Shuru
Apke Nagar Ki App…
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಮುಂಡರಗಿ ಹಾಗೂ ಕಪ್ಪತ್ತಹಿಲ್ಸ್ ಅರಣ್ಯ ವಲಯ, ಮುಂಡರಗಿ ಇವರ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಸಮಾವೇಶ ಹಾಗೂ ಕಪ್ಪತ್ತಗುಡ್ಡ ಕುರಿತು ಕವಿಗೋಷ್ಠಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಕೈಜೋಡಿಸಿ, ಸಾಹಿತ್ಯದ ಬೆಳಕನ್ನು ಸಮಾಜದ ಮೂಲೆಮೂಲೆಗೂ ಹರಡುತ್ತಿರುವ ಎಲ್ಲ ಕವಿಮಿತ್ರರ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ. ನಿಮ್ಮ ಬರಹಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಲಿ, ನಿಮ್ಮ ಕಾವ್ಯಧಾರೆ ಸಮಾಜದಲ್ಲಿ ಪರಿಸರ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬೆಳೆಸಲಿ. ಕವಿ ಮನಸ್ಸುಗಳು ಜಾಗೃತಿಯಾದರೆ ಸಮಾಜ ಜಾಗೃತಿಯಾಗುತ್ತದೆ ಸಾಹಿತ್ಯ ಅರಳಿದರೆ ಸಂಸ್ಕೃತಿ ಉಳಿಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ
Udachappa tigari
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಮುಂಡರಗಿ ಹಾಗೂ ಕಪ್ಪತ್ತಹಿಲ್ಸ್ ಅರಣ್ಯ ವಲಯ, ಮುಂಡರಗಿ ಇವರ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಸಮಾವೇಶ ಹಾಗೂ ಕಪ್ಪತ್ತಗುಡ್ಡ ಕುರಿತು ಕವಿಗೋಷ್ಠಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಕೈಜೋಡಿಸಿ, ಸಾಹಿತ್ಯದ ಬೆಳಕನ್ನು ಸಮಾಜದ ಮೂಲೆಮೂಲೆಗೂ ಹರಡುತ್ತಿರುವ ಎಲ್ಲ ಕವಿಮಿತ್ರರ ಸಾಹಿತ್ಯ ಸೇವೆ ನಿಜಕ್ಕೂ ಶ್ಲಾಘನೀಯ. ನಿಮ್ಮ ಬರಹಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಲಿ, ನಿಮ್ಮ ಕಾವ್ಯಧಾರೆ ಸಮಾಜದಲ್ಲಿ ಪರಿಸರ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬೆಳೆಸಲಿ. ಕವಿ ಮನಸ್ಸುಗಳು ಜಾಗೃತಿಯಾದರೆ ಸಮಾಜ ಜಾಗೃತಿಯಾಗುತ್ತದೆ ಸಾಹಿತ್ಯ ಅರಳಿದರೆ ಸಂಸ್ಕೃತಿ ಉಳಿಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ
More news from ಕರ್ನಾಟಕ and nearby areas
- ರೋಣ ಕ್ಷೇತ್ರದ ಶಾಸಕರಾದ ಶ್ರೀ ಜಿ.ಎಸ್. ಪಾಟೀಲ್ ಅವರ ತಾಯಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ್ ಅವರ 22ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದೆ. "ಮಹಿಳೆಗೆ ಶಿಕ್ಷಣವೇ ನಿಜವಾದ ಶಕ್ತಿ. ಶಿಕ್ಷಣ ಪಡೆದ ಮಹಿಳೆ ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನವನ್ನು ನಿರ್ಮಿಸಿಕೊಳ್ಳುತ್ತಾಳೆ. ಮಕ್ಕಳಲ್ಲಿ ಓದುವ ಹವ್ಯಾಸ, ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದು. ಪ್ರತಿಯೊಬ್ಬ ತಾಯಿಯೂ ಉತ್ತಮ ಪ್ರಜೆಯನ್ನು ರೂಪಿಸುವ ಶಿಲ್ಪಿಯಾಗಿದ್ದಾಳೆ. ಆದ್ದರಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರತಿಯೊಂದು ಕುಟುಂಬವೂ ಆದ್ಯತೆ ನೀಡಬೇಕು," ಎಂದು ತಿಳಿಸಿದರು1
- ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ *ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಾಡಳಿತದಿಂದ ಜರುಗುವ ಸಭೆಗಳು , ಉತ್ಸವಗಳು ಕಾಟಾಚಾರಕ್ಕೆ ಜರುಗಿಸಬಾರದು. ತುಂಬಾ ಅರ್ಥಪೂರ್ಣವಾಗಿ , ಹಾಗೂ ಶಿಷ್ಟಾಚಾರದಿಂದ ಜರುಗಿಸಬೇಕೆಂದು. ಮತ್ತು ಸಭೆಗಳಿಗೆ ಉತ್ಸವಗಳಿಗೆ ಗೈರಾದ , ಇಲಾಖೆಗಳ ಅಧಿಕಾರಿಗಳ ವಿರುದ್ಧ. ಶಿಸ್ತು ಕ್ರಮ ಜರುಗಿಸಬೇಕೆಂದು ಸಂಘಟನೆಗಳು , ತಾಲೂಕಾಡಳಿತಕ್ಕೆ ಆಗ್ರಹಿಸಿವೆ. ಆ 1ರಂದು ಪ್ರವಾಸಿಮಂದಿರದಲ್ಲಿ ಜರುಗಿದ , ಸ್ವಾತಂತ್ರ್ಯೋತ್ಸವ ಪೂರ್ವ ಭಾವಿ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿದರು. ಯಾವುದೇ ಉತ್ಸವಗಳ ಪೂರ್ವ ಸಭೆಗಳಿಗೆ ಹಾಗೂ ಉತ್ಸವಗಳಿಗೆ , ಅಧಿಕಾರಿಗಳು ವಿನಾಃಕಾರಣ ಗೈರು ಹಾಜರಾಗೋದು ರೂಡಿಗತವಾಗಿದೆ. ತಾಲೂಕಾಡಳಿತ ನೇರ ಹೊಣೆ ಹೊರಬೇಕಿದೆ , ಗೈರಾಗುವ ಅಧಿಕಾರಿಗಳ ಸಿಬ್ಬಂದಿಯವರ ವಿರುದ್ಧ. ಕಾನೂನು ರೀತ್ಯ ಕಠಿಣ ಶಿಸ್ಥು ಕ್ರಮ ಜರುಗಿಸಬೇಕೆಂದು , ಸಂಘಟನೆಗಳ ಪದಾಧಿಕಾರಿಗಳು ತಹಶಿಲ್ದಾರರಿಗೆ ಆಗ್ರಹಿಸಿದರು. ಸಭೆಗಳು ಆಚರಣೆಗಳು ಉತ್ಸವಗಳ ಸಂದರ್ಭದಲ್ಲಿ , ಶಿಷ್ಟಾಚಾರ ಗಾಳಿಗೆ ತೂರಲಾಗುತ್ತಿದೆ. ಸಭೆಯ ವೇದಿಕೆಯಲ್ಲಿ ಜನಪ್ರತಿನಿಧಿಗಳು ಉನ್ನತಾಧಿಕಾರಿಗಳು ಗಣ್ಯರು ಹೊರತು ಪಡಿಸಿ , ಅಯೋಗ್ಯರಿಗೆ ಪ್ರಾಶಸ್ತ್ಯ ನೀಡಿ ವೇದಿಕೆಯ ಗಾಂಭೀರತೆ ಘನತೆಗೆ ಧಕ್ಕೆ ತರುವಂತಾಗಬಾರದು. ಉತ್ಸವಗಳು ಮಕ್ಕಳಿಗೆ ಹಬ್ಬದ ಅನುಭವ ನೀಡುವಂತಾಗಬೇಕಿದೆ , ಉತ್ಸವ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ , ಸಂಬಂಧಿಸಿದ ಇಲಾಖೆಗಳು ಒದಗಿಸಬೇಕಿದೆ. ಧ್ವಜಾರೋಹಣ ಸಂದರ್ಭದಲ್ಲಿ ಹಾಗೂ ವೇದಿಕೆಯಲ್ಲಿ , ಶಿಷ್ಟಾಚಾರಗಳನ್ನು ನಿಯಮಗಳನ್ನು ಪಾಲಿಸುವುದು ಖಡ್ಡಾಯವಾಗಬೇಕಿದೆ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಸಭೆಗಳು ಉತ್ಸವ ಆಚರಣೆಗಳ ಸಂದರ್ಭದಲ್ಲಿ , ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರ ಹಾಜರಾತಿ ಖಡ್ಡಾಯಗೊಳಿಸಿ. ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು , ಹೋರಾಟಗಾರರು ತಹಶಿಲ್ದಾರರಿಗೆ ಆಗ್ರಹಿಸಿದರು. ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್ , ತಾಪಂ ಅಧಿಕಾರಿ ಟಿ.ನರಸಪ್ಪ , ಬಿಇಒ ಮೈಲೇಶ ಬೇವೂರ್ , ಪಿಎಸ್ಐ ಸಿ.ಪ್ರಕಾಶ್ ಇದ್ದರು. ಕನ್ನಡ ಪರ ಸಂಘಟನೆಗಳು , ರೈತರಪರ , ಮಹಿಳಾ ಪರ , ದಲಿತಪರ , ಕಾರ್ಮಿಕರ ಪರ ಸಂಘಟನೆಗಳು ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ವಿವಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಾವೇರಿ ಶಾಸಕ, ಶ್ರೀರುದ್ರಪ್ಪ ಲಮಾಣಿ.1
- Direct Factory से Business करो | Saree Business 2026 #highlights #jantakiawaaj #businessidea2026 #business #tranding #viralvideoシ Direct Factory से Business करो | Saree Business 2026 #highlights #jantakiawaaj #businessidea2026 #business #tranding #viralvideoシ1
- ಅಳ್ನಾವರದಿಂದ ದಾಂಡೇಲಿಗೆ ತಲುಪಿ ಆನಂದಿಸುವ ಪ್ರಯಾಣಿಕರ ಗುಂಪು ಅಳ್ನಾವರ-ದಾಂಡೇಲಿ ರೈಲು ಯಾನ ಪ್ರಕೃತಿ ಮಡಲಲ್ಲಿ ಸಾಗುವ ಸುಂದರ ಅನುಭವ ಪ್ರಕೃತಿ ವೈಭವ ಮಡಲಲ್ಲಿ ಅಳ್ನಾವರ–ದಾಂಡೇಲಿ ರೈಲು ಯಾನ ಅಳ್ನಾವರ :ಅಳ್ನಾವರ -ದಾoಡೇಲಿ ಮಾರ್ಗದಲ್ಲಿ ಪಶ್ಚಿಮ ಘಟ್ಟದ ಹಸಿರು ಸಿರಿಯ ನಡುವೆ ಮನಸ್ಸಿಗೆ ಮುದ ನೀಡುವ ಪುಟ್ಟ ರೈಲು ಯಾನ ಪ್ರಕೃತಿ ಪ್ರಿಯರಿಗೆ ಒಂದು ಅಪರೂಪದ ಅನುಭವವನ್ನು ನೀಡುತ್ತದೆ. ರೈಲು ನಿಧಾನವಾಗಿ ಅಳ್ನಾವರ ನಿಲ್ದಾಣದಿಂದ ಹೊರಟ ಕ್ಷಣದಿಂದಲೇ ಪ್ರಕೃತಿಯ ರಮ್ಯ ಲೋಕ ತೆರೆದುಕೊಳ್ಳುತ್ತದೆ. ಮುಗಿಲೆತ್ತರಕ್ಕೆ ಬೆಳೆದಿರುವ ದಟ್ಟ ಕಾಡು, ಹಚ್ಚಹಸಿರಿನ ಮರಗಳ ಸಾಲು, ಅಂಕುಡೊಂಕಾಗಿ ಸಾಗುವ ರೈಲು ಹಳಿ, ಬೆಟ್ಟ–ಕೊಳ್ಳಗಳ ನಡುವೆ ತೇಲುವ ತಂಪಾದ ಗಾಳಿ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಕಿಟಕಿಯ ಪಕ್ಕ ಕುಳಿತರೆ ಪ್ರಕೃತಿಯೇ ನಮ್ಮೊಂದಿಗೆ ಮಾತಾಡುತ್ತಿರುವ ಅನುಭವವಾಗುತ್ತದೆ. ಮಾರ್ಗದುದ್ದಕ್ಕೂ ಕೇಳಿಬರುವ ಹಕ್ಕಿಗಳ ಕಲರವ, ಕಾಡಿನ ನಿಶ್ಶಬ್ದ, ಅಲ್ಲಲ್ಲಿ ಕಾಣಸಿಗುವ ನವಿಲುಗಳ ನರ್ತನ, ಹಸಿರು ಹೊದಿಕೆಯ ನಡುವೆ ಹರಡಿರುವ ಹೊಲಗದ್ದೆಗಳು ಹಾಗೂ ಪಶ್ಚಿಮ ಘಟ್ಟದ ನೈಸರ್ಗಿಕ ವೈಭವ ಕಣ್ಣಿಗೆ ಹಬ್ಬವಾಗುತ್ತದೆ. ಮಳೆಗಾಲದಲ್ಲಿ ಈ ಮಾರ್ಗ ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತದೆ. ಮಂಜಿನ ಹೊದಿಕೆ, ತೇವಗೊಂಡ ಕಾಡು ಮತ್ತು ಹಸಿರಿನ ಸೊಬಗು ಪ್ರಯಾಣಕ್ಕೆ ಹೊಸ ಮೆರುಗು ನೀಡುತ್ತವೆ. ಅಳ್ನಾವರ–ದಾಂಡೇಲಿ ರೈಲು ಮಾರ್ಗ ಕೇವಲ ಸಂಚಾರದ ಸಾಧನವಲ್ಲ; ಅದು ಪ್ರಕೃತಿಯ ಮಡಿಲಲ್ಲಿ ಸಾಗುವ ಒಂದು ಸುಂದರ ಅನುಭವ. ಛಾಯಾಗ್ರಹಣ ಪ್ರಿಯರು, ಪರಿಸರಾಸಕ್ತರು ಹಾಗೂ ವಾರಾಂತ್ಯದ ನೆಮ್ಮದಿಯ ಕ್ಷಣಗಳನ್ನು ಹುಡುಕುವವರಿಗೆ ಈ ಪ್ರಯಾಣ ಅತ್ಯುತ್ತಮ ಆಯ್ಕೆಯಾಗಿದೆ. ಅತ್ಯಂತ ವಿಶೇಷವೆಂದರೆ ಈ ಸುಂದರ ರೈಲು ಯಾನ ಕೇವಲ ಎರಡು ಗಂಟೆ.ಅತಿ ಕಡಿಮೆ ವೆಚ್ಚದಲ್ಲಿ ಇಂತಹ ಪ್ರಕೃತಿ ವೈಭವವನ್ನು ಸವಿಯುವ ಅವಕಾಶ ಅಪರೂಪ. ಒಮ್ಮೆ ಈ ರೈಲು ಯಾನ ಕೈಗೊಂಡರೆ ಪಶ್ಚಿಮ ಘಟ್ಟದ ಸೊಬಗು, ಹಕ್ಕಿಗಳ ಕಲರವ ಮತ್ತು ಹಸಿರಿನ ನೆನಪು ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಅಳ್ನಾವರ–ದಾಂಡೇಲಿ ರೈಲು ಯಾನವನ್ನು ಅನುಭವಿಸಲೇಬೇಕು. ಇದು ಕೇವಲ ಒಂದು ಪ್ರಯಾಣವಲ್ಲ, ಪ್ರಕೃತಿಯೊಂದಿಗೆ ಬೆಸೆಯುವ ಒಂದು ಅದ್ಭುತ ಅನುಭವ.1
- ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರಲಿರುವ ಪುಟ್ಟರಂಗ ಶೆಟ್ಟಿ, ಡಾ.ಅಜಯ್ ಸಿಂಗ್, ನರೇಂದ್ರ ಸ್ವಾಮಿ, ಬಸವರಾಜ ರಾಯರೆಡ್ಡಿ, ಬಸವಂತಪ್ಪ, ರಘುಮೂರ್ತಿ, ಚೆಲುವರಾಯಸ್ವಾಮಿ, ಶಿವಲಿಂಗೇಗೌಡ, ರಿಜ್ವಾನ ಅರ್ಷದ್, ಸಂತೋಷ್ ಲಾಡ್, ಲಕ್ಷ್ಮಣ ಸವದಿ ಹಾಗೂ ವಿಧಾನಸಭೆ ಅಧ್ಯಕ್ಷ ಹುದ್ದೆಗೆ ಆಭ್ಯರ್ಥಿ ಆಗಿರುವ ಜಿ.ಎಸ್. ಪಾಟೀಲ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು. ಎಲ್ಲರನ್ನೂ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು.1
- ಶಿಗ್ಗಾವಿ ಜಿಟಿಟಿಸಿ ಕೇಂದ್ರದಲ್ಲಿ ಪ್ರಾಂಶುಪಾಲರಿಂದ ದೌರ್ಜನ್ಯ ಆರೋಪ : ಎಬಿವಿಪಿ ಪ್ರತಿಭಟನೆ ಶಿಗ್ಗಾವಿ ಜಿಟಿಟಿಸಿ ಕೇಂದ್ರದಲ್ಲಿ ಪ್ರಾಂಶುಪಾಲರಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಆರೋಪ : ಎಬಿವಿಪಿ ಸಹಯೋಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಶಿಗ್ಗಾವಿ : ತಾಲೂಕಿನ ಕಲ್ಯಾಣ ಗ್ರಾಮದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಇತ್ತೀಚೆಗೆ ಸೇರ್ಪಡೆಯಾದ ಪ್ರಾಂಶುಪಾಲರಿಂದ ಹಾಗೂ ಅಟೆಂಡರ್‌ಗಳಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ ಮತ್ತು ಕನ್ನಡ ಜಾಗೃತ ವೇಧಿಕೆ ಸಹಯೋಗದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಟಿಟಿಸಿ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ ಅವುಗಳನ್ನ ಮೌಖಿಕವಾಗಿ ತಿಳಿಸಿ ಮನವಿಯನ್ನೂ ಸಲ್ಲಿಸಿದರೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ವೀಡಿಯೋ ಮಾಡಿ, ಇದರಿಂದ ಟಾರ್ಗೆಟ್ ಮಾಡುವುದು, ಮತ್ತು ಪಾಲಕರಿಗೆ ಕಳುಹಿಸುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ, ಸದ್ಯ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ, ಸೆಮಿಸ್ಟರ್ ಪರೀಕ್ಷೆಗಳು ಇನ್ನು ಕೇವಲ ಮೂರೇ ತಿಂಗಳಿನ ಅಂತರದಲ್ಲಿದ್ದು ಬೋಧಕರ ಕೊರತೆ ಇರುವುದು, ಇದರಿಂದ ಇನ್ನೂ ಎರಡು ಮೂರು ವಿಷಯಗಳು ಇನ್ನೂ ಪ್ರಾರಂಭವಾಗದೇ ಇರುವುದು ಶೈಕ್ಷಣಿಕ ಹಿನ್ನೆಡೆಗೆ ಕಾರಣವಾಗುತ್ತಿದೆ, ಪ್ರವೇಶಾತಿ ಪಡೆಯುವಾಗ ಶೇ. 70 ರಷ್ಟು ಪ್ರಾಯೋಗಿಕ ತರಬೇತಿ ಎಂದು ಹೇಳಿದ್ದರು ಆದರೆ ಈ ಸೆಮಿಸ್ಟರ್‌ಗೆ ಬೇಕಾದ ಯಂತ್ರೋಪಕರಣಗಳು ಇಲ್ಲ ಇದರಿಂದ ತಮ್ಮ ಭವಿಷ್ಯ ಕೌಶಲ್ಯಯುತವಾಗುವುದೇ ? ಜೊತೆಗೆ ಇಂತಹ ತರಬೇತಿಯಿಂದ ಉದ್ಯೋಗ ಸಿಗುವುದೇ ಎಂಬ ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ಬಂದ ಉಪನ್ಯಾಸಕರ ಪಾಠಗಳು ಅರ್ಥವಾಗಲು ಕಪ್ಪವಾಗುತ್ತಿದೆ, ಈ ವಿಷಯ ಪ್ರಾಂಶುಪಾಲರ ಗಮನಕ್ಕೆ ತಂದರೂ ಅವರು ವಿದ್ಯಾರ್ಥಿಗಳದೇ ತಪ್ಪು ಎಂಬAತೆ ಬಿಂಬಿಸುತ್ತಿದ್ದಾರೆ, ಸುಮಾರು ೨೫ ಸಾವಿರ ವಿದ್ಯಾರ್ಥಿ ವೇತನ ಬರುವುದಾಗಿ ಭರವಸೆ ನೀಡಿದ್ದರು, ಆದರೆ ಒಂದು ವರ್ಷ ಮೇಲಾದರೂ ಇನ್ನೂ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಆರೋಪಿಸಲಾಗಿದೆ. ಯಾವುದಾದರೂ ಸಮಸ್ಯೆಯನ್ನು ವಿದ್ಯಾರ್ಥಿಗಳು ಪ್ರಾಂಶುಪಾಲರ ಬಳಿ ಹೇಳಲು ಹೊರಟರೆ " ಬ್ಯುಸಿ ಆಗಿದ್ದಾರೆ. ಮೀಟಿಂಗ್ ನಡೆಲಿದೆ. ನಾಳೆ ಬನ್ನಿ" ಎಂದು ನಿಷ್ಕಾಳಜಿ ಕಾರಣ ನೀಡಿ ತಡೆಹಿಡಿಯಲಾಗುತ್ತಿದೆ, ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲ, ಈ ಮೊದಲಿದ್ದ ಉಪನ್ಯಾಸಕರನ್ನ ಯಾವುದೇ ಋಣಾತ್ಮಕ ಕಾರಣಗಳಿಲ್ಲದಿದ್ದರೂ ಕೇಂದ್ರ ಕಛೇರಿಯ ಮೇಲೆ ಆಪಾದನೆ ಹಾಕಿ ಸೇವೆಯಿಂದ ತೆಗೆಯಲಾಗಿದೆ, ಇನ್ನು ಹಾಸ್ಟೆಲ್‌ನ ಕ್ಯಾಂಟೀನ್‌ನಲ್ಲಿ ಯಾವುದೇ ರೀತಿಯಲ್ಲಿ ಸ್ವಚ್ಛತೆ ಇಲ್ಲದೇ ಹಾಗೇ ಊಟ ನೀಡುತ್ತಿರುವ ಕಾರಣ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗುತ್ತಿದೆ, ಇದರಿಂದ ವಿದ್ಯಾಭ್ಯಾಸಕ್ಕೂಸಹ ಅಡಚಣೆಯಾಗುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಬಂದ ಉಪನ್ಯಾಸಕರು, ವಿದ್ಯಾರ್ಥಿಗಳ ಸಣ್ಯ ಸಣ್ಣ ತಪ್ಪಿಗೂ ಇನ್ನೂರು ಬಸ್ಕಿಗಳನ್ನು ಹೊಡೆಸಿ ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಸಮಸ್ಯೆಗೆ ಗುರಿ ಮಾಡುತ್ತಿದ್ದಾರೆ, ಈ ಎಲ್ಲ ಶೈಕ್ಷಣಿಕ ಸಮಸ್ಯೆಗಳನ್ನ ಪ್ರಾಂಶುಪಾಲರ ಬಳಿ ಹೇಳಲು ಹೋದರೆ ಅಟೆಂಡರ್‌ಗಳೇ ಇಲ್ಲಿ ಪ್ರಾಂಶುಪಾಲರAತೆ ವರ್ತಿಸುತ್ತಿದ್ದಾರೆ ಎಂದು ದೂರಿದರಲ್ಲದೇ ಹೊಸದಾಗಿ ಬಂದ ಪ್ರಾಂಶುಪಾಲರು ಮತ್ತು ಅಟೆಂಡರ್‌ಗಳಿಂದ ಅಭಿವೃದ್ಧಿಗಿಂತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೇ ಹೆಚ್ಚು ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಬಂಕಾಪೂರ ಪಿಎಸ್‌ಐ ಶ್ರೀಶೈಲ್ ಕೆಂಚಣ್ಣವರ, ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ಬಸವರಾಜ ಕಲ್ಲಪ್ಪನವರ, ವಿನಾಯಕ ಕುಮ್ಮೂರ, ಕನ್ನಡ ಜಾಗೃತ ವೇಧಿಕೆಯ ಜಿಲ್ಲಾದ್ಯಕ್ಷ ಹರೀಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಲಂಕೇಶ ಛಲವಾದಿ ಆಕಾಶ ವನಹಳ್ಳಿ, ವಿನಾಯಕ ಆಚಾರ್ಯ, ಗಗನ ಹಡಪದ, ರಕ್ಷೀತ್ ಎಂ, ಗುರುರಾಜ, ವಿರೇಶ ಸೇರಿದಂತೆ ಜಿಟಿಟಿಸಿ ಕೇಂದ್ರದ ಎಲ್ಲ ವಿದ್ಯಾರ್ಥಿಗಳು, ಪೋಲೀಸ್ ಸಿಬ್ಬಂದಿಗಳು ಇದ್ದರು. *ಬಾಕ್ಸ್ ಸುದ್ದಿ* : ನಾನೇ ಖುದ್ದಾಗಿ ವಿದ್ಯಾರ್ಥಿಗಳ ಸ್ಕಾಲರ್‌ಶಿಫ್ ವಿಚಾರವಾಗಿ ಹಿಂದುಳಿದ ಇಲಾಖೆಗೆ ಬೇಟಿ ಮಾಡಿದ್ದೇನೆ ಅವರು ಬರುತ್ತದೆ ಎಂದು ಹೇಳಿದ್ದಾರೆ, ಇನ್ನು ಅಟೆಂಡರ್‌ಗಳೇ ಡೆಮೋ ತೆಗೆದುಕೊಳ್ಳುತ್ತಾರೆ ಎಂಬ ವಿಚಾರವಾಗಿ, ಕ್ಲಾಸ್‌ಗಳು ನಡೆಯುತ್ತಿರುವುದನ್ನ ಬರೆದುಕೊಂಡು ಬರುತ್ತಾರೆ ಹೊರತು ಅಟೆಂಡರ್‌ಗಳೇ ಡೆಮೋ ತೆಗೆದುಕೊಳ್ಳುವುದಿಲ್ಲ, ನಮ್ಮ ಉಪನ್ಯಾಸಕರು ನೇರವಾಗಿ ಹೋಗಿ ಬೋಧನೆ ಮಾಡುವುದಿಲ್ಲ, ಅವರೂ ಸಹಿತ ಹೋಮ್‌ವರ್ಕ ಮಾಡಿಕೊಂಡು ಬಂದು ಬೋಧನೆ ಮಾಡುತ್ತಾರೆ, ನಾನು ಕೇಂದ್ರಕ್ಕೆ ಬಂದು ಈಗ ಒಂದು ತಿಂಗಳಾಗಿದೆ ಆದರೂ ಶಕ್ತಿಮೀರಿ ಕೇಂದ್ರದ ಬೆಳವಣಿಗೆಗೆ ಶ್ರಮಿಸುತ್ತೇವೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಗಮನ ಹರಿಸುತ್ತೇವೆ. ಭಾರತಿ ದೊಡ್ಡಮನಿ ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲೆ3