Shuru
Apke Nagar Ki App…
ರೈಲ್ವೆ ಗೇಟ್ ಬಳಿ ಮೇಲ್ ಸೇತುವೆ ನಿರ್ಮಾಣ ಸಂಬಂಧ ಸಂಸದರಿಂದ ಸ್ಥಳ ಪರಿಶೀಲನೆ ಭಾಲ್ಕಿ: ಪಟ್ಟಣದ ರೈಲ್ವೆ ಗೇಟ್ ಬಳಿ ಮೇಲ್ ಸೇತುವೆ ನಿರ್ಮಾಣ ಸಂಬಂಧ ಸಂಸದರಿಂದ ಸ್ಥಳ ಪರಿಶೀಲನೆ
Udayakumar Mule
ರೈಲ್ವೆ ಗೇಟ್ ಬಳಿ ಮೇಲ್ ಸೇತುವೆ ನಿರ್ಮಾಣ ಸಂಬಂಧ ಸಂಸದರಿಂದ ಸ್ಥಳ ಪರಿಶೀಲನೆ ಭಾಲ್ಕಿ: ಪಟ್ಟಣದ ರೈಲ್ವೆ ಗೇಟ್ ಬಳಿ ಮೇಲ್ ಸೇತುವೆ ನಿರ್ಮಾಣ ಸಂಬಂಧ ಸಂಸದರಿಂದ ಸ್ಥಳ ಪರಿಶೀಲನೆ
More news from Bidar and nearby areas
- ಸಾರಿಗೆ ಬಸ್'ನಲ್ಲಿ ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳರು ಬಸವಕಲ್ಯಾಣ: ನಗರದ ಬಸ್ ನಿಲ್ದಾಣ ಬಳಿ ಸಾರಿಗೆ ಬಸ್'ನಲ್ಲಿ ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳರು; ನಗರದಲ್ಲಿ ನಡೆದ ಘಟನೆ1
- ಮುಸ್ಲಿಂ ಯುವಕನಿಗೆ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದ ಕೇಂದ್ರ ಸಚಿವ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಆಡಿಯೋ ವೈರಲ್1
- ನೇಪಾಳ ಪ್ರವಾಹದಲ್ಲಿ ಸಾವನಪ್ಪಿದವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲಿ ಕಲಬುರಗಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡದ್ದು ನೇಪಾಳ ಪ್ರವಾಹದಲ್ಲಿ ಕರ್ನಾಟಕ ಮಾತ್ರ ಅಲ್ಲ ದೇಶದ ಸಾಕಷ್ಟು ಜನ ಸಿಲುಕಿದ್ದಾರೆ ನೂರಾರು ಜನ ಕೊಚ್ಚಿಕೊಂಡು ಕೆಲ ಜನ ಪ್ರಾಣ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಶ್ರದ್ಧಾಂಜಲಿ ಅರ್ಪಿಸುತ್ತೆನೆ. ಜೊತೆಗೆ ಪ್ರಧಾನಿಗೆ ಪತ್ರ ಬರೆಯುತ್ತಿದ್ದೆನೆ ಕರ್ನಾಟಕ ಅಷ್ಟೇ ಅಲ್ಲ ದೇಶದ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅವರಿಗೆ ಪರಿಹಾರ ಕೊಡಬೇಕು. ಹಾಗೂ ನೇಪಾಳದ ಜೊತೆಗೆ ನಿಲ್ಲುವಂತೆ ಕೂಡ ಪತ್ರ ಬರೆದಿದ್ದನೆ. ಎಂದು ಡಾ- ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಸಂಪುಟದಲ್ಲಿ ಕೆಲ ಸಚಿವರ ಬದಲಾವಣೆಗೆ ಡಿಕೆಶಿ ದೆಹಲಿ ಬೇಟಿ ವಿಚಾರ. ನಾನು ಇವಾಗ ಕಲಬುರಗಿಯಲ್ಲಿದ್ದೆನೆ. ನನಗೆ ಯಾವುದೇ ಮಾಹಿತಿ ಇಲ್ಲ ಏನೆ ಬದಲಾವಣೆ ಇದ್ದರು ನನ್ನ ಬಳಿ ಬರಲೇ ಬೇಕು ಅವರು ಏಲ್ಲೆ ಹೋದ್ರು ನನ್ನ ಬಳಿ ಬರಬೇಕು ಬಂದ ಮೇಲೆ ನಿಮಗೆ ಮಾಹಿತಿ ನೀಡುತ್ತೆನೆ ಎಂದು ಹೇಳಿದ್ದಾರೆ1
- ನೇಪಾಳ ಪ್ರವಾಹದಲ್ಲಿ ಬದುಕುಳಿದ ಕಾಳಗಿ ತಾಲೂಕಿನ ಮಲ್ಲಿನಾಥ ಕೊಲಕುಂದಿ ಜೊತೆ ಸಿಎಮ್ ವಿಡಿಯೋ ಕಾಲ್ ಮಾತನಾಡಿ ಧೈರ್ಯ ತುಂಬಿದರು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಕೊಲಕುಂದಿ ಅವರು ನೇಪಾಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಪಾರಾಗಿ ಅದೃಷ್ಟವಶಾತ್ ಬದುಕುಳಿದ ಕನ್ನಡಿಗ ಮಲ್ಲಿನಾಥ ಕೊಲಕುಂದಿ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ.1
- ಪ್ರವಾದಿಯವರ ಆದರ್ಶಗಳ ಅನುಷ್ಠಾನ: ಈದ್ ಮಿಲಾದ್ ಅಂಗವಾಗಿ ಸೇವಾ ಕಾರ್ಯಗಳು ಚಿಂಚೋಳಿ, ಆ.27: ಪ್ರವಾದಿ ಮುಹಮ್ಮದ್ (ಸ.ಅ.ವ.) ಅವರ 1451ನೇ ಈದ್-ಎ-ಮಿಲಾದ್-ಉನ್-ನಬಿ ಪವಿತ್ರ ಹಬ್ಬವನ್ನು ಚಿಂಚೋಳಿಯಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಆಚರಿಸಲಾಯಿತು. ತಾಲೂಕು ಮುಸ್ಲಿಂ ಅಭಿವೃದ್ಧಿ ಕಮಿಟಿ, ಜಮಿಯತ್ ಉಲೇಮಾ ಹಾಗೂ ಸ್ಥಳೀಯ ಮುಸ್ಲಿಂ ಬಾಂಧವರ ಸಹಯೋಗದಲ್ಲಿ ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾದಿಯವರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಮುಸ್ಲಿಂ ಅಭಿವೃದ್ಧಿ ಕಮಿಟಿ ಅಧ್ಯಕ್ಷ ಮಸ್ತಾನ ಅಲಿ ಪಟ್ಟೇದಾರ್, ಪ್ರವಾದಿ ಮುಹಮ್ಮದ್ (ಸ.ಅ.ವ.) ಅವರು ಇಡೀ ಮಾನವಕುಲಕ್ಕೆ ಶಾಂತಿ, ಕರುಣೆ, ಸಹೋದರತೆ ಹಾಗೂ ಸಮಾನತೆಯ ಸಂದೇಶ ಸಾರಿದ ಮಹಾನ್ ವ್ಯಕ್ತಿತ್ವವಾಗಿದ್ದು, ಬಡವರು, ಅನಾಥರು ಮತ್ತು ಸಂಕಷ್ಟದಲ್ಲಿರುವವರ ಸೇವೆಯೇ ನಿಜವಾದ ಧರ್ಮ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಈದ್ ಮಿಲಾದ್ ಹಬ್ಬವು ಕೇವಲ ಸಂಭ್ರಮದ ಆಚರಣೆಯಾಗಿರದೆ, ಪ್ರವಾದಿಯವರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ದಿನವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಂಗವಾಗಿ ಚಿಂಚೋಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಉಪಹಾರಗಳನ್ನು ವಿತರಿಸಿ, ಅವರ ಶೀಘ್ರ ಗುಣಮುಖತೆಗಾಗಿ ಶುಭ ಹಾರೈಕೆ ಸಲ್ಲಿಸಲಾಯಿತು. ರೋಗಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಮುಖಂಡರು ಮಾನವೀಯ ಕಾಳಜಿಯನ್ನು ಮೆರೆದರು.2
- ಗೌರ (ಬಿ) ಗ್ರಾಮದಲ್ಲಿ ಆ.30 ಮತ್ತು 31ರಂದು ಪವಾಡ ಪುರುಷ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಉಡಿ ತುಂಬುವ ಕಾರ್ಯಕ್ರಮ. ಗೌರ ಬಿಯಲ್ಲಿ ಅ.30, 31ರಂದು ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ. ಅಫಜಲಪೂರ: ಶ್ರಾವಣ ಮಾಸದ ಪ್ರಯುಕ್ತ ತಾಲೂಕಿನ ಗೌರ ಬಿ ಗ್ರಾಮದಲ್ಲಿ ಅ.30 ಹಾಗೂ 31ರಂದು ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಹಾಗೂ ನೂತನ ಪಲ್ಲಕ್ಕಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಅ.30ರಂದು ಸಂಜೆ 6 ಗಂಟೆಗೆ 21 ಪಲ್ಲಕ್ಕಿಗಳ ಸಂಗಮ ನಡೆಯಲಿದೆ. ಅ.31ರಂದು ಬೆಳಗ್ಗೆ 8 ಗಂಟೆಗೆ ಗಂಗಸ್ಥಳ ಕಾರ್ಯಕ್ರಮ ನಡೆಯಲಿದ್ದು, ಬಳಿಕ ದೈವೀ ಪುರುಷರಿಂದ ದೈವವಾಣಿ ನುಡಿಯುವ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಗ್ರಾಮದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸರ್ವಧರ್ಮ ಧಾರ್ಮಿಕ ಸಭೆ ಜರುಗಲಿದ್ದು, ಅಭಿನವ ಯಲ್ಲಾಲಿಂಗ ಮಹಾರಾಜರು, ಕೈಲಾಸಲಿಂಗ ಶಿವಾಚಾರ್ಯರು, ಅತನೂರು ಗ್ರಾಮದ ಗುರುಬಸವ ಶಿವಾಚಾರ್ಯರು,ಶ್ರೀ ಕನ್ನಯ್ಯ ಮಹಾರಾಜರು, ಮುಗಳಿ ಗ್ರಾಮದ ಶ್ರೀ ಭೋಗೇಶ್ವರ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಠದ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಅರುಣಕುಮಾರ ಪಾಟೀಲ್, ನಿತಿನ್ ಗುತ್ತೇದಾರ, ಶಿವಕುಮಾರ್ ನಾಟಿಕಾರ, ಜೆ ಎಂ ಕೊರಬು, ಶಂಕು ಮ್ಯಾಕೇರಿ, ಕೆ.ಜಿ. ಪೂಜಾರಿ ಹಾಗೂ ತಹಸೀಲ್ದಾರ್ ಸಂಜೀವ ಕುಮಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಠ್ಠಲ್ ಮಿರಗಿ, ಜಟ್ಟೆಪ್ಪ ಪೂಜಾರಿ, ಶರಣು ದಿವಾಣಜಿ, ನಿಂಗಣ್ಣ ಪೂಜಾರಿ, ಬಸವರಾಜ ಕುಂಬಾರ, ಸಂಗನಬಸಪ್ಪ ಪೂಜಾರಿ, ಅಪ್ಪಾಪಟೇಲ್ ಪಟೇಲ್, ನಾಗರಾಜ ದಿವಾಣಜಿ, ಗುರುಲಿಂಗಪ್ಪ ಶಿಂಪಿ, ಶ್ರೀಕಾಂತ್ ಪೂಜಾರಿ, ಚೌಡಪ್ಪ ಚೌಡಿಹಾಳ, ಸಿದ್ದಾರ್ಥ ಪೂಜಾರಿ, ಸಿದ್ದರಾಮ ಗಿಲ್ಕಿ, ಶರಣಪ್ಪ ಅಮೋಗಿ, ಪರಮಾನಂದ ಸಭದ, ಕಿರಣ ಚೌಡಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.1
- ನಗರದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಮಾಜಿ ಎಂಎಲ್ಸಿ ವಿಜಯಸಿಂಗ್ ಬಸವಕಲ್ಯಾಣ: ನಗರದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಮಾಜಿ ಎಂಎಲ್ಸಿ ವಿಜಯಸಿಂಗ್1
- ಗಂಗಾ ನದಿಯಲ್ಲಿ ಪ್ರವಾಹ ತಡೆಯಲು ಹೋಗಿ ದುರಂತ: 21 ಕಾರ್ಮಿಕರ ಸಾವು, ವೈರಲ್ ಆಯ್ತು ದೋಣಿ ಮುಳುಗಿದ ದೃಶ್ಯಗಂಗಾ ನದಿಯಲ್ಲಿ ದೋಣಿ ಮಗುಚಿ ಭೀಕರ ದುರಂತ: 21 ಕಾರ್ಮಿಕರು ದುರಂತ ಸಾವು, ಒಬ್ಬ ನಾಪತ್ತೆ ಬಿಹಾರದಲ್ಲಿ ಪಲ್ಟಿಯಾದ ದೋಣಿ: ಗಂಗಾ ನದಿಯಲ್ಲಿ ಮುಳುಗಿ 21 ಮಂದಿ ಸಾವು; 20 ಜನರ ರಕ್ಷಣೆ1