‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಕುಮಾರ್ ಬಗ್ಗೆ ವಿಡಿಯೋ ಮಾಡಿದ್ದ ಕಿಡಿಗೇಡಿಗಳು.! ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದು ಭದ್ರತಾ ಲೋಪವನ್ನು ಬಯಲು ಮಾಡಿದೆ. ಬೇಕಂತಲೇ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರು ಹೇಳಿ ಮಾಡಿರುವ ವೀಡಿಯೋ ವೈರಲ್ ಆಗಿದೆ. ಆದೇಶದಂತೆ ತನಿಖೆ ನಡೆಸಿದಾಗ, ಮೊಬೈಲ್‌ಗಳು ಪತ್ತೆಯಾಗಿದ್ದು, ಮೂವರು ಕೈದಿಗಳನ್ನು ಗುರುತಿಸಲಾಗಿದೆ. ಕರ್ತವ್ಯ ಲೋಪ ಎಸಗಿದ ವಾರ್ಡರ್‌ಗಳನ್ನು ಅಮಾನತುಗೊಳಿಸಿ, ಜೈಲರ್ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. 'ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು': ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಕುಮಾರ್ ಬಗ್ಗೆ ವಿಡಿಯೋ ಮಾಡಿದ್ದ ಕಿಡಿಗೇಡಿಗಳು! ಬೆಂಗಳೂರು, ಮಾರ್ಚ್ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಪತ್ತೆ, ಡ್ರಗ್ಸ್ ಸಾಗಾಟ ಇವೆಲ್ಲ ಹೊಸದೇನಲ್ಲ. ಆದರೆ ಇತ್ತೀಚಿಗೆ ಡಿಜಿಪಿ ಅಲೋಕ್ ಕುಮಾರ ಅವರ ಕಟ್ಟುನಿಟ್ಟಾದ ಕ್ರಮದಿಂದ ಈ ಎಲ್ಲಾ ಅವ್ಯವಹಾರಗಳಿಗೆ ಬ್ರೇಕ್ ಬೀಳುವ ನಿರೀಕ್ಷೆಯಿತ್ತು. ಆದರೆ ಈಗ ಮತ್ತೊಮ್ಮೆ ಜೈಲಿನೊಳಗೇ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ. ಡ್ರೈನೇಜ್ನಲ್ಲಿ ಮೊಬೈಲ್ ಫೋನ್ಗಳು ಪತ್ತೆ ವಿಡಿಯೋದಲ್ಲಿ ಜೈಲಿನಲ್ಲಿ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಸೌಲಭ್ಯಗಳು ಲಭ್ಯವಿವೆ ಎಂದು ಹೇಳಲಾಗಿದ್ದು, ಡಿಜಿಪಿ ಅಲೋಕ್ ಕುಮಾರ್ ಅವರೇ ಮೊಬೈಲ್ ನೀಡಿದ್ದಾರೆಂದೂ ಕೈದಿಗಳು ಹೇಳಿದ್ದಾರೆ. ಈ ವಿಡಿಯೋ ನಿಜವಾಗಿಯೂ ಜೈಲಿನೊಳಗೇ ಚಿತ್ರೀಕರಿಸಲ್ಪಟ್ಟಿದೆಯೇ ಅಥವಾ ಬೇರೆಡೆ ಸೆಟಪ್ ಮಾಡಿ ಚಿತ್ರಿಸಿಲಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ತಕ್ಷಣವೇ ಜೈಲಿನಲ್ಲಿ ಪರಿಶೀಲನೆ ನಡೆಸಿದರು. ಕೇಂದ್ರ ಕಾರಾಗೃಹದ 9ನೇ ಬ್ಯಾರಕ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಡ್ರೈನೇಜ್ ಮಾರ್ಗದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಹಾಲಿನ ಪ್ಯಾಕೆಟ್‌ಗಳಲ್ಲಿ ಸುತ್ತಿ ಅಡಗಿಸಿಡಲಾಗಿದ್ದ ಮೊಬೈಲ್ಗಳನ್ನು ಅಧಿಕಾರಿಗಳು ಆರೋಪಿಗಳಿಂದಲೇ ಹೊರತೆಗೆಸಿದ್ದಾರೆ. ಮೊಬೈಲ್ ದೊರಕಿದ ವೀಡಿಯೋ ಇಲ್ಲಿದೆ ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರು ಹೇಳಿ ವೀಡಿಯೋ ಮಾಡಿರುವ ಕೈದಿಗಳು ತನಿಖೆಯಲ್ಲಿ ವಿಡಿಯೋ ಮಾಡಿದ್ದ ಕೈದಿಗಳನ್ನು ಪತ್ತೆಹಚ್ಚಲಾಗಿದೆ. ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇವರು ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಅಲೋಕ್ ಕುಮಾರ್ ಹೆಸರಿಗೆ ಚ್ಯುತಿ ತರಲು ವಿಡಿಯೋ ಮಾಡಿ ವೈರಲ್ ಮಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಸಿಬ್ಬಂದಿ ಅಮಾನತು ಘಟನೆ ಬಳಿಕ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಆದೇಶದ ಮೇರೆಗೆ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜೈಲಿನ ಕೆಲವು ಭಾಗಗಳಲ್ಲಿ ಏರ್‌ಟೆಲ್ ಸಿಗ್ನಲ್ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಕಟ್ಟು ನಿಟ್ಟಾಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. #karanatakanews #ParappanaAgrahara #jail #PoliceAction #policeinvestigetion
‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಕುಮಾರ್ ಬಗ್ಗೆ ವಿಡಿಯೋ ಮಾಡಿದ್ದ ಕಿಡಿಗೇಡಿಗಳು.! ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದು ಭದ್ರತಾ ಲೋಪವನ್ನು ಬಯಲು ಮಾಡಿದೆ. ಬೇಕಂತಲೇ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರು ಹೇಳಿ ಮಾಡಿರುವ ವೀಡಿಯೋ ವೈರಲ್ ಆಗಿದೆ. ಆದೇಶದಂತೆ ತನಿಖೆ ನಡೆಸಿದಾಗ, ಮೊಬೈಲ್‌ಗಳು ಪತ್ತೆಯಾಗಿದ್ದು, ಮೂವರು ಕೈದಿಗಳನ್ನು ಗುರುತಿಸಲಾಗಿದೆ. ಕರ್ತವ್ಯ ಲೋಪ ಎಸಗಿದ ವಾರ್ಡರ್‌ಗಳನ್ನು ಅಮಾನತುಗೊಳಿಸಿ, ಜೈಲರ್ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. 'ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು': ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಕುಮಾರ್ ಬಗ್ಗೆ ವಿಡಿಯೋ ಮಾಡಿದ್ದ ಕಿಡಿಗೇಡಿಗಳು! ಬೆಂಗಳೂರು, ಮಾರ್ಚ್ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಪತ್ತೆ, ಡ್ರಗ್ಸ್ ಸಾಗಾಟ ಇವೆಲ್ಲ ಹೊಸದೇನಲ್ಲ. ಆದರೆ ಇತ್ತೀಚಿಗೆ ಡಿಜಿಪಿ ಅಲೋಕ್ ಕುಮಾರ ಅವರ ಕಟ್ಟುನಿಟ್ಟಾದ ಕ್ರಮದಿಂದ ಈ ಎಲ್ಲಾ ಅವ್ಯವಹಾರಗಳಿಗೆ ಬ್ರೇಕ್ ಬೀಳುವ ನಿರೀಕ್ಷೆಯಿತ್ತು. ಆದರೆ ಈಗ ಮತ್ತೊಮ್ಮೆ ಜೈಲಿನೊಳಗೇ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ. ಡ್ರೈನೇಜ್ನಲ್ಲಿ ಮೊಬೈಲ್ ಫೋನ್ಗಳು ಪತ್ತೆ ವಿಡಿಯೋದಲ್ಲಿ ಜೈಲಿನಲ್ಲಿ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಸೌಲಭ್ಯಗಳು ಲಭ್ಯವಿವೆ ಎಂದು ಹೇಳಲಾಗಿದ್ದು, ಡಿಜಿಪಿ ಅಲೋಕ್ ಕುಮಾರ್ ಅವರೇ ಮೊಬೈಲ್ ನೀಡಿದ್ದಾರೆಂದೂ ಕೈದಿಗಳು ಹೇಳಿದ್ದಾರೆ. ಈ ವಿಡಿಯೋ ನಿಜವಾಗಿಯೂ ಜೈಲಿನೊಳಗೇ ಚಿತ್ರೀಕರಿಸಲ್ಪಟ್ಟಿದೆಯೇ ಅಥವಾ ಬೇರೆಡೆ ಸೆಟಪ್ ಮಾಡಿ ಚಿತ್ರಿಸಿಲಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ತಕ್ಷಣವೇ ಜೈಲಿನಲ್ಲಿ ಪರಿಶೀಲನೆ ನಡೆಸಿದರು. ಕೇಂದ್ರ ಕಾರಾಗೃಹದ 9ನೇ ಬ್ಯಾರಕ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಡ್ರೈನೇಜ್ ಮಾರ್ಗದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಹಾಲಿನ ಪ್ಯಾಕೆಟ್‌ಗಳಲ್ಲಿ ಸುತ್ತಿ ಅಡಗಿಸಿಡಲಾಗಿದ್ದ ಮೊಬೈಲ್ಗಳನ್ನು ಅಧಿಕಾರಿಗಳು ಆರೋಪಿಗಳಿಂದಲೇ ಹೊರತೆಗೆಸಿದ್ದಾರೆ. ಮೊಬೈಲ್ ದೊರಕಿದ ವೀಡಿಯೋ ಇಲ್ಲಿದೆ ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರು ಹೇಳಿ ವೀಡಿಯೋ ಮಾಡಿರುವ ಕೈದಿಗಳು ತನಿಖೆಯಲ್ಲಿ ವಿಡಿಯೋ ಮಾಡಿದ್ದ ಕೈದಿಗಳನ್ನು ಪತ್ತೆಹಚ್ಚಲಾಗಿದೆ. ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇವರು ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಅಲೋಕ್ ಕುಮಾರ್ ಹೆಸರಿಗೆ ಚ್ಯುತಿ ತರಲು ವಿಡಿಯೋ ಮಾಡಿ ವೈರಲ್ ಮಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಸಿಬ್ಬಂದಿ ಅಮಾನತು ಘಟನೆ ಬಳಿಕ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಆದೇಶದ ಮೇರೆಗೆ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜೈಲಿನ ಕೆಲವು ಭಾಗಗಳಲ್ಲಿ ಏರ್‌ಟೆಲ್ ಸಿಗ್ನಲ್ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಕಟ್ಟು ನಿಟ್ಟಾಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. #karanatakanews #ParappanaAgrahara #jail #PoliceAction #policeinvestigetion
- *“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು *ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ*4
- ಕೆಂಭಾವಿ ಬಳಿ ಘೋರ ದುರಂತ: ನೀರು ಪಾಲಾದ ನಾಲ್ವರು ಕಂದಮ್ಮಗಳು #JB_News_Kannada1
- ಬಾಗಲಕೋಟ ಮತಕ್ಷೇತ್ರದ ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.4
- ಗುಳೇದಗುಡ್ಡ: ಜೈನ್ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಜೈನ್‌ರ 24ನೇ ತೀರ್ಥಂಕರಾದ ಭಗವಾನ ಮಹಾವೀರರು ಅಹಿಂಸೆಯೇ ಪರಮೋಧರ್ಮ ಎಂಬ ಸರ್ವಕಾಲಿಕ ಸತ್ಯದ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾಪುರುಷರು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕು ಇದೆ ಎಂದು ಅವರು ಪ್ರತಿಪಾದಿಸಿದರು ಎಂದು ಉಪತಹಶೀಲ್ದಾರ ಜಿ.ವಿ ರಜಪೂತ್ ಹೇಳಿದರು. ಅವರು ಸೋಮವಾರ ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ ನೇ 2625 ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶ್ರೀ ವರ್ದಮಾನ ಶ್ವೇತಾಂಬರ ಸ್ಥಾನಿಕವಾಸಿ ಜೈನ ಸಂಘದ ಅಧ್ಯಕ್ಷ ರಾಹುಲ್ ಗುಂದೇಚಾ ಮಾತನಾಡಿ, ಭಗವಾನ ಮಹಾವೀರರು ಈ ದೇಶದ ಮಹಾನ್ ಧಾರ್ಮಿಕ ಪುರಷರು. ಅಹಿಂಸೆ ಹಾಗೂ ಬದುಕು, ಬದುಕಲು ಬಿಡು ಎಂಬ ತತ್ವದ ಮೇಲೆ ನಿಂತಿರುವ ಜೈನ ಧರ್ಮದ ತತ್ವಸಿದ್ದಾಂತಗಳನ್ನು ಬೋಧಿಸಿದರು. ಮಹಾವೀರರ ಸತ್ಯ, ಅಹಿಂಸೆ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ, ಶಾಂತಿ, ಸಹಬಾಳ್ವೆಯಿಂದ ಬದುಕುಬೇಕು ಎಂದರು. ಈ ಸಂದರ್ಭದಲ್ಲಿ ಮಹಾವೀರ ಕಠಾರಿಯಾ, ಓಂಪ್ರಕಾಶ ಕಠಾರಿಯಾ, ನರೇಂದ್ರ ಗುಗಲೇ, ಸುರೇಶ ಕಠಾರಿಯಾ, ರಿಷಬ್ ಕಠಾರಿಯಾ, ವಿನಯ ಕಠಾರಿಯಾ, ವಿಕ್ರಮ ಕಠಾರಿಯಾ, ಜೈಮಲ್ ಶ್ರಮನಿ ಸಂಘದ ಅಧ್ಯಕ್ಷೆ ಪ್ರತಿಭಾ ಕಠಾರಿಯಾ, ಆಶಾ ಗುಂದೇಚಾ, ಸುನೀತಾ ಕಠಾರಿಯಾ, ನಂಬ್ರತಾ ಕಠಾರಿಯಾ, ವೀನಾಬಾಯಿ ಕಠಾರಿಯಾ, ಶಾಲು ಕಠಾರಿಯಾ, ಸಂಗೀತಾ ಗುಗಳೇ, ಸಿಬ್ಬಂದಿ ಎಂ.ಎಂ. ತುಪ್ಪದ ಮತ್ತಿತರರು ಇದ್ದರು.2
- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ವದ್ದಿಕೆರೆಯ ಶ್ರೀ ಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ರಾಜ್ಯದ ಮೂಲೆಮೂಲೆಗಳಿಂದಲೂ ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಬ್ರಹ್ಮ ರಥೋತ್ಸವದ ವೈಭವಕ್ಕೆ ಸಾಕ್ಷಿಯಾದರು. ಭಕ್ತರ ಜೈಘೋಷ, ಭಕ್ತಿ ಗೀತೆಗಳು ಮತ್ತು ಸಂಪ್ರದಾಯಬದ್ಧ ವಿಧಿವಿಧಾನಗಳ ನಡುವೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲೆಂದೇ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಿಂದ ವದ್ದಿಕೆರೆಗೆ ಬಂದು ನೆಲೆನಿಂತಿದ್ದಾರೆ ಎಂಬ ನಂಬಿಕೆ ಇರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಿಮೆ ಅಪಾರವೆಂದು ಭಕ್ತರು ಹೇಳಿಕೊಳ್ಳುತ್ತಾರೆ. ಈ ತಾಂತ್ರಿಕ ಯುಗದಲ್ಲಿಯೂ ವಿವಿಧ ರೋಗರುಜಿನಗಳಿಗೆ ಪರಿಹಾರ ನೀಡುವ ಭವರೋಗ ವೈದ್ಯರಾಗಿ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಕ್ಷೇತ್ರದ ಎರೆನಾಡ ದೊರೆಯನ್ನು ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ತಮ್ಮ ಮನೋಭಿಲಾಷೆಗಳನ್ನು ನೆರವೇರಿಸಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು.1
- "ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ". ಚಳ್ಳಕೆರೆ:-ನಗರದ ಹೊರವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವ ಪ್ರಾರಂಭದ ಪ್ರಯುಕ್ತ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ಗುರುತಾಯಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವದ ಪ್ರಾರಂಭದ ಹಿನ್ನೆಲೆಯಲ್ಲಿ ನರಹರಿ ನಗರದ ಆಶ್ರಮದಲ್ಲಿ ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2 ಗಂಟೆಯವರೆಗೆ ಅನ್ನದಾಸೋಹ ನಡೆಯಲಿದ್ದು ಆಶ್ರಮದ ಭಕ್ತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀನರಹರಿ ಸದ್ಗುರು ಆಶ್ರಮದ ಉಪಾಧ್ಯಕ್ಷರಾದ ಮಾಕಂ ಶ್ರೀನಿವಾಸಲು, ಬೆಂಗಳೂರಿನ ಐ.ಐ.ಎಂ ನ ನಿವೃತ್ತ ಪ್ರೊಫೆಸರ್ ಡಾ.ಬಿ.ಶೇಖರ್, ಪ್ರಗತಿಪರ ಬೇಸಾಯಗಾರರಾದ ಕುಂಕಲ ಕೃಷ್ಣಯ್ಯ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪೂಜ್ಯ ವೈ ಏಕಾಂತ ರಾಮ್,ಡಾ.ವೈ ನರಹರಿ, ಈಶ್ವರಗೆರೆ ರಂಗನಾಥ್, ರಾಜೇಶ್ವರಿ, ಲಾವಣ್ಯ, ಪದ್ಮಶ್ರೀ, ರವಿಶಂಕರ್ , ಯಾದಾಟಿ ಚೇತನ್, ದೇವರಾಜರೆಡ್ಡಿ, ರಾಮಚಂದ್ರಪ್ಪ , ಮಲ್ಲಿಕಾರ್ಜುನಪ್ಪ , ರೇವಣಸಿದ್ದಪ್ಪ , ಯತೀಶ್ ಎಂ ಸಿದ್ಧಾಪುರ, ಸುಹಾಸ್,ವೈಭವ, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಗಂಗಾಧರಶೆಟ್ಟಿ, ನಾಗಲಕ್ಷ್ಮೀ, ಶಾಂತಮ್ಮ , ನಗರಂಗೆರೆ ಮಹೇಶ್ ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.1
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಕಬನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಲಿತರ ದುಡ್ಡು ಪಂಗನಾಮ ಸಂವಿಧಾನವನ್ನೇ ಬರೆದುಕೊಟ್ಟ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುಲಬಾಂಧವರಿಗೆ ಅನ್ಯಾಯ ಇದನ್ನು ಪ್ರಶ್ನೆ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆಯೇ ? ಜನ ಜನ ಜನ ಜನ ಕಾಂಚಣದಲ್ಲಿ ಅಮೆರಿಕಾದ ಲಾಂಛನದಲ್ಲಿ ಪರಂಗಿಯವರು ಮತ್ತೆ ಬಂದರೆ ನಾವು ನೀವು ಎಲ್ಲಾ ಮಾಯ ಪರಂಗಿಯವರು ಬಂದಿದ್ದಾರೆಯೇ? ನಾವು 300 ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟೀಷರನೇ ಬಿಟ್ಟಿಲ್ಲ ಇನ್ನು ನಕ್ಲೇಟರ್ ನಕಲಿ ಬಿಲ್ಲು ಸೃಷ್ಟಿಸಿ ಪಂಗನಾಮ ಹಾಕುವವರನ್ನು ಬಿಡಬಹುದೇ ?1
- *ಅಮೂಲ್ಯ ಸ್ನೇಹಕ್ಕೆ ಒಂದು ಹೃದಯಸ್ಪರ್ಶಿ ನಮನ - ಸಿ.ಎಂ. ಶ್ರೀನಿವಾಸ್ ಅವರಿಗೆ ಜನ್ಮದಿನದ ಶುಭಾಶಯಗಳು* ಮಾನವನ ಜೀವನದಲ್ಲಿ ಹಲವು ಸಂಬಂಧಗಳು ಬರುತ್ತವೆ, ಹೋಗುತ್ತವೆ. ಆದರೆ ಕೆಲವು ಸಂಬಂಧಗಳು ಕಾಲವನ್ನು ಮೀರಿ, ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಅಪರೂಪದ, ಅಮೂಲ್ಯ ಸ್ನೇಹದ ಪ್ರತಿರೂಪವೇ *ಸಿ.ಎಂ. ಶ್ರೀನಿವಾಸ್.* ತಮ್ಮ ಪ್ರಾಣಕ್ಕಿಂತಲೂ ಅಮೂಲ್ಯನಾದ ಆತ್ಮೀಯ ಗೆಳೆಯನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಾ, ಸ್ನೇಹಿತ *ಸರ್ದಾರ್ ಯಮನೂರಪ್ಪ* ಅವರು ಹೃದಯ ತುಂಬಿದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಲ್ಲಿ ವ್ಯಕ್ತವಾಗುವ ಸ್ನೇಹದ ಆಳ, ನಂಬಿಕೆ ಮತ್ತು ಪ್ರೀತಿ ನಿಜಕ್ಕೂ ಮನಸ್ಸನ್ನು ತಟ್ಟುತ್ತದೆ. ನಂಬಿಕೆ, ಒಲವು ಮತ್ತು ಅಪ್ಪಣೆಯ ಪ್ರತೀಕ “ನಿನ್ನ ಹೆಸರು ಕೇಳುತ್ತಿದ್ದಂತೆ ನನ್ನ ಮನಸ್ಸಿಗೆ ಬರುವ ಮೊದಲ ಭಾವನೆ ನಂಬಿಕೆ, ಒಲವು ಮತ್ತು ಅಪ್ಪಣೆ” ಎನ್ನುವ ಮಾತುಗಳು, *ಶ್ರೀನಿವಾಸ್* ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ವಿವರಿಸುತ್ತವೆ. ಬಾಲ್ಯದ ಆ ಚಿನ್ನದ ದಿನಗಳಿಂದ ಇಂದಿನವರೆಗೂ, ಇಬ್ಬರ ಸ್ನೇಹವು ಅನೇಕ ನೆನಪುಗಳ ಅಮೂಲ್ಯ ಸಂಗ್ರಹವಾಗಿದೆ. ಧೈರ್ಯ ಮತ್ತು ಮಂದಹಾಸದ ವ್ಯಕ್ತಿತ್ವ ಶ್ರೀನಿವಾಸ್ ಅವರ ಧೈರ್ಯವು ಅವರ ಗುರುತು. ಎಷ್ಟೇ ಸಂಕಷ್ಟಗಳಿದ್ದರೂ, ಮುಖದಲ್ಲಿ ಸದಾ ಮಂದಹಾಸ ಇಡುವ ಗುಣವು ಸಾಮಾನ್ಯವಲ್ಲ. ನೋವುಗಳನ್ನು ಮನಸ್ಸಿನಲ್ಲಿ ಹೊತ್ತುಕೊಂಡು, ಹೊರಗೆ ಸಂತೋಷವನ್ನು ಹಂಚುವ ಮನೋಭಾವವು ಮಹತ್ವದ ಮನಸ್ಸಿನ ಲಕ್ಷಣವಾಗಿದೆ. "ನಿಸ್ವಾರ್ಥ ಸ್ನೇಹದ ಸಾಗರ" ಅವರ ಹೃದಯವು ಒಲವಿನ ಸಾಗರ. ನಿಸ್ವಾರ್ಥ ಸ್ನೇಹ, ಸಹಾಯ ಮನೋಭಾವ ಮತ್ತು ಪ್ರೀತಿಯಿಂದ ತುಂಬಿರುವ ಅವರ ವ್ಯಕ್ತಿತ್ವವು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಮಾತಿನಲ್ಲಿ ಯಾವ ಕ್ಷಣಕ್ಕೂ ಖಾಲಿಯಾಗದ, ಸದಾ ಬೆಂಬಲ ನೀಡುವ ಸ್ನೇಹಿತನಾಗಿ ಅವರು ವಿಶೇಷ ಸ್ಥಾನ ಪಡೆದಿದ್ದಾರೆ. ಹೃದಯದ ಆಶಯಗಳು ಮತ್ತು ಹಾರೈಕೆಗಳು ಈ ವಿಶೇಷ ದಿನದಂದು, ಸ್ನೇಹಿತ ಯಮನೂರಪ್ಪ ಅವರು ತಮ್ಮ ಹೃದಯದ ಆಶಯಗಳನ್ನು ಹಂಚಿಕೊಂಡಿದ್ದಾರೆ: ನೂರು ವಸಂತಗಳು ಅವರ ಜೀವನದಲ್ಲಿ ಹೂವಿನಂತೆ ಅರಳಲಿ ಅವರ ಮುಖದ ನಗು ಎಂದಿಗೂ ಮಾಸದಿರಲಿ ಎಲ್ಲಾ ಕನಸುಗಳು ನಿಜವಾಗಲಿ ಜೀವನ ಸದಾ ಸಂತೋಷದಿಂದ ತುಂಬಿರಲಿ ಇವರ ಸ್ನೇಹವು ಕೇವಲ ಈ ಜನ್ಮಕ್ಕೆ ಮಾತ್ರವಲ್ಲ, ಮುಂದಿನ ಜನ್ಮಗಳಿಗೂ ಮುಂದುವರಿಯಲಿ ಎಂಬುದು ಅವರ ಹೃದಯದ ಆಳವಾದ ಆಶಯವಾಗಿದೆ. ಸ್ನೇಹಕ್ಕಿಂತ ಹೆಚ್ಚು - ಸಹೋದರತ್ವ “ನೀನು ನನ್ನ ಗೆಳೆಯನಲ್ಲ, ನನ್ನ ಒಡಹುಟ್ಟಿದ ಸಹೋದರ” ಎನ್ನುವ ಮಾತು, ಈ ಸಂಬಂಧದ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ. ಇದು ಕೇವಲ ಸ್ನೇಹವಲ್ಲ, ರಕ್ತಸಂಬಂಧಕ್ಕಿಂತಲೂ ಗಟ್ಟಿಯಾದ ಬಂಧ. ಜನ್ಮದಿನದ ಶುಭಾಶಯ ಹೇಳುವುದು ಕೇವಲ ಆಚರಣೆ ಅಲ್ಲ, ಅದು ಹೃದಯದ ಭಾವನೆ. ಸಿ.ಎಂ. ಶ್ರೀನಿವಾಸ್ ಅವರಂತಹ ಸ್ನೇಹಿತನಿಗೆ ಸಲ್ಲಿಸುವ ಈ ಪ್ರೀತಿಯ ನಮನ, ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ. ಹೃದಯ ತುಂಬಿದ ಪ್ರೀತಿ ಮತ್ತು ಗೌರವದೊಂದಿಗೆ - *ಸಿ.ಎಂ. ಶ್ರೀನಿವಾಸ್* ಅವರಿಗೆ ಜನ್ಮದಿನದ ಅನಂತ ಶುಭಾಶಯಗಳು. 🩷🎂 ✍️ ಸರ್ದಾರ್ ಯಮನೂರಪ್ಪ ವಿಜಯ್ ಸಾಕ್ಷಿ ವರದಿಗಾರರು ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ *ನಾಗರಾಜ್ ಕಲ್ಲಹಳ್ಳಿ*3