸಂಘದ ಸಾಗಾಣಿಕಾ ಲಾರಿಗಳ ಕೊರತೆಯಿಂದ ಪಡಿತರ ಸಾಗಿಸಲು ಸಂಘದ ಆಡಳಿತಾಧಿಕಾರಿಯ ಅನುಮತಿ ಪಡೆದು ಖಾಸಗಿ ಮಿನಿ ಲಾರಿಯಲ್ಲಿ ಪಡಿತರ ಆಹಾರ ಸಾಗಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು ಬಂದ ಕೆ.ಆರ್.ಸುರೇಶ್ ಎಂಬಾತ ಅಕ್ರಮವಾಗಿ ಗೋದಾಮು ಬಳಿ ಬಂದು ಸರಕು ತುಂಬಿದ್ದ ವಾಹನಗಳನ್ನು ತಡೆದು, ಕೆಲ ಸಂಘಟೆನಯ ಮುಖಂಡರುಗಳಿಗೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿ, ಸಂಘಕ್ಕೆ ಹಾಗೂ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬರಲಿ ಎಂದು ಸಂಚು ನಡೆಸಿರುವುದಾಗಿ ಆರೋಪಿಸಿದರು. ಉಪಾಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದಕ್ಕೆ ಸರ್ಕಾರ ಹಲವಾರು ಕಠಿಣ ಕಾನೂನು ತಂದಿದ್ದಾರೆ. ನಮ್ಮ ಸಂಸ್ಥೆಯಿಂದ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವುದಿಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುಲು ನಡೆಸಿರುವ ಹುನ್ನಾರ ಇದಾಗಿದೆ. ಸ್ಥಳೀಯವಾಗಿ ಹಿಂದೂ ಸಂಘಟನೆಯ ಹೆಸರಿನ ಕೆ.ಆರ್.ಸುರೇಶ್ ಹಾಗೂ ಸ್ಥಳೀಯ ಪತ್ರಕರ್ತರಿಬ್ಬರು ಸೇರಿದ ನಮ್ಮ ಸಂಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘದ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಮುಂದೆ ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ನಿರ್ದೇಶಕರಾದ ದೇವರಾಜು, ಶಿವಣ್ಣ ನವರು ಮಾತನಾಡಿ, ನಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದರು. ನಿರ್ದೇಶಕರಾದ ಶ್ರೀನಿವಾಸ್, ನಾಗರಾಜು, ನಾಗೇಶ್, ಸಿದ್ದರಾಜು, ಪುಟ್ಟಸ್ವಾಮಯ್ಯ ಗೋಷ್ಠಿಯಲ್ಲಿ ಹಾಜರಿದ್ದರು.
    1
    ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆಯಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ; ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್
ಕನಕಪುರ:ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಮಳಿಗೆ (ಟಿ.ಎ.ಪಿ.ಸಿ.ಎಂ.ಎಸ್) ನಲ್ಲಿ ಪಡಿತರ ಅಕ್ಕಿ-ರಾಗಿ ಮಾರಾಟ ಹಾಗೂ ಸಾಗಾಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ಚಿಕ್ಕೇನಹಳ್ಳಿ ವೆಂಕಟೇಶ್ ಹೇಳಿದರು. 
ಬುಧವಾರ ನಗರದ ರೈಸ್‍ಮಿಲ್ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅನಧಿಕೃತವಾಗಿ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ಸರ್ಕಾರ ನಿಯಮಗಳ ಪ್ರಕಾರವೇ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಸಂಘಟನೆಯ ವ್ಯಕ್ತಿಗಳು ದುರುದ್ದೇಶ ಪೂರ್ವಕವಾಗಿ ಪಡಿತರ ಪದಾರ್ಥಗಳ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. 
ನಗರದ ಸಹಕಾರಿ ಸಂಘದ ಗೋಡೌನ್‍ನಿಂದ ಪಡಿತರ ಅಕ್ಕಿ ಹಾಗೂ ರಾಗಿ ಕಳ್ಳ ಸಾಗಣೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಿಕರಣ ನೀಡಿದ ಅವರು, ಪಡಿತರ ಆಹಾರ ಸಾಗಿಸಲು ಸಂಘದ ಸಾಗಾಣಿಕಾ ಲಾರಿಗಳ ಕೊರತೆಯಿಂದ ಪಡಿತರ ಸಾಗಿಸಲು ಸಂಘದ ಆಡಳಿತಾಧಿಕಾರಿಯ ಅನುಮತಿ ಪಡೆದು ಖಾಸಗಿ ಮಿನಿ ಲಾರಿಯಲ್ಲಿ ಪಡಿತರ ಆಹಾರ ಸಾಗಿಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು ಬಂದ ಕೆ.ಆರ್.ಸುರೇಶ್ ಎಂಬಾತ ಅಕ್ರಮವಾಗಿ ಗೋದಾಮು ಬಳಿ ಬಂದು ಸರಕು ತುಂಬಿದ್ದ ವಾಹನಗಳನ್ನು ತಡೆದು, ಕೆಲ ಸಂಘಟೆನಯ ಮುಖಂಡರುಗಳಿಗೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿ, ಸಂಘಕ್ಕೆ ಹಾಗೂ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬರಲಿ ಎಂದು ಸಂಚು ನಡೆಸಿರುವುದಾಗಿ ಆರೋಪಿಸಿದರು.  
ಉಪಾಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದಕ್ಕೆ ಸರ್ಕಾರ ಹಲವಾರು ಕಠಿಣ ಕಾನೂನು ತಂದಿದ್ದಾರೆ. ನಮ್ಮ ಸಂಸ್ಥೆಯಿಂದ ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವುದಿಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತರುಲು ನಡೆಸಿರುವ ಹುನ್ನಾರ ಇದಾಗಿದೆ. ಸ್ಥಳೀಯವಾಗಿ ಹಿಂದೂ ಸಂಘಟನೆಯ ಹೆಸರಿನ ಕೆ.ಆರ್.ಸುರೇಶ್ ಹಾಗೂ ಸ್ಥಳೀಯ ಪತ್ರಕರ್ತರಿಬ್ಬರು ಸೇರಿದ ನಮ್ಮ ಸಂಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ನಮ್ಮ ಸಹಕಾರಿ ಸಂಘದ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಮುಂದೆ ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. 
ನಿರ್ದೇಶಕರಾದ ದೇವರಾಜು, ಶಿವಣ್ಣ ನವರು ಮಾತನಾಡಿ, ನಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದರು. 
ನಿರ್ದೇಶಕರಾದ ಶ್ರೀನಿವಾಸ್, ನಾಗರಾಜು, ನಾಗೇಶ್, ಸಿದ್ದರಾಜು, ಪುಟ್ಟಸ್ವಾಮಯ್ಯ ಗೋಷ್ಠಿಯಲ್ಲಿ ಹಾಜರಿದ್ದರು.
    user_ಶಿವು.ಎಸ್ ದೊಡ್ಡಆಲಹಳ್ಳಿ
    ಶಿವು.ಎಸ್ ದೊಡ್ಡಆಲಹಳ್ಳಿ
    Local News Reporter ಕನಕಪುರ, ರಾಮನಗರ, ಕರ್ನಾಟಕ•
    1 hr ago
  • ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆಗೆ 1,000 ಹಣ ಕೇಳಿರುವ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಗ್ರಾಮದ ಬಡ ಕುಟುಂಬದ ರೈತಾಪಿ ಜನರ ಮೇಲೆ ಚಿಕಿತ್ಸೆ ನೀಡಿ ಸರಿಪಡಿಸಬೇಕಾದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಬರೆದು ಉಚಿತ ಆಂಬುಲೆನ್ಸ್ ಸೇವೆ ಇದ್ದರೂ ಕೂಡ ವಯಸ್ಸಾದ ರೋಗಿಗಳ ಬಳಿ ಸಾವಿರ ರೂಪಾಯಿಗಳ ಸುಲಿಗೆ ಮಾಡಲು ಮುಂದಾಗಿದ್ದಾರೆ.
    1
    ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆಗೆ 1,000 ಹಣ ಕೇಳಿರುವ ಬಗ್ಗೆ 
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಗ್ರಾಮದ ಬಡ ಕುಟುಂಬದ ರೈತಾಪಿ ಜನರ ಮೇಲೆ ಚಿಕಿತ್ಸೆ ನೀಡಿ ಸರಿಪಡಿಸಬೇಕಾದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಬರೆದು ಉಚಿತ ಆಂಬುಲೆನ್ಸ್ ಸೇವೆ ಇದ್ದರೂ ಕೂಡ ವಯಸ್ಸಾದ ರೋಗಿಗಳ ಬಳಿ ಸಾವಿರ ರೂಪಾಯಿಗಳ ಸುಲಿಗೆ ಮಾಡಲು ಮುಂದಾಗಿದ್ದಾರೆ.
    user_Lankesh Raj Arasu
    Lankesh Raj Arasu
    Local News Reporter ಕನಕಪುರ, ರಾಮನಗರ, ಕರ್ನಾಟಕ•
    15 hrs ago
  • ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹೆಚ್ಚಾಗಿ ಬರಲು ಮುಂದಾದ ಯುವಕರು:ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ ಮಳವಳ್ಳಿ: ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಯುವಕರು ಹೆಚ್ಚಾಗಿ ಬರಲು ಮುಂದಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ ತಿಳಿಸಿದರು. ಮಳವಳ್ಳಿ ಪಟ್ಟಣದಲ್ಲಿ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷ ದೆಹಲಿ ಹಾಗೂ ಪಂಜಾಬ್ ನಲ್ಲಿ ಉತ್ತಮ ಅಧಿಕಾರ ನಡೆಸಿದ್ದು, ರಾಜ್ಯದ ಜನರು ಇಂತಹ ಅಧಿಕಾರವನ್ನು ಬಯಸುತ್ತಿದ್ದಾರೆ. ರಾಜಕೀಯ ಪಕ್ಷ ಬದಲಾಯಿಸುವ ಬದಲು ಜನರಿಗೆ ಅನುಕೂಲ ಮಾಡಬೇಕಾಗಿದೆ. ಇದಲ್ಲದೆ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹೊಣೆ ನಮ್ಮ ಜನರಿದ್ದಾಗಿದೆ ಎಂದರು. ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಸಂಘಟನೆ ಮಾಡಲು ಹೊರಟಿದೆ. ಎಂದರು. ಈ ವೇಳೆ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀಪ್ ಸಹಾನಿ, ಮಂಡ್ಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಾಸೀಮ್, ರಾಷ್ಟ್ರೀಯ ಸಂವಿಧಾನ ಪರ ವಿಚಾರ ವೇದಿಕೆ ಅಧ್ಯಕ್ಷ ಕೃಷ್ಣಕುಮಾರ ಸೇರಿದಂತೆ ಹಲವರು ಇದ್ದರು.
    1
    ರಾಜ್ಯದಲ್ಲಿ  ಆಮ್ ಆದ್ಮಿ  ಪಕ್ಷಕ್ಕೆ ಹೆಚ್ಚಾಗಿ ಬರಲು ಮುಂದಾದ ಯುವಕರು:ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ
ಮಳವಳ್ಳಿ: ರಾಜ್ಯದಲ್ಲಿ  ಆಮ್ ಆದ್ಮಿ  ಪಕ್ಷಕ್ಕೆ ಯುವಕರು  ಹೆಚ್ಚಾಗಿ  ಬರಲು ಮುಂದಾಗಿದ್ದಾರೆ  ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ  ತಿಳಿಸಿದರು.
ಮಳವಳ್ಳಿ ಪಟ್ಟಣದಲ್ಲಿ  ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷ ದೆಹಲಿ ಹಾಗೂ ಪಂಜಾಬ್  ನಲ್ಲಿ ಉತ್ತಮ ಅಧಿಕಾರ ನಡೆಸಿದ್ದು, ರಾಜ್ಯದ ಜನರು ಇಂತಹ ಅಧಿಕಾರವನ್ನು  ಬಯಸುತ್ತಿದ್ದಾರೆ. ರಾಜಕೀಯ ಪಕ್ಷ  ಬದಲಾಯಿಸುವ ಬದಲು  ಜನರಿಗೆ  ಅನುಕೂಲ ಮಾಡಬೇಕಾಗಿದೆ.
ಇದಲ್ಲದೆ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹೊಣೆ ನಮ್ಮ ಜನರಿದ್ದಾಗಿದೆ  ಎಂದರು.
ಆಮ್ ಆದ್ಮಿ ಪಕ್ಷ  ರಾಜ್ಯದಲ್ಲಿ ಸಂಘಟನೆ ಮಾಡಲು ಹೊರಟಿದೆ.  ಎಂದರು.
ಈ ವೇಳೆ   ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀಪ್ ಸಹಾನಿ, ಮಂಡ್ಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಾಸೀಮ್,  ರಾಷ್ಟ್ರೀಯ ಸಂವಿಧಾನ ಪರ  ವಿಚಾರ ವೇದಿಕೆ ಅಧ್ಯಕ್ಷ ಕೃಷ್ಣಕುಮಾರ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    15 min ago
  • ಅಲುಗಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಸಾರ್ವಜನಿಕರಲ್ಲಿ ಆತಂಕ ಕೋಟಿಗಟ್ಟಲೆ ಯೋಜನೆ ಕಳಪೆ ಸಂಶಯ ಅಲಗಾಡುತ್ತಿದೆ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಜನರಲ್ಲಿ ಆತಂಕ ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 948 ರಸ್ತೆಗೆ ಸತ್ತಿಗಾಲ ಬಳಿ ನಿರ್ಮಿಸಿರುವ ಹೊಸ ಮೇಲ್ ಸೇತುವೆ ಅಲುಗಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಕಳೆದ ವಾರ ಸತಿಗಾಲ ಸೇತುವೆ ಬಳಿ ನಿಂತುಕೊಂಡು ಕಾವೇರಿ ನದಿಯ ನೀರು ಹರಿಯುವಿಕೆ ಹಾಗೂ ಸುತ್ತಮುತ್ತಲ ಸುಂದರ ವಾತಾವರಣವನ್ನು ನೋಡುತ್ತಿದ್ದ ಹಲವಾರು ಜನರು ಸತ್ತಿಗಾಲ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವಾಹನಗಳು ಹೋಗುವಾಗ ಬರುವಾಗ ಅದರಲ್ಲೂ ಅತಿ ಭಾರವಾದ ವಾಹನಗಳು ಸಂಚರಿಸುವಾಗ ಈ ಸೇತುವೆ ಅಲಗಾಡುತ್ತಿರುವ ರೋಮಾಂಚನ ಹಾಗೂ ಭಯದ ವಾತಾವರಣ ಸೃಷ್ಟಿಯಾಯಿತು ಇದು ಇತ್ತೀಚಿಗೆ ನಿರ್ಮಿಸಿರುವ ಸೇತುವೆಯಾಗಿದೆ ಹಳೆಯ ಸೇತುವೆ ಇದಕ್ಕಿಂತ ತುಂಬಾ ಉತ್ತಮ ವಿನ್ನಬಹುದಾಗಿದೆ. ಈ ಕಾಮಗಾರಿಗು ಮುನ್ನ ಹಳೆಯ ಸೇತುವೆಯ ಪುನರ್ ನಿರ್ಮಾಣ ಆಗಿತ್ತು ಅದಕ್ಕೆ ಮೂರು ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿತ್ತು 948 ನಂತರ ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇದಕ್ಕೆ ಹೊಸ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಈ ಸೇತುವೆಯ ಕಾಮಗಾರಿ ಕಳಪೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ ಏಕೆಂದರೆ ವಾಹನಗಳು ಸಂಚರಿಸುವಾಗ ಸೇತುವೆ ಭೂಕಂಪವಾದಾಗ ಯಾವ ರೀತಿ ಅಲುಗಾಡುತ್ತದೆ, ಶಬ್ದ ಅನುಭವ ಆಗುತ್ತದೋ ಆ ರೀತಿಯಲ್ಲಿ ಇಲ್ಲಿ ಶಬ್ದ ಬರುತ್ತದೆ ಇದು ಇದು ಕಳಪೆ ಕಾಮಗಾರಿಯೂ ಅಥವಾ ಆಧುನಿಕ ತಂತ್ರಜ್ಞಾನವು ಎಂಬ ಅನುಮಾನ ಮೂಡಿಸಿದೆ ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದರ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಯಾವುದೇ ಆತಂಕ ಅಡ್ಡಿ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ
    1
    ಅಲುಗಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಸಾರ್ವಜನಿಕರಲ್ಲಿ ಆತಂಕ ಕೋಟಿಗಟ್ಟಲೆ ಯೋಜನೆ ಕಳಪೆ ಸಂಶಯ
ಅಲಗಾಡುತ್ತಿದೆ ರಾಷ್ಟ್ರೀಯ  ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಜನರಲ್ಲಿ ಆತಂಕ
ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 948 ರಸ್ತೆಗೆ ಸತ್ತಿಗಾಲ ಬಳಿ ನಿರ್ಮಿಸಿರುವ ಹೊಸ ಮೇಲ್ ಸೇತುವೆ ಅಲುಗಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತಪಡಿಸಿದೆ.
ಈ ಬಗ್ಗೆ ಕಳೆದ ವಾರ ಸತಿಗಾಲ ಸೇತುವೆ ಬಳಿ ನಿಂತುಕೊಂಡು ಕಾವೇರಿ ನದಿಯ ನೀರು ಹರಿಯುವಿಕೆ ಹಾಗೂ ಸುತ್ತಮುತ್ತಲ ಸುಂದರ ವಾತಾವರಣವನ್ನು ನೋಡುತ್ತಿದ್ದ ಹಲವಾರು ಜನರು ಸತ್ತಿಗಾಲ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವಾಹನಗಳು ಹೋಗುವಾಗ ಬರುವಾಗ ಅದರಲ್ಲೂ ಅತಿ ಭಾರವಾದ ವಾಹನಗಳು ಸಂಚರಿಸುವಾಗ ಈ ಸೇತುವೆ  ಅಲಗಾಡುತ್ತಿರುವ ರೋಮಾಂಚನ ಹಾಗೂ ಭಯದ ವಾತಾವರಣ ಸೃಷ್ಟಿಯಾಯಿತು
ಇದು ಇತ್ತೀಚಿಗೆ ನಿರ್ಮಿಸಿರುವ ಸೇತುವೆಯಾಗಿದೆ ಹಳೆಯ ಸೇತುವೆ ಇದಕ್ಕಿಂತ ತುಂಬಾ ಉತ್ತಮ ವಿನ್ನಬಹುದಾಗಿದೆ.
ಈ ಕಾಮಗಾರಿಗು ಮುನ್ನ ಹಳೆಯ ಸೇತುವೆಯ ಪುನರ್ ನಿರ್ಮಾಣ ಆಗಿತ್ತು ಅದಕ್ಕೆ ಮೂರು ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿತ್ತು 948 ನಂತರ ರಾಷ್ಟ್ರೀಯ ಹೆದ್ದಾರಿ   ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇದಕ್ಕೆ ಹೊಸ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಈ ಸೇತುವೆಯ ಕಾಮಗಾರಿ ಕಳಪೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ ಏಕೆಂದರೆ ವಾಹನಗಳು ಸಂಚರಿಸುವಾಗ ಸೇತುವೆ ಭೂಕಂಪವಾದಾಗ ಯಾವ ರೀತಿ ಅಲುಗಾಡುತ್ತದೆ, ಶಬ್ದ ಅನುಭವ ಆಗುತ್ತದೋ ಆ ರೀತಿಯಲ್ಲಿ ಇಲ್ಲಿ ಶಬ್ದ ಬರುತ್ತದೆ ಇದು ಇದು ಕಳಪೆ ಕಾಮಗಾರಿಯೂ ಅಥವಾ ಆಧುನಿಕ ತಂತ್ರಜ್ಞಾನವು ಎಂಬ ಅನುಮಾನ ಮೂಡಿಸಿದೆ ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದರ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಯಾವುದೇ ಆತಂಕ ಅಡ್ಡಿ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • ಜನಾರ್ದನ್ ರೆಡ್ಡಿ ಬಗ್ಗೆ ನಾನೇನು ಹೇಳೋಕೆ ಆಗಲ್ಲ ಜನಾರ್ದನ್ ರೆಡ್ಡಿ ಬಗ್ಗೆ ನಾನೇನು ಹೇಳೋಕೆ ಆಗಲ್ಲ ಜನಾರ್ದನ್ ರೆಡ್ಡಿ ಬಗ್ಗೆ ನಾನೇನು ಹೇಳೋಕೆ ಆಗಲ್ಲ. citynextnews247
    1
    ಜನಾರ್ದನ್ ರೆಡ್ಡಿ ಬಗ್ಗೆ ನಾನೇನು ಹೇಳೋಕೆ ಆಗಲ್ಲ
ಜನಾರ್ದನ್ ರೆಡ್ಡಿ ಬಗ್ಗೆ ನಾನೇನು ಹೇಳೋಕೆ ಆಗಲ್ಲ
ಜನಾರ್ದನ್ ರೆಡ್ಡಿ ಬಗ್ಗೆ ನಾನೇನು ಹೇಳೋಕೆ ಆಗಲ್ಲ. citynextnews247
    user_Yusuf Bepari
    Yusuf Bepari
    Local News Reporter ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    16 hrs ago
  • ಪುನೀತ್ ಕೆರೆಹಳ್ಳಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ದಾಖಲು ಪುನೀತ್ ಕೆರೆಹಳ್ಳಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ದಾಖಲು
    1
    ಪುನೀತ್ ಕೆರೆಹಳ್ಳಿ ಹಾಗೂ ಅವರ 
ಬೆಂಬಲಿಗರ ವಿರುದ್ಧ ದೂರು ದಾಖಲು 
ಪುನೀತ್ ಕೆರೆಹಳ್ಳಿ ಹಾಗೂ ಅವರ 
ಬೆಂಬಲಿಗರ ವಿರುದ್ಧ ದೂರು ದಾಖಲು
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಪಕ್ಷದಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳು: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಗರ ನಿವಾಸದ ಬಳಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿಗಳಿವೆಯಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ಬುಧವಾರ ಈ ರೀತಿ ಪ್ರತಿಕ್ರಿಯಿಸಿದರು.
    1
    ಪಕ್ಷದಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳು: ಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರು ಸೇರಿ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಗರ ನಿವಾಸದ ಬಳಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿಗಳಿವೆಯಲ್ಲಾ ಎಂದು ಕೇಳಿದಾಗ ಶಿವಕುಮಾರ್ ಅವರು ಬುಧವಾರ ಈ ರೀತಿ ಪ್ರತಿಕ್ರಿಯಿಸಿದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • ಬೈಕ್ ವೀಲಿಂಗ್ ಪುಂಡರ ಹಾವಳಿ ಕಗ್ಗಲಹಳ್ಳಿ ಮುಖ್ಯ ರಸ್ತೆಯಲ್ಲಿ ಅಪಾಯಕಾರಿ ವೀಲಿಂಗ್; ಪ್ರಯಾಣಿಕರ ಮೊಬೈಲ್‌ನಲ್ಲಿ ದೃಶ್ಯ ಸೆರೆ ಕನಕಪುರ: ಕನಕಪುರ ರಸ್ತೆಯ ಕಗ್ಗಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದೆ. ಸೋಮನಹಳ್ಳಿ ಟೋಲ್‌ನಿಂದ ಹಾರೋಹಳ್ಳಿ ಕಡೆಗೆ ತೆರಳುವ ಮಾರ್ಗದಲ್ಲಿ ಕೆಲ ಯುವಕರು ಬೈಕ್‌ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಾ ಸಂಚರಿಸಿರುವ ದೃಶ್ಯಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆಯಲ್ಲೇ ವೀಲಿಂಗ್ ನಡೆಸುತ್ತಿರುವುದರಿಂದ ಇತರ ವಾಹನ ಸವಾರರು ಹಾಗೂ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ವೀಲಿಂಗ್ ವೇಳೆ ನಿಯಂತ್ರಣ ತಪ್ಪಿದರೆ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕಳವಳಗೊಂಡಿದ್ದಾರೆ. ಪೊಲೀಸರು ಹಲವು ಬಾರಿ ಜಾಗೃತಿ ಮೂಡಿಸಿ, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಂಡರೂ ವೀಲಿಂಗ್ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿ ವೀಲಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂಬುದು ವಾಹನ ಸವಾರರ ಆಗ್ರಹವಾಗಿದೆ
    1
    ಬೈಕ್ ವೀಲಿಂಗ್ ಪುಂಡರ ಹಾವಳಿ ಕಗ್ಗಲಹಳ್ಳಿ ಮುಖ್ಯ ರಸ್ತೆಯಲ್ಲಿ ಅಪಾಯಕಾರಿ ವೀಲಿಂಗ್; ಪ್ರಯಾಣಿಕರ ಮೊಬೈಲ್‌ನಲ್ಲಿ ದೃಶ್ಯ ಸೆರೆ
ಕನಕಪುರ: ಕನಕಪುರ ರಸ್ತೆಯ ಕಗ್ಗಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದೆ.
ಸೋಮನಹಳ್ಳಿ ಟೋಲ್‌ನಿಂದ ಹಾರೋಹಳ್ಳಿ ಕಡೆಗೆ ತೆರಳುವ ಮಾರ್ಗದಲ್ಲಿ ಕೆಲ ಯುವಕರು ಬೈಕ್‌ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಾ ಸಂಚರಿಸಿರುವ ದೃಶ್ಯಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆಯಲ್ಲೇ ವೀಲಿಂಗ್ ನಡೆಸುತ್ತಿರುವುದರಿಂದ ಇತರ ವಾಹನ ಸವಾರರು ಹಾಗೂ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ವೀಲಿಂಗ್ ವೇಳೆ ನಿಯಂತ್ರಣ ತಪ್ಪಿದರೆ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕಳವಳಗೊಂಡಿದ್ದಾರೆ.
ಪೊಲೀಸರು ಹಲವು ಬಾರಿ ಜಾಗೃತಿ ಮೂಡಿಸಿ, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಂಡರೂ ವೀಲಿಂಗ್ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ.
ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿ ವೀಲಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂಬುದು ವಾಹನ ಸವಾರರ  ಆಗ್ರಹವಾಗಿದೆ
    user_ಶಿವು.ಎಸ್ ದೊಡ್ಡಆಲಹಳ್ಳಿ
    ಶಿವು.ಎಸ್ ದೊಡ್ಡಆಲಹಳ್ಳಿ
    Local News Reporter ಕನಕಪುರ, ರಾಮನಗರ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.