Shuru
Apke Nagar Ki App…
ಪಕ್ಷಿಗಳ ನೀರಿನ ದಾಹ ನೀಗಿಸಲು ಮುಂದಾದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.
Aaryan Ganiger
ಪಕ್ಷಿಗಳ ನೀರಿನ ದಾಹ ನೀಗಿಸಲು ಮುಂದಾದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಾ ಒಂದಿಲ್ಲ ಒಂದು ಉತ್ತಮ ಸೇವೆಯನ್ನು ಮಾಡುತ್ತಾ ಬಂದಿರುವ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘಕAದಗಲ್ಲ ವತಿಯಿಂದ ಈ ಬಾರಿ ಬೀರು ಬೇಸಿಗೆ ಸಮಯದಲ್ಲಿ ಪಕ್ಷಿಗಳಿಗೆ ಕುಡಿಯಲು ಅರವಟಿಗೆಗಳನ್ನು ತಯಾರು ಮಾಡಿ ನಗರದ ಮರಗಳಲ್ಲಿ ಇಟ್ಟು, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ದಾಹವನ್ನು ನೀಗಿಸುವ ಕಾರ್ಯವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ಪೂಜಾರ ಮುಂದಾಗಿದ್ದಾರೆ. ತಮ್ಮ ಪದಾಧಿಕಾರಿಗಳೊಂದಿಗೆ ನಗರದ ವಿಜಯಮಹಾಂತೇಶ ಗದ್ದುಗೆ ಸೇರಿದಂತೆ ವಿವಿಧಡೆ ಗಿಡಗಳಲ್ಲಿ ಮಣ್ಣಿನ ಒಂದು ಕಡೆ ದವಸ ಧಾನ್ಯ, ಇನ್ನೋಂದೆಡೆ ನೀರನ್ನು ಇಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.
More news from ಕರ್ನಾಟಕ and nearby areas
- 105 ಕೆಜಿ ತೂಕದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದ ಬಾಲರಾಜ ಇಳಕಲ್ ತಾಲೂಕಿನ ಗೋನಾಳ್ ಎಸ್‌ಟಿ ಗ್ರಾಮದ ಬಾಲಕ ಬಾಲರಾಜ ಹನುಮಂತ ಕುರಿ ಪ್ರಥಮ ಬಾರಿಗೆ 105 ಕೆಜಿ ತೂಕದ ಚೀಲವನ್ನು ತಮ್ಮ ಮನೆಯಿಂದ ಒತ್ತುಕೊಂಡು ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ದೇವಸ್ಥಾನದವರೆಗೆ ಲೀಡ್ ನಮಸ್ಕಾರ ಹಾಕಿದನು. ಈ ಬಾಲಕನ ವಿಶೇಷ ಸಾಧನೆಗೆ ಗ್ರಾಮದ ಎಲ್ಲಾ ಗುರುಹಿರಿಯರು ಯುವ ಮಿತ್ರರು ಕುಟುಂಬ ವರ್ಗದವರು ಸಾತ್ ನೀಡಿದರು.1
- ಕುಷ್ಟಗಿ:- ಪಟ್ಟಣದ ಬಸವ ಭವನದಲ್ಲಿ 893 ನೇ ಬಸವ ಜಯಂತೋತ್ಸವ ಅಂಗವಾಗಿ ಇಂದು ಇಲ್ಲಿನ ಬಸವ ಭವನದಲ್ಲಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 30 ಮಕ್ಕಳು ಹೆಚ್ಚು ಮಕ್ಕಳು ಪರಮ ಪೂಜ್ಯ ಮಹಾಂತಯ್ಯ ಹೀರೇಮಠ ಇವರ ಸಮುಕ್ಯದಲ್ಲಿ ಶರಣ ಶರಣಿಯರ ಮುಂದೆ ಲಿಂಗ ದೀಕ್ಷೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ ಸರ್ವ ಸದಸ್ಯರು ಸೇರಿದಂತೆ ಶರಣ ಶರಣಿಯರು ಅನೇಕರು ಉಪಸ್ಥಿತರಿದ್ದರು.4
- Post by ನಾಗರಾಜ್ ಕುರಿ1
- ಕರ್ನಾಟಕದಲ್ಲಿ ಪೊಲೀಸ್ ಸಿಬ್ಬಂದಿ ಸರಿಯಿಲ್ಲ ಅಂತ ಹೇಳುತ್ತಿದ್ದರು ಎಲ್ಲಾ ಸಿಬ್ಬಂದಿ ಹಾಗೆ ಇರಲ್ಲ ಜನರು ತಿಳಿದುಕೊಳ್ಳಬೇಕು1
- "ಬಿಳಗಿ ತಾಲ್ಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ವಿಚಾರ ಇದೀಗ ಅನುಮಾನಗಳಿಗೆ ಕಾರಣವಾಗಿದೆ. ಇಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭರತೇಶ್ ಪಾಟೀಲ್ ಅವರ ನೇಮಕಾತಿ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ." "ಸುಮಾರು ಆರು ತಿಂಗಳ ಹಿಂದೆ ಮುಂಡರಗಿ ಎಂಬ ಅಧಿಕಾರಿ ಬಿಳಗಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರ ವರ್ಗಾವಣೆ ನಡೆದಿದ್ದು, ಅವರ ಜಾಗಕ್ಕೆ ಭರತೇಶ್ ಪಾಟೀಲ್ ಅವರು ಬಂದಿದ್ದಾರೆ ಎನ್ನಲಾಗಿದೆ." "ಆದರೆ, ಈ ವರ್ಗಾವಣೆ ಅಧಿಕೃತವಾಗಿದೆಯೇ ಅಥವಾ ಕೇವಲ ಮೇಲ್ನೋಟಕ್ಕೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಕಾರಣ ಏನೆಂದರೆ, ಕಚೇರಿಯಲ್ಲಿರುವ ಅಧಿಕಾರಿಗಳ ವಿವರವನ್ನು ಸೂಚಿಸುವ ಫಲಕದಲ್ಲಿ ಇಂದಿಗೂ ಭರತೇಶ್ ಪಾಟೀಲ್ ಅವರ ಹೆಸರು ಕಾಣಿಸುತ್ತಿಲ್ಲ." "ಒಬ್ಬ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗುವ ದಿನಾಂಕದಿಂದ ಹಿಡಿದು ವರ್ಗಾವಣೆಗೊಂಡ ದಿನಾಂಕದವರೆಗೆ ಎಲ್ಲಾ ವಿವರಗಳನ್ನು ದಾಖಲಿಸುವ ಈ ಫಲಕದಲ್ಲಿ ಅವರ ಹೆಸರು ಇಲ್ಲದಿರುವುದು ಅನುಮಾನಾಸ್ಪದವಾಗಿದೆ." "ಆರು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರೆ, ಹೆಸರು ಫಲಕದಲ್ಲಿ ಇರಬೇಕು. ಇದು ಯಾಕೆ ಇಲ್ಲ ಅನ್ನೋದು ಪ್ರಶ್ನೆ." "ಭರತೇಶ್ ಪಾಟೀಲ್ ಅವರ ನೇಮಕಾತಿ ಮತ್ತು ವರ್ಗಾವಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ." "ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.1
- ಹಕ್ಕುಪತ್ರ ಕೊಡಲು 25 ವರ್ಷ ಬೇಕಾ? ವ್ಯವಸ್ಥೆಯ ‘ಕಿವುಡು’ತನಕ್ಕೆ ಬಡಿದ ತಮಟೆ! ನಮಸ್ಕಾರ, ಇವತ್ತು ನಾವು ತೋರಿಸಲಿರೋದು ಕೇವಲ ಒಂದು ಪ್ರತಿಭಟನೆಯಲ್ಲ, ಇದು ಒಂದು ಜನಾಂಗದ ಸಬ್ರೂರಿ ಪರೀಕ್ಷೆ! ಅಧಿಕಾರಿಗಳ ಮೇಜಿನ ಮೇಲೆ ಫೈಲುಗಳು ಧೂಳು ಹಿಡಿಯುತ್ತಿದ್ದರೆ, ಇಲ್ಲಿ ಬಡವರ ಬದುಕು ಬೀದಿಗೆ ಬಂದಿದೆ. 25 ವರ್ಷ ಅಂದ್ರೆ ಒಂದು ತಲೆಮಾರೇ ಬದಲಾಗಿ ಹೋಗುತ್ತೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಈ 61 ಕುಟುಂಬಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಇವರ ತಾಳ್ಮೆ ಕಟ್ಟೆ ಹೊಡೆದಿದೆ, ಈಗ ಅಧಿಕಾರಿಗಳ ಕಿವಿಗೆ 'ತಮಟೆ' ಏಟು ಬೀಳುವ ಸಮಯ ಬಂದಿದೆ! ಅತಿಕ್ರಮಣಕಾರರಲ್ಲ, ಇವರು ಅನ್ಯಾಯಗಾರರಲ್ಲ. ಇವರು ತಮ್ಮ ಹಕ್ಕಿಗಾಗಿ 25 ವರ್ಷಗಳಿಂದ ಅಲೆದಾಡುತ್ತಿರುವ ಹೊಸ ಡಂಬಳದ ಮಾದಿಗ ಸಮಾಜದ ಮುಗ್ಧ ಜನ. ೧. ಮಂಜೂರಾದ ಜಾಗಕ್ಕೆ ಹಕ್ಕುಪತ್ರದ 'ಗ್ರಹಣ'! 2000ನೇ ಇಸವಿಯಲ್ಲೇ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಇವರಿಗೆ ಮನೆ ಕಟ್ಟಲು ಜಾಗವಿದೆ. ಆದರೆ ವಾಸ್ತವದಲ್ಲಿ ಕೈಗೆ ಹಕ್ಕುಪತ್ರವಿಲ್ಲ! ಅಧಿಕಾರಿಗಳೇ.. ನಿಮ್ಮ ಕಚೇರಿಯಿಂದ ಈ ಹಕ್ಕುಪತ್ರ ಜನರಿಗೆ ತಲುಪಲು ಕಾಲು ಶತಮಾನ ಬೇಕಾ? ನಿಮ್ಮ ಈ ಆಮೆಗತಿಯ ಕೆಲಸಕ್ಕೆ ಬಡವರ ಬದುಕು ಅತಂತ್ರವಾಗಿದೆ. ೨. ಅಂಬೇಡ್ಕರ್ ಕನಸಿನ ಭಾರತದಲ್ಲಿ ಇದೇನಾ ನ್ಯಾಯ? ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆ, ಆದರೆ ನೀವು ಆ ಹಕ್ಕುಗಳನ್ನು ಕಬೀಟಿನಲ್ಲಿ ಕೂಡಿಟ್ಟಿದ್ದೀರಿ. ಲಕ್ಷ್ಮಣ ತಗಡಿನಮನಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ತಮಟೆ ಚಳುವಳಿ, ಅಧಿಕಾರಶಾಹಿಯ ಅಹಂಕಾರಕ್ಕೆ ಹಿಡಿದ ಕನ್ನಡಿ. "ನಾವು ದುಡಿಯುವುದನ್ನು ಬಿಟ್ಟು ನಿಮ್ಮ ಕಚೇರಿ ಮುಂದೆ ನಿಲ್ಲಬೇಕಾ?" ಎಂಬ ಇವರ ಪ್ರಶ್ನೆಗೆ ಉತ್ತರ ಕೊಡುವವರು ಯಾರು? "ಸರ್ಕಾರ ಸವಲತ್ತು ಕೊಟ್ಟರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಹಕ್ಕಿನ ಜಾಗಕ್ಕಾಗಿ ನಡೆಯುತ್ತಿರುವ ಕೊನೆಯ ಎಚ್ಚರಿಕೆ!"ಎಂದು ಲಕ್ಷ್ಮಣ ತಗಡಿನಮನಿ ಮಾತನಾಡಿದರು ಈಗ ಚೆಂಡು ಅಧಿಕಾರಿಗಳ ಅಂಗಳದಲ್ಲಿದೆ. ಬರುವ ಏಪ್ರಿಲ್ 28ರ ಒಳಗಾಗಿ ಈ ಕುಟುಂಬಗಳ ಮುಖದಲ್ಲಿ ನಗು ಕಾಣಿಸದಿದ್ದರೆ, ಈ ಆಕ್ರೋಶ ವಿಧಾನಸೌಧದವರೆಗೂ ತಲುಪುವುದರಲ್ಲಿ ಅನುಮಾನವಿಲ್ಲ. ಜಿಲ್ಲಾಧಿಕಾರಿಗಳೇ ಹಾಗೂ ತಹಶೀಲ್ದಾರರೇ.. ಇನ್ನು ಮುಂದೆ ಭರವಸೆಗಳ ಮಾತು ಬೇಡ, ಫಲಾನುಭವಿಗಳ ಕೈಗೆ ಹಕ್ಕುಪತ್ರ ಸಿಗಲಿ. ನೋಡಿದ್ರಲ್ಲ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಈ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕಿದೆ. ಒಂದು ಸಣ್ಣ ಕಾಗದಕ್ಕಾಗಿ 25 ವರ್ಷ ಕಾಯಿಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಅವಮಾನ. ಈ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ ಸಮಗ್ರ ನ್ಯೂಸ್ ಟೈಮ್ಸ್1
- ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ಯುದ್ಧದ ಭೀತಿಯಲ್ಲಿರುವ ಇರಾನಿ ಮತ್ತು ಇಸ್ರೇಲ್ ಯುದ್ಧದ ಕಾಲದಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ಎಲ್ಪಿಜಿ ಗ್ಯಾಸ್ ಏಜೆನ್ಸಿ ತುಂಬಾ ತೊಂದರೆಯಾಗುತ್ತಿದೆ ಮೂರು ದಿನಗಳ ಕಾಲ ಕ್ಯೂ ಅಲ್ಲಿ ನಿಂತು ಜನರು ತೊಂದರೆ ಅನುಭವಿಸುತ್ತಿದ್ದಾರೆ1
- ಇಳಕಲ್ ನಗರದ ಸಮಾಜ ಸೇವಕಿ ಹೋರಾಟಗಾರ್ತಿ ಲಕ್ಷ್ಮೀಬಾಯಿ ಗಾಜಿ ಅವರಿಗೆ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಕೊಡ ಮಾಡುವ ವುಮೆನ್ ಹಚಿವರ್ಸ್ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಇಳಕಲ್ ನಗರದ ಪತ್ರಕರ್ತರು ಹಾಗೂ ನಗರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು.1