Shuru
Apke Nagar Ki App…
Shivappa Dhori
More news from Karnataka and nearby areas
- *ಭಾರತ ನಲ್ಲಿ ವೈರಲ್*1
- ಸೆಸ್ಕಾಂ ಕಚೇರಿ ಆವರಣದಲ್ಲಿ ಜನ ಸಂಪರ್ಕ ಸಭೆ. ಹನೂರು : ಪಟ್ಟಣದ ಸೆಸ್ಕಾಂ ಕಚೇರಿ ಮುಂಭಾಗದ ಆವರಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹನೂರು ಉಪ ವಿಭಾಗದ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವಿಭಾಗ ಕಚೇರಿ ಕೊಳ್ಳೇಗಾಲ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಸಭೆಗೆ ಆಗಮಿಸಿದ್ದ ರೈತ ಮುಖಂಡರುಗಳು ಹಾಗೂ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಆದಷ್ಟು ಬೇಗನೆ ಸಭೆಯಲ್ಲಿ ತಿಳಿಸಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್ ಅವರು ಮಾತನಾಡಿ ಇಂದಿನ ಸಭೆಯಲ್ಲಿ ರೈತರು ವಿವಿಧ ಸಮಸ್ಯೆಗಳನ್ನು ಒಳಗೊಂಡ ಸುಮಾರು 18 ಅರ್ಜಿಗಳು ಬಂದಿದ್ದು ಸ್ಥಳದಲ್ಲೇ ಆ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಎಂದು ತಿಳಿಸಿ ಕೇಂದ್ರ ಸರಕಾರದ ಯೋಜನೆಯಾಗಿರುವ ಪಿ ಎಂ ಕುಸುಮ್ ಬಿ ಯೋಜನೆಯಡಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಕೊಳ್ಳಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ರೈತರಿಗೆ ತುಂಬಾ ಕಡಿಮೆ ಹಣ ಖರ್ಚಿನಲ್ಲಿ ಇದೊಂದು ಉತ್ತಮ ಯೋಜನೆಯಗಿದ್ದು ಕೇಂದ್ರ ಸರ್ಕಾರ ಶೇಕಡಾ 30 ರಷ್ಟು ಸಹಾಯ ಧನ ನೀಡುತ್ತದೆ, ರಾಜ್ಯ ಸರ್ಕಾರ ಶೇಕಡಾ 50 ರಷ್ಟು ಸಹಾಯ ಧನ ನೀಡುತ್ತದೆ. ತಾವುಗಳು ಕೇವಲ 20 ರಷ್ಟು ಹಣ ವ್ಯಯ ಮಾಡಬೇಕು ಆಗಾಗಿ ತುಂಬಾ ಒಳ್ಳೆಯ ಯೋಜನೆ ಇದನ್ನು ಜಮೀನು ಇರುವ ರೈತರುಗಳೂ ಸದುಪಯೋಗ ಪಡೆದುಕೊಳ್ಳಿ ಜೊತೆಗೆ ಹಲವಾರು ಏಜೇನ್ಸಿ ಗಳ ದೂರವಾಣಿ ಸಂಖ್ಯೆ ಇರುವ ಬಿತ್ತಿ ಪತ್ರವನ್ನು ತಮಗೆ ನೀಡಿದ್ದೇವೆ ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ ನಂತರ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎ ಇ ಇ ರಂಗಸ್ವಾಮಿ, ಎ ಇ ಆನಂದ್, ಜೆ ಇ ನವೀನ್, ಜೆ ಇ ಅರ್ಜುನ್, ಎಸ್ ಎ, ರಿಯಾಜ್, ಹಾಗೂ ಗ್ರಾಹಕರು ರೈತ ಮುಖಂಡರುಗಳೂ ಇನ್ನಿತರರಿದ್ದರು. ವರದಿ :ವಿಜಯ್ ಕುಮಾರ್. ಕಾಂಚಳ್ಳಿ /ಹನೂರು4
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1