logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಾಲುವೆಗೆ ಬಿದ್ದ ಮಹಿಳೆ ರಕ್ಷಣೆ: ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ.! ಯಾದಗಿರಿ,ಏ.01:-: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಕಾಲುವೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ನೀರಿಗೆ ಬಿದ್ದು ಮುಳುಗುತ್ತಿರುವ ವೇಳೆ ಸ್ಥಳೀಯ ಯುವಕರು ರಕ್ಷಿಸಿದ ಘಟನೆ ನಡೆದಿದೆ. ಮಹಿಳೆ ನೀರಿನಲ್ಲಿ ತೇಲಿ ಹೋಗುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಕಾಲುವೆಗೆ ಇಳಿದು ಈಜುತ್ತಾ ಹೋಗಿ ಆಕೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಘಟನೆಯ ಬಳಿಕ ಮಹಿಳೆಯನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಮಹಿಳೆಯ ಗುರುತು ಹಾಗೂ ಕಾಲುವೆಗೆ ಬಿದ್ದ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಸ್ಥಳೀಯರ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

21 hrs ago
user_YSRmedia vijayanagaraupsates
YSRmedia vijayanagaraupsates
Photographer ಹೊಸಪೇಟೆ, ವಿಜಯನಗರ, ಕರ್ನಾಟಕ•
21 hrs ago
99998e37-a9ce-41f9-9bb9-f17960106acd
f5691d17-e0c7-476b-bc9e-f5a7a2e66712
c05b1fbe-bfe5-480a-ba88-2fb924ebea01
257346a2-9912-4ef2-8295-5b763ccf7513

ಕಾಲುವೆಗೆ ಬಿದ್ದ ಮಹಿಳೆ ರಕ್ಷಣೆ: ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ.! ಯಾದಗಿರಿ,ಏ.01:-: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಕಾಲುವೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ನೀರಿಗೆ ಬಿದ್ದು ಮುಳುಗುತ್ತಿರುವ ವೇಳೆ ಸ್ಥಳೀಯ ಯುವಕರು ರಕ್ಷಿಸಿದ ಘಟನೆ ನಡೆದಿದೆ. ಮಹಿಳೆ ನೀರಿನಲ್ಲಿ ತೇಲಿ ಹೋಗುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಕಾಲುವೆಗೆ ಇಳಿದು ಈಜುತ್ತಾ ಹೋಗಿ ಆಕೆಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಘಟನೆಯ ಬಳಿಕ ಮಹಿಳೆಯನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಮಹಿಳೆಯ ಗುರುತು ಹಾಗೂ ಕಾಲುವೆಗೆ ಬಿದ್ದ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಸ್ಥಳೀಯರ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

More news from Karnataka and nearby areas
  • ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ದುರಂತ: ವೇಗವಾಗಿ ಬಂದ ಬಸ್ ಹರಿದು 2 ವರ್ಷದ ಮಗು ಸಾವು! #JB_News_Kannada
    1
    ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ದುರಂತ: ವೇಗವಾಗಿ ಬಂದ ಬಸ್ ಹರಿದು 2 ವರ್ಷದ ಮಗು ಸಾವು!
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    19 hrs ago
  • ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ ಎಂದು ವಿರಣ್ಣ ಶೆಟ್ಟರ ಹೇಳಿದರು ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಕನ್ನಡದ ಶ್ರೇಷ್ಠ ವಚನಕಾರ್ತಿ ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು
    1
    ಶರಣರ ಕಾಲದಲ್ಲಿ ರಾಜ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ವೀರವನಿತೆ ಅಕ್ಕಮಹಾದೇವಿ  ಅವರು ಜಗತ್ತಿನ ಮಹಿಳಾ ಸಂಕುಲಕ್ಕೊಂದು ಮಾದರಿಯಾಗಿದ್ದಾರೆ ರೋಣ ತಾಲೂಕು ಬಣಜಿಗ ಸಮುದಾಯದ ಮುಖಂಡ  ಎಂದು ವಿರಣ್ಣ ಶೆಟ್ಟರ ಹೇಳಿದರು 
ಅವರು ರೋಣ ತಹಶೀಲ್ದಾರರ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಮಹಾಶರಣೆ ಅಕ್ಕ ಮಹಾದೇವಿ ಯವರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು,
ಕನ್ನಡದ ಶ್ರೇಷ್ಠ ವಚನಕಾರ್ತಿ  ಮಹಾಶರಣೆ ಅಕ್ಕಮಹಾದೇವಿಯವರು ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಮಹಾನ್ ಶರಣೆಯಾಗಿದ್ದಾರೆ , ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು, ಸಾಕ್ಷಾತ್ ಶಿವ  ಮಲ್ಲಿಕಾರ್ಜುನ ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಜೀವನ ನಡೆಸಿದರು ಇವರು ಈ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಅವರ ಗುಣಾದರ್ಶಗಳನ್ನು ನಾವೆಲ್ಲ ನಮ್ಮ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಸೋಮು ಚರೆದ, ವಿರೇಶ್ ಬಳ್ಳೊಳ್ಳಿ, ರವಿ ಸಂಗನಬಶೆಟ್ಟರ,ಬಸವರಾಜಾ ಕೋಟಗಿ, ಶಿವಣ್ಣ ಯಾವಗಲ್ಲ, ಮುತ್ತಣ್ಣ ಗದಗ, ವಿರೂಪಾಕ್ಷಪ್ಪ ಬೂದಿಹಾಳ, ವೀರಣ್ಣ ನವಲಗುಂದ, ಉಮೇಶ್ ಚವಡಿ, ಶೇಖಣ್ಣ ಐಹೊಳ್ಳಿ,ಪ್ರವೀಣ್ ಅಂಗಡಿ, ಉಪತಹಸಿಲ್ದಾರ್ ಗಣೇಶ್ ಕೊಪ್ಪದ, ಶರೀಫ ನದಾಫ,ಸೇರಿದಂತೆ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು
    user_ಚಂದ್ರು ನೆಲ್ಲೂರ
    ಚಂದ್ರು ನೆಲ್ಲೂರ
    Local News Reporter ರೋಣ, ಗದಗ, ಕರ್ನಾಟಕ•
    34 min ago
  • ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ ಹನುಮಂತ ದೇವಸ್ಥಾನ ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.
    2
    ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ  ಹನುಮಂತ ದೇವಸ್ಥಾನ  ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. 
ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    1 hr ago
  • ರಂಗೇರಿದ ಬಾಗಲಕೋಟೆ ಉಪಚುನಾವಣೆ… ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು … ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ. “ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”
    1
    ರಂಗೇರಿದ ಬಾಗಲಕೋಟೆ ಉಪಚುನಾವಣೆ…
ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು …
ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ.
“ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”
    user_Siddarth ilkal
    Siddarth ilkal
    Local News Reporter Ilkal, Bagalkote•
    7 hrs ago
  • ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡ ಕಂಬಳಿಹಾಳ ಶ್ರೀ ಮಠದ ಪೂಜ್ಯರಾದ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವದಿಸಿದರು.
    4
    ಇಳಕಲ್ ತಾಲೂಕಿನ  ಚಿಕ್ಕ ಓತಗೇರಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡ ಕಂಬಳಿಹಾಳ    ಶ್ರೀ ಮಠದ ಪೂಜ್ಯರಾದ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವದಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    17 hrs ago
  • "ಬಳ್ಳಾರಿಯಲ್ಲಿ ಆಟೋ ಡ್ರೈವರ್ ಗಳ ಜೀವನ ಏನಾಗಿದೆ ಗೊತ್ತಾ?" "ನಾವು ಹೇಗೆ ಜೀವನ ಸಾಗಿಸೋದು ಸಾರ್? ಇಷ್ಟು ದರ ವ್ಯತ್ಯಾಸ ಯಾಕೆ?" "ಗಾಂಧಿನಗರದಲ್ಲಿ ಆಟೋ ಗ್ಯಾಸ್ ದರ ₹93.54… MG ರೋಡ್ ನಲ್ಲಿ ₹84.10…" ಬಳ್ಳಾರಿಯಲ್ಲಿ ಒಂದೇ ನಗರದಲ್ಲಿ ಎರಡು ಗ್ಯಾಸ್ ದರ! 😡 ಆಟೋ ಡ್ರೈವರ್ ಗಳ ಬದುಕು ಸಂಕಷ್ಟದಲ್ಲಿದೆ. ಇದಕ್ಕೆ ಯಾರು ಉತ್ತರ ಕೊಡ್ತಾರೆ? "ಇಂಧನ ದರ ಏರಿದ್ರೆ… ಆಟೋ ಭಾಡಿಗೆ ಏರಿಸೋಕೆ ಆಗಲ್ಲ… ಜನ ಬೈತಾರೆ… ಸರ್ಕಾರ ಕೇಳ್ತಾ ಇಲ್ಲ…" "ಈ ವಿಡಿಯೋ share ಮಾಡಿ… ನಮ್ಮ ಧ್ವನಿ ಸರ್ಕಾರದವರೆಗೆ ತಲುಪಿಸೋಣ!"
    1
    "ಬಳ್ಳಾರಿಯಲ್ಲಿ ಆಟೋ ಡ್ರೈವರ್ ಗಳ ಜೀವನ ಏನಾಗಿದೆ ಗೊತ್ತಾ?"
"ನಾವು ಹೇಗೆ ಜೀವನ ಸಾಗಿಸೋದು ಸಾರ್?
ಇಷ್ಟು ದರ ವ್ಯತ್ಯಾಸ ಯಾಕೆ?"
"ಗಾಂಧಿನಗರದಲ್ಲಿ ಆಟೋ ಗ್ಯಾಸ್ ದರ ₹93.54…
MG ರೋಡ್ ನಲ್ಲಿ ₹84.10…"
ಬಳ್ಳಾರಿಯಲ್ಲಿ ಒಂದೇ ನಗರದಲ್ಲಿ ಎರಡು ಗ್ಯಾಸ್ ದರ! 😡
ಆಟೋ ಡ್ರೈವರ್ ಗಳ ಬದುಕು ಸಂಕಷ್ಟದಲ್ಲಿದೆ.
ಇದಕ್ಕೆ ಯಾರು ಉತ್ತರ ಕೊಡ್ತಾರೆ?
"ಇಂಧನ ದರ ಏರಿದ್ರೆ…
ಆಟೋ ಭಾಡಿಗೆ ಏರಿಸೋಕೆ ಆಗಲ್ಲ…
ಜನ ಬೈತಾರೆ… ಸರ್ಕಾರ ಕೇಳ್ತಾ ಇಲ್ಲ…"
"ಈ ವಿಡಿಯೋ share ಮಾಡಿ…
ನಮ್ಮ ಧ್ವನಿ ಸರ್ಕಾರದವರೆಗೆ ತಲುಪಿಸೋಣ!"
    user_ASN News24Kannada
    ASN News24Kannada
    Newsagent Davanagere, Davangere•
    2 hrs ago
  • ದಾವಣಗೆರೆ ಬ್ರೇಕಿಂಗ್ ರಂಗೇರಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾಚಣೆ ದಾವಣಗೆರೆಯಲ್ಲಿ ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಅಬ್ಬರದ ಪ್ರಚಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಹಾಲಿ ಸಿಎಂ ಸಿದ್ದರಾಮಯ್ಯ ಕ್ಯಾಂಪಿಯನ್ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಬ್ಬರದ ಪ್ರಚಾರ ಗ್ರಾಮಾಂತರ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಿದ್ರೆ ನಗರ ಭಾಗದಲ್ಲಿ ಮಾಜಿ ಸಿಎಂ ಬಿಎಸ್ ವೈ ಪ್ರಚಾರ
    1
    ದಾವಣಗೆರೆ ಬ್ರೇಕಿಂಗ್
ರಂಗೇರಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾಚಣೆ
ದಾವಣಗೆರೆಯಲ್ಲಿ ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಅಬ್ಬರದ ಪ್ರಚಾರ
ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಹಾಲಿ ಸಿಎಂ ಸಿದ್ದರಾಮಯ್ಯ ಕ್ಯಾಂಪಿಯನ್
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಬ್ಬರದ ಪ್ರಚಾರ
ಗ್ರಾಮಾಂತರ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಿದ್ರೆ
ನಗರ ಭಾಗದಲ್ಲಿ ಮಾಜಿ ಸಿಎಂ ಬಿಎಸ್ ವೈ ಪ್ರಚಾರ
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    17 hrs ago
  • ಹನುಮ ಜಯಂತಿ ಅಂಗವಾಗಿ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿನ ಹನುಮ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ನಗರದಲ್ಲಿನ ಹನುಮ ದೇವಸ್ಥಾನಗಳನ್ನು ತಳಿರೋ ತೋರಣ,ಹೂವುಗಳಿಂದ ಶೃಂಗರಿಸಿ ಆಂಜನೇಯ್ಯನಿಗೆ ವಿಶೇಷ ಪೂಜೆ, ಅಭಿಷೇಕವನ್ನು ನೆರವೇರಿಸಿದರು. ದೇವಸ್ಥಾನಗಳಿಗೆ ಭಕ್ತರು ದಂಡು ಆಗಮಿಸಿ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಜೋಶಿಗಲ್ಲಿಯಲ್ಲಿನ ಹನುಮ ಮಂದಿರ, ಬಸ್ ನಿಲ್ದಾಣ ಹತ್ತಿರದ ಆಂಜನೇಯ್ಯಸ್ವಾಮಿ ದೇವಸ್ಥಾನ, ಬಸವನಗರದ ಹನುಮ ದೇವಸ್ಥಾನ, ದರ್ಗಾ ಹತ್ತಿರದ ಹನುಮ ದೇವಸ್ಥಾನ, ಜುಂಜಾ ಮನೆಯ ಹತ್ತಿರದ ಹನುಮ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದ್ದರು.
    1
    ಹನುಮ ಜಯಂತಿ ಅಂಗವಾಗಿ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿನ ಹನುಮ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ನಗರದಲ್ಲಿನ ಹನುಮ ದೇವಸ್ಥಾನಗಳನ್ನು ತಳಿರೋ ತೋರಣ,ಹೂವುಗಳಿಂದ ಶೃಂಗರಿಸಿ ಆಂಜನೇಯ್ಯನಿಗೆ ವಿಶೇಷ ಪೂಜೆ, ಅಭಿಷೇಕವನ್ನು ನೆರವೇರಿಸಿದರು. ದೇವಸ್ಥಾನಗಳಿಗೆ ಭಕ್ತರು ದಂಡು ಆಗಮಿಸಿ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ.
ಜೋಶಿಗಲ್ಲಿಯಲ್ಲಿನ ಹನುಮ ಮಂದಿರ, ಬಸ್ ನಿಲ್ದಾಣ ಹತ್ತಿರದ ಆಂಜನೇಯ್ಯಸ್ವಾಮಿ ದೇವಸ್ಥಾನ, ಬಸವನಗರದ ಹನುಮ ದೇವಸ್ಥಾನ, ದರ್ಗಾ ಹತ್ತಿರದ ಹನುಮ ದೇವಸ್ಥಾನ, ಜುಂಜಾ ಮನೆಯ ಹತ್ತಿರದ ಹನುಮ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.