ಗದಗ ಜಿಲ್ಲೆಯಾದ್ಯಂತ ವಕ್ಕರಿಸಿರುವ ಖಾಸಗಿ ಪವನ ವಿದ್ಯುತ್ ಉತ್ಪಾದನೆ ಕಂಪನಿಗಳು ಕೃಷಿ ಭೂಮಿಯನ್ನು ಕಬಳಿಸುತ್ತಿದ್ದು, ಅನ್ನದಾತರನ್ನು ತೀವ್ರ ಸಂಕಷ್ಟಕ್ಕೆ ದೂಡುತ್ತಿವೆ. ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ಮೂಲೆ ಮೂಲೆಗೆ ಹರಡಿರುವ ಈ ಕಂಪನಿಗಳಿಂದಾಗಿ ಕೃಷಿ ಭೂಮಿ ಕಡಿಮೆಯಾಗುತ್ತಿದ್ದು, ಭೂಮಿಯ ಫಲವತ್ತತೆಯೂ ಸಂಪೂರ್ಣವಾಗಿ ನಾಶವಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಹ ಹಾಳಾಗುತ್ತಿರುವುದು ತೀವ್ರ ವಿಷಾದನೀಯ ಸಂಗತಿಯಾಗಿದೆ. ಬರಗಾಲದ ಛಾಯೆಯಿಂದಾಗಿ ಸಾಲದ ಸುಳಿಗೆ ಸಿಲುಕಿರುವ ಬಡ ರೈತರು ಅನಿವಾರ್ಯವಾಗಿ ಈ ಕಂಪನಿಗಳ ಮೊರೆ ಹೋಗಿ ಭೂಮಿ ಮಾರಾಟ ಮಾಡುತ್ತಿದ್ದು, ತಮ್ಮ ತನವನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತ ಕೇಂದ್ರದಿಂದ ಹಿಡಿದು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಂಪನಿಗಳ ಹಣದಾಸೆಗೆ ಮಾರುಹೋಗಿ ರೈತರಿಗೆ ಮಹಾ ಮೋಸ ಮಾಡುತ್ತಿದ್ದಾರೆ ಎಂಬುದು ಪ್ರಜ್ಞಾವಂತರ ಮಾತಾಗಿದೆ. ಜಮೀನು ಖರೀದಿಸಿದ ದಿನದಿಂದಲೇ, ಪಹಣಿಯಲ್ಲಿ ಹೆಸರು ನೋಂದಣಿಯಾಗುವ ಮುನ್ನವೇ ಯಾವುದೇ ಪರವಾನಿಗೆ ಇಲ್ಲದೆ ಕಂಪನಿಗಳು ಅಕ್ರಮ ಕಾಮಗಾರಿ ಆರಂಭಿಸುತ್ತಿವೆ. ಇದಕ್ಕೆ ಜಿಲ್ಲೆಯ ಕದಡಿ ಗ್ರಾಮದಲ್ಲಿ ದಿನನಿತ್ಯ ನಡೆಯುತ್ತಿರುವ ಅಕ್ರಮ ಕಾಮಗಾರಿಗಳೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ಕಂಪನಿಗಳು ಕೇವಲ ಒಂದು ಎಕರೆ ಜಮೀನು ಖರೀದಿಸಿ, ಇನ್ನುಳಿದ ಆರು ಎಕರೆ ಭೂಮಿಯನ್ನು ಲಾವಣಿ ರೂಪದಲ್ಲಿ ಪಡೆದು ಎನ್.ಎ. (NA) ಮಾಡಿಸುತ್ತಿವೆ. ಇದರಿಂದ ಅಮಾಯಕ ರೈತರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ತಪ್ಪಿಹೋಗುತ್ತಿದ್ದು, ಇದು ರೈತರಿಗೆ ತಿಳಿಯದಾಗಿದೆ. ಇದರ ವಿರುದ್ಧ ಧ್ವನಿ ಎತ್ತುವವರ ಬಾಯಿ ಮುಚ್ಚಿಸಲು ಸ್ಥಳೀಯ ಪುಂಡಪೋಕರಿಗಳನ್ನು ಸಾಕಿರುವುದು ಪ್ರತ್ಯಕ್ಷವಾಗಿ ಕಂಡುಬರುತ್ತಿದೆ. ಇನ್ನು ಮಿತಿ ಮೀರಿದ ಭಾರ ಹೊತ್ತ ಬೃಹತ್ ಯಂತ್ರೋಪಕರಣಗಳ ವಾಹನಗಳ ಸಂಚಾರದಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟು ಸಣ್ಣ ವಾಹನಗಳ ಸಂಚಾರಕ್ಕೆ ಕುತ್ತು ಬಂದಿದೆ ಹಾಗೂ ಕೆಲವೆಡೆ ಜನರ ಪ್ರಾಣಹಾನಿಯೂ ಸಂಭವಿಸಿದೆ. ಈ ಘಟಕಗಳ ನಿರಂತರ ಶಬ್ದ ಮಾಲಿನ್ಯಕ್ಕೆ ಅನೇಕ ಪಶು-ಪಕ್ಷಿಗಳು ಕಾಣದಾಗಿವೆ. ಈ ವಂಚನೆಯ ನಡುವೆ ರೈತ ಕೆ. ಶೇಕಪ್ಪಣ್ಣ ಎಂಬುವವರು, "ಇರುವ ಐದಾರು ಕುರುಗಿ ಜಮೀನು ಮಾರಿದರೆ ಹಣ ಉಳಿಯುವುದಿಲ್ಲ, ಮುಂದೆ ಮೂವರು ಮಕ್ಕಳಿದ್ದಾರೆ. ಹಿಂಡಿ ರೊಟ್ಟಿ ತಿನ್ನುತ್ತೇವೆ ಹೊರತು ಭೂಮಿ ಮಾರುವುದಿಲ್ಲ" ಎಂದು ವಿಂಡ್ ಕಂಪನಿ ಮಧ್ಯವರ್ತಿಯ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಮತ್ತೊಬ್ಬ ರೈತ ಕುರಗೋಡೆಪ್ಪ ಮುಕ್ಕಣ್ಣವರ ಮಾತನಾಡಿ, "ಭೂಮಿ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಹಣವನ್ನು ಯಾರಾದರೂ ಗಳಿಸಬಹುದು, ಆದರೆ ಭೂಮಿ ಗಾಳಿ ವಿದ್ಯುತ್‌ಗೆ ಕೊಟ್ಟರೆ ಬಂಜರಾಗುತ್ತದೆ, ಮರಳಿ ಫಲವತ್ತತೆ ಮಾಡಲು ಸಾಧ್ಯವೇ ಇಲ್ಲ" ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಆಸ್ತಿ ಕಬಳಿಸಲು ಧಾವಿಸಿರುವ ಖಾಸಗಿ ಪವನ ವಿದ್ಯುತ್ ಕಂಪನಿಗಳ ಮೋಸಕ್ಕೆ ಬಲಿಯಾಗುತ್ತಿರುವ ರೈತರಲ್ಲಿ ಜಾಗೃತಿ ಮೂಡಿಸಲು ಪ್ರಜ್ಞಾವಂತ ಪ್ರಜೆಗಳು ಮುಂದೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

- ಬಿಎಂಟಿಸಿ ಕಂಡಕ್ಟರ್ ಒಬ್ಬರು ಸಚಿವರಿಗೇ ಶಾಕ್ ನೀಡಿದ ಘಟನೆಯ ವಿಡಿಯೋ ಒಂದು ಹೊರಬಿದ್ದಿದೆ. ಬಸ್ಸಿನಲ್ಲಿ ಚಿಲ್ಲರೆ ಇಲ್ಲದಿದ್ದಕ್ಕೆ ಕಂಡಕ್ಟರ್ ಅವರು ನೇರವಾಗಿ, "ಚಿಲ್ಲರೆ ಇಲ್ವಾ? ಬಸ್ಸಿನಿಂದ ಕೆಳಗೆ ಇಳಿ" ಎಂದು ಹೇಳಿ ಸಚಿವರಿಗೆ ಆಘಾತ ನೀಡಿದ್ದಾರೆ. ಈ ಇಡೀ ಘಟನೆಯ ವಿಡಿಯೋ ಈಗ ಲಭ್ಯವಿದೆ.1
- ಕರ್ನಾಟಕದ ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಬಿಎಂಟಿಸಿ ಬಸ್‌ನಲ್ಲಿ ಯಾರಿಗೂ ತಿಳಿಯದಂತೆ ಗುಪ್ತವಾಗಿ ಪ್ರಯಾಣಿಸುವ ಮೂಲಕ ಪ್ರಯಾಣಿಕರು ಎದುರಿಸುತ್ತಿರುವ ದೈನಂದಿನ ಸವಾಲುಗಳನ್ನು ಖುದ್ದಾಗಿ ಅನುಭವಿಸಿದ್ದಾರೆ. ಟಿಕೆಟ್ ವಿತರಣೆಯಿಂದ ಹಿಡಿದು ಪ್ರಯಾಣಿಕರ ಒಟ್ಟಾರೆ ಅನುಭವದವರೆಗಿನ ಇಂತಹ ತಳಮಟ್ಟದ ತಪಾಸಣೆಗಳು, ಸಾಮಾನ್ಯವಾಗಿ ಗಮನಕ್ಕೆ ಬಾರದೆ ಉಳಿದುಹೋಗುವ ಸಮಸ್ಯೆಗಳನ್ನು ಗುರುತಿಸಲು ಸಹಕಾರಿಯಾಗಲಿವೆ. ಈ ಪ್ರಯತ್ನವು ಪ್ರತಿಯೊಬ್ಬ ಬೆಂಗಳೂರಿಗನಿಗೂ ಉತ್ತಮ ಸೇವೆಗಳು, ಸುಗಮ ಪ್ರಯಾಣ ಮತ್ತು ಬಲಿಷ್ಠ ಬಿಎಂಟಿಸಿ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗಲಿದೆ ಎಂದು ಆಶಿಸಲಾಗಿದೆ. ಈ ನಿಟ್ಟಿನಲ್ಲಿ, ಬಿಎಂಟಿಸಿ ಸೇವೆಯಲ್ಲಿ ನೀವು ಯಾವ ರೀತಿಯ ಸುಧಾರಣೆಗಳನ್ನು ಕಾಣಲು ಬಯಸುತ್ತೀರಿ ಎಂಬುದನ್ನು ಕಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಲು ಕೋರಲಾಗಿದೆ.1
- ಕೂಡ್ಲಿಗಿ ತಾಲೂಕಿನಲ್ಲಿ ಸೋಲಾರ್ ವಿಂಡೋ ಪವರ್ ಕಂಪನಿಗಳ ಹಾವಳಿ ಮಿತಿ ಮೀರಿದ್ದು, ಬಹುತೇಕ ಕಂಪನಿಗಳಿಂದ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಕೋಟಿ ಕೋಟಿ ತೆರಿಗೆ ಹಣ ವಂಚನೆಯಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಗಳಿಂದ ಸೂಕ್ತ ತನಿಖೆಯಾಗಬೇಕೆಂದು ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೋರಾಟಗಾರರು ಆಗ್ರಹಿಸಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಅನೇಕ ಕಂಪನಿಗಳು ಅನಧಿಕೃತವಾಗಿ ತಲೆ ಎತ್ತಿದ್ದು, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನೂರಾರು ರೈತರಿಗೆ ಅನ್ಯಾಯ ಎಸಗಿವೆ. ಈ ಹಗರಣದಲ್ಲಿ ಅನೇಕ ಸ್ಥಳೀಯ ಆಡಳಿತದ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಿನ್ನಬಾರದ ಹೇಸಿಗೆ ತಿಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ತಾಲೂಕಾಡಳಿತ ಮೌನವಾಗಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಇಡಿ, ಲೋಕಾಯುಕ್ತ, ಸಿಬಿಐ, ಸಿಒಡಿ, ಎಸಿಬಿ ಮತ್ತು ಆದಾಯ ತೆರಿಗೆ ಇಲಾಖೆಗಳ ಉನ್ನತಾಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು, ಮೊದಲು ತಹಶೀಲ್ದಾರರು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಆದಾಯದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ಒಂದು ವೇಳೆ ತನಿಖೆ ನಡೆಸದಿದ್ದರೆ ಅಗತ್ಯ ಸಾಕ್ಷ್ಯಾಧಾರಗಳ ಸಮೇತ ಕಾನೂನಾತ್ಮಕ ಹೋರಾಟ ನಡೆಸುವುದರ ಜೊತೆಗೆ ಎಲ್ಲಾ ಮಾಧ್ಯಮಗಳ ಹಾಗೂ ಪತ್ರಿಕೆಗಳ ಕೇಂದ್ರ ಕಚೇರಿಗಳಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಲಾಗಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಸಂತೋಷಕುಮಾರ, ವಕೀಲ ಹಾಗೂ ಹೋರಾಟಗಾರ ಸೂಲದಳ್ಳಿ ಬಸವರಾಜಪ್ಪ, ರೈತ ಸಂಘದ ಯುವ ಮುಖಂಡ ಬಾಣದ ಮಾರುತಿ ಮತ್ತು ವಿವಿಧ ಗ್ರಾಮಗಳ ಹೋರಾಟಗಾರರು, ರೈತರು ಉಪಸ್ಥಿತರಿದ್ದರು.1
- ಕೃಷ್ಣ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರಿನ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಜಲಾಶಯಗಳ ನೀರಿನ ಮಟ್ಟವು ಏರಿಕೆಯಾಗಿದ್ದು, ಖಾರಿಫ್ ಬೆಳೆಗಳಿಗೆ ನೀರಾವರಿ ನೀರು ಬಿಡುಗಡೆಯಾಗುವ ನಿರೀಕ್ಷೆ ಬಲಗೊಂಡಿದೆ. ಕಳೆದ ಕೆಲವು ವಾರಗಳಿಂದ ತೀವ್ರ ಆತಂಕದಲ್ಲಿದ್ದ ಉತ್ತರ ಕರ್ನಾಟಕದ ರೈತರಲ್ಲಿ ಈ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗಿರುವುದು ಇದೀಗ ಹೊಸ ಭರವಸೆಯನ್ನು ಮೂಡಿಸಿದೆ. ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳ ಭಾರಿ ಒಳಹರಿವಿನಿಂದಾಗಿ ಬೆಳೆಗಳಿಗೆ ನೀರು ಬಿಡುಗಡೆಯಾಗುವ ಸಾಧ್ಯತೆಗಳು ಮತ್ತೆ ಮೂಡಿಕೊಂಡಿವೆ.1
- ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ್ ಅವರು ಜೆಡಿಎಸ್ ಕಾರ್ಯಕರ್ತರಲ್ಲಿ ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ತಿಳುವಳಿಕೆ ಮೂಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಈ ಎಸ್ಐಆರ್ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ತಿಳಿಸಿದ್ದಾರೆ. ದೇವರಹಿಪ್ಪರಗಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಶಾಸಕರು ಈ ಕುರಿತು ಅಗತ್ಯ ತಿಳುವಳಿಕೆ ನೀಡಿದ್ದಾರೆ ಎಂದು ಈರಣ್ಣ ತಾರನಾಳ್ ವರದಿ ಮಾಡಿದ್ದಾರೆ.1
- ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಮಾಜವನ್ನು ಉದ್ಧಾರ ಮಾಡುವ ರಾಜಕಾರಣಿಗಳು ಈಗ ಯಾರೂ ಇಲ್ಲ ಎಂದು ರೈತರೊಬ್ಬರು ರಾಜಕಾರಣಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆಯೇ ಸರಿಯಿಲ್ಲ ಎಂದು ಕಿಡಿಕಾರಿರುವ ರೈತರು, ರಾಜಕಾರಣಿಗಳ ಜನ್ಮ ಜಾಲಾಡಿದ್ದಾರೆ.1
- ಬಿಜೆಪಿ ಆಡಳಿತದಲ್ಲಿ ಮಂದಿರಗಳಲ್ಲಿ ಕಳವು ನಡೆದಿದೆ ಹಾಗೂ ಮಂದಿರಗಳನ್ನು ಬೀಳಿಸುವ ಕೆಲಸ ಕೂಡ ನಡೆದಿದೆ. ಉತ್ತರ ಪ್ರದೇಶದ ಚಂದೌಲಿಯಲ್ಲಿ ಕಾಳಿ ಮಾತೆಯ ಮಂದಿರವನ್ನು ಬೀಳಿಸುವ ಸಂದರ್ಭದಲ್ಲಿ 58 ವರ್ಷದ ಪಿಡಬ್ಲ್ಯೂಡಿ (PWD) ಕರ್ಮಚಾರಿಯೊಬ್ಬರು ಸಾವನ್ನಪ್ಪಿದ್ದಾರೆ.1