Shuru
Apke Nagar Ki App…
#onlinetv24x7
Onlinetv24x7
#onlinetv24x7
More news from ಕರ್ನಾಟಕ and nearby areas
- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್. ಗದಗ ಸಮಾಜ ಕಲ್ಯಾಣ ಇಲಾಖೆ, ಮುಂಡರಗಿ ಮುಂಡರಗಿ ತಾಲೂಕ ದಲಿತಪರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ. ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ 119ನೇ ಜನ್ಮ ದಿನಾಚರಣೆ ನಿಮಿತ್ಯ ಚಿಂತನ ಮಂಥನ ಕಾರ್ಯಕ್ರಮ1
- ಶಿಗ್ಗಾವಿ ಸವಣೂರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ, ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ದಾವಣಗೆರೆ ಉಪ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಗೆಲುವು ನಿಶ್ಚಿತ ಎಂದು ಹೇಳಿದರು,1
- ಲೋನ್ ಕಟ್ಟಿಲ್ಲ ಎಂಬ ಕಾರಣಕ್ಕೆ ಖಾಸಗಿ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಲು ಬಂದಿದ್ದರಿಂದ ಭಯಗೊಂಡ ಮನೆ ಮಾಲೀಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದ ಸೈದಾಪುರದಲ್ಲಿ ನಡೆದಿದೆ. ಸೈದಾಪುರದ ವಾಸೀಂ ಸೈಯದ್ (39) ಎಂಬ ವ್ಯಕ್ತಿ ಮನೆ ಕಟ್ಟಲೆಂದು ಖಾಸಗಿ ಬ್ಯಾಂಕ್‌ನಿಂದ 71 ಲಕ್ಷ ಸಾಲ ಪಡೆದಿದ್ದ. ಈ ಸಾಲಕ್ಕೆ ಬಡ್ಡಿ ಬೆಳೆದು ಕೇವಲ 14 ತಿಂಗಳಲ್ಲೇ ಅದು 86 ಲಕ್ಷಕ್ಕೆ ಬಂದು ನಿಂತಿದೆ. ಈ ಸಾಲವನ್ನು ಕಟ್ಟುವಂತೆ ಆ ಖಾಸಗಿ ಬ್ಯಾಂಕ್‌ನವರು ಕೋರ್ಟ್ ಆದೇಶ ತಂದು ಮನೆ ಸೀಜ್ ಮಾಡಲು ಬಂದಿದ್ದರು. ಇದರಿಂದ ಭಯಗೊಂಡ ವಾಸೀಂ ಎಂಬಾತ ಅದೇ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ವಾಸೀಂ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.1
- ಇಳಕಲ್ಲ : ಗ್ಯಾಸ್ ಸಿಲಿಂಡರಗಾಗಿ ೧ ಮೀಟರ್ ಉದಕ್ಕೂ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ನಗರದ ಎಚ್.ಪಿ.ಗ್ಯಾಸ್ ಗೋಡಾನ್ ಮುಂದೆ ಶನಿವಾರ ಕಂಡು ಬಂದಿತು. ಅಮೇರಿಕಾ , ಇರಾನ್ , ಇಸ್ರೇಲ್ ದೇಶದಲ್ಲಿ ನಡೆಯುತ್ತಿರುವ ಯುದ್ದದಿಂದಾಗಿ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿರುವದ್ದರಿAದ ರಾಜ್ಯದ ಜನರು ಹೈರಾಣಾಗಿದ್ದಾರೆ. ಎಲ್‌ಪಿಜಿ ಗ್ಯಾಸ್ ಅಭಾವದಿಂದಾಗಿ ಜನರು ಗ್ಯಾಸ್ ಗೋಡಾನ್ ಹತ್ತಿರ ದಿನನಿತ್ಯ ಸುಡುವ ಬಿಸಲಿನಲ್ಲಿ ನಿಂತು ಗ್ಯಾಸ್ ಗಾಗಿ ಕಾಯುತ್ತಿರುವ ಸನ್ನಿವೇಶ ನೋಡಿದರೇ ಹೃದಯ ಚುರು ಎನ್ನುತ್ತಿದೆ, ಸುಡುವ ಬಿಸಿನಲಿನಲ್ಲಿಯೇ ವಯೋವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರು ಒಂದು ದಿನದ ಕೆಲಸವನ್ನು ಬಿಟ್ಟು ಸಿಲಿಂಡರ್ ಗಾಗಿಯೇ ಒಂದು ದಿನ ಕಾಯ್ದು ತೆಗೆದುಕೊಂಡು ಹೋಗುವಂತಹÀ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಹೊಡೆತದಿಂದ ಮುಚ್ಚುತ್ತಿರುವ ಹೋಟೆಲ್: ನಗರದಲ್ಲಿನ ದೊಡ್ಡ ದೊಡ್ಡ ಹೋಟೆಲ್‌ಗಳಿಗು ಗ್ಯಾಸ್ ಬಿಸಿ ತಟ್ಟಿದ್ದರಿಂದ ಕೆಲವೊಂದಿಷ್ಟು ಹೋಟೇಲ್‌ಗಳಲ್ಲಿ ತಿಂಡಿಗಳು ಸಿಗುತ್ತಿಲ್ಲ, ಕೆಲವೊಂದಿಷ್ಟು ಹೋಟೆಲ್ ಗಳು ಬಂದಾದರೇ, ಇನ್ನೋ ಕೆಲವೊಂದಿಷ್ಟು ಹೋಟೆಲನಲ್ಲಿ ಗ್ಯಾಸ್ ತೆಗೆದು ಸೌದ ಒಲೆಯಿಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ. * ಇಂತಹ ಸುಡುವ ಬಿಸಲಿನಲ್ಲಿಯೇ ಗ್ಯಾಸ್ ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಗ್ಯಾಸ್ ಏಜೆನ್ಸಿ ಮಾಲೀಕರು ಅಥವಾ ಸಿಬ್ಬಂದಿ ವರ್ಗದವರು ಮಾಡಿಲ್ಲ - ಮಹಾಂತೇಶ ವಕಲಕುಂಟಿ, ಕರವೇ ಗೌರವಾಧ್ಯಕ್ಷ ಇಳಕಲ್ಲ.1
- ಮಾಜಿ ಸಚಿವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಇಳಕಲ್ ನಗರದಲ್ಲಿ ಸ್ವಾಗತಿಸಿದರು. ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.1
- ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ ಜನ ಸೇರ್ತಾರೆ ಎಂದು ಹೇಳಿದರು1
- ರಾಜ್ಯದಲ್ಲಿ ಭಾರೀ ಬಿಸಿಗಾಳಿ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಏಪ್ರಿಲ್ 29 ರಿಂದ ಮೇ 12 ರವರೆಗೆ ತಾಪಮಾನವು 45°C ರಿಂದ 55°C ವರೆಗೆ ಏರಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅತ್ಯಾವಶ್ಯಕವಲ್ಲದ ಹೊರಗಿನ ಚಟುವಟಿಕೆಗಳನ್ನು ತಪ್ಪಿಸಿ. ಮುಖ್ಯ ಎಚ್ಚರಿಕೆಗಳು: ಉಸಿರಾಟ ತೊಂದರೆ / ತಲೆ ಸುತ್ತು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕಾರಿನಲ್ಲಿ ಲೈಟರ್, ಬ್ಯಾಟರಿ, ಪಾನೀಯಗಳು ಇಡಬೇಡಿ ಗ್ಯಾಸ್ ಸಿಲಿಂಡರ್ ಬಿಸಿಲಿನಲ್ಲಿ ಇರಿಸಬೇಡಿ ಸಾಕಷ್ಟು ನೀರು, ಮಜ್ಜಿಗೆ, ತಂಪು ಪಾನೀಯಗಳನ್ನು ಸೇವಿಸಿ ಹೆಚ್ಚುವರಿ ಎಚ್ಚರಿಕೆ: ಬಿಸಿಯಿಂದ ಹಾವು-ಚೇಳುಗಳು ಮನೆಗೆ ಬರಬಹುದಾದ ಸಾಧ್ಯತೆ ಇದೆ — ಜಾಗರೂಕರಾಗಿರಿ AC ಅನ್ನು 24–25°C ನಲ್ಲಿ ಇರಿಸಿ ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ ಈ ಮಾಹಿತಿ ಬಹಳ ಮುಖ್ಯ! ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಕ್ಷಣ ಹಂಚಿಕೊಳ್ಳಿ1
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೀರಿನ ವಿಚಾರವಾಗಿ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿ ಕೈ ಕೈ ಮಿಗಿಲಾಯಿಸಿ ಮುಂಡರಗಿ ಪೊಲೀಸ್ ಠಾಣಾ ಮೆಟ್ಟಿಲೇರಿದೆ ಎರಡು ಸಮುದಾಯದ ನಡುವೆ ನಡೆದ ಗಲಾಟೆಯಲ್ಲಿ ಗಾಯ ಗೊಂಡವರು ಗದಗ ಜಿಲ್ಲಾ ಆಸ್ಪತ್ರೆ ಮತ್ತು ಮುಂಡರಗಿ ತಾಲೂಕ ಆಸ್ಪತ್ರೆ ಯಲ್ಲಿ ಚಿಕಿಸ್ತೆ ಪಡೆಯುತ್ತಿದ್ದಾರೆ1