logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವ್ಯವಸ್ಥೆಯ ಅಂಕುಡೊಂಕು ತಿದ್ದದಿದ್ದರೆ ಆತ ಲೇಖಕನೇ ಅಲ್ಲ - ಕುಂ. ವೀರಭದ್ರಪ್ಪ "ಅಧಿಕಾರ ಮತ್ತು ಹಣದ ಆಮಿಷಕ್ಕೆ ಸಾಹಿತಿಗಳು ಶರಣಾಗಬಾರದು. ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರಿಸುವ ಧೈರ್ಯ ಇಲ್ಲದಿದ್ದರೆ ಆತ ಲೇಖಕನಾಗಲು ಅನರ್ಹ," ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ (ಕುಂವೀ) ಮಾರ್ಮಿಕವಾಗಿ ನುಡಿದರು. ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ (ATNCC) ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಅವರು ಅನುವಾದಿಸಿದ ಖ್ಯಾತ ತೆಲುಗು ಲೇಖಕ ಮಾರುತಿ ಪೌರೋಹಿತಂ ಅವರ ಅರೆ ಐತಿಹಾಸಿಕ ತೆಲುಗು ಕಾದಂಬರಿ 'ಪ್ರಣಯ ಹಂಪಿ' ಬಿಡುಗಡೆ ಮಾಡಿ ಅವರು ಮಾತನಾಡಿದರು. ಮೊನಚು ವಿಡಂಬನೆಯ ಮೂಲಕ ಇಡೀ ಸಭಾಂಗಣದಲ್ಲಿ ನಗೆಯ ಅಲೆ ಎಬ್ಬಿಸುತ್ತಲೇ ಗಂಭೀರ ಚಿಂತನೆಗಳನ್ನು ಮಂಡಿಸಿದರು. ಪ್ರಣಯ ಹಂಪಿ' ಕೃತಿಯು ಇತಿಹಾಸದ ಹಿನ್ನೆಲೆಯುಳ್ಳ ಕಾಲ್ಪನಿಕ ಕಥಾಹಂದರವನ್ನು ಹೊಂದಿದೆ."ಐತಿಹಾಸಿಕ ಕಾದಂಬರಿಗಳಲ್ಲಿ ಇತಿಹಾಸವನ್ನು ಸಂಪೂರ್ಣವಾಗಿ ಯಥಾವತ್ತಾಗಿ ಹೇಳಲು ಸಾಧ್ಯವಿಲ್ಲ, ಅಲ್ಲಿ ಕಲ್ಪನೆಯ ಬೆಸುಗೆ ಅನಿವಾರ್ಯ. ತ.ರಾ.ಸು ಅವರಂತಹ ಮಹಾನ್ ಲೇಖಕರ ಕೃತಿಗಳು ನಮಗೆ ಈ ನಿಟ್ಟಿನಲ್ಲಿ ಮಾದರಿ," ಎಂದು ಅಭಿಪ್ರಾಯಪಟ್ಟರು. ಇಂದಿನ ರಾಜಕೀಯ ಲಾಭಕೋರತನವನ್ನು ತರಾಟೆಗೆ ತೆಗೆದುಕೊಂಡ ಕುಂವಿ, "ಒಮ್ಮೆ ಎಂಎಲ್ಸಿ ಆಗಿಬಿಟ್ಟರೆ ಸಾಕು, ಸಾಯುವವರೆಗೂ ತಿಂಗಳಿಗೆ 2.75 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತದೆ. ಇಂತಹ ಸೌಲಭ್ಯಗಳಿಗಾಗಿಯೇ ಇವತ್ತು ಎಲ್ಲರೂ ರಾಜಕೀಯದ ಹಿಂದೆ ಬೀಳುತ್ತಿದ್ದಾರೆ. ಆದರೆ ಲೇಖಕ ಈ ವ್ಯವಸ್ಥೆಯ ಅಸ್ಪೃಶ್ಯನಾಗಿ ಉಳಿಯಬೇಕು. ಅಧಿಕಾರಕ್ಕೆ ಬಾಗಿ ಸೌಲಭ್ಯ ಪಡೆಯುವ ಬದಲು, ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದುವ 'ಕಾಮನ್ ಸೆನ್ಸ್' ಬೆಳೆಸಿಕೊಳ್ಳಬೇಕು ಎಂದರು. ಲೇಖಕರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ರಾಜಕಾರಣಿಗಳು ಕೇವಲ ಅಧಿಕಾರ ಮತ್ತು ಸೌಲಭ್ಯಗಳಿಗಾಗಿ ಹಪಹಪಿಸದೆ, ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಕರೆ ನೀಡಿದರು. ಇತಿಹಾಸವನ್ನು ಕೇವಲ ದಾಖಲೆಗಳ ಮೂಲಕ ನೋಡಬಾರದು. ಅಲ್ಲಿ ಕಲ್ಪನೆಯ ಬೆಸುಗೆ ಇರಬೇಕು. 'ಪ್ರಣಯ ಹಂಪಿ' ಕೂಡ ಹಂಪಿಯ ವೈಭವವನ್ನು ಹೊಸ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟಿದೆ. ಈ ಕೃತಿ ಬಿಡುಗಡೆ ಮಾಡಿದ್ದಕ್ಕೆ ನನ್ನ ಆರೋಗ್ಯವೇ ಸುಧಾರಿಸಿದಷ್ಟು ಸಂತೋಷವಾಗಿದೆ," ಎಂದು ಪ್ರಕಾಶಕರಿಗೆ ಬೆನ್ನು ತಟ್ಟಿದರು ಇಂದಿನ ಡಿಜಿಟಲ್ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಂ ವೀ "ಮಕ್ಕಳು ಮೊಬೈಲ್ ಇಲ್ಲದೆ ಊಟ ಮಾಡದ ಸ್ಥಿತಿಗೆ ತಲುಪಿದ್ದಾರೆ. ಮಹಿಳೆಯರು ಧಾರಾವಾಹಿಗಳಲ್ಲಿ ಬಂಧಿಯಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಸರ್ಕಾರಗಳು ಪುಸ್ತಕ ಖರೀದಿಯನ್ನು ನಿಲ್ಲಿಸಿ ಪ್ರಕಾಶಕರನ್ನು ಕಂಗೆಡಿಸಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೇಖಕರ ಮತ್ತು ಪ್ರಕಾಶಕರ ಹಿತ ಕಾಪಾಡಲಿ," ಎಂದು ಒತ್ತಾಯಿಸಿದರು. ಕುಂ ವೀ ಅವರು ಶಿವಮೊಗ್ಗದ 'ಆಲಾಪ' ಅಂತಹ ಸಂಗೀತ ಮತ್ತು ಸಾಹಿತ್ಯಿಕ ಚಟುವಟಿಕೆಗಳು ಪುನರಾರಂಭಗೊಳ್ಳಬೇಕೆಂಬ ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿಮರ್ಶಕಿ ಮತ್ತು ಲೇಖಕಿ ಪ್ರೊ ಸವಿತಾ ಬನ್ನಾಡಿ, ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಲೇಖಕ ಡಾ ಎಚ್ ಎಸ್ ನಾಗಭೂಷಣ್ , ಖ್ಯಾತ ತೆಲುಗು ಲೇಖಕ ಮಾರುತಿ ಪೌರೋಹಿತಂ ಹಾಗೂ ಸುವ್ವಿ ಪ್ರಕಾಶನದ ಬಿ ಎನ್ ಸುನಿಲ್ ಕುಮಾರ್ ಹಿರಿಯ ಸಾಹಿತಿಗಳು, ಗಣ್ಯರು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಿಡುಗಡೆಗೊಂಡ ಕಾದಂಬರಿಯನ್ನು ಕೊಂಡು ಕುಂ ವೀರಭದ್ರಪ್ಪನವರ ಹಸ್ತಾಕ್ಷರ ಪಡೆದು ಸಂಭ್ರಮಿಸಿದ್ದು ವಿಶೇಷವಾಗಿತ್ತು.

2 hrs ago
user_Press Narashimha swamy SN
Press Narashimha swamy SN
ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
2 hrs ago
1cbf895d-46dd-499a-b434-cda76cd93acb

ವ್ಯವಸ್ಥೆಯ ಅಂಕುಡೊಂಕು ತಿದ್ದದಿದ್ದರೆ ಆತ ಲೇಖಕನೇ ಅಲ್ಲ - ಕುಂ. ವೀರಭದ್ರಪ್ಪ "ಅಧಿಕಾರ ಮತ್ತು ಹಣದ ಆಮಿಷಕ್ಕೆ ಸಾಹಿತಿಗಳು ಶರಣಾಗಬಾರದು. ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರಿಸುವ ಧೈರ್ಯ ಇಲ್ಲದಿದ್ದರೆ ಆತ ಲೇಖಕನಾಗಲು ಅನರ್ಹ," ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ (ಕುಂವೀ) ಮಾರ್ಮಿಕವಾಗಿ ನುಡಿದರು. ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ (ATNCC) ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಅವರು ಅನುವಾದಿಸಿದ ಖ್ಯಾತ ತೆಲುಗು ಲೇಖಕ ಮಾರುತಿ ಪೌರೋಹಿತಂ ಅವರ ಅರೆ ಐತಿಹಾಸಿಕ ತೆಲುಗು ಕಾದಂಬರಿ 'ಪ್ರಣಯ ಹಂಪಿ' ಬಿಡುಗಡೆ ಮಾಡಿ ಅವರು ಮಾತನಾಡಿದರು. ಮೊನಚು ವಿಡಂಬನೆಯ ಮೂಲಕ ಇಡೀ ಸಭಾಂಗಣದಲ್ಲಿ ನಗೆಯ

eb56341a-a5de-427b-9cb9-05315c70cb16

ಅಲೆ ಎಬ್ಬಿಸುತ್ತಲೇ ಗಂಭೀರ ಚಿಂತನೆಗಳನ್ನು ಮಂಡಿಸಿದರು. ಪ್ರಣಯ ಹಂಪಿ' ಕೃತಿಯು ಇತಿಹಾಸದ ಹಿನ್ನೆಲೆಯುಳ್ಳ ಕಾಲ್ಪನಿಕ ಕಥಾಹಂದರವನ್ನು ಹೊಂದಿದೆ."ಐತಿಹಾಸಿಕ ಕಾದಂಬರಿಗಳಲ್ಲಿ ಇತಿಹಾಸವನ್ನು ಸಂಪೂರ್ಣವಾಗಿ ಯಥಾವತ್ತಾಗಿ ಹೇಳಲು ಸಾಧ್ಯವಿಲ್ಲ, ಅಲ್ಲಿ ಕಲ್ಪನೆಯ ಬೆಸುಗೆ ಅನಿವಾರ್ಯ. ತ.ರಾ.ಸು ಅವರಂತಹ ಮಹಾನ್ ಲೇಖಕರ ಕೃತಿಗಳು ನಮಗೆ ಈ ನಿಟ್ಟಿನಲ್ಲಿ ಮಾದರಿ," ಎಂದು ಅಭಿಪ್ರಾಯಪಟ್ಟರು. ಇಂದಿನ ರಾಜಕೀಯ ಲಾಭಕೋರತನವನ್ನು ತರಾಟೆಗೆ ತೆಗೆದುಕೊಂಡ ಕುಂವಿ, "ಒಮ್ಮೆ ಎಂಎಲ್ಸಿ ಆಗಿಬಿಟ್ಟರೆ ಸಾಕು, ಸಾಯುವವರೆಗೂ ತಿಂಗಳಿಗೆ 2.75 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತದೆ. ಇಂತಹ ಸೌಲಭ್ಯಗಳಿಗಾಗಿಯೇ ಇವತ್ತು ಎಲ್ಲರೂ ರಾಜಕೀಯದ ಹಿಂದೆ ಬೀಳುತ್ತಿದ್ದಾರೆ. ಆದರೆ ಲೇಖಕ ಈ ವ್ಯವಸ್ಥೆಯ ಅಸ್ಪೃಶ್ಯನಾಗಿ ಉಳಿಯಬೇಕು. ಅಧಿಕಾರಕ್ಕೆ ಬಾಗಿ ಸೌಲಭ್ಯ ಪಡೆಯುವ ಬದಲು, ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದುವ 'ಕಾಮನ್ ಸೆನ್ಸ್' ಬೆಳೆಸಿಕೊಳ್ಳಬೇಕು

cd5dcdf2-ac18-4e68-9afc-a1dbbfb9b6d1

ಎಂದರು. ಲೇಖಕರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ರಾಜಕಾರಣಿಗಳು ಕೇವಲ ಅಧಿಕಾರ ಮತ್ತು ಸೌಲಭ್ಯಗಳಿಗಾಗಿ ಹಪಹಪಿಸದೆ, ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಕರೆ ನೀಡಿದರು. ಇತಿಹಾಸವನ್ನು ಕೇವಲ ದಾಖಲೆಗಳ ಮೂಲಕ ನೋಡಬಾರದು. ಅಲ್ಲಿ ಕಲ್ಪನೆಯ ಬೆಸುಗೆ ಇರಬೇಕು. 'ಪ್ರಣಯ ಹಂಪಿ' ಕೂಡ ಹಂಪಿಯ ವೈಭವವನ್ನು ಹೊಸ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟಿದೆ. ಈ ಕೃತಿ ಬಿಡುಗಡೆ ಮಾಡಿದ್ದಕ್ಕೆ ನನ್ನ ಆರೋಗ್ಯವೇ ಸುಧಾರಿಸಿದಷ್ಟು ಸಂತೋಷವಾಗಿದೆ," ಎಂದು ಪ್ರಕಾಶಕರಿಗೆ ಬೆನ್ನು ತಟ್ಟಿದರು ಇಂದಿನ ಡಿಜಿಟಲ್ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಂ ವೀ "ಮಕ್ಕಳು ಮೊಬೈಲ್ ಇಲ್ಲದೆ ಊಟ ಮಾಡದ ಸ್ಥಿತಿಗೆ ತಲುಪಿದ್ದಾರೆ. ಮಹಿಳೆಯರು ಧಾರಾವಾಹಿಗಳಲ್ಲಿ ಬಂಧಿಯಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಸರ್ಕಾರಗಳು ಪುಸ್ತಕ ಖರೀದಿಯನ್ನು ನಿಲ್ಲಿಸಿ

f33c27e6-8190-4e2f-87cb-3bcab387b681

ಪ್ರಕಾಶಕರನ್ನು ಕಂಗೆಡಿಸಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೇಖಕರ ಮತ್ತು ಪ್ರಕಾಶಕರ ಹಿತ ಕಾಪಾಡಲಿ," ಎಂದು ಒತ್ತಾಯಿಸಿದರು. ಕುಂ ವೀ ಅವರು ಶಿವಮೊಗ್ಗದ 'ಆಲಾಪ' ಅಂತಹ ಸಂಗೀತ ಮತ್ತು ಸಾಹಿತ್ಯಿಕ ಚಟುವಟಿಕೆಗಳು ಪುನರಾರಂಭಗೊಳ್ಳಬೇಕೆಂಬ ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿಮರ್ಶಕಿ ಮತ್ತು ಲೇಖಕಿ ಪ್ರೊ ಸವಿತಾ ಬನ್ನಾಡಿ, ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಲೇಖಕ ಡಾ ಎಚ್ ಎಸ್ ನಾಗಭೂಷಣ್ , ಖ್ಯಾತ ತೆಲುಗು ಲೇಖಕ ಮಾರುತಿ ಪೌರೋಹಿತಂ ಹಾಗೂ ಸುವ್ವಿ ಪ್ರಕಾಶನದ ಬಿ ಎನ್ ಸುನಿಲ್ ಕುಮಾರ್ ಹಿರಿಯ ಸಾಹಿತಿಗಳು, ಗಣ್ಯರು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಿಡುಗಡೆಗೊಂಡ ಕಾದಂಬರಿಯನ್ನು ಕೊಂಡು ಕುಂ ವೀರಭದ್ರಪ್ಪನವರ ಹಸ್ತಾಕ್ಷರ ಪಡೆದು ಸಂಭ್ರಮಿಸಿದ್ದು ವಿಶೇಷವಾಗಿತ್ತು.

More news from ಕರ್ನಾಟಕ and nearby areas
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    9 hrs ago
  • *ಅಮೂಲ್ಯ ಸ್ನೇಹಕ್ಕೆ ಒಂದು ಹೃದಯಸ್ಪರ್ಶಿ ನಮನ - ಸಿ.ಎಂ. ಶ್ರೀನಿವಾಸ್ ಅವರಿಗೆ ಜನ್ಮದಿನದ ಶುಭಾಶಯಗಳು* ಮಾನವನ ಜೀವನದಲ್ಲಿ ಹಲವು ಸಂಬಂಧಗಳು ಬರುತ್ತವೆ, ಹೋಗುತ್ತವೆ. ಆದರೆ ಕೆಲವು ಸಂಬಂಧಗಳು ಕಾಲವನ್ನು ಮೀರಿ, ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಅಪರೂಪದ, ಅಮೂಲ್ಯ ಸ್ನೇಹದ ಪ್ರತಿರೂಪವೇ *ಸಿ.ಎಂ. ಶ್ರೀನಿವಾಸ್.* ತಮ್ಮ ಪ್ರಾಣಕ್ಕಿಂತಲೂ ಅಮೂಲ್ಯನಾದ ಆತ್ಮೀಯ ಗೆಳೆಯನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಾ, ಸ್ನೇಹಿತ *ಸರ್ದಾರ್ ಯಮನೂರಪ್ಪ* ಅವರು ಹೃದಯ ತುಂಬಿದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಲ್ಲಿ ವ್ಯಕ್ತವಾಗುವ ಸ್ನೇಹದ ಆಳ, ನಂಬಿಕೆ ಮತ್ತು ಪ್ರೀತಿ ನಿಜಕ್ಕೂ ಮನಸ್ಸನ್ನು ತಟ್ಟುತ್ತದೆ. ನಂಬಿಕೆ, ಒಲವು ಮತ್ತು ಅಪ್ಪಣೆಯ ಪ್ರತೀಕ “ನಿನ್ನ ಹೆಸರು ಕೇಳುತ್ತಿದ್ದಂತೆ ನನ್ನ ಮನಸ್ಸಿಗೆ ಬರುವ ಮೊದಲ ಭಾವನೆ ನಂಬಿಕೆ, ಒಲವು ಮತ್ತು ಅಪ್ಪಣೆ” ಎನ್ನುವ ಮಾತುಗಳು, *ಶ್ರೀನಿವಾಸ್* ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ವಿವರಿಸುತ್ತವೆ. ಬಾಲ್ಯದ ಆ ಚಿನ್ನದ ದಿನಗಳಿಂದ ಇಂದಿನವರೆಗೂ, ಇಬ್ಬರ ಸ್ನೇಹವು ಅನೇಕ ನೆನಪುಗಳ ಅಮೂಲ್ಯ ಸಂಗ್ರಹವಾಗಿದೆ. ಧೈರ್ಯ ಮತ್ತು ಮಂದಹಾಸದ ವ್ಯಕ್ತಿತ್ವ ಶ್ರೀನಿವಾಸ್ ಅವರ ಧೈರ್ಯವು ಅವರ ಗುರುತು. ಎಷ್ಟೇ ಸಂಕಷ್ಟಗಳಿದ್ದರೂ, ಮುಖದಲ್ಲಿ ಸದಾ ಮಂದಹಾಸ ಇಡುವ ಗುಣವು ಸಾಮಾನ್ಯವಲ್ಲ. ನೋವುಗಳನ್ನು ಮನಸ್ಸಿನಲ್ಲಿ ಹೊತ್ತುಕೊಂಡು, ಹೊರಗೆ ಸಂತೋಷವನ್ನು ಹಂಚುವ ಮನೋಭಾವವು ಮಹತ್ವದ ಮನಸ್ಸಿನ ಲಕ್ಷಣವಾಗಿದೆ. "ನಿಸ್ವಾರ್ಥ ಸ್ನೇಹದ ಸಾಗರ" ಅವರ ಹೃದಯವು ಒಲವಿನ ಸಾಗರ. ನಿಸ್ವಾರ್ಥ ಸ್ನೇಹ, ಸಹಾಯ ಮನೋಭಾವ ಮತ್ತು ಪ್ರೀತಿಯಿಂದ ತುಂಬಿರುವ ಅವರ ವ್ಯಕ್ತಿತ್ವವು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಮಾತಿನಲ್ಲಿ ಯಾವ ಕ್ಷಣಕ್ಕೂ ಖಾಲಿಯಾಗದ, ಸದಾ ಬೆಂಬಲ ನೀಡುವ ಸ್ನೇಹಿತನಾಗಿ ಅವರು ವಿಶೇಷ ಸ್ಥಾನ ಪಡೆದಿದ್ದಾರೆ. ಹೃದಯದ ಆಶಯಗಳು ಮತ್ತು ಹಾರೈಕೆಗಳು ಈ ವಿಶೇಷ ದಿನದಂದು, ಸ್ನೇಹಿತ ಯಮನೂರಪ್ಪ ಅವರು ತಮ್ಮ ಹೃದಯದ ಆಶಯಗಳನ್ನು ಹಂಚಿಕೊಂಡಿದ್ದಾರೆ: ನೂರು ವಸಂತಗಳು ಅವರ ಜೀವನದಲ್ಲಿ ಹೂವಿನಂತೆ ಅರಳಲಿ ಅವರ ಮುಖದ ನಗು ಎಂದಿಗೂ ಮಾಸದಿರಲಿ ಎಲ್ಲಾ ಕನಸುಗಳು ನಿಜವಾಗಲಿ ಜೀವನ ಸದಾ ಸಂತೋಷದಿಂದ ತುಂಬಿರಲಿ ಇವರ ಸ್ನೇಹವು ಕೇವಲ ಈ ಜನ್ಮಕ್ಕೆ ಮಾತ್ರವಲ್ಲ, ಮುಂದಿನ ಜನ್ಮಗಳಿಗೂ ಮುಂದುವರಿಯಲಿ ಎಂಬುದು ಅವರ ಹೃದಯದ ಆಳವಾದ ಆಶಯವಾಗಿದೆ. ಸ್ನೇಹಕ್ಕಿಂತ ಹೆಚ್ಚು - ಸಹೋದರತ್ವ “ನೀನು ನನ್ನ ಗೆಳೆಯನಲ್ಲ, ನನ್ನ ಒಡಹುಟ್ಟಿದ ಸಹೋದರ” ಎನ್ನುವ ಮಾತು, ಈ ಸಂಬಂಧದ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ. ಇದು ಕೇವಲ ಸ್ನೇಹವಲ್ಲ, ರಕ್ತಸಂಬಂಧಕ್ಕಿಂತಲೂ ಗಟ್ಟಿಯಾದ ಬಂಧ. ಜನ್ಮದಿನದ ಶುಭಾಶಯ ಹೇಳುವುದು ಕೇವಲ ಆಚರಣೆ ಅಲ್ಲ, ಅದು ಹೃದಯದ ಭಾವನೆ. ಸಿ.ಎಂ. ಶ್ರೀನಿವಾಸ್ ಅವರಂತಹ ಸ್ನೇಹಿತನಿಗೆ ಸಲ್ಲಿಸುವ ಈ ಪ್ರೀತಿಯ ನಮನ, ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ. ಹೃದಯ ತುಂಬಿದ ಪ್ರೀತಿ ಮತ್ತು ಗೌರವದೊಂದಿಗೆ - *ಸಿ.ಎಂ. ಶ್ರೀನಿವಾಸ್* ಅವರಿಗೆ ಜನ್ಮದಿನದ ಅನಂತ ಶುಭಾಶಯಗಳು. 🩷🎂 ✍️ ಸರ್ದಾರ್ ಯಮನೂರಪ್ಪ ವಿಜಯ್ ಸಾಕ್ಷಿ ವರದಿಗಾರರು ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ *ನಾಗರಾಜ್ ಕಲ್ಲಹಳ್ಳಿ*
    3
    *ಅಮೂಲ್ಯ ಸ್ನೇಹಕ್ಕೆ ಒಂದು ಹೃದಯಸ್ಪರ್ಶಿ ನಮನ - ಸಿ.ಎಂ. ಶ್ರೀನಿವಾಸ್ ಅವರಿಗೆ ಜನ್ಮದಿನದ ಶುಭಾಶಯಗಳು* 
ಮಾನವನ ಜೀವನದಲ್ಲಿ ಹಲವು ಸಂಬಂಧಗಳು ಬರುತ್ತವೆ, ಹೋಗುತ್ತವೆ. ಆದರೆ ಕೆಲವು ಸಂಬಂಧಗಳು ಕಾಲವನ್ನು ಮೀರಿ, ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಅಪರೂಪದ, ಅಮೂಲ್ಯ ಸ್ನೇಹದ ಪ್ರತಿರೂಪವೇ *ಸಿ.ಎಂ. ಶ್ರೀನಿವಾಸ್.* 
ತಮ್ಮ ಪ್ರಾಣಕ್ಕಿಂತಲೂ ಅಮೂಲ್ಯನಾದ ಆತ್ಮೀಯ ಗೆಳೆಯನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಾ, ಸ್ನೇಹಿತ *ಸರ್ದಾರ್ ಯಮನೂರಪ್ಪ* ಅವರು ಹೃದಯ ತುಂಬಿದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಲ್ಲಿ ವ್ಯಕ್ತವಾಗುವ ಸ್ನೇಹದ ಆಳ, ನಂಬಿಕೆ ಮತ್ತು ಪ್ರೀತಿ ನಿಜಕ್ಕೂ ಮನಸ್ಸನ್ನು ತಟ್ಟುತ್ತದೆ.
ನಂಬಿಕೆ, ಒಲವು ಮತ್ತು ಅಪ್ಪಣೆಯ ಪ್ರತೀಕ
“ನಿನ್ನ ಹೆಸರು ಕೇಳುತ್ತಿದ್ದಂತೆ ನನ್ನ ಮನಸ್ಸಿಗೆ ಬರುವ ಮೊದಲ ಭಾವನೆ ನಂಬಿಕೆ, ಒಲವು ಮತ್ತು ಅಪ್ಪಣೆ” ಎನ್ನುವ ಮಾತುಗಳು, *ಶ್ರೀನಿವಾಸ್* ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ವಿವರಿಸುತ್ತವೆ. ಬಾಲ್ಯದ ಆ ಚಿನ್ನದ ದಿನಗಳಿಂದ ಇಂದಿನವರೆಗೂ, ಇಬ್ಬರ ಸ್ನೇಹವು ಅನೇಕ ನೆನಪುಗಳ ಅಮೂಲ್ಯ ಸಂಗ್ರಹವಾಗಿದೆ.
ಧೈರ್ಯ ಮತ್ತು ಮಂದಹಾಸದ ವ್ಯಕ್ತಿತ್ವ
ಶ್ರೀನಿವಾಸ್ ಅವರ ಧೈರ್ಯವು ಅವರ ಗುರುತು. ಎಷ್ಟೇ ಸಂಕಷ್ಟಗಳಿದ್ದರೂ, ಮುಖದಲ್ಲಿ ಸದಾ ಮಂದಹಾಸ ಇಡುವ ಗುಣವು ಸಾಮಾನ್ಯವಲ್ಲ. ನೋವುಗಳನ್ನು ಮನಸ್ಸಿನಲ್ಲಿ ಹೊತ್ತುಕೊಂಡು, ಹೊರಗೆ ಸಂತೋಷವನ್ನು ಹಂಚುವ ಮನೋಭಾವವು ಮಹತ್ವದ ಮನಸ್ಸಿನ ಲಕ್ಷಣವಾಗಿದೆ.
"ನಿಸ್ವಾರ್ಥ ಸ್ನೇಹದ ಸಾಗರ"
ಅವರ ಹೃದಯವು ಒಲವಿನ ಸಾಗರ. ನಿಸ್ವಾರ್ಥ ಸ್ನೇಹ, ಸಹಾಯ ಮನೋಭಾವ ಮತ್ತು ಪ್ರೀತಿಯಿಂದ ತುಂಬಿರುವ ಅವರ ವ್ಯಕ್ತಿತ್ವವು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಮಾತಿನಲ್ಲಿ ಯಾವ ಕ್ಷಣಕ್ಕೂ ಖಾಲಿಯಾಗದ, ಸದಾ ಬೆಂಬಲ ನೀಡುವ ಸ್ನೇಹಿತನಾಗಿ ಅವರು ವಿಶೇಷ ಸ್ಥಾನ ಪಡೆದಿದ್ದಾರೆ.
ಹೃದಯದ ಆಶಯಗಳು ಮತ್ತು ಹಾರೈಕೆಗಳು
ಈ ವಿಶೇಷ ದಿನದಂದು, ಸ್ನೇಹಿತ ಯಮನೂರಪ್ಪ ಅವರು ತಮ್ಮ ಹೃದಯದ ಆಶಯಗಳನ್ನು ಹಂಚಿಕೊಂಡಿದ್ದಾರೆ:
ನೂರು ವಸಂತಗಳು ಅವರ ಜೀವನದಲ್ಲಿ ಹೂವಿನಂತೆ ಅರಳಲಿ
ಅವರ ಮುಖದ ನಗು ಎಂದಿಗೂ ಮಾಸದಿರಲಿ
ಎಲ್ಲಾ ಕನಸುಗಳು ನಿಜವಾಗಲಿ
ಜೀವನ ಸದಾ ಸಂತೋಷದಿಂದ ತುಂಬಿರಲಿ
ಇವರ ಸ್ನೇಹವು ಕೇವಲ ಈ ಜನ್ಮಕ್ಕೆ ಮಾತ್ರವಲ್ಲ, ಮುಂದಿನ ಜನ್ಮಗಳಿಗೂ ಮುಂದುವರಿಯಲಿ ಎಂಬುದು ಅವರ ಹೃದಯದ ಆಳವಾದ ಆಶಯವಾಗಿದೆ.
ಸ್ನೇಹಕ್ಕಿಂತ ಹೆಚ್ಚು - ಸಹೋದರತ್ವ
“ನೀನು ನನ್ನ ಗೆಳೆಯನಲ್ಲ, ನನ್ನ ಒಡಹುಟ್ಟಿದ ಸಹೋದರ”
ಎನ್ನುವ ಮಾತು, ಈ ಸಂಬಂಧದ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ. ಇದು ಕೇವಲ ಸ್ನೇಹವಲ್ಲ, ರಕ್ತಸಂಬಂಧಕ್ಕಿಂತಲೂ ಗಟ್ಟಿಯಾದ ಬಂಧ.
ಜನ್ಮದಿನದ ಶುಭಾಶಯ ಹೇಳುವುದು ಕೇವಲ ಆಚರಣೆ ಅಲ್ಲ, ಅದು ಹೃದಯದ ಭಾವನೆ. ಸಿ.ಎಂ. ಶ್ರೀನಿವಾಸ್ ಅವರಂತಹ ಸ್ನೇಹಿತನಿಗೆ ಸಲ್ಲಿಸುವ ಈ ಪ್ರೀತಿಯ ನಮನ, ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ.
ಹೃದಯ ತುಂಬಿದ ಪ್ರೀತಿ ಮತ್ತು ಗೌರವದೊಂದಿಗೆ -
*ಸಿ.ಎಂ. ಶ್ರೀನಿವಾಸ್* ಅವರಿಗೆ ಜನ್ಮದಿನದ ಅನಂತ ಶುಭಾಶಯಗಳು. 🩷🎂
✍️ ಸರ್ದಾರ್ ಯಮನೂರಪ್ಪ
ವಿಜಯ್ ಸಾಕ್ಷಿ ವರದಿಗಾರರು
ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ  ಜಿಲ್ಲೆ 
*ನಾಗರಾಜ್ ಕಲ್ಲಹಳ್ಳಿ*
    user_Nagaraja kallhalli
    Nagaraja kallhalli
    Content Creator (YouTuber) ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    3 hrs ago
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ವದ್ದಿಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ರಾಜ್ಯದ ಮೂಲೆಮೂಲೆಗಳಿಂದಲೂ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ವೈಭವಕ್ಕೆ ಸಾಕ್ಷಿಯಾದರು. ಭಕ್ತರ ಜೈಘೋಷ, ಭಕ್ತಿ ಗೀತೆಗಳು ಮತ್ತು ಸಂಪ್ರದಾಯಬದ್ಧ ವಿಧಿವಿಧಾನಗಳ ನಡುವೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲೆಂದೇ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಿಂದ ವದ್ದಿಕೆರೆಗೆ ಬಂದು ನೆಲೆನಿಂತಿದ್ದಾರೆ ಎಂಬ ನಂಬಿಕೆ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಿಮೆ ಅಪಾರವೆಂದು ಭಕ್ತರು ಹೇಳಿಕೊಳ್ಳುತ್ತಾರೆ. ಈ ತಾಂತ್ರಿಕ ಯುಗದಲ್ಲಿಯೂ ವಿವಿಧ ರೋಗರುಜಿನಗಳಿಗೆ ಪರಿಹಾರ ನೀಡುವ ಭವರೋಗ ವೈದ್ಯರಾಗಿ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಕ್ಷೇತ್ರದ ಎರೆನಾಡ ದೊರೆಯನ್ನು ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ತಮ್ಮ ಮನೋಭಿಲಾಷೆಗಳನ್ನು ನೆರವೇರಿಸಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು.
    1
    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ವದ್ದಿಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು.
ರಾಜ್ಯದ ಮೂಲೆಮೂಲೆಗಳಿಂದಲೂ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ವೈಭವಕ್ಕೆ ಸಾಕ್ಷಿಯಾದರು. ಭಕ್ತರ ಜೈಘೋಷ, ಭಕ್ತಿ ಗೀತೆಗಳು ಮತ್ತು ಸಂಪ್ರದಾಯಬದ್ಧ ವಿಧಿವಿಧಾನಗಳ ನಡುವೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲೆಂದೇ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಿಂದ ವದ್ದಿಕೆರೆಗೆ ಬಂದು ನೆಲೆನಿಂತಿದ್ದಾರೆ ಎಂಬ ನಂಬಿಕೆ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಿಮೆ ಅಪಾರವೆಂದು ಭಕ್ತರು ಹೇಳಿಕೊಳ್ಳುತ್ತಾರೆ. ಈ ತಾಂತ್ರಿಕ ಯುಗದಲ್ಲಿಯೂ ವಿವಿಧ ರೋಗರುಜಿನಗಳಿಗೆ ಪರಿಹಾರ ನೀಡುವ ಭವರೋಗ ವೈದ್ಯರಾಗಿ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಹೀಗಾಗಿ ಈ ಕ್ಷೇತ್ರದ ಎರೆನಾಡ ದೊರೆಯನ್ನು ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ತಮ್ಮ ಮನೋಭಿಲಾಷೆಗಳನ್ನು ನೆರವೇರಿಸಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    7 hrs ago
  • ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ರವಿವಾರ ಆರಂಭಗೊಂಡ ವಿಮಾನ ಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಂತೆ ಮುಂಬೈ ಪ್ರದೇಶಕ್ಕೆ ಆರು ವಿಮಾನಗಳು ಸಂಚರಿಸಲಿವೆ. ಸೋಮವಾರ ಮತ್ತು ಗುರುವಾರದಂದು ಮುಂಬೈ ಪ್ರದೇಶಕ್ಕೆ ಒಟ್ಟು 5 ವಿಮಾನಗಳು ಪ್ರಯಾಣಕ್ಕೆ ಲಭ್ಯವಾಗಲಿವೆ. ಈ ಪೈಕಿ ಇಂಡಿಗೋ ಸಂಸ್ಥೆಯಿಂದ ನವಿ ಮುಂಬೈ ಮತ್ತು ಮುಂಬೈಗೆ ತಲಾ ಎರಡು , ಏರ್ ಇಂಡಿಯಾ ಎಕ್ಸ್‌ನಿಂದ ಮುಂಬೈಗೆ 1 ವಿಮಾನ ಹಾರಾಟ ನಡೆಸಲಿದೆ.
    1
    ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿಮಾನಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ರವಿವಾರ ಆರಂಭಗೊಂಡ ವಿಮಾನ ಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಂತೆ ಮುಂಬೈ ಪ್ರದೇಶಕ್ಕೆ ಆರು ವಿಮಾನಗಳು ಸಂಚರಿಸಲಿವೆ.
ಸೋಮವಾರ ಮತ್ತು ಗುರುವಾರದಂದು ಮುಂಬೈ ಪ್ರದೇಶಕ್ಕೆ ಒಟ್ಟು 5 ವಿಮಾನಗಳು ಪ್ರಯಾಣಕ್ಕೆ ಲಭ್ಯವಾಗಲಿವೆ. ಈ ಪೈಕಿ ಇಂಡಿಗೋ ಸಂಸ್ಥೆಯಿಂದ ನವಿ ಮುಂಬೈ ಮತ್ತು ಮುಂಬೈಗೆ ತಲಾ ಎರಡು , ಏರ್ ಇಂಡಿಯಾ ಎಕ್ಸ್‌ನಿಂದ ಮುಂಬೈಗೆ 1 ವಿಮಾನ ಹಾರಾಟ ನಡೆಸಲಿದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    6 hrs ago
  • ಕೆಂಭಾವಿ ಬಳಿ ಘೋರ ದುರಂತ: ನೀರು ಪಾಲಾದ ನಾಲ್ವರು ಕಂದಮ್ಮಗಳು #JB_News_Kannada
    1
    ಕೆಂಭಾವಿ ಬಳಿ ಘೋರ ದುರಂತ: ನೀರು ಪಾಲಾದ ನಾಲ್ವರು ಕಂದಮ್ಮಗಳು
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    7 hrs ago
  • *ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗೆ ನೀರು ಹರಿಸಲು ರೈತರ ಸಂಘ ಘಟಪ್ರಭಾ ಸರ್ಕಲ್ ಅಲ್ಲಿ ಹೋರಾಟ ಮಾಡಿತ್ತು. ಏಪ್ರಿಲ್ 3ರ ಒಳಗಾಗಿ ನೀರು ಹರಿಸದೆ ಇದ್ದರೆ ಬ್ರಹತ್ ಹೋರಾಟ! ಎಂದ ರೈತ ಸಂಘ ಅಧಿಕಾರಿಗಳು ಒಪ್ಪಿಕೊಂಡಿದ್ದರು, ಆದ್ರೆ ಸಚಿವ ಸತೀಶ್ ಜಾರಕಿಹೊಳಿಯವರು ಮಾರ್ಚ್ 30ಕ್ಕೆ ಡ್ಯಾಮ್ ದಿಂದ ಘಟಪ್ರಭಾ ನದಿಗೆ ನೀರು ಬಿಡಿಸಿಕೊಂಡು ಏಪ್ರಿಲ್ 7ಕ್ಕೆ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ*
    1
    *ಘಟಪ್ರಭಾ ಎಡದಂಡೆ-ಬಲದಂಡೆ ಕಾಲುವೆಗೆ ನೀರು ಹರಿಸಲು ರೈತರ ಸಂಘ ಘಟಪ್ರಭಾ ಸರ್ಕಲ್ ಅಲ್ಲಿ ಹೋರಾಟ ಮಾಡಿತ್ತು. ಏಪ್ರಿಲ್ 3ರ ಒಳಗಾಗಿ ನೀರು ಹರಿಸದೆ ಇದ್ದರೆ ಬ್ರಹತ್ ಹೋರಾಟ! ಎಂದ ರೈತ ಸಂಘ ಅಧಿಕಾರಿಗಳು ಒಪ್ಪಿಕೊಂಡಿದ್ದರು, ಆದ್ರೆ ಸಚಿವ ಸತೀಶ್ ಜಾರಕಿಹೊಳಿಯವರು  ಮಾರ್ಚ್ 30ಕ್ಕೆ ಡ್ಯಾಮ್ ದಿಂದ  ಘಟಪ್ರಭಾ ನದಿಗೆ ನೀರು ಬಿಡಿಸಿಕೊಂಡು ಏಪ್ರಿಲ್ 7ಕ್ಕೆ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ*
    user_Suddi Point
    Suddi Point
    Newsstand ಬೆಳಗಾವಿ, ಬೆಳಗಾವಿ, ಕರ್ನಾಟಕ•
    19 hrs ago
  • ಚಳ್ಳಕೆರೆ :ಇದು ಜೈನ ಧರ್ಮದ 24 ನೇ ತೀರ್ಥಂಕರ ಭಗವಾನ್ ಮಹಾವೀರರ ಜನ್ಮ ವಾರ್ಷಿಕೋತ್ಸವವನ್ನು ಇದು ಭಾರತದಾದ್ಯಂತ ಜೈನರು ಆಚರಿಸುವ ಪ್ರಾರ್ಥನೆ, ಉಪವಾಸ ಮತ್ತು ದಾನ ಕಾರ್ಯಗಳ ದಿನವಾಗಿದೆ. ದೇಶದಲ್ಲಿ ಇಂದು ಆಶಾಂತ ಮೂಡಿದ್ದು ಮಹವೀರ ಆಶಯದಂತೆ ಪ್ರಪಂಚದಲ್ಲಿ ಶಾಂತ ನೆಲಸಬೇಕು,ಯುದ್ದಗಳು‌‌ ನಿಲ್ಲಬೇಕು, ಸಾವು.ನೋವು ಕೊನೆಯಾಗಬೇಕು ಎಲ್ಲಾರಿಗೂ ಮಹವೀರ ಜಯಂತಿ ಶುಭಾಷಯಗಳು ಎಲ್ಲಾರಿಗೂ ಒಳ್ಳೆಯದಾಗಲಿ ಎಂದು ಶಾಸಕ ಟಿ.ರಘುಮೂರ್ತಿ ಮಹವೀರ ಜಯಂತಿ ಶುಭಕೋರುದರು.
    1
    ಚಳ್ಳಕೆರೆ :ಇದು ಜೈನ ಧರ್ಮದ 24 ನೇ ತೀರ್ಥಂಕರ ಭಗವಾನ್ ಮಹಾವೀರರ ಜನ್ಮ ವಾರ್ಷಿಕೋತ್ಸವವನ್ನು ಇದು ಭಾರತದಾದ್ಯಂತ ಜೈನರು ಆಚರಿಸುವ ಪ್ರಾರ್ಥನೆ, ಉಪವಾಸ ಮತ್ತು ದಾನ ಕಾರ್ಯಗಳ ದಿನವಾಗಿದೆ.
ದೇಶದಲ್ಲಿ ಇಂದು ಆಶಾಂತ ಮೂಡಿದ್ದು  ಮಹವೀರ ಆಶಯದಂತೆ ಪ್ರಪಂಚದಲ್ಲಿ ಶಾಂತ ನೆಲಸಬೇಕು,ಯುದ್ದಗಳು‌‌ ನಿಲ್ಲಬೇಕು, ಸಾವು.ನೋವು ಕೊನೆಯಾಗಬೇಕು ಎಲ್ಲಾರಿಗೂ ಮಹವೀರ ಜಯಂತಿ ಶುಭಾಷಯಗಳು ಎಲ್ಲಾರಿಗೂ ಒಳ್ಳೆಯದಾಗಲಿ  ಎಂದು ಶಾಸಕ ಟಿ.ರಘುಮೂರ್ತಿ ಮಹವೀರ ಜಯಂತಿ ಶುಭಕೋರುದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    14 hrs ago
  • ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವೇಳೆ 12 ವರ್ಷದ ಕೀರ್ತನ ಎಂಬ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ಮಾಹಿತಿಯಂತೆ, ಮೂವರು ಬಾಲಕರು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು, ಈ ವೇಳೆ ಕೀರ್ತನ ನೀರಿನಲ್ಲಿ ಮುಳುಗಿದ್ದಾನೆ. ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ತಿಳಿದು ತಳಕು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    1
    ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವೇಳೆ 12 ವರ್ಷದ ಕೀರ್ತನ ಎಂಬ ಬಾಲಕ ಮುಳುಗಿ ಮೃತಪಟ್ಟಿದ್ದಾನೆ.
ಮಾಹಿತಿಯಂತೆ, ಮೂವರು ಬಾಲಕರು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು, ಈ ವೇಳೆ ಕೀರ್ತನ ನೀರಿನಲ್ಲಿ ಮುಳುಗಿದ್ದಾನೆ. ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದು ತಳಕು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    10 hrs ago
  • ನೀರಿನ ತೋಡನ್ನು ಮುಚ್ಚಿದ ವಿಷಯಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊರ್ವ ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ರವಿವಾರ ಘಟನೆ ನಡೆದಿದೆ. ಪಟ್ನಮೊಗರು ನಿವಾಸಿ ನಾಗೇಶ್‌ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ (56), ಅವರ ಪುತ್ರ ರವಿರಾಜ್‌ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
    1
    ನೀರಿನ ತೋಡನ್ನು ಮುಚ್ಚಿದ ವಿಷಯಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊರ್ವ ನೆರೆಮನೆಯವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ರವಿವಾರ ಘಟನೆ ನಡೆದಿದೆ.
ಪಟ್ನಮೊಗರು ನಿವಾಸಿ ನಾಗೇಶ್‌ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ (56), ಅವರ ಪುತ್ರ ರವಿರಾಜ್‌ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.