ಬೇತಮಂಗಲದಲ್ಲಿ ವಿಜೃಂಭಣೆಯ ಗಣೇಶ ವಿಸರ್ಜನೆ: ಸಡಗರದ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಕರು ಬೇತಮಂಗಲ: ಪಟ್ಟಣದ ವಿವಿಧ ಗಣೇಶೋತ್ಸವ ಸಮಿತಿಗಳ ವತಿಯಿಂದ ಮೂರನೇ ದಿನದ ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವವು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ನೆರವೇರಿತು. ಪಟ್ಟಣದ ಕೃಷ್ಣಾರ್ಜುನ ಯುವಕರ ಸಂಘ, ನೇತಾಜಿ ಯುವಕರ ಬಳಗ ಹಾಗೂ ಅಯ್ಯಪ್ಪ ಸ್ವಾಮಿ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಬುಧವಾರ ಅದ್ಧೂರಿ ಮೆರವಣಿಗೆಯ ಮೂಲಕ ವಿಸರ್ಜಿಸಲಾಯಿತು. ಮೆರವಣಿಗೆ ಯುದ್ದಕ್ಕೂ ಯುವಕರು ಪಟಾಕಿಗಳನ್ನು ಸಿಡಿಸಿ, ವಿವಿಧ ಕಲಾ ತಂಡಗಳ ವಾದ್ಯ-ಮೇಳಗಳ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕಲಾ ತಂಡಗಳ ಪ್ರದರ್ಶನವು ಮೆರವಣಿಗೆಗೆ ವಿಶೇಷ ಕಳೆ ನೀಡಿ, ನೆರೆದಿದ್ದ ಜನರ ಗಮನ ಸೆಳೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೇತಮಂಗಲ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸಾರ್ವಜನಿಕರ ಸಹಕಾರದೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಗಣೇಶ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಬೇತಮಂಗಲದಲ್ಲಿ ವಿಜೃಂಭಣೆಯ ಗಣೇಶ ವಿಸರ್ಜನೆ: ಸಡಗರದ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಕರು ಬೇತಮಂಗಲ: ಪಟ್ಟಣದ ವಿವಿಧ ಗಣೇಶೋತ್ಸವ ಸಮಿತಿಗಳ ವತಿಯಿಂದ ಮೂರನೇ ದಿನದ ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವವು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ನೆರವೇರಿತು. ಪಟ್ಟಣದ ಕೃಷ್ಣಾರ್ಜುನ ಯುವಕರ ಸಂಘ, ನೇತಾಜಿ ಯುವಕರ ಬಳಗ ಹಾಗೂ ಅಯ್ಯಪ್ಪ ಸ್ವಾಮಿ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಬುಧವಾರ ಅದ್ಧೂರಿ ಮೆರವಣಿಗೆಯ ಮೂಲಕ ವಿಸರ್ಜಿಸಲಾಯಿತು. ಮೆರವಣಿಗೆ ಯುದ್ದಕ್ಕೂ ಯುವಕರು ಪಟಾಕಿಗಳನ್ನು ಸಿಡಿಸಿ, ವಿವಿಧ ಕಲಾ ತಂಡಗಳ ವಾದ್ಯ-ಮೇಳಗಳ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕಲಾ ತಂಡಗಳ ಪ್ರದರ್ಶನವು ಮೆರವಣಿಗೆಗೆ ವಿಶೇಷ ಕಳೆ ನೀಡಿ, ನೆರೆದಿದ್ದ ಜನರ ಗಮನ ಸೆಳೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೇತಮಂಗಲ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸಾರ್ವಜನಿಕರ ಸಹಕಾರದೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಗಣೇಶ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
- ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ: ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಎಚ್.ವಿ. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಆದರ್ಶ್ ಹಾಗೂ ಖಜಾಂಚಿ ಪಿ. ಗಾಯಿತ್ರಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ಅಂಬರೀಶ್, ಭಗತ್‌ವರ್ಮ, ಜಿ.ಕೆ. ಲೋಕೇಶ್, ಲೋಕೇಶ್ ಗೌಡ, ಕೆ. ಮಂಜುನಾಥ್ ಹಾಗೂ ಎಂ. ಸತೀಶ್ ಉಪಸ್ಥಿತರಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕನ್ನಡ ಭವನದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. 2. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರದ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಸಂತೋಷ್ ಕುಮಾರ್ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಗಳ ಕಾಲ ಆಚರಿಸಿ ಮುಕ್ತಾಯಗೊಳಿಸಲಾಗಿದೆ. ಮಳೆ, ಉತ್ತಮ ಬೆಳೆ, ಸಮೃದ್ಧಿ ಹಾಗೂ ಶಾಂತಿಗಾಗಿ ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಎಪಿಎಂಸಿ ಮುಖಂಡ ಪುಟ್ಟರಾಜು ಮಾತನಾಡಿ, ನಾಡು ಬರದ ಬೇಗೆಗೆ ಸಿಲುಕಿದ್ದು ರೈತರು ಹಾಗೂ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆಯಾಗಿ ನಾಡು ಹಸಿರು ತೊಟ್ಟು, ರೈತರು ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ, ಮಂಜುನಾಥರೆಡ್ಡಿ, ಶಿವಾನಂದ, ಕೆ. ಅಮರೇಶ್ ಹಾಗೂ ರೆಡ್ಡೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ: ಜಿಲ್ಲಾ ವಕೀಲರ ಸಂಘದಿಂದ ಗಣೇಶ ವಿಸರ್ಜನಾ ಮೆರವಣಿಗೆ ಕೋಲಾರ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ನ್ಯಾಯಾಧೀಶರುಗಳು ಸಾರಥ್ಯ ವಹಿಸಿದ್ದು ವಿಶೇಷವಾಗಿತ್ತು. ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಎಚ್.ವಿ. ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಆದರ್ಶ್ ಹಾಗೂ ಖಜಾಂಚಿ ಪಿ. ಗಾಯಿತ್ರಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ಅಂಬರೀಶ್, ಭಗತ್‌ವರ್ಮ, ಜಿ.ಕೆ. ಲೋಕೇಶ್, ಲೋಕೇಶ್ ಗೌಡ, ಕೆ. ಮಂಜುನಾಥ್ ಹಾಗೂ ಎಂ. ಸತೀಶ್ ಉಪಸ್ಥಿತರಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕನ್ನಡ ಭವನದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. 2. ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರ: ಎಪಿಎಂಸಿ ಗಣಪನಿಗೆ ಅದ್ಧೂರಿ ಮೆರವಣಿಗೆ ಕೋಲಾರದ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ಟಮೇಟೋ ಮಾಲೀಕರ ಸಂಘ, ಜಯಭಾರತ್ ವ್ಯಾಪಾರಸ್ಥರ ಸಂಘ, ಹಮಾಲರ ಸಂಘ ಹಾಗೂ ಜೆಎನ್‌ಜಿ ತರಕಾರಿ ವ್ಯಾಪಾರಿಗಳ ಸಂಘದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೆಎನ್‌ಜಿ ತರಕಾರಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಸಂತೋಷ್ ಕುಮಾರ್ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ 30ನೇ ವರ್ಷದ ಗಣೇಶೋತ್ಸವವನ್ನು ಸರಳವಾಗಿ ಮೂರು ದಿನಗಳ ಕಾಲ ಆಚರಿಸಿ ಮುಕ್ತಾಯಗೊಳಿಸಲಾಗಿದೆ. ಮಳೆ, ಉತ್ತಮ ಬೆಳೆ, ಸಮೃದ್ಧಿ ಹಾಗೂ ಶಾಂತಿಗಾಗಿ ಗಣಪತಿಯಲ್ಲಿ ಪ್ರಾರ್ಥಿಸಲಾಗಿದೆ ಎಂದರು. ಎಪಿಎಂಸಿ ಮುಖಂಡ ಪುಟ್ಟರಾಜು ಮಾತನಾಡಿ, ನಾಡು ಬರದ ಬೇಗೆಗೆ ಸಿಲುಕಿದ್ದು ರೈತರು ಹಾಗೂ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತಮ ಮಳೆಯಾಗಿ ನಾಡು ಹಸಿರು ತೊಟ್ಟು, ರೈತರು ಸಮೃದ್ಧ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು. ಸಮಿತಿ ಮುಖಂಡರಾದ ನಾಗೇಶ್ ಗೌಡ, ಬಿವಿಜಿ ವೆಂಕಟೇಶಗೌಡ, ಮಂಜುನಾಥರೆಡ್ಡಿ, ಶಿವಾನಂದ, ಕೆ. ಅಮರೇಶ್ ಹಾಗೂ ರೆಡ್ಡೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- * ಟಮಕ ಕೈಗಾರಿಕಾ ಪ್ರದೇಶದಲ್ಲಿ ಮಳೆ ಸೃಷ್ಟಿಸಿದ ಅವಾಂತರ : ಕಾರ್ಖಾನೆಗಳಿಗೆ ನುಗ್ಗಿದ ಮಳೆ ನೀರು: ಸಮರ್ಪಕ ನೀರು ಹರಿಯಲು ಮೋರಿ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ * ಕೋಲಾರ : ನಗರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತವಾದ ಮೋರಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಹಲವು ಕಾರ್ಖಾನೆಗಳ ಆವರಣಕ್ಕೆ ನೀರು ನುಗ್ಗಿರುವ ಘಟನೆ ವರದಿಯಾಗಿದೆ. ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೈಗಾರಿಕಾ ಘಟಕಗಳು, ರಸ್ತೆಗಳು ಹಾಗೂ ಕಾರ್ಖಾನೆಗಳ ಆವರಣಗಳಲ್ಲಿ ನೀರು ನಿಂತು, ಕೈಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ಕೈಗಾರಿಕಾ ಘಟಕಗಳ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗ ಇದೇ ರೀತಿಯ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ, ಕೋಲಾರ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಮೋರಿ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಕೈಗಾರಿಕಾ ಪ್ರದೇಶದ ರಸ್ತೆಗಳು ಮತ್ತು ಚರಂಡಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಮಳೆ ನೀರು ಕಾರ್ಖಾನೆಗಳ ಒಳಗೆ ನುಗ್ಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡು ಮೂಲ ಭೂತಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.2
- ಪ್ರೇಮ ವಿವಾಹವಾಗಿದ್ದ ಯುವತಿ ಅಪಹರಣಕ್ಕೆ ಕುಟುಂಬದಿಂದ ಸುಪಾರಿ? ಅಡ್ಡಾದಿಡ್ಡಿ ಕಾರು ಚಾಲನೆ; 35ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಪ್ರೇಮ ವಿವಾಹವಾಗಿದ್ದ ಯುವತಿ ಅಪಹರಣಕ್ಕೆ ಕುಟುಂಬದಿಂದ ಸುಪಾರಿ? ಅಡ್ಡಾದಿಡ್ಡಿ ಕಾರು ಚಾಲನೆ; 35ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ1
- ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಕ್ಕೆ ಸೇವಾಕಾರ್ಯ ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತ್ರತ್ವದಲ್ಲಿ ಆಯೋಜನೆ ಕ್ಷೇತ್ರ ವ್ಯಾಪ್ತಿ ಸುಮಾರು 134ಕ್ಕೂ ಹೆಚ್ಚು ಕಡೆ ಸೇವಾಕಾರ್ಯ ಕೆರೆ , ದೇವಾಲಯ ,ಶಾಲೆ , ಸ್ಮಶಾನ ಆವರಣ ಸ್ವಚ್ಛತೆ , ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ರಕ್ತದಾನ ಶಿಬಿರ , ಆರೋಗ್ಯ ಶಿಬಿರ , ಗೋಶಾಲೆಗಳಲ್ಲಿ ಸೇವಾಕಾರ್ಯ ಗಿಡ ನೆಡುವ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ಸಿಹಿ ವಿತರಣೆ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆ ಇಡಿ ತಿಂಗಳು ಸೇವಾಕಾರ್ಯ ಮಾಡಲು ಪಕ್ಷ ಕರೆ ನೀಡಿದೆ ಮಹದೇವಪುರ ಕ್ಷೇತ್ರದಲ್ಲಿ ಒಂದೇ ದಿನ ನೂರಾರು ಸೇವಾಕಾರ್ಯ ಮಾಡಲಾಗಿದೆ ದೇಶದ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಚಿತ್ರಣವನ್ನೇ ಪ್ರಧಾನ ಮಂತ್ರಿಗಳು ಬದಲಾಯಿಸುತ್ತಾರೆ ಎಂದು ಮಾಜಿ ಸಚಿವ ಲಿಂಬಾವಳಿ ಆಡಿ ಹೊಗಳಿದ್ದಾರೆ1
- ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ:ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಬೆಂಗಳೂರು:ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ ನಡೆದಿದ್ದು,ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.ರಾಗಿಣಿ ಡ್ಯಾನ್ಸ್‌ಗೆ ಕೆಆರ್ ಪುರದ ಜನತೆ ಫಿದಾ ಆಗಿದ್ದಾರೆ.ಶ್ರೀ ಕೋಟೆ ವೆಂಕಟೇಶ್ವರ ಗೆಳೆಯರ ಬಳಗದಿಂದ ಅದ್ದೂರಿ ಗಣೇಶೋತ್ಸವ ಆಯೋಜನೆ ಮಾಡಲಾಗಿದ್ದು,ಈ ವೇಳೆ ಮಾತನಾಡಿದ ನಟಿ ರಾಗಿಣಿ ,ಗಣೇಶ ಹಬ್ಬ ಆಚರಣೆ ಅಂದ್ರೆ ತುಂಬಾನೇ ಖುಷಿ ನಮ್ಮ ಮನೆ ದೇವರು.ಇನ್ನೂ ಕೆಆರ್ ಪುರ ಭಾಗ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಏರಿಯಾ.ಈ ಭಾಗದಲ್ಲಿ ಅದ್ದೂರಿ ಗಣೇಶೋತ್ಸವ ಆಚರಣೆ ಸಂತಸ ತಂದಿದೆ.ಇದೇ ರೀತಿ ಗಣೇಶೋತ್ಸವ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ನಟಿ ರಾಗಿಣಿಗೆ ಹೇಳಿದ್ದಾರೆ.ಈ ವೇಳಿ ನಟಿ ರಾಗಿಣಿಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಆಯೋಜಕರಾದ ನಿಖಿಲ್ ಹಾಗೂ ದರ್ಶನ್ ಸಾಥ್ ನೀಡಿದರು.1
- ಸಿಡಿಲು ಬಡಿದು ಮನೆಯ ಮೇಲ್ಚಾವಣಿ, ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಹಾನಿ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕನಕಪುರ: ತಾಲೂಕಿನ ತಾವರಗಟ್ಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಸುರಿದ ಭಾರಿ ಮಳೆ, ಗುಡುಗು–ಸಿಡಿಲಿಗೆ ಮನೆಯೊಂದಕ್ಕೆ ಸಿಡಿಲು ಬಡಿದು ಮೇಲ್ಚಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾದ ಘಟನೆ ನಡೆದಿದೆ. ಗ್ರಾಮದ ರಮೇಶ್ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮೊದಲನೇ ಮಹಡಿಯ ಮೇಲ್ಚಾವಣಿ ಹಾನಿಗೊಳಗಾಗಿದ್ದು, ಸೋಲಾರ್ ವ್ಯವಸ್ಥೆ, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ. ಸಿಡಿಲಿನ ತೀವ್ರತೆಗೆ ಸೋಲಾರ್ ಉಪಕರಣಗಳು ಪುಡಿಪುಡಿಯಾಗಿದ್ದು, ಮನೆಯ ಮೇಲ್ಚಾವಣಿ ಮೇಲೆ ಕಂದಕ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಹಲವು ಉಪಕರಣಗಳು ಹಾನಿಗೊಳಗಾಗಿದ್ದು, ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಡಿಲು ಮನೆಯ ಮೊದಲನೇ ಮಹಡಿಗೆ ಸಿಡಿಲು ಬಡಿದ ವೇಳೆ ಕುಟುಂಬದ ಸದಸ್ಯರೆಲ್ಲರೂ ಕೆಳ ಮಹಡಿಯಲ್ಲಿ ಮಲಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಮರಳೇ ಬೇಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲು ಬಡಿದು ಮನೆಗೆ ಉಂಟಾಗಿರುವ ಹಾನಿಯ ಸಂಪೂರ್ಣ ಅಂದಾಜು ಮಾಡಿಸಿ, ತಾಲೂಕು ಆಡಳಿತದ ಮೂಲಕ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.1
- ತುಮಟಗೆರೆ ಹಾಲು ಸಂಘಕ್ಕೆ ರೂ.8.71 ಲಕ್ಷ ನಿವ್ವಳ ಲಾಭ ಹಾಲು ವಹಿವಾಟು: ಪ್ರತಿದಿನ 1,100 ಲೀಟರ್ ಹಾಲು ಶೇಖರಣೆ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿರುವ ಸಂದರ್ಭದಲ್ಲಿ ಹೈನುಗಾರಿಕೆ ರೈತ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿದೆ. ರೈತರು ಹಾಲಿನ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಿ ಉತ್ತಮ ಆದಾಯ ಗಳಿಸಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಬಿರ ಕಚೇರಿ ಉಪವ್ಯವಸ್ಥಾಪಕ ಎಂ.ಅಂಬರೀಶ್ ಸಲಹೆ ನೀಡಿದರು.ತಾಲ್ಲೂಕಿನ ತುಮಟಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-262 ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಹೈನುಗಾರಿಕೆ ಪದ್ಧತಿ ಅಳವಡಿಸಿಕೊಂಡರೆ ಜಾನುವಾರುಗಳ ಆರೋಗ್ಯ ಕಾಪಾಡುವುದರ ಜತೆಗೆ ಹಾಲಿನ ಉತ್ಪಾದನೆಯನ್ನೂ ಹೆಚ್ಚಿಸಬಹುದು ಎಂದರು.ಹಾಲು ಕರೆಯುವ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು, ಪೌಷ್ಟಿಕ ಪೌಷ್ಟಿಕ ಮತ್ತು ಗುಣಮಟ್ಟದ ಮೇವು ನೀಡುವುದು ಹಾಗೂಇದರ ಸಹಕಾರ ಜಾನುವಾರುಗಳ ಆರೋಗ್ಯದ ಬಗ್ಗೆ ನಿಯಮಿತವಾಗಿ ಕಾಳಜಿ ವಹಿಸುವುದು ಅತ್ಯಗತ್ಯ. ಗುಣಮಟ್ಟದ ಹಾಲುಪೂರೈಸಿದರೆ ಉತ್ತಮ ದರದ ಜತೆಗೆ ಒಕ್ಕೂಟದಿಂದ ದೊರೆಯುವ ವಿವಿಧ ಪ್ರೋತ್ಸಾ ಹಧನ ಹಾಗೂ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.1
- ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು1
- ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕಾಮಗಾರಿ ವಿಚಾರವಾಗಿ ಧ್ವನಿ ಎತ್ತಿದ ಮಾಜಿ ಶಾಸಕ ನಂದೀಶ್ ರೆಡ್ಡಿ , ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿಕೆ ಮೋಹನ್ ಬಾಬು ಟಾಂಗ್.!1