logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಷ್ಟದ ಹಾದಿಯಲ್ಲಿ ಬದುಕು ಕಟ್ಟಿಕೊಂಡ ಮಲ್ಲಯ್ಯ* *20 ವರ್ಷಗಳಿಂದ ಟೈಪಿಂಗ್ ವೃತ್ತಿಯೇ ಬದುಕಿನ ಆಸರೆ — ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ಜನಮೆಚ್ಚಿದ ಟೈಪಿಸ್ಟ್* *ಕಷ್ಟದ ಹಾದಿಯಲ್ಲಿ ಬದುಕು ಕಟ್ಟಿಕೊಂಡ ಮಲ್ಲಯ್ಯ* *20 ವರ್ಷಗಳಿಂದ ಟೈಪಿಂಗ್ ವೃತ್ತಿಯೇ ಬದುಕಿನ ಆಸರೆ — ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ಜನಮೆಚ್ಚಿದ ಟೈಪಿಸ್ಟ್* ಚಿತ್ರದುರ್ಗ: ಬದುಕಿನಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಛಲ ಬಿಡದೆ, ಪರಿಶ್ರಮವನ್ನೇ ಬಂಡವಾಳ ಮಾಡಿಕೊಂಡು ಸ್ವಂತ ಬದುಕು ಕಟ್ಟಿಕೊಂಡವರು ಹಲವರು. ಅಂತಹವರ ಸಾಲಿನಲ್ಲಿ ನಿಲ್ಲುವವರು ಮಲ್ಲಯ್ಯ. ಕಳೆದ 20 ವರ್ಷಗಳಿಂದ ಟೈಪಿಂಗ್ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಮಲ್ಲಯ್ಯ, ತಮ್ಮ ಸರಳತೆ, ಸೇವಾ ಮನೋಭಾವ ಮತ್ತು ಕೆಲಸದ ಮೇಲಿನ ಶ್ರದ್ಧೆಯಿಂದ ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ತಮ್ಮದೇ ಆದ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ. ಮಲ್ಲಯ್ಯ ಅವರು ಮೂಲತಃ *ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರುಡಿಹಳ್ಳಿ* ಗ್ರಾಮದವರು. ಪೆದ್ದಮ್ಮ ಹಾಗೂ ನೆಲಮಲ್ಲಯ್ಯ ದಂಪತಿಯ ಹಿರಿಯ ಮಗನಾದ ಮಲ್ಲಯ್ಯ, ಚಿಕ್ಕಂದಿನಿಂದಲೇ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾ ವಿದ್ಯಾಭ್ಯಾಸ ಮಾಡಿ ಬೆಳೆದವರು. *ಸ್ವಗ್ರಾಮ ತೊರೆದು ಚಿತ್ರದುರ್ಗಕ್ಕೆ ಬಂದ ಪಯಣ* ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ *ಗೋಲಿಬಾರ್* ಘಟನೆಯ ಸಂದರ್ಭದಲ್ಲಿ ತಮ್ಮ ಸ್ವಗ್ರಾಮವನ್ನು ತೊರೆದು ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಮಲ್ಲಯ್ಯ ಅವರು ಚಿತ್ರದುರ್ಗಕ್ಕೆ ಬಂದರು. ಚಿತ್ರದುರ್ಗಕ್ಕೆ ಬಂದ ನಂತರ ಆರಂಭದಲ್ಲಿ ಪತ್ರಿಕೆ ವಿನ್ಯಾಸ ಹಾಗೂ ಅಕ್ಷರ ಜೋಡಣೆ ಕೆಲಸಕ್ಕಾಗಿ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಂದಲೇ ಮುದ್ರಣ ಮತ್ತು ಅಕ್ಷರ ಜೋಡಣೆಯ ಅನುಭವವನ್ನು ಪಡೆದುಕೊಂಡ ಅವರು, ನಂತರ ಚಿತ್ರದುರ್ಗ ನ್ಯಾಯಾಲಯದ ಆವರಣದಲ್ಲಿ ಟೈಪಿಸ್ಟ್ ವೃತ್ತಿಯನ್ನು ಆರಂಭಿಸಿದರು. ಅಂದು ಆರಂಭವಾದ ಈ ವೃತ್ತಿ ಇಂದು ಎರಡು ದಶಕಗಳ ಪಯಣವನ್ನು ಕಂಡಿದೆ. ಕೋರ್ಟ್ ಆವರಣದಲ್ಲಿ ‘ಮಲ್ಲಯ್ಯ’ ಎಂದರೆ ಸಾಕು! ಇಂದು ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ಮಲ್ಲಯ್ಯ ಅವರ ಟೈಪಿಂಗ್ ಕೆಲಸಕ್ಕೆ ವಿಶೇಷವಾದ ಬೇಡಿಕೆಯಿದೆ. ವಕೀಲರು, ಸಾರ್ವಜನಿಕರು ಸೇರಿದಂತೆ ಅನೇಕರು,*ಮಲ್ಲಯ್ಯ” ಎಂದು ಕೇಳಿದರೆ ಸಾಕು* ಅವರ ಸೇವೆಯನ್ನು ನೆನಪಿಸಿಕೊಳ್ಳುತ್ತಾರೆ. ಮಲ್ಲಯ್ಯ ಅವರು ತಮ್ಮ ಕೆಲಸವನ್ನು ಕೇವಲ ವೃತ್ತಿಯಾಗಿ ನೋಡದೆ, ಜನರಿಗೆ ನೆರವಾಗುವ ಸೇವೆ ಎಂಬ ಮನೋಭಾವದಿಂದ ನಿರ್ವಹಿಸುತ್ತಾರೆ. ಅವರು ಅಂಗಡಿಯಲ್ಲಿ ಇಲ್ಲದಿದ್ದರೆ, ಕೆಲವರು ಅವರನ್ನು ಹುಡುಕಿಕೊಂಡು ಹೋಗುವಷ್ಟು ಆತ್ಮೀಯತೆ ಮತ್ತು ನಂಬಿಕೆಯನ್ನು ಗಳಿಸಿದ್ದಾರೆ. ಬಡವರು, ವಯೋವೃದ್ಧರಿಗೆ ವಿಶೇಷ ಕಾಳಜಿ ಮಲ್ಲಯ್ಯ ಅವರ ವ್ಯಕ್ತಿತ್ವದ ಮತ್ತೊಂದು ವಿಶೇಷತೆ ಅವರ ಮಾನವೀಯ ಗುಣ. ಬಡವರು ಹಾಗೂ ವಯೋವೃದ್ಧರು ತಮ್ಮ ಕೆಲಸಕ್ಕಾಗಿ ಬಂದಾಗ ಅವರ ಸಮಸ್ಯೆಗಳನ್ನು ಆಲಿಸಿ, ಯೋಗಕ್ಷೇಮ ವಿಚಾರಿಸಿ, ಸಾಧ್ಯವಾದಷ್ಟು ಬೇಗ ಹಾಗೂ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಡುತ್ತಾರೆ. ಅಷ್ಟೇ ಅಲ್ಲದೆ, ದೂರದಿಂದ ಬಂದ ವಯೋವೃದ್ಧರು ಅಥವಾ ಬಡವರಿಗೆ *ಊಟ-ತಿಂಡಿ ಮಾಡಿಸಿ ಕಳುಹಿಸುವ ಮಾನವೀಯತೆ* ಕೂಡ ಅವರಲ್ಲಿದೆ. ಇದೇ ಗುಣ ಅವರನ್ನು ಕೇವಲ ಟೈಪಿಸ್ಟ್ ಆಗಿರದೆ, ಕೋರ್ಟ್ ಆವರಣದಲ್ಲಿ ಜನರ ವಿಶ್ವಾಸ ಗಳಿಸಿದ ವ್ಯಕ್ತಿಯನ್ನಾಗಿ ಮಾಡಿದೆ. ಕೂಡ್ಲಿಗಿಯಿಂದ *ಮೊಳಕಾಲ್ಮೂರಿನವರೆಗೂ ಹುಡುಕಿಕೊಂಡು ಬರುತ್ತಾರೆ* ಮಲ್ಲಯ್ಯ ಅವರ ಸೇವೆಯ ಮೇಲಿನ ನಂಬಿಕೆ ಚಿತ್ರದುರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೂಡ್ಲಿಗಿ, ಮೊಳಕಾಲ್ಮೂರು ಸೇರಿದಂತೆ ವಿವಿಧ ತಾಲೂಕುಗಳಿಂದಲೂ ಜನರು ಅವರನ್ನು ಹುಡುಕಿಕೊಂಡು ಚಿತ್ರದುರ್ಗಕ್ಕೆ ಬಂದು ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ವೃತ್ತಿಯಲ್ಲಿ ನೈಪುಣ್ಯ, ಮಾತಿನಲ್ಲಿ ಸರಳತೆ, ನಡೆ-ನುಡಿಯಲ್ಲಿ ಆತ್ಮೀಯತೆ ಹಾಗೂ ಬಡವರ ಬಗ್ಗೆ ಕಾಳಜಿ—ಇವೆಲ್ಲವೂ ಮಲ್ಲಯ್ಯ ಅವರ ಜನಪ್ರಿಯತೆಗೆ ಕಾರಣವಾಗಿದೆ. *ಕಷ್ಟದಿಂದ ಆರಂಭವಾದ ಬದುಕು… ಇಂದು ವಿಶ್ವಾಸದ ವೃತ್ತಿ* ಸ್ವಗ್ರಾಮವನ್ನು ತೊರೆದು ಅನ್ಯ ಊರಿಗೆ ಬಂದು, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸದಿಂದ ಆರಂಭಿಸಿ, ನಂತರ ಟೈಪಿಂಗ್ ವೃತ್ತಿಯಲ್ಲಿ ನೆಲೆ ಕಂಡುಕೊಂಡ ಮಲ್ಲಯ್ಯ ಅವರ ಬದುಕು *ಪರಿಶ್ರಮ ಮತ್ತು ಆತ್ಮವಿಶ್ವಾಸಕ್ಕೆ ಒಂದು ಉತ್ತಮ ಉದಾಹರಣೆ*. *ಕಳೆದ 20 ವರ್ಷಗಳಿಂದ ವೃತ್ತಿಯ ಜೊತೆಗೆ ಮಾನವೀಯತೆಯನ್ನೂ ಕಾಪಾಡಿಕೊಂಡು* ನೂರಾರು ಜನರಿಗೆ ನೆರವಾಗುತ್ತಿರುವ ಮಲ್ಲಯ್ಯ ಅವರ ಜೀವನ ಪಯಣ ಯುವಕರಿಗೆ ಪ್ರೇರಣೆಯಾಗಿದೆ. *ಕಷ್ಟ ಬಂದಾಗ ಕುಗ್ಗದೆ, ಅವಕಾಶ ಸಿಕ್ಕಾಗ ನಿಲ್ಲದೆ, ಪರಿಶ್ರಮದ ಹಾದಿಯಲ್ಲಿ ಸಾಗಿದರೆ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮಲ್ಲಯ್ಯ ಅವರ ಜೀವನವೇ ಸಾಕ್ಷಿ*

4 hrs ago
user_ರಾಜಶೇಖರ್ GT
ರಾಜಶೇಖರ್ GT
ಕೂಡ್ಲಿಗಿ, ವಿಜಯನಗರ, ಕರ್ನಾಟಕ•
4 hrs ago
c3621b99-0d6a-4496-b8bb-23f5298aea1e

ಕಷ್ಟದ ಹಾದಿಯಲ್ಲಿ ಬದುಕು ಕಟ್ಟಿಕೊಂಡ ಮಲ್ಲಯ್ಯ* *20 ವರ್ಷಗಳಿಂದ ಟೈಪಿಂಗ್ ವೃತ್ತಿಯೇ ಬದುಕಿನ ಆಸರೆ — ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ಜನಮೆಚ್ಚಿದ ಟೈಪಿಸ್ಟ್* *ಕಷ್ಟದ ಹಾದಿಯಲ್ಲಿ ಬದುಕು ಕಟ್ಟಿಕೊಂಡ ಮಲ್ಲಯ್ಯ* *20 ವರ್ಷಗಳಿಂದ ಟೈಪಿಂಗ್ ವೃತ್ತಿಯೇ ಬದುಕಿನ ಆಸರೆ — ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ಜನಮೆಚ್ಚಿದ ಟೈಪಿಸ್ಟ್* ಚಿತ್ರದುರ್ಗ: ಬದುಕಿನಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಛಲ ಬಿಡದೆ, ಪರಿಶ್ರಮವನ್ನೇ ಬಂಡವಾಳ ಮಾಡಿಕೊಂಡು ಸ್ವಂತ ಬದುಕು ಕಟ್ಟಿಕೊಂಡವರು ಹಲವರು. ಅಂತಹವರ ಸಾಲಿನಲ್ಲಿ ನಿಲ್ಲುವವರು ಮಲ್ಲಯ್ಯ. ಕಳೆದ 20 ವರ್ಷಗಳಿಂದ ಟೈಪಿಂಗ್ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಮಲ್ಲಯ್ಯ, ತಮ್ಮ ಸರಳತೆ, ಸೇವಾ ಮನೋಭಾವ ಮತ್ತು ಕೆಲಸದ ಮೇಲಿನ ಶ್ರದ್ಧೆಯಿಂದ ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ತಮ್ಮದೇ ಆದ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ. ಮಲ್ಲಯ್ಯ ಅವರು ಮೂಲತಃ *ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರುಡಿಹಳ್ಳಿ* ಗ್ರಾಮದವರು. ಪೆದ್ದಮ್ಮ ಹಾಗೂ ನೆಲಮಲ್ಲಯ್ಯ ದಂಪತಿಯ ಹಿರಿಯ ಮಗನಾದ ಮಲ್ಲಯ್ಯ, ಚಿಕ್ಕಂದಿನಿಂದಲೇ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾ ವಿದ್ಯಾಭ್ಯಾಸ ಮಾಡಿ ಬೆಳೆದವರು. *ಸ್ವಗ್ರಾಮ ತೊರೆದು ಚಿತ್ರದುರ್ಗಕ್ಕೆ ಬಂದ ಪಯಣ* ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ *ಗೋಲಿಬಾರ್* ಘಟನೆಯ ಸಂದರ್ಭದಲ್ಲಿ ತಮ್ಮ ಸ್ವಗ್ರಾಮವನ್ನು ತೊರೆದು ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಮಲ್ಲಯ್ಯ ಅವರು ಚಿತ್ರದುರ್ಗಕ್ಕೆ ಬಂದರು. ಚಿತ್ರದುರ್ಗಕ್ಕೆ ಬಂದ ನಂತರ ಆರಂಭದಲ್ಲಿ ಪತ್ರಿಕೆ ವಿನ್ಯಾಸ ಹಾಗೂ ಅಕ್ಷರ ಜೋಡಣೆ ಕೆಲಸಕ್ಕಾಗಿ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಂದಲೇ ಮುದ್ರಣ ಮತ್ತು ಅಕ್ಷರ ಜೋಡಣೆಯ ಅನುಭವವನ್ನು ಪಡೆದುಕೊಂಡ ಅವರು, ನಂತರ ಚಿತ್ರದುರ್ಗ ನ್ಯಾಯಾಲಯದ ಆವರಣದಲ್ಲಿ ಟೈಪಿಸ್ಟ್ ವೃತ್ತಿಯನ್ನು ಆರಂಭಿಸಿದರು. ಅಂದು ಆರಂಭವಾದ ಈ ವೃತ್ತಿ ಇಂದು ಎರಡು ದಶಕಗಳ ಪಯಣವನ್ನು ಕಂಡಿದೆ. ಕೋರ್ಟ್ ಆವರಣದಲ್ಲಿ ‘ಮಲ್ಲಯ್ಯ’ ಎಂದರೆ ಸಾಕು! ಇಂದು ಚಿತ್ರದುರ್ಗ ಕೋರ್ಟ್ ಆವರಣದಲ್ಲಿ ಮಲ್ಲಯ್ಯ ಅವರ ಟೈಪಿಂಗ್ ಕೆಲಸಕ್ಕೆ ವಿಶೇಷವಾದ ಬೇಡಿಕೆಯಿದೆ. ವಕೀಲರು, ಸಾರ್ವಜನಿಕರು ಸೇರಿದಂತೆ ಅನೇಕರು,*ಮಲ್ಲಯ್ಯ” ಎಂದು

7a012c0b-f6ff-4b3e-b271-f98bd2fec6f7

ಕೇಳಿದರೆ ಸಾಕು* ಅವರ ಸೇವೆಯನ್ನು ನೆನಪಿಸಿಕೊಳ್ಳುತ್ತಾರೆ. ಮಲ್ಲಯ್ಯ ಅವರು ತಮ್ಮ ಕೆಲಸವನ್ನು ಕೇವಲ ವೃತ್ತಿಯಾಗಿ ನೋಡದೆ, ಜನರಿಗೆ ನೆರವಾಗುವ ಸೇವೆ ಎಂಬ ಮನೋಭಾವದಿಂದ ನಿರ್ವಹಿಸುತ್ತಾರೆ. ಅವರು ಅಂಗಡಿಯಲ್ಲಿ ಇಲ್ಲದಿದ್ದರೆ, ಕೆಲವರು ಅವರನ್ನು ಹುಡುಕಿಕೊಂಡು ಹೋಗುವಷ್ಟು ಆತ್ಮೀಯತೆ ಮತ್ತು ನಂಬಿಕೆಯನ್ನು ಗಳಿಸಿದ್ದಾರೆ. ಬಡವರು, ವಯೋವೃದ್ಧರಿಗೆ ವಿಶೇಷ ಕಾಳಜಿ ಮಲ್ಲಯ್ಯ ಅವರ ವ್ಯಕ್ತಿತ್ವದ ಮತ್ತೊಂದು ವಿಶೇಷತೆ ಅವರ ಮಾನವೀಯ ಗುಣ. ಬಡವರು ಹಾಗೂ ವಯೋವೃದ್ಧರು ತಮ್ಮ ಕೆಲಸಕ್ಕಾಗಿ ಬಂದಾಗ ಅವರ ಸಮಸ್ಯೆಗಳನ್ನು ಆಲಿಸಿ, ಯೋಗಕ್ಷೇಮ ವಿಚಾರಿಸಿ, ಸಾಧ್ಯವಾದಷ್ಟು ಬೇಗ ಹಾಗೂ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಡುತ್ತಾರೆ. ಅಷ್ಟೇ ಅಲ್ಲದೆ, ದೂರದಿಂದ ಬಂದ ವಯೋವೃದ್ಧರು ಅಥವಾ ಬಡವರಿಗೆ *ಊಟ-ತಿಂಡಿ ಮಾಡಿಸಿ ಕಳುಹಿಸುವ ಮಾನವೀಯತೆ* ಕೂಡ ಅವರಲ್ಲಿದೆ. ಇದೇ ಗುಣ ಅವರನ್ನು ಕೇವಲ ಟೈಪಿಸ್ಟ್ ಆಗಿರದೆ, ಕೋರ್ಟ್ ಆವರಣದಲ್ಲಿ ಜನರ ವಿಶ್ವಾಸ ಗಳಿಸಿದ ವ್ಯಕ್ತಿಯನ್ನಾಗಿ ಮಾಡಿದೆ. ಕೂಡ್ಲಿಗಿಯಿಂದ *ಮೊಳಕಾಲ್ಮೂರಿನವರೆಗೂ ಹುಡುಕಿಕೊಂಡು ಬರುತ್ತಾರೆ* ಮಲ್ಲಯ್ಯ ಅವರ ಸೇವೆಯ ಮೇಲಿನ ನಂಬಿಕೆ ಚಿತ್ರದುರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕೂಡ್ಲಿಗಿ, ಮೊಳಕಾಲ್ಮೂರು ಸೇರಿದಂತೆ ವಿವಿಧ ತಾಲೂಕುಗಳಿಂದಲೂ ಜನರು ಅವರನ್ನು ಹುಡುಕಿಕೊಂಡು ಚಿತ್ರದುರ್ಗಕ್ಕೆ ಬಂದು ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ವೃತ್ತಿಯಲ್ಲಿ ನೈಪುಣ್ಯ, ಮಾತಿನಲ್ಲಿ ಸರಳತೆ, ನಡೆ-ನುಡಿಯಲ್ಲಿ ಆತ್ಮೀಯತೆ ಹಾಗೂ ಬಡವರ ಬಗ್ಗೆ ಕಾಳಜಿ—ಇವೆಲ್ಲವೂ ಮಲ್ಲಯ್ಯ ಅವರ ಜನಪ್ರಿಯತೆಗೆ ಕಾರಣವಾಗಿದೆ. *ಕಷ್ಟದಿಂದ ಆರಂಭವಾದ ಬದುಕು… ಇಂದು ವಿಶ್ವಾಸದ ವೃತ್ತಿ* ಸ್ವಗ್ರಾಮವನ್ನು ತೊರೆದು ಅನ್ಯ ಊರಿಗೆ ಬಂದು, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸದಿಂದ ಆರಂಭಿಸಿ, ನಂತರ ಟೈಪಿಂಗ್ ವೃತ್ತಿಯಲ್ಲಿ ನೆಲೆ ಕಂಡುಕೊಂಡ ಮಲ್ಲಯ್ಯ ಅವರ ಬದುಕು *ಪರಿಶ್ರಮ ಮತ್ತು ಆತ್ಮವಿಶ್ವಾಸಕ್ಕೆ ಒಂದು ಉತ್ತಮ ಉದಾಹರಣೆ*. *ಕಳೆದ 20 ವರ್ಷಗಳಿಂದ ವೃತ್ತಿಯ ಜೊತೆಗೆ ಮಾನವೀಯತೆಯನ್ನೂ ಕಾಪಾಡಿಕೊಂಡು* ನೂರಾರು ಜನರಿಗೆ ನೆರವಾಗುತ್ತಿರುವ ಮಲ್ಲಯ್ಯ ಅವರ ಜೀವನ ಪಯಣ ಯುವಕರಿಗೆ ಪ್ರೇರಣೆಯಾಗಿದೆ. *ಕಷ್ಟ ಬಂದಾಗ ಕುಗ್ಗದೆ, ಅವಕಾಶ ಸಿಕ್ಕಾಗ ನಿಲ್ಲದೆ, ಪರಿಶ್ರಮದ ಹಾದಿಯಲ್ಲಿ ಸಾಗಿದರೆ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮಲ್ಲಯ್ಯ ಅವರ ಜೀವನವೇ ಸಾಕ್ಷಿ*

More news from ಕರ್ನಾಟಕ and nearby areas
  • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿ ಕೂಡ್ಲಿಗಿ: ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಗೌರವಧನ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ತಂದು, ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನೋಪಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬಿ.ಎಲ್.ಓ. ಜವಾಬ್ದಾರಿ ಹೊರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಂಗನವಾಡಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಶೀಘ್ರವೇ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷೆ ಕೆ ಪದ್ಮಾವತಿ, ತಾಲೂಕ್ ಅಧ್ಯಕ್ಷರು ಎನ್ ಸುಮಾ, ಉಪಾಧ್ಯಕ್ಷರಾದ ಕೆಎನ್ ಕವಿತಾ, ಪಾರ್ವತಮ್ಮ, ಪ್ರಧನ ಕಾರ್ಯದರ್ಶಿ ಎಚ್ ಅನ್ನಪೂರ್ಣ, ಸಹ ಕಾರ್ಯದರ್ಶಿ ಬಿ ಪದ್ಮಾವತಿ, ಓ ಕರಿಬಸಮ್ಮ, ಖಜಾಂಚಿ ಜಯಮಾಲ ಜೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ, ಸದಸ್ಯರಾದ ಬಿ ಶಿವಲೀಲಾ, ಜಿ ಗಾಯತ್ರಿ, ರೇಣುಕಮ್ಮ, ಎಚ್ಎಸ್ ಚಂದ್ರಮ್ಮ, ಎಬಿ ಬಸಮ್ಮ, ಓ ಸುಜಾತ, ಸುಮಲತಾ, ಬಿ ರೇಖಾ, ದ್ಯಾಮಕ್ಕ, ಸಿ.ಬಿ ಅನುಸೂಯ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಉಪಸಿದ್ಧರಿದ್ದರು.
    1
    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿ
ಕೂಡ್ಲಿಗಿ: ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಗೌರವಧನ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ತಂದು, ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನೋಪಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬಿ.ಎಲ್.ಓ. ಜವಾಬ್ದಾರಿ ಹೊರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಂಗನವಾಡಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಶೀಘ್ರವೇ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷೆ ಕೆ ಪದ್ಮಾವತಿ, ತಾಲೂಕ್ ಅಧ್ಯಕ್ಷರು ಎನ್ ಸುಮಾ, ಉಪಾಧ್ಯಕ್ಷರಾದ ಕೆಎನ್ ಕವಿತಾ, ಪಾರ್ವತಮ್ಮ, ಪ್ರಧನ ಕಾರ್ಯದರ್ಶಿ ಎಚ್ ಅನ್ನಪೂರ್ಣ, ಸಹ ಕಾರ್ಯದರ್ಶಿ ಬಿ ಪದ್ಮಾವತಿ, ಓ ಕರಿಬಸಮ್ಮ, ಖಜಾಂಚಿ ಜಯಮಾಲ ಜೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ, ಸದಸ್ಯರಾದ ಬಿ ಶಿವಲೀಲಾ, ಜಿ ಗಾಯತ್ರಿ, ರೇಣುಕಮ್ಮ, ಎಚ್ಎಸ್ ಚಂದ್ರಮ್ಮ, ಎಬಿ ಬಸಮ್ಮ, ಓ ಸುಜಾತ, ಸುಮಲತಾ, ಬಿ ರೇಖಾ, ದ್ಯಾಮಕ್ಕ, ಸಿ.ಬಿ ಅನುಸೂಯ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಉಪಸಿದ್ಧರಿದ್ದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    8 hrs ago
  • ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ *ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್ ಕಾರ್ಯಕರ್ತೆಯರು. ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ , ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ ನೇತೃತ್ವದಲ್ಲಿ , ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ ಕೆ. ಪದ್ಮ‍ಾವತಿ , ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ , ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ , ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
*ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್  ಕಾರ್ಯಕರ್ತೆಯರು. ತಮ್ಮ  ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ,  ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ  ನೇತೃತ್ವದಲ್ಲಿ ,  ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ  ಕೆ. ಪದ್ಮ‍ಾವತಿ ,  ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ ,  ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ ,  ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ  , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    23 hrs ago
  • ಮುಸ್ಲಿಂ ಭಾಂದವರಿಂದ ಸಂಭ್ರಮದಿಂದ ಈದ್ ಮಿಲಾದ್ ಹಬ್ಬದ ಆಚರಣೆ ಮೊಳಕಾಲ್ಮುರು ಸುದ್ದಿ ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಸಹೋದರರು ಈದ್ ಮಿಲಾದ್ ಹಬ್ಬವನ್ನು ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಇದು ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸಂಕೇತವಾಗಿ ಆಚರಿಸುವ ಪವಿತ್ರ ಹಬ್ಬ. ಮುಸ್ಲಿಂ ಭಾಂದವರು ಹೊಸ ಬಟ್ಟೆ ತೊಟ್ಟು ಪ್ರವಾದಿಗಳ ಬಗ್ಗೆ ಘೋಷಣೆ ಕೂಗುತ್ತಾ ಊರಲ್ಲಿ ಮೆರವಣಿಗೆ ಮಾಡುತ್ತಾರೆ. ಈ ದಿನದಂದು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮಸೀದಿಗಳನ್ನು, ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಮೆರವಣಿಗೆಗಳನ್ನು ಏರ್ಪಡಿಸಿ ಪ್ರವಾದಿಯವರ ಜೀವನ, ಅವರ ಸಂದೇಶವಾದ ಶಾಂತಿ, ಸಹೋದರತ್ವ, ಕರುಣೆ, ಸಮಾನತೆಯ ಬಗ್ಗೆ ಉಪನ್ಯಾಸಗಳು ನಡೆಯುತ್ತವೆ. ಖುರಾನ್ ಪಠಣ ಹಾಗೂ ಪ್ರವಾದಿಯವರನ್ನು ಸ್ತುತಿಸುವ ಗೀತೆಗಳು ಹಾಡುತ್ತಾ ಮೆರವಣಿಗೆ ಮಾಡುತ್ತಾರೆ. ಈ ಹಬ್ಬವು ಕೇವಲ ಸಂಭ್ರಮವಲ್ಲ, ಪ್ರವಾದಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯ ದಿನ. ಬಡವರಿಗೆ ದಾನ, ಅನ್ನದಾನ ಮಾಡುವುದು ಈ ದಿನದ ವಿಶೇಷ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ, ಅದರಲ್ಲೂ ಹೈದರಾಬಾದ್, ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನಸೀರ್ ಅಹಮದ್ ಕೆ ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಎಂ ಆರ್ ಮೆಬೂಬ್ ಸಾಬ್, ಖಾಜಾ ಹುಸೇನ್, ಇಬ್ರಮ್ ಶಬ್ಬೀರ್ ಟಿ ಜಿಲಾನ್ ಭಾಷ, ಬೇಕರಿ ಭಾಷಾ, ಅಬ್ದುಲ್ ರಝಕ್, ಗುಲಾಮ್ ಮುಹಮ್ಮದ್, ಶಬ್ಬೀರ್ ಅಹಮದ್, ಮುಂತಾಜ್ ಅಹಮದ್, ಆಟೋ ನೂರ್ ಫಾರೂಕ್, ಇಸಾಕ್ ಅಹಮದ್ ಪೊಲೀಸ್ ಅನ್ವರ್ ಭಾಷ ಹಾಗೂ ಮುಸ್ಲಿಂ ಸಮುದಾಯದ ನಾಗರೀಕರು ಭಾಗವಹಿಸಿದ್ದರು.
    1
    ಮುಸ್ಲಿಂ ಭಾಂದವರಿಂದ ಸಂಭ್ರಮದಿಂದ ಈದ್  ಮಿಲಾದ್  ಹಬ್ಬದ  ಆಚರಣೆ 
ಮೊಳಕಾಲ್ಮುರು ಸುದ್ದಿ 
ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಸಹೋದರರು ಈದ್ ಮಿಲಾದ್ ಹಬ್ಬವನ್ನು ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಇದು ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸಂಕೇತವಾಗಿ ಆಚರಿಸುವ ಪವಿತ್ರ ಹಬ್ಬ.
ಮುಸ್ಲಿಂ ಭಾಂದವರು ಹೊಸ ಬಟ್ಟೆ ತೊಟ್ಟು ಪ್ರವಾದಿಗಳ ಬಗ್ಗೆ ಘೋಷಣೆ ಕೂಗುತ್ತಾ ಊರಲ್ಲಿ ಮೆರವಣಿಗೆ ಮಾಡುತ್ತಾರೆ. ಈ ದಿನದಂದು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮಸೀದಿಗಳನ್ನು, ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಮೆರವಣಿಗೆಗಳನ್ನು ಏರ್ಪಡಿಸಿ ಪ್ರವಾದಿಯವರ ಜೀವನ, ಅವರ ಸಂದೇಶವಾದ ಶಾಂತಿ, ಸಹೋದರತ್ವ, ಕರುಣೆ, ಸಮಾನತೆಯ ಬಗ್ಗೆ ಉಪನ್ಯಾಸಗಳು ನಡೆಯುತ್ತವೆ. ಖುರಾನ್ ಪಠಣ ಹಾಗೂ ಪ್ರವಾದಿಯವರನ್ನು ಸ್ತುತಿಸುವ ಗೀತೆಗಳು ಹಾಡುತ್ತಾ ಮೆರವಣಿಗೆ ಮಾಡುತ್ತಾರೆ.
ಈ ಹಬ್ಬವು ಕೇವಲ ಸಂಭ್ರಮವಲ್ಲ, ಪ್ರವಾದಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯ ದಿನ. ಬಡವರಿಗೆ ದಾನ, ಅನ್ನದಾನ ಮಾಡುವುದು ಈ ದಿನದ ವಿಶೇಷ.
ಕರ್ನಾಟಕ ಸೇರಿದಂತೆ ಭಾರತದಾದ್ಯಂತ, ಅದರಲ್ಲೂ ಹೈದರಾಬಾದ್, ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ನಸೀರ್ ಅಹಮದ್ ಕೆ ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಎಂ ಆರ್ ಮೆಬೂಬ್ ಸಾಬ್, ಖಾಜಾ ಹುಸೇನ್, ಇಬ್ರಮ್ ಶಬ್ಬೀರ್ ಟಿ ಜಿಲಾನ್ ಭಾಷ, ಬೇಕರಿ ಭಾಷಾ, ಅಬ್ದುಲ್ ರಝಕ್, ಗುಲಾಮ್ ಮುಹಮ್ಮದ್, ಶಬ್ಬೀರ್ ಅಹಮದ್, ಮುಂತಾಜ್ ಅಹಮದ್, ಆಟೋ ನೂರ್ ಫಾರೂಕ್, ಇಸಾಕ್ ಅಹಮದ್ ಪೊಲೀಸ್ ಅನ್ವರ್ ಭಾಷ ಹಾಗೂ ಮುಸ್ಲಿಂ ಸಮುದಾಯದ ನಾಗರೀಕರು ಭಾಗವಹಿಸಿದ್ದರು.
    user_Basavaraj
    Basavaraj
    Local News Reporter ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    3 hrs ago
  • ರೈತರನ್ನು ಊರುಬಿಟ್ಟು ವಾಚ್‌ಮನ್ ಮಾಡ್ತಿದೆಯಾ ಸರ್ಕಾರ? ರೈತ ಮುಖಂಡರ ಸಿಡಿಲು ಆರೋಪ! ಬಳ್ಳಾರಿಯಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಮಾವೇಶದಲ್ಲಿ ರೈತ ಮುಖಂಡರು ಸರ್ಕಾರಗಳ ಭೂಸ್ವಾಧೀನ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರೈತರ ಅನುಮತಿ ಇಲ್ಲದೆ ಭೂಮಿ ಕಬಳಿಸಿ, ಅವರನ್ನು ನಗರಗಳಿಗೆ ತಳ್ಳುವ ಮೂಲಕ ವಾಚ್‌ಮನ್ ಮತ್ತು ಆಟೋ ಚಾಲಕರನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ. 550 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ, ಭೂ ಬ್ಯಾಂಕ್ ಹೆಸರಿನಲ್ಲಿ ಭೂಮಿ ಸ್ವಾಧೀನ, ಉದ್ಯೋಗದ ಭರವಸೆಗಳ ವಾಸ್ತವತೆ ಹಾಗೂ ರೈತರ ಆತ್ಮಹತ್ಯೆಗಳ ಬಗ್ಗೆ ರೈತ ಮುಖಂಡರು ಏನು ಹೇಳಿದರು? ಈ ವರದಿಯಲ್ಲಿ ನೋಡಿ. 📍ಸ್ಥಳ: ಬಳ್ಳಾರಿ 🎥 ASN News24 Kannada #Hashtags #FarmersProtest #BallariNews #KarnatakaFarmers #LandAcquisition #FarmerIssues #ASNNews24Kannada #BreakingNews #KarnatakaNews #FarmerLeader #BellaryNews #AgricultureNews #KannadaNews #TrendingNews #IndiaNews #farmers
    1
    ರೈತರನ್ನು ಊರುಬಿಟ್ಟು ವಾಚ್‌ಮನ್ ಮಾಡ್ತಿದೆಯಾ ಸರ್ಕಾರ? ರೈತ ಮುಖಂಡರ ಸಿಡಿಲು ಆರೋಪ!
ಬಳ್ಳಾರಿಯಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಮಾವೇಶದಲ್ಲಿ ರೈತ ಮುಖಂಡರು ಸರ್ಕಾರಗಳ ಭೂಸ್ವಾಧೀನ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರೈತರ ಅನುಮತಿ ಇಲ್ಲದೆ ಭೂಮಿ ಕಬಳಿಸಿ, ಅವರನ್ನು ನಗರಗಳಿಗೆ ತಳ್ಳುವ ಮೂಲಕ ವಾಚ್‌ಮನ್ ಮತ್ತು ಆಟೋ ಚಾಲಕರನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
550 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ, ಭೂ ಬ್ಯಾಂಕ್ ಹೆಸರಿನಲ್ಲಿ ಭೂಮಿ ಸ್ವಾಧೀನ, ಉದ್ಯೋಗದ ಭರವಸೆಗಳ ವಾಸ್ತವತೆ ಹಾಗೂ ರೈತರ ಆತ್ಮಹತ್ಯೆಗಳ ಬಗ್ಗೆ ರೈತ ಮುಖಂಡರು ಏನು ಹೇಳಿದರು? ಈ ವರದಿಯಲ್ಲಿ ನೋಡಿ.
📍ಸ್ಥಳ: ಬಳ್ಳಾರಿ
🎥 ASN News24 Kannada
#Hashtags
#FarmersProtest #BallariNews #KarnatakaFarmers #LandAcquisition #FarmerIssues #ASNNews24Kannada #BreakingNews #KarnatakaNews #FarmerLeader #BellaryNews #AgricultureNews #KannadaNews #TrendingNews #IndiaNews #farmers
    user_AsnNews24Kannada
    AsnNews24Kannada
    Local News Reporter Ballari, Karnataka•
    21 min ago
  • ಕನ್ನಡ ಸಾಹಿತ್ಯ ಸಮ್ಮೇಳನ ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ನಡೆದ ವಿಶೇಷ ಆಕರ್ಷಣೆ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಮಾತನಾಡಿದ ಮಂಜುನಾಥ್ ಮುಧೋಳ
    1
    ಕನ್ನಡ ಸಾಹಿತ್ಯ ಸಮ್ಮೇಳನ ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ನಡೆದ ವಿಶೇಷ ಆಕರ್ಷಣೆ 
ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಮಾತನಾಡಿದ ಮಂಜುನಾಥ್ ಮುಧೋಳ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    2 hrs ago
  • ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------
    1
    ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....!
ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....!
ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ
ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ
ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ
ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ....
ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ
ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ
ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ
ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ
ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ.
-----------------
    user_Channakeshava Press ಗಡಿ ವಾಣಿ
    Channakeshava Press ಗಡಿ ವಾಣಿ
    ಕಂಪ್ಲಿ, ಬಳ್ಳಾರಿ, ಕರ್ನಾಟಕ•
    17 hrs ago
  • “ನನ್ನದೇ ಬೆಳೆ, ನನ್ನದೇ ಬೆಲೆ!” 🌾 ಬಳ್ಳಾರಿಯಲ್ಲಿ ನಾಳೆಯಿಂದ ರೈತ ಸಂತೆ ಆರಂಭ | ವಿಷಮುಕ್ತ ಆಹಾರಕ್ಕೆ ಒತ್ತು ಬಳ್ಳಾರಿಯಲ್ಲಿ ಆಗಸ್ಟ್ 26ರಿಂದ ‘ರೈತ ಸಂತೆ’ ಆರಂಭ! 🌾 ಗ್ರಾಹಕರಿಗೆ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಬಳ್ಳಾರಿಯ ಗಾಂಧಿ ಭವನದಲ್ಲಿ ರೈತ ಸಂತೆ ಆರಂಭವಾಗಲಿದೆ. “ನನ್ನದೇ ಬೆಳೆ, ನನ್ನದೇ ಬೆಲೆ, ನನ್ನದೇ ಮಾರಾಟ” ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೈಸರ್ಗಿಕ ಕೃಷಿಕರು ಭಾಗವಹಿಸಲಿದ್ದಾರೆ. 📍 ಸ್ಥಳ: ಗಾಂಧಿ ಭವನ, ಬಳ್ಳಾರಿ 📅 ದಿನಾಂಕ: ಆಗಸ್ಟ್ 26, 2026 ⏰ ಸಮಯ: ಬೆಳಿಗ್ಗೆ 11 ಗಂಟೆ 📆 ಮುಂದೆ: ಪ್ರತಿ ಬುಧವಾರ 🌱 ವಿಶೇಷತೆ: ನೈಸರ್ಗಿಕ ಮತ್ತು ವಿಷಮುಕ್ತ ಕೃಷಿ ಉತ್ಪನ್ನಗಳು ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಈ ಪ್ರಯತ್ನದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. #Ballari #Bellary #ರೈತಸಂತೆ #ರೈತಸಂಪದ #ನೈಸರ್ಗಿಕಕೃಷಿ #ವಿಷಮುಕ್ತಆಹಾರ #ರೈತರು #ಕೃಷಿ #FarmersMarket #OrganicFarming #NaturalFarming #KarnatakaNews #BallariNews #KannadaNews #Karnataka #Farmers #OrganicFood #LocalFarmers #asnnews24kannada
    1
    “ನನ್ನದೇ ಬೆಳೆ, ನನ್ನದೇ ಬೆಲೆ!” 🌾 ಬಳ್ಳಾರಿಯಲ್ಲಿ ನಾಳೆಯಿಂದ ರೈತ ಸಂತೆ ಆರಂಭ | ವಿಷಮುಕ್ತ ಆಹಾರಕ್ಕೆ ಒತ್ತು
ಬಳ್ಳಾರಿಯಲ್ಲಿ ಆಗಸ್ಟ್ 26ರಿಂದ ‘ರೈತ ಸಂತೆ’ ಆರಂಭ! 🌾
ಗ್ರಾಹಕರಿಗೆ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಬಳ್ಳಾರಿಯ ಗಾಂಧಿ ಭವನದಲ್ಲಿ ರೈತ ಸಂತೆ ಆರಂಭವಾಗಲಿದೆ.
“ನನ್ನದೇ ಬೆಳೆ, ನನ್ನದೇ ಬೆಲೆ, ನನ್ನದೇ ಮಾರಾಟ” ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.
ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೈಸರ್ಗಿಕ ಕೃಷಿಕರು ಭಾಗವಹಿಸಲಿದ್ದಾರೆ.
📍 ಸ್ಥಳ: ಗಾಂಧಿ ಭವನ, ಬಳ್ಳಾರಿ
📅 ದಿನಾಂಕ: ಆಗಸ್ಟ್ 26, 2026
⏰ ಸಮಯ: ಬೆಳಿಗ್ಗೆ 11 ಗಂಟೆ
📆 ಮುಂದೆ: ಪ್ರತಿ ಬುಧವಾರ
🌱 ವಿಶೇಷತೆ: ನೈಸರ್ಗಿಕ ಮತ್ತು ವಿಷಮುಕ್ತ ಕೃಷಿ ಉತ್ಪನ್ನಗಳು
ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಈ ಪ್ರಯತ್ನದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
#Ballari #Bellary #ರೈತಸಂತೆ #ರೈತಸಂಪದ #ನೈಸರ್ಗಿಕಕೃಷಿ #ವಿಷಮುಕ್ತಆಹಾರ #ರೈತರು #ಕೃಷಿ #FarmersMarket #OrganicFarming #NaturalFarming #KarnatakaNews #BallariNews #KannadaNews #Karnataka #Farmers #OrganicFood #LocalFarmers #asnnews24kannada
    user_AsnNews24Kannada
    AsnNews24Kannada
    Local News Reporter Ballari, Karnataka•
    15 hrs ago
  • ಬ್ರೇಕಿಂಗ್ ನ್ಯೂಸ್ ಸೂರ್ಯಪೇಟೆ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಖಾಸಗಿ ಟ್ರಾವೆಲ್ಸ್ ಬಸ್ (ತಾಜಾ ಬಸ್) ಸ್ಟೇಷನರಿ ಲಾರಿಗೆ ಡಿಕ್ಕಿ.. ಆರು ಸಾವು, 20 ಜನರಿಗೆ ಗಾಯ ಹೈದರಾಬಾದ್ ನಿಂದ ಏಲೂರಿಗೆ ಪ್ರಯಾಣಿಸುತ್ತಿದ್ದಾಗ ಕೊಡಡ ಮಂಡಲದ ದ್ವಾರಕುಂಟ್ ಬಳಿ ಅಪಘಾತ ಸಂಭವಿಸಿದೆ ಅಪಘಾತದ ಸಮಯದಲ್ಲಿ 42 ಪ್ರಯಾಣಿಕರು ಬಸ್ಸಿನಲ್ಲಿದ್ದರು ಎಂದು ಗುರುತಿಸಲಾಗಿದೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಪೊಲೀಸ್ ಪ್ರಕರಣ ದಾಖಲಿಸಿ, ಸ್ಥಳದಿಂದ ಪರಾರಿಯಾಗಿದ್ದ ಚಾಲಕ ಮತ್ತು ಕ್ಲೀನರ್‌ಗಾಗಿ ಹುಡುಕಾಟ
    1
    ಬ್ರೇಕಿಂಗ್ ನ್ಯೂಸ್

ಸೂರ್ಯಪೇಟೆ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ

ಖಾಸಗಿ ಟ್ರಾವೆಲ್ಸ್ ಬಸ್ (ತಾಜಾ ಬಸ್) ಸ್ಟೇಷನರಿ ಲಾರಿಗೆ ಡಿಕ್ಕಿ.. ಆರು ಸಾವು, 20 ಜನರಿಗೆ ಗಾಯ

ಹೈದರಾಬಾದ್ ನಿಂದ ಏಲೂರಿಗೆ ಪ್ರಯಾಣಿಸುತ್ತಿದ್ದಾಗ ಕೊಡಡ ಮಂಡಲದ ದ್ವಾರಕುಂಟ್ ಬಳಿ ಅಪಘಾತ ಸಂಭವಿಸಿದೆ

ಅಪಘಾತದ ಸಮಯದಲ್ಲಿ 42 ಪ್ರಯಾಣಿಕರು ಬಸ್ಸಿನಲ್ಲಿದ್ದರು ಎಂದು ಗುರುತಿಸಲಾಗಿದೆ

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಪೊಲೀಸ್ ಪ್ರಕರಣ ದಾಖಲಿಸಿ, ಸ್ಥಳದಿಂದ ಪರಾರಿಯಾಗಿದ್ದ ಚಾಲಕ ಮತ್ತು ಕ್ಲೀನರ್‌ಗಾಗಿ ಹುಡುಕಾಟ
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    43 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.