Shuru
Apke Nagar Ki App…
ಕೇಳ್ಕರದಲ್ಲಿ ನದಿ ನೀರಲ್ಲಿ ಮುಳುಗಿ ಯುವಕ ಸಾವು: ಹಬ್ಬದ ಸಂಭ್ರಮದಲ್ಲಿದ್ದ ಮನಕ್ಕೆ ಶೋಕ ನೀರಲ್ಲಿ ಈಜಲು ಹೋದ ಯುವಕನೊಬ್ಬ ಅಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕೇಳ್ಕರ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನದಿಗೆ ಮಾ.21 ರಂದು ಸಂಜೆ 4 ಗಂಟೆಗೆ ಈಜಲು ಹೋದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಇರ್ಫಾನ್(19) ಎಂಬಾತ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನೀರಲ್ಲಿ ಮುಳುಗಿ ಕೆಲವೇ ಕ್ಷಣದಲ್ಲಿ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
Shamsheer Budoli
ಕೇಳ್ಕರದಲ್ಲಿ ನದಿ ನೀರಲ್ಲಿ ಮುಳುಗಿ ಯುವಕ ಸಾವು: ಹಬ್ಬದ ಸಂಭ್ರಮದಲ್ಲಿದ್ದ ಮನಕ್ಕೆ ಶೋಕ ನೀರಲ್ಲಿ ಈಜಲು ಹೋದ ಯುವಕನೊಬ್ಬ ಅಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕೇಳ್ಕರ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನದಿಗೆ ಮಾ.21 ರಂದು ಸಂಜೆ 4 ಗಂಟೆಗೆ ಈಜಲು ಹೋದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಇರ್ಫಾನ್(19) ಎಂಬಾತ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನೀರಲ್ಲಿ ಮುಳುಗಿ ಕೆಲವೇ ಕ್ಷಣದಲ್ಲಿ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
More news from ಕರ್ನಾಟಕ and nearby areas
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 5 ರಂದು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್ 5 ರಂದು ಬೆಂಗಳೂರಿನಿಂದ ಹೊರಟು ಸಂಜೆ 4 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, ನಂತರ ಕಾಸರಗೋಡು ಜಿಲ್ಲೆಗೆ ತೆರಳಲಿದ್ದಾರೆ. ರಾತ್ರಿ 8:40- ಮುಖ್ಯಮಂತ್ರಿಗಳು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.1
- ಕಡೂರು:ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ(26) ನೇಣಿಗೆ ಶರಣಾದವ. ತಾಲ್ಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ. ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ. ಮದುವೆ ವಿಚಾರದಲ್ಲಿ ಮಾನಸಿಕವಾಗಿ ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕ್ರೈಸ್ತಭಾಂಧವರಿಂದ ಇಂದು ನಗರದ ಡಾ:ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರನ್ ಫಾರ್ ಜೀಸಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರು ರೈಟ್ ರೆವೆರೆಂಡ್ ಡಾ: ಜೋಸೆಫ್ ಅರಮಚ್ಚಾದತ್ ರವರು ವಿದ್ಯುಕ್ತ ವಾಗಿ ಚಾಲನೆ ನೀಡಿ ಮಾತನಾಡಿ, ಯೇಸು ಕ್ರಿಸ್ತನ ಮಾನವ ಕುಲಕ್ಕೆ ಮಾಡಿದ ತ್ಯಾಗದ ಬಲಿದಾನವನ್ನು ಸ್ಮರಿಸಿದರು. ರನ್ ಫಾರ್ ಜೀಸಸ್ ಮೆರವಣಿಗೆ ಯಲ್ಲಿ ಯೇಸುಕ್ರಿಸ್ತನ ತ್ಯಾಗ, ಬಲಿದಾನ ಜೀವನ ಚರಿತ್ರೆಯನ್ನು ನಾಟಕದ ಮೂಲಕ ಪ್ರದರ್ಶಿಸ ಲಾಯಿತು. ಕಾರ್ಯಕ್ರಮಕ್ಕೂ ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಮೆರವಣಿಗೆ ಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ನೇತೃತ್ವದಲ್ಲಿ ನಡೆಯಿತು. ನಗರಸಭಾ ಸದಸ್ಯ ಜಾರ್ಜ್, ವಿಲ್ಸನ್ ಬಾಬು, ಸೂಡ ಸದಸ್ಯ ಫ್ರಾನ್ಸಿಸ್, ಆಶ್ರಯ ಸಮಿತಿ ಸದಸ್ಯ ವೆಂಕಟೇಶ್ ಇಮಾನು ವೇಲ್, ಎಂ.ಜಿ ರಾಮಚಂದ್ರ, ಮೋಸಸ್ ರೋಷಯ್ಯ, ಪಾಸ್ಟರ್ ಗಳಾದ ರೇಮಂಡ್, ಅಂತೋಣಿ ಪ್ರಕಾಶ್ ಸೇರಿದಂತೆ ಸಾವಿರಾರು ಕ್ರೈಸ್ತ ಭಕ್ತರು ಭಾಗವಹಿಸಿದ್ದರು. ಮೆರವಣಿಗೆ ಹಾಲಪ್ಪ ಸರ್ಕಲ್, ಮಾಧವ ಚಾರ್ ಸರ್ಕಲ್, ರಂಗಪ್ಪ ಸರ್ಕಲ್, ಮೂಲಕ ಕನಕ ಮಂಟಪ ಮೈದಾನದಲ್ಲಿ ಮುಕ್ತಾಯ ಗೊಂಡಿತು. ಮಧ್ಯಪ್ರಾಕ್ಷದ ಯುದ್ಧಗಳು ನಿಲ್ಲುವಂತೆ ಎಲ್ಲಾ ವೃತಗಳಲ್ಲಿ ಸಮಾಧಾನಕ್ಕಾಗಿ ಪಾಸ್ಟರ್ ಗಳಿಂದ ಪ್ರಾರ್ಥಿಸಲಾಯಿತು.1
- Post by Santa Dsouza2
- *ಭಾರತ ನಲ್ಲಿ ವೈರಲ್*1
- Post by Mayur TV Hangal YouTube c1
- ಕ್ಷುಲ್ಲಕ ಕಾರಣಕ್ಕೆ ವಿಶೇಷ ಚೇತನನ ಮೇಲೆ ಹಲ್ಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನೆಡೆದಿದೆ. ಮುದ್ದು ಮಾದೇಗೌಡ (40) ಹಲ್ಲೆಗೊಳಗಾದ ವಿಶೇಷಚೇತನನಾಗಿದ್ದು ಸದ್ಯ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಮಾರ್ಚ್ 31ರಂದು ಮುದ್ದು ಮಾದೇಗೌಡ ಮೂರು ಚಕ್ರದ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು ಈ ವೇಳೆ ಗ್ರಾಮದ ಬಸವಣ್ಣ ಎಂಬ ವ್ಯಕ್ತಿ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿದ್ದ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ವಿಶೇಷ ಚೇತನ ಎಂಬುದನ್ನ ನೋಡದೆ ವಾಹನ ಅಡ್ಡ ಹಾಕಿ ಬಸವಣ್ಣ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ತಿಂಗಳ ಮೊದಲ ಸ್ವಚ್ಛ ಶನಿವಾರ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ 223 ಗ್ರಾಮ ಪಂಚಾಯತ್‍ಗಳು ಭಾಗವಹಿಸಿ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಕಸಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿ ಹಾಗೂ ಬಸ್ಸು ತಂಗುದಾಣ, ರಸ್ತೆ ಬದಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಆಚರಿಸಲಾಯಿತು. ಪ್ರತಿ ತಿಂಗಳ ಮೊದಲ ಶನಿವಾರ ಸ್ವಚ್ಛ ಶನಿವಾರ ನಡೆಸುವ ಪ್ರಯುಕ್ತ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಕಸ ಎಸÉದವರಿಗೆ ದಂಡ ವಿಧಿಸಲಾಯಿತು. ಹರೇಕಳ ಗ್ರಾಮದ ಕರಾವಳಿ ಬೇಕರಿಗೆ 1000 ರೂ ಹಾಗೂ ಆಟೊ ಸರ್ವಿಸ್ ಗೆ 500 ರೂ. ದಂಡ ವಿಧಿಸಿ ಏಕ ಬಳಕೆಯ ಪ್ಲಾಸ್ಟಿಕ್ ನಿμÉೀಧದ ನೋಟಿಸ್ ನೀಡಿ ಬಟ್ಟೆ ಚೀಲ ವಿತರಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿ ರುದ್ರ ಭೂಮಿಗೆ ಹೋಗುವ ರಸ್ತೆ ಬದಿ, ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಜಿರೆ - ಬೆಳಾಲುಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೂರು ಭಾಗಗಳಲ್ಲಿ ಸ್ವಚ್ಛ ಶನಿವಾರ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಶಿವಾಜಿ ನಗರ- ಕ್ರಾಸ್, ಕುವೆಂಪುನಗರ- ಕ್ರಾಸ್ ಹಾಗೂ ಓಡಲ ಎಂಬಲ್ಲಿ ರಸ್ತೆ ಬದಿಯ ಬ್ಲ್ಯಾಕ್ ಸ್ಪಾಟ್ ಗಳಲ್ಲಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಿ ಸ್ವಚ್ಛತೆ ಮಾಡಲಾಯಿತು. ಸ್ವಚ್ಛ ಶನಿವಾರ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ/ಪಂಚಾಯತ್ ಸಿಬ್ಬಂದಿಗಳು , ಸಿ.ಎಚ್.ಒ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ದ್ವಿ.ದ. ಲೆಕ್ಕ ಸಹಾಯಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.1