*ಹುಲಿಕಲ್ ಘಾಟ್ ನ ಕಾಮಗಾರಿಯಲ್ಲಿ ವಿಳಂಬ : ಮಳೆಗಾಲ ಪ್ರಾರಂಭವಾದರೆ ಮತ್ತೆ ಕುಸಿಯುವ ಭೀತಿ || ಕರಾವಳಿ -ಮಲೆನಾಡು ನಡುವೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ !!!* ಹೊಸನಗರ : ಕರಾವಳಿ ಹಾಗೂ ಮಲೆನಾಡು ನಡುವಿನ ಸಂಪರ್ಕ ಕೊಂಡಿ ಆಗಿರುವ ಹುಲಿಕಲ್ ಘಾಟ್ ಕಾಮಗಾರಿಯಲ್ಲಿ ವಿಳಂಬ. ಕಳೆದ ಜೂನ್ -ಜೂಲೈ ತಿಂಗಳಲ್ಲಿ ಸುರಿದ ಮಳೆಗೆ ಧರೆ ಕುಸಿದಿದ್ದು. ಅದರ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದೆ. ಅಗಲವಾಗಿದ್ದ ರಸ್ತೆಯನ್ನು ಸಣ್ಣದಾಗಿ ಮಾಡಿ ಇಕ್ಕಟ್ಟಿನ ಪರಿಸ್ಥಿತಿಗೆ ತಂದಿಡಲಾಗಿದೆ. ಇನ್ನೇನು ಮಳೆಗಾಲ ಶುರುವಾದರೆ ಮತ್ತೆ ಕರಾವಳಿ ಮತ್ತು ಮಲೆನಾಡು ನಡುವೆ ಸಂಚಾರಕ್ಕೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಕಾಣುತ್ತಿದೆ. ತೀರ್ಥಹಳ್ಳಿಯ ಆಗುಂಬೆ ಘಾಟ್ ನಲ್ಲಿ ಭಾರೀ ವಾಹನ ಸಂಚಾರಕ್ಕೆ ತಡೆ ಹಿಡಿಯಲಾಗಿದ್ದು. ಕುಂದಾಪುರ ತೀರ್ಥಹಳ್ಳಿ ಹೊಸನಗರ ಭಾಗಕ್ಕೆ ಸರಕು -ಸಾಗಣೆ ಪೆಟ್ರೋಲ್ ಉತ್ಪನ್ನ ಗಳನ್ನು ಬದಲಿ ಮಾರ್ಗವಾಗಿ ಈ ಹುಲಿಕಲ್ ಘಾಟ್ ಮುಖಾಂತರ ಸಾಗಾಣಿಕೆ ಮಾಡಲಾಗಿದ್ದು. ಸಂಚಾರಕ್ಕೆ ತುಂಬಾ ಅಗತ್ಯ ವಾಗಿರುವ ಘಾಟ್ ಇದಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಳೆಗಾಲ ಆರಂಭ ಆಗುವ ಮೊದಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರ ಅಗ್ರಹ..
*ಹುಲಿಕಲ್ ಘಾಟ್ ನ ಕಾಮಗಾರಿಯಲ್ಲಿ ವಿಳಂಬ : ಮಳೆಗಾಲ ಪ್ರಾರಂಭವಾದರೆ ಮತ್ತೆ ಕುಸಿಯುವ ಭೀತಿ || ಕರಾವಳಿ -ಮಲೆನಾಡು ನಡುವೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ !!!* ಹೊಸನಗರ : ಕರಾವಳಿ ಹಾಗೂ ಮಲೆನಾಡು ನಡುವಿನ ಸಂಪರ್ಕ ಕೊಂಡಿ ಆಗಿರುವ ಹುಲಿಕಲ್ ಘಾಟ್ ಕಾಮಗಾರಿಯಲ್ಲಿ ವಿಳಂಬ. ಕಳೆದ ಜೂನ್ -ಜೂಲೈ ತಿಂಗಳಲ್ಲಿ ಸುರಿದ ಮಳೆಗೆ ಧರೆ ಕುಸಿದಿದ್ದು. ಅದರ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದೆ. ಅಗಲವಾಗಿದ್ದ ರಸ್ತೆಯನ್ನು ಸಣ್ಣದಾಗಿ ಮಾಡಿ ಇಕ್ಕಟ್ಟಿನ ಪರಿಸ್ಥಿತಿಗೆ ತಂದಿಡಲಾಗಿದೆ. ಇನ್ನೇನು ಮಳೆಗಾಲ
ಶುರುವಾದರೆ ಮತ್ತೆ ಕರಾವಳಿ ಮತ್ತು ಮಲೆನಾಡು ನಡುವೆ ಸಂಚಾರಕ್ಕೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಕಾಣುತ್ತಿದೆ. ತೀರ್ಥಹಳ್ಳಿಯ ಆಗುಂಬೆ ಘಾಟ್ ನಲ್ಲಿ ಭಾರೀ ವಾಹನ ಸಂಚಾರಕ್ಕೆ ತಡೆ ಹಿಡಿಯಲಾಗಿದ್ದು. ಕುಂದಾಪುರ ತೀರ್ಥಹಳ್ಳಿ ಹೊಸನಗರ ಭಾಗಕ್ಕೆ ಸರಕು -ಸಾಗಣೆ ಪೆಟ್ರೋಲ್ ಉತ್ಪನ್ನ ಗಳನ್ನು ಬದಲಿ ಮಾರ್ಗವಾಗಿ ಈ ಹುಲಿಕಲ್ ಘಾಟ್ ಮುಖಾಂತರ ಸಾಗಾಣಿಕೆ ಮಾಡಲಾಗಿದ್ದು. ಸಂಚಾರಕ್ಕೆ ತುಂಬಾ ಅಗತ್ಯ ವಾಗಿರುವ ಘಾಟ್ ಇದಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಳೆಗಾಲ ಆರಂಭ ಆಗುವ ಮೊದಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರ ಅಗ್ರಹ..
- ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ರಂಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕ್ಯಾಸ್ಟಲಿನೋ, ಬಿಎಂ ರೋಹಿಣಿ, ಮಾಜಿ ಮೇಯರ್ ಕೆ. ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಸರ್ವಧರ್ಮೀಯರು ಸೇರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.1
- ಎನ್ ನಾಯಕ್, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರೈತ ಸಂಘ ಹಾಗೂ ಆಮ್ ಆದ್ಮಿ ಪಕ್ಷ ದಿನಾಂಕ 11-03-2026 ರಂದು ಬ್ಯಾಡಗಿ ಶಹರದಲ್ಲಿ, ಮಾದಿಗ ಸಮಾಜದ ಒಳ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡು ಒಳ ಮೀಸಲಾತಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡಲಾಯಿತು, ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆನಂದ ಸ್ವಾಮಿ, ಚಂದ್ರಶೇಖರ್ ಗದಗ್ಕರ್, ನಾಗರಾಜ್ ಹಿರೇಮಠ, ಸಾಧಿ ಕಲ್ಲಾಪುರ್, ಸಂಕಪ್ಪ ಮುಂದಿನಮನೆ, ಗುಡ್ಡೆಶ್, ದಾದಾಪೀರ್ ಸುಡಂಬಿ ಉಪಸ್ಥಿತರಿದ್ದರು.1
- ಶಿಗ್ಗಾವಿ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಹಾಗೂ ಶೈಕ್ಷಣಿಕ ಸಾಧನೆ ಪ್ರೋತ್ಸಾಹಿಸಲು ಶಿಕ್ಷಣ ಪ್ರೇಮಿ, ಹಂಪಿ ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಾ| ಫಕ್ಕೀರಗೌಡ ಪಾಟೀಲ ಅವರು ತಿಳಿಸಿದರು. ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಿನೂತನ ಬಹುಮಾನಗಳನ್ನು ಘೋಷಿಸಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಸತತವಾಗಿ ವ್ಯಾಸಂಗ ಮಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಸರ್ಕಾರಿ ಅಥವಾ ಖಾಸಗಿ ಶಾಲೆಯ ವಿದ್ಯಾರ್ಥಿಗೆ 100 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಕಳೆದ ವರ್ಷ (2024-25) ಸವಣೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಬೆಳ್ಳಿ ಪದಕ ನೀಡಿ ಗೌರವಿಸ ಲಾಗಿತ್ತು. ಈ ಬಾರಿ ಬಹುಮಾನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ 15 ಗ್ರಾಂ ಚಿನ್ನದ ಪದಕ, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ 25 ಗ್ರಾಂ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯವಿಲ್ಲದೆ ಹಬ್ಬದಂತೆ ಎದುರಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಶಾಂತಚಿತ್ತದಿಂದ ಹೋಗಿ ಪರೀಕ್ಷೆಗಳನ್ನು ಎದುರಿಸಬೇಕು. ನನ್ನ ದುಡಿಮೆಯ ಹಣದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನನ್ನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಶೀಘ್ರದಲ್ಲೇ ತಮ್ಮ ಒಂದು ಟ್ರಸ್ಟ್ ಸ್ಥಾಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಲಾ ಗುತ್ತದೆ. ಈ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ತರಳಬಾಳು ಶ್ರೀಗಳು ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಹಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ.4
- "ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸೂಲಗಿತ್ತಿ ತಿಮ್ಮಕ್ಕಗೆ ಸನ್ಮಾನ". ಚಳ್ಳಕೆರೆ:-ನಗರದ ವೀರಶೈವ ಮಹಿಳಾ ಸಂಘದ ವತಿಯಿಂದ "ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ"ಯ ಪ್ರಯುಕ್ತ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕಗೆ ಸನ್ಮಾನಿಸಿ ಗೌರವಧನ ನೀಡಿ ಗೌರವಿಸಲಾಯಿತು. "ಸಂಸ್ಕೃತಿ ಮತ್ತು ಸಂಪ್ರಾದಯಗಳ ಉಳುವಿನಲ್ಲಿ ಮಹಿಳೆಯ ಪಾತ್ರ"ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ನಿರ್ದೇಶಕಿ ಶ್ರೀಮತಿ ಗೀತಾ ಪ್ರಕಾಶ್ ಅವರು ಭಾರತೀಯ ಸನಾತನ ಪರಂಪರೆಯ ಸಂಸ್ಕೃತಿ ಮತ್ತು ವಿಶಿಷ್ಟ ಸಂಪ್ರದಾಯಗಳನ್ನು ಮಹಿಳೆಯರು ಪ್ರತಿನಿತ್ಯ ತಮ್ಮ ದೈನಂದಿನ ಜೀವನದಲ್ಲಿ ಆಚರಣೆಗೆ ತರುವ ಮೂಲಕ ಅವುಗಳನ್ನು ಉಳಿಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು.ಇದರ ಭಾಗವಾಗಿ ಮಕ್ಕಳಲ್ಲಿ ಉತ್ತಮ ಸಾಂಸ್ಕೃತಿಕ ಮೌಲ್ಯಗಳನ್ನು ತುಂಬಿ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿ ಅವರನ್ನು ಸಾಂಸ್ಕೃತಿಕ ರಾಯಭಾರಿಗಳಾಗಿ ಮಾಡಬೇಕು ಕಿವಿಮಾತು ಹೇಳಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ವೀರಶೈವ ಮಹಿಳೆಯರಿಂದ ಭಾರತದ ವಿವಿಧ ರಾಜ್ಯಗಳ ಉಡುಗೆ-ತೊಡಿಗೆಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ವೀರಶೈವ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಪದ್ಮ ನಾಗರಾಜ್, ಕಾರ್ಯದರ್ಶಿ ಮಂಜುಳಾ ನಾಗರಾಜ್, ನಿರ್ದೇಶಕರಾದ ಗೀತಾ ಪ್ರಕಾಶ್, ಸುನೀತಾ,ಸುಮಾ, ಮಮತಾ,ವನಜಾ, ಸೌಮ್ಯಲತಾ, ಮಂಗಳಾ,ಕವಿತಾ, ಕಾಲುವೆಹಳ್ಳಿ ಪಾಲಕ್ಕ, ಕರೀಕೆರೆ ಮಂಜುಳಾ, ಪ್ರಮೀಳಾ, ತಳುಕಿನ ತೊಯಜಾಕ್ಷಿ, ಜಗದಂಬಾ, ಶಾಂತಮ್ಮ, ರತ್ನಮ್ಮ, ಪುಷ್ಪಲತಾ, ಅನಿತಾ,ಜಾನಕಿ, ಶೈಲಜಾ, ವಿಶಾಲಾಕ್ಷಿ, ಯಶೋಧಾ,ಶಾರದಾ, ತಿಪ್ಪಮ್ಮ,ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವೀರಶೈವ ಮಹಿಳಾ ಸಂಘದ ಸದಸ್ಯರು ಇದ್ದರು.1
- ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಬಳಿ ಮೃತ ಮಹಿಳೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಧಾಖಲಾಗಿದ್ದ ಮಹಿಳೆ ಹೆರಿಗೆ ನಂತರ ಮೃತಪಟ್ಟಿದ್ದು ಮಗು ಚಿಕಿತ್ಸೆ ಪಡೆಯುತ್ತಿದ್ದು ಶಿಲ್ಪ ಎಂಬ ಮಹಿಳೆ ಸಾವನ್ನಪ್ಪಿದ್ದು ಮಹಿಳೆ ಸಾವಿಗೆ ವೈದ್ಯರು ಹಾಗೂ ಜಿಲ್ಲಾ ಸರ್ಜನ್ ಅವರೆ ಕಾರಣ ಎಂದು ಆರೋಪಿಸಿದ್ದಾರೆ1
- 56,432 ಹುದ್ದೆಗಳ ನೇಮಕಾತಿಯ ಅಧಿಸೂಚನೆ ಕೂಡಲೇ ಹೊರಡಿಸಲು ಆಗ್ರಹಿಸಿ ವಿಜಯಪುರದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಒಂದಲ್ಲ ಒಂದು ದೂರು ಕೇಳಿ ಬರುತ್ತಲೇ ಇರುವ ನಡುವೆಯೇ ನಡೆದ ಬಾಣಂತಿಯ ಸಾವು.. ಚಿತ್ರದುರ್ಗ :ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪರಶುರಾಮಪುರದ ಶಿಲ್ಪ ಎನ್ನುವ ಮಹಿಳೆಯೋರ್ವರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹೆರಿಗೆ ವೇಳೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷದಿಂದಾಗಿಯೇ ಸಾವಾಗಿರೋದಾಗಿ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.. ಶಿಲ್ಪಾ(28) ಮೃತ ದುರ್ದೈವಿಯಾಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುಗೆ ದಾಖಲಿಸುವುದಾಗಿ ಹೇಳಿ ಶಿಲ್ಪಾರ ಮೃತದೇಹವನ್ನು ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.. ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಶಿಲ್ಪಾರನ್ನು ನಿನ್ನೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತಡರಾತ್ರಿ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದರು. ಹೆರಿಗೆ ಬಳಿಕ ವೈದ್ಯರು ನಿರ್ಲಕ್ಷ ತೋರಿದ ಪರಿಣಾಮ ಶಿಲ್ಪಾಳ ಸಾವು ಸಂಭವಿಸಿದೆ. ಏಕಾಏಕಿ ಐಸಿಯುಗೆ ಶಿಫ್ಟ್ ಮಾಡಬೇಕೆಂದು ಹೇಳಿ ನೇರವಾಗಿ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ ಎಂಬುದು ಮೃತಳ ತಾಯಿ ದುರ್ಗಮ್ಮ ಅವರ ಆರೋಪ. ಇನ್ನು ವಿಷಯ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿದ್ದು, ಜಿಲ್ಲಾಸ್ಪತ್ರೆಯ ಮುಖ್ಯಸ್ಥರಾದ ಡಾ.ರವೀಂದ್ರ ಸೇರಿ ಸಿಬ್ಬಂದಿಯನ್ನು ತರಾಟೆಗೆ ಪಡೆದಿದ್ದಾರೆ..1