*ಮಹಿಳಾ ಮೀಸಲು ಮಸೂದೆ ಸೋಲು; ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ* *ಮಹಿಳಾ ಘಟಕದಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ* ** ಬೆಂಗಳೂರು: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಶೇ.33ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಷಡ್ಯಂತ್ರ್ಯದಿಂದ ಲೋಕಸಭೆಯಲ್ಲಿ ಲೋಕಸಭೆಯಲ್ಲಿ ಸೋಲಾಗಿದ್ದನ್ನು ಖಂಡಿಸಿ ಜೆಡಿಎಸ್ ಮಹಿಳಾ ಘಟಕ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದ ಈ ಪ್ರತಿಭಟನೆಯಲ್ಲಿ ಜೆಡಿಎಸ್ ಕಾರ್ಯಕರ್ತೆಯರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಮಿತ್ರಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಅವರು; 1996ರಲ್ಲಿ ಶಾಸನಸಭೆಗಳಲ್ಲಿ ಮಹಿಳೆಯರಿಗೆ ನ್ಯಾಯೋಚಿತ ಮೀಸಲಾತಿ ನೀಡುವ ಉದ್ದೇಶದಿಂದ ಸಂಸತ್ತಿನಲ್ಲಿ ಮಹಿಳಾ ಮೀಸಲು ವಿಧೇಯಕವನ್ನು ಮಂಡಿಸಿದ್ದರು. ಅಂದು ಕೂಡ ಕಾಂಗ್ರೆಸ್ ಮತ್ತು ಸಂಯುಕ್ತ ರಂಗದ ಕೆಲ ಮಿತ್ರಪಕ್ಷಗಳ ಕುಯುಕ್ತಿಯಿಂದ ಆ ಮಸೂದೆಗೆ ಸೋಲಾಯಿತು. ಮತ್ತೆ ಅದೇ ಇತಿಹಾಸ ಮರುಕಳಿದ್ದು, ರಾಷ್ಟ್ರದ ಮಹಿಳೆಯರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಹಿಂದಿನಿಂದಲೂ ಮಹಿಳಾ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿದೆ ಎಂದು ದೂರಿದ ಅವರು, ಮಹಿಳಾ ಮೀಸಲು ಮಸೂದೆ ಸೋಲಿಗೆ ಕಾರಣರಾದ ಕಾಂಗ್ರೆಸ್ಸಿಗರನ್ನು ರಾಷ್ಟ್ರದ ಮಹಿಳೆಯರು ಶಾಶ್ವತವಾಗಿ ಮನೆಯಲ್ಲಿ ಕೂರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ನಗರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರಾವ್ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಗೌಡ, ಶರವಣ ಮೊದಲಾದವರು; ಮಹಿಳೆಯರ ಭವಿಷ್ಯಕ್ಕೆ ಕಾಂಗ್ರೆಸ್ ಪಕ್ಷ ಹಾಗೂ ಅದರ ಮಿತ್ರಪಕ್ಷಗಳು ಧಕ್ಕೆ ಉಂಟು ಮಾಡಿವೆ. ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿ ಅನುಷ್ಠಾನ ಮಾಡಿದ್ದಿದ್ದರೆ ರಾಷ್ಟ್ರದಲ್ಲಿ ಇತಿಹಾಸ ಸೃಷ್ಟಿ ಆಗುತ್ತಿತ್ತು. ಕಾಂಗ್ರೆಸ್ ಪಕ್ಷ ಒಂದು ಸುವರ್ಣಾವಕಾಶವನ್ನು ಕೈಚೆಲ್ಲಿದೆ ಎಂದು ಕಿಡಿಕಾರಿದರು. ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೋ ಎನ್ನುವ ಭಯದಲ್ಲಿ ಕಾಂಗ್ರೆಸ್ ಈ ಮಸೂದೆಗೆ ಬೆಂಬಲ ನೀಡಿದೇ ಕೈಕೊಟ್ಟಿದೆ. ಅದರ ಮಿತ್ರಪಕ್ಷಗಳು ಕೂಡ ಅದೇ ವರ್ತನೆ ತೋರಿರುವುದು ಖಂಡನೀಯ ಎಂದು ಅವರು ಟೀಕಾಪ್ರಹಾರ ನಡೆಸಿದರು. ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಅಧ್ಯಕ್ಷೆ ಕವಿತಾ ರೆಡ್ಡಿ, ಪಶ್ಚಿಮ ಜಿಲ್ಲಾ ಅಧ್ಯಕ್ಷೆ ಮಂಗಳಮ್ಮ, ಮುಖಂಡರುಗಳಾದ ಮಲ್ಲೇಶ್ವರಿ, ಕವಿತಾ, ಅನುರಾಧ, ಜಯಲಕ್ಷ್ಮಿ ಕಾರ್ತಿಕ್, ವಿಜಯಲಕ್ಷ್ಮಿಹಾಗೂ ಇನ್ನಿತರ ಮಹಿಳಾ ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಈ ಮಹಿಳಾ ಪ್ರತಿಭಟನೆಗೆ ಶಾಸಕರು, ಮಾಜಿ ಶಾಸಕರು, ಜಿಬಿಎ ಜಿಲ್ಲಾಧ್ಯಕ್ಷರುಗಳು ಹಾಗೂ ಗ್ರೇಟರ್ ಬೆಂಗಳೂರು ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳು ಸಹಕಾರ ನೀಡಿದರು. ** **

- *ಶಾಸಕ ಅಶ್ವಥ್ ನಾರಾಯಣ್ ಹೇಳಿಕೆ.* *ಇಡಿ ದಾಳಿ ವಿಚಾರ..* ನನಗೂ ಇದರ ಬಗ್ಗೆ ಮಾಹಿತಿ ಇಲ್ಲ.. ಏನೆಲ್ಲಾ ಆಗಲಿದೆ ಕಾದು ನೊಡೋಣ.. ಇಡಿ ದಾಳಿ ಆದ ಮೇಲೆ ಮಾಹಿತಿ ಸಿಗಲಿದೆ.. ಯಾವ ವಿಷಯಕ್ಕೆ ಆಗಿದೆ ಅನ್ನೋದು ಈಗಲೇ ಹೇಳಲಾಗಲ್ಲ.. ಉಪ್ಪು ತಿಂದವರು ನೀರು ಕುಡಿಯಬೇಕು.. ಅವರ ಮೇಲೆ ಕ್ರಮ ಆಗಬೇಕು.. ಬಿಜೆಪಿ ಮೇಲೆ ಆರೋಪ ಸರಿಯಲ್ಲ.. ಸತ್ಯ ಹೊರಗೆ ಬರಬೇಕು.. ಬಿಟ್ ಕಾಯಿನ್ ವಿಚಾರದಲ್ಲಿ ತನಿಖೆ ಆಗಬೇಕು ಅಂತ ಕಾಂಗ್ರೆಸ್ ನಾಯಕರು ಹೇಳ್ತಾರೆ.. ತನಿಖೆಯಾಗಿ ಸತ್ಯ ಹೊರಗೆ ಬರಲಿ.. ನೂರು ವರ್ಷವಾದ್ರೂ ಅದನ್ನ ಪತ್ತೆ ಹಚ್ಚಬಹುದು.. ಪ್ರಿಯಾಂಕ್ ಖರ್ಗೆ ಹೇಳೋದಲ್ಲ, ಮಾಡಬೇಕು.. ಅಧಿಕಾರಕ್ಕೆ ಬಂದು ಮೂರು ವರ್ಷಗಳಾದ್ರೂ ತನಿಖೆ ಮಾಡಿಲ್ಲ.. ಅಶ್ವಥ್ ನಾರಾಯಣ್. *ಕಾವೇರಿ ನಿರೀನ ಕೊರತೆ ವಿಚಾರ..* ಈಗ ಬೇಸಿಗೆ ಕಾಲ ಆರಂಭವಾಗ್ತಿರೋ ಹಿನ್ನೆಲೆ.. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು.. ಕುಡಿಯುವ ನೀರಿಗೆ ಕೊರತೆ ಇಲ್ಲದಂತೆ ಕ್ರಮ ಆಗಬೇಕು.. ಸರ್ಕಾರ BWSSB ಮೂಲಕ ನೀರನ್ನ ಪೂರೈಸಬೇಕು.. ನಿರೀನ ಕೊರತೆಯಾಗದಂತೆ ಜಲಮಂಡಳಿ ಕೆಲಸ ಮಾಡಲಿ.. ಸರ್ಕಾರ ಜನರ ಪರವಾಗಿ ಕೆಲಸ ಮಾಡಲಿ..1
- *ELDERS BEWARE* Oh, poor old man…! He came to the bank to deposit money, wrote the details on the deposit slip, and then suddenly collapsed from the very chair where he was sitting and died. Lakshminarayana, a retired employee residing in Nacharam, came on Wednesday to the Punjab National Bank in Habsiguda to deposit some cash; he suffered a heart attack, fell down right there, and collapsed. The bank staff rushed him to the hospital, but by the time he reached there the doctors said he had already passed away. During summer, it is better not to let elderly people go out unnecessarily, as far as possible1
- ಕುಂದಲಹಳ್ಳಿಯಲ್ಲಿ ಬೈಕ್ ಅಪಘಾತ, ಇಬ್ಬರಿಗೆ ಗಾಯ ಇಂಡಿಕೇಟರ್ ಇಲ್ಲದೆ ತಿರುವು, ಡಿಕ್ಕಿ ಸಂಭವ1
- ನಗರೇನಹಳ್ಳಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸೂಲಿಬೆಲೆ ಹೋಬಳಿಯ ನಗರೇನಹಳ್ಳಿ ಗ್ರಾಮದಲ್ಲಿ ಸುಮಾರು 30 ಲಕ್ಷ ರೂ. ಆರ್‌ಡಿಪಿಆರ್ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಯ ಭೂಮಿಪೂಜೆಯನ್ನು ಗಣ್ಯರೊಂದಿಗೆ ನೆರವೇರಿಸಲಾಯಿತು1
- ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ ಬೃಹತ್ ಪ್ರತಿಭಟನೆ1
- Post by Chand Pasha1
- KOLAR KI.AWAAZ KOUSAR1
- Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*1