logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಿದ್ದಲಿಂಗಯ್ಯ ಸ್ವಾಮಿ ಆಂದೋಲ–ಸಿದ್ದು ಹಿರೇಮಠ ವಿರುದ್ಧದ ಪ್ರಕರಣಗಳ ಮರುಪರಿಶೀಲನೆಗೆ ಒತ್ತಾಯ | ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮಕ್ಕೆ ಆಗ್ರಹ ಸಿದ್ದಲಿಂಗಯ್ಯ ಸ್ವಾಮಿ ಆಂದೋಲ–ಸಿದ್ದು ಹಿರೇಮಠ ವಿರುದ್ಧದ ಪ್ರಕರಣಗಳ ಮರುಪರಿಶೀಲನೆಗೆ ಒತ್ತಾಯ | ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮಕ್ಕೆ ಆಗ್ರಹ ಕಲಬುರಗಿ, ಸೆ.16: ಜೇವರ್ಗಿ ತಾಲೂಕಿನ ಸಿದ್ದಲಿಂಗಯ್ಯ ಸ್ವಾಮಿ ಆಂದೋಲ ಹಾಗೂ ಸಿದ್ದು @ ಸಿದ್ರಾಮಯ್ಯ ಹಿರೇಮಠ ವಿರುದ್ಧ ದಾಖಲಾಗಿವೆ ಎನ್ನಲಾಗುತ್ತಿರುವ ಪ್ರಕರಣಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹಿಂದಿನ ತನಿಖೆಗಳು ಅಪೂರ್ಣವಾಗಿದ್ದರೆ ಕಾನೂನುಬದ್ಧವಾಗಿ ಮರುತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ವಿವಿಧ ದಲಿತ ಹಾಗೂ ಕೋಲಿ ಕಬ್ಬಲಿಗ ಎಸ್‌ಟಿ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕಲಬುರಗಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದ ಮುಖಂಡರು, ಸಾಮಾಜಿಕ ಜಾಲತಾಣಗಳಲ್ಲಿ ಲಚಪ್ಪ ಜಮಾದಾರ ಅವರ ವಿರುದ್ಧ ಪ್ರಕಟಿಸಲಾಗುತ್ತಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಕಾನೂನು ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮನವಿಯಲ್ಲಿ, ಸಿದ್ದಲಿಂಗಯ್ಯ ಸ್ವಾಮಿ ಆಂದೋಲ ಹಾಗೂ ಸಿದ್ದು @ ಸಿದ್ರಾಮಯ್ಯ ಹಿರೇಮಠ ವಿರುದ್ಧ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಲಾಗಿದ್ದು, ಪ್ರತಿಯೊಂದು ಪ್ರಕರಣದ ಪ್ರಸ್ತುತ ಸ್ಥಿತಿ, ತನಿಖೆಯ ಹಂತ, ಆರೋಪಪಟ್ಟಿ ಸಲ್ಲಿಕೆಯಾಗಿದೆಯೇ ಎಂಬುದು ಸೇರಿದಂತೆ ಇದುವರೆಗೆ ಕೈಗೊಂಡಿರುವ ಕಾನೂನು ಕ್ರಮಗಳ ಕುರಿತು ಪೊಲೀಸ್ ಇಲಾಖೆ ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಅದೇ ರೀತಿ, ಹಿಂದಿನ ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ತನಿಖೆಯ ದಾಖಲೆಗಳನ್ನು ಮರುಪರಿಶೀಲಿಸಬೇಕು. ಪ್ರಮುಖ ಸಾಕ್ಷ್ಯಾಧಾರಗಳು ಪರಿಶೀಲನೆಯಾಗದೆ ಉಳಿದಿದ್ದರೆ ಅಥವಾ ಹೊಸ ಸಾಕ್ಷ್ಯಗಳು ಲಭ್ಯವಿದ್ದರೆ, ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವವಿಲ್ಲದೆ ಕಾನೂನುಬದ್ಧವಾಗಿ ಮರುತನಿಖೆ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಸೈಬರ್ ತನಿಖೆಗೆ ಒತ್ತಾಯ ಲಚಪ್ಪ ಜಮಾದಾರ ಅವರ ವಿರುದ್ಧ ಶಿವಸೇನಾ ಪಕ್ಷದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬರುವ ಸಾಮಾಜಿಕ ಜಾಲತಾಣ ಖಾತೆಗಳಿಂದ ಆಧಾರರಹಿತ ಹಾಗೂ ಮಾನಹಾನಿಕರ ಆರೋಪಗಳನ್ನು ಪ್ರಕಟಿಸಲಾಗುತ್ತಿದೆ ಎಂಬ ಆರೋಪವನ್ನು ಮುಖಂಡರು ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಫೇಸ್‌ಬುಕ್‌ ಐಡಿ ಸೇರಿದಂತೆ ಸಾಮಾಜಿಕ ಜಾಲತಾಣ ಖಾತೆಗಳ ನೈಜ ನಿರ್ವಾಹಕರು ಯಾರು, ಪೋಸ್ಟ್‌ಗಳನ್ನು ಯಾರು ಪ್ರಕಟಿಸಿದ್ದಾರೆ, ಅವುಗಳ ಮೂಲವೇನು ಹಾಗೂ ಯಾವುದೇ ಕಾನೂನುಬಾಹಿರ ಉದ್ದೇಶ ಇದೆಯೇ ಎಂಬುದನ್ನು ಸೈಬರ್ ಕ್ರೈಂ ವಿಭಾಗದ ಮೂಲಕ ತಾಂತ್ರಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಆಸ್ತಿ ವಹಿವಾಟುಗಳ ಪರಿಶೀಲನೆಗೂ ಆಗ್ರಹ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರುವವರು ನಡೆಸಿರುವ ಆಸ್ತಿ ಖರೀದಿ, ಮಾರಾಟ, ವರ್ಗಾವಣೆ ಮತ್ತು ಹಣಕಾಸು ವ್ಯವಹಾರಗಳಲ್ಲಿ ಅಕ್ರಮದ ಕುರಿತು ಪ್ರಾಥಮಿಕ ದಾಖಲೆಗಳು ಕಂಡುಬಂದಲ್ಲಿ, ಸಕ್ಷಮ ತನಿಖಾ ಸಂಸ್ಥೆಗಳ ಮೂಲಕ ನಿಯಮಾನುಸಾರ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಆಳಂದ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ‘ಸೋಹಮ್ ಅಸೋಸಿಯೇಟ್’ ಹೆಸರಿನ ಸಂಸ್ಥೆಯ ಮೂಲಕ ಬ್ಲೀಚಿಂಗ್ ಪೌಡರ್ ಸೇರಿದಂತೆ ಸಾಮಗ್ರಿಗಳ ಸರಬರಾಜಿಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆರೋಪಗಳ ಕುರಿತು ಖರೀದಿ ದಾಖಲೆ, ಟೆಂಡರ್/ಕೋಟೇಶನ್, ಬಿಲ್, ಪಾವತಿ, ಸ್ಟಾಕ್ ಹಾಗೂ ನೈಜ ಸರಬರಾಜಿನ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲೆ ಆರ್‌ಟಿಐ ಸೇರಿದಂತೆ ವಿವಿಧ ಕಾನೂನು ಪ್ರಕ್ರಿಯೆಗಳ ಹೆಸರಿನಲ್ಲಿ ಒತ್ತಡ, ಬೆದರಿಕೆ ಅಥವಾ ಹಣ ವಸೂಲಿಗೆ ಸಂಬಂಧಿಸಿದ ಆರೋಪಗಳಿದ್ದರೆ, ಅಧಿಕಾರಿಗಳ ಹೇಳಿಕೆಗಳು, ದೂರುಗಳು, ಅರ್ಜಿಗಳು, ಪತ್ರವ್ಯವಹಾರ ಹಾಗೂ ಹಣಕಾಸು ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಮುಂಜಾಗ್ರತಾ ಕ್ರಮ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ, ವೈಷಮ್ಯ, ಪ್ರಚೋದನೆ ಅಥವಾ ಅಶಾಂತಿಗೆ ಕಾರಣವಾಗುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಪೊಲೀಸ್ ತನಿಖೆ ಹಾಗೂ ಅಧಿಕೃತ ವರದಿಗಳ ಆಧಾರದ ಮೇಲೆ ಸಾರ್ವಜನಿಕ ಶಾಂತಿಗೆ ಗಂಭೀರ ಅಪಾಯವಿದೆ ಎಂಬುದು ದೃಢಪಟ್ಟಲ್ಲಿ, ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರಕರಣಗಳ ಕುರಿತು ಕಾಲಮಿತಿಯೊಳಗೆ ತನಿಖೆ ಪೂರ್ಣಗೊಳಿಸಿ, ಕೈಗೊಂಡಿರುವ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಸಮಗ್ರ ವರದಿ ಪಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ಸ್ಥಾನಮಾನ ಅಥವಾ ಪ್ರಭಾವವನ್ನು ಪರಿಗಣಿಸದೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬ್ರಹ್ಮರ್ಷಿ ಶ್ರೀ ರಾಜು ಗುರು ಸ್ವಾಮೀಜಿ, ದಶರಥ ಕಲಗುರ್ತಿ, ಶರಣು ಕುಂಬಾರ, ಮಹಾಂತಪ್ಪ ಬಳುಂಡಗಿ, ಮಾಯಾದೇವಿ ಬಂಡಾರಿ, ದೇವಿಂದ್ರ ಜಮಾದಾರ, ರತ್ನಾಕರ ಮಹಾಸ್ವಾಮಿಗಳು, ಮಲ್ಲಿಕಾರ್ಜುನ ಗುಡಬಾ, ರಾಣು ಮುದ್ದನಕರ್, ಗುರುಸಿದ್ದ ಡಾಂಗೆ, ಶಿವಕುಮಾರ ಆಜಾದಪೂರ, ಕೃಷ್ಣಾ ತಂಗಡಗಿ, ಬಸ್ಸು ಜಮಾದಾರ, ಉಮೇಶ ಆಂದೋಡಗಿ, ಅಂಬಾರಾಯ ಜವಳಗಾ, ಮಲ್ಲು ವಾಲೀಕಾರ್, ಭೀಮಶಾ ಖನ್ನಾ, ಮಲ್ಲಿಕಾರ್ಜುನ ಜಿನಕೇರಿ, ಚಂದ್ರಕಾಂತ ಶಾಖಾಪೂರ, ಸವೀತಾ ಆರ್. ತೀರ್ಥ, ಸತೀಶ ಜಮಾದಾರ, ಅಭಿಷೇಕ್ ಉಪಾಧ್ಯಾಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

7 hrs ago
user_Y..k.pujari
Y..k.pujari
Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
7 hrs ago
ae2105ed-06dd-43a9-816b-54ba8703e45b

More news from ಕರ್ನಾಟಕ and nearby areas
  • ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. #ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. DK Shivakumar Star Kannada News 24×7 Star Kannada News 24×7 Yash
    1
    ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. 
#ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ. DK Shivakumar Star Kannada News 24×7 Star Kannada News 24×7 Yash
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    10 hrs ago
  • ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.! ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.!
    1
    ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.!
ಕಲಬುರಗಿ : ತಳವಾರ ಸಮಾಜದ ಹೋರಾಟದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿ.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    12 hrs ago
  • ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು. “ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ ಶುಭ ಹಾರೈಸಿದರು. ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.
    1
    ಚನ್ನಮ್ಮ ಗುಣಾರಿ ಸಾಧನೆಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ: ಅಫಜಲಪುರ ತಾಲೂಕಿನ ಹೆಮ್ಮೆ – ಅಕ್ಷಯ ಸಲಗರ 
ಅಫಜಲಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೀಮತಿ ಚನ್ನಮ್ಮ ಗುಣಾರಿ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಅಫಜಲಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು  ಯುವ ಮುಖಂಡ ಅಕ್ಷಯ ಸಲಗರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಅಕ್ಷಯ ಸಲಗರ , “ಶಿಕ್ಷಕ ವೃತ್ತಿ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ವೃತ್ತಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಚನ್ನಮ್ಮ ಗುಣಾರಿ ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ” ಎಂದರು.
“ಚನ್ನಮ್ಮ ಗುಣಾರಿ ಅವರ ಈ ಸಾಧನೆ ಅಫಜಲಪುರ ತಾಲೂಕಿನ ಇತರ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ. ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಲಿ. ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ನಿಷ್ಠೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ” ಎಂದು ಅಕ್ಷಯ ಸಲಗರ  ಶುಭ ಹಾರೈಸಿದರು.
ಚನ್ನಮ್ಮ ಗುಣಾರಿ ಅವರಿಗೆ ದೊರೆತಿರುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಅಫಜಲಪುರ ತಾಲೂಕಿನ, ಶಿಕ್ಷಕರು ಹಾಗೂ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ವಿಶ್ವನಾಥ ಮಠಪತಿ ಸಂಗುಗೌಡ ಬಿರಾದಾರ ಹಾಗೂ ಅಭಿಷೇಕ ಪಾಟೀಲ ಸಂಜು ಕಡ್ಲಾಜಿ ಸೇರಿದಂತೆ ಹಲವರು ಚನ್ನಮ್ಮ ಗುಣಾರಿ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.
    user_TV21NEWS Kannada
    TV21NEWS Kannada
    Local News Reporter ಚಿತ್ತಾಪುರ, ಕಲಬುರಗಿ, ಕರ್ನಾಟಕ•
    8 hrs ago
  • ಕಲಬುರಗಿ: ಬಿಜೆಪಿ ಅವರು ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ರಾಜಿನಾಮೆ ನೀಡ್ತೆನೆ- ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ-B.Y ವಿಜಯೇಂದ್ರ , R. ಅಶೋಕ್ ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ನಾನು ರಾಜೀನಾಮೆ ನೀಡ್ತೆನೆ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಮಾತನಾಡಿ ವಂದೇ ಮಾತರಂ ಎರಡು ಚರಣ ಹಾಡಲು ಸರ್ಕಾರ ನಿರ್ಣಯ ಮಾಡಿತು, ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ. ಬಿಜೆಪಿಯವರಿಗೆ ಹೋರಾಟ ಮಾಡಲು ಯಾವ ವಿಷಯ ಇಲ್ಲ ಹಾಗಾಗಿ ವಂದೇ ಮಾತರಂ ಗೀತೆಯ ಬಗ್ಗೆ ಹೋರಾಟ ಮಾಡಲು ಹೊರಟಿದ್ದಾರೆ. ವಿಜಯೇಂದ್ರ ಹಾಗೂ ಅಶೋಕ್‌ ಅವರು ಯಾವುದೇ ಪೇಪರ್‌, ಟೆಲಿ ಪ್ರಾಂಪ್ಟರ್‌ ಬಳಸಿಕೊಳ್ಳದೆ ನಾಲ್ಕು ಚರಣ ತಕ್ಷಣ ಹಾಡಿ ತೋರಿಸಲಿ. ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದುರು ಇನ್ನು ಬಿಜೆಪಿ ಶಾಸಕರಿಗೂ ಕೂಡ ವಿಧಾನ ಸಭೆಯಲ್ಲಿ ಪ್ರತ್ಯೇಕವಾಗಿ ವಂದೇ ಮಾತರಂ ಹಾಡಲು ಅನುವು ಮಾಡಿಕೊಂಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಅವೆರಲ್ಲರೂ ಕೂಡ ಕಂಠ ಪಾಠ ಮಾಡಿ ಹಾಡಲಿ ಎಂದ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು
    1
    ಕಲಬುರಗಿ: ಬಿಜೆಪಿ ಅವರು ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ  ರಾಜಿನಾಮೆ ನೀಡ್ತೆನೆ- ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ-B.Y ವಿಜಯೇಂದ್ರ , R. ಅಶೋಕ್ ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ನಾನು ರಾಜೀನಾಮೆ ನೀಡ್ತೆನೆ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಮಾತನಾಡಿ ವಂದೇ ಮಾತರಂ ಎರಡು ಚರಣ ಹಾಡಲು ಸರ್ಕಾರ ನಿರ್ಣಯ ಮಾಡಿತು, ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ. ಬಿಜೆಪಿಯವರಿಗೆ ಹೋರಾಟ ಮಾಡಲು ಯಾವ ವಿಷಯ ಇಲ್ಲ ಹಾಗಾಗಿ ವಂದೇ ಮಾತರಂ ಗೀತೆಯ ಬಗ್ಗೆ ಹೋರಾಟ ಮಾಡಲು ಹೊರಟಿದ್ದಾರೆ. ವಿಜಯೇಂದ್ರ ಹಾಗೂ ಅಶೋಕ್‌ ಅವರು ಯಾವುದೇ ಪೇಪರ್‌, ಟೆಲಿ ಪ್ರಾಂಪ್ಟರ್‌ ಬಳಸಿಕೊಳ್ಳದೆ ನಾಲ್ಕು ಚರಣ ತಕ್ಷಣ ಹಾಡಿ ತೋರಿಸಲಿ. ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದುರು
ಇನ್ನು ಬಿಜೆಪಿ ಶಾಸಕರಿಗೂ ಕೂಡ ವಿಧಾನ ಸಭೆಯಲ್ಲಿ ಪ್ರತ್ಯೇಕವಾಗಿ ವಂದೇ ಮಾತರಂ ಹಾಡಲು ಅನುವು ಮಾಡಿಕೊಂಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ.  ಅವೆರಲ್ಲರೂ ಕೂಡ ಕಂಠ ಪಾಠ ಮಾಡಿ ಹಾಡಲಿ  ಎಂದ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    20 hrs ago
  • Basanagouda Patil Yatnal Bold Statement ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ ಸಚಿವ ಎಂ ಬಿ ಪಾಟೀಲ, ವಿಜಯೇಂದ್ರ, ಯಡಿಯೂರಪ್ಪ ಹಾಗೂ ವಿಜುಗೌಡ ಕುರಿತಾಗಿ ಶಾಸಕ ಯತ್ನಾಳ ಹೇಳಿದ್ದೇನು...? Basanagouda Patil Yatnal Bold Statement ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ
    1
    Basanagouda Patil Yatnal Bold Statement
ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ
ಸಚಿವ ಎಂ ಬಿ ಪಾಟೀಲ, ವಿಜಯೇಂದ್ರ, ಯಡಿಯೂರಪ್ಪ ಹಾಗೂ ವಿಜುಗೌಡ ಕುರಿತಾಗಿ ಶಾಸಕ ಯತ್ನಾಳ ಹೇಳಿದ್ದೇನು...? 
Basanagouda Patil Yatnal Bold Statement
ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    12 hrs ago
  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ತಾಲೂಕನ್ನು ಒಳಗೊಂಡು ಇಡೀ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಡಲು ತೀವ್ರವಾದ ಹೋರಾಟವನ್ನು ನಡೆಸಲು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ರೈತ ಮುಖಂಡರ ಪೂರ್ವಭಾವಿ ಸಭೆ ನಡೆಯಿತು. ತಾಳಿಕೋಟಿ ವರದಿ ತಾಳಿಕೋಟೆಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹೋರಾಟದ ಕುರಿತು ಪೂರ್ವಭಾವಿ ಸಭೆ. ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ ಅವರು ಮಾತನಾಡಿ ಸರ್ಕಾರದ ನಿರ್ಲಕ್ಷ ಕುರಿತು ಖಂಡಿಸಿ ಸಪ್ಟಂಬರ್ 17 ರಿಂದ ಮೂರು ದಿನಗಳ ಕಾಲ ತಾಳಿಕೋಟಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಧರಣೀ ಸತ್ಯಾಗ್ರಹ ನಡೆಸಿ ಸಪ್ಟೆಂಬರ್ 21ರಂದು ತಾಳಿಕೋಟಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿ ಸದರಿ ಹೋರಾಟಕ್ಕೆ ಎಲ್ಲ ಗ್ರಾಮಗಳ ರೈತರು ಸಹಕಾರ ನೀಡಬೇಕೆಂದು ಕೇಳಿಕೊಂಡರು. ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಮುನ್ನಾದಣಿ ನಾಡಗೌಡ, ಬಸನಗೌಡ ಮಾಡಗಿ, ಮಡುಸೌಕಾರ ಬಿರಾದಾರ, ಸಿದ್ದು ಬುಳ್ಳಾ, ಬಸನಗೌಡ ವಣಿಕ್ಯಾಳ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಭಾಗವಹಿಸಿದ ವಿವಿಧ ಗ್ರಾಮಗಳ ರೈತರ ಪ್ರತಿನಿಧಿಗಳು, ತಾಳಿಕೋಟಿ ಪಟ್ಟಣದ ಗಣ್ಯ ವರ್ತಕರು, ವಿವಿಧ ಪಕ್ಷಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಧರಣಿಯ ಯಶಸ್ವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸು ದಾಗಿ ತಿಳಿಸಿದರು.
    1
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ತಾಲೂಕನ್ನು ಒಳಗೊಂಡು ಇಡೀ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಡಲು ತೀವ್ರವಾದ ಹೋರಾಟವನ್ನು ನಡೆಸಲು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ರೈತ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.

ತಾಳಿಕೋಟಿ ವರದಿ 
ತಾಳಿಕೋಟೆಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹೋರಾಟದ ಕುರಿತು  ಪೂರ್ವಭಾವಿ ಸಭೆ.
ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ ಅವರು ಮಾತನಾಡಿ ಸರ್ಕಾರದ ನಿರ್ಲಕ್ಷ ಕುರಿತು ಖಂಡಿಸಿ ಸಪ್ಟಂಬರ್ 17 ರಿಂದ ಮೂರು ದಿನಗಳ ಕಾಲ ತಾಳಿಕೋಟಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಧರಣೀ ಸತ್ಯಾಗ್ರಹ ನಡೆಸಿ ಸಪ್ಟೆಂಬರ್ 21ರಂದು ತಾಳಿಕೋಟಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿ ಸದರಿ ಹೋರಾಟಕ್ಕೆ ಎಲ್ಲ ಗ್ರಾಮಗಳ ರೈತರು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಮುನ್ನಾದಣಿ ನಾಡಗೌಡ, ಬಸನಗೌಡ ಮಾಡಗಿ, ಮಡುಸೌಕಾರ ಬಿರಾದಾರ, ಸಿದ್ದು ಬುಳ್ಳಾ, ಬಸನಗೌಡ ವಣಿಕ್ಯಾಳ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. 
ಸಭೆಯಲ್ಲಿ ಭಾಗವಹಿಸಿದ ವಿವಿಧ ಗ್ರಾಮಗಳ ರೈತರ ಪ್ರತಿನಿಧಿಗಳು, ತಾಳಿಕೋಟಿ ಪಟ್ಟಣದ ಗಣ್ಯ ವರ್ತಕರು, ವಿವಿಧ ಪಕ್ಷಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಧರಣಿಯ ಯಶಸ್ವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸು ದಾಗಿ ತಿಳಿಸಿದರು.
    user_ಸಮೃದ್ಧ ಕರ್ನಾಟಕ ನ್ಯೂಸ್
    ಸಮೃದ್ಧ ಕರ್ನಾಟಕ ನ್ಯೂಸ್
    Voice of people ತಾಳಿಕೋಟಿ, ವಿಜಯಪುರ, ಕರ್ನಾಟಕ•
    16 hrs ago
  • ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಪರಮೇಶ್ವರ ಬೆನಕಿನಪಳ್ಳಿ ಸಂಗೀತ ಗಾಯಕ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಕಾಳಗಿ(ಇಂಗನಕಲ್) ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀ ಪೂಜ್ಯ ಗುರುಗಳಾದ ವೀರಭದ್ರಯ್ಯ ಸ್ವಾಮೀಜಿ ಗಾಯಕರು ಸಂಗೀತ ಗಾಯಕ ಪರಮೇಶ್ವರ ಬೆನಕಿನಪಳ್ಳಿ ಪ್ರಸಿದ್ಧ ಡೋಲು ವಾದಕರು ಸಿದ್ದಣ್ಣ ಮಗಿ ಮಲ್ಲಿಕಾರ್ಜುನ ಮಾನಕಾರ ಗಾಯಕ ಶಿವಲಿಂಗಣ್ಣ ಪಾಟೀಲ್ ಶಾಂತಪ್ಪಗೌಡ ಬಿರಾದಾರ ಕಂಠೆಪ್ಪಾ ಬಸವಂತರಾವ ಮಾನಕಾರ ಬಸವರಾಜ ಮಾವನೂರ ಶರಣಪ್ಪಾ ಚಂದ್ರಶೇಖರ ರವೀಂದ್ರ ಹಾಲಕಾಯಿ ಮಲ್ಲಣ್ಣ ಸಂತೋಷ ಬಿರಂಜಗಿ ಹಣಮಂತ ಶರಣು ಮಂಗಲಗಿ ನಾಗಣ್ಣ ಜಗದೇವಪ್ಪ ಬಡಿಗೇರ ಅನೇಕ ಭಕ್ತರು ಸಹಕಾರ ಕೊಟ್ಟು ಸುಗಮವಾಗಿ ಸಂಗೀತ ಜೊತೆಗೆ ಭಜನೆ ನಡೆಸಿಕೊಟ್ಟರು
    1
    ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಪರಮೇಶ್ವರ ಬೆನಕಿನಪಳ್ಳಿ ಸಂಗೀತ ಗಾಯಕ  ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು 
ಕಾಳಗಿ(ಇಂಗನಕಲ್) ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಜೈಬಜರಂಗಬಲಿ ಕಮಿಟಿ ಬಜಾನಾ ಮಂಡಳಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀ ಪೂಜ್ಯ ಗುರುಗಳಾದ ವೀರಭದ್ರಯ್ಯ ಸ್ವಾಮೀಜಿ ಗಾಯಕರು ಸಂಗೀತ ಗಾಯಕ ಪರಮೇಶ್ವರ ಬೆನಕಿನಪಳ್ಳಿ ಪ್ರಸಿದ್ಧ ಡೋಲು ವಾದಕರು ಸಿದ್ದಣ್ಣ ಮಗಿ ಮಲ್ಲಿಕಾರ್ಜುನ ಮಾನಕಾರ ಗಾಯಕ ಶಿವಲಿಂಗಣ್ಣ ಪಾಟೀಲ್ ಶಾಂತಪ್ಪಗೌಡ ಬಿರಾದಾರ ಕಂಠೆಪ್ಪಾ ಬಸವಂತರಾವ ಮಾನಕಾರ ಬಸವರಾಜ ಮಾವನೂರ ಶರಣಪ್ಪಾ ಚಂದ್ರಶೇಖರ ರವೀಂದ್ರ ಹಾಲಕಾಯಿ ಮಲ್ಲಣ್ಣ ಸಂತೋಷ ಬಿರಂಜಗಿ ಹಣಮಂತ ಶರಣು ಮಂಗಲಗಿ ನಾಗಣ್ಣ ಜಗದೇವಪ್ಪ ಬಡಿಗೇರ ಅನೇಕ ಭಕ್ತರು ಸಹಕಾರ ಕೊಟ್ಟು ಸುಗಮವಾಗಿ ಸಂಗೀತ ಜೊತೆಗೆ ಭಜನೆ ನಡೆಸಿಕೊಟ್ಟರು
    user_User1523
    User1523
    Chittapur, Kalaburagi•
    16 hrs ago
  • ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....! ವೀಕ್ಷಿಸಿ.. ವಿಶೇಷ.. ವರದಿ.... ವರದಿ: ರವಿಕುಮಾರ್ ಬಡಿಗೇರ. ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....! ವೀಕ್ಷಿಸಿ.. ವಿಶೇಷ.. ವರದಿ.... ವರದಿ: ರವಿಕುಮಾರ್ ಬಡಿಗೇರ.
    1
    ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....!

ವೀಕ್ಷಿಸಿ.. ವಿಶೇಷ.. ವರದಿ....

ವರದಿ: ರವಿಕುಮಾರ್ ಬಡಿಗೇರ.
ಯಾಕೆ ವಿಶ್ವಕರ್ಮರ ಮನೆ ಇಂದಾನೆ ಗಣಪತಿ ತರ್ಬೇಕು ಅನ್ನೊದು ನಂಬಿಕೆ ಇದೆ....!
ವೀಕ್ಷಿಸಿ.. ವಿಶೇಷ.. ವರದಿ....
ವರದಿ: ರವಿಕುಮಾರ್ ಬಡಿಗೇರ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.