ಇಂದಿನ ವೇಗದ ಜೀವನಶೈಲಿ, ಮಾನಸಿಕ ಒತ್ತಡ, ಅನಿಯಮಿತ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಿಂದ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಯೋಗವು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಸಾಧಿಸುವ ಅತ್ಯುತ್ತಮ ಜೀವನ ವಿಧಾನವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಪರಂಪರೆಯ ಈ ಅಮೂಲ್ಯ ಕೊಡುಗೆ ಕೇವಲ ವ್ಯಾಯಾಮವಲ್ಲದೆ, ಉಸಿರಾಟದ ನಿಯಂತ್ರಣ, ಧ್ಯಾನ, ದೈಹಿಕ ಭಂಗಿಗಳು ಹಾಗೂ ಮಾನಸಿಕ ಶಾಂತಿಯನ್ನು ಒಟ್ಟುಗೂಡಿಸುವ ಸಮಗ್ರ ಆರೋಗ್ಯ ಪದ್ಧತಿಯಾಗಿದೆ. ಪ್ರತಿದಿನ ಸ್ವಲ್ಪ ಸಮಯ ಯೋಗಾಭ್ಯಾಸ ಮಾಡುವುದರಿಂದ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಬಹುದು. ಯೋಗವು ದೇಹವನ್ನು ಸದೃಢಗೊಳಿಸಲು, ಸ್ನಾಯುಗಳು ಮತ್ತು ಕೀಲುಗಳನ್ನು ಬಲಪಡಿಸಲು, ದೇಹದ ನಮ್ಯತೆಯನ್ನು ಹೆಚ್ಚಿಸಲು ಮತ್ತು ರಕ್ತಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ದೇಹದ ತೂಕವನ್ನು ನಿಯಂತ್ರಿಸಲು ಹಾಗೂ ಬೆನ್ನುನೋವು, ಕುತ್ತಿಗೆ ನೋವು, ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಯೋಗವು ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆತಂಕ, ಕೋಪ, ಅಶಾಂತಿಯನ್ನು ನಿಯಂತ್ರಿಸಿ, ಸಮತೋಲಿತ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹೃದಯ ಮತ್ತು ಉಸಿರಾಟದ ಆರೋಗ್ಯಕ್ಕೂ ಯೋಗ ಉಪಯುಕ್ತವಾಗಿದೆ. ಸರಿಯಾದ ಉಸಿರಾಟದ ತಂತ್ರಗಳು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ರಕ್ತದೊತ್ತಡವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಕಾಪಾಡಲು ಹಾಗೂ ದೇಹಕ್ಕೆ ಆಮ್ಲಜನಕದ ಸರಬರಾಜನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಯೋಗವನ್ನು ಆರೋಗ್ಯಕರ ಆಹಾರ, ಸಮರ್ಪಕ ನಿದ್ರೆ ಮತ್ತು ವೈದ್ಯರ ಸಲಹೆಯೊಂದಿಗೆ ಅನುಸರಿಸಿದರೆ ಇನ್ನಷ್ಟು ಉತ್ತಮ ಫಲಿತಾಂಶಗಳು ದೊರೆಯಬಹುದು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ, ಆತ್ಮವಿಶ್ವಾಸ ಹೆಚ್ಚಿಸಲು, ಪರೀಕ್ಷೆಯ ಒತ್ತಡ ಕಡಿಮೆ ಮಾಡಲು ಮತ್ತು ದೈಹಿಕ-ಮಾನಸಿಕ ಸಮತೋಲನ ಕಾಪಾಡಲು ಯೋಗ ಸಹಕಾರಿ. ಮಹಿಳೆಯರ ಆರೋಗ್ಯ, ದೈಹಿಕ ಕ್ಷಮತೆ ಹಾಗೂ ಮನೋಬಲ ಉತ್ತಮಗೊಳಿಸಲು ಮತ್ತು ಹಿರಿಯ ನಾಗರಿಕರಲ್ಲಿ ಸಮತೋಲನ, ಚಲನಶೀಲತೆ ಹಾಗೂ ದೈಹಿಕ ಚುರುಕುತನ ಕಾಪಾಡಲು ಯೋಗ ಸಹಾಯ ಮಾಡುತ್ತದೆ. ಆದರೆ, ವಯಸ್ಸು, ಆರೋಗ್ಯ ಸ್ಥಿತಿ ಅಥವಾ ವೈದ್ಯಕೀಯ ಸಮಸ್ಯೆಗಳಿದ್ದಲ್ಲಿ ಪರಿಣಿತರ ಮಾರ್ಗದರ್ಶನದೊಂದಿಗೆ ಸೂಕ್ತ ಯೋಗಾಭ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಯೋಗವು ಕೇವಲ ವೈಯಕ್ತಿಕ ಆರೋಗ್ಯಕ್ಕೆ ಸೀಮಿತವಲ್ಲದೆ, ಕುಟುಂಬ ಮತ್ತು ಸಮಾಜದಲ್ಲಿ ಉತ್ತಮ ಜೀವನಶೈಲಿಯನ್ನು ಬೆಳೆಸುತ್ತದೆ. ಶಾಲೆಗಳು, ಕಾಲೇಜುಗಳು, ಕಚೇರಿಗಳು ಮತ್ತು ಸಮುದಾಯ ಮಟ್ಟದಲ್ಲಿ ಯೋಗದ ಅಭ್ಯಾಸವನ್ನು ಉತ್ತೇಜಿಸಿದರೆ ಆರೋಗ್ಯ ಜಾಗೃತಿ ಹೆಚ್ಚಿ, ಸಮತೋಲನದ ಬದುಕಿಗೆ ದಾರಿ ತೆರೆದುಕೊಳ್ಳುತ್ತದೆ. ದೇಹವನ್ನು ಬಲಪಡಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ, ಬದುಕಿಗೆ ಶಿಸ್ತು ಮತ್ತು ಜೀವನಕ್ಕೆ ಹೊಸ ಉತ್ಸಾಹ ನೀಡುವ ಈ ಅಮೂಲ್ಯ ಸಾಧನವನ್ನು ಪ್ರತಿದಿನ ಕೆಲವೇ ನಿಮಿಷಗಳ ಕಾಲ ಅಭ್ಯಾಸ ಮಾಡುವುದರಿಂದ ದೀರ್ಘಾವಧಿಯಲ್ಲಿ ಉತ್ತಮ ಆರೋಗ್ಯ ಮತ್ತು ಸಂತೃಪ್ತ ಬದುಕು ಸಾಧ್ಯವಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಅಗತ್ಯವಿದ್ದರೆ ತರಬೇತುದಾರರ ಮಾರ್ಗದರ್ಶನದಲ್ಲಿ, ಯೋಗವನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಈ ಲೇಖನವನ್ನು ನಾಗಪ್ಪ ಗಮಗ, ಬೆಳಗೇರಾ, ಜಿಲ್ಲಾ ಸಂಯೋಜಕರು, ಪೋಷಕತ್ವ ಯೋಜನೆ, ಯಾದಗಿರಿ ಅವರು ಬರೆದಿದ್ದಾರೆ.

- ಯಾದಗಿರಿ ಜಿಲ್ಲೆಯಲ್ಲಿ ಕೆಲವು ಬಸ್‌ಗಳನ್ನು ರಸ್ತೆಯಲ್ಲಿ ಅಡ್ಡವಾಗಿ ನಿಲ್ಲಿಸಲಾಗುತ್ತಿದ್ದು, ಇದನ್ನು ಪ್ರಶ್ನಿಸಲು ಹೋದರೆ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.1
- ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವು 1500 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ, ಯುವಕರು ರಕ್ತದಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ವಿಶಿಷ್ಟ ಪ್ರತಿಭಟನೆಯ ಭಾಗವಾಗಿ, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ರಾಯಚೂರು ಜಿಲ್ಲಾಧಿಕಾರಿ (DC) ಅವರ ಮೂಲಕ ಮನವಿ ಪತ್ರವನ್ನು ರವಾನಿಸಲಾಯಿತು. ಈ ಸಂದರ್ಭದಲ್ಲಿ ಏಮ್ಸ್ ಹೋರಾಟ ಸಮಿತಿ, ಕೊಪ್ಪಳದ ಹಿರಿಯ ಹೋರಾಟಗಾರರು, ರಿಮ್ಸ್ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ, ಪತ್ರಕರ್ತರು, ಯುವಕರು ಮತ್ತು ಮಹಿಳಾ ನಾಯಕಿಯರೂ ಸೇರಿದಂತೆ ಹಲವರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.1
- ಯಾದಗಿರಿ ತಾಲ್ಲೂಕಿನ ಮುದ್ನಾಳ್ ಉಮ್ಲನಾಯಕ ತಾಂಡದಲ್ಲಿ ಕಲುಷಿತ ನೀರು ಮತ್ತು ವಿಷ ಜಂತುಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಯದ ವಾತಾವರಣದಲ್ಲಿ ತಿರುಗಾಡುವಂತಾಗಿದೆ. ಸೂಕ್ತ ಚರಂಡಿ ಮತ್ತು ಸಿಸಿ ರಸ್ತೆಗಳ ಕೊರತೆಯಿಂದಾಗಿ ನೀರು ಹೊಂಡಗಳಲ್ಲಿ ನಿಂತು ಗಬ್ಬೆದ್ದು ನಾರುತ್ತಿದೆ, ಇದರಿಂದ ತಾಂಡಾದ ನಿವಾಸಿಗಳು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ತಾಂಡಾದ ನಿವಾಸಿಗಳು ಉಮೇಶ ಕೆ. ಮುದ್ನಾಳ್ ಅವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ, ಅವರು ಬೆಳಗ್ಗೆ ತಾಂಡಕ್ಕೆ ಭೇಟಿ ನೀಡಿ ನಿವಾಸಿಗಳು ಮತ್ತು ಮಕ್ಕಳೊಂದಿಗೆ ಮೂಲಸೌಲಭ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ನಂತರ ತಾಂಡದಾದ್ಯಂತ ಕಾಲ್ನಡಿಗೆಯಲ್ಲಿ ಪರಿಶೀಲನೆ ನಡೆಸಿದ ಉಮೇಶ ಕೆ. ಮುದ್ನಾಳ್ ಅವರು, ಇದರಿಂದ ತಾಂಡಾದಲ್ಲಿ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಸೊಳ್ಳೆಗಳ ಹಾವಳಿಗೆ ಜನ ಜಾನುವಾರುಗಳು ತತ್ತರಿಸಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಿವಾಸಿಗಳು ಕುಡಿಯುವ ನೀರು, ಚರಂಡಿ, ಸಿಸಿ ರಸ್ತೆ ನಿರ್ಮಾಣ, ಚರಂಡಿ ಸ್ವಚ್ಛತೆ ಮತ್ತು ಬ್ಲಿಚಿಂಗ್ ಪೌಡರ್ ಸಿಂಪಡಣೆ, ಕಸದ ವಾಹನ ವ್ಯವಸ್ಥೆ, ಮಳೆ ನೀರು ಕೆರೆಗೆ ಹೋಗಲು ಮಾರ್ಗ ಸರಿಪಡಿಸುವುದು, ಮನೆಯ ಮೇಲೆ ಹಾದುಹೋಗಿರುವ ಮತ್ತು ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವುದು, ಹಾಗೂ ಶಾಲಾ ಮಕ್ಕಳಿಗೆ ಬಸ್ಸು ಸೌಲಭ್ಯ ಒದಗಿಸುವುದು ಸೇರಿದಂತೆ ಎಂಟು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು. ಈ ವೇಳೆ ಗೋಪಾಲ, ರಾಜು, ಅರವಿಂದ, ಭೋಜು, ಪ್ರಕಾಶ, ಶಂಕರ, ಮನ್ನು ನಂದು, ವಿಜಯಕುಮಾರ, ಚಂದ್ರು ಪೋಮ್ಯಾ, ಸುರೇಶ ಪೂಮ್ಯಾ, ಪುರಿಬಾಯಿ, ಶಾಂತಿಬಾಯಿ, ಗನ್ನಿಬಾಯಿ, ಜಮಿನಿಬಾಯಿ, ಚಾಂದಿಬಾಯಿ ಸೇರಿದಂತೆ ಅನೇಕ ನಿವಾಸಿಗಳು, ಹಿರಿಯರು, ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು. ಉಮೇಶ ಕೆ. ಮುದ್ನಾಳ್ ಅವರು ಈ ಎಲ್ಲಾ ಬೇಡಿಕೆಗಳನ್ನು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಹಿಂದಿನ ಮುದ್ನಾಳ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಲಕಂಠ ಅವರು ತಾಂಡಾ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಸ್ವತಃ ತಾವೇ ಅಭಿವೃದ್ಧಿ ಹೊಂದಿದ್ದಾರೆ ಎಂದು ಆರೋಪಿಸಿದ ಅವರು, ಅವರ ೫ ವರ್ಷಗಳ ಅವಧಿಯಲ್ಲಿ ಪಂಚಾಯತಿಗೆ ಬಂದ ಅನುದಾನದ ಸಂಪೂರ್ಣ ತನಿಖೆಗೆ ಜಿಲ್ಲಾಡಳಿತ ಮುಂದಾಗಬೇಕು, ಆಗಲೇ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಒತ್ತಿ ಹೇಳಿದ್ದಾರೆ.1
- ಚಿಂಚೊಳಿ ತಾಲೂಕಿನಲ್ಲಿ ವಯೋವೃದ್ಧರು ಮತ್ತು ಅಂಗವಿಕಲರಿಗೆ ಪ್ರತಿ ತಿಂಗಳು ಬರಬೇಕಾದ ಮಾಶಾಸನ ಹಣ ಇನ್ನೂ ಬಂದಿಲ್ಲ ಎಂದು ಕೆಪಿಆರ್‌ಎಸ್ (KPRS) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಡವರ ಗೋಳು ಕೇಳುವವರು ಯಾರು ಎಂದು ಪ್ರಶ್ನಿಸಿರುವ ಸಂಘಟನೆ, ಮಾಶಾಸನ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಲ್ಲಿ, ತೀವ್ರ ಹೋರಾಟವನ್ನು ನಡೆಸಲು KPRS ಸಿದ್ಧವಿರುವುದಾಗಿ ಎಚ್ಚರಿಕೆ ನೀಡಿದೆ.1
- ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಮೂರನೇ ಬಾರಿಗೆ ವೈದ್ಯಕೀಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕಲಬುರಗಿಯ ಸೇಡಂ ವಿಧಾನಸಭಾ ವ್ಯಾಪ್ತಿಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮಕ್ಕೆ ಆಗಮಿಸಿದ್ದಾರೆ. ಸಚಿವರ ಆಗಮನದ ಹಿನ್ನೆಲೆಯಲ್ಲಿ ಸುಲೇಪೇಟ ಗ್ರಾಮದ ಜನರು ಅವರಿಗೆ ಭವ್ಯ ಸ್ವಾಗತ ಕೋರಿದ್ದಾರೆ.1
- ಪರಿಸರ ಸಂರಕ್ಷಣೆ ಮತ್ತು ಹಸಿರು ಅಭಿವೃದ್ಧಿಯ ಉದ್ದೇಶದಿಂದ ಅರಣ್ಯ ಇಲಾಖೆಯು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಹೆದ್ದಾರಿಗಳ ಬದಿಯಲ್ಲಿ ಸಸಿ ನೆಡುವ ಕಾರ್ಯ ಕೈಗೊಂಡಿದ್ದರೂ, ಸಮರ್ಪಕ ಯೋಜನೆಯಿಲ್ಲದೆ ವಿದ್ಯುತ್ ತಂತಿಗಳ ಕೆಳಗೆ ಸಸಿಗಳನ್ನು ನೆಡುತ್ತಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್-ಮುಸ್ಲಿಮೀನ್ (AIMIM) ಪಕ್ಷದ ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಾದಿ ಆರೋಪಿಸಿದ್ದಾರೆ. ಈ ಕುರಿತು ಅವರು 2026ರ ಜೂನ್ 20ರಂದು ಕಲಬುರ್ಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ರಾಯಚೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ. ವಿದ್ಯುತ್ ತಂತಿಗಳ ಕೆಳಗೆ ಸಸಿ ನೆಡುವುದರಿಂದ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ. ಮರಗಳು ಬೆಳೆದು ದೊಡ್ಡದಾದಾಗ ಅವುಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಾಗಿ, ಗಾಳಿಯ ಸಂದರ್ಭದಲ್ಲಿ ಘರ್ಷಣೆಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗುವ ಅಪಾಯವಿದ್ದು, ಟಿವಿ, ಫ್ರಿಡ್ಜ್ ಸೇರಿದಂತೆ ಮನೆಗಳಲ್ಲಿನ ಬೆಲೆಬಾಳುವ ವಿದ್ಯುತ್ ಉಪಕರಣಗಳಿಗೆ ಹಾನಿಯಾಗುತ್ತಿದೆ. ಅಲ್ಲದೆ, ಮರಗಳ ಕೊಂಬೆಗಳು ಬೀದಿ ದೀಪಗಳನ್ನು ಮರೆಮಾಡುವುದರಿಂದ ರಸ್ತೆಗಳು ಕತ್ತಲಲ್ಲಿ ಮುಳುಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮರಗಳ ಕೊಂಬೆಗಳನ್ನು ಕತ್ತರಿಸುವ ಜವಾಬ್ದಾರಿ ಜೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳ ಮೇಲೆ ಬೀಳುತ್ತಿದ್ದು, ಇದು ಇಲಾಖೆಗಳ ನಡುವೆ ಅನಗತ್ಯ ಕೆಲಸದ ಒತ್ತಡಕ್ಕೆ ಕಾರಣವಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ರೈಲ್ವೆ ಸ್ಟೇಷನ್ ರಸ್ತೆಯಿಂದ RTO ಸರ್ಕಲ್ ವರೆಗೆ, RTO ಸರ್ಕಲ್‌ನಿಂದ BRB ಸರ್ಕಲ್ ವರೆಗೆ, ಜಿಲ್ಲಾಧಿಕಾರಿ ಬಂಗ್ಲಾದಿಂದ ಅಸ್ನಿಹಾಳ್ ಹಾಗೂ ಅಸ್ನಿಹಾಳ್‌ನಿಂದ ಮಿನಿ ವಿಧಾನಸೌಧದವರೆಗೆ, ಮಂತ್ರಾಲಯ ಕೆಫೆಯಿಂದ ಹಜರತ್ ಖ್ವಾಜಾ ಬಂದೇನವಾಜ್ ಕಾಲೋನಿ ಮಾರ್ಗವಾಗಿ ಮಿನಿ ವಿಧಾನಸೌಧದವರೆಗೆ, ಮತ್ತು ಬಸವೇಶ್ವರ ಸರ್ಕಲ್‌ನಿಂದ ಶಕ್ತಿನಗರ ಹಾಗೂ ರೈಲ್ವೆ ಸರ್ಕಲ್ ವರೆಗಿನ ಪ್ರದೇಶಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ ಎಂದು ಶಬ್ಬೀರ್ ಅಹ್ಮದ್ ಹೌದಾದಿ ಗುರುತಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣದ ಸದ್ಬಳಕೆಯೊಂದಿಗೆ ರಾಯಚೂರನ್ನು ಸುಂದರ ಹಾಗೂ ಹಸಿರು ನಗರವನ್ನಾಗಿ ರೂಪಿಸಲು, ಅರಣ್ಯ ಇಲಾಖೆ, ಜೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ಮುಂದಾಲೋಚನೆಯೊಂದಿಗೆ ಸಸಿ ನೆಡುವ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಮನವಿ ಪತ್ರದ ಪ್ರತಿಗಳನ್ನು ರಾಯಚೂರು ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜೆಸ್ಕಾಂನ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೂ ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗಿದ್ದು, ಮನವಿ ಸಲ್ಲಿಸುವ ಸಂದರ್ಭದಲ್ಲಿ AIMIM ಮುಖಂಡರಾದ ಶಹಬಾಜ್ ಖಾನ್, ತನ್ವೀರ್ ಅಹ್ಮದ್, ಮೊಹಮ್ಮದ್ ಸೋಫಿ ಹಾಗೂ ಆಸಿಫ್ ಬಾಬಾ ಉಪಸ್ಥಿತರಿದ್ದರು.3
- ಯಾದಗಿರಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಸಂದಣಿ ವಿಪರೀತ ಹೆಚ್ಚಾಗಿದ್ದು, ರೋಗಿಗಳು ಓಪಿಡಿ (ಹೊರರೋಗಿ ವಿಭಾಗ) ಬರೆಸಲು ತೀವ್ರ ಪರದಾಡುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬರುವ ಜನರ ಸಂಖ್ಯೆ ಅಧಿಕವಾಗಿದೆ. ವೈದ್ಯರನ್ನು ಭೇಟಿಯಾಗಲು ಮತ್ತು ಓಪಿಡಿ ಟಿಕೆಟ್ ಪಡೆಯಲು ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ.1
- ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಶಿಬಿರವು ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 5:30 ಗಂಟೆಯವರೆಗೆ ನಡೆಯಿತು. ಠಾಣಗುಂದಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಹಳ್ಳಿಯ ರೈತರು ಕೆಲಸದ ಒತ್ತಡದಿಂದ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಕೆಲಸದಲ್ಲಿ ನಿರತರಾಗಿರುತ್ತಾರೆ. ಗಂಭೀರ ಅನಾರೋಗ್ಯ ಪರಿಸ್ಥಿತಿಯಲ್ಲಿ ಮಾತ್ರ ಆಸ್ಪತ್ರೆಗೆ ಹೋಗುವುದರಿಂದ, ಇಂತಹ ಶಿಬಿರಗಳ ಅವಶ್ಯಕತೆ ತುಂಬಾ ಇದೆ ಎಂದು ನುಡಿದರು. ನೇತ್ರ ಚಿಕಿತ್ಸಕರಾದ ಡಾಕ್ಟರ್ ಶುಕುರ್ ಅವರು ಮಾತನಾಡಿ, ನರೇಗಾ ಕೂಲಿ ಕಾರ್ಮಿಕರು ತಮ್ಮ ಮನೆ ಕೆಲಸಗಳ ನಡುವೆಯೂ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಆರೋಗ್ಯ ಇಲಾಖೆಯಿಂದ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಇಲಾಖೆಯು ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಮಾತ್ರವಲ್ಲದೆ, ನೇತ್ರ ಚಿಕಿತ್ಸೆಯನ್ನೂ ಉಚಿತವಾಗಿ ನೀಡುತ್ತದೆ ಎಂದು ತಿಳಿಸಿದರು. ಅಲ್ಲದೆ, ಗ್ರಾಮದಿಂದ ನೇತ್ರ ಶಸ್ತ್ರಚಿಕಿತ್ಸೆಗೆ ಬರುವವರಿಗೆ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡು ಕನ್ನಡಕಗಳನ್ನು ಪಡೆದುಕೊಂಡರು. ಈ ಶಿಬಿರದಲ್ಲಿ ಸುಮಾರು 128 ಕನ್ನಡಕಗಳನ್ನು ವಿತರಿಸಲಾಗಿದ್ದು, 38 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಪಡಿಸಲಾಯಿತು. 200 ಕ್ಕಿಂತ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಈ ಶಿಬಿರದ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಜಮಾಲ್ ಸಾಬ್ ಹೆಡಗಿಮದ್ರಾ, ಭೀಮಣ್ಣ ನಾಯಕ್, ಶಿವಪ್ಪ ಭಜಂತ್ರಿ, ಅಯ್ಯಮ್ಮ ಚೂರಿ, ಅಂಬರೀಶ್ ಧಣಿ, ಮರೆಪ್ಪ ಶಂಕರ ಬಂಡಿ, ಸುರೇಶ್ ತೆಳಿಗೇರಿ, ಮರೆಪ್ಪ ಕೋಟೆಕಲ್, ಮುದಿಯಪ್ಪ ಸುಲಗಿತ್ತಿ, ಬಸ್ಸಮ್ಮ ನಾಯ್ಕಲ್, ಮಲ್ಲಮ್ಮ ಅಂಬಿಗೇರ, ಸುಮಂಗಲ ದಾಸರ್, ಮೆಹಬೂಬಿ ಹುಲ್ಕಲ್, ಸಲಿಮಾ ಮುಲ್ಲಾ, ಸುವರ್ಣ ಕಟಕಟಿ, ನಂದಪ್ಪ ಬೈರಪುರ್, ಈಶಪ್ಪ ಹಬ್ಬಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.1