logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಳವಳ್ಳಿಯಲ್ಲಿ ಡಿಸೆಂಬರ್ 15 ರಿಂದ ನಡೆಯುವ ಸುತ್ತೂರು ಜಯಂತಿ ಮಹೋತ್ಸವದ ಯಶಸ್ವಿಗೆ ಕೈಜೋಡಿಸಲು ಮಾಜಿ ಶಾಸಕರಾದ ಡಾ ಕೆ ಅನ್ನದಾನಿ ಕರೆ ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ಎಲ್ಲರೂ ಸಕ್ರೀಯವಾಗಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಕರೆ ನೀಡಿದರು. ಪಟ್ಟಣದ ಸುತ್ತೂರು ಜಯಂತ್ಯುತ್ಸವ ಆಚರಣಾ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಅವರು ಮಾತನಾಡಿ, ಇಂಥ ಐತಿಹಾಸಿಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು. ರಾಷ್ಟ್ರದ ಪ್ರಥಮ ಪ್ರಜೆಯನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುತ್ತೂರು ಮಠವು ಸಾಕಷ್ಟು ಶ್ರಮ ವಹಿಸಿದೆ. ಸುತ್ತೂರು ಮಠದಲ್ಲಿ ಎಲ್ಲ ಧರ್ಮೀಯರು ಹಾಗೂ ಜಾತಿಯರು ವಿದ್ಯಾಭ್ಯಾಸ ಸೇರಿದಂತೆ ಎಲ್ಲೆಡೆ ಇದ್ದಾರೆ. ಹಿರಿಯರಾದ ಶಿವಯೋಗಿಗಳು ಆರಂಭಿಸಿದ ಮಠದ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುವ ನಿಟ್ಟಿನಲ್ಲಿ ಇಂಥ ಜಯಂತ್ಯುತ್ಸವವನ್ನು ವಾರಗಟ್ಟಲೆ ಆಚರಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿ ಆಚರಣೆಗೆ ಮುಂದಾಗೋಣ ಎಂದು ಕರೆ ನೀಡಿದರು. ಬಸವಣ್ಣ ಅವರ ಹಾದಿಯಲ್ಲಿ ಸಾಗುತ್ತಿರುವ ಸುತ್ತೂರು ಮಠದ ಸಾರಥ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಿರಂತರವಾಗಿ ನಡೆಯಲಿವೆ. ಅನೇಕ ವಿಷಯಗಳು ಜನರ ಗಮನ ಸೆಳೆಯಲಿದೆ. ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆಗಮನ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪ್ರತಿದಿನ ಎಲ್ಲ ಗ್ರಾಮಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಬರಬೇಕು. ಸಂಜೆ 4ಗಂಟೆಗೆ ಆಗಮಿಸಿ ರಾತ್ರಿ 9ಗಂಟೆವರೆಗೆ ಇರಬೇಕು. ಯಾವುದೇ ಲೋಪವಾಗದಂತೆ ಸ್ವಯಂ ಸೇವಕ ತಂಡ ನಿಮ್ಮದೊಂದಿಗೆ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಉಚಿತ ದಾಸೋಹ ಇರಲಿದೆ ಎಂದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರೊಂದಿಗೆ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂದು ಎಚ್‌.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಸಹ ಇರುವುದರಿಂದ ಪಕ್ಷದ ಕಾರ್ಯಕರ್ತರು ಸಹ ಆಗಮಿಸಿ ಅವರಿಗೆ ಶುಭ ಕೋರುವ ಕೆಲಸ ಮಾಡಬೇಕು ಮಾಡಬೇಕು ಎಂದು ಹೇಳಿದರು. ಜೆಡಿಎಸ್‌ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮುಖಂಡರಾದ ಸೋಮಣ್ಣ, ಪುಟ್ಟಬುದ್ದಿ, ರಾಜೇಶ್‌, ಕುಮಾರ್‌, ಮಹದೇವಣ್ಣ, ಗಣೇಶ ಪಾಲ್ಗೊಂಡಿದ್ದರು.

on 14 December
user_ಮಾಗನೂರು ಎಂ ಶಿವಕುಮಾರ್
ಮಾಗನೂರು ಎಂ ಶಿವಕುಮಾರ್
JOURNALIST Malavalli, Mandya•
on 14 December

ಮಳವಳ್ಳಿಯಲ್ಲಿ ಡಿಸೆಂಬರ್ 15 ರಿಂದ ನಡೆಯುವ ಸುತ್ತೂರು ಜಯಂತಿ ಮಹೋತ್ಸವದ ಯಶಸ್ವಿಗೆ ಕೈಜೋಡಿಸಲು ಮಾಜಿ ಶಾಸಕರಾದ ಡಾ ಕೆ ಅನ್ನದಾನಿ ಕರೆ ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದ ಯಶಸ್ವಿಗೆ ಎಲ್ಲರೂ ಸಕ್ರೀಯವಾಗಿ ಭಾಗಿಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಕರೆ ನೀಡಿದರು. ಪಟ್ಟಣದ ಸುತ್ತೂರು ಜಯಂತ್ಯುತ್ಸವ ಆಚರಣಾ ಸಮಿತಿಯ ಕಾರ್ಯಾಲಯದಲ್ಲಿ ಶನಿವಾರ ಅವರು ಮಾತನಾಡಿ, ಇಂಥ ಐತಿಹಾಸಿಕ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು. ರಾಷ್ಟ್ರದ ಪ್ರಥಮ ಪ್ರಜೆಯನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುತ್ತೂರು ಮಠವು ಸಾಕಷ್ಟು ಶ್ರಮ ವಹಿಸಿದೆ. ಸುತ್ತೂರು ಮಠದಲ್ಲಿ ಎಲ್ಲ ಧರ್ಮೀಯರು ಹಾಗೂ ಜಾತಿಯರು ವಿದ್ಯಾಭ್ಯಾಸ ಸೇರಿದಂತೆ ಎಲ್ಲೆಡೆ ಇದ್ದಾರೆ. ಹಿರಿಯರಾದ ಶಿವಯೋಗಿಗಳು ಆರಂಭಿಸಿದ ಮಠದ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುವ ನಿಟ್ಟಿನಲ್ಲಿ ಇಂಥ ಜಯಂತ್ಯುತ್ಸವವನ್ನು ವಾರಗಟ್ಟಲೆ ಆಚರಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿ ಆಚರಣೆಗೆ ಮುಂದಾಗೋಣ ಎಂದು ಕರೆ ನೀಡಿದರು. ಬಸವಣ್ಣ ಅವರ ಹಾದಿಯಲ್ಲಿ ಸಾಗುತ್ತಿರುವ ಸುತ್ತೂರು ಮಠದ ಸಾರಥ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಷ್ಠಿಗಳು ನಿರಂತರವಾಗಿ ನಡೆಯಲಿವೆ. ಅನೇಕ ವಿಷಯಗಳು ಜನರ ಗಮನ ಸೆಳೆಯಲಿದೆ. ಡಿ.16ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆಗಮನ ಇತಿಹಾಸದ ಪುಟದಲ್ಲಿ ಉಳಿಯಲಿದೆ. ಪ್ರತಿದಿನ ಎಲ್ಲ ಗ್ರಾಮಗಳಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೇ ಬರಬೇಕು. ಸಂಜೆ 4ಗಂಟೆಗೆ ಆಗಮಿಸಿ ರಾತ್ರಿ 9ಗಂಟೆವರೆಗೆ ಇರಬೇಕು. ಯಾವುದೇ ಲೋಪವಾಗದಂತೆ ಸ್ವಯಂ ಸೇವಕ ತಂಡ ನಿಮ್ಮದೊಂದಿಗೆ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಉಚಿತ ದಾಸೋಹ ಇರಲಿದೆ ಎಂದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರೊಂದಿಗೆ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂದು ಎಚ್‌.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಸಹ ಇರುವುದರಿಂದ ಪಕ್ಷದ ಕಾರ್ಯಕರ್ತರು ಸಹ ಆಗಮಿಸಿ ಅವರಿಗೆ ಶುಭ ಕೋರುವ ಕೆಲಸ ಮಾಡಬೇಕು ಮಾಡಬೇಕು ಎಂದು ಹೇಳಿದರು. ಜೆಡಿಎಸ್‌ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮುಖಂಡರಾದ ಸೋಮಣ್ಣ, ಪುಟ್ಟಬುದ್ದಿ, ರಾಜೇಶ್‌, ಕುಮಾರ್‌, ಮಹದೇವಣ್ಣ, ಗಣೇಶ ಪಾಲ್ಗೊಂಡಿದ್ದರು.

More news from Mandya and nearby areas
  • ಶಿಕ್ಷಕ ವೃತ್ತಿ ಪವಿತ್ರವಾದದ್ದು ಶಿಕ್ಷಕರು ಅದಕ್ಕೆ ಕಪ್ಪು ಚುಕ್ಕೆ ಬರದಂತೆ ನಡೆದುಕೊಳ್ಳಬೇಕು ಪಟ್ಟಣದಲ್ಲಿ ಶಿಕ್ಷಣ ತಜ್ಞರಾದ ಬಿ ಎಂ ಮಹ ದೇವಪ್ಪ ಕರೆ ಶಿಕ್ಷಕ ವೃತ್ತಿ ಎಲ್ಲಾ ವೃತ್ತಿ ಗಿಂತಲೂ ಪವಿತ್ರವಾದದ್ದು ಅದನ್ನು ಶಿಕ್ಷಕರು ಕಪ್ಪು ಚುಕ್ಕೆ ಬರದಂತೆ ನಡೆದುಕೊಳ್ಳುವಂತೆ ಹಿರಿಯ ಶಿಕ್ಷಣ ತಜ್ಞರು ಹಾಗೂ ವಿದ್ಯಾ ವಿಕಾಸ್ ಶಾಲೆಯ ಸಂಸ್ಥಾಪಕರಾದ ಬಿಎಂ ಹೇಳಿದರು . ಪಟ್ಟಣದ ಸದಾಶಿವ ನಿಲಯದಲ್ಲಿ ತಮ್ಮ 90 ವರ್ಷಗಳ ವಸಂತಗಳನ್ನು ಪೂರೈಸಿದ ಸಂಭ್ರಮದ ಕಾರ್ಯಕ್ರಮದಲ್ಲಿ ಶಿಷ್ಯರಿಂದ ಹಾಗೂ ಸಾಮಾಜಿಕ ವಿವಿಧ ಗಣ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸಮಾಜದಲ್ಲಿ ಗುರುವಿಗೆ ಅಮೂಲ್ಯವಾದ ಸ್ಥಾನ ನೀಡಲಾಗಿದೆ .ಆ ಸ್ಥಾನ ಪಡೆಯುವುದು ಪುಣ್ಯ .ಅಂತ ಪುಣ್ಯದ ವೃತ್ತಿಯನ್ನು ಎಲ್ಲರೂ ಕಾಯ ವಾಚ ಮನಸ್ಸಿನಿಂದ ಪ್ರಾಮಾಣಿಕತೆಯಿಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರೊಂದಿಗೆ ತಮ್ಮ ಜೀವನವನ್ನು ಸಾರ್ಥಕತೆಗೊಳಿಸುವಂತೆ ಶಿಕ್ಷಕ ಸಮುದಾಯಕ್ಕೆ ಕರೆ ನೀಡಿದರು. ಪ್ರಸ್ತುತ ವ್ಯವಸ್ಥೆಯಲ್ಲಿ ಎಲ್ಲವೂ ಶಿಕ್ಷಣ ಇಲಾಖೆ ಕಲುಷಿತಗೊಂಡಿದೆ ಭ್ರಷ್ಟಾಚಾರ ಮಿತಿಮೀರಿದೆ ಎಂದು ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಾನು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಮುಖ್ಯ ಶಿಕ್ಷಕನಾಗಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದೆ ನನ್ನ ಜೀವನದಲ್ಲಿ ಎಲ್ಲೂ ಸಹ ನಾನು ಭ್ರಷ್ಟಾಚಾರಕ್ಕೆ ಅವಕಾಶ ನೀಡಿರಲಿಲ್ಲ. ಆಗ ಭ್ರಷ್ಟಾಚಾರ ಎನ್ನುವುದೇ ಇರಲಿಲ್ಲ ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಇದು ಉತ್ತಮ ಬೆಳವಣಿಗೆ ಅಲ್ಲವೆಂದರೂ. ಒಬ್ಬ ಶಿಕ್ಷಕ ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದರೆ ಶಾಲೆಯಲ್ಲಿರುವ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಬಹುದು, ಉನ್ನತ ವ್ಯಕ್ತಿಗಳನ್ನಾಗಿ ಮಾಡಬಹುದು ,ದೊಡ್ಡ ದೊಡ್ಡ ಗಣ್ಯರನ್ನು ಸೃಷ್ಟಿಸುವ ಶಕ್ತಿ ಇದೆ. ಅದು ಶಿಕ್ಷಕ ವೃತ್ತಿಗೆ ಮಾತ್ರ ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ವಕೀಲ ಎಂಎಸ್ ಶ್ರೀಕಂಠ ಸ್ವಾಮಿ ಮತ್ತು ಮಾಮರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ ಶಿವಕುಮಾರ್ ಮಾತನಾಡಿ ಬಿಎಮ್ ಮಹದೇವಪ್ಪನವರ ನವರು ಲಕ್ಷಾಂತರ ಗ್ರಾಮೀಣ ಪ್ರದೇಶ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದಾರಿದೀಪವಾಗಿದ್ದಾರೆ ಅವರ ಜೀವನ, ಶಿಕ್ಷಣ ಕ್ಷೇತ್ರದಲ್ಲಿನ ವೃತ್ತಿಜೀವನ, ವೈವಾಹಿಕ ದಾಂಪತ್ಯ ಜೀವನ ,ಸಮಾಜ ಸೇವೆ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಅವರ ಕಾಯಕದ ಜೀವನ ಅವರ ಒಂದೊಂದು ತತ್ವ ಸಂದೇಶಗಳು ಇಂದಿನ ಯುವ ಪೀಳಿಗೆಗೆ ಹಾಗೂ ಶಿಕ್ಷಕ ವೃತ್ತಿ ಮಾಡುತ್ತಿರುವ ಪ್ರಸ್ತುತ ಶಿಕ್ಷಕರಿಗೆ ಮಾದರಿಯಾಗಿವೆ ಎಂದರು. ಈ ಸಂದರ್ಭದಲ್ಲಿ ಸಾಹಿತಿ ಶ್ರೀಮತಿ ಮಲ್ಲಿಕಾ ಮಳವಳ್ಳಿ ಯುವ ಮುಖಂಡ ರಾಜೇಶ್ ಟ್ರಸ್ಟ್ ಸದಸ್ಯ ಶ್ರೀಮತಿ ಶೀಲಾ ಉಪಸ್ಥಿತರಿದ್ದರು
    1
    ಶಿಕ್ಷಕ ವೃತ್ತಿ ಪವಿತ್ರವಾದದ್ದು ಶಿಕ್ಷಕರು ಅದಕ್ಕೆ ಕಪ್ಪು ಚುಕ್ಕೆ ಬರದಂತೆ ನಡೆದುಕೊಳ್ಳಬೇಕು ಪಟ್ಟಣದಲ್ಲಿ ಶಿಕ್ಷಣ ತಜ್ಞರಾದ  ಬಿ ಎಂ ಮಹ ದೇವಪ್ಪ ಕರೆ
ಶಿಕ್ಷಕ ವೃತ್ತಿ ಎಲ್ಲಾ ವೃತ್ತಿ ಗಿಂತಲೂ ಪವಿತ್ರವಾದದ್ದು ಅದನ್ನು ಶಿಕ್ಷಕರು ಕಪ್ಪು ಚುಕ್ಕೆ ಬರದಂತೆ ನಡೆದುಕೊಳ್ಳುವಂತೆ ಹಿರಿಯ ಶಿಕ್ಷಣ ತಜ್ಞರು ಹಾಗೂ ವಿದ್ಯಾ ವಿಕಾಸ್ ಶಾಲೆಯ ಸಂಸ್ಥಾಪಕರಾದ ಬಿಎಂ ಹೇಳಿದರು .
ಪಟ್ಟಣದ ಸದಾಶಿವ ನಿಲಯದಲ್ಲಿ ತಮ್ಮ 90 ವರ್ಷಗಳ ವಸಂತಗಳನ್ನು ಪೂರೈಸಿದ ಸಂಭ್ರಮದ ಕಾರ್ಯಕ್ರಮದಲ್ಲಿ ಶಿಷ್ಯರಿಂದ  ಹಾಗೂ ಸಾಮಾಜಿಕ ವಿವಿಧ ಗಣ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸಮಾಜದಲ್ಲಿ ಗುರುವಿಗೆ ಅಮೂಲ್ಯವಾದ ಸ್ಥಾನ ನೀಡಲಾಗಿದೆ .ಆ ಸ್ಥಾನ ಪಡೆಯುವುದು ಪುಣ್ಯ .ಅಂತ ಪುಣ್ಯದ ವೃತ್ತಿಯನ್ನು ಎಲ್ಲರೂ ಕಾಯ ವಾಚ ಮನಸ್ಸಿನಿಂದ ಪ್ರಾಮಾಣಿಕತೆಯಿಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರೊಂದಿಗೆ ತಮ್ಮ ಜೀವನವನ್ನು ಸಾರ್ಥಕತೆಗೊಳಿಸುವಂತೆ ಶಿಕ್ಷಕ ಸಮುದಾಯಕ್ಕೆ ಕರೆ ನೀಡಿದರು.
ಪ್ರಸ್ತುತ ವ್ಯವಸ್ಥೆಯಲ್ಲಿ ಎಲ್ಲವೂ ಶಿಕ್ಷಣ ಇಲಾಖೆ ಕಲುಷಿತಗೊಂಡಿದೆ ಭ್ರಷ್ಟಾಚಾರ ಮಿತಿಮೀರಿದೆ ಎಂದು ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಾನು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಮುಖ್ಯ ಶಿಕ್ಷಕನಾಗಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದೆ ನನ್ನ ಜೀವನದಲ್ಲಿ ಎಲ್ಲೂ ಸಹ ನಾನು ಭ್ರಷ್ಟಾಚಾರಕ್ಕೆ ಅವಕಾಶ ನೀಡಿರಲಿಲ್ಲ. ಆಗ ಭ್ರಷ್ಟಾಚಾರ ಎನ್ನುವುದೇ ಇರಲಿಲ್ಲ ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಇದು ಉತ್ತಮ ಬೆಳವಣಿಗೆ ಅಲ್ಲವೆಂದರೂ.
ಒಬ್ಬ ಶಿಕ್ಷಕ ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದರೆ ಶಾಲೆಯಲ್ಲಿರುವ  ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಬಹುದು, ಉನ್ನತ ವ್ಯಕ್ತಿಗಳನ್ನಾಗಿ ಮಾಡಬಹುದು ,ದೊಡ್ಡ ದೊಡ್ಡ ಗಣ್ಯರನ್ನು ಸೃಷ್ಟಿಸುವ ಶಕ್ತಿ ಇದೆ. ಅದು ಶಿಕ್ಷಕ ವೃತ್ತಿಗೆ ಮಾತ್ರ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ವಕೀಲ ಎಂಎಸ್ ಶ್ರೀಕಂಠ ಸ್ವಾಮಿ ಮತ್ತು ಮಾಮರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ ಶಿವಕುಮಾರ್ ಮಾತನಾಡಿ ಬಿಎಮ್ ಮಹದೇವಪ್ಪನವರ  ನವರು ಲಕ್ಷಾಂತರ ಗ್ರಾಮೀಣ ಪ್ರದೇಶ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದಾರಿದೀಪವಾಗಿದ್ದಾರೆ ಅವರ ಜೀವನ, ಶಿಕ್ಷಣ ಕ್ಷೇತ್ರದಲ್ಲಿನ ವೃತ್ತಿಜೀವನ, ವೈವಾಹಿಕ ದಾಂಪತ್ಯ ಜೀವನ ,ಸಮಾಜ ಸೇವೆ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಅವರ ಕಾಯಕದ ಜೀವನ ಅವರ ಒಂದೊಂದು ತತ್ವ ಸಂದೇಶಗಳು  ಇಂದಿನ ಯುವ ಪೀಳಿಗೆಗೆ ಹಾಗೂ ಶಿಕ್ಷಕ ವೃತ್ತಿ ಮಾಡುತ್ತಿರುವ ಪ್ರಸ್ತುತ ಶಿಕ್ಷಕರಿಗೆ ಮಾದರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಶ್ರೀಮತಿ ಮಲ್ಲಿಕಾ ಮಳವಳ್ಳಿ ಯುವ ಮುಖಂಡ ರಾಜೇಶ್ ಟ್ರಸ್ಟ್ ಸದಸ್ಯ ಶ್ರೀಮತಿ ಶೀಲಾ ಉಪಸ್ಥಿತರಿದ್ದರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    JOURNALIST Malavalli, Mandya•
    13 hrs ago
  • Post by Basavaraju Basavarajubasava
    1
    Post by Basavaraju Basavarajubasava
    user_Basavaraju Basavarajubasava
    Basavaraju Basavarajubasava
    ಮೈಸೂರು, ಮೈಸೂರು, ಕರ್ನಾಟಕ•
    2 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    11 hrs ago
  • ಹನೂರು: ಮಾರ್ಚ್ 3 ರ ಮಂಗಳವಾರ ಮಧ್ಯಾಹ್ನದ ನಂತರ ಚಂದ್ರಗ್ರಹಣವಿದ್ದರೂ ಶ್ರೀ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ ಭಕ್ತಾದಿಗಳು ಎಂದಿನಂತೆ ದರ್ಶನ ಮಾಡಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ತಿಳಿಸಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಂಗಳವಾರ ಮಧ್ಯಾಹ್ನ 3:50 ನಿಮಿಷದಿಂದ ಸಂಜೆ 6 ಗಂಟೆ 40 ನಿಮಿಷದವರೆಗೆ ಚಂದ್ರ ಗ್ರಹಣ ವಿದ್ದರೂ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಈ ವೇಳೆಯಲ್ಲಿಯೂ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ತಮ್ಮ ಹರಕೆ ಕಾಣಿಕೆಗಳನ್ನು ಸಮರ್ಪಿಸಬಹುದು ಎಂದು ತಿಳಿಸಿದರು. ಚಂದ್ರ ಗ್ರಹಣ ಮುಗಿದ ನಂತರ ಧಾರ್ಮಿಕ ಸಂಪ್ರದಾಯದಂತೆ ದೇವಸ್ಥಾನದ ಆವರಣವನ್ನು ಶುದ್ಧೀಕರಿಸಿ ವಿಶೇಷ ಪೂಜೆಯ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು. ಈ ವೇಳೆ ದೇವಸ್ಥಾನದ ಆಗಮಿಕರಾದ ಕರವೀರಸ್ವಾಮಿ, ಪಾರು ಪತ್ತೆದಾರರಾದ ಮಹಾಲಿಂಗನಕಟ್ಟೆ ಮಹಾದೇವಸ್ವಾಮಿ ರಾಜಶೇಖರ್ ಹಾಜರಿದ್ದರು.
    1
    ಹನೂರು: ಮಾರ್ಚ್ 3 ರ ಮಂಗಳವಾರ ಮಧ್ಯಾಹ್ನದ ನಂತರ ಚಂದ್ರಗ್ರಹಣವಿದ್ದರೂ ಶ್ರೀ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ ಭಕ್ತಾದಿಗಳು ಎಂದಿನಂತೆ ದರ್ಶನ ಮಾಡಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಂಗಳವಾರ ಮಧ್ಯಾಹ್ನ 3:50  ನಿಮಿಷದಿಂದ ಸಂಜೆ 6 ಗಂಟೆ 40 ನಿಮಿಷದವರೆಗೆ ಚಂದ್ರ ಗ್ರಹಣ ವಿದ್ದರೂ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಈ ವೇಳೆಯಲ್ಲಿಯೂ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ತಮ್ಮ ಹರಕೆ ಕಾಣಿಕೆಗಳನ್ನು ಸಮರ್ಪಿಸಬಹುದು ಎಂದು ತಿಳಿಸಿದರು.
ಚಂದ್ರ ಗ್ರಹಣ ಮುಗಿದ ನಂತರ ಧಾರ್ಮಿಕ ಸಂಪ್ರದಾಯದಂತೆ ದೇವಸ್ಥಾನದ ಆವರಣವನ್ನು ಶುದ್ಧೀಕರಿಸಿ ವಿಶೇಷ ಪೂಜೆಯ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಈ ವೇಳೆ ದೇವಸ್ಥಾನದ ಆಗಮಿಕರಾದ ಕರವೀರಸ್ವಾಮಿ, ಪಾರು ಪತ್ತೆದಾರರಾದ ಮಹಾಲಿಂಗನಕಟ್ಟೆ ಮಹಾದೇವಸ್ವಾಮಿ ರಾಜಶೇಖರ್ ಹಾಜರಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    17 hrs ago
  • ತಾಲೂಕಿನ ಕಾಂಚಳ್ಳಿ ಗ್ರಾಮದ ಮುತ್ತಮ್ಮ ಜಮೀನಿನಲ್ಲಿ ತಡರಾತ್ರಿ ಕಾಡು ಪ್ರಾಣಿಗಳ ದಾಳಿಯಿಂದಾಗಿ ಲಕ್ಷಾಂತರ ರೂ ನಷ್ಟವಾಗಿದೆ. ಜೋಳದ ಫಸಲು ನಾಶ : ಮುತ್ತಮ್ಮ ಕಾಂಚಳ್ಳಿ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದೂ ಅವರ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡುವ ಹಂತಕ್ಕೆ ಬಂದು ನಿಂತಿತ್ತು. ಇದೇ ತಡರಾತ್ರಿ ಕಾಡು ಪ್ರಾಣಿಗಳು ದಾಳಿ ಮಾಡಿರುವ ಪರಿಣಾಮ ರೈತ ಮಹಿಳೆ ಮುತ್ತಮ್ಮ ಅವರಿಗೆ ಕೈಗೆ ಬಂದ ತುತ್ತು, ಬಾಯಿಗೆ ಬಾರದಾಗಿದೆ. ಸಾಲ ಸೋಲಾ ಮಾಡಿ ಬಿತ್ತನೆ ಬೀಜವನ್ನು ಖರೀದಿ ಮಾಡಿ ಜಮೀನು ಹದ ಮಾಡಿ ಬೆಳೆ ಬೆಳೆದ ರೈತನಿಗೆ ಈ ಘಟನೆ ಮತ್ತಷ್ಟು ಆತಂಕಕ್ಕೀಡು ಮಾಡಿದೆ. ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. ಸಾಲದ ಸುಳಿಯಲ್ಲಿ ರೈತ : ತಮಗಿರುವ ಅಲ್ಪ ಜಮೀನಿನಲ್ಲಿ ಅದರಲ್ಲೂ ಸಾಲ ಸೋಲ ಪಡೆದು ಜಮೀನು ಮಾಡುತ್ತಿರುವ ರೈತರಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಫಸಲು ಕೈಕೊಟ್ಟರೆ, ಆತ ಮಾಲೀಕರಿಗೆ ಕಟ್ಟುವುದಾದರೂ ಹೇಗೆ ಜೊತೆಗೆ ತಾನು ಬದುಕುವುದಾದರೂ ಹೇಗೆ ಹಾಗಾಗಿ ರೈತ ಮಹಿಳೆ ಪರಿಚಯ ಅವರು ಸಾಲದ ಸುಳಿಯಲ್ಲಿ ಸಿಕ್ಕಿದಂತಾಗಿದೆ. ಕಾಡು ಪ್ರಾಣಿಗಳ ಉಪಟಳ ನಿಲ್ಲಿಸಿ : ಕಳೆದ ಹಲವಾರು ತಿಂಗಳಿನಿಂದಲೂ ಸಹ ದಿನನಿತ್ಯ ಒಂದಲ್ಲ ಒಂದು ಜಮೀನಿಗೆ ಲಗ್ಗೆ ಇಡುವ ಕಾಡಾನೆ ಸೇರಿದಂತೆ ಹಂದಿಗಳು ಬೆಳೆ ಹಾನಿ ಮಾಡುವುದರ ಜೊತೆಗೆ ಕೃಷಿ ಉಪಕರಣಗಳನ್ನು ಹಾನಿ ಮಾಡುತ್ತಿದೆ. ಜೊತೆಗೆ ಮುಖ್ಯವಾಗಿ ರೈತ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರೈತರ ನೆಮ್ಮದಿಯನ್ನು ಕಲಿಸಿಕೊಂಡಿರುವ ಕಾಡಾನೆಯನ್ನು ಹಿಡಿದು ಬೇರೆ ಸ್ಥಳಾಂತರ ಮಾಡಬೇಕು ಎಂದು ಕಾಂಚಳ್ಳಿ ಗ್ರಾಮದ ರೈತರು ಒತ್ತಾಯ ಮಾಡಿದ್ದಾರೆ.
    4
    ತಾಲೂಕಿನ ಕಾಂಚಳ್ಳಿ  ಗ್ರಾಮದ ಮುತ್ತಮ್ಮ ಜಮೀನಿನಲ್ಲಿ ತಡರಾತ್ರಿ ಕಾಡು ಪ್ರಾಣಿಗಳ ದಾಳಿಯಿಂದಾಗಿ ಲಕ್ಷಾಂತರ ರೂ ನಷ್ಟವಾಗಿದೆ.
ಜೋಳದ ಫಸಲು ನಾಶ : ಮುತ್ತಮ್ಮ ಕಾಂಚಳ್ಳಿ ಗ್ರಾಮದಲ್ಲಿ  ವ್ಯವಸಾಯ  ಮಾಡುತ್ತಿದ್ದೂ ಅವರ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡುವ ಹಂತಕ್ಕೆ ಬಂದು ನಿಂತಿತ್ತು. ಇದೇ ತಡರಾತ್ರಿ ಕಾಡು ಪ್ರಾಣಿಗಳು  ದಾಳಿ ಮಾಡಿರುವ ಪರಿಣಾಮ ರೈತ  ಮಹಿಳೆ ಮುತ್ತಮ್ಮ  ಅವರಿಗೆ ಕೈಗೆ ಬಂದ ತುತ್ತು, ಬಾಯಿಗೆ ಬಾರದಾಗಿದೆ. ಸಾಲ ಸೋಲಾ ಮಾಡಿ ಬಿತ್ತನೆ ಬೀಜವನ್ನು ಖರೀದಿ ಮಾಡಿ ಜಮೀನು ಹದ ಮಾಡಿ ಬೆಳೆ ಬೆಳೆದ ರೈತನಿಗೆ ಈ ಘಟನೆ ಮತ್ತಷ್ಟು ಆತಂಕಕ್ಕೀಡು ಮಾಡಿದೆ. ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. 
ಸಾಲದ ಸುಳಿಯಲ್ಲಿ ರೈತ : ತಮಗಿರುವ ಅಲ್ಪ ಜಮೀನಿನಲ್ಲಿ ಅದರಲ್ಲೂ ಸಾಲ ಸೋಲ ಪಡೆದು ಜಮೀನು ಮಾಡುತ್ತಿರುವ ರೈತರಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಫಸಲು ಕೈಕೊಟ್ಟರೆ, ಆತ  ಮಾಲೀಕರಿಗೆ ಕಟ್ಟುವುದಾದರೂ ಹೇಗೆ ಜೊತೆಗೆ ತಾನು ಬದುಕುವುದಾದರೂ ಹೇಗೆ ಹಾಗಾಗಿ ರೈತ ಮಹಿಳೆ ಪರಿಚಯ ಅವರು ಸಾಲದ ಸುಳಿಯಲ್ಲಿ ಸಿಕ್ಕಿದಂತಾಗಿದೆ.
ಕಾಡು ಪ್ರಾಣಿಗಳ ಉಪಟಳ ನಿಲ್ಲಿಸಿ : ಕಳೆದ ಹಲವಾರು ತಿಂಗಳಿನಿಂದಲೂ ಸಹ ದಿನನಿತ್ಯ ಒಂದಲ್ಲ ಒಂದು ಜಮೀನಿಗೆ ಲಗ್ಗೆ ಇಡುವ ಕಾಡಾನೆ ಸೇರಿದಂತೆ ಹಂದಿಗಳು  ಬೆಳೆ ಹಾನಿ ಮಾಡುವುದರ ಜೊತೆಗೆ ಕೃಷಿ ಉಪಕರಣಗಳನ್ನು ಹಾನಿ ಮಾಡುತ್ತಿದೆ. ಜೊತೆಗೆ ಮುಖ್ಯವಾಗಿ ರೈತ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರೈತರ ನೆಮ್ಮದಿಯನ್ನು ಕಲಿಸಿಕೊಂಡಿರುವ ಕಾಡಾನೆಯನ್ನು ಹಿಡಿದು ಬೇರೆ ಸ್ಥಳಾಂತರ ಮಾಡಬೇಕು ಎಂದು ಕಾಂಚಳ್ಳಿ ಗ್ರಾಮದ  ರೈತರು ಒತ್ತಾಯ ಮಾಡಿದ್ದಾರೆ.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
  • ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡರು ಕೊಪ್ಪಲು ಗ್ರಾಮದಲ್ಲಿ ಹಳ್ಳಿಕಾರ್ ಯುವಕರ ಬಳಗದ ವತಿಯಿಂದ ಪ್ರಥಮ ವರ್ಷದ ಹಳ್ಳಿಕಾರ್ ಎತ್ತುಗಳ ಎರಡು ಹಲ್ಲು ಹಾಗೂ ಹಾಲು ಹಲ್ಲಿನ ಜೋಡೆತ್ತುಗಳ ಚಕ್ಕಡಿಗಾಡಿ ಓಟದ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು. ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜನೆಯಾದ ಈ ಸ್ಪರ್ಧೆ ಗ್ರಾಮಸ್ಥರು ಮತ್ತು ರೈತ ಸಮುದಾಯದಲ್ಲಿ ವಿಶೇಷ ಉತ್ಸಾಹ ಮೂಡಿಸಿತು. ಕಾರ್ಯಕ್ರಮಕ್ಕೆ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯಾಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ ಚಾಲನೆ ನೀಡಿ ಮಾತನಾಡಿ, ರೈತರಿಂದ ರೈತರಿಗಾಗಿ ಇಂತಹ ಸಾಂಪ್ರದಾಯಿಕ ಕ್ರೀಡಾಕೂಟಗಳನ್ನು ಆಯೋಜಿಸುವುದು ಸಂತಸದ ವಿಷಯವಾಗಿದೆ. ಹಳ್ಳಿಕಾರ್ ಜಾತಿಯ ಎತ್ತುಗಳ ಸಂರಕ್ಷಣೆ ಹಾಗೂ ಉತ್ತೇಜನಕ್ಕೆ ಇಂತಹ ಸ್ಪರ್ಧೆಗಳು ಸಹಕಾರಿ ಆಗಲಿವೆ ಎಂದು ತಿಳಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಶುಭಾಶಯ ಕೋರಿದರು. ರೈತ ಸಂಘದ ಮುಖಂಡರಾದ ದೇವರಾಜ ಮಾತನಾಡಿ, ನಮ್ಮ ತಾಲೂಕಿನಲ್ಲೇ ಮೊಟ್ಟ ಮೊದಲ ಬಾರಿಗೆ ಟ್ರ್ಯಾಕ್ಟರ್ ರಿವರ್ಸ್ ಸ್ಪರ್ಧೆಯನ್ನು ಇದೇ ಗ್ರಾಮದಲ್ಲಿ ಆಯೋಜಿಸಿ ಯಶಸ್ವಿಗೊಳಿಸಿದ್ದೇವೆ. ಇದೀಗ ಹಳ್ಳಿಕಾರ್ ಗಾಡಿ ಓಟದ ಸ್ಪರ್ಧೆ ಹಮ್ಮಿಕೊಂಡಿರುವುದು ಸುತ್ತಮುತ್ತಲ ಹಳ್ಳಿಗಳಲ್ಲಿ ಸಂತಸ ತಂದಿದೆ ಎಂದು ಹೇಳಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಜೋಡೆತ್ತುಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿತ್ತು. ಮೊದಲನೇ ಬಹುಮಾನವಾಗಿ ₹15,000, ಎರಡನೇ ಬಹುಮಾನ ₹12,000, ಮೂರನೇ ಬಹುಮಾನ ₹10,000 ಹಾಗೂ ನಾಲ್ಕನೇ ಬಹುಮಾನ ₹5,000 ನಗದು ನೀಡಲಾಗಿದ್ದು, ಜೊತೆಗೆ ಪ್ರತಿಯೊಂದು ಸ್ಥಾನಕ್ಕೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಯಿತು. ವಿಭಿನ್ನ ಗ್ರಾಮಗಳಿಂದ ಆಗಮಿಸಿದ ಸ್ಪರ್ಧಿಗಳು ತಮ್ಮ ಎತ್ತುಗಳ ಸಾಮರ್ಥ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಗ್ರಾಮಸ್ಥರು, ರೈತರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಹಳ್ಳಿಕಾರ್ ಎತ್ತುಗಳ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
    1
    ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡರು ಕೊಪ್ಪಲು ಗ್ರಾಮದಲ್ಲಿ ಹಳ್ಳಿಕಾರ್ ಯುವಕರ ಬಳಗದ ವತಿಯಿಂದ ಪ್ರಥಮ ವರ್ಷದ ಹಳ್ಳಿಕಾರ್ ಎತ್ತುಗಳ ಎರಡು ಹಲ್ಲು ಹಾಗೂ ಹಾಲು ಹಲ್ಲಿನ ಜೋಡೆತ್ತುಗಳ ಚಕ್ಕಡಿಗಾಡಿ ಓಟದ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು. ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜನೆಯಾದ ಈ ಸ್ಪರ್ಧೆ ಗ್ರಾಮಸ್ಥರು ಮತ್ತು ರೈತ ಸಮುದಾಯದಲ್ಲಿ ವಿಶೇಷ ಉತ್ಸಾಹ ಮೂಡಿಸಿತು.
ಕಾರ್ಯಕ್ರಮಕ್ಕೆ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯಾಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ ಚಾಲನೆ ನೀಡಿ ಮಾತನಾಡಿ, ರೈತರಿಂದ ರೈತರಿಗಾಗಿ ಇಂತಹ ಸಾಂಪ್ರದಾಯಿಕ ಕ್ರೀಡಾಕೂಟಗಳನ್ನು ಆಯೋಜಿಸುವುದು ಸಂತಸದ ವಿಷಯವಾಗಿದೆ. 
ಹಳ್ಳಿಕಾರ್ ಜಾತಿಯ ಎತ್ತುಗಳ ಸಂರಕ್ಷಣೆ ಹಾಗೂ ಉತ್ತೇಜನಕ್ಕೆ ಇಂತಹ ಸ್ಪರ್ಧೆಗಳು ಸಹಕಾರಿ ಆಗಲಿವೆ ಎಂದು ತಿಳಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಶುಭಾಶಯ ಕೋರಿದರು.
ರೈತ ಸಂಘದ ಮುಖಂಡರಾದ ದೇವರಾಜ ಮಾತನಾಡಿ, ನಮ್ಮ ತಾಲೂಕಿನಲ್ಲೇ ಮೊಟ್ಟ ಮೊದಲ ಬಾರಿಗೆ ಟ್ರ್ಯಾಕ್ಟರ್ ರಿವರ್ಸ್ ಸ್ಪರ್ಧೆಯನ್ನು ಇದೇ ಗ್ರಾಮದಲ್ಲಿ ಆಯೋಜಿಸಿ ಯಶಸ್ವಿಗೊಳಿಸಿದ್ದೇವೆ. ಇದೀಗ ಹಳ್ಳಿಕಾರ್ ಗಾಡಿ ಓಟದ ಸ್ಪರ್ಧೆ ಹಮ್ಮಿಕೊಂಡಿರುವುದು ಸುತ್ತಮುತ್ತಲ ಹಳ್ಳಿಗಳಲ್ಲಿ ಸಂತಸ ತಂದಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಜೋಡೆತ್ತುಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿತ್ತು. ಮೊದಲನೇ ಬಹುಮಾನವಾಗಿ ₹15,000, ಎರಡನೇ ಬಹುಮಾನ ₹12,000, ಮೂರನೇ ಬಹುಮಾನ ₹10,000 ಹಾಗೂ ನಾಲ್ಕನೇ ಬಹುಮಾನ ₹5,000 ನಗದು ನೀಡಲಾಗಿದ್ದು, ಜೊತೆಗೆ ಪ್ರತಿಯೊಂದು ಸ್ಥಾನಕ್ಕೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಯಿತು.
ವಿಭಿನ್ನ ಗ್ರಾಮಗಳಿಂದ ಆಗಮಿಸಿದ ಸ್ಪರ್ಧಿಗಳು ತಮ್ಮ ಎತ್ತುಗಳ ಸಾಮರ್ಥ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಗ್ರಾಮಸ್ಥರು, ರೈತರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಹಳ್ಳಿಕಾರ್ ಎತ್ತುಗಳ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Nanjangud, Mysuru•
    13 hrs ago
  • ಮ್ಯಾರಥಾನ್ ವೇಳೆ ಪಿಎಸ್ಸೈ ನಾಸೀರ್ ಹುಸೇನ್ ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಇವರು ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ
    1
    ಮ್ಯಾರಥಾನ್ ವೇಳೆ ಪಿಎಸ್ಸೈ ನಾಸೀರ್ ಹುಸೇನ್ ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಇವರು ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡಂಚಿನಲ್ಲಿರುವ ತುಳಸಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶ್ರೀ ರೂಪ ಸೋಮವಾರ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ಶಾಲಾ ಶಿಕ್ಷಕರು ಜಿಲ್ಲಾಧಿಕಾರಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪನೆಗಾಗಿ ಮನವಿ ಸಲ್ಲಿಸಿದರು. ಹನೂರು ಶೈಕ್ಷಣಿಕ ವಲಯದ ಮಲೆಮಹದೇಶ್ವರ ಬೆಟ್ಟ ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಈ ಶಾಲೆಯಲ್ಲಿ ಪ್ರಥಮದಿಂದ ಏಳನೇ ತರಗತಿವರೆಗೆ ಒಟ್ಟು 58 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2004-05ರಲ್ಲಿ ನಿರ್ಮಾಣಗೊಂಡ ನಾಲ್ಕು ಕೊಠಡಿಗಳು ಈಗ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಶಿಕ್ಷಕರು ವಿವರಿಸಿದರು. ನೂತನ ಶಾಲಾ ಕಟ್ಟಡ ನಿರ್ಮಾಣ, ದುರಸ್ತಿಗೊಂಡಿರುವ ಅಡಿಗೆ ಕೊಠಡಿಗೆ ಪರ್ಯಾಯ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರ್‌ವೆಲ್ ಕೊರೆಯುವಿಕೆ ಹಾಗೂ ಕಾಡಂಚಿನ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲು ಹೊಸ ಕೊಠಡಿ ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಶಾಲೆಗೆ ಅಗತ್ಯವಿರುವ ಇತರ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವಂತೆ ಕೂಡ ವಿನಂತಿಸಿದರು. ಜಿಲ್ಲಾಧಿಕಾರಿಗಳ ಭರವಸೆ: ತುಳಸಿಕೆರೆ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ರೂಪ, ಶಾಲೆಯ ಅಗತ್ಯತೆಗಳನ್ನು ಗಮನಿಸಿ, ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಶಿಕ್ಷಣದ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಡಿಸಿಎಫ್ ಭಾಸ್ಕರ್, ರೈತ ಮುಖಂಡ ಹೊನ್ನೂರು ಪ್ರಕಾಶ್, ಕರಿಯಪ್ಪ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
    2
    ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡಂಚಿನಲ್ಲಿರುವ ತುಳಸಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶ್ರೀ ರೂಪ ಸೋಮವಾರ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಶಾಲಾ ಶಿಕ್ಷಕರು ಜಿಲ್ಲಾಧಿಕಾರಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪನೆಗಾಗಿ ಮನವಿ ಸಲ್ಲಿಸಿದರು. ಹನೂರು ಶೈಕ್ಷಣಿಕ ವಲಯದ ಮಲೆಮಹದೇಶ್ವರ ಬೆಟ್ಟ ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಈ ಶಾಲೆಯಲ್ಲಿ ಪ್ರಥಮದಿಂದ ಏಳನೇ ತರಗತಿವರೆಗೆ ಒಟ್ಟು 58 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2004-05ರಲ್ಲಿ ನಿರ್ಮಾಣಗೊಂಡ ನಾಲ್ಕು ಕೊಠಡಿಗಳು ಈಗ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಶಿಕ್ಷಕರು ವಿವರಿಸಿದರು.
ನೂತನ ಶಾಲಾ ಕಟ್ಟಡ ನಿರ್ಮಾಣ, ದುರಸ್ತಿಗೊಂಡಿರುವ ಅಡಿಗೆ ಕೊಠಡಿಗೆ ಪರ್ಯಾಯ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರ್‌ವೆಲ್ ಕೊರೆಯುವಿಕೆ ಹಾಗೂ ಕಾಡಂಚಿನ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲು ಹೊಸ ಕೊಠಡಿ ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಶಾಲೆಗೆ ಅಗತ್ಯವಿರುವ ಇತರ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವಂತೆ ಕೂಡ ವಿನಂತಿಸಿದರು.
ಜಿಲ್ಲಾಧಿಕಾರಿಗಳ ಭರವಸೆ:
ತುಳಸಿಕೆರೆ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀ ರೂಪ, ಶಾಲೆಯ ಅಗತ್ಯತೆಗಳನ್ನು ಗಮನಿಸಿ, ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಶಿಕ್ಷಣದ ಬಗ್ಗೆ ವಿಚಾರಿಸಿದರು.
ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಡಿಸಿಎಫ್ ಭಾಸ್ಕರ್, ರೈತ ಮುಖಂಡ ಹೊನ್ನೂರು ಪ್ರಕಾಶ್, ಕರಿಯಪ್ಪ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.