ರೈಲ್ವೆ ಟ್ರ್ಯಾಕ್ ಮೇಲೆ ಯುವತಿಯ ಶವ: ಹೇಮಶ್ರೀ ಎಂದು ಗುರುತು ಪತ್ತೆ ರೈಲ್ವೆ ಟ್ರ್ಯಾಕ್ ಮೇಲೆ ಯುವತಿಯ ಶವ: ಹೇಮಶ್ರೀ ಎಂದು ಗುರುತು ಪತ್ತೆಯಾಗಿದೆ ಮಂಗಳವಾರ ಸಂಜೆ ರವೀಂದ್ರನಗರ ಹಾಗೂ ಬಸವೇಶ್ವರ ನಗರದ ಭೋವಿ ಕಾಲೋನಿಯ ನಡುವೆ ಹಾದು ಹೋಗಿರುವ ರೈಲ್ವೆ ಟ್ರ್ಯಾಕ್‌ನಲ್ಲಿ ಸಂಭವಿಸಿದ ಯುವತಿಯ ಸಾವಿನ ಪ್ರಕರಣಕ್ಕೆ ಇದೀಗ ಸ್ಪಷ್ಟತೆ ಲಭಿಸಿದೆ. ಮೃತಪಟ್ಟ ಯುವತಿಯನ್ನು ವಿನೋಬ ನಗರದ 20 ವರ್ಷದ ಹೇಮಶ್ರೀ ಎಂದು ಗುರುತಿಸಲಾಗಿದೆ. ಹೇಮಶ್ರೀ ಮಂಗಳವಾರ ಸಂಜೆ ಸುಮಾರು 4:45ಕ್ಕೆ ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಇವರು ಜೆಎನ್‌ಸಿಸಿ ಸಂಸ್ಥೆಯಲ್ಲಿ ಕಾಮರ್ಸ್ ಪದವಿ ಅಭ್ಯಾಸ ಮಾಡುತ್ತಿದ್ದರು. ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡ ದುಃಖವನ್ನು ಮನಸ್ಸಿಗೆ ತುಂಬಿಕೊಂಡಿದ್ದ ಹೇಮಶ್ರೀ, ಅದೇ ನೋವಿನಿಂದ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳದಲ್ಲಿ ದೊರೆತ ಮೊಬೈಲ್ ಫೋನ್ ಮೂಲಕವೇ ಪೊಲೀಸರು ಕುಟುಂಬ ಸದಸ್ಯರನ್ನು ಪತ್ತೆಹಚ್ಚಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

- Post by Suresh Belagere1
- 10 ನೇ ವರ್ಷದ ಸಂಭ್ರಮದಲ್ಲಿ ಆನ್ಲೈನ್ ಟಿವಿ ಗೆ ಟಿ. ಬಿ ಶೇಖರ್ ಅವರಿಂದ ಶುಭ ಹಾರೈಕೆಗಳು1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್‌ಎಸ್ ಪಕ್ಷದ ಸೈನಿಕರು1
- ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ ಎಂದು ತಿಳಿಸಿದರು.1
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1
- ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಏಪ್ರಿಲ್ 18ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣಾ ಶಿಭಿರ ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ದಾವಣಗೆರೆಯ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೇ ಏಪ್ರಿಲ್ 18ರಂದು ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 15ರಲ್ಲಿ “ಉಚಿತ ಮೂತ್ರಕೋಶ ತಪಾಸಣಾ ಶಿಬಿರ” ನಡೆಯಲಿದೆ.1
- Post by Suresh Belagere1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1