logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳ 24ರಂದು ವಿದ್ಯಾಸಾಗರ್ ಕೊಲೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಮೇಸ್ತ್ರಿಲಾಲ್, ಜಿತೇಂದ್ರ ಮತ್ತು ರವೀಂದ್ರ ಎಂಬುವರ ವಿರುದ್ಧ ಆರೋಪ ಮಾಡಲಾಗಿದೆ. ಕೊಲೆಯಾದ ವಿದ್ಯಾಸಾಗರ್ ಮತ್ತು ಮೂವರು ಆರೋಪಿಗಳು ಒಂದೇ ರೂಮ್ ಮಾಡಿಕೊಂಡು ವಾಸವಿದ್ದರು. ವಿದ್ಯಾಸಾಗರ್ ಎರಡು ತಿಂಗಳ ಹಿಂದೆ ಆರೋಪಿಗಳ ಸ್ನೇಹಿತನೊಬ್ಬನ ಮೂಲಕ ಕೆಲಸಕ್ಕೆ ಸಹಾಯ ಆಗುತ್ತದೆ ಎಂದು ರೂಂಗೆ ಸೇರಿಕೊಂಡಿದ್ದ ಎನ್ನಲಾಗಿದೆ. ವಿದ್ಯಾಸಾಗರ್ ಪ್ರತಿದಿನ ಆರೋಪಿ ಮೇಸ್ತ್ರಿಲಾಲ್ ಜೊತೆ ಪಾರ್ಟಿ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿ ವಿದ್ಯಾಸಾಗರ್ ಪದೇ ಪದೇ ಕ್ಷುಲ್ಲಕ ಕಾರಣಗಳಿಗೆ ಜಗಳ ಮಾಡುತ್ತಿದ್ದರಿಂದ ಬೇಸತ್ತ ಆರೋಪಿಗಳು ಆತನ ಕೊಲೆ ಮಾಡಿದ್ದಾರೆ. ಕೊಲೆ ನಡೆದ ದಿನವೂ ಇಬ್ಬರೂ ಪಾರ್ಟಿ ಮಾಡುತ್ತಿದ್ದು, ಆ ದಿನವೂ ವಿದ್ಯಾಸಾಗರ್ ಜಗಳ ಶುರುಮಾಡಿದ್ದ. ಆರೋಪಿಗಳು ಗಂಭೀರವಾಗಿ ಹಲ್ಲೆ ಮಾಡಿ, ಬೆಡ್‌ಶೀಟ್‌ನಲ್ಲಿ ಸುತ್ತಿ ಮಲಗಿಸಿದ್ದರು. ಬೆಳಗ್ಗೆ ಎದ್ದಾಗ ವಿದ್ಯಾಸಾಗರ್ ತೀವ್ರ ಎದೆನೋವಿನಿಂದ ಒದ್ದಾಡುತ್ತಿದ್ದು, ಆರೋಪಿಗಳು ಮೆಡಿಸಿನ್ ತರಲು ಮೆಡಿಕಲ್‌ಗೆ ಹೋಗಿದ್ದರು. ಆದರೆ, ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಸಿನ್ ಕೊಡಲು ಮೆಡಿಕಲ್‌ನವರು ನಿರಾಕರಿಸಿದ ಕಾರಣ, ಆಸ್ಪತ್ರೆಗೆ ಕರೆದೊಯ್ಯಲು ವಾಪಸ್ ಬಂದಷ್ಟರಲ್ಲಿ ವಿದ್ಯಾಸಾಗರ್ ಸಾವನ್ನಪ್ಪಿದ್ದ. ವಿದ್ಯಾಸಾಗರ್ ಸಾವನ್ನಪ್ಪಿದ ನಂತರ, ಆರೋಪಿಗಳು ಶವವನ್ನು ಮೂಟೆ ಕಟ್ಟಿ ಒಂದು ಲೇಔಟ್‌ನ ಖಾಲಿ ಜಾಗದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಸುಳಿವು ಪತ್ತೆ ಮಾಡಿದ್ದಾರೆ. ಮೂವರು ಆರೋಪಿಗಳ ಪೈಕಿ ರವೀಂದ್ರ ಎಂಬಾತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಉಳಿದವರಿಗಾಗಿ ಗಂಗಮ್ಮನಗುಡಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.

4 hrs ago
user_SAMATA NEWS KANNADA 1
SAMATA NEWS KANNADA 1
Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
4 hrs ago
9d021ce8-2190-47af-bd38-37376f80d067

ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳ 24ರಂದು ವಿದ್ಯಾಸಾಗರ್ ಕೊಲೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಮೇಸ್ತ್ರಿಲಾಲ್, ಜಿತೇಂದ್ರ ಮತ್ತು ರವೀಂದ್ರ ಎಂಬುವರ ವಿರುದ್ಧ ಆರೋಪ ಮಾಡಲಾಗಿದೆ. ಕೊಲೆಯಾದ ವಿದ್ಯಾಸಾಗರ್ ಮತ್ತು ಮೂವರು ಆರೋಪಿಗಳು ಒಂದೇ ರೂಮ್ ಮಾಡಿಕೊಂಡು ವಾಸವಿದ್ದರು. ವಿದ್ಯಾಸಾಗರ್ ಎರಡು ತಿಂಗಳ ಹಿಂದೆ ಆರೋಪಿಗಳ ಸ್ನೇಹಿತನೊಬ್ಬನ ಮೂಲಕ ಕೆಲಸಕ್ಕೆ ಸಹಾಯ ಆಗುತ್ತದೆ ಎಂದು ರೂಂಗೆ ಸೇರಿಕೊಂಡಿದ್ದ ಎನ್ನಲಾಗಿದೆ. ವಿದ್ಯಾಸಾಗರ್ ಪ್ರತಿದಿನ ಆರೋಪಿ ಮೇಸ್ತ್ರಿಲಾಲ್ ಜೊತೆ ಪಾರ್ಟಿ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿ ವಿದ್ಯಾಸಾಗರ್ ಪದೇ ಪದೇ ಕ್ಷುಲ್ಲಕ ಕಾರಣಗಳಿಗೆ ಜಗಳ ಮಾಡುತ್ತಿದ್ದರಿಂದ ಬೇಸತ್ತ ಆರೋಪಿಗಳು ಆತನ ಕೊಲೆ ಮಾಡಿದ್ದಾರೆ. ಕೊಲೆ ನಡೆದ ದಿನವೂ ಇಬ್ಬರೂ ಪಾರ್ಟಿ ಮಾಡುತ್ತಿದ್ದು, ಆ ದಿನವೂ ವಿದ್ಯಾಸಾಗರ್ ಜಗಳ ಶುರುಮಾಡಿದ್ದ.

819bf58f-9ee1-417f-918e-a24e65b8384c

ಆರೋಪಿಗಳು ಗಂಭೀರವಾಗಿ ಹಲ್ಲೆ ಮಾಡಿ, ಬೆಡ್‌ಶೀಟ್‌ನಲ್ಲಿ ಸುತ್ತಿ ಮಲಗಿಸಿದ್ದರು. ಬೆಳಗ್ಗೆ ಎದ್ದಾಗ ವಿದ್ಯಾಸಾಗರ್ ತೀವ್ರ ಎದೆನೋವಿನಿಂದ ಒದ್ದಾಡುತ್ತಿದ್ದು, ಆರೋಪಿಗಳು ಮೆಡಿಸಿನ್ ತರಲು ಮೆಡಿಕಲ್‌ಗೆ ಹೋಗಿದ್ದರು. ಆದರೆ, ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಸಿನ್ ಕೊಡಲು ಮೆಡಿಕಲ್‌ನವರು ನಿರಾಕರಿಸಿದ ಕಾರಣ, ಆಸ್ಪತ್ರೆಗೆ ಕರೆದೊಯ್ಯಲು ವಾಪಸ್ ಬಂದಷ್ಟರಲ್ಲಿ ವಿದ್ಯಾಸಾಗರ್ ಸಾವನ್ನಪ್ಪಿದ್ದ. ವಿದ್ಯಾಸಾಗರ್ ಸಾವನ್ನಪ್ಪಿದ ನಂತರ, ಆರೋಪಿಗಳು ಶವವನ್ನು ಮೂಟೆ ಕಟ್ಟಿ ಒಂದು ಲೇಔಟ್‌ನ ಖಾಲಿ ಜಾಗದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಸುಳಿವು ಪತ್ತೆ ಮಾಡಿದ್ದಾರೆ. ಮೂವರು ಆರೋಪಿಗಳ ಪೈಕಿ ರವೀಂದ್ರ ಎಂಬಾತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಉಳಿದವರಿಗಾಗಿ ಗಂಗಮ್ಮನಗುಡಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.

More news from Uttara Kannada and nearby areas
  • ಅರಸೀಕೆರೆ ತಾಲ್ಲೂಕು ಮಟ್ಟದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಬೃಹತ್ ಸಮಾವೇಶ ಮತ್ತು ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಬಸವೇಶ್ವರ ಸರ್ಕಲ್‌ನಿಂದ ಬಿಇಒ ಕಚೇರಿಯವರೆಗೆ ನಡೆದ ಈ ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಜನರು ಭಾಗವಹಿಸಿ, ಒಕ್ಕೊರಲಿನಿಂದ ಮ್ಯಾಗ್ನೆಟ್ ಯೋಜನೆಯನ್ನು ಧಿಕ್ಕರಿಸಿದರು. ಪ್ರತಿಭಟನಾಕಾರರು 'ರಕ್ತ ಕೊಡುವೆವು ನಮ್ಮೂರ ಶಾಲೆ ಬಿಡುವುದಿಲ್ಲ' ಎಂದು ಘೋಷಣೆಗಳನ್ನು ಕೂಗಿದರು.
    1
    ಅರಸೀಕೆರೆ ತಾಲ್ಲೂಕು ಮಟ್ಟದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಬೃಹತ್ ಸಮಾವೇಶ ಮತ್ತು ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಬಸವೇಶ್ವರ ಸರ್ಕಲ್‌ನಿಂದ ಬಿಇಒ ಕಚೇರಿಯವರೆಗೆ ನಡೆದ ಈ ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಜನರು ಭಾಗವಹಿಸಿ, ಒಕ್ಕೊರಲಿನಿಂದ ಮ್ಯಾಗ್ನೆಟ್ ಯೋಜನೆಯನ್ನು ಧಿಕ್ಕರಿಸಿದರು. ಪ್ರತಿಭಟನಾಕಾರರು 'ರಕ್ತ ಕೊಡುವೆವು ನಮ್ಮೂರ ಶಾಲೆ ಬಿಡುವುದಿಲ್ಲ' ಎಂದು ಘೋಷಣೆಗಳನ್ನು ಕೂಗಿದರು.
    user_874792
    874792
    Farmer Karwar, Uttara Kannada•
    4 hrs ago
  • ತಮ್ಮ ನೆಚ್ಚಿನ ಆರ್‌ಸಿಬಿ (ಬೆಂಗಳೂರು) ತಂಡ ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಭಿಮಾನಿಗಳು ಫೈನಲ್ ಪಂದ್ಯವನ್ನು ವೀಕ್ಷಿಸಲು ಹೈದರಾಬಾದ್‌ಗೆ ತೆರಳಿದ್ದಾರೆ. ಇಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಲು ಈ ಅಭಿಮಾನಿಗಳು ಉತ್ಸುಕತೆಯಿಂದ ಪ್ರಯಾಣಿಸಿದ್ದಾರೆ. ಈ ಅಭಿಮಾನಿಗಳು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಅದು ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.
    1
    ತಮ್ಮ ನೆಚ್ಚಿನ ಆರ್‌ಸಿಬಿ (ಬೆಂಗಳೂರು) ತಂಡ ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಭಿಮಾನಿಗಳು ಫೈನಲ್ ಪಂದ್ಯವನ್ನು ವೀಕ್ಷಿಸಲು ಹೈದರಾಬಾದ್‌ಗೆ ತೆರಳಿದ್ದಾರೆ. ಇಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಲು ಈ ಅಭಿಮಾನಿಗಳು ಉತ್ಸುಕತೆಯಿಂದ ಪ್ರಯಾಣಿಸಿದ್ದಾರೆ.

ಈ ಅಭಿಮಾನಿಗಳು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಅದು ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • ಆರ್‌ಸಿಬಿ ತಂಡದ ಫೈನಲ್ ಪಂದ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡವು ಗೆಲ್ಲಲೆಂದು ಎಲ್ಲರೂ ಶುಭ ಹಾರೈಸಿದರು.
    1
    ಆರ್‌ಸಿಬಿ ತಂಡದ ಫೈನಲ್ ಪಂದ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡವು ಗೆಲ್ಲಲೆಂದು ಎಲ್ಲರೂ ಶುಭ ಹಾರೈಸಿದರು.
    user_H M ಹರಕುಣಿ
    H M ಹರಕುಣಿ
    Local News Reporter Haveri, Karnataka•
    2 hrs ago
  • ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ, ಐಪಿಎಲ್ ಫೈನಲ್ ಪಂದ್ಯವನ್ನು ವಿಶೇಷವಾಗಿ ದೊಡ್ಡ ಪರದೆಯ ಮೇಲೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್ ಸಿ ಬಿ (RCB) ತಂಡದ ಅಭಿಮಾನಿಗಳು ಸೇರಿದಂತೆ ಇಡೀ ಗ್ರಾಮಸ್ಥರು ಒಟ್ಟಾಗಿ ಸೇರಿ ಪಂದ್ಯವನ್ನು ವೀಕ್ಷಿಸಿದರು, ಸಮುದಾಯದ ಉತ್ಸಾಹ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದರು.
    2
    ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ, ಐಪಿಎಲ್ ಫೈನಲ್ ಪಂದ್ಯವನ್ನು ವಿಶೇಷವಾಗಿ ದೊಡ್ಡ ಪರದೆಯ ಮೇಲೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್ ಸಿ ಬಿ (RCB) ತಂಡದ ಅಭಿಮಾನಿಗಳು ಸೇರಿದಂತೆ ಇಡೀ ಗ್ರಾಮಸ್ಥರು ಒಟ್ಟಾಗಿ ಸೇರಿ ಪಂದ್ಯವನ್ನು ವೀಕ್ಷಿಸಿದರು, ಸಮುದಾಯದ ಉತ್ಸಾಹ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    1 hr ago
  • ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಮೊದಲು ಫೋನ್ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಯತ್ನಾಳ್ ಆರೋಪಿಸಿದ್ದಾರೆ. ವಿಜಯೇಂದ್ರ ಅವರು 'ನನ್ನ ಪಾರ್ಟ್ನರ್ ಸಿಎಂ ಆದ' ಎಂದು ಸಂತೋಷ ಪಟ್ಟಿದ್ದರು ಎಂದು ಯತ್ನಾಳ್ ಹೇಳಿದ್ದಾರೆ. ಸಿದ್ದರಾಮಯ್ಯ ಕೆಳಗಿಳಿದಿದ್ದಕ್ಕೆ ಒಬ್ಬನೇ ಒಬ್ಬ ಮುಸ್ಲಿಂ ನಾಯಕ ಖಂಡಿಸಿಲ್ಲ, ಬದಲಿಗೆ ವಿಜಯೋತ್ಸವ ಆಚರಿಸಿದ್ದಾರೆ ಎಂದು ಯತ್ನಾಳ್‌ ಒತ್ತಿ ಹೇಳಿದ್ದಾರೆ. ಮುಂದುವರಿದು, ಯತ್ನಾಳ್ ಅವರು ವಿಜಯೇಂದ್ರ ಹಾಗೂ ಅಶೋಕ್‌ ಅವರಿಗೆ "ಯಾರ್ಯಾರ ಫೈಲ್ ಎಲ್ಲೆಲ್ಲಿದೆ ಗೊತ್ತಿದೆ, ಇನ್ಮುಂದೆ ಹುಷಾರಾಗಿರಿ" ಎಂದು ಎಚ್ಚರಿಕೆ ನೀಡಿದ್ದಾರೆ.
    1
    ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಮೊದಲು ಫೋನ್ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಯತ್ನಾಳ್ ಆರೋಪಿಸಿದ್ದಾರೆ. ವಿಜಯೇಂದ್ರ ಅವರು 'ನನ್ನ ಪಾರ್ಟ್ನರ್ ಸಿಎಂ ಆದ' ಎಂದು ಸಂತೋಷ ಪಟ್ಟಿದ್ದರು ಎಂದು ಯತ್ನಾಳ್ ಹೇಳಿದ್ದಾರೆ.

ಸಿದ್ದರಾಮಯ್ಯ ಕೆಳಗಿಳಿದಿದ್ದಕ್ಕೆ ಒಬ್ಬನೇ ಒಬ್ಬ ಮುಸ್ಲಿಂ ನಾಯಕ ಖಂಡಿಸಿಲ್ಲ, ಬದಲಿಗೆ ವಿಜಯೋತ್ಸವ ಆಚರಿಸಿದ್ದಾರೆ ಎಂದು ಯತ್ನಾಳ್‌ ಒತ್ತಿ ಹೇಳಿದ್ದಾರೆ. ಮುಂದುವರಿದು, ಯತ್ನಾಳ್ ಅವರು ವಿಜಯೇಂದ್ರ ಹಾಗೂ ಅಶೋಕ್‌ ಅವರಿಗೆ "ಯಾರ್ಯಾರ ಫೈಲ್ ಎಲ್ಲೆಲ್ಲಿದೆ ಗೊತ್ತಿದೆ, ಇನ್ಮುಂದೆ ಹುಷಾರಾಗಿರಿ" ಎಂದು ಎಚ್ಚರಿಕೆ ನೀಡಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    3 hrs ago
  • ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಚಾಮರಾಜನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ತಂತ್ರಾಂಶದ ಮೂಲಕ ಹೊಸ ಶೈಕ್ಷಣಿಕ ವರ್ಷದ ಆರಂಭದಿಂದಲೇ ಅನುಷ್ಠಾನಕ್ಕೆ ತರಲಾಗಿದೆ. ಈ ಹೊಸ ವ್ಯವಸ್ಥೆಯು ಶಿಕ್ಷಕರಿಗೆ ಎಷ್ಟು ಅನುಕೂಲಕರವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ, ಮೊಬೈಲ್ ಆಧಾರಿತ ಹಾಜರಾತಿಯ ಲಾಗಿನ್ ಸಮಯವನ್ನು ಮೀರಿದರೆ ವೇತನ ಕಡಿತವಾಗುತ್ತದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ. ಈ ಮೊಬೈಲ್ ಆಧಾರಿತ ಹಾಜರಾತಿಯ ಬಗ್ಗೆ ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
    1
    ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಚಾಮರಾಜನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ತಂತ್ರಾಂಶದ ಮೂಲಕ ಹೊಸ ಶೈಕ್ಷಣಿಕ ವರ್ಷದ ಆರಂಭದಿಂದಲೇ ಅನುಷ್ಠಾನಕ್ಕೆ ತರಲಾಗಿದೆ.

ಈ ಹೊಸ ವ್ಯವಸ್ಥೆಯು ಶಿಕ್ಷಕರಿಗೆ ಎಷ್ಟು ಅನುಕೂಲಕರವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ, ಮೊಬೈಲ್ ಆಧಾರಿತ ಹಾಜರಾತಿಯ ಲಾಗಿನ್ ಸಮಯವನ್ನು ಮೀರಿದರೆ ವೇತನ ಕಡಿತವಾಗುತ್ತದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ. ಈ ಮೊಬೈಲ್ ಆಧಾರಿತ ಹಾಜರಾತಿಯ ಬಗ್ಗೆ ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    12 hrs ago
  • ಶಿಗ್ಗಾವಿ ತಾಲೂಕಿನ ಹುಕ್ಕೇರಿಯಲ್ಲಿರುವ ನೀರಾವರಿ ಅನ್ನದಾತರ ಹೋರಾಟ ವೇದಿಕೆಗೆ ಎಂಡಿ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಎಂಡಿ ಅವರು ಅನ್ನದಾತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
    1
    ಶಿಗ್ಗಾವಿ ತಾಲೂಕಿನ ಹುಕ್ಕೇರಿಯಲ್ಲಿರುವ ನೀರಾವರಿ ಅನ್ನದಾತರ ಹೋರಾಟ ವೇದಿಕೆಗೆ ಎಂಡಿ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಎಂಡಿ ಅವರು ಅನ್ನದಾತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    11 hrs ago
  • ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ನಡೆಯುತ್ತಿರುವ ಅಪಪ್ರಚಾರದ ಹಿಂದೆ ಕೆಲವು ಕಾಣದ ಕೈಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
    1
    ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ನಡೆಯುತ್ತಿರುವ ಅಪಪ್ರಚಾರದ ಹಿಂದೆ ಕೆಲವು ಕಾಣದ ಕೈಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
    user_H M ಹರಕುಣಿ
    H M ಹರಕುಣಿ
    Local News Reporter Haveri, Karnataka•
    5 hrs ago
  • ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ್ ಅವರು ರಾಜ್ಯದ ಸಂಪುಟ ರಚನೆ ವಿಚಾರವಾಗಿ ತೀವ್ರ ಟೀಕೆ ಮಾಡಿದ್ದಾರೆ. ಅವರ ಆರೋಪದ ಪ್ರಕಾರ, 136 ಕಾಂಗ್ರೆಸ್ ಶಾಸಕರು ಸಚಿವರಾಗಲು ಬಯಸುತ್ತಿದ್ದು, ಅವರಲ್ಲಿ ಕೆಲವರು ಸೇವೆ ಮಾಡುವ ಉದ್ದೇಶದಿಂದ, ಇನ್ನು ಕೆಲವರು ಲೂಟಿ ಮಾಡುವ ಉದ್ದೇಶದಿಂದ ಸಚಿವ ಸ್ಥಾನ ಕೇಳುತ್ತಿದ್ದಾರೆ. ಸಚಿವ ಸ್ಥಾನಗಳಿಗಾಗಿ ಹಣದ ವ್ಯವಹಾರ ನಡೆಯಬಹುದು ಮತ್ತು ಮಾಸಿಕ ಕಂತುಗಳ ಆಧಾರದ ಮೇಲೆ ಸಹ ಸ್ಥಾನಗಳನ್ನು ನೀಡಬಹುದು ಎಂದು ಯತ್ನಾಳ್ ಹೇಳಿದ್ದಾರೆ. ಅಲ್ಲದೆ, ಸಿದ್ದರಾಮಯ್ಯನವರ ನಿರ್ಧಾರಗಳಿಂದ ಹಲವರಿಗೆ ನೋವಾಗಿದೆ ಎಂದಿದ್ದು, ಬೆನ್ನ ಹಿಂದೆ ಚೂರಿ ಹಾಕಿದವರು ಯಾರೆಂಬುದು ಈಗ ತಿಳಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
    1
    ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ್ ಅವರು ರಾಜ್ಯದ ಸಂಪುಟ ರಚನೆ ವಿಚಾರವಾಗಿ ತೀವ್ರ ಟೀಕೆ ಮಾಡಿದ್ದಾರೆ. ಅವರ ಆರೋಪದ ಪ್ರಕಾರ, 136 ಕಾಂಗ್ರೆಸ್ ಶಾಸಕರು ಸಚಿವರಾಗಲು ಬಯಸುತ್ತಿದ್ದು, ಅವರಲ್ಲಿ ಕೆಲವರು ಸೇವೆ ಮಾಡುವ ಉದ್ದೇಶದಿಂದ, ಇನ್ನು ಕೆಲವರು ಲೂಟಿ ಮಾಡುವ ಉದ್ದೇಶದಿಂದ ಸಚಿವ ಸ್ಥಾನ ಕೇಳುತ್ತಿದ್ದಾರೆ. ಸಚಿವ ಸ್ಥಾನಗಳಿಗಾಗಿ ಹಣದ ವ್ಯವಹಾರ ನಡೆಯಬಹುದು ಮತ್ತು ಮಾಸಿಕ ಕಂತುಗಳ ಆಧಾರದ ಮೇಲೆ ಸಹ ಸ್ಥಾನಗಳನ್ನು ನೀಡಬಹುದು ಎಂದು ಯತ್ನಾಳ್ ಹೇಳಿದ್ದಾರೆ. ಅಲ್ಲದೆ, ಸಿದ್ದರಾಮಯ್ಯನವರ ನಿರ್ಧಾರಗಳಿಂದ ಹಲವರಿಗೆ ನೋವಾಗಿದೆ ಎಂದಿದ್ದು, ಬೆನ್ನ ಹಿಂದೆ ಚೂರಿ ಹಾಕಿದವರು ಯಾರೆಂಬುದು ಈಗ ತಿಳಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.